ಲೈಲತುಲ್ ಖದ್ರ್
ರಂಜಾನ್ ತಿಂಗಳಿಗೆ ಇರುವ ಇನ್ನೂಂದು ಮಹತ್ವವು ಮುಖ್ಯವಾಗಿ ಈ ತಿಂಗಳಲ್ಲಿ ಪ್ರವಾದಿಯರಿಗೆ ಪವಿತ್ರ ಖುರಾನ್ ಬೋದನೆಯಾಯಿತೆಂಬ ಕಾರಣಕ್ಕೆ ಪ್ರವಾದಿಯವರು ಮಕ್ಕಾದ ಹೊರಹೊಲಯದಲ್ಲಿರುವ ಹೀರಾ ಎಂಬ ಪರ್ವತದ ಗುಹೆಯಲ್ಲಿ ಅಲ್ಲಾನನ್ನು ಜ್ಞಾನಿಸುತಾ ಕೂತಾಗ ಓದು ಬರಹ ತಿಳಿಯದವರಿಗೆ ದೇವರ ಪ್ರೇರಣೆಯಂತೆ ದೇವದೂತ ಜಿಬ್ರಾಯಿಲ್ ಪ್ರತ್ಯಕ್ಷವಾಗಿ ಖುರಾನ್ ಗ್ರಂಥವನ್ನು ಬೋಧಿಸಿದವರು ಈಗ್ರಂಥವು ಹಂತ ಹಂತವಾಗಿ ಹೆಚ್ಚುಕಡಿಮೆ 23 ವರ್ಷಗಳಲ್ಲಿ ಬೋದಿಸ್ಪಟ್ಟಿತು ಖುರಾನ್ ಗ್ರಂಥವನ್ನು ಪ್ರಥಮವಾಗಿ ಪ್ರವಾದಿಯವರಿಗೆ ರಂಜಾನ್ ತಿಂಗಳಲ್ಲಿ ಬೋದಿಸಲಾಯಿತೆಂದು ಹೇಳಲಾಗುತ್ತದೆ. ಇದಕ್ಕಾಗಿ ಉಪವಾಸದ 30 ದಿನಗಳ ರಾತ್ರಿ ಮಸೀದಿಯಲ್ಲಿ ಒಂದೆರಡು ಗಂಟೆಗಳ ಕಾಲ ತರಾವೀಹ್ ಎಂಬ ವಿಶೇಷ ನಮಾಜ್ ಇರುತ್ತದೆ . ಈ ನಮಾಜ್ನಲ್ಲಿ ನೇತೃತ್ವ ವಹಿಸುವ ಹಾಫಿಝ್ಗಳು ಇಡೀ ಖುರಾನ ಅನ್ನು ಕಂಠಪಾಠ ಮಾಡಿಕೊಂಡು ಓದುತ್ತಾರೆ. ಈ ತಿಂಗಳ 30 ದಿನಗಳ ಪೈಕಿ ಒಂದು ದಿನವನ್ನು ಲೈಲತುಲ್ ಕದ್ರ್ ದಿನವೆಂದು ಕರೆಯಲಾಗುತ್ತದೆ. ಲೆಲತುಲ್ ಕದ್ರ್ ಎಂಬ ಪುಣ್ಯ ರಾತ್ರಿ ಈ ತಿಂಗಳಿನ ಯಾವ ರಾತ್ರಿಯೆಂಬುದೆ ನಿಕರವಾಗಿಲ್ಲಿ ತಿಳಿಯಲಾಗಿಲ್ಲ. ರಮಳಾನಿನ ಕೊನೆಯ ಹತ್ತು ಬೆಸ ಸಂಖ್ಯೆಗಳಲ್ಲಿ ಬರುವ ದಿನವು 83 ವರ್ಷಗಳ ಇಬಾದತ್ ಗೆ ಸರಿಸಮಾನವಾಗಿದ್ದು ಅದನ್ನೇ ಲೈಲತುಲ್ ಖದ್ರ್ ಎಂದು ಕರೆಯಲಾಗುತ್ತಿದೆ. ದೇವ ದೂತರ ನೇತಾರ ಜಿಬ್ರೀಲ್ (ಅ) ರ ನೇತ್ರತ್ವದಲ್ಲಿ ಮಲಕುಗಳ ಸೈನ್ಯವೇ ಭೂಮಿಗಿಳಿಯುತ್ತಿದ್ದು ಫಜ್ರ್ ತನಕ ಭೂಮಿಯಲ್ಲಿರುತ್ತಾರೆ.
