ದ ನ್ಯೂ ಯಾರ್ಕ್ ಟೈಮ್ಸ್

ದ ನ್ಯೂ ಯಾರ್ಕ್ ಟೈಮ್ಸ್ ನ್ಯೂ ಯಾರ್ಕ್ ನಗರದಲ್ಲಿ ಸ್ಥಿತವಾಗಿರುವ ಅಮೇರಿಕನ್ ವೃತ್ತಪತ್ರಿಕೆಯಾಗಿದೆ. ಇದು ವಿಶ್ವಾದ್ಯಂತ ಪ್ರಭಾವ ಮತ್ತು ಓದುಗರನ್ನು ಹೊಂದಿದೆ.[][][] ೧೮೫೧ರಲ್ಲಿ ಸ್ಥಾಪಿತವಾದ ಈ ಸುದ್ದಿಪತ್ರಿಕೆಯು ೧೨೭ ಪುಲಿಟ್ಝರ್ ಪ್ರಶಸ್ತಿಗಳನ್ನು ಗೆದ್ದಿದೆ, ಮತ್ತು ಇದು ಬೇರೆ ಯಾವುದೇ ಸುದ್ದಿಪತ್ರಿಕೆಗಿಂತ ಹೆಚ್ಚಾಗಿದೆ.[][] ನ್ಯೂ ಯಾರ್ಕ್ ಟೈಮ್ಸ್ ಪ್ರಸಾರದಲ್ಲಿ ವಿಶ್ವದಲ್ಲಿ ೧೮ನೇ ಸ್ಥಾನ ಮತ್ತು ಅಮೇರಿಕದಲ್ಲಿ ೩ನೇ ಸ್ಥಾನ ಪಡೆದಿದೆ.[] "ದ ಗ್ರೇ ಲೇಡಿ" ಎಂಬ ಅಡ್ಡಹೆಸರನ್ನು ಹೊಂದಿರುವ ನ್ಯೂ ಯಾರ್ಕ್ ಟೈಮ್ಸ್ ಪತ್ರಿಕೋದ್ಯಮದಲ್ಲಿ ದೀರ್ಘಕಾಲದಿಂದ ರಾಷ್ಟ್ರೀಯ ದಾಖಲೆಯ ಸುದ್ದಿಪತ್ರಿಕೆ ಎಂದು ಪರಿಗಣಿತವಾಗಿದೆ.[] "ಆಲ್ ದ ನ್ಯೂಸ್ ದ್ಯಾಟ್ಸ್ ಫ಼ಿಟ್ ಟು ಪ್ರಿಂಟ್" ಎಂಬುದು ಈ ಪತ್ರಿಕೆಯ ಧ್ಯೇಯಸೂತ್ರವಾಗಿದೆ.

ಉಲ್ಲೇಖಗಳು

  1. "The New York Times". Encyclopædia Britannica. Retrieved September 27, 2011.
  2. "Is The Washington Post closing in on the Times?". POLITICO Media. Retrieved November 5, 2017.
  3. "News of the world". The Economist. March 17, 2012. ISSN 0013-0613. Retrieved November 5, 2017.
  4. "Pulitzer Prizes". The New York Times Company. Retrieved November 5, 2017.
  5. Victor, Daniel (April 16, 2018). "The Times Just Won 3 Pulitzers. Read the Winning Work". The New York Times. Retrieved July 16, 2018.
  6. "Top 10 U.S. Daily Newspapers". Cision. Archived from the original on July 22, 2019. Retrieved 2019-07-13.
  7. "The New York Times". Encyclopædia Britannica. Retrieved September 27, 2011.