ಕುರ್ಟಾಲಮ್
ಕುರ್ಟಾಲಮ್ Courtallam, Kutrallam குற்றாலம் | |
---|---|
town | |
ಜನಸಂಖ್ಯೆ (೨೦೦೧) | |
• ಒಟ್ಟು | ೨೩೬೮ |
ಕುರ್ಟಾಲಮ್ (ಕುಟ್ರಾಲಮ್) ( ಕುರ್ಟಾಲಮ್ (ಕುಟ್ರಾಲಮ್) (ತಮಿಳು:குற்றாலம்) ಎನ್ನುವುದು ಭಾರತದ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿನ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ೧೬೦ ಮೀಟರ್ ಸರಾಸರಿ ಎತ್ತರದದಲ್ಲಿರುವ ಪಂಚಾಯತ್ ಪಟ್ಟಣವಾಗಿದೆ. ಈ ಪ್ರದೇಶದಲ್ಲಿ ಚಿಟ್ಟಿತ್ತಾರ್, ಮಣಿಮುತ್ತೂರ್, ಪಚೈಯಾರ್ ಮತ್ತು ತಾಂಬರಪರಣಿಯಂತಹ ಹಲವು ಋತುಕಾಲಿಕ ಮತ್ತು ಸಾರ್ವಕಾಲಿಕ ನದಿಗಳು ಹುಟ್ಟುತ್ತವೆ. ಈ ಪ್ರದೇಶದಲ್ಲಿನ ಹಲವು ಜಲಪಾತಗಳು ಮತ್ತು ಜಲಪಾತದ ಶಾಖೆಗಳು ಜೊತೆಗೆ ಎಲ್ಲೆಡೆಯಿರುವ ಆರೋಗ್ಯ ರೆಸಾರ್ಟ್‌ಗಳು ಈ ಪ್ರದೇಶಕ್ಕೆ ದಕ್ಷಿಣ ಭಾರತದ ವಿಶ್ರಾಂತಿ ಧಾಮ ಎಂಬ ಹೆಸರನ್ನು ತಂದುಕೊಟ್ಟಿವೆ.
ಸ್ಥಾನ
ಕುರ್ಟಾಲಮ್ ಪ್ರದೇಶವು ಸೆಂಗೊಟ್ಟೈನಿಂದ ೫ ಕಿಮೀ, ಪಂಪೋಲಿಯಿಂದ ೯ ಕಿಮೀ, ತೆಂಕನಾಸಿಯಿಂದ ೫ ಕಿಮೀ, ಕಡಯನಲ್ಲೂರ್ನಿಂದ ೨೦ ಕಿಮೀ, ಪುಲಿಯನ್‌ಗುಡಿಯಿಂದ ೩೭ ಕಿಮೀ, ತಿರುನೆಲ್ವೇಲಿಯಿಂದ ೫೩ ಕಿಮೀ, ಕನ್ಯಾಕುಮಾರಿಯಿಂದ ೧೩೭ ಕಿಮೀ, ಅಲೆಪ್ಪಿಯಿಂದ ೧೫೨ ಕಿಮೀ, ತಿರುವನಂತಪುರಂನಿಂದ ೧೧೨ ಕಿಮೀ, ರಾಜಪಾಳ್ಯನಿಂದ ೬೪ ಕಿಮೀ, ಶ್ರೀವಿಲ್ಲಿಪೂತ್ತೂರ್ನಿಂದ ೭೨ ಕಿಮೀ ಮತ್ತು ಚೆನ್ನೈನಿಂದ ೬೪೦ ಕಿಮೀ ದೂರದಲ್ಲಿದೆ. ಕುರ್ಟಾಲಮ್‌ಗೆ ಹತ್ತಿರದ ವಿಮಾನ ನಿಲ್ದಾಣವು ಟ್ಯುಟಿಕೋರಿನ್ ವಿಮಾನ ನಿಲ್ದಾಣ (ಟಿಸಿಆರ್) ಆಗಿದ್ದು, ಇದು ಸುಮಾರು ೮೬ ಕಿಮೀ ದೂರದಲ್ಲಿದೆ. ಕುರ್ಟಾಲಮ್‌ಗೆ ಹತ್ತಿರದ ರೇಲ್ವೆ ನಿಲ್ದಾಣವು ೫ ಕಿಮೀ ದೂರದಲ್ಲಿನ ತೆಂಕನಾಸಿಯಲ್ಲಿದೆ.
