ಮೋಡ

ಅಬ್ದ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಮಳೆ ಲೇಖನಕ್ಕಾಗಿ ಇಲ್ಲಿ ನೋಡಿ.
ಮೋಡ
ಮೋಡ

ವೈಜ್ಞಾನಿಕವಾಗಿ ವಿವರಿಸುವಾಗ, ದೃಷ್ಟಿಗೆ ಗೋಚರಿಸುವಂತೆ ಭೂಮಿಯ ಅಂತರಿಕ್ಷದಲ್ಲಿ ಅಥವಾ ಇನ್ನಾವುದೇ ಗ್ರಹಕಾಯದ ಅಂತರಿಕ್ಷದಲ್ಲಿ ನೀರಾವಿಯಿಂದಲೋ ರಾಸಾಯನಿಕ ವಸ್ತುಗಳಿಂದಲೋ ಉಂಟಾದ ದ್ರವರೂಪದ ವಸ್ತುವನ್ನೋ ಘನೀಭವಿಸಿದ ಹರಳುಗಳನ್ನೋ ಮೋಡಗಳು ಎನ್ನಲಾಗುವುದು. [] ಮೋಡಗಳ ಕುರಿತ ಅಧ್ಯಯನಕ್ಕೆ ನೆಫೋಲಜಿ ಎಂದು ಹೆಸರಾಗಿದೆ.

ಉಂಟಾಗುವ ಬಗೆ

ಕ್ಯೂಮುಲಸ್ ಮೋಡಗಳು

ಸಾಪೇಕ್ಷ ಸಾಂದ್ರತೆ ಹೆಚ್ಚಾಗಿರುವಾಗ ನೀರಾವಿಯನ್ನು ಹೊತ್ತು ಅಂತರಿಕ್ಷಕ್ಕೇರುವ “ಗಾಳಿಯ ಗುಳ್ಳೆಗಳು” (thermals), ಅಂತರಿಕ್ಷದ ಮೇಲಣ ಪದರವನ್ನು ತಲುಪುವಾಗ ವಿಕಾಸಗೊಳ್ಳುತ್ತಲೂ ತಣಿಯುತ್ತಲೂ ಇರುತ್ತದೆ. ಪ್ರತಿ ಕಿಲೋಮೀಟರ್ ಎತ್ತರಕ್ಕೆ ಏರಿದಾಗಲೂ ಅಂತರಿಕ್ಷದ ವಾಯುವಿನ ತಾಪಮಾನ 5-6 °C / km ಎಂಬಂತೆ ಕಡಮೆಯಾಗುತ್ತದೆ. ಹೀಗೆ ತಣಿದು ಡ್ಯೂ ಪೋಯಿಂಟ್ ವಾಯುವಿನ ತಾಪಮಾನಕ್ಕೆ ಸಮಾನವಾದ ತಾಪಮಾನವನ್ನು ಹೊಂದುವಾಗ ನೀರಾವಿ ಘನೀಭವಿಸಿ, condensation nuclei ಎಂದು ಕರೆಯಲ್ಪಡುವ ಅತಿಸೂಕ್ಷ್ಮವಾದ ಪದರಗಳಲ್ಲಿ ಘನೀಭವಿಸಿ ಮಂಜಿನ ಕಣಗಳಾಗಿ ಮಾರ್ಪಾಡು ಹೊಂದುತ್ತವೆ. ಇಂಥ ಮಂಜಿನ ಕಣಗಳೇ ನಮ್ಮ ದೃಷ್ಟಿಗೆ ಗೋಚರಿಸುವ ಮೋಡಗಳು.

ಅಂತರಿಕ್ಷದ ವಾಯುವಿನಲ್ಲಿರುವ ನೀರಾವಿ ಘನೀಭವಿಸಿ ಹಿಮಕಣಗಳು, ಜಲಕಣಗಳು, ಮಳೆ, ಮಂಜು ಇವುಗಳಲ್ಲಿ ಯಾವುದಾದರೊಂದು ರೂಪವನ್ನು ತಾಳುವ ಪ್ರಕ್ರಿಯೆಯನ್ನು precipitation ಎಂದು ಕರೆಯಲಾಗಿದೆ.

ಹೆಚ್ಚಿಗೆ ಓದಲು

  • ಮೋಡಬಿತ್ತನೆ
  • ಮಿಸ್ತ್
  • ಅಣಬೆ ಮೋಡಗಳು

ಆಧಾರ

  1. "Weather Terms". National Weather Service. Retrieved 21 June 2013. {cite web}: Cite has empty unknown parameter: |1= (help)


ಬಾಹ್ಯಸಂಪರ್ಕಗಳು‍