ಪ್ರಕಾಶ್ ಜಾವಡೇಕರ್
ಪ್ರಕಾಶ್ ಜಾವಡೇಕರ್,[೧] ಮರಾಠಿ : (प्रकाश जावडेकर) (ಜ : ಜನವರಿ, ೩೦, ೧೯೫೧) ರಾಜ್ಯಸಭೆಯ ಹಿಂದಿನ ಪಾರ್ಲಿಮೆಂಟ್ ಹಾಗೂ ಭಾರತೀಯ ಜನತಾ ಪಕ್ಷದ (BJP) ಮುಂದಾಳು. ಸದಸ್ಯ. ೨೦೦೮ ರಲ್ಲಿ ಮಹಾರಾಷ್ಟ್ರದ ರಾಜ್ಯ ಸಭೆಗೆ ಚುನಾಯಿತರಾಗಿ ಬಂದರು. ಬಿಜೆಪಿ ಪಕ್ಷದ ಮುಖಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತದ ಸರಕಾರದ ಸ್ಟೇಟ್ ಮಂತ್ರಿಯಾಗಿ ನೇಮಕಗೊಂಡಿದ್ದಾರೆ. (ಅವರು ಸ್ವತಂತ್ರವಾಗಿ ನಿಭಾಯಿಸುತ್ತಿದ್ದಾರೆ) 'ಇನ್ಫರ್ಮೇಶನ್ ಮತ್ತು ಬ್ರಾಡ್ಕಾಸ್ಟಿಂಗ್ ಮಂತ್ರಿ', ಮತ್ತು 'ಪರಿಸರ ಹಾಗೂ ವನ ಸಂರಕ್ಷಣೆ ಖಾತೆ'ಯ ನಿರ್ವಣೆಯನ್ನೂ ನಿಭಾಯಿಸುತ್ತಿದ್ದಾರೆ. ಇದಲ್ಲದೆ ಅವರು 'ಮಿನಿಸ್ಟರ್ ಆಫ್ ಸ್ಟೇಟ್ ಫಾರ್ ಪಾರ್ಲಿಮೆಂಟರಿ ಅಫೇರ್ಸ್ ಶಾಖೆ'ಯೂ, ಅವರಪಾಲಿನಲ್ಲಿದೆ.[೨]
ಜನನ, ವಿದ್ಯಾಭ್ಯಾಸ, ವೃತ್ತಿಜೀವನ
- ಪ್ರಕಾಶ್ ಪುಣೆಯ ಬ್ರಾಹ್ಮಣ ಪರಿವಾರದಲ್ಲಿ ಜನಿಸಿದರು.[೩] ತಂದೆ 'ಕೇಶವ್ ಕೃಷ್ಣ ಜಾವಡೇಕರ್' ಮತ್ತು ತಾಯಿ 'ರಂಜನಿ ಜಾವಡೇಕರ್' ಶಾಲೆಯ ಶಿಕ್ಷಕಿ. ತಾಯಿ ಕೊಂಕಣಿ ಭಾಷೆ ಮಾತಾಡುವವರು. ಅವರ ಕಾಲದಲ್ಲಿ ಅವರಿದ್ದ ಊರಿನಲ್ಲಿ ಮೊದಲು ವಿದ್ಯಾಭ್ಯಾಸ ಮಾಡಿದ ಮಹಿಳೆಯೆಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ. ಈಗ ಅವರು ಸ್ಥಾನೀಯ ಮಹಿಳೆಯರಿಗೆ 'ವೇದ ಪಾಠ'ವನ್ನು ಬೋಧಿಸುತ್ತಿದ್ದಾರೆ. ಪ್ರಕಾಶ್ ಪುಣೆ ವಿಶ್ವವಿದ್ಯಾಲಯದಿಂದ 'ಬಿಕಾಂ ಪದವಿ'ಗಳಿಸಿದರು. ಶಾಲಾದಿನಗಳಲ್ಲೇ (ABVP) ಜೊತೆ ಒಡನಾಟವಿತ್ತು.
- ೧೯೭೧-೮೧ ರ ವರೆಗೆ 'ಬ್ಯಾಂಕ್ ಆಫ್ ಮಹಾರಾಷ್ಟ್ರ'ದಲ್ಲಿ ಹಳ್ಳಿಗಾಡಿನ ಅಭಿವೃದ್ಧಿಯ ಕಕ್ಷದಲ್ಲಿ ಕೆಲಸ ಮಾಡಿದರು. ವಿತ್ತೀಯವಾಗಿ ಹಿಂದಿದ್ದ ಹಿಂದುಳಿದ ಪ್ರದೇಶಗಳನ್ನೇ ಆರಿಸಿ ತೆಗೆದುಕೊಂಡು ಅಲ್ಲಿ ಪ್ರಗತಿಪರ ಕಾರ್ಯಗಳನ್ನು ಹಮ್ಮಿಕೊಂಡರು. ತಂದೆ 'ಹಿಂದ್ ಮಹಾಸಭೆ'ಯ ಹಿರಿಯ ನಾಯಕರು. ಪುಣೆ ಶಾಖೆಯನ್ನು ತಮ್ಮ ಅಧ್ಯಕ್ಷ ಪದವಿಯ ಸಮಯದಲ್ಲಿ ಚೆನ್ನಾಗಿ ಅಭಿವೃದ್ಧಿಪಡಿಸಿದರು.
ತಂದೆ ಒಬ್ಬ ಸ್ವತಂತ್ರ್ಯ ಸೇನಾನಿ
ಕೇಶವ್ 'ಸ್ವತಂತ್ರ್ಯ ಸೇನಾನಿ, ವೀರ್ ಸಾವಕರ್' ರ ಅನುಯಾಯಿ, ಆಪ್ತ ಮಿತ್ರರು ಹಾಗೂ ಹತ್ತಿರದಿಂದ ಬಲ್ಲವರಾಗಿದ್ದರು. 'ಲೋಕಮಾನ್ಯ ಬಾಲಗಂಗಾಧರ ತಿಲಕರು ಸ್ಥಾಪಿಸಿದ್ದ, ಮರಾಠಿ ದೈನಿಕ, 'ಕೇಸರಿ'ಯ ಜಂಟಿ ಸಂಪಾದಕರಾಗಿ ದುಡಿದರು. ಇದಕ್ಕೆ ಮೊದಲು, 'ತರುಣ್ ಭಾರತ್', 'ಕಾಳ್' ಪತ್ರಿಕೆಗಳಲ್ಲಿ ಕೆಲಸ ಮಾಡಿದರು. ಈಗಲೂ ತಮ್ಮ ಬಿಡುವಿನ ಸಮಯದಲ್ಲೂ, ಸಮಯ ದೊರೆತಾಗ ಯಾವುದಾದರೂ ಪತ್ರಿಕೆಯಲ್ಲಿ ತಮ್ಮ ಮನಸ್ಸನ್ನು ಬಿಚ್ಚಿ ಲೇಖನಗಳನ್ನು ಬರೆದಿದ್ದಾರೆ.
