ಗಣಗಲೆ ಹೂ

ಗಣಗಲೆ ಹೂ
Nerium oleander in flower
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
Angiosperms
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
Asterids
ಗಣ:
Gentianales
ಕುಟುಂಬ:
Apocynaceae
ಉಪಕುಟುಂಬ:
Apocynoideae
ಪಂಗಡ:
Wrightieae
ಕುಲ:
Nerium

L.
ಪ್ರಜಾತಿ:
N. oleander
Binomial name
Nerium oleander
L.
Synonyms[೧][೨]
  • Oleander Medik.
  • Nerion Tourn. ex St.-Lag.
  • Nerion oleandrum St.-Lag.
  • Nerium carneum Dum.Cours.
  • Nerium flavescens Spin
  • Nerium floridum Salisb.
  • Nerium grandiflorum Desf.
  • Nerium indicum Mill.
  • Nerium japonicum Gentil
  • Nerium kotschyi Boiss.
  • Nerium latifolium Mill.
  • Nerium lauriforme Lam.
  • Nerium luteum Nois. ex Steud.
  • Nerium madonii M.Vincent
  • Nerium mascatense A.DC.
  • Nerium odoratissimum Wender.
  • Nerium odoratum Lam.
  • Nerium odorum Aiton
  • Nerium splendens Paxton
  • Nerium thyrsiflorum Paxton
  • Nerium verecundum Salisb.
  • Oleander indica (Mill.) Medik.
  • Oleander vulgaris Medik.


ಗಣಗಿಲೆ ಅಥವಾ ಕಣಗಿಲೆ ಹೂ ಜನ ಸಾಮಾನ್ಯರ ಹೂ. ಇದು ಗ್ರಾಮೀಣ ಪ್ರದೇಶದಲ್ಲಿ, ತೊರೆ, ಹಳ್ಳಗಳ ಮಗ್ಗುಲಲ್ಲಿ ಒತ್ತೊತ್ತಾಗಿ ಅಥವಾ ಹಿಂಡು ಹಿಂಡಾಗಿ ಬೆಳೆಯುತ್ತದೆ. ಶುಭಕಾರ್ಯಗಳಿಂದ ಹಿಡಿದು ಸಾವಿನ ಮನೆಯವರೆಗೂ ಇದರ ಬಳಕೆಯಾಗುತ್ತದೆ.

ಇತರ ಭಾಷೆಗಳಲ್ಲಿನ ಹೆಸರು

ಸಂಸ್ಕೃತ : ಕರವೀರ, ಶ್ವೇತಪುಪ್ಪ ಅಶ್ವಮಾರಕ, ರಕ್ತಪುಪ್ಪು

ಇಂಗ್ಲೀಷ್‍ : ಸ್ವೀಟ್ ಸೆಂಟೆಡ್ ಓಲಿಯಾಂಡರ್.

ಹಿಂದಿ : ಕನೇರ್, ಕನೇಲ್

ತಮಿಳು : ಅರಳಿ ಕನವೀರಂ

ತೆಲುಗು : ಕಸ್ತೂರಿ ಪಟ್ಟಿ, ಗನ್ನೇರು ಕರವೀರಮು

ವೈಜ್ಞಾನಿಕ ಹೆಸರು

ಕಣಗಿಲೆ ಅಪೊಸೈನೇಸೀ ಕುಟುಂಬದ ನೀರಿಯಮ್ ಓಲಿಯಂಡರ್ ಎಂಬ ವೈಜ್ಞಾನಿಕ ಹೆಸರಿನ ಸುಂದರವಾದ ಹೂ ಬಿಡುವ ಬಹುವಾರ್ಷಿಕ ಪೊದೆಸಸ್ಯ.ಕರವೀರ, ಕಣಿಗಲು ಪರ್ಯಾಯ ನಾಮಗಳು.

ಪ್ರಭೇದಗಳು

ನೀರಿಯಮ್ ಜಾತಿಯಲ್ಲಿ ಮೂರು ಮುಖ್ಯ ಪ್ರಭೇದಗಳಿವೆ. ಇವು ಮೆಡಿಟರೇನಿಯನ್ ಪ್ರದೇಶದಿಂದ ಜಪಾನ್ ದೇಶದವರಿಗೂ ಹರಡಿವೆ.

