ಮಣ್ಣಿನ ಸವಕಳಿ
![](http://upload.wikimedia.org/wikipedia/commons/thumb/d/db/Soil_erosion_%282954513082%29.jpg/220px-Soil_erosion_%282954513082%29.jpg)
ಮಣ್ಣುಸ್ವಾಭಾವಿಕವಾಗಿ ರಚಿಸಲಾದ ವಸ್ತು. ವಾತವರಣದ ಬಂಡೆ ಮತ್ತು ಖನಿಜಗಳ ಸಣ್ಣ ತುಂಡುಗಳು, ಸಸ್ಯ ಮತ್ತು ಪ್ರಾಣಿಗಳ ಕೊಳೆತ ಸಾವಯವ ವಸ್ತುಗಳ ಜೊತೆ ಮಿಶ್ರಣ ಹೊಂದಿ ಮಣ್ಣು ರಚಿತವಾಗುತ್ತದೆ. ಮಣ್ಣಿನ ರಚನೆಯು ಒಂದು ನಿಧಾನ ಪ್ರಕ್ರಿಯೆಯಾಗಿದ್ದು ಇವು ರಚನೆಯಾಗಲು ಹಲವು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಮಣ್ಣಿನ ಸವೆತ ಒಂದು ನೈಸರ್ಗಿಕ ಪ್ರಕ್ರಿಯೆಯಾಗಿದೆ.[೧]ಭೂಮಿಯ ಮೇಲ್ಮೈಯನ್ನು ಆವರಿಸಿಕೊಂಡಿರುವ ಮಣ್ಣು ರೂಪುಗೊಳ್ಳಲು ಲಕ್ಷಾಂತರ ವರ್ಷಗಳು ತೆಗೆದುಕೊಂಡಿದ್ದು,ಮಣ್ಣನ್ನು ಗೌರವಿಸಲು ನಮ್ಮ ಕರ್ತವ್ಯ.ಅತ್ಯಂತ ಮುಖ್ಯ ಸಂಪನ್ಮೂಲಗಳಲ್ಲಿ ಒಂದಾಗಿದ್ದು ಮತ್ತೊಂಮ್ಮೆ ಮಗದೊಮ್ಮೆ ಪಡೆಯುವದು ಅಸಾಧ್ಯ.ಒಂದು ವೇಳೆ ನಾವು ಇದನ್ನು ನಿರ್ಲಕ್ಷಿಸಿದಲ್ಲಿ ಮುಂದೊಂದು ದಿನ ಮಣ್ಣಿನ ಅಭಾವದಿಂದ ಜೀವ ಉಳಿಸಿಕೊಳ್ಳಲು ಸಹ ಕಷ್ಟವಾಗುತ್ತದೆ.ಆದ್ದರಿಂದ ಮಣ್ಣು,ವಿಶೇಷವಾಗಿ ಮೇಲ್ಮಣ್ಣು ಸವಕಳಿಯಾಗದಂತೆ ಮುಂಜಾಗ್ರತೆ ವಹಿಸಬೇಕು.
ಮಣ್ಣಿನ ಪದರಗಳು
ಮಣ್ಣುನ್ನು ಮೂರು ಮೂಲಭೂತ ಭಾಗಗಳಾಗಿ ವಿಂಗಡಿಸಬಹುದು.
೧.ಮೇಲ್ಮಣ್ಣು:ಮೇಲ್ಮಣ್ಣು ಸಾಮಾನ್ಯವಾಗಿ ಕಪ್ಪು ಬಣ್ಣದಲ್ಲಿದ್ದು ರಾಸಾಯನಿಕಗಳಲ್ಲಿ ಶ್ರೀಮಂತವಾಗಿರುತ್ತದೆ.ಈ ಪದರವು ಸಸ್ಯಗಳ ಬೆಳವಣಿಗೆಗೆ ಪೋಷಕಾಂಶಗಳನ್ನು ಮತ್ತು ನೀರನ್ನು ನೀಡುತ್ತದೆ.
೨.ಸಬ್ ಸೊಯಿಲ್:ಮೇಲ್ಮಣ್ಣಿನ ಕೆಳ ಪರದರ ಸಾಮಾನ್ಯವಾಗಿ ಮಂಕಾಗಿರುತ್ತದೆ.ಇದು ಸಸ್ಯಗಳ ಬೇರುಗಳನ್ನು ಲಂಗರು ಮಾಡುವುದರಲ್ಲಿ ಮತ್ತು ನೀರನ್ನು ಒದಗಿಸುವುದರಲ್ಲಿ ಸಹಾಯ ಮಾಡುತ್ತದೆ.
