ರಿಸೋರ್ಸ್‌ ಸ್ಯಾಟ್‌–2 ಎ

ಆರು ದೂರ ಸಂವೇದಿ ಭೂ ನಿರೀಕ್ಷಣಾ ಉಪಗ್ರಹಗಳು ಎ ಶ್ರೇಣಿಯವು 2014 ರಲ್ಲಿ ಸ್ಥಾಪಿತವಾದವು.

ರಿಸೋರ್ಸ್‌ ಸ್ಯಾಟ್‌–2 ಎ ಉಡಾವಣೆ ಯಶಸ್ವಿ

ಗಗನ ನೌಕೆ
ಪಿಎಸ್`ಎಲ್`ವಿ.ಯ ಮಾದರಿ ಚಿತ್ರ
  • ೫೫೫೫೫೫೫೫೫೫೫೫೫೫೫೫೫೫೫೫೫೫೫೫೫
  • ಹೆಸರು = ರಿಸೋರ್ಸ್ 2A
  • ಯೋಜನೆ ವಿಧ = ದೂರದ ಸಂಜ್ಞೆ
  • ಆಯೋಜಕರು = ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ
  • COSPAR_ID = 2016-074A
  • mission_duration = 5 ವರ್ಷಗಳ
  • ಉಡಾವಣೆಯಲ್ಲಿ ತೂಕ = 1235 ಕೆಜಿ
  • ಉಡಾವಣೆ date = ಡಿಸೆಂಬರ್ 7, 2016
  • ಉಡಾವಣೆ rocket = ಪೋಲಾರ್ ಉಪಗ್ರಹ ಉಡಾವಣಾ ವಾಹನ

ತೀಯ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಪ್ರಯೋಜನವಾಗಬಲ್ಲ ದೂರ ಸಂವೇದಿ ಉಪಗ್ರಹ ‘ರಿಸೋರ್ಸ್‌ಸ್ಯಾಟ್‌–2 ಎ’ ಉಡಾವಣೆ 7 ಡಿಸೆಂ, 2016 ಬುಧವಾರ ಬೆಳಿಗ್ಗೆ ಇಲ್ಲಿನ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆಯಿತು.

  • ಇದು ಪಿಎಸ್‌ಎಲ್‌ವಿ ಉಡ್ಡಯನ ವಾಹನದಿಂದ 38 ನೇ ಉಡಾವಣೆ. 1235 ಕೆ.ಜಿ ತೂಕದ ಮೂರು ಹಂತಗಳ ಕ್ಯಾಮೆರಾ ವ್ಯವಸ್ಥೆಯ ಪೇಲೋಡ್‌ಗಳನ್ನು ಹೊತ್ತ ಪಿಎಸ್‌ಎಲ್‌ವಿ– ಸಿ 36 ರಾಕೆಟ್‌ ನಿಗದಿತ ಸಮಯಕ್ಕೆ ಸರಿಯಾಗಿ ಆಕಾಶಕ್ಕೆ ಹಾರಿತು.
ಉದಾ:GOES-8,ಯು.ಎಸ್.ಎ.ಯ ಹವಾಮಾನ ನಿರೀಕ್ಷಣಾ ಉಪಗ್ರಹ .

ಉದ್ದೇಶ

ಈ ಸರಣಿಯ ಭೂ ಅವಲೋಕನ ಉಪಗ್ರಹಗಳು ಭೂಮಿಯಮೇಲೆ ಕಣ್ಣಿಡಲು, ನಿರ್ದಿಷ್ಟವಾಗಿ ಕಕ್ಷೆಯಿಂದ ಭೂ ವೀಕ್ಷಣೆಗಾಗಿ ವಿನ್ಯಾಸಗೊಳಿಸಲಾಗಿದೆ. ಅಂತಹ ಉಪಗ್ರಹಗಳು ಪರಿಸರ ಮೇಲ್ವಿಚಾರಣೆ, ಪವನಶಾಸ್ತ್ರ, ಇತ್ಯಾದಿ ನಕ್ಷೆ ಮಾಡುವ ಮಿಲಿಟರಿಯೇತರ ಉಪಯೋಗಗಳಲ್ಲಿ ಉದ್ದೇಶಿಸಲಾಗಿದೆ.

