ಮಾರ್ಸ್ ಆರ್ಬಿಟರ್ ಮಿಷನ್

ಕಲಾವಿದನ ಕಲ್ಪನೆಯಲ್ಲಿ ಮಂಗಳಗ್ರಹವನ್ನು ಸುತ್ತುತ್ತಿರುವ ಮಂಗಳಯಾನ ಉಪಗ್ರಹ

ಮಂಗಳಯಾನ

ಮಾರ್ಸ್ ಆರ್ಬಿಟರ್ ಮಿಷನ್ ಅಥವಾ ಮಂಗಳಯಾನ ಎಂದು ಕರೆಯಲ್ಪಡುವ ಕಾರ್ಯಕ್ರಮವು ಭಾರತವು ಮಂಗಳಗ್ರಹದ ಅನ್ವೇಷಣೆಗೆ ಕಳುಹಿಸುತ್ತಿರುವ ಉಪಗ್ರಹ. ಇದನ್ನು ನವಂಬರ್ 5,2013 ರಂದು ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ(ಇಸ್ರೋ) ಯಶಸ್ವಿಯಾಗಿ ಉಡ್ಡಯನ ಮಾಡಿತು. ಈ ರೀತಿಯ ಕಾರ್ಯಾಚರಣೆಗೆ ಬೇಕಿರುವ ವಿನ್ಯಾಸ, ಯೋಜನೆ, ನಿರ್ವಹಣೆ, ಮತ್ತು ಕಾರ್ಯಾಚರಣಾ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು ಈ 'ತಾಂತ್ರಿಕ ಸಾಮರ್ಥ್ಯ ಪ್ರದರ್ಶಕ' ಯೋಜನೆಯು ಉದ್ದೇಶವಾಗಿದೆ.

.The Mars Orbiter Mission probe lifted-off from the First Launch Pad at Satish Dhawan Space Centre SHAR, Sriharikota,Andhra Pradesh, using a Polar Satellite Launch Vehicle (PSLV) rocket C25 at 09:08 UTC (14:38 IST) on 5 November 2013 (English wikipedea [[೧]]

ಈ ಉಪಗ್ರಹವನ್ನು ಇಸ್ರೋ ಸಂಸ್ಥೆಯು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಉಡ್ಡಯನ ಕೇಂದ್ರದಿಂದ ಪಿ.ಎಸ್.ಎಲ್.ವಿ ರಾಕೆಟ್ ಸಿ೨೫ ಅನ್ನು ಬಳಸಿ ೫ನೇ ನವೆಂಬರ್ ೨೦೧೩ರಂದು ೦೯:೦೮ UTC (ಭಾರತೀಯ ಕಾಲಮಾನ ೧೪:೩೮)ರ ಸಮಯದಲ್ಲಿ ಉಡ್ಡಯನ ಮಾಡಿತು. ಇದು ಭೂಕಕ್ಷೆಯಲ್ಲಿ ಸುಮಾರು ಒಂದು ತಿಂಗಳಿದ್ದು, ಡಿಸೆಂಬರ್ ೧,೨೦೧೩ರಂದು ಹೆಲಿಯೋಸೆಂಟ್ರಿಕ್ ಮಾರ್ಸ್ ಟ್ರಾನ್ಸ್‍ಫರ್ ಆರ್ಬಿಟ್ {ಮಂಗಳಗ್ರಹದ ದಾರಿಯ ಕಕ್ಷೆ}ಯಲ್ಲಿ ಯಶಸ್ವಿಯಾಗಿ ಇಡಲ್ಪಟ್ಟಿದೆ. ಮುಂದೆ ಸುಮಾರು ಒಂಭತ್ತು ತಿಂಗಳ ಕಾಲ ಮಂಗಳ ಗ್ರಹದತ್ತ ಚಲಿಸುವ ಉಪಗ್ರಹವನ್ನು ಸೆಪ್ಟೆಂಬರ್ ೨೪,೨೦೧೪ರಂದು ಮಂಗಳಗ್ರಹದ ಕಕ್ಷೆಗೆ ಸೇರಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ.ಮಾರ್ಸ್ ಆರ್ಬಿಟರ್ ಪ್ರಸ್ತುತ ಭೂಮಿಯಿಂದ ಸುಮಾರು ೭೮೦,೦೦೦ ಮಿಲ್ಲಿಯನ್ ಕಿಲೋಮೀಟರ್(೪೮೦ ಮಿಲ್ಲಿಯನ್ ಮೈಲಿ) ದೂರದಲ್ಲಿದೆ.

ಮಂಗಳಗ್ರಹದಲ್ಲಿ ಜೀವಿಗಳು ವಾಸಿಸುತ್ತಿರುವುದಕ್ಕೆ ಕುರುಹಾಗಿ ಮಿಥೇನ್ ಅನಿಲದ ಇರುವಿಕೆಯನ್ನು ಪತ್ತೆ ಹಚ್ಚುವುದು ಮತ್ತು ಅಲ್ಲಿನ ವಾತಾವರಣವನ್ನು ಅಧ್ಯಯನ ಮಾಡುವುದು ಇದರ ಮುಖ್ಯ ಉದ್ದೇಶಗಳಲ್ಲೊಂದು.(ನೋಡಿ: "ಅಂಗಾರಕನತ್ತ ಅಭಿಯಾನ ಆರಂಭ".)

ಸೂರ್ಯ ಪ್ರಭಾವಲಯಕ್ಕೆ ನೌಕೆ

ರಾಷ್ಟ್ರದ ಪ್ರಪ್ರಥಮ ಮಂಗಳ ನೌಕೆಯು ಶನಿವಾರ ಮಧ್ಯರಾತ್ರಿ ಭೂಮಿಯ ಗುರುತ್ವಾಕರ್ಷಣೆಯ ಬಂಧನದಿಂದ ಕಳಚಿಕೊಂಡು ಸೂರ್ಯನ ಪ್ರಭಾವಲಯವನ್ನು ಯಶಸ್ವಿಯಾಗಿ ಪ್ರವೇಶಿಸಿತು.
ರಾತ್ರಿ ೧೨.೪೯ಕ್ಕೆ ಭೂಮಿಯ ಕಕ್ಷೆಯಿಂದ ಹೊರಹೋಗಲು ಆರಂಭಿಸಿದ ಇಸ್ರೋ ನೌಕೆಯು ೨೩ ನಿಮಿಷಗಳ ನಂತರ ಸೌರ ಕಕ್ಷೆಯನ್ನು ಯಶಸ್ವಿಯಾಗಿ ಸೇರಿತು.
ಚೆನ್ನೈ: ಭಾರತದ ಮಹತ್ವಾಕಾಂಕ್ಷಿ ಮಂಗಳ ಕಕ್ಷೆಗಾಮಿ (ಮಾರ್ಸ್ ಆರ್ಬಿಟರ್) ಉತ್ತಮ ಸ್ಥಿತಿಯಲ್ಲಿದ್ದು, ಈ ತಿಂಗಳ ಅಂತ್ಯದಲ್ಲಿ ಅಂಗಾರಕನ ವಾತಾವರಣ ಪ್ರವೇಶಿಸಲು ಸಜ್ಜಾಗಿದೆ ಎಂದು ಇಸ್ರೊ ವಿಜ್ಞಾನಿಗಳು ತಿಳಿಸಿದ್ದಾರೆ.[]