೩.ಮೂಲ ವಸ್ತು:ಇದರಿಂದ ಮಣ್ಣು ರೂಪುಗೊಳ್ಳುತ್ತದೆ.
ಮಣ್ಣಿನ ಸವಕಳಿ
ಒಂದು ಮಳೆಹನಿಯು ಭೂಮಿಯ ಮೇಲೆ ಬಿದ್ದಾಗ ಮಣ್ಣುನ್ನು ರಕ್ಷಿಸಲು ಸಸ್ಯವರ್ಗ ಮತ್ತು ಅಲ್ಲಿನ ಮರ ಗಿಡಗಳ ಬೇರುಗಳು ಮಣ್ಣನ್ನು ಹಿಡಿದಿಟ್ಟು ಕೊಳ್ಳದಿದ್ದಲ್ಲಿ,ಇದು ಪಿಸ್ತೂಲಿನ ಗುಂಡಿನಷ್ಟು ಪ್ರಭಾವಕಾರಿಯಾಗಿರುತ್ತದೆ.ಮಣ್ಣಿನ ಕಣಗಳು ಸಡಿಲಗೊಂಡೂ,ಇಳಿಜಾರಿನ ಕೆಳಗೆ ತೊಳೆದು ಕಣಿವೆಯಲ್ಲಿ ಕೊನೆಗೊಳ್ಳುತ್ತದೆ.ಅಥವಾ ತೊರೆ ಮತ್ತು ನದಿಗಳ ಮೂಲಕ ಸಮುದ್ರಕ್ಕೆ ಸೇರುತ್ತದೆ. ಮೊದಲು ಭೂಮಿಯ ಪೋಷಕಾಂಶಭರಿತ ಪದರವಾದ ಮೇಲ್ಮೈ ಮಣ್ಣು ತೆಗೆಯಲ್ಪಡುತ್ತದೆ.ನಂತರ ಕೆಲವು ಸಸ್ಯಗಳು ಮಾತ್ರ ಇಂತಹ ಮಂಣ್ಣಿನಲ್ಲಿ ಬೆಳೆಯಲು ಸಾದ್ಯ.ಮಣ್ಣು ಮತ್ತು ಸಸ್ಯಗಳು ಇಲ್ಲದ ಭೂಮಿಯು ಮರುಭೂಮಿಯಂತಾಗಿ,ಜೀವರಾಸಾಯನಿಕಗಳು ಕ್ಷೀಣಿಸುತ್ತವೆ.ಇದರ ಪರಿಣಾಮವಾಗಿ ಮಣ್ಣಿನ ಸವಕಳಿ ಉಂಟಾಗುತ್ತದೆ.ಕೃಷಿ ಪದ್ದತಿಗಳು ಕ್ರಮಬದ್ಧವಾಗಿರದಿದ್ದಲ್ಲಿ ಮಣ್ಣಿನ ಸವಕಳಿ ಉಂಟಾಗುತ್ತದೆ.ಅದರ ಜೊತೆಗೆ ಅತಿಯಾಗಿ ಮೇಹಿಸುವಿಕೆ,ಬೆಳೆಗಳ ಉತ್ಪಾದನೆ ಅಥವಾ ಇಳುವರಿಯನ್ನು ಹೆಚ್ಚಿಸಲು ಭೂಮಿಯನ್ನು ವರ್ಷಕ್ಕೆ ಎರಡರಿಂದ ಮೂರು ಬಾರಿ ಆಳವಾಗಿ ಉಳಿಮೆ ಮಾಡುವ ತಂತ್ರಗಳಿಂದಾಗಿ ಮಣ್ಣಿನ ಸವಕಳಿ ಸಂಭವಿಸುತ್ತದೆ.
ನಿಮಗೆ ಗೊತ್ತಿದೆಯೇ
- ದಕ್ಷಿಣ ಆಫ್ರಿಕಾದಲ್ಲಿ ವಾರ್ಷಿಕ ಮಣ್ಣು ನಷ್ಟ ಅಂದಾಜು ೩೦೦ - ೪೦೦ ಮಿಲಿಯನ್ ಟನ್ಸ್, ಪ್ರತೀ ಹೆಕ್ಟೇರ್ ಭೂಮಿಗೆ ಸುಮಾರು ಮೂರು ಟನ್ ಎಂದು ಅಂದಾಜಿಸಲಾಗಿದೆ.
