ದ್ರಾಕ್ಷಿ

Concord is a variety of North American labrusca grape
Raisins

ಜನಪ್ರಿಯ ದ್ರಾಕ್ಷಿ

ದ್ರಾಕ್ಷಿ ಸಸ್ಯಶಾಸ್ತ್ರೀಯ ಜಾತಿ ವೀಟಿಸ್‍ನ ಪರ್ಣಪಾತಿ ಮರದಂಥ ಬಳ್ಳಿಗಳ ಒಂದು ಹಣ್ಣು ಬಿಡುವ ಬೆರಿ. ದ್ರಾಕ್ಷಿಯನ್ನು ಹಸಿಯಾಗಿ ತಿನ್ನಬಹುದು ಅಥವಾ ಅದನ್ನು ವೈನ್, ಜ್ಯಾಮ್, ರಸ, ಜೆಲಿ, ದ್ರಾಕ್ಷಿ ಬೀಜದ ಸಾರ, ಒಣದ್ರಾಕ್ಷಿ, ವಿನಿಗರ್, ಮತ್ತು ದ್ರಾಕ್ಷಿ ಬೀಜದ ಎಣ್ಣೆಯನ್ನು ತಯಾರಿಸಲು ಬಳಸಬಹುದು. ದ್ರಾಕ್ಷಿ ಪಕ್ವವಾಗುವ ಅವಧಿಯಿರದ ಪ್ರಕಾರದ ಹಣ್ಣು, ಸಾಮಾನ್ಯವಾಗಿ ಗೊಂಚಲುಗಳಲ್ಲಿ ಕಂಡು ಬರುತ್ತವೆ.

ಕರ್ನಾಟಕದಲ್ಲಿ ದ್ರಾಕ್ಷಿ

  • ಕರ್ನಾಟಕದಲ್ಲಿ 19,711 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೇಸಾಯ ಮಾಡಲಾಗಿತ್ತು. ಪ್ರತಿ ವರ್ಷ 3.21 ಲಕ್ಷ ಟನ್ ದ್ರಾಕ್ಷಿ ಉತ್ಪಾದನೆ ಮಾಡಲಾಗುವುದು. ನಮ್ಮ ರಾಜ್ಯ ದ್ರಾಕ್ಷಿ ಬೆಳೆ ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ.
  • ಕರ್ನಾಟಕದಲ್ಲಿ ದ್ರಾಕ್ಷಿ ಬೆಳೆಯುವ ಪ್ರದೇಶಗಳು:  1. ಕೃಷ್ಣಾ ಕಣಿವೆ (ಕೃಷ್ಣಾ ವ್ಯಾಲಿ): ಉತ್ತರ ಕರ್ನಾಟಕದ ಕೃಷ್ಣಾ ನದಿ ಕಣಿವೆ ಭಾಗದಲ್ಲಿ ಬರುವ ಬಿಜಾಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಹೆಚ್ಚಾಗಿ ದ್ರಾಕ್ಷಿ ಬೆಳೆಯಲಾಗುತ್ತಿದ್ದು ಈ ಪ್ರದೇಶವನ್ನು ಕೃಷ್ಣಾ ಕಣಿವೆ ಎಂದು ಗುರುತಿಸಲಾಗಿದೆ. ಅವಿಭಜಿತ ಬಿಜಾಪುರ ಜಿಲ್ಲೆಯಲ್ಲಿ ಸುಮಾರು 200 ವರ್ಷಗಳಿಂದ ದ್ರಾಕ್ಷಿ ಬೆಳೆಯಲಾಗುತ್ತಿದ್ದು, ಇಲ್ಲಿನ ಬಿಸಿಲು ದಿನಗಳು ಮತ್ತು ತಂಪಾದ ರಾತ್ರಿಗಳು ತುಂಬಿದ ವಾತಾವರಣ ದ್ರಾಕ್ಷಿ ಬೆಳೆಗೆ ಅತ್ಯುತ್ತಮ ವಾತಾವರಣವಾಗಿದ್ದು, ಇಲ್ಲಿನ ದ್ರಾಕ್ಷಿ ಹೊರದೇಶಗಳಲ್ಲೂ ರಫ್ತು ಗುಣಮಟ್ಟವನ್ನು ಕಾಯ್ದುಕೊಂಡಿದೆ.  2. ನಂದಿ ಕಣಿವೆ (ನಂದಿ ವ್ಯಾಲಿ): ಬೆಂಗಳೂರು ಸುತ್ತ ಮುತ್ತ ನಂದಿ ಬೆಟ್ಟದ ಕಣಿವೆಯಲ್ಲಿ ಬರುವ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳು ದ್ರಾಕ್ಷಿ ಬೆಳೆಗೆ ಹೆಸರುವಾಸಿಯಾಗಿದ್ದು ಈ ಪ್ರದೇಶವನ್ನು ನಂದಿ ಕಣಿವೆ ಎಂದು ಗುರುತಿಸಲಾಗಿದೆ. ಇಲ್ಲಿ ಹೆಚ್ಚಾಗಿ ಬೆಳೆಯುವ ’ಬೆಂಗಳೂರು ಬ್ಲ್ಯೂ’ ಎಂಬ ತಳಿ ಜಾಗತೀಕವಾಗಿ ಮನ್ನಣೆ ಪಡೆದಿದೆ. ಈಗಿನ ದ್ರಾಕ್ಷಾರಸ ’ವೈನ್’ ಮಾರುಕಟ್ಟೆಯಲ್ಲಿ ಹೆಚ್ಚು ಬಳಕೆಯಲ್ಲಿರುವ ದ್ರಾಕ್ಷಿ ಬಗೆ ಇದಾಗಿದೆ.
ವಿವರ ಸಂಖ್ಯೆ
ದ್ರಾಕ್ಷಿ ಬೆಳೆ ಪ್ರದೇಶ 10,582 ಹೆಕ್ಟೇರ್
ವಾರ್ಷಿಕ ಉತ್ಪಾದನೆ 34 ಸಾವಿರ ಟನ್
ಅದರಲ್ಲಿ ಒಣ ದ್ರಾಕ್ಷಿಗೆ ಬಳಕೆ 80 %
ದ್ರಾಕ್ಷಿ ಬೆಳೆಗಾರರು 16 ಸಾವರಕ್ಕೂ ಹೆಚ್ಚು
[೧]

ದ್ರಾಕ್ಷಿ ಮೇಳ

  • ಬೆಂಗಳೂರಿನ ಜಯಮಹಲ್ ಅರಮನೆ ಹೋಟೆಲ್ ಪ್ರಾಂಗಣದಲ್ಲಿ ಮೂರು ದಿನಗಳ ಬೆಂಗಳೂರು ಅಂತರರಾಷ್ಟ್ರೀಯ ದ್ರಾಕ್ಷಾರಸ ಮೇಳ–2014 ನ್ನು ಜುಲೈ 25 ರಿಂದ ಆಯೋಜಿಸಲಾಗಿದೆ ಎಂದು ಕರ್ನಾಟಕ ದ್ರಾಕ್ಷಾರಸ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಬಿ.ಕೃಷ್ಣ ತಿಳಿಸಿದ್ದಾರೆ.
  • ಕರ್ನಾಟಕ ದ್ರಾಕ್ಷಾರಸ ಮಂಡಳಿ ಮತ್ತು ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಈ ಮೇಳ ನಡೆಯಲಿದೆ. ಮೇಳದಲ್ಲಿ 35 ಕ್ಕೂ ಹೆಚ್ಚು ವೈನರಿಗಳು ಹಾಗೂ 7 ಅಂತರರಾಷ್ಟ್ರೀಯ ವೈನರಿಗಳು ಭಾಗವಹಿಸಲಿವೆ. ಮೇಳದಲ್ಲಿ ವೈನ್ ದ್ರಾಕ್ಷಿ ಉತ್ಪಾದನೆ, ತಯಾರಿಕೆ ಕುರಿತು ಆಧುನಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ ಒದಗಿಸಲಾಗುವುದು. ವೈನ್ ಪ್ರವಾಸೋದ್ಯಮ, ಹನಿ ನೀರಾವರಿ ಮತ್ತು ಯಂತ್ರ ಸಾಮಗ್ರಿ ಉತ್ಪಾದಕ ಕಂಪನಿಗಳಿಂದ ಪರಿಕರಗಳ ಹಾಗೂ ತಂತ್ರಜ್ಞಾನದ ಪರಿಚಯ ಮಾಡಿ ಕೊಡಲಾಗುವುದು. ಅಲ್ಲದೆ ಪ್ರತಿದಿನ ಮನರಂಜನಾ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
  • ಈ ಮೇಳದ ಪ್ರಮುಖ ಉದ್ದೇಶವೆಂದರೆ ದ್ರಾಕ್ಷಿ ಉತ್ಪಾದನೆ ಮತ್ತು ವೈನ್ ಬಳಕೆಯ ಬಗ್ಗೆ ರೈತರಿಗೆ, ಉದ್ಯಮಿಗಳಿಗೆ ಹಾಗೂ ಸಾರ್ವಜನಿಕರಿಗೆ ತಿಳುವಳಿಕೆ ನೀಡುವುದು ಹಾಗೂ ಕರ್ನಾಟಕ ವೈನರಿಗಳಿಗೆ ಅಂತರಾಷ್ಟ್ರೀಯ ವ್ಯಾಪ್ತಿ ಮಾರುಕಟ್ಟೆ ದೊರಕಿಸುವುದೇ ಮುಖ್ಯ ಉದ್ದೇಶವಾಗಿದೆ.[೨]

ಪೌಷ್ಟಿಕಾಂಶಗಳು

ದ್ರಾಕ್ಷಿಯು ಹಲವಾರು ಪೌಷ್ಟಿಕಾಂಶಗಳ ಖಣಜವಾಗಿದ್ದು ಅವು ಇಂತಿವೆ.

ದ್ರಾಕ್ಷಿಗಳು, ನೇರಳೆ ಮತ್ತು ಹಸಿರು
Nutritional value per 100 g (3.5 oz)
ಆಹಾರ ಚೈತನ್ಯ 288 kJ (69 kcal)
ಶರ್ಕರ ಪಿಷ್ಟ 18.1 g
- ಸಕ್ಕರೆ 15.48 g
- ಆಹಾರ ನಾರು 0.9 g
ಕೊಬ್ಬು 0.16 g
Protein 0.72 g
Thiamine (vit. B1) 0.069 mg (6%)
Riboflavin (vit. B2) 0.07 mg (6%)
Niacin (vit. B3) 0.188 mg (1%)
Pantothenic acid (B5) 0.05 mg (1%)
Vitamin B6 0.086 mg (7%)
Folate (vit. B9) 2 μg (1%)
Choline 5.6 mg (1%)
Vitamin C 3.2 mg (4%)
ವಿಟಮಿನ್ ಇ 0.19 mg (1%)
ವಿಟಮಿನ್ ಕೆ 14.6 μg (14%)
ಕ್ಯಾಲ್ಸಿಯಂ 10 mg (1%)
ಕಬ್ಬಿಣ ಸತ್ವ 0.36 mg (3%)
ಮೆಗ್ನೇಸಿಯಂ 7 mg (2%)
ಮ್ಯಾಂಗನೀಸ್ 0.071 mg (3%)
ರಂಜಕ 20 mg (3%)
ಪೊಟಾಸಿಯಂ 191 mg (4%)
ಸೋಡಿಯಂ 2 mg (0%)
ಸತು 0.07 mg (1%)
Fluoride 7.8 µg
Link to USDA Database entry
Percentages are roughly approximated
using US recommendations for adults.
Source: USDA Nutrient Database

ಛಾಯಾಂಕಣ

dj=ಉಲ್ಲೇಖ=

Preview of references

  1. ಆಧಾರ : ಜಿಲ್ಲಾತೋಟಗಾರಿಕೆ ಇಲಾಖೆ
  2. ಬೆಂಗಳೂರು ಅಂತರರಾಷ್ಟ್ರೀಯ ದ್ರಾಕ್ಷಾರಸ ಮೇಳ -2014