ಆಲ್ಫ್ರೆಡ್ ಹಿಚ್ಕಾಕ್
ಸರ್ ಆಲ್ಫ್ರೆಡ್ ಜೋಸೆಫ್ ಹಿಚ್ಕಾಕ್, ಕೆ.ಬಿ.ಇ (13 ಆಗಸ್ಟ್ 1899 - 1980 29 ಏಪ್ರಿಲ್) ಪ್ರಸಿದ್ಧ ಚಲನಚಿತ್ರ ನಿರ್ದೇಶಕ. ಇವನು ಮೂಕಿ ಚಿತ್ರದ ನಿರ್ದೇಶಕನಾಗಿದ್ದ. ಪತ್ತೇದಾರಿ ಸಿನಿಮಾಗಳಲ್ಲಿ ಹಾಸ್ಯಸ್ಪರ್ಶವನ್ನು ನೀಡುತ್ತಿದ್ದುದು ಈತ ಚಿತ್ರನಟರಂತೆ, ಆಕರ್ಷಣಾ ವ್ಯಕ್ತಿಯಾಗಿ ಖ್ಯಾತಿ ಪಡೆಯುವಂತಾಯಿತು.
ಬದುಕು
1899 ಆಗಸ್ಟ್ 13, ರಂದು ಲಂಡನ್‍ನಲ್ಲಿ ಜನಿಸಿದ.
ಲಂಡನ್ನಿನ ಕುಕ್ಕುಟ ವ್ಯಾಪಾರಿಯ ಮಗನಾದ ಈತ, ಸೇಂಟ್ ಇಗ್ನಟಸ್ ಕಾಲೇಜ್, ಜೆಸ್ಯೂಟ ಶಾಲೆಯಲ್ಲಿ ವ್ಯಾಸಂಗ ಮಾಡಿದ. ಲಂಡನ್ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ಪದವಿ ಪಡೆದು 1920 ರಿಂದ ಸಿನಿಮಾಗಳಲ್ಲಿ, ಮೂಕಿ ಚಿತ್ರಗಳಿಗೆ ಶೀರ್ಷಿಕಾ ಫಲಕ ರಚಿಸುವ ಕೆಲಸದಲ್ಲಿ ತೊಡಗಿಸಿಕೊಂಡ.
1925 ರಲ್ಲಿ ತನ್ನ ಮೊದಲ ಚಿತ್ರ ನಿರ್ಮಿಸಿದ. ಅನಂತರ 1926ರಲ್ಲಿ “ಲಾಡ್ಜರ್” ಸಿನಿಮಾದಲ್ಲಿ “ಥ್ರಿಲ್ಲರ್ಸ್” ಮೂಲಕ ಗುರುತಿಸಲ್ಪಟ್ಟ. ಇವನು ನಿರ್ದೇಶಿಸಿದ ಚಿತ್ರವೆ ಬ್ಲಾಕ್ಮೇಲ್ (1929). ಮೊದಲ ವಾಕಿ-ಟಾಕಿ ಚಿತ್ರ. ಶಾಸ್ತ್ರೀಯ ಚಿತ್ರಗಳಾದ ಥರ್ಟಿನೈನ್ ಸ್ಟೆಪ್ಸ್ (1935) ಹಾಗೂ ಲೇಡಿ ವ್ಯಾನಿಷಸ್ (1938) ನ್ನು ನಿರ್ದೇಶಿಸಿದ ಅನಂತರ ಈತ ಇಂಗ್ಲೆಂಡ್ ಬಿಟ್ಟು ಹಾಲಿವುಡ್‍ಗೆ ಬಂದು ರಬೆಕ್ಕಾ (1940) ಚಿತ್ರವನ್ನು ನಿರ್ದೇಶಿಸಿದ. ಇದು “ದ ಅಕಾಡೆಮಿ” ಪ್ರಶಸ್ತಿಯನ್ನು ಗಳಿಸಿತು. ಮುಂದಿನ ಮೂವತ್ತು ವರ್ಷಗಳಲ್ಲಿ ನಿರಂತರವಾಗಿ ಚಿತ್ರ ನಿರ್ಮಿಸಿದ. ನಿಗೂಢತೆಯನ್ನು ಕಟ್ಟುವ ಆತನ ಉತ್ಕøಷ್ಟ ತಾಂತ್ರಿಕತೆಯನ್ನು “ಫ್ಲಾಮ್ ಬೊಯಿನಪ್ಲಿ” ಪ್ರದರ್ಶಿಸುತ್ತದೆ. 1950ರ ಸಿನಿಮಾಗಳಾದ ಸ್ಟ್ರೇಂಜರ್ಸ್ ಆನ್ ಎ ಟ್ರೈನ್ (1951), ರಿಯರ್‍ವಿಂಡೋ (1954) ಹಾಗೂ ವರ್ಟಿಗೋ (1958) ಹೆಸರು ಮಾಡಿದುವು. ಇವನು ಸಾಂಪ್ರದಾಯಿಕ ಪತ್ತೇದಾರಿ ತಾಂತ್ರಿಕತೆಯಲ್ಲಿ ಕಾರ್ಯತಃ ಪರಿಣತನಾಗಿದ್ದಾನೆ. ಅನಂತರ ಥ್ರಿಲ್ಲರ್ಸ್ ಗಳನ್ನು ಹೊಸ ಶೈಲಿಯಲ್ಲಿ ತೋರಿಸುವತ್ತ ಗಮನಹರಿಸಿದ(1960). ಇದು ಸೈಕೋ (1960) ಸಿನಿಮಾದಲ್ಲಿ ಕಂಡುಬರುತ್ತದೆ. ಒಬ್ಬ ಪ್ರಮುಖ ಹೆಂಗಸು ಕೊಲೆಯಾದುದನ್ನು ಹೇಳಲು ಸಿನಿಮಾದ 