ಕೆ ಚಂದ್ರಶೇಖರ್ ರಾವ್

ಕೆ ಚಂದ್ರಶೇಖರ್ ರಾವ್

ತೆಲಂಗಾಣ ಮೊದಲನೇ ಮುಖ್ಯ ಮಂತ್ರಿ
ಅಧಿಕಾರ ಅವಧಿ
2 June 2014 - ಪ್ರಸ್ತುತ
ಪೂರ್ವಾಧಿಕಾರಿ ಮೊದಲ ಸರಕಾರ
ಮತಕ್ಷೇತ್ರ ಗಜ್ವಾಲ್
ವೈಯಕ್ತಿಕ ಮಾಹಿತಿ
ಜನನ ಮೇಡಕ್ ಜಿಲ್ಲೆಯ ಸಿದ್ದಿಪೇಟ ಮಂಡಲ್ ನ ,ಚಿಂಟಮಡಕ
ರಾಜಕೀಯ ಪಕ್ಷ ಭಾರತ್ ರಾಷ್ಟ್ರ ಸಮಿತಿ
ವಾಸಸ್ಥಾನ ಹೈದರಾಬಾದ್
ಧರ್ಮ ಹಿಂದೂ

ಕೆ ಚಂದ್ರಶೇಖರ್ ರಾವ್ (ಕಲ್ವಕುಂಟ್ಲ ಚಂದ್ರಶೇಖರ ರಾವ್‌, ಕೆಸಿಆರ್ )(ಜನನ ೧೯೫೪ ರ ಫೆಬ್ರವರಿ ೧೭) ತೆಲಂಗಾಣ ರಾಜ್ಯದ ಮೊದಲ ಮತ್ತು ಪ್ರಸ್ತುತ ಮುಖ್ಯಮಂತ್ರಿ[] . ಭಾರತ್ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ,ಮೇಡಕ್ ಜಿಲ್ಲೆಯ ಗಜ್ವಾಲ್ ಕ್ಷೇತ್ರದ ಶಾಸಕರಾಗಿದ್ದಾರೆ.ಜೂನ್ ೨, ೨೦೧೪ ರಂದು ತೆಲಂಗಾಣ ,ಹೊಸ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. []

ಬಾಲ್ಯ ಜೀವನ

ರಾವ್ ಮೇಡಕ್ ಜಿಲ್ಲೆಯ ಸಿದ್ದಿಪೇಟ ಮಂಡಲ್ ನ , ಚಿಂಟಮಡಕ ಗ್ರಾಮದಲ್ಲಿ ೧೭ ಫೆಬ್ರವರಿ ೧೯೫೪ ರಂದು ಜನಿಸಿದರು .ಒಸ್ಮಾನಿಯಾ ಆರ್ಟ್ಸ್ ಕಾಲೇಜ್ ,ಉಸ್ಮಾನಿಯಾ ವಿಶ್ವವಿದ್ಯಾಲಯನಿಂದ ಸಾಹಿತ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.[]

ಕಾಂಗ್ರೆಸ್ ಪಕ್ಷ

ಕೆಸಿಆರ್ ಮೇಡಕ್ ಜಿಲ್ಲೆಯ ಯುವ ಕಾಂಗ್ರೆಸ್ ಪಕ್ಷದಿಂದ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು.ನಂತರ NT.Rama ರಾವ್ ನೇತೃತ್ವದ ತೆಲುಗುದೇಶಂ ಪಕ್ಷ ಸೇರಿದರು.

