ಮೂರ್ತಿಪೂಜೆ
ಮೂರ್ತಿಪೂಜೆಯ (ವಿಗ್ರಹಾರಾಧನೆ) ಅರ್ಥ ಅಕ್ಷರಶಃ "ಮೂರ್ತಿ"ಯ ಪೂಜೆ, ಪ್ರತಿಮೆಯಂತಹ ಭೌತಿಕ ಆಕೃತಿಯ ರೂಪದಲ್ಲಿನ ಆರಾಧನಾ ವಸ್ತುವಿನ ಪೂಜೆ ಎಂದು ಕೂಡ ಪರಿಚಿತವಾಗಿದೆ.[೧] ಏಬ್ರಹಮಿಕ್ ಧರ್ಮಗಳಾದ ಕ್ರೈಸ್ತ ಧರ್ಮ, ಇಸ್ಲಾಂ ಧರ್ಮ ಮತ್ತು ಯಹೂದಿ ಧರ್ಮಗಳಲ್ಲಿ, ಮೂರ್ತಿಪೂಜೆಯು ದೇವರೆಂದು ಭಾವಿಸಿ ದೇವರಿಂದ ಬೇರೆಯಾದ ಯಾವುದಾದರೂ ಅಥವಾ ಯಾರಾದರೂ ವ್ಯಕ್ತಿಯ ಪೂಜೆಯನ್ನು ಸೂಚಿಸುತ್ತದೆ. ಈ ಧರ್ಮಗಳು ಮತ್ತು ಹಲವು ಇತರ ಏಕದೇವತಾವಾದಿ ಧರ್ಮಗಳಲ್ಲಿ, ಮೂರ್ತಿಪೂಜೆಯನ್ನು "ಹುಸಿ ದೇವರುಗಳ ಪೂಜೆ" ಎಂದು ಪರಿಗಣಿಸಲಾಗಿದೆ ಮತ್ತು ಇದು ನಿಷಿದ್ಧವಾಗಿದೆ. ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮದ ಆಸ್ತಿಕ ಮತ್ತು ನಾಸ್ತಿಕ ರೂಪಗಳಂತಹ ಅನೇಕ ಭಾರತೀಯ ಧರ್ಮಗಳಲ್ಲಿ, ಮೂರ್ತಿಗಳನ್ನು ಪರಬ್ರಹ್ಮವಲ್ಲದ ಆದರೆ ಪರಬ್ರಹ್ಮದ ಸಂಕೇತಗಳು, ಅಥವಾ ಆಧ್ಯಾತ್ಮಿಕ ಕಲ್ಪನೆಗಳ ಸಂಕೇತಗಳು, ಅಥವಾ ದೈವಿಕದ ಸಾಕಾರತೆ ಎಂದು ಪರಿಗಣಿಸಲಾಗುತ್ತದೆ. ಇದು ಒಬ್ಬರ ಧಾರ್ಮಿಕ ಪ್ರಯತ್ನಗಳು ಮತ್ತು ಆರಾಧನೆಯನ್ನು (ಭಕ್ತಿ) ಕೇಂದ್ರೀಕರಿಸುವ ಸಾಧನವಾಗಿದೆ. ಪ್ರಾಚೀನ್ ಈಜಿಪ್ಟ್, ಗ್ರೀಸ್, ರೋಮ್, ಆಫ಼್ರಿಕಾ, ಏಷ್ಯಾ, ಅಮೇರಿಕಾಗಳು ಮತ್ತು ಇತರೆಡೆಯ ಸಾಂಪ್ರದಾಯಿಕ ಧರ್ಮಗಳಲ್ಲಿ, ವಿಗ್ರಹ ಅಥವಾ ಪ್ರತಿಮೆಗೆ ಗೌರವ ತೋರುವುದು ಸಾಮಾನ್ಯ ಅಭ್ಯಾಸವಾಗಿದೆ, ಮತ್ತು ಆರಾಧನೆಯ ಮೂರ್ತಿಗಳು ಭಿನ್ನ ಅರ್ಥಗಳು ಹಾಗೂ ಮಹತ್ವವನ್ನು ಹೊಂದಿವೆ.
ಉಲ್ಲೇಖಗಳು
- ↑ Moshe Halbertal; Avishai Margalit; Naomi Goldblum (1992). Idolatry. Harvard University Press. pp. 1–8, 85–86, 146–148. ISBN 978-0-674-44313-6.