ಪ್ರವಾಸೋದ್ಯಮ
ಕುರ್ಟಾಲಮ್ ಚಿಕ್ಕ ಗ್ರಾಮವಾಗಿದ್ದರೂ ಸಹ ವಾರಾಂತ್ಯಗಳಲ್ಲಿ ಮತ್ತು ಋತು-ಸಮಯಗಳಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ. ಪ್ರವಾಸೋದ್ಯಮವೇ ಸ್ಥಳೀಯ ಏಕೈಕ ಆರ್ಥಿಕ ಮೂಲವಾಗಿದೆ. ಕುರ್ಟಾಲಮ್‌ನಲ್ಲಿ ಸಾಕಷ್ಟು ವಸತಿ ಗೃಹಗಳು ಮತ್ತು ಹೋಟೆಲ್‌ಗಳಿವೆ, ಆದರೆ ಜಲಪಾತದಲ್ಲಿ ನೀರಲ್ಲದಿರುವಾಗ ಮತ್ತು ವಾತಾವರಣವು ತೀರಾ ಉಷ್ಣವಾಗಿದ್ದಾಗ ವಾಸ್ತವವಾಗಿ ಖಾಲಿಯಾಗಿರುತ್ತದೆ. ಮಳೆಗಾಲದ ನಂತರ ಋತುವಿರದ ಸಮಯವು ಕುರ್ಟಾಲಮ್‌ಗೆ ಭೇಟಿ ನೀಡಲು ಪ್ರಶಸ್ತ ಸಮಯವಾಗಿದೆ. ತಮಿಳುನಾಡು ಮತ್ತು ಕೇರಳದ ಸುತ್ತಲಿನ ಪ್ರವಾಸಿಗರು ಭೇಟಿ ನೀಡುವ ಅತ್ಯಂತ ಪ್ರಶಸ್ತ ಸಮಯವು ಜೂನ್ ಮತ್ತು ಸೆಪ್ಟೆಂಬರ್ ತಿಂಗಳ ಮಧ್ಯದ ಅವಧಿಯಾಗಿದೆ. ಹಿತವಾದ ತಂಪಾದ ಗಾಳಿ ಮತ್ತು ಆಗಾಗ್ಗೆ ಬೀಳುವ ಮಳೆಹನಿಯೊಂದಿಗೆ ವಾತಾವರಣವು ಸಾಮಾನ್ಯವಾಗಿ ಆಹ್ಲಾದಕರವಾಗಿರುತ್ತದೆ. ಪ್ರಶಸ್ತ ಋತುಕಾಲದಲ್ಲಿ, ಜಲಪಾತಗಳಲ್ಲಿ ಜನರನ್ನು ನಿಯಂತ್ರಿಸುವುದು ಕಷ್ಟಸಾಧ್ಯವಾಗುತ್ತದೆ ಮತ್ತು ಪ್ರವಾಸದ ಉದ್ಯಮಕ್ಕೆ ಉಂಟಾಗುವ ಯಾವುದೇ ಅಡ್ಡಿಯನ್ನು ಕಡಿಮೆ ಮಾಡಲು ಪೊಲೀಸರು ಹಿಂಸಾತ್ಮಕ ಕ್ರಮಗಳ ಮೂಲಕ ಪ್ರತ್ಯುತ್ತರ ನೀಡುತ್ತಾರೆ. ಸ್ಟಾರ್ ದರ್ಜೆಯ ಕೆಲವು ಹೋಟೆಲ್‌ಗಳು ಇಲ್ಲಿದ್ದರೂ ಸಹ ಕುಟ್ರಾಲಮ್‌ನಲ್ಲಿ ಯಾವುದೇ ವಿಲಾಸಿ ವಸತಿ ಸೌಕರ್ಯಗಳು ಇಲ್ಲ.