ಮಂಗಳ ಕಕ್ಷೆಗೆ ನೌಕೆ


  • ಮಂಗಳ ಕಕ್ಷೆಗಾಮಿ ತನ್ನ ಶೇ.95ರಷ್ಟು ಪ್ರಯಾಣವನ್ನು ಮುಗಿಸಿದೆ. ಅಂದರೆ ಇದುವರೆಗೂ ಇದು 21.1 ಕೋಟಿ ಕಿ.ಮೀ.ದೂರ ಕ್ರಮಿಸಿದೆ. ಮಂಗಳನ ಕಕ್ಷೆ ತಲುಪಲು ಇನ್ನು ಬರೀ 40 ಲಕ್ಷ ಕಿ.ಮೀ. ಪಯಣವಷ್ಟೇ ಬಾಕಿಯಿದೆ. ಕಕ್ಷೆಗಾಮಿ ತನ್ನಲ್ಲಿರುವ ಹಲವು ಉಪಕರಣಗಳು ಉತ್ತಮ ಸ್ಥಿತಿಯಲ್ಲಿವೆ ಎಂಬ ಮಹತ್ವದ ಸಂದೇಶವನ್ನು ಕಳುಹಿಸಿದೆ. ಕಕ್ಷೆಗಾಮಿ ಮತ್ತು ಅದರಲ್ಲಿರುವ ಉಪಕರಣಗಳು ಸುರಕ್ಷಿತವಾಗಿವೆ, ಎಂದು ವಿಜ್ಞಾನಿಗಳು ಇಸ್ರೊ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದಾರೆ. 2.2 ಎಂ ಹೈ ಗೇನ್ ಆಂಟೆನಾದ ಮೂಲಕ 21.1 ಕೋಟಿ ಕಿ.ಮೀ.ದೂರದಿಂದ ಈ ಸಂದೇಶವನ್ನು ಕಕ್ಷೆಗಾಮಿ ಕಳುಹಿಸಿದೆ. ಕಕ್ಷೆಗಾಮಿಯಲ್ಲಿ ಇರುವ ಲಿಕ್ವಿಡ್ ಎಂಜಿನ್ ಕಳೆದ 10 ತಿಂಗಳಿನಿಂದ ಬಳಕೆಯಾಗದೆ ಉಳಿದಿದ್ದು, ಸೆ.24ರಂದು ಇದನ್ನು ಹೊತ್ತಿಸುವ ಮೂಲಕ ಮಂಗಳನ ಕಕ್ಷೆಗೆ ಕಕ್ಷೆಗಾಮಿಯನ್ನು ಅಂತಿಮವಾಗಿ ತಳ್ಳಲಾಗುತ್ತದೆ.
  • ಭಾರತದ ಮೊದಲ ಮಂಗಳಯಾನ 450 ಕೋಟಿ ವೆಚ್ಚದ ಯೋಜನೆಯಾಗಿದ್ದು, ಕಳೆದ ವರ್ಷದ ನ.5ರಂದು ಇದನ್ನು ಆಂಧ್ರಪ್ರದೇಶದ ಶ್ರೀ ಹರಿಕೋಟಾದಿಂದ ಉಡಾವಣೆ ಮಾಡಿ ಯಶಸ್ವಿಯಾಗಿ ಭೂ ಕಕ್ಷೆ ಸೇರಿಸಲಾಗಿತ್ತು. ಭೂ ಕಕ್ಷೆಯಲ್ಲಿ ಸುತ್ತಾಡಿಕೊಂಡಿದ್ದ ಕಕ್ಷೆಗಾಮಿಯನ್ನು ಡಿ.1ರಂದು ಮಂಗಳನ ಪಥಕ್ಕೆ ತಿರುಗಿಸಲಾಗಿತ್ತು. ಅವತ್ತಿನಿಂದ ಹಲವಾರು ಬಾರಿ ಕಕ್ಷೆಗಾಮಿಯ ಪಥವನ್ನು ತಿರುಗಿಸಲಾಗಿದೆ ಮತ್ತು ವೇಗವನ್ನು ಉತ್ಕರ್ಷ ಮಾಡಲಾಗಿದೆ. ಅಂತರ ಗ್ರಹ ಸಂಶೋಧನೆಗೆ ಉಪಗ್ರಹ ವಿನ್ಯಾಸದಲ್ಲಿ ಸ್ವಾವಲಂಬನೆ ಸಾಧಿಸುವುದು ಮತ್ತು ಮಂಗಳನ ವಾತಾವರಣ, ಅಲ್ಲಿರಬಹುದಾದ ಖನಿಜಗಳ ಅಧ್ಯಯನ ಈ ಯೋಜನೆಯ ಉದ್ದೇಶ.

ದಿ.16 ಸೆಪ್ಟಂಬರ್, 2014-ಮಂಗಳ ನೌಕೆ

ಮಂಗಳಯಾನದ ಯೋಜನೆ-(ಇಸ್ರೋದಿಂದ ಬಿಡುಗಡೆ)ಪ್ರಜಾವಾಣಿ ವರದಿ/೧೬-೯-೨೦೧೪
  • ಭಾರತದ ಮೊತ್ತಮೊದಲ ಅಂತರ ಗ್ರಹ ಕಾರ್ಯಕ್ರಮ ‘ಮಂಗಳಯಾನ’ (ಮಾರ್ಸ್ ಆರ್ಬಿಟರ್ ಮಿಷನ್) ನಿಗದಿತ ಯೋಜನೆಯಂತೆ ಸಾಗು­ತ್ತಿದೆ.
  • ‘ನೌಕೆ ಈಗ ಭೂಮಿಯಿಂದ 21.5 ಕೋಟಿ ಕಿ.ಮೀ. ದೂರ ಕ್ರಮಿಸಿದೆ. ಇಸ್ರೊ ಕೇಂದ್ರದಿಂದ ನೌಕೆಗೆ ಸಂಕೇತ ತಲುಪಲು 12 ನಿಮಿಷ ಹಿಡಿಯುತ್ತದೆ. ಇದೇ 24ಕ್ಕೆ 22.4 ಕೋಟಿ ಕಿ.ಮೀ. ದೂರ ತಲುಪಲಿದೆ. ಸದ್ಯ ನೌಕೆಯ ವೇಗ ಸೆಕೆಂಡ್‌ಗೆ 5.2 ಕಿ.ಮೀ. ಅಂದು ಈ ವೇಗವನ್ನು 4.1 ಕಿ.ಮೀ.ಗೆ ತಗ್ಗಿಸಿ ಮಂಗಳನ ಕಕ್ಷೆಗೆ ಸೇರಿಸಲಾಗುವುದು. ಈ ಕಾರ್ಯಾಚರಣೆಗೆ ಇಸ್ರೊ ಬ್ಯಾಲಾಳು ಕೇಂದ್ರ, ಅಮೆರಿಕದ ಗೋಲ್ಡ್ ಸ್ಟೋನ್‌, ಸ್ಪೇನ್‌ನ ಮ್ಯಾಡ್ರಿಡ್‌, ಆಸ್ಟ್ರೇಲಿಯದ ಕ್ಯಾನ್‌ಬೆರಾ ಕೇಂದ್ರಗಳ ಮೂಲಕ ಅಗತ್ಯ ನೆರವು ನೀಡ­ಲಾಗುವುದು’ ಇಸ್ರೊ) ವೈಜ್ಞಾನಿಕ ಸಲಹೆಗಾರ ವಿ. ಕೋಟೇಶ್ವರ ರಾವ್‌ ಎಂದರು.
  • ಸಂಕೇತಗಳ ಏಕಮುಖದ ಪ್ರಯಾಣಕ್ಕೇ ತಗಲುವ ಅವಧಿ 12 ನಿಮಿಷ.
ಇಸ್ರೊ ನಡೆ...
  • ಯೋಜನಾ ವೆಚ್ಚ ₨450 ಕೋಟಿ
  • 300 ದಿನಗಳ ಸಂಚಾರ
  • 2013ರ ನವೆಂಬರ್‌ 5ಕ್ಕೆ ಉಡಾವಣೆ
  • ನ.7,8,9,11,12,16: ನೌಕೆಯನ್ನು ಕಕ್ಷೆಗೆ ಏರಿಸಲು ಆರು ಹಂತದ ಪೂರಕ ಪ್ರಕ್ರಿಯೆ
  • ಡಿಸೆಂಬರ್‌ 4: ಸೂರ್ಯನ ಪ್ರಭಾವಲಯಕ್ಕೆ ನೌಕೆ
  • ಡಿಸೆಂಬರ್‌ 11: ನೌಕೆಯು ನಿಗದಿತ ಪಥದಲ್ಲೇ ಸಂಚರಿಸುವಂತೆ ಮಾಡುವ ಪಥ ಸರಿಪಡಿಸುವಿಕೆ ಕಾರ್ಯ (ಟಿಸಿಎಂ–1)
  • ಫೆ.2: 100 ದಿನದ ಯಶಸ್ವಿ ಪಯಣ
  • ಏಪ್ರಿಲ್‌9: ಅರ್ಧ ಹಾದಿ ಕ್ರಮಿಸಿದ ನೌಕೆ
  • ಜೂನ್‌ 12: ನೌಕೆಯು ನಿಗದಿತ ಪಥದಲ್ಲೇ ಸಂಚರಿಸುವಂತೆ ಮಾಡುವ ಪಥ ಸರಿಪಡಿಸುವಿಕೆ ಕಾರ್ಯ (ಟಿಸಿಎಂ–2)
  • ಜುಲೈ 4: ಶೇ 75ರಷ್ಟು ದೂರ ಕ್ರಮಿಸಿದ ನೌಕೆ
  • ಆಗಸ್ಟ್‌ 28: ಶೇ 98ರಷ್ಟು ಯಾನ ಪೂರ್ಣ
  • ಸೆಪ್ಟೆಂಬರ್‌ 22: ನೌಕೆಯು ನಿಗದಿತ ಪಥದಲ್ಲೇ ಸಂಚರಿಸುವಂತೆ ಮಾಡುವ ಪಥ ಸರಿಪಡಿಸುವಿಕೆ ಕಾರ್ಯ (ಟಿಸಿಎಂ–2)
  • ಸೆಪ್ಟೆಂಬರ್‌ 24: ಮಂಗಳನ ಕಕ್ಷೆಗೆ ನೌಕೆ ಪ್ರವೇಶ
ಜತೆಗಿದೆ ಸಾಧನ ಸಲಕರಣೆ
  • ‘ಮಂಗಳನ ಅನ್ವೇಷಣೆಗಾಗಿ ನೌಕೆಯು ಒಟ್ಟು ೧೫ ಕೆ.ಜಿ ತೂಕದ 5 ಸಾಧನಗ­ಳನ್ನು ಕೊಂಡೊಯ್ದಿದೆ. ಇದರಲ್ಲಿ ‘ಲೈಮನ್ ಆಲ್ಫಾ ಫೋಟೋ­ಮೀಟರ್’(ಎಲ್‌ಎಪಿ) ಅನಿಲಗಳ ಆವಿ ಬಗ್ಗೆ ಬೆಳಕು ಚೆಲ್ಲಲಿದೆ. ಮಾರ್ಸ್ ಮಿಥೇನ್ ಸಂವೇದ­ಕವು (ಎಂಎಸ್‌ಎಂ) ಜೀವಕಣಗಳು ಎಂದಾದರೊಮ್ಮೆ ಅಲ್ಲಿ ಇದ್ದವೇ ಅಥವಾ ಈಗಲೂ ಇವೆಯೇ ಎಂಬುದನ್ನು ಪತ್ತೆಹಚ್ಚಲು ಪ್ರಯತ್ನ ಮಾಡಲಿದೆ’ ಎಂದರು.
ಆರು ತಿಂಗಳು ಕಾರ್ಯ’
  • ‘ಒಟ್ಟಾರೆ ಅಂಗಾರಕನ ವಾತಾವರಣ, ಮೇಲ್ಮೈ ಲಕ್ಷಣ, ಗ್ರಹದ ವಿಕಾಸ, ಜೀವಕಣಗಳ ಸಂಭಾವ್ಯ ಅಸ್ತಿತ್ವ ಮತ್ತಿತರ ಪ್ರಶ್ನೆಗಳಿಗೆ ಉತ್ತರ ದೊರೆಯುವ ನಿರೀಕ್ಷೆ ಇದೆ. ಮಂಗಳನ ಕಕ್ಷೆ ಸೇರಿದ ನಂತರ ನೌಕೆಯು ೬ ತಿಂಗಳ ಕಾಲ ಕಾರ್ಯ ನಿರ್ವಹಿಸಲಿದೆ’ ಎಂದು ಸೋಮವಾರ(೧೫-೯-೨೦೧೪) ಕೋಟೇಶ್ವರ ರಾವ್‌ ತಿಳಿಸಿದರು.

((ಇಸ್ರೋದಿಂದ ಬಿಡುಗಡೆ)ಪ್ರಜಾವಾಣಿ ವರದಿ/೧೬-೯-೨೦೧೪--[[೨]])

ಮೊದಲ ಯಶಸ್ಸು

ಸೋಮವಾರ (22-9-2014) ಮೊದಲ ಯಶಸ್ಸು : ಬೆಂಗಳೂರಿನ ಭಾರತೀಯ ಬಾಹ್ಯಕಾಶ ಕೇಂದ್ರ - ಪೀಣ್ಯದಲ್ಲಿರುವ ಇಸ್ಟ್ರಾಕ್‌ ಕೇಂದ್ರ : ಮಂಗಳ ಗ್ರಹದೆಡೆಗೆ ಸಾಗುತ್ತಿರುವ ಮಂಗಳಯಾನ (ಮಾರ್ಸ್‌ ಅರ್ಬಿಟರ್ ಮಿಷನ್ - ಮಾಮ್) ಬಾಹ್ಯಾಕಾಶ ನೌಕೆ ಕೊನೆಯ ಹಂತದ ಪರೀಕ್ಷೆ ಸೋಮವಾರ (22-9-2014) ಯಶಸ್ವಿಯಾಗಿತ್ತು. ಮಂಗಳಗ್ರಹಕ್ಕೆ ಸೇರಿಸುವ ಎಲ್ಎಎಂ(ನ್ಯೂಟನ್ ಲಿಕ್ವಿಡ್ ಅಪೋಜಿ ಮೋಟಾರ್) ದ್ರವ ದಹನ ಪರೀಕ್ಷೆ ಸೋಮವಾರ ನಡೆದಿದ್ದು, 300 ದಿನದಿಂದ ನಿಷ್ಕ್ರಿಯವಾಗಿದ್ದ ಇಂಜಿನ್ ನನ್ನು 4 ಸೆಕೆಂಡುಗಳ(3.968 secs) ಕಾಲ ಚಾಲನೆ ಮಾಡುವ ಮೂಲಕ ವಿಜ್ಞಾನಿಗಳು ಪ್ರಮುಖ ಘಟ್ಟವನ್ನು ದಾಟಿದ್ದರು. [one india] ಬೆಂಗಳೂರು: ಪ್ರಥಮ ಪ್ರಯತ್ನದಲ್ಲೇ ಮಂಗಳ ಯಾನ ಯಶಸ್ವಿ! ಬೇರೆಲ್ಲಾ ರಾಷ್ಟ್ರಗಳ ಪ್ರಯತ್ನಕ್ಕೆ ಹೋಲಿಸಿದರೆ, ಅತ್ಯಂತ ಅಗ್ಗದ ವೆಚ್ಚದಲ್ಲಿ ಮಂಗಳ ಗ್ರಹ ಯಾತ್ರೆ ಸಂಘಟಿಸಿದ ಇಸ್ರೋದ ಕಕ್ಷೆಗಾಮಿ ನೌಕೆ ಮಾರ್ಸ್ ರೋವರ್ ಮಂಗಳನ ಅಂಗಳದಲ್ಲಿ ಯಶಸ್ವಿಯಾಗಿ ಇಳಿದಿದೆ. ಇದರೊಂದಿಗೆ ಪ್ರಥಮ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿದ ಮೊದಲ ದೇಶವೆಂಬ ಹೆಗ್ಗಳಿಕೆ ಭಾರತಕ್ಕೆ. ಬುಧವಾರ ಬೆಳಗ್ಗೆ 7.47ರ ಶುಭ ಸಮಯದಲ್ಲಿ ಇಸ್ರೋದ ಮಂಗಳದ ಕಕ್ಷೆಗಾಮಿ ನೌಕೆಯು ಮಂಗಳನ ಕಕ್ಷೆಗೆ ಸೇರಿತು ಎಂದು ಇಸ್ರೋ ಘೋಷಿಸಿತು. ಈ ಕ್ಷಣಕ್ಕೆ ಸ್ವತಃ ಸಾಕ್ಷಿಯಾದ ಪ್ರಧಾನಿ ನರೇಂದ್ರ ಮೋದಿ ಸಹಿತ ಗಣ್ಯರು ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದರು.

ಮಂಗಳನ ಕಕ್ಷೆಗೆ

2013ರ ನವೆಂಬರ್ 5ರಂದು ಶ್ರೀಹರಿಕೋಟದಿಂದ ಪಿಎಸ್‌ಎಲ್‌ವಿ-ಸಿ25 ಗಗನನೌಕೆ ವಾಹಕವು ಈ ಕಕ್ಷೆಗಾಮಿಯನ್ನು ಮಂಗಳನತ್ತ ಕಳುಹಿಸಿತ್ತು. ಡಿಸೆಂಬರ್ 1ರಂದು ಅದು ಭೂಕಕ್ಷೆಯಿಂದ ಹೊರಗೆ ಹೋಗಿತ್ತು.

ಚಿತ್ರ:ದಿ.24-9-2014 ರಂದು ಮಂಗಳ ಕೃತಕ ಉಪಗ್ರಹವನ್ನು ಮಂಗಳ ಗ್ರಹದ ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಯಿತು.

ಬುಧವಾರದ ಕಾರ್ಯಾಚರಣೆ ಏನು? *ಬೆಳಗ್ಗೆ 7.17ಕ್ಕೆ ಸರಿಯಾಗಿ ಲ್ಯಾಮ್ ಎಂಜಿನ್ ಹೊತ್ತಿಕೊಂಡು ಸುಮಾರು 24 ನಿಮಿಷಗಳ ಕಾಲ ಉರಿಯಲಿದೆ *ಈ ದಹನ ಕ್ರಿಯೆಯಿಂದ ಸುಮಾರು 440 ನ್ಯೂಟನ್ ಶಕ್ತಿ ದೊರೆಯಲಿದೆ *ಈ ಬಲವನ್ನು ಬಳಸಿಕೊಂಡು ನೌಕೆಯನ್ನು ವಿರುದ್ಧ ದಿಕ್ಕಿನಿಂದ ತಿರುಗಿಸಿ ಅದರ ವೇಗ ತಗ್ಗಿಸಿ ಮಂಗಳನ ಕಕ್ಷೆಗೆ ತಳ್ಳಲಾಗುತ್ತದೆ *ಬುಧವಾರ ಮಧ್ಯಾಹ್ನ 12.30ರ ಹೊತ್ತಿಗೆ ನೌಕೆಯಲ್ಲಿರುವ ಕಲರ್ ಕ್ಯಾಮರಾದಿಂದ ಪ್ರಥಮ ಚಿತ್ರ ದೊರೆಯಲಿದೆ ---------- 66.6 ಕೋಟಿ ಕಿ.ಮೀ.- ನೌಕೆ ಕ್ರಮಿಸಬೇಕಿದ್ದ ಒಟ್ಟು ದೂರ 66.3 ಕೋಟಿ ಕಿ.ಮೀ.-ಸೋಮವಾರದವರೆಗೆ ನೌಕೆ ಕ್ರಮಿಸಿರುವ ದೂರ 22.1 ಕಿ.ಮೀ./ಸೆಕೆಂಡ್-ನೌಕೆ ಈಗ ಸಾಗುತ್ತಿರುವ ವೇಗ 4.4 ಕಿ.ಮೀ./ಸೆಕೆಂಡ್-ಕಕ್ಷೆಗೆ ಸೇರುವಾಗ ನೌಕೆಗೆ ಇರಬೇಕಾದ ವೇಗ.

  • (‘ನೌಕೆ ಈಗ ಭೂಮಿಯಿಂದ 21.5 ಕೋಟಿ ಕಿ.ಮೀ. ದೂರ ಕ್ರಮಿಸಿದೆ. ಇಸ್ರೊ ಕೇಂದ್ರದಿಂದ ನೌಕೆಗೆ ಸಂಕೇತ ತಲುಪಲು 12 ನಿಮಿಷ ಹಿಡಿಯುತ್ತದೆ. ಇದೇ 24ಕ್ಕೆ 22.4 ಕೋಟಿ ಕಿ.ಮೀ. ದೂರ ತಲುಪಲಿದೆ. ಸದ್ಯ ನೌಕೆಯ ವೇಗ ಸೆಕೆಂಡ್‌ಗೆ 5.2 ಕಿ.ಮೀ. ಅಂದು ಈ ವೇಗವನ್ನು 4.1 ಕಿ.ಮೀ.ಗೆ ತಗ್ಗಿಸಿ ಮಂಗಳನ ಕಕ್ಷೆಗೆ ಸೇರಿಸಲಾಯಿತು.
24-9-2014 ಬೆಂಗಳೂರಿನ ಇಸ್ರೋ ಕೇಂದ್ರ

ಈ ಕಾರ್ಯಾಚರಣೆಗೆ ಇಸ್ರೊ ಬ್ಯಾಲಾಳು ಕೇಂದ್ರ, ಅಮೆರಿಕದ ಗೋಲ್ಡ್ ಸ್ಟೋನ್‌, ಸ್ಪೇನ್‌ನ ಮ್ಯಾಡ್ರಿಡ್‌, ಆಸ್ಟ್ರೇಲಿಯದ ಕ್ಯಾನ್‌ಬೆರಾ ಕೇಂದ್ರಗಳ ಮೂಲಕ ಅಗತ್ಯ ನೆರವು ನೀಡ¬ಲಾಗುವುದು’ ಎಂದರು ಬೆಂಗಳೂರಿನ ಭಾರತೀಯ ಬಾಹ್ಯಕಾಶ ಕೇಂದ್ರ ISAC, ಇಂದು ಬೆಂಗಳೂರಿನ ಭಾರತೀಯ ಬಾಹ್ಯಕಾಶ ಕೇಂದ್ರ- ಟೆಲಿಮೆಟ್ರಿ ಕೇಂದ್ರಕ್ಕೆ ISTRAC, ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದರು. ಬೆಂಗಳೂರಿನ ಟೆಲಿಮೆಟ್ರಿ ಕೇಂದ್ರ, ಬ್ಯಾಲಾಳುವಿನ ಹೊಸ ಕೇಂದ್ರ, LPSC, LEOS ಜೊತೆಗೆ ಹಾಸನದ ಎಂಸಿಎಫ್ ಕೇಂದ್ರ ಹೀಗೆ ಇಸ್ರೋದ ಪ್ರತಿ ಯೋಜನೆಯಲ್ಲೂ ಕರ್ನಾಟಕದ ಕೊಡುಗೆ ಅಪಾರ ವಾಗಿದೆ.[one india,) ( ಇಸ್ರೋದ ಪ್ರಮುಖ ವಿಜ್ಞಾನಿಗಳು: ಕೆ ರಾಧಾಕೃಷ್ಣನ್, ವಿ ಆದಿಮೂರ್ತಿ, ಎಂ ಅಣ್ಣಾದೊರೈ, ಪಿ ರಾಬರ್ಟ್, ಸುಬ್ಬಯ್ಯ ಅರುಣನ್, ಬಿಎಸ್ ಚಂದ್ರಶೇಖರ್, ಎಸ್‌ಕೆ ಶಿವಕುಮಾರ್, ಬಿ ಜಯಕುಮಾರ್, ವಿ ಕೇಶವರಾಜು, ಪಿ ಏಕಾಂಬರಂ, ಪಿಕೆ ಕೃಷ್ಣನ್ )

ಪ್ರಥಮ ಪ್ರಯತ್ನದಲ್ಲೇ ಮಂಗಳಯಾನ ಯಶಸ್ವಿ

*The spacecraft is expected to circle the planet for at least six months, following an elliptical orbit that gets within 365 kilometers (227 miles) of the planet's surface at its closest and 80,000 kilometers (49,700 miles) at its farthest (ಇದು 24 SEPTEMBER, 2014 ರನಂತರ ಬದಲಾವಣೆ ಆಗಿದೆ ಮುಂದೆ ನೋಡಿ)
  • Indian Space Research Organisation's Mars Orbiter Mission (MOM) spacecraft started orbiting the red planet at 7.47am, but it was only 12 minutes later —because of a time delay in radio signals travelling the 680 million km -- that scientists at Isro Telemetry, Tracking and Command Network in Bangalore, could erupt in joy as Prime Minister Narendra Modi stood a happy witness. (TOI)

ಬುಧವಾರ (24-9-2014) ಮಂಗಳಯಾನ ನೌಕೆ( a Polar Satellite Launch Vehicle (PSLV) rocket C25) ಮಂಗಳ ಗ್ರಹದ ಕಕ್ಷೆಯೊಳಗೆ ಭದ್ರವಾಗಿ ಸೇರಿಕೊಂಡಿತು. ಮಂಗಳನ ಕಕ್ಷೆಯಲ್ಲೇ ಸುಮಾರು 420 ಕಿ.ಮೀ. ರಿಂದ 80 ಸಾವಿರ ಕಿ.ಮೀ. ದೂರದಲ್ಲಿ ಸುತ್ತಾಡಲಿರುವ ಈ ಕಕ್ಷೆಗಾಮಿ ನೌಕೆಯು ಅಲ್ಲೇ ವೈಜ್ಞಾನಿಕ ಅಧ್ಯಯನ ನಡೆಸಲಿದೆ. ಅಲ್ಲಿ ಜೀವಕಣಗಳ ಇರುವಿಕೆಗೆ ಪೂರಕವಾಗುವ ಡ್ಯುಟೇರಿಯಂ ಮತ್ತು ಜಲಜನಕದ ಪ್ರಮಾಣ ಇದ್ದರೆ ಎಷ್ಟಿರಬಹುದು ಎಂದೆಲ್ಲಾ ಈ ಬಾಹ್ಯಾಕಾಶ ನೌಕೆ ತಿಳಿದುಕೊಳ್ಳಲಿದೆ. ಅದರಲ್ಲಿರುವ ಮಿಥೇನ್ ಸೆನ್ಸರ್, ಅಲ್ಲಿ ಯಾವುದಾದರೂ ಅನಿಲದ ಮೂಲವಿದೆಯೇ ಎಂದು ತಿಳಿದುಕೊಳ್ಳಲಿದೆ. ಅದರಲ್ಲಿರುವ ಕ್ಯಾಮೆರಾ ಚಿತ್ರಗಳನ್ನು ತೆಗೆಯಲಿದ್ದರೆ, ಥರ್ಮಲ್ ಇನ್ಫ್ರಾರೆಡ್ ಸ್ಪೆಕ್ಟ್ರೋಮೀಟರ್, ಅಲ್ಲಿನ ತಾಪಮಾನ, ಖನಿಜಾಂಶ, ಮಣ್ಣಿನಾಂಶ ಇತ್ಯಾದಿಯ ಇರುವಿಕೆಯನ್ನು ತಿಳಿದುಕೊಳ್ಳಲಿದೆ.

ಬೆಂಗಳೂರಿನ ಪೀಣ್ಯಾದ ಇಸ್ರೋ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಸ್ರೋ ಮುಖ್ಯಸ್ಥ ಕೆ.ರಾಧಾಕೃಷ್ಣನ್`ಅವರನ್ನು ಪ್ರಥಮ ಪ್ರಯತ್ನದಲ್ಲಿಯೇ ಯಶಸ್ವೀ ಮಂಗಳಯಾನ (MOM) ಪ್ರಯೋಗಕ್ಕಾಗಿ, ಅಭಿನಂದಿಸತ್ತಿರುವುದು (ವೆಬ್`ಪ್ರಜಾವಾಣಿ ೨೪-೯-೨೦೧೪

ಪ್ರಥಮ ಪ್ರಯತ್ನದಲ್ಲೇ ಮಂಗಳ ಯಾನ ಯಶಸ್ವಿ! ಬೇರೆಲ್ಲಾ ರಾಷ್ಟ್ರಗಳ ಪ್ರಯತ್ನಕ್ಕೆ ಹೋಲಿಸಿದರೆ, ಅತ್ಯಂತ ಅಗ್ಗದ ವೆಚ್ಚದಲ್ಲಿ ಮಂಗಳ ಗ್ರಹ ಯಾತ್ರೆ ಸಂಘಟಿಸಿದ ಇಸ್ರೋದ ಕಕ್ಷೆಗಾಮಿ ನೌಕೆ ಮಾರ್ಸ್ ರೋವರ್ ಮಂಗಳನ ಅಂಗಳದಲ್ಲಿ ಯಶಸ್ವಿಯಾಗಿ ಇಳಿದಿದೆ. ಇಡೀ ದೇಶಕ್ಕೆ ದೇಶವೇ ಸಂಭ್ರಮಿಸುತ್ತಿದೆ. (ವಿಜಯ ಕರ್ನಾಟಕ, 24 SEPTEMBER, 2014)

  • ಬಾಹ್ಯಾಕಾಶ ಮುಖ್ಯಸ್ಥರೂ ಆಗಿರುವ ಪ್ರಧಾನಿ ಮೋದಿ ಬೆಂಗಳೂರಿನಿಂದ ನಲವತ್ತು ಕಿ.ಮೀ.ದೂರದ ಪೀಣ್ಯದಲ್ಲಿರುವ ಇಸ್ರೋದ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮ್ಯಾಂಡ್ ನೆಟ್`ವರ್ಕಿನ (ಇಸ್`ಟ್ರ್ಯಾಕ್`)ಗಗನ ನೌಕೆ ನಿಯಂತ್ರಣಾ ಕೇಂದ್ರಕ್ಕೆ ಬೆಳಿಗ್ಗೆ ಏಳು ಗಂಟೆಗೆ ಬಂದರು.
  • ಇಸ್ರೋ ಅಧ್ಯಕ್ಷ ಕೆ.ರಾಧಾಕೃಷ್ಣನ್`ಮತ್ತು ಯೋಜನೆಯ ಹಿರಿಯ ವಿಜ್ಞಾನಿಗಳು ಯೋಜನೆಯ ವಿವಿಧ ಘಟ್ಟಗಳನ್ನು ವಿವರಿಸಿದರು.
ಸಂಕೇತ ಸ್ವೀಕರಿಸುವ ಕೇಂದ್ರಗಳು.

ಇಸ್ರೋದ ಬ್ಯಾಲಾಳುವಿನಲ್ಲಿರುವ ಡೀಪ್`ಸ್ಪೇಸ್`ನೆಟ್`ವರ್ಕ್ (ಡಿ.ಎಸ್.ಎನ್.); ಅಮೇರಿಕಾದ ನಾಸಾ; ಸ್ಪೇನ್`ನ ಮ್ಯಾಡ್ರಿಡ್` ; ಮತ್ತು ಆಸ್ಟ್ರೇಲಿಯಾದ ಕ್ಯಾನ್ಬೆರಾದಲ್ಲಿರುವ ಡಿ.ಎಸ್`ಎನ್`ಗಳು ಈ ಮಂಗಳಯಾನದ ನೌಕೆಯಿಂದ ಬರುವ ಸಂಕೇತಗಳನ್ನು ಸ್ವೀಕರಿಸುವ ಕಾರ್ಯದಲ್ಲಿ ಭಾಗಿಯಾಗುತ್ತವೆ.

ಇಸ್ರೊದಿಂದ ಇತಿಹಾಸ ನಿರ್ಮಾಣ

51 ಬಾರಿ ಪ್ರಯತ್ನ:
  • ಇಸ್ರೋ ಪ್ರಥಮ ಪ್ರಯತ್ನದಲ್ಲೇ ಉಪಗ್ರಹವನ್ನು ಸೆಪ್ಟೆಂಬರ್ 24-9-2014ರಂದು ಮಂಗಳಗ್ರಹದ ಕಕ್ಷೆಗೆ ಸೇರಿಸಿದೆ.
  • 51 ಬಾರಿ ಪ್ರಯತ್ನ: ಈ ವರೆಗೆ ಜಗತ್ತಿನ ವಿವಿಧ ರಾಷ್ಟ್ರಗಳು ಮಂಗಳನ ಕಕ್ಷೆ ತಲುಪಲು 51 ಬಾರಿ ಪ್ರಯತ್ನ ಮಾಡಿದ್ದವು. ಇದರಲ್ಲಿ 30 ಯತ್ನಗಳು ವಿಫಲಗೊಂಡಿವೆ. ಈ ಬಹುತೇಕ ಯೋಜನೆ­ಗಳೆಲ್ಲ ಉಡಾವಣೆ ಹಂತ, ಭೂ ಕಕ್ಷೆಯಿಂದ ಮಂಗಳ ಕಕ್ಷೆಗೆ ಸೇರುವ ಹಾದಿಯಲ್ಲಿ ವಿಫಲ­ಗೊಂಡಿದ್ದವು.
  • ಆರು ತಿಂಗಳು ಕಾರ್ಯ: ನೌಕೆಯು ಆರು ತಿಂಗಳ ಕಾಲ (180 ದಿನ)ಕಾರ್ಯ ನಿರ್ವಹಿಸಲಿದೆ.
  • ಚೊಚ್ಚಲ ಯತ್ನದಲ್ಲೇ ಯಶಸ್ಸು ಗಳಿಸಿದ ಜಗತ್ತಿನ ಮೊದಲ ರಾಷ್ಟ್ರ ಎಂಬ ಕೀರ್ತಿಗೆ ಭಾರತ ಪಾತ್ರ­ವಾಯಿತು ಮತ್ತು ಮಂಗಳ­ನ ಕಕ್ಷೆಗೆ ನೌಕೆ ಕಳುಹಿಸಿದ ಏಷ್ಯಾದ ಮೊದಲ ರಾಷ್ಟ್ರ ಎನಿಸಿಕೊಂಡಿತು. ಅಲ್ಲದೆ ಮಂಗಳ­ಗ್ರಹಕ್ಕೆ ಯಶಸ್ವಿ­ಯಾಗಿ ನೌಕೆ­ಗಳನ್ನು ಕಳು­ಹಿಸಿದ ಅಮೆರಿಕ, ರಷ್ಯಾ, ಐರೋಪ್ಯ ಒಕ್ಕೂ­ಟದ ಸಾಲಿಗೆ ಸೇರ್ಪಡೆಯಾಯಿತು.)--

", (ಪ್ರಜಾವಾಣಿ ೨೫-೯-೨೦೧೪)

‘ಮಂಗಳಯಾನ’ (ಮಾರ್ಸ್ ಆರ್ಬಿಟರ್ ಮಿಷನ್) ನೌಕೆಯಲ್ಲಿನ ವರ್ಣ ಕ್ಯಾಮೆರಾ ಸೆರೆಹಿಡಿದ ಮಂಗಳನ ಪ್ರಥಮ ಛಾಯಾಚಿತ್ರ( ಇಸ್ರೋ ಫೇಸ್`ಬುಕ್`& ಪಿ.ಟಿ.ಐ.ವರದಿ ಪ್ರಜಾವಾಣಿ.೨೫-೯-೨೦೧೪)

ಮಂಗಳಯಾನ-ಅಂಕಿ ಅಂಶ

  • ಮಂಗಳ ಗ್ರಹವು ೭೮೦/780 ದಿನಗಳಿಗೆ ಒಮ್ಮೆ ಭೂಮಿಯ ಅತ್ಯಂತ ಸಮೀಪಕ್ಕೆ ಬರುತ್ತದೆ ಅದೇ ಸಮಯ ನೋಡಿ ಅಲ್ಲಿಗೆ ಉಪಗ್ರಹ ಉಡಾವಣೆ ಮಾಡಿದೆ. ಯು.ಎಸ್.ಎ. ಯೂ ಅದೇ ಸಮಯ ನೋಡಿ ಎರಡು ದಿನ ಮುಂಚೆ ಮಂಗಳಕಕ್ಷೆಗೆ ಉಪಗ್ರಹ ಕಳಿಸಿದೆ. ಮತ್ತೆ ಅಂತಹ ಸಮಯ ಜನವರಿ ೨೦೧೬/2016 ಕ್ಕೆ ಬರುವುದು.
  • ಈ ಬಗೆಯ ಉಡ್ಡಯನ ವೆಚ್ಚ ಯು.ಎಸ್‘.ಎ.ಗೆ ೨೦೧೪/2014 ರ ಯೋಜನೆಗೆ 4026 ಕೋಟಿ ರೂಪಾಯಿ; ೨೦೧೫/2015 ರ ಯೋಜನೆಗೆ - ೧೭೯೦/1790 ಕೋಟಿ ಡಾಲರ್.)(1790X60 ಕೋಟಿ ರೂ.)ನಿಗದಿಮಾಡಿದೆ.
  • ಭಾರತದ ಉಡ್ಡಯನ ವೆಚ್ಚ ೪೫೦/450 ಕೋಟಿ.ರೂಪಾಯಿ ರಾಕೆಟ್ ಗೆ ೧೧೦/110 ಕೊಟಿ. ಮಂಗಳ ನೌಕೆಗೆ-೧೫೦ /150 ಕೋಟಿ . ನಿಗಾ ಮತ್ತು ನಿರ್ವಹಣೆಗೆ ವ್ಯವಸ್ಥೆಗೆ ೧೯೦/190 ಕೋಟಿ (ಒಟ್ಟು-೭.೪/ 7.4ಕೋಟಿ ಡಾಲರ್)
  • ಭೂಮಿಯಿಂದ ಮಂಗಳ ಗ್ರಹಕ್ಕೆ ಅತ್ಯಂತ ಸಮೀಪದ ದೂರ ೬೬.೬/66.6 ಕೋಟಿ ಕಿ.ಮೀ.
  • ಈಗ ಮಂಗಳ:ನನ್ನು ಸುತ್ತುತ್ತಿರುವ ನೌಕೆಯು ಕಕ್ಷಾಪಥದ ಕನಿಷ್ಟ ದೂರವು ೪೨೧.೭/421.7 ಕಿಮೀ.ದೂರವು. ಗರಿಷ್ಠ ದೂರವು ೭೬,೯೯೩.೬/76993.6 ಕಿ.ಮೀ. ಆಗಿದೆ. ಅದು ಮಂಗಳ ಗ್ರಹದ ಸಮಭಾಜಕ ವೃತ್ತಕ್ಕೆ ೧೫೦/150 ಡಿಗ್ರಿ ಓರೆಯಾಗಿ ಸುತ್ತುತ್ತಿದೆ. ಈಪಥದಲ್ಲಿ ಮಂಗಳನನ್ನು ೭೨/72 ಗಂ. ೫೧/51 ನಿ. ೫೧/51 ಸೆಕೆಂಡುಗಳಿಗೆ ಒಮ್ಮೆ ಸುತ್ತುತ್ತದೆ.
  • ‘ಮಂಗಳಯಾನ’ (ಮಾರ್ಸ್ ಆರ್ಬಿಟರ್ ಮಿಷನ್) ನೌಕೆಯಲ್ಲಿನ ವರ್ಣ ಕ್ಯಾಮೆರಾ ಸೆರೆಹಿಡಿದ ಮಂಗಳನ ಪ್ರಥಮ ಛಾಯಾಚಿತ್ರವನ್ನು ಭಾರತೀಯ ಭಾಹ್ಯಾಕಾಶ ಸಂಸೋಧನಾ ಸಂಸ್ಥೆ (ಇಸ್ರೊ) ತನ್ನ ಫೇಸ್ ಬುಕ್ ಪುಟದಲ್ಲಿ ಹಾಗೂ ಟ್ವಿಟರ್ ನಲ್ಲಿ ಗುರುವಾರ ಬಿಡುಗಡೆ ಮಾಡಿದೆ. ಇದರೊಂದಿಗೆ ಇಸ್ರೊ ತಾನು ಸೃಷ್ಟಿಸಿದ ಹೊಸ ಇತಿಹಾಸವನ್ನು ಖಚಿತಪಡಿಸಿದೆ.

‘ಈ ಛಾಯಾಚಿತ್ರವನ್ನು 7,300 ಕಿ.ಮೀ. ಎತ್ತರದಿಂದ ಸೆರೆಹಿಡಿಯಲಾಗಿದೆ. 376 ಎಂ. ರೆಸಲ್ಯೂಷನ್ ಹೊಂದಿದೆ’ ಎಂದು ಇಸ್ರೊ ಟ್ವಿಟ್ ಮಾಡಿದೆ. (ಬೆಂಗಳೂರು(ಪಿಟಿಐ)ಪ್ರಜಾವಾಣಿ-೨೫-೯-೨೦೧೪)

  • ‘ಮಂಗಳಯಾನ’ (ಮಾರ್ಸ್ ಆರ್ಬಿಟರ್ ಮಿಷನ್) ನೌಕೆಯಲ್ಲಿನ ವರ್ಣ ಕ್ಯಾಮೆರಾ ಸೆರೆಹಿಡಿದ ಮಂಗಳನ ಪೂರ್ಣ ಪ್ರಮಾಣದ (ಗ್ಲೋಬಲ್ ವ್ಯೂ) ಛಾಯಾಚಿತ್ರವನ್ನು ಭಾರತೀಯ ಭಾಹ್ಯಾಕಾಶ ಸಂಸೋಧನಾ ಸಂಸ್ಥೆ (ಇಸ್ರೊ) ತನ್ನ ಫೇಸ್ ಬುಕ್ ಪುಟದಲ್ಲಿ ಬಿಡುಗಡೆ ಮಾಡಿದೆ. ಇದನ್ನು ತನ್ನ ಅಪೋಬಿಂದುವಿನ ಬಳಿಯಿಂದ (ಅಂದರೆ ಸುಮಾರು ೭೪,೫೦೦ ಎತ್ತರದಿಂದ) ಚಿತ್ರೀಕರಿಸಿದೆ. (ಡಿಸ್ಕವರಿ ವಾರ್ತೆಯ ಜಾಲತಾಣ: http://news.discovery.com/space/dusty-days-india-mission-photographs-stormy-mars-globe-140929.htm Archived 2014-10-02 ವೇಬ್ಯಾಕ್ ಮೆಷಿನ್ ನಲ್ಲಿ.)

ಮಾಮ್‌ ಮಂಗಳ ಕಕ್ಷೆಯಲ್ಲಿ

ಮಾರ್ಸ್ ಆರ್ಬಿಟರ್ ಮಿಷನ್ ಬಾಹ್ಯಾಕಾಶ ನೌಕೆಯ ಅನಿಮೇಟೆಡ್ ಜೋಡಣೆ ()ಚಲನೆಯ ಚಿತ್ರ
  • 3 Jul, 2017
  • 'ಜೂನ್19ಕ್ಕೆ ಮಾಮ್‌ ಮಂಗಳ ಕಕ್ಷೆಯಲ್ಲಿ ಸಾವಿರ ದಿನ ಪೂರೈಸಿದೆ. ಭೂಮಿಯಿಂದ ಮಾಮ್‌, 40 ಕೋಟಿ ಕಿಲೋಮೀಟರ್‌ ದೂರದಲ್ಲಿದೆ. ನಾವು ಒಂದು ಸಿಗ್ನಲ್‌ ಕಳುಹಿಸಿದರೆ ತಲುಪಲು 22 ನಿಮಿಷ ಆಗುತ್ತದೆ. ಬೇರೆ ಉಪಗ್ರಹಗಳಿಗೆ ಕ್ಷಣಮಾತ್ರದಲ್ಲಿ ತಲುಪುತ್ತದೆ. ಅಲ್ಲಿಂದ ತಲುಪಿದೆ ಎಂಬ ಸಂದೇಶ ಬರಲು 22 ನಿಮಿಷ ಬೇಕು. ದಿನದ 24 ಗಂಟೆಯೂ ಮಾಮ್‌ ಅನ್ನು ಜೋಪಾನವಾಗಿ ನೋಡಿಕೊಳ್ಳುತ್ತಿದ್ದೇವೆ' ಎಂದು ಈಗಿನ ಉಪಗ್ರಹದ ಆಪರೇಷನ್‌ ಮ್ಯಾನೇಜರ್‌ ಇಸ್ರೊ ವಿಜ್ಞಾನಿ ಎಂ.ವಿ. ರೂಪ ಹೇಳುತ್ತಾರೆ. []

ಬಾಹ್ಯಾಕಾಶದಲ್ಲಿ ಇಸ್ರೋ ಸಾಧನೆಗಳು:

  • 1962 ರಲ್ಲಿ ಪರಮಾಣು ಇಂಧನ ಇಲಾಖೆಯಿಂದ ಬಾಹ್ಯಾಕಾಶ ಸಂಶೋಧನಾ ಸಮಿತಿ ಸ್ಥಾಪನೆ. ಕೇರಳದ ತುಂಬಾ ರಾಕೆಟ್ ಉಡಾವನಾ ಕೇಂದ್ರದ ಕೆಲಸ ಆರಂಭ.
  • 1963 ನವಂಬರ್ 21, ಟಿಇಅರ್‘ಎಲ್‘ಎಸ್‘ನಿಂದಮೊದಲ ರಾಕೆಟ್‘ ಉಡಾವಣೆ.
  • 1965 ಥಂಬಾದಲ್ಲಿ ಬಾಹ್ಯಾಕಾಶ ವಿಜ್ಞಾನ ತಂತ್ರ ಜ್ಞಾನ ಕೆಂದ್ರ ಸ್ಥಾಪನೆ.
  • 1969 ಆಗಸ್ಟ 15, ಪರಮಾಣು ಇಂಧನ ಇಲಾಖೆಯಿಂದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಇಸ್ರೋ ಸ್ಥಾಪನೆ.
  • 1972 ಆಂದ್ರ ಪ್ರದೇಶದ ಶ್ರೀಹರಿಕೋಟಾದಲ್ಲಿ ಸತೀಶ್‘ಧವನ್‘ಬಾಹ್ಯಾಕಾಶ ಕೇಂದ್ರ ಸ್ಥಾಪನೆ.
  • 1975 ಏಪ್ರಿಲ್ 19, ದೂರದರ್ಶನ ಪ್ರಸಾರ ಉದ್ದೇಶ ಹೊಂದಿದ ಮೊದಲ ಉಪಗ್ರಹ ಆರ್ಯಭಟ ಉಡಾವಣೆ.
  • 1979 ಭೂ ವೀಕ್ಷಣಾ ಪ್ರಾಯೋಗಿಕ ಉಪಗ್ರಹ ಭಾಸ್ಕರ-1 ಉಡಾವಣೆ.
  • 1984 ಭಾರತದ ಮೊದಲ ಗಗನ ಯಾನಿ ರಾಕೇಶ್ ಶರ್ಮಾ ಅವರಿಂದ ರಷ್ಯಾ ಬಾಹ್ಯಾಕಾಶ ನಿಲ್ದಾಣ ಸಲ್ಯೂಟ್` 7ರಲ್ಲಿ ಎಂಟು ದಿನ ವಾಸ.
  • 1988 ರಷ್ಯಾದ ರಾಕೆಟ್‘ಮೂಲಕ ಭಾರತದ ದೂರ ಸಂವೇದಿ ಐಆರ್‘ಎಸ್‘ (IRS)ಉಪಗ್ರಹ ಉಡಾವಣೆ.
  • 1993 ಮೊದಲ ದೃವಗಾಮಿ ಉಪಗ್ರಹ-ಉಡಾವಣಾ ವಾಹಕ ಪಿಎಸ್‘ಎಲ್‘ವಿ (PSLV)ಅಭಿವೃದ್ಧಿ ; ಯೋಜನೆ ವಿಫಲ.
  • 1997ಉಪಗ್ರಹ-ಉಡಾವಣಾ ವಾಹಕ ಪಿಎಸ್‘ಎಲ್‘ವಿ ಮೊದಲ ಉಡಾವಣೆ. (ಐಅರ್‘ಎಸ್‘-1ಡಿ=IRS-1Dಉಪಗ್ರಹ)
  • 2001 ಜಿಸಾಟ್‘-1 ಉಪಗ್ರಹ ಹೊತ್ತ ಭೂ ಸ್ಥಿರ ಉಪಗ್ರಹ ಹೊತ್ತ ಭೂಸ್ಥಿರ ಉಪಗ್ರಹ ಉಡಾವಣಾ ವಾಹಕದ (ಜಿಎಸ್‘ಎಲ್‘ವಿ-GSLV) ಯಶಸ್ವಿ ಉಡಾವಣೆ.
  • 2008ಅಕ್ಟೋಬರ್‘೨೨22 ಚಂದ್ರಯಾನ 1 ರ ನೌಕೆಯನ್ನು ಹೊತ್ತ ಪಿಎಸ್‘ಎಲ್‘ವಿ. -ಎಕ್ಷ್‘ಎಲ್‘ (PSLV_XL) ಉಡಾವಣೆ.
  • 2013 ನವೆಂಬರ್‘ 5 , ಸ್ವದೇಶಿ ನಿರ್ಮಿತ ಮಂಗಳ ನೌಕೆಯನ್ನು ಹೊತ್ತ ಪಿಎಸ್‘ಎಲ್‘ವಿ. ಸಿ 25(PSLV_C25) ಉಡಾವಣೆ..
  • 2014 ಜನವರಿ 5 , ಸ್ವದೇಶಿ ನಿರ್ಮಿತ ಕ್ರಯೋಜನಿಕ್‘ತಂತ್ರಜ್ಞಾನ ಒಳಗೊಂಡ ಜಿಎಸ್‘ಎಲ್‘ವಿ-ಡಿ5 (GSLV-D25) ಉಡಾವಣೆ

(ಆಧಾರ: ಪ್ರಜಾವಾಣಿ ೨೫-೯-೨೦೧೪)

[]

ನೋಡಿ

ಉಲ್ಲೇಖ

  1. •Sun, 12/01/2013 (ಐಎಎನ್‌ಎಸ್‌-ಸುದ್ದಿ)ಬೆಂಗಳೂರು
  2. "ಮಲ್ಲೇಶ್ವರ ಪರಿಸರದಲ್ಲಿ ಮೈಸೂರು ಕಂಡೆ';ರಮೇಶ ಕೆ.;3 Jul, 2017". Archived from the original on 2017-07-02. Retrieved 2017-07-03.
  3. "Nov 05, 2013;Mars Orbiter Mission Spacecraft". Archived from the original on ಫೆಬ್ರವರಿ 5, 2019. Retrieved ಅಕ್ಟೋಬರ್ 16, 2018.