ಲಕ್ಷಣಗಳು

A seed capsule spreading seeds
Oleander shrub, Morocco

ದುಂಡಗಿರುವ ಕಾಂಡದ ತುದಿಯಲ್ಲಿ ಚಿಕ್ಕ ತೊಟ್ಟಿರುವ ವೃತ್ತಜೋಡಣೆಯ ಎಲೆಗಳು ಇರುತ್ತವೆ. ತುದಿಯಲ್ಲಿ ಹೊಸ ಹೊಸ ಎಲೆಗಳು ಹೊರಬಂದಂತೆಲ್ಲ ಕೆಳಭಾಗದಲ್ಲಿರುವ ಹಳೆಯ ಎಲೆಗಳು ಉದುರಿ ಹೋಗುತ್ತವೆ. ಎಲೆಯ ತೊಟ್ಟುಗಳು ಕಾಂಡಕ್ಕೆ ಬಿಗಿಯಾಗಿ ಅಂಟಿಕೊಂಡಿದ್ದು, ಅನಂತರ, ಉದುರುವುದರಿಂದ ಕಾಂಡದ ಮೇಲೆ ಎಲೆಗಳು ಅಂಟಿಕೊಂಡಿದ್ದ ಕಲೆಗಳು ಉಳಿಯುತ್ತವೆ. ಭರ್ಜಿಯಾಕಾರ, ಚರ್ಮದಂತೆ, ಒರಟು, ಅತಿ ಹಸಿರಾದ ಮೇಲುಭಾಗ, ನಸುಹಸಿರು, ಬಣ್ಣದ ತಳಭಾಗ, ನಯ ಅಂಚು, ಮೊನಚು ತುದಿ ಇವು ಎಲೆಗಳ ಲಕ್ಷಣ. ಎಲೆಯ ನಡುದಿಂಡು ಮತ್ತು ನಾಳಗಳು ತಳಭಾಗದಲ್ಲಿ ಪ್ರಮುಖವಾಗಿ ಉಬ್ಬಿ ಕಾಣುತ್ತವೆ. ತುದಿಯ ಗೊಂಚಲಾಗಿ ಬಿಡುವ ಮಧ್ಯಾರಂಭಿ (ಸೈಮೋಸ್) ಹೂಗೊಂಚಲು ಆಕರ್ಷಕವಾಗಿ ಕಾಣುತ್ತದೆ. ಪುಷ್ಪ ಪತ್ರ ಸಾಮಾನ್ಯವಾಗಿ 5. ಇವುಗಳ ಬುಡದ ಒಳಭಾಗದಲ್ಲಿ ಗ್ರಂಥಿಗಳಿವೆ. ಹೂದಳ ಸಂಯುಕ್ತ ಮಾದರಿಯದು (ಗ್ಯಾಮೊಪೆಟಲಸ್). ಅದರಲ್ಲಿ 5 ಭಾಗಗಳಿವೆ. ಅದರ ಆಕಾರ ಆಲಿಕೆಯಂತೆ. ಹೂಗಂಟಲ ಮೇಲೆ ಅನುಬಂಧಿಕೆ (ಅಪೆಂಡೇಜ್) ಇರುತ್ತದೆ. ಚಿಕ್ಕ ತೊಟ್ಟಿರುವ 5 ಕೇಸರಗಳು ಹೂಗಂಟಲಿಗೆ ಅಂಟಿರುತ್ತವೆ. ಪರಾಗ ಕೋಶಗಳಲ್ಲಿ ಪ್ರಭೇದಕ್ಕೆ ಅನುಸಾರವಾಗಿ ವಿವಿಧ ಬಣ್ಣದ ಅನುಬಂಧಿಕೆಗಳಿವೆ. ಅಂಡಾಶಯ ಉಚ್ಚಸ್ಥಾನದ್ದು. ಎರಡು ಕಾರ್ಪೆಲುಗಳಿವೆ. ಫಲ ಫಾಲಿಕಲ್ಗಳ ಒಂದು ಜೋಡಿ. ಕಣಗಿಲೆಯ ಇನ್ನೊಂದು ಪ್ರಭೇದವಾದ ನೀ. ಓಡರೇಟಮಿನಲ್ಲಿ ಅನೇಕ ಆಕರ್ಷಕ ತಳಿಗಳಿವೆ. ಒಂದು ಸುತ್ತಿನ ಬಿಳುಪು ಬಣ್ಣದ ಹೂಬಿಡುವ ತಳಿ (ಆಲ್ಬೊಪ್ಲಿನಮ್). ಎರಡು ಸುತ್ತಿನ ಅತೀ ಕಡುಗೆಂಪು ಬಣ್ಣದ (ಬ್ಯಾಕ್ಪ್ರಿನ್ಸ್‌), ಎರಡು ಸುತ್ತಿನ ನಸುಗೆಂಪು ಬಣ್ಣದ ಹೂಬಿಡುವ ತಳಿ (ಪ್ಲೊರೊಪ್ಲಿನೊ), ಒಂದು ಸುತ್ತಿನ ಗುಲಾಬಿ ಬಣ್ಣದ ಹೂ ಬಿಡುವ ತಳಿ (ರೋಸಿಯ)-ಇವು ತೋಟಗಾರಿಕೆಯಲ್ಲಿ ಹೆಸರಾಗಿರುವ ತಳಿಗಳು.

