ಅಗ್ನಿ-೫
ಕ್ಷಿಪಣಿ
ಕ್ಷಿಪಣಿ : ಯಾವುದೇ ರೀತಿಯಲ್ಲಿ) ಚಿಮ್ಮಿದ ವಸ್ತು ಯಾ ಚಿಮ್ಮಿದ ಅಸ್ತ್ರ
- ಭಾರತದ ಕ್ಷಿಪಣಿಗಳು:
ಅಗ್ನಿ- ೫ ರ ಉಡಾವಣೆ
- ಒಡಿಶಾದ ಬಾಲಸೋರ್‌ನಿಂದ ಉಡಾಯಿಸಿದ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಅತ್ಯಂತ ಶಕ್ತಿಶಾಲಿ ಖಂಡಾಂತರ ಕ್ಷಿಪಣಿ ‘ಅಗ್ನಿ–5’ರ ಪರೀಕ್ಷೆ ಯಶಸ್ವಿಯಾಗಿದೆ. ಅದು ಚೀನಾ ಸೇರಿದಂತೆ ಏಷ್ಯಾ ಖಂಡದಲ್ಲಿರುವ ಎಲ್ಲ ಗುರಿಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ. ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿರುವ, 5 ಸಾವಿರ ಕಿ.ಮೀ ವ್ಯಾಪ್ತಿಯಲ್ಲಿ ದಾಳಿ ಮಾಡುವ ಸಾಮರ್ಥ್ಯ ಹೊಂದಿರುವ ಈ ಕ್ಷಿಪಣಿಯ ಪರೀಕ್ಷೆಯನ್ನು ಒಡಿಶಾ ಕರಾವಳಿಯಲ್ಲಿರುವ ಅಬ್ದುಲ್ ಕಲಾಂ ದ್ವೀಪದಲ್ಲಿ ಸೋಮವಾರ ಯಶಸ್ವಿಯಾಗಿ ನಡೆಸಲಾಯಿತು. ‘ಅಗ್ನಿ–5’ರ ಯಶಸ್ವಿ ಪರೀಕ್ಷೆಯಿಂದ ಭಾರತದ ರಕ್ಷಣಾ ವ್ಯವಸ್ಥೆಗೆ ಇನ್ನಷ್ಟು ಬಲ ಬಂದಂತಾಗಿದೆ.
ಅಗ್ನಿ ೫ ರ ಸಾಮಾನ್ಯ ವಿವರ
- ಖಂಡಾಂತರ ಕ್ಷಿಪಣಿ :
ಎತ್ತರ | 17.5ಮೀ |
ಅಗಲ | 2 ಮೀ |
ತೂಕ : | 50 ಟನ್ |
ಅಣ್ವಸ್ತ್ರ ಸಿಡಿತಲೆ | 1500 ಕೆಜಿ ಸಾಮರ್ಥ್ಯ |
ಇಂಜಿನ್ | 3 ಹಂತಗಳದ್ದು |
ಸಿಡಿತಲೆ | ಪರಮಾಣು ಅಸ್ತ್ರ ವಾಹಕ |
ಸಿಡಿತಲೆ ತೂಕ | 1,500 ಕಿಲೋಗ್ರಾಂಗಳಷ್ಟು (3,300 ಪೌಂಡು) |
ವೆಚ್ಚ | 50 ಕೋಟಿ (US $ 7 ಮಿಲಿಯನ್) |
speed ವೇಗ | 5–6 km/s ಕಿ.ಮೀ./ಸೆ. |
ಎಂಜಿನ್ | ಮೂರು ಹಂತದ ಘನ ಇಂಧನ |
ಶ್ರೇಣಿಯ ಕಾರ್ಯಕ್ಷಮತೆ | 5,000 ಕಿಲೋಮೀಟರ್ (3,100 ಮೈಲಿ) ವರೆಗೆ 8,000 ಕಿಲೋಮೀಟರ್ (5,000 ಮೈಲಿ)ದೂರ |
ಸ್ಪೀಡ್ ಮ್ಯಾಕ್ | 24 (ಟರ್ಮಿನಲ್ ಹಂತ) |
ನಿಖರತೆ | 10 ಮೀ. ಗೆ ಕಡಿಮೆ |
ಲಾಂಚ್ ವೇದಿಕೆ | 8 × 8 ಟಟ್ರಾ TEL ಮತ್ತು ರೈಲು ಮೊಬೈಲ್ ಲಾಂಚರ್ |
- ಹಿಂದೆ ಮೂರು ಬಾರಿ ಪರೀಕ್ಷೆ ನಡೆದಿತ್ತು :2012; 2013; ಮತ್ತು 2015 ಜನವರಿ 31.
ಮೂರು ಹಂತಗಳ ಎಂಜಿನ್
- 29 Dec, 2016
- ನಮ್ಮ ಮೇಲೆ ಅಣ್ವಸ್ತ್ರ ಪ್ರಯೋಗಿಸಿದರೆ ‘ನಾವು ಸರ್ವನಾಶವಾದರೂ ನಿಮ್ಮನ್ನು ಸುಡುತ್ತೇವೆ’ ಎಂಬ ಎಚ್ಚರಿಕೆಯನ್ನು ಅಕ್ಕಪಕ್ಕದವರಿಗೆ ಬಿಂಬಿಸಬೇಕಿದೆ.. ಇದಕ್ಕೆ ‘ಮರುದಾಳಿ ಸಾಮರ್ಥ್ಯ’ ಎನ್ನುತ್ತಾರೆ. ನಮ್ಮ ಪರಮಾಣು ಕ್ಷಿಪಣಿಗಳು ಮೊದಲ ದಾಳಿಯ ನಂತರವೂ ಸುರಕ್ಷಿತ ಉಳಿದರೆ ಮಾತ್ರ ಅದು ಸಾಧ್ಯವಾಗುತ್ತದೆ. ಅಂದರೆ, ನಮ್ಮ ಅಣ್ವಸ್ತ್ರ ಎಲ್ಲಿದೆ ಎಂಬುದು ಗೊತ್ತಾಗಬಾರದು.
- ಅಗ್ನಿ ಮಾದರಿಯನ್ನು ‘ಗುಂಡು ಕ್ಷಿಪಣಿ’ (ಬ್ಯಾಲಿಸ್ಟಿಕ್ ಮಿಸೈಲ್) ಎನ್ನುತ್ತಾರೆ. ದೊಡ್ಡ ಗುಂಡನ್ನು ಮೇಲಕ್ಕೆ, ಗಗನದಾಚೆಗೆ ಎಸೆದು ಅದು ತನ್ನ ತೂಕದಿಂದಾಗಿಯೇ ಕೆಳಕ್ಕೆ ಬೀಳುವಂತೆ ಮಾಡುವ ತಂತ್ರವದು. ನಿಂತಲ್ಲಿಂದ ಎತ್ತರಕ್ಕೆ ನೆಗೆಯುವ ಸಾಮರ್ಥ್ಯ ಅದಕ್ಕೆ ಮುಖ್ಯವೇ ಶಿವಾಯ್, ಗುರಿ ಅಷ್ಟೊಂದು ನಿಖರವಾಗಿರುವುದಿಲ್ಲ.
- ಗುಂಡುಕ್ಷಿಪಣಿಯ ಬದಲು ವಿಮಾನದಂತೆ ನೆಲಕ್ಕೆ ಸಮಾನಾಂತರವಾಗಿ ದಿಕ್ಕನ್ನು ಬದಲಿಸುತ್ತ ಸಾಗುವ ಕ್ಷಿಪಣಿಗೆ ‘ಕ್ರೂಸ್ ಮಿಸೈಲ್’ ಎನ್ನುತ್ತಾರೆ. ಇದಕ್ಕೆ ವಿಮಾನದಂತೆ ಪುಟ್ಟ ರೆಕ್ಕೆ, ಚಿಕ್ಕ ಚುಕ್ಕಾಣಿ ಕೂಡ ಇರುತ್ತದೆ. ನೆಲ, ಜಲ, ವಾಯು ಮೂರರಿಂದಲೂ ಇದನ್ನು ಚಿಮ್ಮಿಸಬಹುದು. ಏಳೆಂಟು ನೂರು ಕಿ.ಮೀ. ದೂರದವರೆಗೆ ಚಲಿಸಿಯೂ ನಿರ್ದಿಷ್ಟ ಗುರಿ ತಲುಪುವಂತಿರಬೇಕು.
