ಭಾರತೀಯ ಖಭೌತಶಾಸ್ತ್ರ ಸಂಸ್ಥೆ

Indian Institute of Astrophysics, Bangalore
IIA Logo
ಸ್ಥಾಪನೆ1786
ಪ್ರಕಾರಸಂಶೋಧನಾ ಸಂಸ್ಥೆ
ಸ್ಥಳಬೆಂಗಳೂರು, ಕರ್ನಾಟಕ, ಭಾರತ
ಆವರಣನಗರ
ಅಂತರಜಾಲ ತಾಣhttp://www.iiap.res.in


ಭಾರತೀಯ ಖಭೌತಶಾಸ್ತ್ರ ಸಂಸ್ಥೆ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಐಐಎ)), ಪ್ರಾಥಮಿಕವಾಗಿ ಖಗೋಳಶಾಸ್ತ್ರ, ಖಗೋಳ ವಿಜ್ಞಾನ ಮತ್ತು ಸಂಬಂಧಿತ ವಿಷಯಗಳ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸುತ್ತದೆ. ಇದು ಭಾರತದಲ್ಲಿ ಖಗೋಳವಿಜ್ಞಾನದ ಪ್ರಮುಖ ಸಂಶೋಧನಾ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ. ತನ್ನ ಪ್ರಧಾನ ಕಚೇರಿಯನ್ನು ಕರ್ನಾಟಕದ ಬೆಂಗಳೂರು ನಗರದಲ್ಲಿ ಹೊಂದಿದೆ, ಇದು ಭಾರತದ ಪ್ರಮುಖ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯಾಗಿದೆ.

ಸಂಸ್ಥೆಯು ಭಾರತದಲ್ಲಿ ಪ್ರಯೋಗಾಲಯಗಳು ಮತ್ತು ವೀಕ್ಷಣಾಲಯಗಳ ಜಾಲವನ್ನು ಕೊಡೈಕೆನಾಲ್ (ಕೊಡೈಕೆನಾಲ್ ಸೌರ ವೀಕ್ಷಣಾಲಯ), ಕವಲೂರು (ವೈನು ಬಾಪು ವೀಕ್ಷಣಾಲಯ), ಗೌರಿಬಿದನೂರು, ಹಾನ್ಲೆ (ಭಾರತೀಯ ಖಗೋಳ ವೀಕ್ಷಣಾಲಯ) ಮತ್ತು ಹೊಸಕೋಟೆಗಳಲ್ಲಿ ಹೊಂದಿದೆ. [೧] ಈ ಸಂಸ್ಥೆಯು ಭಾರತದ ಮೊದಲ ಮೀಸಲಾಗಿರುವ ಬಹು-ತರಂಗಾಂತರ ಬಾಹ್ಯಾಕಾಶ ವೀಕ್ಷಣಾಲಯವಾದ ಆಸ್ಟ್ರೋಸಾಟ್‍ಗೆ ಕೊಡುಗೆ ನೀಡಿತು. ಆಸ್ಟ್ರೋಸಾಟ್ ಯೋಜನೆಯು ಭಾರತದ ವಿವಿಧ ಸಂಶೋಧನಾ ಸಂಸ್ಥೆಗಳ ಸಹಯೋಗದ ಪ್ರಯತ್ನವಾಗಿದೆ.

ಸಂಶೋಧನೆಯ ಕ್ಷೇತ್ರಗಳು

ಖಗೋಳವಿಜ್ಞಾನ ಮತ್ತು ಖಭೌತಶಾಸ್ತ್ರಕ್ಕೆ ಸಂಬಂಧಪಟ್ಟ ವೈವಿಧ್ಯಮಯ ವಿಷಯಗಳ ಮೇಲೆ ಐಐಎ ಸಂಶೋಧಕರು ಕೆಲಸ ಮಾಡುತ್ತಾರೆ. ಆದಾಗ್ಯೂ, ಸಂಶೋಧನೆಯನ್ನು ಈ ಕೆಳಗಿನ ಕ್ಷೇತ್ರಗಳಲ್ಲಿ ಸ್ಥೂಲವಾಗಿ ವಿಂಗಡಿಸಬಹುದು:

  • ಸೂರ್ಯ ಮತ್ತು ಸೌರವ್ಯೂಹ[೨]
  • ನಾಕ್ಷತ್ರಿಕ ಖಗೋಳಶಾಸ್ತ್ರ
  • ತಾರಾಗಣ ಖಗೋಳಶಾಸ್ತ್ರ
  • ಬಹಿರ್ತಾರಾಗಣ ಖಗೋಳವಿಜ್ಞಾನ ಮತ್ತು ವಿಶ್ವವಿಜ್ಞಾನ
  • ಸೈದ್ಧಾಂತಿಕ ಖಭೌತಶಾಸ್ತ್ರ ಮತ್ತು ಭೌತಶಾಸ್ತ್ರ
  • ತಂತ್ರಗಳು ಮತ್ತು ಉಪಕರಣಗಳು
  • ಬಾಹ್ಯಾಕಾಶ ಖಗೋಳಶಾಸ್ತ್ರ

ಉಲ್ಲೇಖಗಳು

  1. "ASTROSAT DATA FROM 'BUTTERFLY NEBULAE' ENABLES NEW DISCOVERIES ABOUT DYING STARS". www.firstpost.com/ 24 ನವೆಂಬರ್ 2018.
  2. "Indian scientists discover ultraviolet wings of Butterfly Nebula". timesofindia.indiatimes.com accessdate 24 ನವೆಂಬರ್ 2018.