ಪ್ರಕಾಶರ ಪರಿವಾರ
'ಪ್ರಕಾಶ್ ಜಾವಡೇಕರ್' ಪತ್ನಿ, 'ಪ್ರಾಚಿ ಜಾವಡೇಕರ್', 'ಪುಣೆಯ, ಇಂದಿರಾ ಇನ್ ಸ್ಟಿ ಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನ ಮಾಜಿ-ನಿರ್ದೇಶಕಿ'. ಶಿಕ್ಷಣ ವಲಯದಲ್ಲಿ ಸಲಹೆಗಾತಿ. ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು. 'ಡಾ.ಅಶುತೋಷ್ ಜಾವಡೇಕರ್'- ದಂತ ವೈದ್ಯರು, ಹಾಗೂ ಒಳ್ಳೆಯ ಕಲಾವಿದ. ಎರಡನೆಯ ಮಗ, 'ಅಪೂರ್ವ ಜಾವಡೇಕರ್', ಬಿ.ಕಾಂ, ಸಿ.ಎ; ಎಫ್.ಸಿ.ಎ; ಹಾಗೂ ಎಮ್.ಎ(ಎಕೊನೊಮಿಕ್ಸ್) ಪದವೀಧರ. ಡಿ.ಎಸ್.ಇ, ಎಮ್. ಎಸ್. ಸಿ (ಫೈನಾಂಶಿಯಲ್ ಇಂಜಿನಿಯರಿಂಗ್, ಲಂಡನ್ ಮತ್ತು ಬಾಸ್ಟನ್ ವಿಶ್ವವಿದ್ಯಾಲಯದಿಂದ ಎಕೊನೊಮಿಕ್ಸ್ ನಲ್ಲಿ ಪಿ.ಎಚ್.ಡಿ ಪದವಿಗಾಗಿ ಶ್ರಮಿಸುತ್ತಿದ್ದಾರೆ. ಪ್ರಕಾಶ್ ಜಾವಡೇಕರ್, ಸೋದರಿ, ಎಂ.ಎ, ಬಿ.ಎಡ್; ಪದವೀಧರೆ. ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಒಬ್ಬ ಸೋದರ, ಬಿ.ಕಾಂ ಪದವೀಧರ, 'ಸೆಂಟ್ರೆಲ್ ಬ್ಯಾಂಕ್' ನಲ್ಲಿ ಕೆಲಸ ಮಾಡುತ್ತಿದ್ದಾರೆ.
ನಿಭಾಯಿಸಿದ ಪದವಿಗಳು
- Minister of State Information & Broadcasting and Minister of State (Independent Charge) & Environment Ministry
- Member of Parliament of India
- National Spokesperson, Bharatiya Janata Party
- President, GLOBE India (Global Legislators Organisation for Balanced Environment)
- In-Charge, BJP Economic Forum and Cells related to Economy
- President, NOINO (National Organisation of Insurance Officers)
- President, KCKU (Khadi Commission Karmachari Union)[7]
ಹಲವಾರು ಸಮಿತಿಗಳಲ್ಲಿ
- Member, Press Council of India
- Member, Public Accounts Committee
- Member, Standing Committee on Human Resources and Development
- Member, Consultative Committee for Ministry of Power
- Member, Committee on Subordinate Legislation
- Member, Committee on Wakf
ಹಿಂದೆ ಕೆಲಸಮಾಡಿದ ಪದವಿಗಳು
- Executive President, State Planning Board, Maharashtra (1995–1999) Member of Legislative Council - Maharashtra from Pune Division Graduate Constituency for 12 yrs (1990–2002) Chairman, Task Force on IT, Govt. of Maharashtra (1977–1999) Chairman, Working Group on "IT for Masses" Govt. of India (2000)[7]
ತುರ್ತು ಪರಿಸ್ಥಿತಿಯ ಸಮಯದಲ್ಲಿ
ತುರ್ತು ಪರಿಸ್ಥಿತಿಯ ಕಾಲದಲ್ಲಿ ಪ್ರಕಾಶ್ ಜಾವಡೇಕರ್, ಇನ್ನೂ ವಿದ್ಯಾರ್ಥಿಯಾಗಿದ್ದರು. ಆಗಲೇ ಜಾಗರೂಕ ಪ್ರಜೆಯಾಗಿ, ವಿದ್ಯಾರ್ಥಿಯಾಗಿಯೂ ABVP ಯಲ್ಲಿ ಸಕ್ರಿಯ ಪಾತ್ರವಹಿಸಿದ್ದರು.ಪುಣೆನಗರದಲ್ಲಿ ಒಂದು ಆಂದೋಳನವನ್ನು ಆಯೋಜಿಸಿ ಭಾಗವಹಿಸಿದ್ದ ಕಾರಣಕ್ಕಾಗಿ ಅವರನ್ನು ಆಗಿನ ಸರ್ಕಾರ ಬಂಧಿಸಿ ಕಾರಾಗೃಹಕ್ಕೆ ಸೇರಿಸಲಾಯಿತು. ಜೈಲಿನಲ್ಲಿದ್ದಾಗಲೇ ಅವರಿಗೆ ಹೃದಯದ ನೋವು ಹಾಗೂ ಸಮಸ್ಯೆಯಿಂದ ನರಳಿದರು. ಆಗಿನ ಸರಕಾರ ಅವರಿಗೆ ಚಿಕಿತ್ಸೆಗಾಗಿ ಜೈಲಿನಿಂದ ಆಸ್ಪತ್ರೆಗೆ ಕಳಿಸಲು ಒಪ್ಪಿರಲಿಲ್ಲ. ಜೈಲುವಾಸಿಗಳು ಮತ್ತು ಮಿತ್ರರು, ಸಹಪಾಠಿಗಳು ಅವರಿಗೆ ಆಸ್ಪತ್ರೆಯ ಚಿಕಿತ್ಸೆ ಒದಗಿಸಲು ಒಕ್ಕೊರಲನಿಂದ ಹೋರಾಡಿದ ನಂತರ ಅವರನ್ನು ತೆರವುಗೊಳಿಸಿಲಾಯಿತು. ತಕ್ಷಣವೇ ಅವರಿಗೆ ಹೃದಯದ ಚಿಕಿತ್ಸೆ ಮಾಡಿದಮೇಲೆ ಪರಿಸ್ಥಿತಿ ಸುಧಾರಿಸಿತು.
ಕೋಲ್ ಮೈನಿಂಗ್ ಸ್ಕ್ಯಾಮ್ ಬಗ್ಗೆ
ಕೋಲ್ ಮೈನಿಂಗ್ ವಲಯದಲ್ಲಿ ಇದ್ದ ಹಲವಾರು ಅನೀತಿಗಳನ್ನು ವಿರೋಧಿಸಿ, ೩೧, ಮೇ, ೨೦೧೨ ರಲ್ಲಿ ತಮ್ಮ ದನಿ ಎತ್ತಿ ಹೋರಾಡಿದರು.[೪] ಆಗ, Central Vigilance Commission (CVC) ಸರಕಾರದ ವಿರುದ್ಧ ಒಂದು ತನಿಖೆಯನ್ನು ಪ್ರಾರಂಭಿಸಿತು. [೫]ಪ್ರಕಾಶ್ ಜಾವಡೇಕರ್ ಇದರ ಬಗ್ಗೆ, ಪ್ರೆಸ್ ನಲ್ಲಿ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು ಹೀಗೆ : "We have made a formal complaint to CVC because there were so may glaring lacunae which needed to be probed. If the inquiry has been ordered, it's good."
ಸಾಧನೆಗಳು
- "Sir Purshottam Das Thakur Memorial" National Award, for research Papers on "Rural Development & Banks role in Co-ordinated approach".
- Led delegation to Boston to Negotiate Media Lab Asia Project (2000)
ಉಲ್ಲೇಖಗಳು
- ↑ "'ಪ್ರಕಾಶ್ ಜಾವಡೇಕರ್'" (PDF). Archived from the original (PDF) on 2014-07-16. Retrieved 2014-11-04.
- ↑ Decision 2014, Haryana & Maharashtra, Prakash Javadekar: One of the most visible faces of BJP,May 26, 2014
- ↑ Detailed Profile: Shri Prakash Javadekar
- ↑ 'The Hindu,' Coal scam: Chronology of events September 24, 2014
- ↑ "THE GREAT COAL ROBBERY, Ravi Shankar Prasad, Balbir Punj, Prakash Javadekar" (PDF). Archived from the original (PDF) on 2013-08-20. Retrieved 2014-11-04.