ತೆಲುಗು ದೇಶಂ ಪಕ್ಷ

ಕೆಸಿಆರ್ ೧೯೮೩ ರಲ್ಲಿ ಟಿಡಿಪಿ ಸೇರಿದರು ಮತ್ತು ಎ ಮದನ್ ಮೋಹನ್ ವಿರುದ್ಧ ಸ್ಪರ್ಧಿಸಿ ಆ ಚುನಾವಣೆಯಲ್ಲಿ ಸೋತರು. ಅವರು ೧೯೮೫ ಮತ್ತು ೧೯೯೯ ರ ಮಧ್ಯೆ ಸಿದ್ದಿಪೇಟ್ ನಿಂದ ಸತತ ನಾಲ್ಕು ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ.೧೯೮೭-೧೯೮೮ ರಿಂದ ಎನ್.ಟಿ.ರಾಮ ರಾವ್ ಸಂಪುಟದಲ್ಲಿ ಬರ ಮತ್ತು ಪರಿಹಾರ, ೧೯೯೬ ರಲ್ಲಿ ಅವರು ಚಂದ್ರಬಾಬು ನಾಯ್ಡು ಅವರ ಸಂಪುಟದಲ್ಲಿ ಸಾರಿಗೆ ಮಂತ್ರಿಯಾಗಿ ಮತ್ತು ೨೦೦೦-೨೦೦೧ ಆಂಧ್ರ ಪ್ರದೇಶ ವಿಧಾನಸಭೆಯ ಉಪಸಭಾಪತಿ ಕಾರ್ಯನಿರ್ವಹಿಸಿದರು.[]

ಭಾರತ್ ರಾಷ್ಟ್ರ ಸಮಿತಿ

೨೭ ಏಪ್ರಿಲ್ ೨೦೦೧ ರಂದು, ರಾವ್ ಉಪ ಸ್ಪೀಕರ್, ಟಿಡಿಪಿ ಶಾಸಕ ಮತ್ತು ಟಿಡಿಪಿ ಪಕ್ಷಕ್ಕೆ ರಾಜೀನಾಮೆ ನೀಡಿದರು. ಅವರು ತೆಲಂಗಾಣ ಪ್ರತ್ಯೇಕ ರಾಜ್ಯ ಸಾಧಿಸಲು ಹೈದರಾಬಾದ್ ನಲ್ಲಿ ಭಾರತ್ ರಾಷ್ಟ್ರ ಸಮಿತಿ (BRS) ಪಕ್ಷವನ್ನು ಸ್ಥಾಪಿಸಿದರು.[]

ವೈಯಕ್ತಿಕ ಜೀವನ

ಕೆ ಚಂದ್ರಶೇಖರ್ ರಾವ್ ,ಶೋಭಾರನ್ನು ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ.ಅವರ ಮಗ, ಕೆ.ಟಿ.ರಾಮರಾವ್,ಮಗಳು ಕವಿತಾ .[]

ರಾಜಕೀಯ

ಸೋಲು
  • ೧೯೮೩ ಸಿದ್ದಿಪೇಟ್
ಗೆಲುವು
  • ೧೯೮೫ ಶಾಸಕ, ಸಿದ್ದಿಪೇಟ್
  • ೧೯೮೯ ಶಾಸಕ, ಸಿದ್ದಿಪೇಟ್
  • ೧೯೯೪ ಶಾಸಕ, ಸಿದ್ದಿಪೇಟ್
  • ೧೯೯೯ ಶಾಸಕ, ಸಿದ್ದಿಪೇಟ್
  • ೨೦೦೧ (ಮರುಚುನಾವಣೆ) ಶಾಸಕ ಸಿದ್ದಿಪೇಟ್
  • ೨೦೦೪ ಶಾಸಕ, ಸಿದ್ದಿಪೇಟ್
  • ೨೦೦೪ ಸಂಸದ, ಕರೀಂನಗರ್‌
  • ೨೦೦೬ (ಮರುಚುನಾವಣೆ) ಸಂಸದ, ಕರೀಂನಗರ್‌
  • ೨೦೦೮ (ಮರುಚುನಾವಣೆ) ಸಂಸದ, ಕರೀಂನಗರ್‌
  • ೨೦೦೯ ಸಂಸದ, ಮೆಹಬೂಬ್ ನಗರ
  • ೨೦೧೪ ಶಾಸಕ, ಗಜ್ವಾಲ್
  • ೨೦೧೪ ಸಂಸದ, (ಮೇದಕ್‌) []

ಪ್ರಶಸ್ತಿಗಳು

  • ಸಿಎನ್ಎನ್-ಐಬಿಎನ್ ಭಾರತದ ವರ್ಷದ ವಕ್ತಿ - ೨೦೧೪[]

ಉಲ್ಲೇಖಗಳು