ತೋಮಸ್ ಲಿನ್ದಾಲ್

ತೋಮಸ್ ಲಿನ್ದಾಲ್

ತೋಮಸ್ ರಾಬರ್ಟ್ ಲಿನ್ದಾಲ್, ಎಫ್.ಆರ್.ಎಸ್, ಎಫ್.ಮೆಡ್.ಸೈ ಒಬ್ಬ ಸ್ವೀಡನ್ ಮೂಲದ ಬ್ರಿಟಿಷ್ ವಿಜ್ಞಾನಿ. ಪ್ರಸ್ತುತ ತಮ್ಮ ಕ್ಯಾನ್ಸರ್ ಸಂಶೋಧನೆಯನ್ನು ಮುಂದುವರಿಸುತ್ತಿದಾರೆ. ೨೦೧೫ರಲ್ಲಿ, ಅಮೆರಿಕದ ರಸಾಯನಶಾಸ್ತ್ರಜ್ಞ ಪಾಲ್ ಎಲ್ ಮೊಡ್ರಿಚ್ ಮತ್ತು ಟರ್ಕಿಯ ರಸಾಯನಶಾಸ್ತ್ರಜ್ಞ ಅಜೀಜ್ ಸನಕಾರೊಡನೆ ಡಿಎನ್ಎ ದುರಸ್ತಿಯ ಯಾಂತ್ರಿಕ ಅಧ್ಯಯನಕ್ಕೆ ನೋಬೆಲ್ ಪ್ರಶಸ್ತಿಯನ್ನು ಪಡೆದರು.

ವಿದ್ಯಾಭ್ಯಾಸ

ಫೋಕ್ ರಾಬರ್ಟ್ ಲಿನ್ದಾಲ್ ಮತ್ತು ಎಥೆಲ್ ಹಲದಾ ಹಲ್ತ್ ಬರ್ಗ್ ದಂಪತಿಗಳಿಗೆ ೨೮ ಜನವರಿ, ೧೯೩೮ರಂದು ತೋಮಸ್ ಲಿನ್ದಾಲ್ ಜನಿಸಿದರು. ಅವರ ಜನ್ಮಸ್ಥಳ ಕುಂಗಸೊಲ್ಮೆನ್, ಸ್ಟಾಕ್ಹೋಮ್, ಸ್ವೀಡನ್. ೧೯೬೭ರಲ್ಲಿ ಅವರು ಸ್ಟಾಕ್ಹೋಮಿನ ಕರೋಲಿನ್ಸ್ಕಾ ಸಂಸ್ಥೆಯಲ್ಲಿ ಓದುತ್ತಿದಾಗ ತಮ್ಮ ಡಾಕ್ಟರೇಟ್ ಪದವಿ ಪಡೆದ ನಂತರ ೧೯೭೦ರಲ್ಲಿ ಎಂ.ಡಿ ಪದವಿಯನ್ನು ಪಡೆದರು. ಅವರು ತಮ್ಮ ಮುಂದಿನ ಡಾಕ್ಟರೇಟ್ ಸಂಶೋಧನೆಯನ್ನು ನ್ಯೂಜೆರ್ಸಿಯ ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ಮತ್ತು ನ್ಯೂಯೊರ್ಕಿನ್ ರಾಕ್ಫೆಲ್ಲರ್ ವಿಶ್ವವಿದ್ಯಾಲಯದಲ್ಲಿ ಮುಗಿಸಿದರು. ಡಾಹ್ಟರೇಟ್ ಸಂಶೋಧನೆಯ ನಂತರ ಗೋಥೆನ್ಬರ್ಗ್ ಯುನಿವರ್ಸಿಟಿ, ಸ್ವೀಡನಲ್ಲಿ ವೈದ್ಯಕೀಯ ಮತ್ತು ಶಾರೀರಿಕ ರಸಾಯನಶಾಸ್ತ್ರದ ಪ್ರಾಧ್ಯಾಪಕರಾದರು. ೧೯೮೧ರಿಂದ ಅವರು ಕ್ಲೇರ್ ಹಾಲ್ ಲ್ಯಾಬೋರೇಟರೀಸಿನಲ್ಲಿರುವ ಕ್ಯಾನ್ಸರ್ ರಿಸರ್ಚ್ ಯುಕೆಗೆ (ಹರ್ಟ್ಫೋರ್ಡ್ಶೈರ್, ಯುನೈಟೆಡ್ ಕಿಂಗ್ಡಮ) ಕೆಲಸ ಮಾಡಿದ್ದಾರೆ.

ಸಂಶೋಧನೆ ಹಾಗು ವೃತ್ತಿ ಜೀವನ

ತಮ್ಮ ಸಂಶೋಧನೆಯ ಡಾಕ್ಟರೇಟ್ ಹಾಗು ಎಂ.ಡಿ ಪದವಿ ಗಳಿಸಿದ ನಂತರ ಲಿನ್ದಾಲ್ ಗೋಥೆನ್ಬರ್ಗ್ ವಿಶ್ವವಿದ್ಯಾಲಯದಲ್ಲಿ ೧೯೭೮ರಿಂದ ೧೯೮೨ವರೆಗೂ ವೈದ್ಯಕೀಯ ರಸಾಯನಶಾಸ್ತ್ರದ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ಯುನೈಟೆಡ್ ಕಿಂಗ್ಡಮಿನಲ್ಲಿ ಸ್ಥಳಾಂತರಗೊಂಡಾಗ, ೧೯೮೧ರಲ್ಲಿ ಅವರು ಸಂಶೋಧಕರಾಗಿ ಇಂಪೀರಿಯಲ್ ಕ್ಯಾನ್ಸರ್ ರಿಸರ್ಚ್ ಫಂಡ್ (ಈಗ ಕ್ಯಾನ್ಸರ್ ರಿಸರ್ಚ್, ಯುಕೆ) ಸೇರಿದರು. ಅವರು ೧೯೮೬ರಿಂದ ೨೦೦೫ರ ವರೆಗು ಹರ್ಟ್ಫೋರ್ಡ್ಶೈರ್ ಕ್ಯಾನ್ಸರ್ ರಿಸರ್ಚ್ ಯುಕೆ ಕ್ಲೇರ್ ಹಾಲ್ ಲ್ಯಾಬೋರೇಟರೀಸಿನ ಮೊದಲ ನಿರ್ದೇಶಕರಾಗಿದ್ದರು. ೨೦೧೫ರಿಂದ ಹರ್ಟ್ಫೋರ್ಡ್ಶೈರ್ ಕ್ಯಾನ್ಸರ್ ರಿಸರ್ಚ್ ಯುಕೆ ಕ್ಲೇರ್ ಹಾಲ್ ಲ್ಯಾಬೋರೇಟರೀಸ್, ಫ್ರಾನ್ಸಿಸ್ ಕ್ರಿಕ್ ಸಂಸ್ಥೆಯ ಭಾಗವಾಗಿದೆ. ಅವರು ಅಲ್ಲಿ ೨೦೦೯ರವರೆಗು ತಮ್ಮ ಸಂಶೋಧನೆಯನು ಮುಂದುವರಿಸಿದರು. ಲಿನ್ದಾಲ್ ಡಿಎನ್ಎ ದುರಸ್ತಿ ಹಾಗು ಕ್ಯಾನ್ಸರ್ ತಳಿಶಾಸ್ತ್ರ ಕುರಿತು ಅನೇಕ ಸಂಶೋಧನೆ ಪತ್ರಿಕೆಗಳು, ತಮ್ಮ ಕಾಣಿಕೆ ನೀಡಿದಾರೆ.