1/3 ಭಾಗವನ್ನು ಬಳಸಿದ್ದಾನೆ. ಇವನ ದ ಬಡ್ರ್ಸ್ (1963) ನಲ್ಲಿ ಪಕ್ಷಿಗಳು ಮನುಷ್ಯರ ಮೇಲೆ ಎರಗಲು ಏನು ಪ್ರೇರಣೆ ಎಂಬ ಬಗೆ ಏನನ್ನೂ ಹೇಳುವುದಿಲ್ಲ. ಟೋರ್ನ್ ಕರ್ಟೈನ್ (1966) ಹಾಗೂ ಟೋಪಾeóï (1969) ನಲ್ಲಿ ಇವನು ಸಾಂಪ್ರದಾಯಿಕ ಪತ್ತೇದಾರಿ ಕಥೆಗಳನ್ನು ಕ್ರೋಡೀಕರಿಸಿ ಪ್ರದರ್ಶಿಸಿದ್ದಾನೆ. ಸಮಾಜ ಬಾಹಿರ ಚಟುವಟಿಕೆಗಳಿಂದ ಕೂಡಿದ ಈ ಕಥಾವಸ್ತುಗಳು ಒಳ್ಳೆಯದಕ್ಕಿಂತ ಕೆಟ್ಟ ಪರಿಣಾಮಗಳನ್ನುಂಟು ಮಾಡುತ್ತವೆಂಬುದನ್ನು ಪ್ರೇಕ್ಷಕರಿಗೆ ತಿಳಿಸುವುದು ಅವನ ಉದ್ದೇಶವಾಗಿದ್ದಿತು. ಆದ್ದರಿಂದ ಮುಂದೆ ಅವನು ಫ್ರಾಂಜಿ ಚಿತ್ರದಲ್ಲಿ (1972) ತನ್ನ ಹಳೆಯ ಶೈಲಿಯನ್ನೇ ಪುನಶ್ಚೇತನಗೊಳಿಸಿದ್ದಾನೆ. ಹೀಗೆ ತನ್ನ ಚಲನಚಿತ್ರಗಳಲ್ಲಿ ಅನೇಕ ನೂತನ ಪ್ರಯೋಗಗಳನ್ನು ಮಾಡಿದ ಈತ 1950-60ರ ದಶಕಗಳಲ್ಲಿ ಹಲವಾರು ಪ್ರಖ್ಯಾತ ಟಿ.ವಿ. ಧಾರಾವಾಹಿಗಳನ್ನು ನಿರ್ಮಿಸಿ ಅಧಿಕ ಕೀರ್ತಿಗೆ ಪಾತ್ರನಾದ. ಇವನು ತನ್ನ ಕೃತಿಗಳನ್ನು ಪರಿಚಯಿಸುವ ಪ್ರಚಾರ ಚಿತ್ರಗಳನ್ನೂ ನಿರ್ಮಿಸಿದ. ನಿಗೂಢ ಕಥಾ ವಸ್ತುಗಳನ್ನುಳ್ಳ ಚಲನಚಿತ್ರ ಸರಣಿಗಳನ್ನು ಮಾಡಿ ಹೆಚ್ಚು ಯಶಸ್ಸು ಪಡೆದ.
ಇನ್ನಿತರ ಹಾಲಿವುಡ್ ನಿರ್ದೇಶಕರಿಗಿಂತಲೂ ಗಂಭೀರವಾಗಿ ಇವನ ಚಿತ್ರಗಳಿರುತ್ತವೆ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಇವನ ಚಿತ್ರಗಳಲ್ಲಿ ತಾತ್ತ್ವಿಕ ಭಾವನೆಗಳು ಒಡಮೂಡಿದ್ದರೂ ಮನರಂಜನೆಗಿಂತ ಆಚೆ ಯಾವುದೇ ಅಭಿಪ್ರಾಯ ಇಲ್ಲ ಎನ್ನುವುದು ಇವನ ನಿಲುವು. ಕಿರಿಯ ಚಿತ್ರ ನಿರ್ಮಾಪಕರ ಮೇಲೆ ಈತನ ಪ್ರಭಾವ ಅಗಣಿತವಾಗಿದೆ. ಫ್ರಾನ್‍ಕೋಸ್ ಟ್ರುಫಾಟ್, ಕ್ಲಾಂಡೆ ಜಾಬ್ರೊಲ್ ಹಾಗೂ ಎರ್ರಿಕ್ ರೋಹಮರ್, ಲಿಂಟ್ಸೆ ಆ್ಯಂಡರ್‍ಸನ್, ಅಮೆರಿಕದ ಪೀಟರ್ ಬೊಗ್ಡಾನೊವಿಚ್ ಇವರು ಈ ಬಗ್ಗೆ ವ್ಯಾಪಕವಾಗಿ ಬರೆದು, ತಮ್ಮ ಶೈಲಿಗಳ ಮೇಲೆ ಇವನ ಪ್ರಭಾವವನ್ನು ಗುರುತಿಸಿದ್ದಾರೆ.
ಇವನು 1980 ರಲ್ಲಿ ನಿಧನನಾದ.
ಉಲ್ಲೇಖಗಳು
- ↑ Hamilton, Fiona. "PM hails Christian influence on national life". The Times. London. Retrieved 25 June 2013.
{cite news}
: Unknown parameter|deadurl=
ignored (help)
