ರಾಮಾನುಜ
ಹಿಂದೂ ತತ್ತ್ವಶಾಸ್ತ್ರ ಸರಣಿಯ ಲೇಖನ | |
![]() | |
ಪಂಥಗಳು | |
---|---|
ಸಾಂಖ್ಯ · ನ್ಯಾಯ | |
ವೈಶೇಷಿಕ · ಯೋಗ | |
ಪೂರ್ವ ಮೀಮಾಂಸಾ · ವೇದಾಂತ | |
ವೇದಾಂತ ಪಂಥಗಳು | |
ಅದ್ವೈತ · ವಿಶಿಷ್ಟಾದ್ವೈತ | |
ದ್ವೈತ | |
ಪ್ರಮುಖ ವ್ಯಕ್ತಿಗಳು | |
ಕಪಿಲ · ಗೋತಮ | |
ಕಣಾದ · ಪತಂಜಲಿ | |
ಜೈಮಿನಿ · ವ್ಯಾಸ | |
ಮಧ್ಯಕಾಲೀನ | |
ಆದಿಶಂಕರ · ರಾಮಾನುಜ | |
ಮಧ್ವ · ಮಧುಸೂದನ | |
ವೇದಾಂತ ದೇಶಿಕ · ಜಯತೀರ್ಥ | |
ಆಧುನಿಕ | |
ರಾಮಕೃಷ್ಣ · ರಮಣ | |
ವಿವೇಕಾನಂದ · ನಾರಾಯಣ ಗುರು | |
ಅರವಿಂದ ·ಶಿವಾನಂದ | |
ಶ್ರೀ ರಾಮಾನುಜರು ಸಂತರು, ವಿದ್ವಾಂಸರು ಹಾಗೂ ದಾರ್ಶನಿಕರು ಮತ್ತು ಶ್ರೀ ವಿಶಿಷ್ಟಾದ್ವೈತ ಸಿದ್ಧಾಂತಪ್ರತಿಪಾದಕರು ಆಗಿದ್ದರು.
ರಾಮಾನುಜ ಅಥವಾ ರಾಮಾನುಜಾಚಾರ್ಯ (ಜೀವಾವಧಿ: ೧೦೧೭ - ೧೧೩೭ ಮಧ್ಯೆ) ವೇದಾಂತದ ಪ್ರಸಿದ್ಧ ಸಿದ್ಧಾಂತಗಳಲ್ಲೊಂದಾದ ವಿಶಿಷ್ಟಾದ್ವೈತದ ಪ್ರತಿಪಾದಕರಲ್ಲಿ ಪ್ರಮುಖರು. ಇವರು ತಮಿಳುನಾಡಿನ ಪೆರಂಬದೂರಿನಲ್ಲಿ ಸುಮಾರು ೧೦೧೭ರಲ್ಲಿ ಹುಟ್ಟಿದರು. ರಾಮಾನುಜ ಅವರ ಗುರುಗಳು ಯಾದವ ಪ್ರಕಾಶ.ಇವರು ಬಹು ದೊಡ್ಡ ವಿದ್ವಾಂಸರು.ಇವರು ಪ್ರಾಚೀನ ಅದ್ವೈತ ವೇದಾಂತ ಸನ್ಯಾಸ ಸಂಪ್ರದಾಯದ ಭಾಗವಾಗಿದ್ದರು.ಶ್ರೀ ವೈಷ್ಣವ ಸಂಪ್ರದಾಯದ ಪ್ರಕಾರ ರಾಮಾನುಜನು ತನ್ನ ಗುರುಗಳ ವಿರುದ್ದ ನಿಂತು ಅವನು ಪರಿಪೂರ್ಣ ಅದ್ವೈತ ವೇದಾಂತವನ್ನು ಪಾಲಿಸಿದ ಎಂದು ಹೇಳಲಾಗಿದೆ.
ರಾಮಾನುಜರವರು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು ಇವರ ತಂದೆ ಅಸುರಿ ಕೇಶವ ಸೊಮಯಾಜಿ ದೀಕ್ಷೀತರು. ತಾಯಿಯ ಹೆಸರು ಕಾಂತಿಮತಿ.