ಬೇಸಾಯ

ಕಣಗಿಲೆ ಸಸ್ಯವನ್ನು ಕಾಂಡದ ತುಂಡುಗಳಿಂದ ಸುಲಭವಾಗಿ ವೃದ್ಧಿಮಾಡಬಹುದು. ಕಾಂಡದ ತುಂಡುಗಳನ್ನು ನಾಟಿಮಾಡಲು ಮಳೆಗಾಲ ಯೋಗ್ಯವಾದದ್ದು. ತುಂಡುಗಳನ್ನು ನಾಟಿಮಾಡಿದಮೇಲೆ ಅವು ಚಿಗುರಿ ಮೂರು ಅಡಿ ಎತ್ತರ ಬೆಳೆಯುವವರೆಗೆ ಕ್ರಮವಾಗಿ ನೀರು ಹಾಕಬೇಕು. ಸುತ್ತಲೂ ಬೇಲಿಹಾಕಿದರೆ ಉತ್ತಮ.

ಹಿನ್ನೆಲೆ

ಇದು ಜನ ಸಾಮಾನ್ಯರ ಹೂ. ಗುಲಾಬಿ ಹೂವನ್ನು ಮುಡಿಯಲು ಶಕ್ತವಿಲ್ಲದವರು ಗಣಗಿಲೆ ಹೂವನ್ನೇ ಮುಡಿಯುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ, ತೊರೆ, ಹಳ್ಳಗಳ ಮಗ್ಗುಲಲ್ಲಿ ಒತ್ತೊತ್ತಾಗಿ ಅಥವಾ ಹಿಂಡು ಹಿಂಡಾಗಿ ಬೆಳೆಯುತ್ತದೆ. ಶುಭಕಾರ್ಯಗಳಿಂದ ಸಾವಿನ ಮನೆಯವರೆಗೂ ಇದರ ಬಳಕೆಯಾಗುತ್ತದೆ. ಗಣಗಿಲೆ ಹೂವಿನ ಬಲಿತ ಎರಡು ಕಡ್ಡಿಗಳನ್ನು ತಂದು ಒಂದರ ಮೇಲೆ ಒಂದರಂತೆ ಕಮಾನು ಮಾದರಿಯಲ್ಲಿ ಅವನ್ನು ನೆಟ್ಟಾಗ ೧೫ ದಿನದೊಳಗೆ ಅವು ಕುಡಿಯೊಡೆಯಲು ಆರಂಭಿಸುತ್ತವೆ. ಮೂರು ತಿಂಗಳಿಗೆ ಗಿಡ ಹೂ ಬಿಡಲು ಆರಂಭಿಸುತ್ತದೆ. ಮನೆ ಮುಂದೆ ಈ ಹೂವನ್ನು ಬೆಳೆಸಿದರೆ ಒಳ್ಳೆಯದಾಗುತ್ತದೆ ಎನ್ನುವರು. ಸಾಮಾನ್ಯವಾಗಿ ಗಣಗಿಲೆ ಹೂವನ್ನು ದೇವರ ಪೂಜೆಗೆ ಬಳಸುತ್ತಾರೆ. ಇದನ್ನು ಕಣಗಿಲೆ ಹೂವೆಂದು ಕರೆಯುತ್ತಾರೆ.