- ಪಾಕಿಸ್ತಾನದ ಬಳಿ ‘ಬಾಬರ್’ ಕ್ರೂಸ್ ಕ್ಷಿಪಣಿಗಳಿವೆ. ರಷ್ಯ ಮತ್ತು ಚೀನಾದ ತಂತ್ರಜ್ಞಾನದಿಂದ ತಯಾರಾಗಿದ್ದು. ಅವು ದಾರಿಯಲ್ಲಿ ಸಾಗುತ್ತಲೆ ಕಿರು ರೆಕ್ಕೆಗಳನ್ನು ಬಿಚ್ಚಿಕೊಂಡು 700 ಕಿ.ಮೀ. ದೂರ ಬಂದು ಸ್ಫೋಟವಾಗುತ್ತವೆ..
- ನಮ್ಮಲ್ಲೂ ರಷ್ಯದ ನೆರವಿನಿಂದ ನಿರ್ಮಸಲಾದ ‘ಬ್ರಹ್ಮೋಸ್’ ಕ್ರೂಸ್ ಕ್ಷಿಪಣಿ ಇದೆ.
- ನಾವು ಪಾಕಿಸ್ತಾನಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ನಮ್ಮದೇ ‘ಅರಿಹಂತ್’ ಪರಮಾಣು ಇಂಧನ ಚಾಲಿತ ಜಲಾಂತಒಂದು ದೇಶದ ನೆಲಸೇನೆ, ಜಲಸೇನೆ, ವಾಯುಸೇನೆ ಹೀಗೆ ಮೂರರ ಬಳಿಯೂ ಪರಮಾಣು ಶಸ್ತ್ರಾಸ್ತ್ರ ಇದ್ದರೆ ಅದಕ್ಕೆ ‘ತ್ರಿಬಲ’ ಮಿಲಿಟರಿ ಎನ್ನುತ್ತಾರೆ. ನಮ್ಮಲ್ಲಿ ವೈರಿಯ ಮೇಲೆ ಬಾಂಬ್ ಹಾಕಬಲ್ಲ ವಿಮಾನಗಳಿವೆ, ಜಲಾಂತರ್ಗಾಮಿ ಇದೆ. ನೆಲದಿಂದಲೇ ಚಿಮ್ಮಿಸಬಲ್ಲ ಅಣ್ವಸ್ತ್ರ ತನಗೂ ಬೇಕೆಂದು ನಮ್ಮ ಆರ್ಮಿ ಒತ್ತಡ ಹಾಕುತ್ತಿದೆ. ಜಲಾಂರ್ಗಾಮಿಯನ್ನು ನಿರ್ಮಿಸಿ ಈ ವರ್ಷ ಆಗಸ್ಟ್‌ನಲ್ಲಿ ಚಾಲನೆ ಕೊಟ್ಟಿದ್ದೇವೆ.
- ರಷ್ಯದಿಂದ ಖರೀದಿಸಿದ ‘ಚಕ್ರ’ ಜಲಾಂತರ್ಗಾಮಿಯ ಮಾದರಿಯಲ್ಲಿ ನಾವೇ ಸ್ವಂತ ನಿರ್ಮಿಸಿದ್ದು. ಆಳ ಸಮುದ್ರದಿಂದ ಆಕಾಶಕ್ಕೆ ನೆಗೆಯಬಲ್ಲ ಪರಮಾಣು ಗುಂಡು ಕ್ಷಿಪಣಿಯನ್ನು ಅದರಲ್ಲಿ ಹೂಡಿಡಬಹುದು. ಕ್ರೂಸ್ ಕ್ಷಿಪಣಿಯ ಹಾಗೆ ನೀರೊಳಕ್ಕೇ ಸಾಗಬಲ್ಲ ಟಾರ್ಪಿಡೊ ಇವೆಯಾದರೂ ವೈರಿ ಹಡಗುಗಳ ನಿರ್ನಾಮವಷ್ಟೇ ಅವುಗಳ ಗುರಿ ಆಗಿರುವುದರಿಂದ ಅದರಲ್ಲಿ ಅಣ್ವಸ್ತ್ರ ಹೂಡಿರುವುದಿಲ್ಲ.[೧]
