ಮಅದ್ದ್

ಮಅದ್ದ್ ಬಿನ್ ಅದ್ನಾನ್
معد بن عدنان
Children
  • ನಿಝಾರ್
  • ಕುದಾಅ
  • ಇಯಾದ್
  • ಕುನುಸ್
Parents
  • ಅದ್ನಾನ್ ಬಿನ್ ಉದದ್ (father)
  • ಮಹ್ದದ್ ಬಿಂತ್ ಲಹ್ಮ್‌ (mother)
Familyಇಷ್ಮಾಯೇಲ್ ಕುಟುಂಬ

ಮಅದ್ದ್ ಬಿನ್ ಅದ್ನಾನ್ (ಅರಬ್ಬಿ: معد بن عدنان) ― ಅರಬ್ಬರ ಪೂರ್ವ ಪಿತಾಮಹ ಮತ್ತು ಮುಹಮ್ಮದ್ ಪೈಗಂಬರರ ಪೂರ್ವಜರಲ್ಲೊಬ್ಬರು. ಅರಬ್ ಐತಿಹ್ಯ ಮತ್ತು ಮುಸ್ಲಿಂ ವಿದ್ವಾಂಸರ ಪ್ರಕಾರ ಇವರು ಇಷ್ಮಾಯೇಲ್‌ರ ಪುತ್ರ ಕೇದಾರರ ವಂಶದಲ್ಲಿ ಸೇರಿದ ಅದ್ನಾನ್‌ರ ಮಗನಾಗಿದ್ದು, ಇವರ ವಂಶದವರು ಉತ್ತರ, ಪೂರ್ವ, ಪಶ್ಚಿಮ ಮತ್ತು ಮಧ್ಯ ಅರೇಬಿಯಾದಲ್ಲಿ ವಾಸಿಸುತ್ತಿದ್ದರು.[]

ಜನನ ಮತ್ತು ಕುಟುಂಬ

ಮಅದ್ದ್ ಕ್ರಿ.ಪೂ. 598ರಲ್ಲಿ ಹುಟ್ಟಿದರೆಂದು ಹೇಳಲಾಗುತ್ತದೆ. ಇವರ ತಂದೆಯ ಹೆಸರು ಅದ್ನಾನ್ ಬಿನ್ ಉದದ್ ಮತ್ತು ತಾಯಿಯ ಹೆಸರು ಮಹ್ದದ್ ಬಿಂತ್ ಲಹ್ಮ್‌. ಇವರಿಗೆ ಕುದಾಅ, ನಿಝಾರ್, ಕುನುಸ್ ಮತ್ತು ಇಯಾದ್ ಎಂಬ ನಾಲ್ಕು ಮಕ್ಕಳಿದ್ದರು.[]

ಉಲ್ಲೇಖಗಳು

  1. ಅಬ್ದುಲ್ ರಹ್ಮಾನ್ ಅಲ್-ಮುಗೀರಿ. The chosen record of the Ancestries of Arab tribes. Vol. 1. p. 58.
  2. ಇಬ್ನ್ ಇಸ್ಹಾಕ್. ದಿ ಲೈಫ್ ಆಫ್ ಮುಹಮ್ಮದ್. ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್. p. 4.