ಅನಂತಪುರ
ಅನಂತಪುರ
అనంతపురం | |
---|---|
ನಗರ | |
ದೇಶ | ಭಾರತ |
ರಾಜ್ಯ | ಆಂಧ್ರ ಪ್ರದೇಶ |
ಪ್ರಾಂತ್ಯ | ರಾಯಲಸೀಮಾ |
ಜಿಲ್ಲೆ | ಅನಂತಪುರ್ ಜಿಲ್ಲೆ |
Elevation | ೩೩೫ m (೧,೦೯೯ ft) |
Population (2011) | |
• ನಗರ | ೫,೬೨,೩೪೦ |
• Metro | ೩,೪೧,೮೯೫ |
Languages | |
• Official | ತೆಲುಗು |
Time zone | UTC+5:30 (IST) |
PIN | 515001 |
Telephone code | 08554 |
Vehicle registration | AP02 |
ಅನಂತಪುರವು ಆಂಧ್ರಪ್ರದೇಶದ ಅನಂತಪುರ್ ಜಿಲ್ಲೆಯ ಆಡಳಿತ ಕೇಂದ್ರ ಅನಂತಪುರವು ಹೈದ್ರಾಬಾದಿನಿಂದ ೩೫೫ ಕಿ.ಮೀ ಮತ್ತು ಬೆಂಗಳೂರಿನಿಂದ ೨೦೦ ಕಿ.ಮೀ ದೂರದಲ್ಲಿದೆ.
ಇತಿಹಾಸ
ಈ ಪಟ್ಟಣವನ್ನು ೧೩೬೪ರಲ್ಲಿ ವಿಜಯನಗರ ರಾಜರ ದಿವಾನನಾದ ಚಿಕ್ಕಪ್ಪ ವಡೆಯರ್ ಎಂಬವನು ತನ್ನ ಹೆಂಡತಿಯ ಹೆಸರಿನಲ್ಲಿ ನಿರ್ಮಿಸಿದ.೧೭೫೭ರಲ್ಲಿ ಈ ಪಟ್ಟಣವನ್ನು ಗೂಟಿಯ ಮರಾಠ ಮುಖ್ಯಸ್ಥನಾದ ಮೊರಾರಿ ರಾವ್ ಎಂಬವನು ಮುತ್ತಿಗೆ ಹಾಕಿ ವಶಪಡಿಸಿಕೊಂಡ.೧೭೭೫ರಲ್ಲಿ ಇದನ್ನು ಹೈದರಾಲಿ ಗೂಟಿಯೊಂದಿಗೆ ವಶಕ್ಕೆ ಪಡೆದ.ಮುಂದೆ ೧೭೯೯ರಲ್ಲಿ ಟಿಪ್ಪು ಸುಲ್ತಾನ ಮರಣಾನಂತರ ಈ ಪಟ್ಟಣವು ನಿಜಾಮರ ಪಾಲಾಯಿತು.ನಿಜಾಮನು ಇದನ್ನು ೧೮೦೦ರಲ್ಲಿ ಬ್ರಿಟಿಷರ ವಶಕ್ಕೆ ಕೊಟ್ಟ.
ಹವಾಮಾನ
ಇಲ್ಲಿ ಒಣಹವೆಯಿದ್ದು ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶವಾಗಿದೆ.ಇಲ್ಲಿ ವರ್ಷಕ್ಕೆ ಕೇವಲ ೨೨ ಇಂಚಿನಷ್ಟು ಮಾತ್ರಾ ಮಳೆ ಬೀಳುತ್ತದೆ.
ಜನಜೀವನ
೨೦೧೧ರ ಜನಗಣತಿಯಂತೆ ಇಲ್ಲಿಯ ಜನಸಂಖ್ಯೆ ೩,೬೨,೩೪೦.ಲಿಂಗಾನುಪಾತ;೯೯೫ ಮತ್ತು ಸಾಕ್ಷರತೆ:೮೧.೮೮% ಇದೆ.ತೆಲುಗು,ಉರ್ದು,ಕನ್ನಡ ಮತ್ತು ಇಂಗ್ಲೀಷ್ ಇಲ್ಲಿಯ ಪ್ರಮುಖ ಭಾಷೆಯಾಗಿದೆ.
ಪ್ರಮುಖ ಸ್ಥಳಗಳು
ಇಲ್ಲಿಗೆ ಸಮೀಪವಿರುವ ಪ್ರಮುಖ ಸ್ಠಳಗಳು.
- ಹಿಂದೂಪುರ- ಜಿಲ್ಲೆಯ ಪ್ರಮುಖ ವ್ಯಾಪಾರಿ ಕೇಂದ್ರ.
- ಕದಿರಿ - ಭಾರತದ ಅತಿ ದೊಡ್ಡ ಆಲದಮರವಿರುವ ಸ್ಥಳ, ಲಕ್ಷ್ಮೀನರಸಿಂಹ ದೇವಾಲಯ.
- ಲೇಪಾಕ್ಷಿ - ಭಾರತದ ಅತಿ ದೊಡ್ಡ ಏಕಶಿಲಾ ನಂದಿ ವಿಗ್ರಹ, ಇಲ್ಲಿನ ವೀರಭದ್ರೇಶ್ವರ ದೇವಾಲಯವು ವಿಜಯನಗರದ ವಾಸ್ತುಕಲೆಗೆ ಪ್ರಸಿದ್ಧಿ.
- ತಾಡಪತ್ರಿ - ರಾಮಲಿಂಗೇಶ್ವರ ದೇವಾಲಯ.
- ಪೆನುಕೊಂಡ- ವಿಜಯನಗರದ ರಾಜಧಾನಿ.
- ಪುಟ್ಟಪರ್ತಿ - ಸತ್ಯಸಾಯಿಬಾಬಾ.
- ರಾಯದುರ್ಗ - ವಿಜಯನಗರದ ಕೋಟೆ.
- ಧರ್ಮಾವರಮ್- ರೇಶ್ಮೆ ಸೀರೆಗಳಿಗೆ ಹೆಸರುವಾಸಿ.
- ಹೇಮಾವತಿ- ಪಲ್ಲವರ ರಾಜಧಾನಿ.
- ಉರವಕೊಂಡ- ಬುಧಗಾವಿ ಪದ್ಮಪಾಣಿ ಸೂರ್ಯ ದೇವಾಲಯ.