- ಮೂರು ಹಂತಗಳ ಎಂಜಿನ್ ಹೊಂದಿರುವ, ನೆಲದಿಂದ ನೆಲಕ್ಕೆ ಚಿಮ್ಮುವ ಕ್ಷಿಪಣಿಯನ್ನು ೨೬-೧೨-೨೦೧೬ ಸೋಮವಾರ ಬೆಳಿಗ್ಗೆ 11.05ರ ಸುಮಾರಿಗೆ ಇಂಟಗ್ರೇಟೆಡ್ ಟೆಸ್ಟ್ ರೇಂಜ್‌ನಲ್ಲಿ (ಐಟಿಆರ್) ಸಂಚಾರಿ ಉಡಾವಣಾ ವಾಹನದಿಂದ (ಮೊಬೈಲ್ ಲಾಂಚರ್) ಉಡಾವಣೆ ಮಾಡಲಾಯಿತು. ಉಡಾವಣಾ ವಾಹನದಲ್ಲಿ ಅಳವಡಿಸಲಾಗಿದ್ದ ಮುಚ್ಚಿದ ಕೊಳವೆಯ (ಕ್ಯಾನಿಸ್ಟರ್) ಮೂಲಕ ಕ್ಷಿಪಣಿಯನ್ನು ಉಡಾಯಿಸಲಾಯಿತು. ನಭಕ್ಕೆ ಚಿಮ್ಮಿದ ಕ್ಷಿಪಣಿಯು ನಿಗದಿ ಪಡಿಸಲಾಗಿದ್ದ ಎಲ್ಲ ಗುರಿಗಳನ್ನು ಯಾವುದೇ ಅಡೆ ತಡೆಗಳಿಲ್ಲದೆ ತಲುಪಿದೆ. ಇದು ಏಷ್ಯಾ, ಯುರೋಪ್ ಖಂಡಗಳ ಎಲ್ಲ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ.
ವಾಹಕದಿಂದ ದಾಳಿ ನಡೆಸಬಹುದು
- ‘ಅಗ್ನಿ–5’ರ ಅಭಿವೃದ್ಧಿ ಹಂತದಲ್ಲಿ ನಡೆಸಲಾದ ನಾಲ್ಕನೇ ಪರೀಕ್ಷೆ ಇದು. ಕೊಳವೆಯ ಮೂಲಕ ನಡೆಸಿದ ಎರಡನೇ ಪರೀಕ್ಷೆ (ಉಡಾವಣಾ ವಾಹನದಲ್ಲಿ ಅಳವಡಿಸಲಾಗಿರುವ ಸಿಲಿಂಡರ್ ಆಕಾರದ ದೊಡ್ಡ ಕೊಳವೆಯಲ್ಲಿ ಕ್ಷಿಪಣಿ ಇಡಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಕ್ಷಿಪಣಿ ಉಡಾವಣೆಗೆ ಸಿದ್ಧತೆ ನಡೆಸಬಹುದು. ಕ್ಷಿಪಣಿ ಹೊತ್ತೊಯ್ಯುವ ವಾಹನ ಹೋಗುವ ಸ್ಥಳಗಳಿಂದಲೇ ಕ್ಷಿಪಣಿ ದಾಳಿ ನಡೆಸಬಹುದು).
ಅತ್ಯಾಧುನಿಕ ತಂತ್ರಜ್ಞಾನ
- ಅಗ್ನಿ ಸರಣಿಯ ಕ್ಷಿಪಣಿಗಳಲ್ಲೇ ‘ಅಗ್ನಿ–5’ ಅತ್ಯಂತ ಅತ್ಯಾಧುನಿಕವಾದುದು. ಪಥದರ್ಶಕ, ಪಥ ನಿರ್ದೇಶನ ವ್ಯವಸ್ಥೆ, ಸಿಡಿತಲೆ ಮತ್ತು ಎಂಜಿನ್ ಅಭಿವೃದ್ಧಿಯಲ್ಲಿ ಹೊಸ ತಂತ್ರಜ್ಞಾನಗಳನ್ನು ಬಳಸಲಾಗಿದೆ. ಕ್ಷಿಪಣಿ ಪರೀಕ್ಷೆಯ ಸಂದರ್ಭದಲ್ಲಿ ದೇಶಿಯವಾಗಿ ಅಭಿವೃದ್ಧಿ ಪಡಿಸಿರುವ ಹಲವು ತಂತ್ರಜ್ಞಾನಗಳನ್ನೂ ಪರೀಕ್ಷಿಸಲಾಗಿದೆ. ಅತ್ಯಂತ ಹೆಚ್ಚು ನಿಖರವಾಗಿ ಗುರಿಯನ್ನು ತೋರಿಸುವ ರಿಂಗ್ ಲೇಸರ್ ಜೈರೊ ಬೇಸ್ಡ್ ಇನರ್ಷಿಯಲ್ ನೇವಿಗೇಷನ್ ಸಿಸ್ಟಮ್ (ಆರ್‌ಐಎನ್‌ಎಸ್) ಮತ್ತು ಅತ್ಯಾಧುನಿಕವಾದ ಸೂಕ್ಷ್ಮ ಪಥದರ್ಶಕ ವ್ಯವಸ್ಥೆಗಳನ್ನು (ಎಂಐಎಸ್‌ಎಸ್) ಕ್ಷಿಪಣಿಯಲ್ಲಿ ಅಳವಡಿಸಲಾಗಿದ್ದು, ಕ್ಷಿಪಣಿಯು ನಿಖರವಾಗಿ ಗುರಿ ತಲುಪಿಸುಯಲ್ಲಿ ಇವು ನೆರವಾಗಿವೆ. ಕ್ಷಿಪಣಿಯಲ್ಲಿದ್ದ ಅತಿ ವೇಗದ ಕಂಪ್ಯೂಟರ್ ಮತ್ತು ದೋಷಗಳನ್ನು ಸರಿಪಡಿಸಬಲ್ಲ ತಂತ್ರಾಶವು ಕ್ಷಿಪಣಿಯನ್ನು ನಿರ್ದಿಷ್ಟ ಗುರಿಯೆಡೆಗೆ ಸಾಗಿಸಿದೆ.
ಬೆಳಗಾವಿಯ ‘ಆಕ್ಚುಯೇಟರ್
ದಿ.೨೬-೧೨-೨೦೧೬ ಸೋಮವಾರ ಪರೀಕ್ಷಾರ್ಥ ಉಡಾವಣೆಯಾದ ಭಾರತದ ಅತ್ಯಂತ ಶಕ್ತಿಶಾಲಿ ಖಂಡಾಂತರ ಕ್ಷಿಪಣಿ ‘ಅಗ್ನಿ–5’ರಲ್ಲಿ ಬೆಳಗಾವಿಯ ಸರ್ವೋ ಕಂಟ್ರೋಲ್ಸ್ ಅಂಡ್ ಹೈಡ್ರಾಲಿಕ್ ಇಂಡಿಯಾ ಕಂಪೆನಿಯು ಸಿದ್ಧಪಡಿಸಿದ ಸಾಧನವಾದ ‘ಆಕ್ಚುಯೇಟರ್’ಗಳನ್ನು ಪೂರೈಸಲಾಗಿದೆ. (ಕಂಪೆನಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ದೀಪಕ ದಡೋತಿ ಹೇಳಿಕೆ)
ಅಗ್ನಿ–6
- ಜಲಾಂತ ರ್ಗಾಮಿ ನೌಕೆ ಮತ್ತು ಭೂಮಿಯಿಂದಲೂ ಇದನ್ನು ಉಡಾವಣೆ ಮಾಡಬಹುದಾಗಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಮುಂದಿನ ದಿನಗಳಲ್ಲಿ 8 ಸಾವಿರದಿಂದ 10 ಸಾವಿರ ಕಿ.ಮೀ.ವರೆಗೆ ಕ್ರಮಿಸುವ ಸಾಮರ್ಥ್ಯ ಇರುವ ‘ಅಗ್ನಿ– 6’ ಕ್ಷಿಪಣಿ ಅಭಿವೃದ್ಧಿಪಡಿಸಲು ಮುಂದಡಿ ಇಟ್ಟಿದೆ. ಇದರ ಜತೆಯಲ್ಲೇ ರಷ್ಯಾ ಸಹಭಾಗಿತ್ವದಿಂದ ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್ ಕ್ಷಿಪಣಿ ಮತ್ತಷ್ಟು ಆಧುನಿಕ ಆಗುತ್ತಿದೆ. ಸೂಪರ್‌ಸಾನಿಕ್ ವೇಗದ ಬ್ರಹ್ಮೋಸ್–2 ಕ್ಷಿಪಣಿಯು ಮತ್ತಷ್ಟು ವೇಗ ಪಡೆದುಕೊಳ್ಳಲಿದೆ. ಇದೇ ಕ್ಷಿಪಣಿಯ ಸಣ್ಣ ಮಾದರಿಯನ್ನು ಸಹ ಸಿದ್ಧಪಡಿಸುವ ಯೋಜನೆ ಇದೆ.[೨][೩]
ಅಗ್ನಿ ಕ್ಷಿಪಣಿಗಳ ದಾಳಿ ವ್ಯಾಪ್ತಿ
ಕ್ಷಿಪಣಿ | ವಿಧ | ದೂರ ಗಮ್ಯತೆ |
---|---|---|