ವಿವರ

  • ಪಿಎಸ್ಎಲ್‌ವಿ 7 ಡಿಸೆಂ, 2016 ಬೆಳಿಗ್ಗೆ 10.25 ಕ್ಕೆ ಉಡ್ಡಯನ ವೇದಿಕೆಯಿಂದ ಮೆಲಕ್ಕೆ ಚಿಮ್ಮಿತು. ಭೂಮಿಯಿಂದ 824 ಕಿ.ಮೀ ಎತ್ತರದಲ್ಲಿರುವ ಧ್ರುವೀಯ ಸೂರ್ಯಸ್ಥಾಯಿ ಕಕ್ಷೆಯನ್ನು ತಲುಪುವವರೆಗಿನ ಎಲ್ಲ ಹಂತಗಳಲ್ಲಿಯೂ ದಹನ ಮತ್ತು ಬೇರ್ಪಡಿಕೆಯ ಪ್ರಕ್ರಿಯೆ ನಿಖರವಾಗಿ ನಡೆಯಿತು. 17 ನಿಮಿಷ 5 ಸೆಕೆಂಡುಗಳ ಯಾನ ನಡೆಸಿದ ನೌಕೆಯು ನಿಗದಿತ ಕಕ್ಷೆಯಲ್ಲಿ ಉಪಗ್ರಹವನ್ನು ನೆಲೆಗೊಳಿಸಿತು.
  • ಮಾತೃ ನೌಕೆಯಿಂದ ಬೇರ್ಪಟ್ಟ ಉಪಗ್ರಹದ ಸೌರ ಫಲಕಗಳು ಸ್ವಯಂಚಾಲಿತವಾಗಿ ತೆರೆದುಕೊಂಡವು. ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಬೆಂಗಳೂರಿನಲ್ಲಿರುವ ಇಸ್ರೊದ ಟೆಲಿಮೆಟ್ರಿ, ಟ್ರ್ಯಾಕಿಂಗ್‌ ಮತ್ತು ಕಮಾಂಡ್‌ ನೆಟ್‌ವರ್ಕ್‌ ಉಪಗ್ರಹವನ್ನು ನಿಯಂತ್ರಣಕ್ಕೆ ಪಡೆದುಕೊಂಡಿತು. ಮುಂದಿನ ಕೆಲವೇ ದಿನಗಳಲ್ಲಿ ಉಪಗ್ರಹ ಕೆಲಸ ಆರಂಭಿಸಲಿದೆ. ಮೂರು ಹಂತಗಳ ಕ್ಯಾಮೆರಾ ವ್ಯವಸ್ಥೆಯ ಮೂಲಕ ಮಾಹಿತಿ ಮತ್ತು ಚಿತ್ರಗಳನ್ನು ರವಾನಿಸಲಿದೆ.

[೧]

