ಜಯದ್ರಥ

ಮಹಾಭಾರತ ಮಹಾಕಾವ್ಯದಲ್ಲಿ, ಜಯದ್ರಥನು ಸಿಂಧೂ ರಾಜ್ಯದ ರಾಜನಾಗಿದ್ದನು (ಹಾಗಾಗಿ ಅವನನ್ನು ಸೈಂಧವನೆಂದೂ ಕರೆಯಲಾಗುತ್ತದೆ). ಅವನು ೧೦೦ ಕೌರವ ಸಹೋದರರ ಏಕೈಕ ಸಹೋದರಿ ದುಶ್ಯಲೆಯನ್ನು ಮದುವೆಯಾಗಿದ್ದನು. ಅವನು ರಾಜ ವೃಧಕ್ಷತ್ರನ ಮಗನಾಗಿದ್ದನು.