ಪ್ರಶಸ್ತಿ ಹಾಗು ಗೌರವಗಳು

೧೯೭೪ರಲ್ಲಿ ಲಿನ್ದಾಲವರನ್ನು ಎಂಬೊ ಸಂಸ್ಥೆಯ ಸದಸ್ಯರಾಗಿ ಚುನಾಯಿತರಾದರು. ೧೯೮೮ರಲ್ಲಿ ಫೆಲೋ ಆಫ್ ರಾಯಲ್ ಸೊಸೈಟಿ (ಎಫ್ ಆರ್ ಎಸ್) ಚುನಾವಣೆಯ ಪ್ರಮಾಣಪತ್ರದಲ್ಲಿ ಬರೆದುದೆನೆಂದರೆ:

'ಡಾ ತೋಮಸ್ ಲಿನ್ದಾಲ್ ಅಣುವಿನ ಮಟ್ಟದಲ್ಲಿ ಬ್ಯಾಕ್ಟೀರಿಯಾ ಮತ್ತು ಸಸ್ತನಿಗಳ ಜೀವಕೋಶದ ಡಿಎನ್ಎ ದುರಸ್ತಿಯ ಅಧ್ಯಯನಕ್ಕೆ ತಮ್ಮ ಕೊಡುಗೆಯನ್ನು ನೀಡಿದಾರೆ. ಸಸ್ತನಿಯ ಡಿಎನ್ಎ ಲೈಗೇಸ್ ಪ್ರತ್ಯೇಕಿಸಿದ ಮೊದಲ ವ್ಯಕ್ತಿ ಲಿನ್ದಾಲ್ ಹಾಗೆಯೆ ಡಿಎನ್ಎ ಛೇದನ ದುರಸ್ತಿಯ ಮಧ್ಯವರ್ತಿಗಳಾದ ಬಹು ನಿರೀಕ್ಷಿತ ಕಾದಂಬರಿ ಗುಂಪು ಡಿಎನ್ಎ ಶರ್ಕರ ವಿಭಜನೆ ವಿವರಿಸಿದ ಮೊದಲ ವ್ಯಕ್ತಿಯ ಪಟ್ಟವನ್ನು ಅವರು ಹೊಂದಿದಾರೆ. ಅವರು ಸಸ್ತನಿ ಜೀವಕೋಶಗಳಲ್ಲಿ ಮೀಥೈಲ್ಟ್ರಾನ್ಸ್ಫರೇಸ್ ಎನ್ನುವ ಒಂದು ಅನನ್ಯ ವರ್ಗದ ಕಿಣ್ವಗಳು ಕಂಡುಹಿಡಿದರು. ಈ ಮೀಥೈಲ್ಟ್ರಾನ್ಸ್ಫರೇಸ್ ಡಿಎನ್ಎ ಅಲ್ಕೈಲೇಷನ್ ಹೊಂದಾಣಿಕೆಯ ಪ್ರತಿಕ್ರಿಯೆ ಮಧ್ಯವರ್ತಿಯಾಗಿ ಹಾಗೂ ಈ ಕಿಣ್ವಗಳ ಅಭಿವ್ಯಕ್ತಿ ಎಡಿಎ ಜೀನ್ಅನ್ನು ನಿಯಂತ್ರಿಸಲ್ಪಡುತ್ತದೆ ಎಂದು ತೋರಿಸಿದಾರೆ. ಇತ್ತೀಚೆಗೆ ಬ್ಲೂಮ್ಸ್ ಸಿಂಡ್ರೋಮಿನ ಆಣ್ವಿಕ ದೋಷಕ್ಕೆ ಡಿಎನ್ಎ ಲೈಗೇಸ್-ಐ ಕೊರತೆ ಕಾರಣವೆಂಬುದು ಬೆಳಕಿಗೆ ತಂದಿದಾರೆ. ಡಿಎನ್ಎ ದುರಸ್ತಿ ಪ್ರಕ್ರಿಯೆಯ ಸ್ವಭಾವದ ಒಳಗೆ ಆಳವಾದ ಒಳನೋಟಗಳನ್ನು ಒದಗಿಸುವುದರೊಡನೆ ಇವರ ಅತ್ಯಂತ ಪ್ರಮುಖ ಕೊಡುಗೆಗಳು ಅನುಕೂಲ ಹಾಗು ಭರವಸೆ ನೀಡುವ ಕ್ಯಾನ್ಸರ್ ಚಿಕಿತ್ಸೆಗೆ ಕೀಮೊಥೆರಪ್ಯುಟಿಕ್ ಔಷಧಗಳು. ಲಿನ್ದಾಲ್ ಸಹ ಇಪ್ಸ್ಟೈನ್-ಬಾರ್ ವೈರಸ್ ಮೂಲಕ[] ಡಿಎನ್ಎ ಮಟ್ಟದಲ್ಲಿ, ಬಿ-ಲಿಂಫೋಸೈಟ್ಸ್ ರೂಪಾಂತರ ಕಾರ್ಯವಿಧಾನವನ್ನು ಅರ್ಥಮಾಡಿಕೊಳ್ಳುವಲ್ಲಿ ಗಮನಾರ್ಹ ಕೊಡುಗೆ ಇವರದು. ಇವುಗಳಲ್ಲಿ ಪ್ರಮುಖವಾದುದು ಮುಚ್ಚಿದ ವೃತ್ತಾಕಾರದ ಡ್ಯುಪ್ಲೆಕ್ಸ್ ವೈರಸ್ ಡಿಎನ್ಎ ರೋಗಕಾರಕ ಕೋಶಗಳಲ್ಲಿ ಸಂಭವಿಸುವ ವಿವರಣೆ.'