ವಿಶೇಷತೆ

  • ದೇಶ– ವಿದೇಶಗಳಲ್ಲಿನ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಯಲ್ಲಿ ಈ ಉಪಗ್ರಹದ ಮಾಹಿತಿ ಅತ್ಯಂತ ಉಪಯುಕ್ತ. ‘ಪಿಎಸ್‌ಎಲ್‌ವಿಯ ಪಥದರ್ಶಕ ಕಾರ್ಯಕ್ಕೆ ಇದೇ ಮೊದಲ ಬಾರಿಗೆ ನಮ್ಮದೇ  ಆದ ‘ನಾವಿಕ್‌’ ವ್ಯವಸ್ಥೆಯನ್ನು ಬಳಸಿಕೊಂಡಿದ್ದೇವೆ. ‘ನಾವಿಕ್‌’ನ ಪ್ರೊಸೆಸರ್‌ ಮತ್ತು ರಿಸೀವರ್‌ ಪಿಎಸ್‌ಎಲ್‌ವಿಯ ಪಥದರ್ಶಕ ಕಾರ್ಯಕ್ಕೆ ನೆರವಾಯಿತು’ ಎಂದು ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಕೆ. ಸಿವನ್ ತಿಳಿಸಿದ್ದಾರೆ.
  • ‘ಜಿಎಸ್‌ಎಲ್‌ವಿ ಎಂಕೆ 3’ 2017 ರ ಜನವರಿ 20ರಂದು ಉಡಾವಣೆಗೊಳ್ಳಲಿದೆ. 2016 ರಲ್ಲಿ ಒಟ್ಟು ಒಂಬತ್ತು ಉಡಾವಣೆಗಳಾಗಿವೆ ಎಂದು ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಪಿ. ಕುಂಞಕೃಷ್ಣನ್‌ ತಿಳಿಸಿದ್ದಾರೆ.
  • ಎಸ್‌ಎಲ್‌ವಿ ಸಾಮರ್ಥ್ಯ ಸಾಬೀತು: ಪಿಎಸ್‌ಎಲ್‌ವಿ ರಾಕೆಟ್‌ ಪುನಃ ತನ್ನ ಶಕ್ತಿಯನ್ನು ಸಾಬೀತುಪಡಿಸಿದೆ. ಇಲ್ಲಿಯವರೆಗೆ 122 ಉಪಗ್ರಹಗಳನ್ನು ಉಡಾವಣೆ ಮಾಡಿದ್ದು, ಇದರಲ್ಲಿ ಭಾರತೀಯ ಉಪಗ್ರಹಗಳ ಸಂಖ್ಯೆ 43 ಮತ್ತು ವಿದೇಶಿ ಉಪಗ್ರಹಗಳ ಸಂಖ್ಯೆ 79.

ಕೃಷಿಗೆ ಸಹಾಯಕ ಉಪಗ್ರಹ

  • ರಿಸೋರ್ಸ್‌ ಸ್ಯಾಟ್‌ –2 ಎ ಕಳುಹಿಸುವ ಮಾಹಿತಿ ಮತ್ತು ಚಿತ್ರಗಳು ವಿಶೇಷವಾಗಿ ರೈತರಿಗೆ ಪ್ರಯೋಜನವಾಗಲಿದೆ ಎಂದು ಇಸ್ರೊ ವಿಜ್ಞಾನಿಗಳು ತಿಳಿಸಿದ್ದಾರೆ. ವಿವಿಧ ಬೆಳೆಗಳ ಪ್ರದೇಶದ ವ್ಯಾಪ್ತಿ, ಕೃಷಿ ಉತ್ಪಾದನೆಯಲ್ಲಿ ಅಂದಾಜು, ಬರ ಪ್ರದೇಶದ ಮಾಹಿತಿ, ಸಾಯಿಲ್‌ ಮ್ಯಾಪಿಂಗ್‌, ಇಳುವರಿ ವ್ಯವಸ್ಥೆಯ ವಿಶ್ಲೇಷಣೆಗೆ ಮತ್ತು ತೋಟದ ಬೆಳೆಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಿದೆ.

ಉಪಗ್ರಹ ವಿಶೇಷತೆ

ರಿಸೋರ್ಸ್‌ ಸ್ಯಾಟ್‌ 1 ಮತ್ತು 2 ರಲ್ಲಿ ಇದ್ದಂತೆ ಈಗ ರವಾನೆಗೊಂಡಿರುವ ಉಪಗ್ರಹದಲ್ಲೂ ಮೂರು ಹಂತಗಳ ಕ್ಯಾಮೆರಾ ವ್ಯವಸ್ಥೆ ಇದೆ. ಅವುಗಳೆಂದರೆ, ಅಡ್ವಾನ್ಸ್‌ಡ್‌ ವೈಡ್‌ ಫೀಲ್ಡ್‌ ಸೆನ್ಸರ್‌, ಲೀನಿಯರ್‌ ಇಮೇಜಿಂಗ್‌ ಸೆಲ್ಫ್‌ ಸ್ಕ್ಯಾನರ್‌–3 ಕ್ಯಾಮೆರಾಗಳು ಮತ್ತು ಲೀನಿಯೆರ್‌ ಇಮೇಜಿಂಗ್‌ ಸೆಲ್ಫ್‌ ಸ್ಕ್ಯಾನರ್‌–4 ಕ್ಯಾಮೆರಾ ಅತ್ಯಂತ ಶಕ್ತಿಶಾಲಿ.[೨][೩]

