ಬಂಡಿ
ಬಂಡಿ ಎಂದರೆ ಎರಡು ಗಾಲಿಗಳಿರುವ, ಸಾಮಾನ್ಯವಾಗಿ ಒಂದು ಅಥವಾ ಜೋಡಿ ಭಾರ ಎಳೆಯುವ ಪ್ರಾಣಿಗಳಿಂದ ಎಳೆಯಲ್ಪಡುವ, ಸಾರಿಗೆಗಾಗಿ ವಿನ್ಯಾಸಗೊಳಿಸಲಾದ ವಾಹನ. ಕೈ ಬಂಡಿಯನ್ನು ಒಬ್ಬರು ಅಥವಾ ಹೆಚ್ಚು ಜನರು ಎಳೆಯುತ್ತಾರೆ ಅಥವಾ ನೂಕುತ್ತಾರೆ.
ಬಂಡಿಗಳಿಗೆ ಬಳಸಲಾಗುವ ಭಾರ ಎಳೆಯುವ ಪ್ರಾಣಿಗಳು ಕುದುರೆಗಳು, ಕತ್ತೆಗಳು ಅಥವಾ ಹೇಸರಗತ್ತೆಗಳು, ಎತ್ತುಗಳು, ಮತ್ತು ಮೇಕೆಗಳು ಅಥವಾ ದೊಡ್ಡ ನಾಯಿಗಳಂತಹ ಚಿಕ್ಕ ಪ್ರಾಣಿಗಳು ಕೂಡ ಆಗಿರಬಹುದು.
ಕ್ರಿ.ಪೂ. ಎರಡನೇ ಸಹಸ್ರಮಾನದಷ್ಟು ಹಿಂದಿನ ಸಾಹಿತ್ಯದಲ್ಲಿ ಬಂಡಿಗಳನ್ನು ಉಲ್ಲೇಖಿಸಲಾಗಿದೆ. ಭಾರತದ ಒಂದು ಪವಿತ್ರ ಗ್ರಂಥವಾದ ಋಗ್ವೇದವು ಪುರುಷರು ಮತ್ತು ಮಹಿಳೆಯರು ಬಂಡಿಯ ಎರಡು ಗಾಲಿಗಳಂತೆ ಸಮಾನವಾಗಿದ್ದಾರೆ ಎಂದು ಹೇಳುತ್ತದೆ. ಮನುಷ್ಯರು ನೂಕುವ ಕೈಬಂಡಿಗಳನ್ನು ಪ್ರಪಂಚದಾದ್ಯಂತ ಬಳಸಲಾಗಿದೆ. ಉದಾಹರಣೆಗೆ, ೧೯ನೇ ಶತಮಾನದಲ್ಲಿ, ಅಮೇರಿಕದ ಬಯಲುಗಳುದ್ದಕ್ಕೆ ೧೮೫೬ ಮತ್ತು ೧೮೬೦ರ ನಡುವೆ ಪ್ರಯಾಣಿಸುತ್ತಿದ್ದ ಕೆಲವು ಮೊರ್ಮನ್‌ಗಳು ಕೈಬಂಡಿಗಳನ್ನು ಬಳಸಿದ್ದರು.[೧]
ಉಲ್ಲೇಖಗಳು
- ↑ Lyndia Carter, “Handcarts,” in Encyclopedia of Latter-day Saint History, 461–63.
ಬಾಹ್ಯ ಸಂಪರ್ಕಗಳು
- Hand and Horse Drawn Firefighting Apparatus Archived 2015-08-04 ವೇಬ್ಯಾಕ್ ಮೆಷಿನ್ ನಲ್ಲಿ.
- History of the Shopping Cart Archived 2013-07-24 ವೇಬ್ಯಾಕ್ ಮೆಷಿನ್ ನಲ್ಲಿ.