ಅರಾಬಿಕ ಕಾಫಿ
ಅರಾಬಿಕ ಕಾಫಿ | |
---|---|
Coffee flowers | |
Coffee fruits | |
Scientific classification | |
ಸಾಮ್ರಾಜ್ಯ: | Plantae
|
(ಶ್ರೇಣಿಯಿಲ್ಲದ್ದು): | Angiosperms
|
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | Asterids
|
ಗಣ: | Gentianales
|
ಕುಟುಂಬ: | Rubiaceae
|
ಉಪಕುಟುಂಬ: | Ixoroideae
|
ಪಂಗಡ: | Coffeeae
|
ಕುಲ: | Coffea
|
ಪ್ರಜಾತಿ: | C. arabica
|
Binomial name | |
Coffea arabica L.
|
ಅರಾಬಿಕ ಕಾಫಿ ಕಾಫಿಯ ಮುಖ್ಯ ಪ್ರಭೇದಗಳಲ್ಲಿ ಒಂದು. ರೋಬಸ್ಟಾ ಕಾಫಿ ಇನ್ನೊಂದು ಮುಖ್ಯ ಪ್ರಭೇದ.ಇದನ್ನು ಇಥಿಯೋಪಿಯದ ನೈಋತ್ಯ ಭಾಗದ ಎತ್ತರದ ಪರ್ವತ ಪ್ರದೇಶಗಳಲ್ಲಿ ಮೊದಲು ಗುರುತಿಸಲಾಯಿತು[೧],.ಇದು ಪ್ರಥಮವಾಗಿ ತೋಟಗಾರಿಕೆಯಲ್ಲಿ ಬಳಕೆಯಾದ ಪ್ರಭೇದ.
ಭೌಗೋಳಿಕ ಹರಡುವಿಕೆ
ಇದು ಮುಖ್ಯವಾಗಿ ಆಫ್ರಿಕ ಖಂಡದ ಸ್ವಾಭಾವಿಕ ಸಸ್ಯವಾದರೂ ಈಗ ಕಾಫಿ ಬೆಳೆಯುವ ಪ್ರಪಂಚದೆಲ್ಲೆಡೆ ಕಾಣಬರುತ್ತದೆ.ಯೆಮೆನ್ ಈ ಪ್ರಭೇದವನ್ನು ಬೆಳೆಸುವುದರಲ್ಲಿ ಅಗ್ರಗಣ್ಯ ದೇಶವಾಗಿದೆ.
ಸಸ್ಯ ಲಕ್ಷಣಗಳು
ಕಚ್ಛಾ ಅರಾಬಿಕ ಕಾಫಿ ಗಿಡವು ಸುಮಾರು ೨೯ರಿಂದ ೩೯ ಆಡಿ ಬೆಳೆಯುತ್ತದೆ.ಎಲೆಯು ವಿರುದ್ಧ ದಿಕ್ಕಿನಲ್ಲಿ ಉದ್ದವಾಗಿದ್ದು ಅಂಡವೃತ್ತ-ಅಂಡವಾಗಿರುತ್ತದೆ.ಸುಮಾರು ೨.೫ ಯಿಂದ ೪ ಇಂಚು ಉದ್ದವಾಗಿದ್ದು,೧.೫ ಯಿಂದ ೩.೨ ಇಂಚು ಅಗಲವಾಗಿ, ಹೊಳಪುಳ್ಳ ಗಾಢ ಹಸಿರು ಬಣ್ಣವಿರುತ್ತದೆ. ಹೂವು ಬಿಳಿ ಬಣ್ಣವಾಗಿದ್ದು,ಗೊಂಚಲು ಗೊಂಚಲಾಗಿರುತ್ತವೆ.ಬೀಜವು ಓಟೆಯ ಒಳಗಿದ್ದು,ಮಾಗಿದಾಗ ಕೆಂಪು-ನೇರಳೆ ಬಣ್ಣವನ್ನು ಹೊಂದುತ್ತದೆ. ಒಂದು ಓಟೆಯು ಸಾಮಾನ್ಯವಾಗಿ ಎರಡು ಬೀಜಗಳನ್ನು ಹೊಂದಿರುತ್ತದೆ.
ಬೇಸಾಯ
ಅರಾಬಿಕ ಕಾಫಿಯು ಪ್ರಪಂಚದ ಒಟ್ಟು ಕಾಫಿ ಉತ್ಪಾದನೆಯ ೭೫-೮೦ ಶೇಕಡಾ ಇದೆ[೨].ಅರಾಬಿಕ ಕಾಫಿಯನ್ನು ನೆಟ್ಟ ಸುಮಾರು ೭ ವರ್ಷಗಳ ನಂತರ ಫಸಲು ಕೊಡಲು ಪ್ರಾರಂಭಿಸುತ್ತದೆ.ಸುಮಾರು ೧೩೦೦ ರಿಂದ ೧೫೦೦ ಆಡಿಗಳ ಎತ್ತರ ಪ್ರದೇಶ ಮತ್ತು ೪೦ರಿಂದ ೬೦ ಇಂಚಿನಷ್ಟು ವಾರ್ಷಿಕ ಮಳೆ ಇದಕ್ಕೆ ಅನುಕೂಲವಾಗಿದೆ.[೩]
ಛಾಯಾಂಕಣ
-
Coffea arabica growing at Olinda, Maui
-
Unroasted coffee (Coffea arabica) beans from ಬ್ರೆಜಿಲ್
ಉಲ್ಲೇಖಗಳು
- ↑ Martinez-Torres, Maria. Organic Coffee. Ohio University. Retrieved 26 January 2016.
- ↑ Arabica and Robusta Coffee Plant, at the Coffee Research Institute homepage. Retrieved December 2012.
- ↑ Christine B. Schmitt (2006). Montane Rainforest with Wild Coffea Arabica in the Bonga Region (SW Ethiopia): Plant Diversity, Wild Coffee Management and Implications for Conservation. Cuvillier Verlag. p. 4. ISBN 978-3-86727-043-4.