- ಪ್ರತಿ ಟನ್ ಮೆಕ್ಕೆ ಜೋಳ, ಗೋಧಿ , ಸಕ್ಕರೆ ಅಥವಾ ಇತರ ಯಾವುದೇ ಕೃಷಿ ಬೆಳೆಯ ನಿರ್ಮಾಣಕ್ಕೆ ದಕ್ಷಿಣ ಆಫ್ರಿಕಾ ಸರಾಸರಿ ೨೦ ಟನ್ ಮಣ್ಣನ್ನು ಕಳೆದುಕೊಳ್ಳುತ್ತದೆ.
- ಆಹಾರ ಮತ್ತು ಕೃಷಿ ಸಂಸ್ಥೆ (ವಿಶ್ವಸಂಸ್ಥೆಯ ಒಂದು ಶಾಖೆ)ಯ ಪ್ರಕಾರ, ಸವೆತದ ಮೂಲಕ ಉತ್ಪಾದಕ ಭೂಮಿಯ ಜಾಗತಿಕ ನಷ್ಟ ೫-೭ ಮಿಲಿಯನ್ ಹೆಕ್ಟೇರು ಪ್ರತಿ ವರ್ಷ ಎಂದು ಅಂದಾಜಿದಲಾಗಿದೆ.
ಒಂದು ಮಳೆಹನಿಯು ಭೂಮಿಯ ಮೇಲೆ ಬಿದ್ದಾಗ ಮಣ್ಣುನ್ನು ರಕ್ಷಿಸಲು ಸಸ್ಯವರ್ಗ ಮತ್ತು ಅಲ್ಲಿನ ಮರ ಗಿಡಗಳ ಬೇರುಗಳು ಮಣ್ಣನ್ನು ಹಿಡಿದಿಟ್ಟು ಕೊಳ್ಳದಿದ್ದಲ್ಲಿ,ಇದು ಪಿಸ್ತೂಲಿನ ಗುಂಡಿನಷ್ಟು ಪ್ರಭಾವಕಾರಿಯಾಗಿರುತ್ತದೆ.ಮಣ್ಣಿನ ಕಣಗಳು ಸಡಿಲಗೊಂಡೂ,ಇಳಿಜಾರಿನ ಕೆಳಗೆ ತೊಳೆದು ಕಣಿವೆಯಲ್ಲಿ ಕೊನೆಗೊಳ್ಳುತ್ತದೆ.ಅಥವಾ ತೊರೆ ಮತ್ತು ನದಿಗಳ ಮೂಲಕ ಸಮುದ್ರಕ್ಕೆ ಸೇರುತ್ತದೆ. ಮೊದಲು ಭೂಮಿಯ ಪೋಷಕಾಂಶಭರಿತ ಪದರವಾದ ಮೇಲ್ಮೈ ಮಣ್ಣು ತೆಗೆಯಲ್ಪಡುತ್ತದೆ.ನಂತರ ಕೆಲವು ಸಸ್ಯಗಳು ಮಾತ್ರ ಇಂತಹ ಮಂಣ್ಣಿನಲ್ಲಿ ಬೆಳೆಯಲು ಸಾದ್ಯ.ಮಣ್ಣು ಮತ್ತು ಸಸ್ಯಗಳು ಇಲ್ಲದ ಭೂಮಿಯು ಮರುಭೂಮಿಯಂತಾಗಿ,ಜೀವರಾಸಾಯನಿಕಗಳು ಕ್ಷೀಣಿಸುತ್ತವೆ.ಇದರ ಪರಿಣಾಮವಾಗಿ ಮಣ್ಣಿನ ಸವಕಳಿ ಉಂಟಾಗುತ್ತದೆ.ಕೃಷಿ ಪದ್ದತಿಗಳು ಕ್ರಮಬದ್ಧವಾಗಿರದಿದ್ದಲ್ಲಿ ಮಣ್ಣಿನ ಸವಕಳಿ ಉಂಟಾಗುತ್ತದೆ.ಅದರ ಜೊತೆಗೆ ಅತಿಯಾಗಿ ಮೇಹಿಸುವಿಕೆ,ಬೆಳೆಗಳ ಉತ್ಪಾದನೆ ಅಥವಾ ಇಳುವರಿಯನ್ನು ಹೆಚ್ಚಿಸಲು ಭೂಮಿಯನ್ನು ವರ್ಷಕ್ಕೆ ಎರಡರಿಂದ ಮೂರು ಬಾರಿ ಆಳವಾಗಿ ಉಳಿಮೆ ಮಾಡುವ ತಂತ್ರಗಳಿಂದಾಗಿ ಮಣ್ಣಿನ ಸವಕಳಿ ಸಂಭವಿಸುತ್ತದೆ.
ಶೀಟ್ ಸವೆತ:ಒಂದು ಕ್ಷೇತ್ರದಲ್ಲಿ ಸಂಪೂರ್ಣ ಮೆಲ್ಮೈ ಕ್ರಮೇಣ ಏಕ ರೀತಿಯಲ್ಲಿ ಕೊರೆತ ಉಂಟಾದಾಗ ಶೀಟ್ ಸವೆತ ಉಂಟಾಗುತ್ತದೆ.ಮಣ್ಣಿನ ಸವೆತ ಉಂಟಾದ ತಕ್ಷಣವೇ ಶೀಟ್ ಸವೆತ ಉಂಟಾಗುವುದಿಲ್ಲ.ಇದೊಂದು ಕ್ರಮೇಣ ಪ್ರಕ್ರಿಯೆ.
ಗಲ್ಲಿ ಸವೆತ:ಇಳಿಜಾರು ಪ್ರದೇಶಗಳಲ್ಲಿ ಮಣ್ಣು ಮತ್ತು ನವಿರಾದ ಕಲ್ಲುಗಳ ತೆಗೆಯುವಿಕೆಯಿಂದಾಗಿ ಗಲ್ಲಿ ಸವೆತ ಉಂಟಾಗುತ್ತದೆ.ಇದು ಸಾಮಾನ್ಯವಾಗಿ ಕಡಿದಾದ ಭೂಮಿಯ ಮೇಲೆ ಅಪಾಯಕಾರಿಯಾಗಿ ಉಂಟಾಗುತ್ತದೆ.
ರಿಲ್ ಸವೆತ
(ಚಾನಲ್ ಸವೆತ):ರಿಲ್ ಸವೆತ ಎಂಬುದು ಕಡಿದಾದ ಭೂಮಿಯ ಮೇಲೆ ಅಥವಾ ನಿಧಾನವಾಗಿ,ಇಳಿಜಾರು ಭೂಮಿಯ ಮೇಲೆ ಸಂಭವಿಸುತ್ತದೆ.ಈ ಚಾನಲ್ ಗಳಿಂದ ಮಣ್ಣು ತೊಳೆದು ಹೋಗಿ ವಾಹಿನಿಗಳು ಅಥವಾ ಚಿಕಣಿ ಕ್ಷೇತ್ರಗಳಲ್ಲಿ ಸವೆತ ಉಂಟಾಗುತ್ತದೆ[೨]
ಗಾಳಿಯಿಂದ ಸವೆತ
ಭೂಪ್ರದೇಶಗಳು,ಕಡಿಮೆ ಮಳೆಯ ಪರಿಣಾಮವಾಗಿ,ಗಾಳಿಯಿಂದ ಮಣ್ಣಿನ ಸಾಗುವಿಕೆ ಉಂಟಾಗಿ ಮಣ್ಣಿನ ಸವಳಿಕೆ ಉಂಟಾಗುತ್ತದೆ.
ನೈಸರ್ಗಿಕ ಸವೆತ
ನ್ಯೂಜಿಲ್ಯಾಂಡ್ ಭೂದೃಶ್ಯವು ಕನಿಷ್ಟ ೨೫ ಮಿಲಿಯನ್ ವರ್ಷಗಳಿಂದ ಗಾಳಿ,ನೀರು,ಜ್ವಾಲಾಮುಖಿಗಳು ಮತ್ತು ಹಿಮ ನದಿಗಳಿಂದ ರೂಪಿಸಲ್ಪಟ್ಟಿದೆ.ಇವುಗಳಿಂದಾಗಿ ಸ್ವಾಭಾವಿಕವಾಗಿ ಮಣ್ಣಿನ ಸವಕಳಿ ಉಂಟಾಗುತ್ತದೆ.
ತ್ವರಿತ ಸವೆತ
ಭೂಕಂಪಗಳು,ಚಂಡಮಾರುತಗಳು ಅಥವಾ ಮಾನವನ ಚಟುವಟೆಕೆಗಳಾದ ಮರಗಳ ಕಡಿಯುವಿಕೆಯೆಂದಾಗಿ ಅತಿ ಹೆಚ್ಚು ವೇಗವಾಗಿ ಮಣ್ಣಿನ ಸವಕಳಿ ಉಂಟಾಗುತ್ತದೆ.
ಪ್ರಾಣಿಗಳಿಂದಾಗಿ ಮಣ್ಣಿನ ಸವಕಳಿ
ದೇಶೀಯ ಮತ್ತು ಕಾಡ ಜಾನುವಾರು ಪ್ರಾಣಿಗಳು ಮಣ್ಣಿನ ತ್ವರಿತ ಸವೆತದಲ್ಲಿ ಪಾತ್ರ ಪಡೆದುಕೊಂಡಿವೆ.
೧.ನ್ಯೂಜಿಲ್ಯಾಂಡ್ ನಲ್ಲಿ ೧೮೩೮ರಲ್ಲಿ ಮೊದಲ ಬಾರಿಗೆ ಮೊಲಗಳು ತ್ವರಿತ ಸವೆತ ಉಂಟುಮಾಡುತ್ತವೆಯೆಂದು ಧ್ವನಿ ಮುದ್ರಿಸಲಾಯಿತು ಮತ್ತು ೧೮೯೦ರಲ್ಲಿ ಪ್ರಮುಖ ಸಮಸ್ಯೆಗಳನ್ನು ಉಂಟು ಮಾಡಿದವು.
೨.೧೯ನೇ ಶತಮಾನದ ಮಧ್ಯಭಾಗಬದಲ್ಲಿ ತಮ್ಮ ಧ್ವನಿಯೆತ್ತಿ ಪರಿಚಯಿಸಲಾದ ಪ್ರಾಣಿಗಳು ಜಿಂಕೆ ಮತ್ತು ದಂಶಕಗಳು.ಇವು ಅರಣ್ಯ ಪರಿಸರದ ಸಮತೋಲನವನ್ನು ಬಿಗಡುಮಾಡಿದವು.
೩.ಕುರಿಗಳ ಮತ್ತು ಜಾನವಾರುಗಳ ಅತಿಯಾದ ಮೇಯಿಸುವಿಕೆಯಿಂದಾಗಿ ಉತ್ತರ ಮತ್ತು ದಕ್ಷಿಣ ಧ್ವೀಪಗಳಲ್ಲಿ ಮಣ್ಣಿನ ಸವಕಳಿ ಉಂಟಾಯಿತು.
ಮಣ್ಣಿನ ಸವೆತವನ್ನು ನಿರ್ಧರಿಸುವ ಅನೇಕ ಅಂಶಗಳು
೧.=ಇಳಿಜಾರು= ಹೆಚ್ಚಿನ ಇಳಿಜಾರು ಇದ್ದರೆ,ನೀರಿನ ಹರಿಯುವಿಕೆ ಹೆಚ್ಚುತ್ತದೆ.ಇದರಿಂದಾಗಿ ಹೆಚ್ಚಿನ ಮಣ್ಣಿನ ಸವೆತ ಸಂಭವಿಸುತ್ತದೆ.ಇದರ ಜೊತೆಗೆ ಇಳಿಜಾರಿ ಉದ್ದ ಬಹಳ ಮುಖ್ಯ ಪಾತ್ರ ವಹಿಸುತ್ತದೆ.
೨.=ಮಣ್ಣಿನ ರಚನೆ= ಮಣ್ಣಿನ ರಚನೆ ಎಂದರೆ ಮಣ್ಣಿನ ಕಣಗಳ ಗಾತ್ರ ಮತ್ತು ವಿತರಣೆ.ಕಣಗಳ ಗಾತ್ರ ಎಂದಿಗೂ ಬದಲಾಗುವುದಿಲ್ಲ.ಆದ್ದರಿಂದ ಮರಳು ಎಂದಿಗೂ ಮರಳಾಗಿ ಮತ್ತು ಜೇಡಿ ಮಣ್ಣು ಎಂದಿಗೂ ಜೇಡಿ ಮಣ್ಣಾಗಿಯೇ ಉಳಿದು ಬಿಡುತ್ತದೆ.
ಸವೆತದ ವೆಚ್ಚ
ಹಿಲ್ ದೇಶದ ಸವೆತ,ವಾರ್ಷಿಕವಾಗಿ ಸುಮಾರು $೧೦೦ ಮಿಲಿಯನ್ ನಿಂದ $೧೫೦ ಮಿಲಿಯನ್ ಗಳವರೆಗೆ ವೆಚ್ಚ ಉಂಟಾಗುವುದೆಂದು ಅಂದಾಜಿಸಲಾಗಿದೆ. ಇದರ ಭಾಗವಾಗಿ ಉತ್ಪಾದನೆ ಮತ್ತು ಪೋಷಕಾಂಶಗಳು ಸಹ ಕ್ಷೀಣಿಸುತ್ತಿವೆ.
ಜೈವಿಕ ನಿಯಂತ್ರಣವು ,ಯಾಂತ್ರಿಕ ನಿಯಂತ್ರಣ ವಿಧಾನಗಳಿಗಿಂತ ಅಗ್ಗದ್ದು.ಆದರೆ ಹೆಚ್ಚು ಅಪಾಯಕಾರಿ.ಉದಾಹಣೆಗೆ: ಮರಗಳು:ಮರಗಳು ಸವೆತವನ್ನು ಕಡಿಮೆಗೊಳಿಸತ್ತುವೆ.
೧.ಮಳೆಯ ಪರಿಣಾಮದಿಂದ ಮಣ್ಣನ್ನು ಮಣ್ಣನ್ನು ಸಂರಕ್ಷಿಸುತ್ತದೆ.
೨.ತಮ್ಮ ಬೇರುಗಳಿಂದ ಮಣ್ಣನ್ನು ಹಿಡಿಡಿಟ್ಟುಕೊಳ್ಳುತ್ತದೆ.
ಯಾಂತ್ರಿಕ ವಿಧಾನಗಳು:
ಅಣಿಕಟ್ಟುಗಳು:ಗಲ್ಲಿಗಳು ನೆಲದಲ್ಲಿ ಶಿಲಾಖಂಡರಶಿಗಳ ಅಣಿಕಟ್ಟುಗಳು ನೆಲೆಗೊಂಡಿವೆ.
೫.ಮಣ್ಣಿನ ಸವಕಳಿಯನ್ನು ತಡೆಗಟ್ಟಲು,ಹುಲ್ಲು ನೈಸರ್ಗಿಕ ಸಂರಕ್ಷಣೆ ನೀಡುತ್ತದೆ.
ಮಣ್ಣಿನ ಸವಕಳಿಯ ಕಾರಣಗಳು
ಗಾಳಿ ಮತ್ತು ನೀರು ಮಣ್ಣಿನ ಸವೆತಕ್ಕೆ ಪ್ರಮುಖ ಅಂಶಗಳು.
- ವೇಗ - ವೇಗವಾಗಿ ಚಲಿಸುವ ಗಾಳಿ ಹೆಚ್ಚಿನ ಪ್ರಮಾಣದ ಮಣ್ಣನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುತ್ತದೆ , ಇದು ಮಣ್ಣಿನ ಸವೆತಕ್ಕೆ ಕಾರಣವಾಗಿದೆ.
- ಸಸ್ಯಗಳ ಕವಚ - ಸಸ್ಯಗಳು ಮಣ್ಣಿನ್ನು ರಕ್ಷಿಸುತ್ತದೆ ಮತ್ತು ಇವುಗಳ ಅನುಪಸ್ಥಿತಿಯಲ್ಲಿ ಗಾಳಿ ಮತ್ತು ನೀರು ಮಣ್ಣಿಗೆ ಹೆಚ್ಚು ಹಾನಿ ಮಾಡಬಹುದು.
ಮರಗಳ ಪ್ರಾಮುಖ್ಯತೆಗಳು
ಮರಗಳು ಮಣ್ಣಿನ ಸವೆತಕ್ಕೆ ರಕ್ಷಣಾತ್ಮಕ ಕವಚ ಒದಗಿಸುತ್ತದೆ:
- ರಭಸವಾಗಿ ಬೀಳುವ ಮಳೆಯನ್ನು ಮರಗಳು ತಡೆಯುತ್ತದೆ ಹಾಗು ಇದರಿಂದ ಮಣ್ಣಿನ ಸವೆತವನ್ನು ನಿಯಂತ್ರಿಸುತ್ತದೆ.
- ಮರಗಳು ತಮ್ಮ ಬೇರುಗಳಿಂದ ಮಣ್ಣನ್ನು ಹಿಡಿದಿಟ್ಟು ಕೊಳ್ಳುತ್ತದೆ ಹಾಗು ಮಣ್ಣು ತೊಳೆದು ಹೊಗುದನ್ನು ತಡೆಗಟ್ಟುತ್ತದೆ;
- ಗದ್ದೆಗಳು ಮತ್ತು ನದಿಗಳ ತೀರದಲ್ಲಿ ಸಸ್ಯಗಳು ನಿರ್ದಿಷ್ಟ ಪ್ರಾಮುಖ್ಯತೆಯನ್ನು ಹೊಂದಿವೆ.[೩]
೧.ಸಸ್ಯಗಳು ಮಳೆ ನೀರನ್ನು ಹಿಡೆದಿಟ್ಟುಕೊಳ್ಳುತ್ತವೆ ಮತ್ತು ನೆಲದ ತೇವಾಂಶವನ್ನು ಹೆಚ್ಚಿಸುತ್ತವೆ.
೨.ಸಸ್ಯದ ಬೇರುಗಳು ಮಣ್ಣನ್ನು ಸ್ಥಾನದಲ್ಲಿಟ್ಟು ಮಣ್ಣಿನ ಸವಕಳಿಯನ್ನು ಕಡಿಮೆ ಮಾಡುತ್ತವೆ.
೩.ಮಳೆ ಹನಿಯು ಭೂಮಿಯ ಮೇಲೆ ಬೀಳುವ ಮುನ್ನವೇ ಸಸ್ಯಗಳು ಮಳೆಹನಿಯ ಸಾಮರ್ಥ್ಯವನ್ನು ಕಡಿಮೆ ಮಾಡುತ್ತವೆ.
೪.ಇಳಿಜಾರು ಪ್ರದೇಶ ಮತ್ತು ನದಿಗಳ ತೀರದಲ್ಲಿವ ಸಸ್ಯಗಳು ಮಣ್ಣಿನ ಸವಕಳಿಯನ್ನು ತಡೆಗಟ್ಟುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
೫.ಮಣ್ಣಿನ ಸವಕಳಿಯನ್ನು ತಡೆಗಟ್ಟಲು,ಹುಲ್ಲು ನೈಸರ್ಗಿಕ ಸಂರಕ್ಷಣೆ ನೀಡುತ್ತದೆ.
ಮಣ್ಣಿನ ಸವಕಳಿ ತಡೆಯುವ ವಿಧಾನ
೧.ಭೂ ಮೇಲ್ಪದರದ ಅಗೆತ ಮತ್ತು ವಿಂಡ್ ಬ್ರೇಕ್ಸ್ ಬಳಕೆ.
೨.ನಾಟಿ ಭೂಮಿಯ ನಡುವೆ ಹುಲ್ಲು ಪಟ್ಟಿಗಳನ್ನು ಬಿಡುವುದು.(ಸ್ಟ್ರಿಪ್ ಕೊಯ್ಲು)
೩.ಮಣ್ಣಿನಲ್ಲಿ ಯಾವಾಗಲು ಸಸ್ಯಗಳು ಬೆಳೆಯುತ್ತಿವೆಯೆಂದು ಖಚಿತಪಡಿಸಿಕೊಳ್ಳಬೇಲಕು.ಏಕೆಂದರೆ ಇದರಿಂದಾಗಿ ಮಾತ್ರ ಮಣ್ಣಿನ ತೇವಾಂಶ ಸಮೃದ್ಧಿಯಾಗುತ್ತದೆ.
೪.ಅತಿಯಾಗಿ ಮೇಯಿಸುವುದನ್ನು ತಪ್ಪಿಸಬೇಕು.
೫.ನದಿಗಳ ದಡದಲ್ಲಿ ಸ್ಥಳೀಯ ಸಸ್ಯಗಲು ಬೆಳೆಯುವಂತೆ ನೋಡಿಲಕೊಳ್ಳಬೇಕು.
೬.ಗದ್ದೆಗಳನ್ನು ಸಂರಕ್ಷಿಸಬೇಕು.
೭.ಸರದಿ ವ್ಯವಸ್ಥೆಯ ಮೂಲಕ ಬೆಳೆಗಳನ್ನು ಬೆಳೆಯಬೇಕು.
೮.ನೀರಿನ ಒಳ ನುಸುಳುವಿಕೆ ಪ್ರೋತ್ಸಾಹಿಸಬೇಕು.ನೀರು ಹರಿದು ಹೋಗದಂತೆ ತಡೆಗಟ್ಟಬೇಕು[೪]
ಕೆಳಗಿನ ಕ್ರಮಗಳನ್ನು ಮಣ್ಣಿನ ಸವಕಳಿ ತಡೆಗಟ್ಟಲು ಕಾರ್ಯಗತಗೊಳಿಸಬಹುದು
- ಭೂ ಮೇಲ್ಪದರದ ಅಗೆತ.
- ನಾಟಿ ಭೂಮಿಯ ನಡುವೆ ಉಳದ ಹುಲ್ಲು ಪಟ್ಟಿಗಳನ್ನು ಬಿಡಿ ( ಸ್ಟ್ರಿಪ್ ಕೊಯ್ಲು).
- ಯಾವಾಗಲೂ ಮಣ್ಣಿನಲ್ಲಿ ಬೆಳೆಯುವ ಸಸ್ಯಗಳು, ಮತ್ತು ಮಣ್ಣಿನ ಹ್ಯೂಮಸ್ ಸಮೃದ್ಧವಾಗಿವೆ ಎಂದು ಖಚಿತಪಡಿಸಿಕೊಳ್ಳಿ.
- ಅತಿಯಾಗಿ ಮೇಯಿಸುವಿಕೆ ತಪ್ಪಿಸಿ.
- ಬೆಳೆಗಳ ಸರದಿ ವ್ಯವಸ್ಥೆಯನ್ನು ಬಳಸಿಕೊಂಡು ಭೂಮಿಲ್ಲಿ ಕೃಷಿ ಮಾಡುವುದು.
- ನೀರಿನ ಒಳನುಸುಳುವಿಕೆ ಪ್ರೋತ್ಸಾಹಿಸಿ ಮತ್ತು ನೀರು ಹರಿಯುವಿಕೆ ಕಡಿಮೆಗೊಳಿಸುವುದು.[೫]
ಮಣ್ಣಿನ ಸಂರಕ್ಷಣೆ ಮತ್ತು ನದಿಗಳ ನಿಯಂತ್ರನ ಕಾಯ್ದೆ
೧೯೪೧ರಲ್ಲಿ ಮಣ್ಣಿನ ಸಂರಕ್ಷಣೆ ಮತ್ತು ನದಿಗಳ ನಿಯಂತ್ರಣ ಕಾಯ್ದೆಯು ಜಾರಿಗೆ ಬಂತು.ಮಣ್ಣಿನ ಸಂರಕ್ಷಣೆ ಮತ್ತು ನದಿಗಳ ಕಂಟ್ರೋಲ್ ಕೌನ್ಸಿಲ್ ಸ್ಥಾಪಿಸಲಾಯಿತು.ಈ ಮಂಡಳಿಯ ಗುರಿಗಳು:
೧.ಮಣ್ಣು ಸಂರಕ್ಷಣಾ ಪ್ರಚಾರ.
೨.ಮಣ್ಣಿನ ಸವಕಳಿಯನ್ನು ತಗ್ಗಿಸಿ,ತಡೆಗಟ್ಟುವುದು
೩.ಪ್ರವಾಹ ಹಾನಿಯನ್ನು ತಡೆಗಟ್ಟುವುದು.
೪.ಈ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಭೂಮಿಯ ಬಳಕೆ.
೫.ಸಂಗ್ರಹಣಾ ಮಂಡಳಿಗಳ ಸ್ಥಾಪನೆ.
ಈ ಮಂಡಳಿಗಳ ಮುಖ್ಯ ಉದ್ದೇಶವೆಂದರೆ,ರಪ್ರವಾಹ ಮತ್ತು ಮಣ್ಣು ಸವಕಳಿಯಿಂದಾಗಿ ಉಂಟಾಗುವ ಹಾನಿಯನ್ನು ತಡೆಗಟ್ಟುವುದು.೧೯೪೫ ರಲ್ಲಿ ೧೧ ಮಂಡಳಿಗಳು ರಚಿಸಲಾಗಿದ್ದು,೧೯೬೭ ರಲ್ಲಿ ಇದೇ ರೀತಿಯ ಆರು ಆಯೋಗಗಳು ರಚಿಸಲ್ಪಟ್ಟವು.
ಹೊರಗಿನ ಸಂಪರ್ಕಗಳು
http://www.botany.uwc.ac.za/envfacts/facts/erosion.htm Archived 2015-12-20 ವೇಬ್ಯಾಕ್ ಮೆಷಿನ್ ನಲ್ಲಿ. http://www.nda.agric.za/docs/erosion/erosion.htm Archived 2015-12-19 ವೇಬ್ಯಾಕ್ ಮೆಷಿನ್ ನಲ್ಲಿ. http://wwf.panda.org/what_we_do/footprint/agriculture/impacts/soil_erosion/
ಉಲ್ಲೇಖಗಳು
ಉಲ್ಲೇಖಗಳು
- ↑ http://www.worldwildlife.org/threats/soil-erosion-and-degradation
- ↑ "ಮಣ್ಣಿನ ಸವಕಳಿ".
- ↑ "ಆರ್ಕೈವ್ ನಕಲು". Archived from the original on 2015-12-20. Retrieved 2015-12-12.
- ↑ "ಮಣ್ಣಿನ ಸವಕಳಿ".
- ↑ "ಆರ್ಕೈವ್ ನಕಲು". Archived from the original on 2015-12-19. Retrieved 2015-12-12.