ಪಾತ್ರೆಪರಡಿ

a shelf with kitchen utensils of several kinds stacked upon it, with more utensils hanging from hooks below it, both above two work surfaces with yet further utensils laid out neatly upon them

ಪಾತ್ರೆಪರಡಿ ಎಂದರೆ ಆಹಾರ ತೈಯಾರಿಕೆಯಲ್ಲಿ ಬಳಸಲಾಗುವ ಕೈಯಲ್ಲಿ ಹಿಡಿಯಬಲ್ಲ ಸಣ್ಣ ಉಪಕರಣಗಳು. ಸಾಮಾನ್ಯ ಅಡುಗೆಮನೆ ಕಾರ್ಯಗಳಲ್ಲಿ ಆಹಾರ ಪದಾರ್ಥಗಳನ್ನು ತಕ್ಕ ಗಾತ್ರಕ್ಕೆ ಕತ್ತರಿಸುವುದು, ಆಹಾರವನ್ನು ತೆರೆದ ಬೆಂಕಿ ಅಥವಾ ಒಲೆಯ ಮೇಲೆ ಬೇಯಿಸುವುದು, ಬೇಕಿಂಗ್, ರುಬ್ಬುವುದು, ಮಿಶ್ರಣ ಮಾಡುವುದು, ಮತ್ತು ಅಳತೆ ಮಾಡುವುದು ಸೇರಿವೆ; ಪ್ರತಿ ಕಾರ್ಯಕ್ಕೆ ಭಿನ್ನ ಪಾತ್ರೆಪರಡಿಯನ್ನು ತಯಾರಿಸಲಾಗಿರುತ್ತದೆ. ಅಡುಗೆಯವನ ಚಾಕುದಂತಹ ಸಾಮಾನ್ಯ ಉದ್ದೇಶದಂತಹ ಪಾತ್ರೆಪರಡಿಯನ್ನು ವಿಭಿನ್ನ ಬಗೆಯ ಆಹಾರಗಳಿಗೆ ಬಳಸಬಹುದು; ಇತರ ಅಡುಗೆಮನೆ ಪಾತ್ರೆಪರಡಿ ಬಹಳ ವಿಶೇಷೀಕೃತವಾಗಿದ್ದು ಕೇವಲ ಒಂದು ನಿರ್ದಿಷ್ಟ ಬಗೆಯ ಆಹಾರದ ತಯಾರಿಕೆಯ ಸಂಬಂಧದಲ್ಲಿ ಬಳಸಬಹುದು, ಉದಾಹರಣೆಗೆ ಮೊಟ್ಟೆ ಬೇರ್ಪಡಕ ಅಥವಾ ಸೇಬು ತಿರುಳೆತ್ತುಗ. ಒಂದು ಕಾರ್ಯವನ್ನು ಅನೇಕ ಬಾರಿ ಪುನರಾವರ್ತಿಸಬೇಕಾದಾಗ, ಅಥವಾ ಅಡುಗೆಯವರು ಸೀಮಿತ ಕೌಶಲ್ಯ ಅಥವಾ ಗತಿಶೀಲತೆಯನ್ನು ಹೊಂದಿದ್ದಾಗ ಕೆಲವು ವಿಶೇಷೀಕೃತ ಪಾತ್ರೆಪರಡಿಯನ್ನು ಬಳಸಲಾಗುತ್ತದೆ.

ಹೆಚ್ಚಿನ ಓದಿಗೆ