ವಿಧಗಳು

ಗಣಗಿಲೆ ಹೂವಿನಲ್ಲಿ ಸುಮಾರು ವಿಧಗಳಿವೆ. ಅವೆಂದರೆ-

  1. ದಾರಗಣಗಿಲೆ ,
  2. ಸುತ್ತುಗಣಗಿಲೆ ,
  3. ಅಚ್ಚಗಣಗಿಲೆ ,
  4. ದೀಪಗಣಗಿಲೆ /ದೇವಗಣಗಿಲೆ ,
  5. ಕೆಂಪುಗಣಗಿಲೆ,
  6. ಧೋತ್ರಗಂಬಿ - ಇತ್ಯಾದಿ.
  • ಐದು ಎಲೆ(ದಳ)ಗಳುಳ್ಳ ದಾರಗಣಗಿಲೆ ಹೂವನ್ನು ದೇವರ ಪೂಜೆಗೆ ಬಳಸುವರು.
  • ಸುತ್ತುಗಣಗಿಲೆ ಹೂ ದುಂಡಗೆ ಚೆಂಡು ಹೂವಿನಂತೆ ಇರುತ್ತದೆ.
  • ಅಚ್ಚಗಣಗಿಲೆ ಹೂ ಪೂರ್ಣವಾಗಿ ಬಿಳಿ ಬಣ್ಣದ್ದಾಗಿರುತ್ತದೆ.
  • ದೀಪಗಣಗಿಲೆ ಹೂ ಹಳದಿ ಮಿಶ್ರಿತ ಬಿಳಿ ಹೂ. ಇದಕ್ಕೆ ದೇವಗಣಗಿಲೆ ಹೂ ಎಂಬ ಹೆಸರಿದೆ.
  • ಕೆಂಪುಗಣಗಿಲೆ ಹೂ ಪೂರ್ಣವಾಗಿ ಗುಲಾಬಿ ಕೆಂಪಿನಿಂದ ಕೂಡಿರುತ್ತದೆ.
  • ಧೋತ್ರಗಂಬಿ ಗಣಗಿಲೆ ಹೂವಿನ ಅಂಚು ಕೆಂಪಾಗಿದ್ದು ಒಡಲು ಬಿಳುಪಾಗಿರುತ್ತದೆ.

ಉಪಯೋಗಗಳು

Oleandrin, one of the toxins present in oleander

ಇದನ್ನು ಉದ್ಯಾನವನ, ದೇವಸ್ಥಾನ ಮತ್ತು ಮನೆಗಳ ಪಕ್ಕದಲ್ಲಿ ಅಲಂಕಾರಸಸ್ಯವಾಗಿ ಬೆಳೆಸುತ್ತಾರೆ. ಕಣಗಿಲೆ ಹೂವನ್ನು ದೇವರ ಪೂಜೆಗೂ ಹಾರ ಮತ್ತು ಕಳಸದ ಅಲಂಕಾರಕ್ಕೂ ಉಪಯೋಗಿಸುತ್ತಾರೆ. ಅಲ್ಲದೆ ಈ ಸಸ್ಯದ ವಿವಿಧ ಭಾಗಗಳು ಅನೇಕ ಆಯುರ್ವೇದ ಔಷಧಗಳಲ್ಲಿ ಉಪಯೋಗದಲ್ಲಿವೆ. ಈ ಗಿಡದ ಬೇರು, ತೊಗಟೆ, ಬೀಜ ಮತ್ತು ಇತರ ಭಾಗಗಳೂ ವಿಷಕಾರಿಯಾದವು. ಅದರ ಹಾಲಿನಂಥ ದ್ರವದಲ್ಲಿರುವ ಗ್ಲೈಕೊಸೈಡ್ ಎಂಬ ವಸ್ತು ಹೃದಯ ಮತ್ತು ಬೆನ್ನುನರಗಳ ಮೇಲೆ ನಿಶ್ಚೇತನಗೊಳಿಸುವ ಪರಿಣಾಮವನ್ನು ಬೀರುವುದು. ಈ ಸಸ್ಯದ ಸುಟ್ಟಬೂದಿಯಲ್ಲಿ ಪೊಟ್ಯಾಸಿಯಂ ಲವಣಗಳು ಅಧಿಕವಾಗಿರುತ್ತವೆ. ಬೇರಿನ ತೊಗಟೆಯಿಂದ ಇಳಿಸುವ ಒಂದು ಜಾತಿಯ ತೈಲವನ್ನು ಚರ್ಮರೋಗಕ್ಕೆ ಔಷಧಿಯಾಗಿ ಬಳಸುವರು.

