ಜ್ಯಾಕ್ಸನ್

Jackson, Mississippi
State capital city
From top, left to right: Downtown Jackson, Mississippi State Capitol, Mississippi Governor's Mansion, Lamar Life Building, Mississippi Veterans Memorial Stadium
Flag of Jackson, Mississippi
Official seal of Jackson, Mississippi
Nickname(s): 
Crossroads of the South, Jack-town, The 601
Motto: 
The City with Soul
Location of Jackson within Hinds County, Mississippi
Location of Jackson within Hinds County, Mississippi
Lua error in ಮಾಡ್ಯೂಲ್:Location_map at line 526: Unable to find the specified location map definition: "Module:Location map/data/USA Mississippi" does not exist.
Coordinates: 32°17′56″N 90°11′05″W / 32.29889°N 90.18472°W / 32.29889; -90.18472
Country ಅಮೇರಿಕ ಸಂಯುಕ್ತ ಸಂಸ್ಥಾನ
State Mississippi
CountiesHinds, Madison, Rankin
Incorporated1822
Named forAndrew Jackson
Government
 • TypeMayor–Council
 • MayorChokwe Antar Lumumba (D)
 • Council
Members
  • Ward 1: Ashby Foote
  • Ward 2: Melvin Priester, Jr.
  • Ward 3: Kenneth Stokes
  • Ward 4: De'Keither Stamps
  • Ward 5: Charles H. Tillman
  • Ward 6: Aaron Banks
  • Ward 7: Virgi Lindsey
Area
 • State capital city೧೧೩.೮೫ sq mi (೨೯೪.೮೮ km2)
 • Land೧೧೧.೭೨ sq mi (೨೮೯.೩೪ km2)
 • Water೨.೧೪ sq mi (೫.೫೩ km2)
Elevation
೨೭೯ ft (೮೫ m)
Population
 (2020)
 • State capital city೧,೫೩,೭೦೧
 • RankUS: 149th
 • Density೧,೩೭೫.೮೨/sq mi (೫೩೧.೨೧/km2)
 • Urban
೩,೪೭,೬೯೩ (US: ೧೧೮th)
 • Urban density೧,೪೬೬.೧/sq mi (೫೬೬.೧/km2)
 • Metro
೫,೯೧,೯೭೮ (US: ೯೯th)
DemonymJacksonian
Time zoneUTC−6 (CST)
 • Summer (DST)UTC−5 (CDT)
ZIP codes
39200-39299
Area code(s)601, 769
FIPS code28-36000
GNIS feature ID0711543[]
Websitewww.jacksonms.gov
For additional city data see City-Data

ಜ್ಯಾಕ್ಸನ್ - ಅಮೆರಿಕ ಸಂಯುಕ್ತ ಸಂಸ್ಥಾನಗಳ ಮಿಸಿಸಿಪಿ ರಾಜ್ಯದ ರಾಜಧಾನಿ. ಹೈಂಡ್ಸ್ ಕೌಂಟಿಯ ಆಡಳಿತ ಕೇಂದ್ರ. ಪರ್ಲ್ ನದಿಯ ಪಶ್ಚಿಮದಂಡೆಯ ಮೇಲಿದೆ. ಜನಸಂಖ್ಯೆ 1,53,968 (1970 ಅಂದಾಜು). ಮಿಸಿಸಿಪಿ ರಾಜ್ಯದಲ್ಲಿ ಇದೇ ಅತ್ಯಂತ ದೊಡ್ಡ ನಗರ.

