ಯಾಂಗ್ ಡಂಡಾಸ್ ಸ್ಕ್ವೇರ್

ಯಾಂಗ್ ಡಂಡಾಸ್ ಸ್ಕ್ವೇರ್, ಟೊರಾಂಟೋನಗರದ 'ಡೌನ್ ಟೌನ್ ಕಡೆ ವಾಸಿಸುವ ನಿವಾಸಿಗಳ ಪರಿಸರದ ಒಂದು ಕೇಂದ್ರ ಸ್ಥಾನ', ಈಚೌಕವನ್ನು ಸಾರ್ವಜನಿಕರ ಆಟ, ವಿಹಾರಗಳ ಉಪಯೋಗಕ್ಕಾಗಿಯೇ ವಿಶೇಷ ಮುತುವರ್ಜಿವಹಿಸಿ ನಿರ್ಮಿಸಲಾಗಿದೆ. ಇಲ್ಲಿ ಆಯೋಜಿಸುವ ಹಲವಾರು ಪ್ರತಿಯೋಗಿತೆಗಳು, ಮಕ್ಕಳು, ಯುವಜನರು,ಮಹಿಳೆಯರು, ಮತ್ತು ಹಾಗೂ ಹಿರಿಯನಾಗರೀಕರಿಗೆ ಮುದಕೊಡುವರೀತಿಯಲ್ಲಿವೆ. ಅವುಗಳಲ್ಲಿ ಥಿಯೇಟರ್, ಸಂಗೀತ ಸಭೆಗಳು, ಸಾರ್ವಜನಿಕ ಗೌರವಸೂಚಕ ಸಭೆಗಳು, ಅಭಿನಂದನಾ ಸಮಾರಂಭಗಳು, ಮತ್ತು ಪ್ರದೇಶದ ವಾಣಿಜ್ಯಸಂಸ್ಥೆಗಳ ಉಪಲಭಿಗಳನ್ನು ಮೆಚ್ಚಿ ಆಯೋಜಿಸಿದ ಮಹಾಸಭೆಗಳು, ಇವೆಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಲು ಯಾಂಗ್-ಅಂಡ್ ಡಂಡಾಸ್ಸ್ಕ್ವೇರ್ ಬೋರ್ಡ್ ಆಫ್ ಮ್ಯಾನೇಜ್ಮೆಂಟ್ ಕಂಕಣಬದ್ಧವಾಗಿದೆ. ಇದು ಟೊರಾಂಟೋ ನಗರದ ಅಧೀನದಲ್ಲಿದೆ.

ಯಾಂಗ್ ಡಂಡಾಸ್ ಸ್ಕ್ವೇರ್, ಸಾರ್ವಜನಿಕ ಚೌಕವಾಗಿದ್ದು ಯಾಂಗ್ ಸ್ಟ್ರೀಟ್ ಮತ್ತು ಡುಂಡಾಸ್ ಸ್ಟ್ರೀಟ್ ಪೂರ್ವ ಛೇದಕ ಡೌನ್ಟೌನ್ ಟೊರೊಂಟೊ, ಒಂಟಾರಿಯೊ, ಕೆನಡಾದ ಆಗ್ನೇಯ ಮೂಲೆಯಲ್ಲಿ ನೆಲೆಗೊಂಡಿದೆ. ಈ ಚೌಕವು ನಗರದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಚೌಕದ ಸುತ್ತಲು ಇತರ ಪ್ರಮುಖ ಹೆಗ್ಗುರುತುಗಳಿವ. ಅವು ಟೊರೊಂಟೊ ಈಟನ್ ಸೆಂಟರ್, ೧೦ ಡುಂಡಾಸ್ ಸ್ಟ್ರೀಟ್ ಪೂರ್ವ, ೩೩ ಡುಂಡಾಸ್ ಸ್ಟ್ರೀಟ್ ಪೂರ್ವ, ರೇರ್ಸನ್ ವಿಶ್ವವಿದ್ಯಾಲಯ, ಎಡ್ ಮಿರ್ವಿಶ್ ಥಿಯೇಟರ್, ಬೇ ಹಜಾರ ಮತ್ತು ಸಿಟಿ ಟಿವಿ ಕಟ್ಟಡ.[]

ವಾಸ್ತು ಶಿಲ್ಪ

A 180 degree panoramic view taken from the centre of the square.
A 180 degree panoramic view of Yonge-Dundas Square in August 2011

ಉಲ್ಲೇಖಗಳು

  1. [https://web.archive.org/web/20160319123153/http://www.ydsquare.ca/all-about-the-square/who-designed-the-square-all-about-the-design.html Archived 2016-03-19 ವೇಬ್ಯಾಕ್ ಮೆಷಿನ್ ನಲ್ಲಿ. Who Designed The Square? (All About The Design)