ಉಮ್ರಾ:
ರಮಳಾನ್ ನಲ್ಲಿ ನಿರ್ವಹಿಸುವ ಉಮ್ರಾ ಕ್ಕೆ ಹಜ್ ನ ಪ್ರತಿಫಲ ವಿದೆ.
ಇಅತಿಕಾಪ್ಹ್:
ರಮಳಾನ್ ನ ಅಂತಿಮ 10 ದಿವಸಗಳಲ್ಲಿ ಮಸೀದಿಯಲ್ಲಿ ಇ ಅತಿಕಾಪ್ಹ್ ಮಾಡುವುದು ಪ್ರಬಲ ಸುನ್ನತ್ ಆಗಿದ್ದು ಅದು ರಮಳಾನ್ 20 ರ ವ್ರತ ತೊರೆದ ಕೂಡಲೇ ಪ್ರಾರಂಭವಾಗಿ ಈದ್ ನಮಾಜ್ ಹಾಗೂ ಖುತ್ಬಾ ತನಕವಾಗಿರುತ್ತದೆ. ರಮಳಾನ್ ತಿಂಗಳಲ್ಲಿ ಸಂಪೂರ್ಣವಾಗಿ ಮಸೀದಿಯಲ್ಲಿ ಇಅತಿಕಾಪ್ಹ್ ಕುಳಿತುಕೊಳ್ಳುವುದು ಪ್ರಬಲ ಸುನ್ನತ್ ಆಗಿರುತ್ತದೆ.
ಖುರ್ ಆನ್: ಪವಿತ್ರ ರಮಳಾನ್ ಖುರ್ ಆನ್ ಅವತೀರ್ಣ ಗೊಂಡ ಮಾಸವಾದ್ದರಿಂದ ಖುರ್ ಆನ್ ಹೆಚ್ಚೆಚ್ಚು ಓದುತ್ತಾ ಅಲ್ಲಾಹನ ಬಳಿಯ ಪುಣ್ಯ ಗಳಿಸಿರಿ. ಇಹ-ಪರ ವಿಜಯಿಗಳಾಗಿರಿ. ಪ್ರತಿಯೊಂದು ವಖ್ತ್ ನ ನಮಾಜ್ಹಿನ ಬಳಿಕ 2 ಪೇಪರ್ ಅಂದರೆ 4 ಪುಟಗಳನ್ನು ಓದಿದರೆ ಒಂದು ದಿನಕ್ಕೆ ಕನಿಷ್ಟ 1 ಜುಜ್ಹ್ ಅ ಸಂಪೂರ್ಣ ಗೊಳಿಸಬಹುದು. ಪ್ರಾರಂಭಿಸಿ, ಮುಂದುವರಿಸಿ.
ಫಿತ್ರ್ ಝಕಾತ್: ಈದ್ ಚಂದ್ರ ದರ್ಶನ ವಾದ ಕೂಡಲೇ ಅಂದಾಜು 3 ಕಿಲೋ ಅಕ್ಕಿಯನ್ನು ಈದ್ ನಮಾಝಿಗೆ ಮುಂಚಿತವಾಗಿ ಕಡ್ಡಾಯವಾಗಿ ಅರ್ಹರಿಗೆ ಕೊಡಬೇಕಾಗಿದೆ.