ಆಲ್ಕೀನ್

ಕನಿಷ್ಠ ಪಕ್ಷ ಒಂದು ದ್ವಿಬಂಧ (Double bond) ಇರುವ ಅಣುಗಳನ್ನು ಹೊಂದಿರುವ ವಿವೃತಶೃಂಖಲೆಯುಳ್ಳ (Open Chain) ಅಪರ್ಯಾಪ್ತ (ಅನ್‍ಸ್ಯಾಚುರೇಟೆಡ್) ಹೈಡ್ರೋಕಾರ್ಬನ್‍ಗಳ ಸಾರ್ವತ್ರಿಕ ನಾಮಕ್ಕೆ ಆಲ್ಕೀನ್ ಎಂದು ಹೆಸರು. ಇವು ಬಹುವರ್ತನಾಶೀಲ ಗುಣವುಳ್ಳವು. ಇವನ್ನು ಓಲಿಫೀನ್ಸ್ ಅಥವಾ ಎಥಿಲಿನಿಕ್ ಹೈಡ್ರೊಕಾರ್ಬನ್‍ಗಳೆಂದು ಕರೆಯುತ್ತಾರೆ.
![]() |
![]() |
![]() |
branched-chain | straight-chain | cyclic |
ವಿವೃತಶೃಂಖಲೆ |
ರಚನೆ
ಒಂದೇ ಒಂದು ದ್ವಿಬಂಧವಿರುವ ಆಲ್ಕೀನ್‍ಗಳನ್ನು CnH2n ( n=2 ಅಥವಾ ಹೆಚ್ಚು) ಎಂಬ ಸಾರ್ವತ್ರಿಕ ಸೂತ್ರದಿಂದ ನಿರೂಪಿಸಬಹುದು. ಈ ಶ್ರೇಣಿಯ ಮೊದಲೆರಡರಲ್ಲಿ ಎಥಿಲೀನ್ (ಈಫೇನ್) CH2:CH2 ಪ್ರೊಪಿಲೋನ್ (ಪ್ರೊಪೀನ್) CH2:CH CH3 ಇವು ಸೇರಿವೆ. ಎರಡು ಅಥವಾ ಅಧಿಕ ದ್ವಿಬಂಧಗಳಿರುವಾಗ ಆಲ್ಕೀನುಗಳನ್ನು, ಆಲ್ಕಡೈನ್‍ಗಳು, ಆಲ್ಕಟ್ರೈನಗಳು ಇತ್ಯಾದಿ ಅಥವಾ ಡೈಓಲಿಫಿನ್ಸ್. ಟ್ರೈಓಲಿಫಿನ್ಸ್ ಇತ್ಯಾದಿ ಎಂದೂ ಕರೆವುದುಂಟು. ಒಂದಕ್ಕಿಂತ ಹೆಚ್ಚಿಗೆ ದ್ವಿಬಂಧಗಳುಳ್ಳ ಹೈಡ್ರೊಕಾರ್ಬನ್ನುಗಳಲ್ಲೆಲ್ಲ ಬ್ಯುಟಿಡೈನ್ (1,3-ಬ್ಯುಟಿಡೈನ್) ಅತಿ ಮುಖ್ಯವಾದುದು. CH2:CHCH.CH2.[೧]
ಉಲ್ಲೇಖ