ಕುರ್ಟಾಲಮ್‌ನ ನೀರು ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಕುರ್ಟಾಲಮ್‌ನಲ್ಲಿ ನೀರಿನ ಔಷಧೀಯ ಗುಣಗಳು ಅಧಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಅದು ಮಾನಸಿಕ ಅಸ್ವಸ್ಥತೆಯನ್ನು ಪರಿಹರಿಸುತ್ತದೆಂದು ನಂಬಲಾಗಿದೆ
ಆಕರ್ಷಣೆಗಳು
ಪ್ರವಾಸಿಗರಿಗೆ ಕುರ್ಟಾಲಮ್‌ನಲ್ಲಿನ ಪ್ರಮುಖ ಆಕರ್ಷಣೆಯು ಅಲ್ಲಿನ ಜಲಪಾತಗಳಾಗಿವೆ. ರಸ್ತೆಯ ಮೂಲಕ ತಲುಪಬಹುದಾದ ಮೂರು ಪ್ರಮುಖ ಜಲಪಾತಗಳೆಂದರೆ - ಮೈನ್ ಫಾಲ್ಸ್ , ಫೈ ಫಾಲ್ಸ್ , ಮತ್ತು ಓಲ್ಡ್ ಕುರ್ಟಾಲಮ್ ಫಾಲ್ಸ್ . ಶೆನ್‌ಭಾಗ ದೇವಿ ಫಾಲ್ಸ್ ಮತ್ತು ಹನಿ ಫಾಲ್ಸ್ ನಂತರ ಇತರ ಜಲಪಾತಗಳನ್ನು ಪರ್ವತದಲ್ಲಿ ಟ್ರೆಕ್ಕಿಂಗ್ ಮಾಡುವುದರ ಮೂಲಕ ತಲುಪಬಹುದು. ಓಲ್ಡ್ ಕುರ್ಟಾಲಮ್ ಫಾಲ್ಸ್ ಬಳಿಯಿರುವ ಚಿಕ್ಕ ಜಲಪಾತವು ಟೈಗರ್ ಫಾಲ್ಸ್ ಆಗಿದ್ದು ಹುಲಿಗಳು ನೀರನ್ನು ಅರಸಿ ಇಲ್ಲಗೆ ಬರುತ್ತಿದ್ದ ಕಾರಣದಿಂದ ಈ ಹೆಸರಿನಿಂದ ಕರೆಯಲಾಗುತ್ತದೆ. ಫೈವ್ ಫಾಲ್ಸ್ ಮೇಲುಗಡೆ ಸರ್ಕಾರಿ ತೋಟಗಾರಿಕೆ ಉದ್ಯಾನದ ಒಳಗಡೆ ಮತ್ತೊಂದು ಚಿಕ್ಕ ಜಲಪಾತವಿದೆ, ಆದರೆ ಇದು ಸಾರ್ವಜನಿಕರಿಗೆ ಮುಕ್ತ ಪ್ರವೇಶವನ್ನು ಹೊಂದಿಲ್ಲ. ಫೈವ್ ಫಾಲ್ಸ್ ಮತ್ತು ಓಲ್ಡ್ ಕುರ್ಟಾಲಮ್ ಫಾಲ್ಸ್ ಬಳಿಯಿರುವ ದೋಣಿ ಮನೆಗಳು, ಹಾವಿನ ಉದ್ಯಾನ, ಸಾರ್ವಜನಿಕ ಮತ್ಸ್ಯಾಗಾರ, ಚಿಕ್ಕ ಮಕ್ಕಳ ಉದ್ಯಾನಗಳು ಮತ್ತು ಆಟವಾಡುವ ಪ್ರದೇಶಗಳು ಇತರ ಆಕರ್ಷಣೀಯ ಸ್ಥಳಗಳಾಗಿವೆ.
