ಜೆನೆರಿಕ್ ಔಷಧ

ಜೆನೆರಿಕ್ ಔಷಧ,( Generic drug ) ರೋಗ ಲಕ್ಷಣ ನಿವಾರಣೆ, ಅದರ ಚಿಕಿತ್ಸೆ, ಉಪಚಾರ ಮತ್ತು ನಿರೋಧನೆಗಾಗಿ ಉಪಯೋಗಿಸಲ್ಪಡುವ ರಾಸಾಯನಿಕ ವಸ್ತು ಅಥವಾ ಔಷಧ.ಇದು ಬ್ರ್ಯಾಂಡ್ ಔಷಧಗಳಿಗೆ ಸಮನಾಗಿರುತ್ತದೆ ಮತ್ತು ಔಷಧ ಪ್ರಮಾಣ, ಶಕ್ತಿ, ಆಡಳಿತ, ಗುಣಮಟ್ಟ ಪ್ರಮಾಣವು ಬ್ರ್ಯಾಂಡ್ ಹೆಸರಿನ ಉತ್ಪನ್ನಕ್ಕೆ ಸಮನಾಗಿರುತ್ತದೆ.[]

ಜೆನೆರಿಕ್ ಔಷಧ ಬಗ್ಗೆ

ಜೆನೆರಿಕ್ ಔಷಧ, ಒಂದು ನಿರ್ದಿಷ್ಟ ಕಂಪನಿಗೆ ಸಂಬಂಧಿಸಿರುವದಿಲ್ಲ ಜೆನೆರಿಕ್ ಔಷಧಗಳು ತಯಾರಾಗುವ ದೇಶಗಳಲ್ಲಿ ಸಾಮಾನ್ಯವಾಗಿ ಸರಕಾರಿ ನಿಯಂತ್ರಣಕ್ಕೆ ಒಳಪಟ್ಟಿರುತ್ತವೆ. ಅವನ್ನು ತಯಾರಕ ಹೆಸರು ಮತ್ತು ಒಂದು ಸ್ವಾಮ್ಯವಲ್ಲದ ಹೆಸರಿನಿಂದ ಗುರುತಿಸಲಾಗುತ್ತದೆ. ಜೆನೆರಿಕ್ ಔಷಧ ಮೂಲ ಬ್ರ್ಯಾಂಡ್ ಹೊಂದಿರುವ ಸೂತ್ರೀಕರಣ ಮತ್ತು ಅದೇ ಸಕ್ರಿಯ ಪದಾರ್ಥಗಳನ್ನು ಹೊಂದಿರಬೇಕು.ಅಮೇರಿಕಾದ ಆಹಾರ ಮತ್ತು ಔಷಧ ಆಡಳಿತ (ಎಫ್ಡಿಎ) ಪ್ರಕಾರ ಜೆನೆರಿಕ್ ಔಷದ ಒಂದೇ ಬಗೆಯ,ಒಂದು ಸ್ವೀಕಾರಾರ್ಹ ಬಯೋ ಇಕ್ವಲೆಂಟ್ ವ್ಯಾಪ್ತಿಯೊಳಗೆ ಇರಬೇಕು. ಬ್ರ್ಯಾಂಡ್ ಹೆಸರು ಫಾರ್ಮಕೋಕಿನೆಟಿಕ್,ಫಾರ್ಮಕೋಡೈನಾಮಿಕ್ ಗೆ ಪೂರಕವಾಗಿರಬೇಕು.ಹೆಚ್ಚಿನ ಸಂದರ್ಭಗಳಲ್ಲಿ, ಜೆನೆರಿಕ್ ಉತ್ಪನ್ನಗಳನ್ನು ಔಷಧ, ಮೂಲ ಡೆವಲಪರ್ ನೀಡುವ ಪೇಟೆಂಟ್ ರಕ್ಷಣೆ ಅವಧಿ ನಂತರ ಲಭ್ಯವಾಗುತ್ತವೆ.[][][][]

ವ್ಯತ್ಯಾಸ

ಜೆನೆರಿಕ್‌ ಮತ್ತು ಬ್ರ್ಯಾಂಡೆಡ್‌ ಔಷಧಗಳ ನಡುವೆ ಬೆಲೆಯ ಹೊರತಾಗಿ ಬೇರೆ ಯಾವುದೇ ವ್ಯತ್ಯಾಸವಿರುವದಿಲ್ಲ. ಸಮೀಕರಣ, ಪ್ರಮಾಣ, ಪರಿಣಾಮ, ಅಡ್ಡ ಪರಿಣಾಮ, ಸುರಕ್ಷೆ ಸೇರಿದಂತೆ ಎಲ್ಲವೂ ಒಂದೇ ಆಗಿರುತ್ತದೆ.ಬ್ರ್ಯಾಂಡೆಡ್‌ ಔಷಧಗಳಿಗೆ ಬದಲಿಯಾದ ಜೆನೆರಿಕ್‌ ಔಷಧಗಳ ಖರೀದಿಸುವುದರಿಂದ ಸುಲಭವಾಗಿ ಶೇ.50-70ರಷ್ಟು ಹಣವನ್ನು ಉಳಿಸಬಹುದಾಗಿದೆ.[][]

ಇದನ್ನು ನೋಡಿ

ಬಾಹ್ಯ ಕೊಂಡಿಗಳು

ಉಲ್ಲೇಖಗಳು