ಅಗ್ನಿ I | MRBM -ಮಧ್ಯ ಗಾಮಿ | 700 - 1,250 ಕಿ.ಮಿ (ಕ್ರಿಯಾಶೀಲ) |
ಅಗ್ನಿ II ನೇ | IRBM- ದೂರಗಾಮಿ | 2,000 - 3,000 ಕಿ.ಮಿ (ಕ್ರಿಯಾಶೀಲ) |
ಅಗ್ನಿ III | ನೇ IRBM -ದೂರಗಾಮಿ | 3,500 - 5,000 ಕಿ.ಮಿ (ಕ್ರಿಯಾಶೀಲ) |
ಅಗ್ನಿ IV | IRBM -ಖಂಡಾಂತರ | 3,000 - 4,000 ಕಿ.ಮಿ (ಕ್ರಿಯಾಶೀಲ) |
ಅಗ್ನಿ V | ICBM -ಖಂಡಾಂತರ | 5,000 - 8,000 ಕಿ.ಮಿ (ಪರೀಕ್ಷೆ ಮುಗಿದಿದೆ) |
ಅಗ್ನಿ VI ನೇ | ICBM -ಖಂಡಾಂತರ | 8,000 - 10,000 ಕಿಮೀ (ಅಭಿವೃದ್ಧಿ ಅಡಿಯಲ್ಲಿ) |
ಉಲ್ಲೇಖಗಳು
- ↑ "ನಾಗೇಶ್ ಹೆಗಡೆ;ಗಡಿಯೊಳಗಿನ ವೈರಿಯತ್ತ ಅಕ್ಷೋಹಿಣಿ ಕ್ಷಿಪಣಿ;29 Dec, 2016". Archived from the original on 2016-12-29. Retrieved 2016-12-29.
- ↑ ಅಗ್ನಿ–5 ಖಂಡಾಂತರ ಕ್ಷಿಪಣಿ ಪರೀಕ್ಷೆ ಯಶಸ್ವಿ
- ↑ "ದೇಶದ ರಕ್ಷಣಾ ವ್ಯವಸ್ಥೆಗೆ ಬಲ ತಂದ 'ಅಗ್ನಿ–5';28 Dec, 2016". Archived from the original on 2016-12-28. Retrieved 2016-12-28.
ನೋಡಿ
- 5000 ಕಿ.ಮೀ. ದೂರ ಕ್ರಮಿಸುವ ಸಾಮರ್ಥ್ಯ;ಅಣ್ವಸ್ತ್ರ ಸಾಮರ್ಥ್ಯದ ಅಗ್ನಿ–5 ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ ; 3 Jun, 2018
- ಸಾಗರಿಕ ಕ್ಷಿಪಣಿ
- ನಾಗೇಶ್ ಹೆಗಡೆ;ಗಡಿಯೊಳಗಿನ ವೈರಿಯತ್ತ ಅಕ್ಷೋಹಿಣಿ ಕ್ಷಿಪಣಿ;29 Dec, 2016 Archived 2016-12-29 ವೇಬ್ಯಾಕ್ ಮೆಷಿನ್ ನಲ್ಲಿ.
- [*'ಅಗ್ನಿ ಪುತ್ರಿ' ಟೆಸ್ಸಿ : ಡಿಆರ್‌ಡಿಒ ವೈಮಾನಿಕ ವ್ಯವಸ್ಥೆಯ ಮಹಾ ನಿರ್ದೇಶಕಿಯಾಗಿ ಟೆಸ್ಸಿ ಥಾಮಸ್ ನೇಮಕ; 29 May, 2018
- ಶಾಂತಿಮಂತ್ರದ ಕ್ಷಿಪಣಿಯಮ್ಮ ಟೆಸ್ಸಿ ಥಾಮಸ್;ರಘುನಾಥ ಚ.ಹ.;3 Jun, 2018