ಔಷಧೀಯ ಉಪಯುಕ್ತತೆ

  1. ಕಣಗಿಲೆಯ ತೊಗಟೆಯು ಕಷಾಯಕ್ಕೆ, ಸಮ ಪ್ರಮಾಣದ ಸಾಸುವೆ ಎಣ್ಣೆ ತಯಾರಿಸಿ ಕುಷ್ಟರೋಗಿಗಳ ಗಾಯಗಳಿಗೆ ಲೇಪಿಸಿದಾಗ ಗಾಯವು ವಾಸಿಯಾಗುತ್ತವೆ.
  2. ಕಜ್ಜಿಯಿಂದ ಬಳಲುವವರು ಈ ತೈಲವನ್ನು ಬಳಸುವುದು ಯೋಗ್ಯಕರ.
  3. ಈ ಗಿಡದ ಬೇರನ್ನು ಮೂಲವ್ಯಾದಿಯಿಂದ ಬಳಲುವವರು ಬಳಸಿದಾಗ ನೋವು ಕಡಿಮೆಯಾಗುತ್ತದೆ.
  4. ಇದರ ಎಲೆಯನ್ನು ಅರೆದು ಬೆರೆಸುವುದರಿಂದ ಹುಳುಕಡ್ಡಿ ಸಮಸ್ಯೆಯು ನಿವಾರಣೆಯಾಗುತ್ತವೆ.
  5. ಉಗುರು ಸುತ್ತು ಉಂಟಾದಾಗ ಕಣಗಿಲೆ ಎಲೆಯ ಎಣ್ಣೆ ಮತ್ತು ವೀಳ್ಯೆದೆಲೆ, ಸುಣ್ಣ ಇವುಗಳನ್ನು ಅರೆದು ಕಟ್ಟುವುದರಿಂದ ಉಗುರು ಸುತ್ತು ಗುಣಮುಖವಾಗುತ್ತವೆ.
  6. ಬೇರಿನ ಪುಡಿಯನ್ನು ಹಣೆಗೆ ಹಚ್ಚಿ ಉಜ್ಜುವುದರಿಂದ ತಲೆನೋವು ಶಮನವಾಗುತ್ತವೆ.
  7. ಜ್ವರದ ತಾಪ ಅತಿಯಾದಾಗ ಕಣಗಿಲೆಯ ಬೇರನ್ನು ತುಂಡು ಮಾಡಿ ದಾರದಲ್ಲಿ ಕಟ್ಟಿ ಕುತ್ತಿಗೆಗೆ ಹಾಕಿದರೆ ಜ್ವರದ ತಾಪ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ.[೩]</ref>[೪]

ಶುಭ ಸಮಾರಂಭಗಳಲ್ಲಿ

ಮದುವೆ ಶಾಸ್ತ್ರಗಳಲ್ಲಿ ದಾರಗಣಗಿಲೆ ಹೂ ಹೆಚ್ಚಾಗಿ ಬಳಸಲ್ಪಡುತ್ತದೆ. ಮದುವೆ ಮನೆಯಲ್ಲಿ ಗಂಡು-ಹೆಣ್ಣಿಗೆ ಸಮನ್ ಮಾಲೆ ಕಟ್ಟುವುದು ಅಚ್ಚಗಣಗಿಲೆ ಹೂವಿಂದ. ಹಾರ-ತುರಾಯಿಗೆ ಕೆಂಪುಗಣಗಿಲೆ ಹೂವನ್ನು ಬಳಸುತ್ತಾರೆ. ದೀಪಗಣಗಿಲೆ ಹೂ ಅಥವ ದೇವಗಣಗಿಲೆ ಹೂವನ್ನು ವಿಷ್ಣುವಿಗೆ, ಮಾರಮ್ಮ ಮೊದಲಾದ ದೇವರಿಗೆ ಮುಡಿಸುತ್ತಾರೆ.

