ಬೋಗುಣಿ

ಚೀನಾದ ಬೋಗುಣಿ

ಬೋಗುಣಿಯು ಸಾಮಾನ್ಯವಾಗಿ ಆಹಾರವನ್ನು ತಯಾರಿಸಲು ಮತ್ತು ಬಡಿಸಲು ಬಳಸಲಾಗುವ ದುಂಡನೆಯ ಪಾತ್ರೆ ಅಥವಾ ಧಾರಕ. ಬೋಗುಣಿಯ ಒಳಭಾಗದ ಆಕಾರ ವಿಶಿಷ್ಟವಾಗಿ ಗೋಳಾಕಾರದ ಟೋಪಿಯಂತೆ ಇರುತ್ತದೆ, ಮತ್ತು ಅಂಚುಗಳು ಹಾಗೂ ತಳವು ಕೂಡುಗೆರೆ ಇಲ್ಲದ ಬಾಗನ್ನು ರಚಿಸುತ್ತದೆ. ಇದರಿಂದಾಗಿ ಬೋಗುಣಿಗಳು ದ್ರವಗಳು ಮತ್ತು ಅಳ್ಳಕವಾದ ಆಹಾರವನ್ನು ಹೊಂದಿರಲು ವಿಶೇಷವಾಗಿ ಸೂಕ್ತವಾಗಿವೆ, ಏಕೆಂದರೆ ಬೋಗುಣಿಯಲ್ಲಿರುವ ವಸ್ತುವು ಗುರುತ್ವದ ಶಕ್ತಿಯಿಂದ ಸ್ವಾಭಾವಿಕವಾಗಿ ಅದರ ಕೇಂದ್ರದಲ್ಲಿ ಸಂಗ್ರಹಗೊಳ್ಳುತ್ತದೆ. ಬೋಗುಣಿಯ ಹೊರಭಾಗವು ಬಹುತೇಕ ವೇಳೆ ದುಂಡಗಿರುತ್ತದೆ, ಆದರೆ ಆಯತಾಕಾರ ಸೇರಿದಂತೆ ಯಾವುದೇ ಆಕಾರದ್ದಾಗಿರಬಹುದು.

ಬೋಗುಣಿಗಳ ಗಾತ್ರ ಆಹಾರದ ಒಂದೇ ಒಬ್ಬೆಯನ್ನು ಹೊಂದಿರುವುದಕ್ಕೆ ಬಳಸಲಾಗುವ ಸಣ್ಣ ಬೋಗುಣಿಗಳಿಂದ ಹಿಡಿದು, ಹಲವುವೇಳೆ ಒಂದಕ್ಕಿಂತ ಹೆಚ್ಚು ಒಬ್ಬೆ ಆಹಾರವನ್ನು ಹೊಂದಿರಲು ಅಥವಾ ಶೇಖರಿಸಿಡಲು ಬಳಸಲಾಗುವ ಪಂಚ್ ಬೋಗುಣಿಗಳು ಅಥವಾ ಸ್ಯಾಲಡ್ ಬೋಗುಣಿಗಳಂತಹ ದೊಡ್ಡ ಬೋಗುಣಿಗಳವರೆಗೆ ಬದಲಾಗುತ್ತದೆ. ಬೋಗುಣಿಗಳು, ಗ್ಲಾಸುಗಳು ಮತ್ತು ತಟ್ಟೆಗಳ ನಡುವೆ ಸ್ವಲ್ಪ ಅತಿಕ್ರಮಣವಿದೆ.

ಉಲ್ಲೇಖಗಳು