ಡಿಯೇಗೋ ಮೆರಡೋನ
Personal information | ||
---|---|---|
Full name | ಡಿಯೇಗೋ ಅರ್ಮಂಡೋ ಮೆರಡೋನ | |
Date of birth | ಅಕ್ಟೋಬರ್ ೩೦, ೧೯೬೦ | |
Place of birth | ವಿಲ್ಲಾ ಫಿಯೋರಿಟೊ, ಅರ್ಜೆಂಟಿನಾ | |
Height | {height} | |
Nickname | El Diez, Pelusa, El Pibe de Oro | |
Position | "Hole" | |
Youth clubs | ||
೧೯೭೦-೧೯೭೬ | ಅರ್ಜೆಂಟೆನಾ ಜೂನಿಯರ್ಸ್ | |
Professional clubs* | ||
1976-81 1981-82 1982-84 1984-91 1992-93 1993 1995-97 1976-1997 |
Argentinos Juniors Boca Juniors FC Barcelona SSC Napoli Sevilla FC Newell's Old Boys Boca Juniors Total |
166 (116) 42 (28) 58 (38) 259 (115) 29 (7) 5 (0) 29 (7) 588 (311) |
National team | ||
1977-94 | Argentina | 91 (34) |
* Professional club appearances and (goals) |
ಡಿಯೇಗೊ ಮೆರಡೋನ (ಜನನ ಅಕ್ಟೋಬರ್ ೩೦, ೧೯೬೦ - ಮರಣ ನವೆಂಬರ್ ೨೫, ೨೦೨೦) ಅರ್ಜೆ೦ಟಿನಾದ ಮಾಜಿ ಫುಟ್‌ಬಾಲ್ ಕ್ರೀಡಾಪಟು ಮತ್ತು ನವೆ೦ಬರ್ ೨೦೦೮ರಿ೦ದ ಜುಲೈ ೨೦೧೦ರವರೆಗೆ ಅರ್ಜೆ೦ಟಿನಾ ರಾಷ್ಟ್ರೀಯ ಫುಟ್‌ಬಾಲ್ ತ೦ಡದ ಮ್ಯಾನೇಜರರಾಗಿದ್ದರು. ಇವರು ಜಗತ್ತಿನ ಮಹಾನ್ ಫುಟ್‌ಬಾಲ್ ಆಟಗಾರರಲ್ಲಿ ಒಬ್ಬರೆಂದು ಹೇಳಲಾದರು, ಅದೇ ದನಿಯಲ್ಲಿ, ಇವರು ಅತ್ಯ೦ತ ವಿವಾದಾಸ್ಪದ, ಸುದ್ದಿಯೋಗ್ಯವಾದ ವ್ಯಕ್ತಿ ಎಂದೂ ಹೇಳಲಾಗುತ್ತದೆ. ಇವರ ಅ೦ತರಾಷ್ಟ್ರಿಯ ವೃತ್ತಿ ಜೀವನದಲ್ಲಿ ತಮ್ಮ ದೇಶವನ್ನು ೯೧ ಬಾರಿ ಪ್ರತಿನಿಧಿಸಿ ೩೪ ಗೋಲ್-ಗಳನ್ನು ಹೊಡೆದಿರುವರು.
ಒಟ್ಟು ನಾಲ್ಕು ವರ್ಲ್ಡ್ ಕಪ್ ಸರಣಿಗಳಲ್ಲಿ ಭಾಗವಹಿಸಿ, ಒ೦ದರಲ್ಲಿ—೧೯೮೬ರಲ್ಲಿ—ತ೦ಡದ ಮು೦ದಾಳತ್ವವನ್ನು ವಹಿಸಿ ಅ೦ತಿಮ ಸುತ್ತಿನಲ್ಲಿ ವೆಸ್ಟ್ ಜರ್ಮನಿಯನ್ನು ಸದೆಬಡಿದು, ಸರಣಿಯ ಶ್ರೇಷ್ಠ ಆಟಗಾರರೆ೦ದು "ಗೋಲ್ಡನ್ ಬಾಲ್" ಪ್ರಶಸ್ತಿಯನ್ನು ಲಭಿಸಿಕೊ೦ಡರು [೧][೨]
ಆರಂಭದ ದಿನಗಳು
ಡಿಯಾಗೋ ಮೆರಡೋನ ವಿಲ್ಲಾ ಫಿಯೋರಿಟೊ ಎಂಬ ಬ್ಯೂನಸ್ ಐರ್ಸ್ ನಗರದ ಹೊರವಲಯದಲ್ಲಿರುವ ಪುಟ್ಟ ಕೊಳಚೆ ಪ್ರದೇಶದಲ್ಲಿ ಹುಟ್ಟಿದವರು. ಇವರಿಗೆ ಮೂರು ಜನ ಅಕ್ಕಂದಿರು. ನಾಲ್ಕನೆಯವರಾದ ಇವರೇ ಹಿರಿಯ ಮಗ. ತಮ್ಮಂದಿರಿಬ್ಬರೂ (ಹ್ಯೂಗೊ, ಎಡ್ಯುರಾಡೊ) ಫುಟ್‌ಬಾಲ್ ಆಟಗಾರರೆ.
ಹತ್ತನೇ ವಯಸ್ಸಿನಲ್ಲಿ ಮೆರಡೋನರವರು ಎಸ್ಟ್ರೆಲ್ಲಾ ರೋಜ ಎಂಬ ಹತ್ತಿರದ ಕ್ಲಬ್‌ನಲ್ಲಿ ಆಡುತ್ತಿರುವಾಗ ಇವರ ಪ್ರತಿಭೆ ಪ್ರತಿಭಾನ್ವೇಷಕರೊಬ್ಬರಿಂದ ಗುರುತಿಸಲ್ಪಟ್ಟಿತು ಎಂದು ನಂಬಲಾಗಿದೆ.
ಆಟಗಾರರಾಗಿ
೧೫ನೇ ವಯಸ್ಸಿನಲ್ಲಿ ಮೆರಡೋನ ಅರ್ಜೆಂಟಿನೋಸ್ ಜೂನಿಯರ್ಸ್ ತಂಡದಲ್ಲಿ ಪಾದಾರ್ಪಣೆ ಮಾಡಿ ೧೯೭೬ರಿಂದ ೧೯೮೧ರವರೆಗೂ ಅಲ್ಲೇ ಆಡುತ್ತಿದ್ದರು.
ಅರ್ಜೆಂಟಿನಾ ರಾಷ್ಟ್ರೀಯ ಫುಟ್‍ಬಾಲ್ ತಂಡಕ್ಕೆ, ತಮ್ಮ ಹದಿನಾರನೇ ವಯಸ್ಸಿನಲ್ಲಿ, ಹಂಗೇರಿ ದೇಶದ ವಿರುದ್ಧ ಆಡುವುದರ ಮೂಲಕ ಪಾದಾರ್ಪಣೆ ಮಾಡಿದರು. ಹದಿನೆಂಟನೆಯ ವಯಸ್ಸಿನಲ್ಲಿ 'ಫುಟ್‍ಬಾಲ್ ವರ್ಲ್ಡ್ ಯೂತ್ ಚಾಂಪಿಯನ್‍ಷಿಪ್' ಪಂದ್ಯಾವಳಿಯಲ್ಲಿ ಅರ್ಜೆಂಟೀನಾ ದೇಶದ ಪರವಾಗಿ ಆಡಿದರಲ್ಲದೆ, ಫೈನಲ್ ಪಂದ್ಯದಲ್ಲಿ ಸೋವಿಯತ್ ಒಕ್ಕೂಟ ತಂಡದ ವಿರುದ್ಧ ೩–1 ಅಂತರದಲ್ಲಿ ಜಯ ಸಾಧಿಸಲು ಕಾರಣರಾಗಿ, ಆ ಪಂದ್ಯಾವಳಿಯ ತಾರೆಯಾಗಿ ಹೊರಹೊಮ್ಮಿದರು.
೧೯೮೨ರಲ್ಲಿ ಮರಡೋನ ತಮ್ಮ ಪ್ರಥಮ ವಿಶ್ವಕಪ್ ಪಂದ್ಯಾವಳಿಯನ್ನು ಆಡಿದರು. ಮೊದಲನೇ ಸುತ್ತಿನಲ್ಲಿ ಚಾಂಪಿಯನ್ ತಂಡ ಆರ್ಜೆಂಟೀನಾ ಬೆಲ್ಜಿಯಂ ತಂಡಕ್ಕೆ ೦-೧ ರಿಂದ ಸೋತಿತು. ನಂತರ ಹಂಗರಿ ಮತ್ತು ಎಲ್ ಸಾಲ್ವಡಾರ್ ಗಳನ್ನು ನಿರಾಯಾಸಕರವಾಗಿ ಸೋಲಿಸಿ ದ್ವಿತೀಯ ಸುತ್ತಿಗೆ ಪ್ರವೇಶಿಸಿತಾದರೂ ಅಂತಿಮವಾಗಿ ವಿಶ್ವಕಪ್ ಗೆದ್ದ ಇಟಲಿ (೧-೨) ಮತ್ತು ಮರಡೋನಾರನ್ನು ಹೊರಕ್ಕೆ ಕಳುಹಿಸಿದ ಬ್ರೆಝಿಲ್ ವಿರುದ್ಧ ಪಂದ್ಯ (೧-೩) ಗಳ ವಿರುದ್ಧ ಎರಡನೇ ಸುತ್ತಿನಲ್ಲಿ ಸೋತಿತು.
ಉಲ್ಲೇಖಗಳು
- ↑ CNNSI - "Split decision: Pele, Maradona each win FIFA century awards after feud" Archived 2012-05-24 at Archive.is Last retrieved May 30 2006
- ↑ (Spanish) AS.com - "Cantoná choses Maradona over Pelé" Last retrieved May 19 2006
External links
- Viva Diego 10 (Spanish, English, Italian)
- Homenaje al 10 - Diego Maradona's Tribute Archived 2008-06-17 ವೇಬ್ಯಾಕ್ ಮೆಷಿನ್ ನಲ್ಲಿ. (Spanish)
- Maradona History, Stats, and Media Archived 2006-03-15 ವೇಬ್ಯಾಕ್ ಮೆಷಿನ್ ನಲ್ಲಿ. (Spanish)
- Diego Maradona's home page
- Diego Maradona Archived 2006-06-13 ವೇಬ್ಯಾಕ್ ಮೆಷಿನ್ ನಲ್ಲಿ. Biography and pictures
- Video clip of the Goal Of the Century Archived 2004-12-13 ವೇಬ್ಯಾಕ್ ಮೆಷಿನ್ ನಲ್ಲಿ.
- Gary Lineker interviews Diego - BBC News 30 April 2006