೨೦೦೭ರಲ್ಲಿ ಲಿನ್ದಾಲ್ ರಾಯಲ್ ಸೊಸೈಟಿಯ ರಾಯಲ್ ಪದಕ ಪಡೆದಾಗ " ಡಿಎನ್ಎ ದುರಸ್ತಿಯ ನಮ್ಮ ಗ್ರಹಿಕೆಗೆ ಮೂಲಭೂತ ಕೊಡುಗೆ ಮಾಡಿದಾರೆ. ಅವರ ಸಾಧನೆಗಳು ಅವರ ಮಹಾನ್ ಸ್ವಂತಿಕೆಯ ವಿಸ್ತಾರ ಮತ್ತು ಶಾಶ್ವತವಾದ ಪ್ರಭಾವ ಬೀರುತ್ತದೆ."[]

ಅವರು ನಾರ್ವೇಜಿಯನ್ ಅಕಾಡಮಿ ಆಫ್ ಸೈನ್ಸ್ ಆಂಡ್ ಲೆಟರ್ಸ್ ಸದಸ್ಯ. ಅವರಿಗೆ ೨೦೧೦ರಲ್ಲಿ ಕೊಪ್ಲೇ ಮೆಡಲ್ ದೊರಕಿತ್ತು.[] ೧೯೯೮ರಲ್ಲಿ ಅವರನ್ನುಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್ (ಎಫ್.ಮೆಡ್.ಸೈ) ಸಹ ಸ್ಥಾಪಕರಾಗಿ ಆಯ್ಕೆಯಾದರು.

ಅವರಿಗೆ ೨೦೧೫ರಲ್ಲಿ ರಸಾಯನ ಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಲಭಿಸಿತು. ಸ್ವೀಡಿಷ್ ಅಕಾಡೆಮಿ ಕೆಮಿಸ್ಟ್ರಿ,[]೨೦೧೫ ರಸಾಯನ ಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಾಲ್ ಎಲ್ ಮೊಡ್ರಿಚ್ ಮತ್ತು ಅಜೀಜ್ ಸನಕಾರೊಡನೆ ಡಿಎನ್ಎ ದುರಸ್ತಿಯ ಯಾಂತ್ರಿಕ ಅಧ್ಯಯನಕ್ಕೆ ತೋಮಸ್ ಲಿನ್ದಾಲಿಗೆ ಜಂಟಿಯಾಗಿ ನೀಡಲಾಯಿತು ಎಂಬುದು ಗಮನಿಸಿದರು.

ಉಲ್ಲೇಖಗಳು