ಹೊತ್ತ ಸರಕುಗಳು

  • ಹೊತ್ತ ಸರಕಿನ ಭಾಗವಾಗಿ ಉಪಗ್ರಹ ಉದರದಲ್ಲಿ 3 ಉಪಕರಣಗಳನ್ನು ಹೊಂದಿದೆ.
  • ಸುಧಾರಿತ ವೈಡ್ ಫೀಲ್ಡ್ ಸಂವೇದಕ (AWiFS) - ಇದು SWIR ಮೂರು ರೋಹಿತದ ಬ್ಯಾಂಡ್ ಮತ್ತು ಎಸ್ ಡಬ್ಲ್ಯೂಐಆರ್ ಒಂದು ಬ್ಯಾಂಡ್ನಲ್ಲಿ ಕಾರ್ಯಾಚರಿಸುತ್ತದೆ. ಇದು 56 ಮೀಟರ್ ದೇಶಿಕ ಚಿತ್ರಗಳನ್ನು ರಾಜ್ಯ ಮಟ್ಟದಲ್ಲಿ ಉಪಯುಕ್ತವಾಗಿರುವುದನ್ನು ಒದಗಿಸುತ್ತದೆ.
  • ಲೀನಿಯರ್ ಇಮೇಜಿಂಗ್ ಸ್ವಯಂ ಸ್ಕ್ಯಾನಿಂಗ್ ಸಂವೇದಕ (LISS-III) - ಇದು VNIRನಲ್ಲಿ ಮೂರು ರೋಹಿತದ ಬ್ಯಾಂಡ್ನಲ್ಲಿ ಕೆಲಸ ನಿರ್ವಹಿಸುತ್ತದೆ. ಎರಡು VNIR ಮತ್ತು ಒಂದು ಸಣ್ಣ ತರಂಗದ್ದು - ಅತಿಗೆಂಪು (ಎಸ್ ಡಬ್ಲ್ಯೂಐಆರ್) ಬ್ಯಾಂಡ್ವಿಡ್ತ್ 23.5 ಮೀಟರ್ ದೈಶಿಕ ಸ್ಪಷ್ಟತೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಜಿಲ್ಲಾ ಮಟ್ಟದಲ್ಲಿ ಚಿತ್ರಗಳನ್ನು ಒದಗಿಸಬಲ್ಲದು. ಇದು 740 ಕಿ.ಮೀ ವೈಶಾಲಿಕೆ ಮತ್ತು 5 ದಿನಗಳ ಪುನಃ ದರ್ಶನ ಅವಧಿಯನ್ನು ಹೊಂದಿದೆ.
  • LISS-IV ರ ಕ್ಯಾಮೆರಾ - ಇದು ತಾಲೂಕು ಮಟ್ಟದಲ್ಲಿ ಮಾಹಿತಿಯನ್ನು ನೀಡಬಲ್ಲದು. 5.8 ಮೀಟರ್ ದೈಶಿಕ ಸ್ಪಷ್ಟತೆ ಕಾಣುವ ಶಕ್ತಿ ಮತ್ತು ಸಮೀಪದ ಅತಿಗೆಂಪು ಪ್ರದೇಶದ ಮೂರು ರೋಹಿತದ ಬ್ಯಾಂಡ್ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 70 ಕಿ.ಮೀ ಉದ್ದದ ಮತ್ತು 5 ದಿನಗಳ ಪುನರ್ದಶನ ಅವಧಿಯಲ್ಲಿ ಕಾರ್ಯ ನಿರ್ವಹಿಸುವುದು.
  • ಉಪಗ್ರಹವು ಇದು ನೆಲದ ಕೇಂದ್ರಗಳಿಗೆ ಆನಂತರ ಓದಿ ಭೂಮಿಗೆ ಕಳಿಸಲು, ಚಿತ್ರಗಳನ್ನು ಸಂಗ್ರಹಿಸಲು 200 (Giga Bits) ಗಿಗಾ ಬಿಟ್ಸ್ ಸಾಮರ್ಥ್ಯದ ಎರಡು ಸಾಲಿಡ್ ಸ್ಟೇಟ್ ರೆಕಾರ್ಡರ್ಗಳನ್ನು ಹೊಂದಿದೆ. [೪]

ನೋಡಿ

ಉಲ್ಲೇಖ