ಇದು ಪ್ರಮುಖ ಔದ್ಯೋಗಿಕ ನಗರ. ವ್ಯಾಪಾರಕೇಂದ್ರ. ಸುತ್ತಣ ಪ್ರದೇಶದಲ್ಲಿ ಬೆಳೆಯುವ ಹತ್ತಿ ಮಾರಾಟವಾಗುವುದು ಇಲ್ಲಿಯೇ. ನೆಯ್ಗೆ, ಕುಶಲವಸ್ತುಗಳ ತಯಾರಿಕೆ, ಹತ್ತಿಬೀಜದ ಎಣ್ಣೆ, ಗಾಜಿನ ಉಪಕರಣ ಮತ್ತು ದೃಕ್ ಉಪಕರಣಗಳನ್ನು ತಯಾರಿಸುವ ಕೈಗಾರಿಕೆಗಳು ಇಲ್ಲಿ ಬೆಳೆದು ಬಂದಿವೆ. 1920ರ ಸುಮಾರಿಗೆ ಸುತ್ತಣ ಪ್ರದೇಶದಲ್ಲಿ ನೈಸರ್ಗಿಕ ಅನಿಲದ ಶೋಧವಾದ ಮೇಲೆ ನಗರ ಅಪಾರವಾಗಿ ಬೆಳೆಯಲಾರಂಭಿಸಿತು.

ಈಗಿನ ನಗರದಲ್ಲಿ ಅನೇಕ ಸುಂದರ ಉದ್ಯಾನಗಳಿವೆ. ಇಲ್ಲಿ ಸು. 7,000 ಜಾತಿಗಳ ಗಿಡಗಳನ್ನು ಬೆಳೆಸಿದ್ದಾರೆ. ಜ್ಯಾಕ್ಸನ್ ನಗರ ಶೈಕ್ಷಣಿಕ ಕೇಂದ್ರವೂ ಹೌದು. ಜಾಕ್ಸನ್ ಸ್ಟೇಟ್ ಕಾಲೇಜು (1877), ಮಿಲ್‍ಸ್ಯಾಪ್ ಕಾಲೇಜು (1890), ಬೆಲ್ ಹೇವನ್ ಕಾಲೇಜು (1894), ಜ್ಯಾಕ್ಸನ್ ಸ್ಕೂಲ್ ಆಫ ಲಾ (1930) - ಇವು ಇಲ್ಲಿಯ ಕೆಲವು ಮುಖ್ಯ ಶಿಕ್ಷಣ ಸಂಸ್ಥೆಗಳು.

ಸಂಯುಕ್ತ ಸಂಸ್ಥಾನಗಳ 23 ರಾಜ್ಯಗಳಲ್ಲಿ ಇದೇ ಹೆಸರಿನ ಕೌಂಟಿಗಳೂ ಪಟ್ಟಣಗಳೂ ಇವೆ.

ಇತಿಹಾಸ

ಮೊದಲು ಸಣ್ಣ ವ್ಯಾಪಾರಕೇಂದ್ರವಾಗಿದ್ದ ಇದನ್ನು ಲಫ್ಲೂರ್ಸ್ ಬ್ಲಫ್ ಎಂದು ಕರೆಯುತ್ತಿದ್ದರು. ಅಧ್ಯಕ್ಷ ಆಂಡ್ರ್ಯೂ ಜ್ಯಾಕ್ಸನನ ಗೌರವಾರ್ಥವಾಗಿ ಇದರ ಹೆಸರನ್ನು ಬದಲಾಯಿಸಲಾಯಿತು. 1821ರಲ್ಲಿ ಇದನ್ನು ರಾಜಧಾನಿಯಾಗಿ ಆಯ್ಕೆ ಮಾಡಲಾಯಿತು. ಅಮೆರಿಕನ್ ಆಂತರ್ಯುದ್ಧದಲ್ಲಿ ಇಲ್ಲಿ ಅನೇಕ ಕದನಗಳು ನಡೆದು ನಗರದ ಬಹುಭಾಗ ಹಾಳಾಯಿತು.

ಉಲ್ಲೇಖಗಳು

  1. "2020 U.S. Gazetteer Files". United States Census Bureau. Retrieved July 24, 2022.
  2. "US Board on Geographic Names". United States Geological Survey. October 25, 2007. Archived from the original on February 12, 2012. Retrieved January 31, 2008.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: