ಮೈಕಲ್ ಕಾಲಿನ್ಸ್

ಮೈಕಲ್ ಕಾಲಿನ್ಸ್
ಐರಿಷ್:Mícheál Ó Coileáin

Chairman of the Provisional Government[]
ಅಧಿಕಾರ ಅವಧಿ
January 1922 – 22 August 1922
ಪೂರ್ವಾಧಿಕಾರಿ New office
ಉತ್ತರಾಧಿಕಾರಿ W. T. Cosgrave

Minister for Finance
ಅಧಿಕಾರ ಅವಧಿ
2 April 1919 – 22 August 1922
ಪೂರ್ವಾಧಿಕಾರಿ Eoin MacNeill
ಉತ್ತರಾಧಿಕಾರಿ W. T. Cosgrave

Minister for Home Affairs
ಅಧಿಕಾರ ಅವಧಿ
22 January 1919 – 1 April 1919
ಪೂರ್ವಾಧಿಕಾರಿ New office
ಉತ್ತರಾಧಿಕಾರಿ Arthur Griffith

Teachta Dála
ಅಧಿಕಾರ ಅವಧಿ
May 1921 – August 1922
ಮತಕ್ಷೇತ್ರ
  • Armagh,
  • Cork Mid, North, South, South East and West
ಅಧಿಕಾರ ಅವಧಿ
December 1918 – May 1921
ಮತಕ್ಷೇತ್ರ Cork South
ವೈಯಕ್ತಿಕ ಮಾಹಿತಿ
ಜನನ (೧೮೯೦-೧೦-೧೬)೧೬ ಅಕ್ಟೋಬರ್ ೧೮೯೦
Sam's Cross, County Cork, Ireland
ಮರಣ 22 August 1922(1922-08-22) (aged 31)
Béal na Bláth, County Cork, Ireland  †
ರಾಜಕೀಯ ಪಕ್ಷ Sinn Féin
ಅಭ್ಯಸಿಸಿದ ವಿದ್ಯಾಪೀಠ King's College London
ಧರ್ಮ Roman Catholicism
ಸಹಿ
ಮಿಲಿಟರಿ ಸೇವೆ
ಅಡ್ಡಹೆಸರು(ಗಳು) The Big Fellow
Allegiance
  • Revolutionary Irish Republic
  • Irish Republican Brotherhood
  • Irish Volunteers
  • Irish Republican Army
  • National Army
ವರ್ಷಗಳ ಸೇವೆ 1909–22
Rank Commander-in-chief
Battles/wars
  • Easter Rising
  • Irish War of Independence
  • Irish Civil War


ಮೈಕಲ್ ಕಾಲಿನ್ಸ್(16 ಅಕ್ಟೋಬರ್ 1890 - 22 ಆಗಸ್ಟ್ 1922) ಐರ್ಲೆಂಡಿನ ರಾಜಕೀಯ ಧುರೀಣ.

ಆರಂಭಿಕ ಜೀವನ

ಕೌಂಟಿ ಕಾರ್ಕ್‍ನ ಕ್ಲೊನಾಕಿಲ್ಟಿಯದ ಹತ್ತಿರದ ಕಾರ್ಕ್ ಎಂಬಲ್ಲಿ ರೈತ ಮನೆತನವೊಂದರಲ್ಲಿ ಹುಟ್ಟಿದz. 1906ರಿಂದ 1916ರ ವರೆಗೆ ಲಂಡನ್ನಿನಲ್ಲಿ ಅಂಚೆಯ ಗುಮಾಸ್ತನಾಗಿಯೂ.[] ಕೆಲಕಾಲ ಸಲಹೆ ವಕೀಲನ ಕಛೇರಿಯಲ್ಲೂ ಕೆಲಸ ಮಾಡಿದ.

ಸ್ವಾತಂತ್ರ್ಯ ಹೋರಾಟ

ಐರಿಷ್ ಸ್ವಾತಂತ್ರ್ಯ ಸ್ವಯಂಸೇವಕ ಪಡೆಯಲ್ಲಿ ಸೇರಿ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಭಾಗವಹಿಸಿದ. ಆಗ ಬ್ರಿಟಿಷರು ಈತನನ್ನು ಬಂಧಿಸಿ ಸೆರೆಯಲ್ಲಿಟ್ಟು 1917ರಲ್ಲಿ ಬಿಡುಗಡೆ ಮಾಡಿದರು. 1918ರಲ್ಲಿ ವೆಸ್ಟ್ ಕಾರ್ಕ್ ಲೋಕಸಭಾ ಸದಸ್ಯನಾಗಿ ಚುನಾಯಿತನಾದ. ಅನಂತರ ಸ್ವಾತಂತ್ರ್ಯ ಚಳವಳಿಯ ನೇತಾರರಲ್ಲಿ ಒಬ್ಬನಾದ. ಪ್ರಮುಖ ವ್ಯಕಿಗಳೆಲ್ಲ ಜೈಲು ಸೇರಿದ್ದಾಗ ಕಾಲಿನ್ಸ್ ಸಮರ್ಥ ಗೂಢಚಾರರೆನಿಸಿದ್ದ ಐರಿಷ್ ಸ್ವಾತಂತ್ರ್ಯ ಪಡೆಯವರ ನಾಯಕನಾಗಿ ದೇಶದ ಅರ್ಥ ಮತ್ತು ಗೃಹಖಾತೆಗಳನ್ನು ತನ್ನ ವಶಕ್ಕೆ ತೆಗೆದುಕೊಂಡ. ನಿರ್ದಿಷ್ಟವಾದ ಸುದ್ದಿಗಳು ಪಡೆದು ಸಮಯೋಚಿತವಾಗಿ ನಡೆಯುತಿದ್ದುದೇ ಕಾಲಿನ್ಸನ ಕ್ರಾಂತಿಕಾರಕ ಜಯಕ್ಕೆ ಕಾರಣವಾಯಿತು. ಂಕನ್ ಜೈಲಿನಲ್ಲಿದ್ದ ಸ್ವಾತಂತ್ರ್ಯ ಸಂಗ್ರಾಮದ ನಾಯಕ ಎಮನ್ ಡಿ ವಲೆರನ ಬಿಡುಗಡೆಗೆ ಈತ ಕಾರಣನಾದ. ಈ ವರ್ತನೆ ಬ್ರಿಟಿಷ್ ಸರ್ಕಾರದ ಕಣ್ಣನ್ನು ಕೆಂಪಾಗಿಸಿತು. ಕಾಲಿನ್ಸನನ್ನು ಹಿಡಿದು ಕೊಟ್ಟವರಿಗೆ 10,000 ಪೌಂಡುಗಳ ಬಹುಮಾನ ನೀಡುವುದಾಗಿ ಬ್ರಿಟಿಷ್ ಸರ್ಕಾರ ಘೋಷಿಸಿತು. ಆದರೂ ಈತ ಡಬ್ಲಿನ್‍ನ ಬೀದಿಗಳಲ್ಲಿ ಸೈಕಲ್ ಮೇಲೆ ಧೈರ್ಯವಾಗಿ ತಿರುಗುತ್ತಿದ್ದ. ಕೆಲವು ಕಾರಣಗಳಿಂದಾಗಿ ಎಮನ್ ಡಿ ವಲೆರ ಬ್ರಿಟಿಷರಿಂದ ಐರ್ಲೆಂಡಿನ ಸ್ವಾತಂತ್ರ್ಯಗಳಿಸಲು ಅಸಮರ್ಥನಾದ. ಆಗ ಕಾಲಿನ್ಸ್ ಬ್ರಿಟಿಷರೊಂದಿಗೆ ಸಂಧಾನ ನಡೆಸಿದ ಕಾರಣವಾಗಿ ಕೆಲವೂಂದು ಒಪ್ಪಂದಗಳ ಮೇಲೆ ದಕ್ಷಿಣ ಐರ್ಲೆಂಡ್ ಸ್ವಾತಂತ್ರ್ಯ ಪಡೆಯಿತು ಈ ಒಪ್ಪಂದಕ್ಕೆ ವಲೆರನ ವಿರೋಧವಿತ್ತು. ಕಾಲಿನ್ಸ್ ತಾತ್ಕಾಲಿಕ ಸರ್ಕಾರದ ಅಧ್ಯಕ್ಷನಾದ. ಐರ್ಲೆಂಡಿನ ಉಗ್ರಗಾಮಿಗಳು ಕಾಲಿನ್ಸ್ ಈ ಮುತ್ಸದ್ಸಿತನವನ್ನು ಒಪ್ಪದೆ ದೇಶಾದ್ಯಂತ ಒಳಯುದ್ಧ ಆರಂಭಿಸಿದರು. 1922ರ ಆಗಸ್ಟ್ ತಿಂಗಳಲ್ಲಿ ಪ್ರಯಾಣ ಮಾಡುತಿದ್ದ ಕಾಲಿನ್ಸ್‍ನನ್ನು ಉಗ್ರಪಕ್ಷದ ಶತ್ರುವರ್ಗದವರು ಸ್ಕಿಬೆರೀನೆ ಮತ್ತು ಕಾರ್ಕ್ ನಗರಗಳ ಮಧ್ಯೆ ಹೊಂಚುಹಾಕಿ ಕಾದಿದ್ದು ಗುಂಡಿಕ್ಕಿ ಕೊಂದರು[][]

ಉಲ್ಲೇಖಗಳು

  1. "Mr. Michael Collins". Oireachtas Members Database. Retrieved 1 June 2009.
  2. British Postal Service Appointment Books, 1737-1969 about Michael J Collins
  3. Sigerson, S M "The Assassination of Michael Collins: What Happened at Béal na mBláth?" KDP/Create Space 2013
  4. Feehan, John M "The Shooting of Michael Collins: Murder or Accident?" Cork, Mercier 1981

ಬಾಹ್ಯ ಸಂಪರ್ಕಗಳು

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: