ಜಾನ್ ನೇಪಿಯರ್

ಜಾನ್ ನೇಪಿಯರ್
John Napier (೧೫೫೦–೧೬೧೭)
ಜನನ೧೫೫೦
ಮೆರ್ಚಿಸ್ಟನ್ ಟವರ್, ಎಡಿನ್ಬರ್ಗ್,
ಸ್ಕಾಟ್ಲ್ಯಾಂಡ್
ಮರಣ4 April 1617(1617-04-04) (aged 66–67)
ಎಡಿನ್ಬರ್ಗ್, ಸ್ಕಾಟ್ಲ್ಯಾಂಡ್
ರಾಷ್ಟ್ರೀಯತೆScottish
ಕಾರ್ಯಕ್ಷೇತ್ರಗಣಿತಶಾಸ್ತ್ರಜ್ಞ
ಅಭ್ಯಸಿಸಿದ ವಿದ್ಯಾಪೀಠಆಂಡ್ರೂಸ್ ವಿಶ್ವವಿದ್ಯಾನಿಲಯ
ಪ್ರಸಿದ್ಧಿಗೆ ಕಾರಣLogarithms
Napier's bones
Decimal notation
ಪ್ರಭಾವಿತರುHenry Briggs

ಜಾನ್ ನೇಪಿಯರ್(೧೫೫೦-೧೬೧೭) ಅವರು ಲಾಗರಿದಮ್ಸ್ ಕಂಡು ಹಿಡಿದ ವಿಜ್ಞಾನಿಯಾಗಿದ್ದಾರೆ. ಇವರು ಸ್ಕಾಟಿಷ್ನ ಭೂಮಾಲೀಕರಾಗಿದ್ದರು.ಇವರನ್ನು ಗಣಿತಶಾಸ್ತ್ರಜ್ಞ,ಭೌತಶಾಸ್ತ್ರಜ್ಞ ಮತ್ತು ಖಗೋಳಶಾಸ್ತ್ರಜ್ಞನೆಂದು ಕರೆಯಲಾಗುತ್ತದೆ. ೧೫೫೦ರಲ್ಲಿ ಸ್ಕಾಟ್ಲ್ಯಾಂಡ್ಗೆ ಸೇರಿದ ಎಡಿನ್ಬರ್ಗ್ ಸಮೀಪದ ಮೆರ್ಚಿಸ್ಟನ್ ಟವರ್ ಎಂಬಲ್ಲಿ ಇವರು ಜನಿಸಿದರು. ಇವರು ಮೆರ್ಚಿಸ್ಟನ್ನ ೮ನೇ ಲೈರ್ಡ್ ಆಗಿದ್ದರು.[]

ವೈಯಕ್ತಿಕ ಜೀವನ

ಜಾನ್ ನೇಪಿಯರ್ ಅವರ ತಂದೆ ಸರ್ ಆರ್ಚಿಬಾಲ್ಡ್ ನೇಪಿಯರ್ ಹಾಗೂ ತಾಯಿ ಜಾನೆಟ್ ಬೋಥ್ವೆಲ್.[]

ವಿದ್ಯಾಭ್ಯಾಸ

ಜಾನ್ ನೇಪಿಯರ್ ತನ್ನ ೧೩ನೇ ವಯಸ್ಸಿನಲ್ಲಿ ಸೆಂಟ್ ಆಂಡ್ರೂಸ್ ವಿಶ್ವವಿದ್ಯಾನಿಲಯದಲ್ಲಿ ತನ್ನ ಶಿಕ್ಷಣವನ್ನು ಮುಂದುವರೆಸಿದರು. ಆದರೆ ಅವರು ತನ್ನ ವ್ಯಾಸಾಂಗವನ್ನು ಪೂರ್ಣಗೊಳಿಸಲಿಲ್ಲ. ೧೫೭೧ರ ವೇಳೆಗೆ ವಿದೇಶಿ ಪ್ರವಾಸಾನುಭವಗಳನ್ನು ಪಡೆದು ನಂತರ ಹಿಂದಿರುಗಿ ಗಾರ್ಟನೆಸ್ನಲ್ಲಿ ನೆಲೆಸಿದರು.[]

ವೃತ್ತಿ ಜೀವನ

೧೫೯೩ರಲ್ಲಿ ರೋಮ್ ಚರ್ಚಿನ ಬಗ್ಗೆ ಒಂದು ಪುಸ್ತಕವನ್ನು ಬರೆದರು. ಅದರಲ್ಲಿ ಚರ್ಚಿನ ಪೋಪ್ಗಳು ವಿಶ್ವನಾಶಕ್ಕೆ ಕಾರಣರಾಗುವರೆಂಬ ವಿಚಾರವನ್ನು ಮುಖ್ಯವಾಗಿ ಪ್ರಸ್ತಾಪಿಸುತ್ತಾರೆ. ಈ ಕೃತಿಯು ಅವರು ಬದುಕಿರುವಾಗಲೇ ಹತ್ತಾರು ಆವೃತ್ತಿಗಳನ್ನು ಕಂಡಿದ್ದವು. ಇವರು ಯುದ್ಧರಹಸ್ಯೋಪಕರಣಗಳ ಸಂಶೋಧನೆಯನ್ನು ಮಾಡಿದ್ದಾರೆ. ಎರಡು ಬಗೆಯ ಉರಿಸುವ ಕನ್ನಡಿಗಳನ್ನು ಕಂಡುಹಿಡಿದಿದ್ದಾರೆ. ಸಣ್ಣ ಸಣ್ಣ ರಂಧ್ರಗಳ ಮೂಲಕ ಗುಂಡು ಹಾರಿಸಲು ಅನುಕೂಲವಾದ ಲೋಹವಾಹನವನ್ನು ಸ್ವತಃ ನಿರ್ಮಿಸಿದ್ದಾರೆ. ಜೊತೆಗೆ ವಿರಾಮ ವೇಳೆಯಲ್ಲಿ ಗಣಿತ ಸೂತ್ರಗಳ ಕಡೆ ಗಮನ ಹರಿಸುತ್ತಿದ್ದರು. ಸಂಕಲನ,ವ್ಯವಕಲನ ಲೆಕ್ಕಗಳೇ ಅಲ್ಲದೆ ವರ್ಗಮೂಲ(Square root)ಗಳ ಸಮೀಕರಣಕ್ಕೆ ಅನುಕೂಲವಾಗುವ ಒಂದು ಉಪಕರಣವನ್ನೇ ಆವಿಷ್ಕರಿಸಿದರು. ಇದನ್ನು "ನೇಪಿಯರ್ ರಾಡ್" ಎಂದು ಇಂದಿಗೂ ಕರೆಯುತ್ತಿದ್ದಾರೆ. ಜಾನ್ ನೇಪಿಯರ್ ೧೫೯೩ರಲ್ಲಿ ಮೂಲಗಳು,ಗುಣಲಬ್ಧ ಹಾಗೂ ಭಾಗಲಬ್ಧಗಳನ್ನು ಶೀಘ್ರವಾಗಿ ನಿರ್ಣಯಿಸಲು "ಲಾಗರಿದಮ್ಸ್" ಎಂಬುದನ್ನು ಕಂಡುಹಿಡಿಯುತ್ತಾರೆ. ಇದರ ಆಧಾರದ ಮೇಲೆಯೇ ಸಂಬಂಧಪಟ್ಟ ಕೋಷ್ಟಕ(Tables)ಗಳನ್ನು ಕಂಡುಹಿಡಿದರು.[]

ಪ್ರಕಟಣೆ

  • ಎ ಪ್ಲೇನ್ ಡಿಸ್ಕವರಿ ಆಫ್ ದಿ ಹೋಲ್ ರಿಲಿವೇಷನ್ ಆಫ್ ಸೇಂಟ್ ಜಾನ್
  • ಲಾಗರಿದಮ್ ಕ್ಯಾನನ್ ಕನ್ಸ್ಟ್ರಕ್ಷನ್
  • ಡಿಸ್ಕ್ರಿಪ್ಷನ್ ಆಫ್ ಮಾರ್ವೆಲನ್ಸ್ ಕ್ಯಾನನ್ ಆಫ್ ಲಾಗರಿದಮ್ಸ್[]

ನಿಧನ

ಜಾನ್ ನೇಪಿಯರ್ ಎಪ್ರಿಲ್ ೪, ೧೬೧೭ರಂದು ಸ್ಕಾಟ್ಲ್ಯಾಂಡ್ನ ಎಡಿನ್ಬರ್ಗ್ನಲ್ಲಿ ನಿಧನರಾದರು.[]

ಉಲ್ಲೇಖಗಳು