ಮುಖ್ಯ ಜಲಪಾತದ ಬಳಿ ಕುರ್ಟಾಲೇಶ್ವರ ದೇವಸ್ಥಾನವೆಂದು ಕರೆಲಯ್ಪಡುವ ಪ್ರಾಚೀನ ಶಿವ ದೇವಾಲಯವಿದೆ.
ಕೇರಳದಲ್ಲಿ ರಾಜ್ಯ ಗಡಿ ಭಾಗದಲ್ಲಿ ಪಲರುವಿ ಫಾಲ್ಸ್ ಇದೆ.[೧]
ಜನಸಂಖ್ಯಾ ವಿವರ
As of 2001[update] ಭಾರತದ ಜನಗಣತಿ,[೨] ಕುರ್ಟಾಲಮ್‌ನ ಜನಸಂಖ್ಯೆಯು ಪ್ರಮಾಣವು ೨೩೬೮ ಆಗಿದೆ. ಒಟ್ಟು ಜನಸಂಖ್ಯೆಯಲ್ಲಿ ಪುರುಷರು ೪೧% ಮತ್ತು ಮಹಿಳೆಯರು ೫೯% ಇದ್ದಾರೆ. ಕುರ್ಟಾಲಮ್‌ನ ಸಾಕ್ಷರತಾ ಪ್ರಮಾಣವು ರಾಷ್ಟ್ರೀಯ ಸಾಕ್ಷರತಾ ಪ್ರಮಾಣವಾದ ೫೯.೫% ಕ್ಕಿಂತ ಹೆಚ್ಚು ಸಾಕ್ಷರತಾ ಪ್ರಮಾಣವಾದ ಸರಾಸರಿ ೭೫% ರಷ್ಟನ್ನು ಹೊಂದಿದೆ; ಪುರುಷರು ೭೮% ನಷ್ಟು ಸಾಕ್ಷರತೆಯನ್ನು ಮತ್ತು ಮಹಿಳೆಯರು ೭೪% ನಷ್ಟು ಸಾಕ್ಷರತೆಯನ್ನು ಹೊಂದಿದ್ದಾರೆ. ೭% ರಷ್ಟು ಜನಸಂಖ್ಯೆಯ ಪ್ರಮಾಣವು ೬ ವರ್ಷಕ್ಕಿಂತ ಕೆಳಗಿನವರಾಗಿರುತ್ತಾರೆ. ಕೇರಳ ಗಡಿಗೆ ಹತ್ತಿರವಾಗಿದ್ದರೂ, ಕುರ್ಟಾಲಮ್‌ನ ಸಂಪೂರ್ಣ ಜನರು ತಮಿಳಿನವರೇ ಆಗಿದ್ದಾರೆ.
ಇವನ್ನೂ ಗಮನಿಸಿ
- ಭಾರತದದಲ್ಲಿನ ಜಲಪಾತದ ಪಟ್ಟಿ
ಬಾಹ್ಯ ಕೊಂಡಿಗಳು
- ಕುರ್ಟಾಲಮ್ ಚಿತ್ರಗಳು Archived 2013-05-04 ವೇಬ್ಯಾಕ್ ಮೆಷಿನ್ ನಲ್ಲಿ. ಕುರ್ಟಾಲಮ್‌ನ ಇನ್ನಷ್ಟು ಚಿತ್ರಗಳು
- ಹನಿ ಫಾಲ್ಸ್[ಶಾಶ್ವತವಾಗಿ ಮಡಿದ ಕೊಂಡಿ] ಚಿತ್ರಗಳು ಮತ್ತು ಮಾಹಿತಿ
ಉಲ್ಲೇಖಗಳು
- ↑ "Palaruvi Falls". World of Waterfalls. Retrieved 2010-06-26.
- ↑ GRIndia
- http://www.Surandai.com Archived 2018-11-04 ವೇಬ್ಯಾಕ್ ಮೆಷಿನ್ ನಲ್ಲಿ.
- REDIRECT Template:Hydrography of Tamil Nadu