ಹಬ್ಬಗಳಲ್ಲಿ

ಗ್ರಾಮದೇವತೆಯ ಹಬ್ಬಗಳಲ್ಲಿ ಮಡೆ ಹುಯ್ಯುವ ಸಂಪ್ರದಾಯ ಹಲವೆಡೆ ಉಂಟು. ಆಗ ದೇವಗಣಗಿಲೆ ಹೂಗಳನ್ನು ಚಿಕ್ಕ ಚಿಕ್ಕ ಹಂಚಿಕಡ್ಡಿಯಲ್ಲಿ ಪೋಣಿಸಿ ಮಡೆ ತಟ್ಟೆಯಲ್ಲಿರುವ ತಂಬಿಟ್ಟಿನ ಉಂಡೆಗೆ ನೆಟ್ಟಗೆ ಸಿಕ್ಕಿಸುತ್ತಾರೆ. ಹೊಲದಲ್ಲಿ ನಡೆಸುವ ಪೂಜೆ ಪುನಸ್ಕಾರಗಳಿಗೂ ದೇವಗಣಗಿಲೆ ಹೂವನ್ನು ಬಳಸುವುದು ವಾಡಿಕೆ.

ಗೀತೆಗಳಲ್ಲಿ

ಸೋಬಾನೆ ಪದಗಳಲ್ಲಿ ಗಣಗಿಲೆ ಹೂವಿನ ಪ್ರಸ್ತಾಪವಿದೆ.

  • ೧. ಮದಲು ಸಾಸ್ತುರಕೆ ಇನ್ನೇನು ಬರಬೇಕ

ಏರಿ ಹಿಂದಲ ದಾರಗಣಗಲೆ/ಹೂವ
ಮದಲ ಸಾಸ್ತುರಕೆ ಬರಬೇಕು

  • ೨.ಕಟ್ಟಿ ಹಿಂದಲ ಬಟ್ಟಗಲ ಹೂವೆ

ಶೆಟ್ಟಿ ಜಂಗಮನ ನೆಗಸೊ ಗಣಗಲ/ಹೂವೆ
ಸಂಜೆ ಸಾಸ್ತುರಕೆ ಬರಹೇಳಿ

ನಂಬಿಕೆಗಳಲ್ಲಿ

  1. ಗಣಗಿಲೆ ಗಿಡದ ಹಿಂಡಿನಲ್ಲಿ ದೆವ್ವಗಳು ವಾಸಿಸುತ್ತವೆ.
  2. ಗಣಗಿಲೆ ಹೂವನ್ನು ರಾತ್ರಿ ಹೊತ್ತು ಕೀಳಬಾರದು.
  3. ಗಣಗಿಲೆ ಹೂವನ್ನು ಕನಸಿನಲ್ಲಿ ಕಂಡರೆ ಅಶುಭ.
  4. ಆತ್ಮಹತ್ಯೆಗಾಗಿ ಗಣಗಿಲೆ ಹೂವಿನ ರಸವನ್ನು ಬಳಸುವರು.
  5. ಗಣಗಿಲೆ ಹೂವಿನ ಬುಡದೊಳಗೆ ಮೂತ್ರ ಮಾಡಬಾರದು .

ಛಾಯಾಂಕಣ

ಪರಾಮರ್ಶನ ಕೃತಿ

  • ಜಾನಪದ ವಿಷಯ ವಿಶ್ವಕೋಶ

ಉಲ್ಲೇಖಗಳು

[೫] [೬]

  1. "World Checklist of Selected Plant Families, entry for Nerium oleander". Retrieved May 18, 2014.
  2. "World Checklist of Selected Plant Families, entry for Nerium". Retrieved May 18, 2014.
  3. ವನಸಿರಿ, ಅಜಂಪುರ್ ಕೃ‍‍‍‍‍‍‌‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಷ್ಣಸ್ವಾಮಿ, ೨೦೧೪, ಮುದ್ರಣ ನವ ಕರ್ನಾಟಕ
  4. ಫಲಶ್ರುತಿ, ಬಿ.ಜಿ.ಎಲ್. ಸ್ವಾಮಿ
  5. "ಆರ್ಕೈವ್ ನಕಲು". Archived from the original on 2016-03-04. Retrieved 2015-05-29.
  6. http://46.5c.344a.static.theplanet.com/Content/Oct262010/district20101026210291.asp[ಶಾಶ್ವತವಾಗಿ ಮಡಿದ ಕೊಂಡಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: