ವಯನಾಡು ಜಿಲ್ಲೆ

ವಯನಾಡು ಜಿಲ್ಲೆ
ಮೇಲಿನಿಂದ ಪ್ರದಕ್ಷಿಣಾಕಾರವಾಗಿ:
ಚೆಂಬ್ರಾ ಶಿಖರ, ವಯನಾಡ್ ವನ್ಯಜೀವಿ ಅಭಯಾರಣ್ಯ,
ಸುಲ್ತಾನ್ ಬತ್ತೇರಿಯಲ್ಲಿ ಮಾಲ್, ಭತ್ತದ ಗದ್ದೆಗಳು, ಕರಪುಳ ಅಣೆಕಟ್ಟು ಪ್ರವೇಶ, ಎಡಕ್ಕಲ್ ಗುಹೆಗಳು.
Etymology: ವಯಲ್ ನಾಡು: ಭತ್ತದ ಗದ್ದೆಗಳ ನಾಡು[೧]
Motto: 
"ವೇ ಬಿಯಾಂಡ್"[೨]
Coordinates: 11°36′18″N 76°04′59″E / 11.605°N 76.083°E / 11.605; 76.083
ದೇಶ ಭಾರತ
ರಾಜ್ಯಕೇರಳ
ಜಿಲ್ಲಾ ರಚನೆ1980 ನವೆಂಬರ್ 1; 15952 ದಿನ ಗಳ ಹಿಂದೆ (1-೧೧-1980)
Area
 • Total೨,೧೩೨ km (೮೨೩ sq mi)
Time zoneUTC+05:30 (ಭಾರತದ ನಿರ್ದಿಷ್ಟ ಕಾಲಮಾನ)
Area code(s)4936, 4935
Websitewayanad.gov.in

ವಯನಾಡು(ಮಲಯಾಳಂ: വയനാട്) ಭಾರತದ ರಾಜ್ಯ ಕೇರಳದ ಈಶಾನ್ಯದಲ್ಲಿರುವ ಒಂದು ಜಿಲ್ಲೆಯಾಗಿದ್ದು, ಕಲ್ಪೆಟ್ಟಾ ಪುರಸಭೆಯಲ್ಲಿ ಆಡಳಿತ ಪ್ರಧಾನ ಕಛೇರಿಯನ್ನು ಹೊಂದಿದೆ. ಇದು ಕೇರಳದ ಏಕೈಕ ಪ್ರಸ್ಥಭೂಮಿಯಾಗಿದೆ. ವಯನಾಡು ಜಿಲ್ಲೆಯ ಅತಿ ಎತ್ತರದ ಪ್ರದೇಶವಾಗಿದೆ. ಜಿಲ್ಲೆಯನ್ನು 1 ನವೆಂಬರ್ 1980 ರಂದು ಕೇರಳದ 12 ನೇ ಜಿಲ್ಲೆಯಾಗಿ ಕಲ್ಲಿಕೋಟೆ ಜಿಲ್ಲೆ ಮತ್ತು ಕಣ್ಣೂರು ಜಿಲ್ಲೆಗಳಿಂದ ಪ್ರದೇಶಗಳನ್ನು ಬೇರ್ಪಡಿಸಿ ರಚಿಸಲಾಯಿತು.ವಯನಾಡ್ನಲ್ಲಿ ಅನೇಕ ಮಸೀದಿಗಳಿವೆ. ವಯನಾಡು ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾದ ಪ್ರಮುಖ ಪ್ರವಾಸಿತಾಣ. ತನ್ನ ಶುಭ್ರ ಪರಿಸರವನ್ನುಳಿಸಿಕೊಂಡಿರುವ ಕೇರಳದ ಕೆಲವೇ ಜಿಲ್ಲೆಗಳಲ್ಲಿ ಒಂದು. ಈ ಜಿಲ್ಲೆಯ ಕೆಲವು ಪ್ರದೇಶದಲ್ಲಿ ನಾಗರಿಕತೆಯನ್ನೇ ಕಾಣದ ಕೆಲ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ. ಅಂಬಲಕುತಿಮಲ ಮತ್ತು ಎಡಕ್ಕಲ್ಲಿನ ಕೆಳಬೆಟ್ಟಗಳಲ್ಲಿ ಪೂರ್ವೇತಿಹಾಸದ ಕಾಲದ ಮೊಟ್ಟಮೊದಲಿನ ಕೆತ್ತನೆಗಳು ದೊರಕಿವೆ.

ವ್ಯುತ್ಪತ್ತಿ

'ವಯನಾಡು' ಎಂಬ ಹೆಸರು ಮಲಯಾಳಂ ಭಾಷೆಯ 'ವಯಲ್ ನಾಡೊ' ನಿಂದ ಬಂದಿದೆ, ' ಭತ್ತದ ಹೊಲಗಳ ಭೂಮಿ' ಎಂಬುದು ಇದರ ಕನ್ನಡ ಅನುವಾದವಾಗಿದೆ.[೩]

ಸಸ್ಯ ಮತ್ತು ಪ್ರಾಣಿ

ವಯನಾಡಿನ ಮಣ್ಣು ಮತ್ತು ಹವಾಮಾನವು ವಾಣಿಜ್ಯ ಆಧಾರದ ಮೇಲೆ ತೋಟಗಾರಿಕೆಗೆ ಸೂಕ್ತವಾಗಿದೆ. ತರಕಾರಿಗಳ ಕೃಷಿಯನ್ನು ಉತ್ತೇಜಿಸಲು ಮತ್ತು ತೋಟಗಳನ್ನು ಸ್ಥಾಪಿಸಲು, ಕೇರಳದ ಕೃಷಿ ವಿಶ್ವವಿದ್ಯಾಲಯವು ಅಂಬಲವಾಯಲ್‌ನಲ್ಲಿ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರವನ್ನು ನಡೆಸುತ್ತಿದೆ.

ಪ್ರಮುಖ ಪ್ರವಾಸಿ ತಾಣಗಳು

ಎಡಕಲ್ಲು ಗುಹೆಯ ಒಳಗೆ ಕಂಡು ಬರುವ ಶಿಲಾ ಮಾನವನ ಬರಹ-೨
ಎಡಕಲ್ಲು ಗುಹೆಯ ಒಳಗೆ ಕಂಡು ಬರುವ ಶಿಲಾ ಮಾನವನ ಬರಹ-೧
ಬಾಣಾಸುರ ಅಣೆಕಟ್ಟಿನಿಂದ ಕಾಣುವ ಒಂದು ನೋಟ
ಮೀನ್ ಮುಟ್ಟಿ ಜಲಪಾತ
  • ಚೆಂಬ್ರ ಶಿಖರ - ಚಾರಣಕ್ಕೆ ಸೂಕ್ತವಾದದ್ದು.
  • ಎಡಕಲ್ಲು ಗುಡ್ಡ ಅಥವಾ ಎಡಕಲ್ಲು ಗುಹೆ - ಇಲ್ಲಿ ೧೦೦೦ ಮೀಟರ್ ಎತ್ತರದ ಗುಡ್ಡದ ಮೇಲೆ ಮೂರು ಗುಹೆಗಳು ಒಟ್ಟಾಗಿವೆ. ಮಧ್ಯಪ್ರಾಚೀನ ಶಿಲಾಯುಗದ ನಾಗರೀಕತೆಯ ಕುರುಹಾಗಿ ಈ ಗುಹೆಗಳ ಗೋಡೆಗಳ ಮೇಲೆ ಅನೇಕ ಕೆತ್ತನೆಗಳನ್ನು ಕಾಣಬಹುದು. ಇದನ್ನು ತಲುಪಲು ೧ ಕಿ.ಮೀ ಎತ್ತರದ ಗುಡ್ಡ ಹತ್ತಬೇಕಾಗುತ್ತದೆ.
  • ಸುಲ್ತಾನ್ ಬತೇರಿ - ಟಿಪ್ಪುವಿನ ಕೋಟೆ ಎಂದೂ ಪ್ರಸಿದ್ಢ . ಇಲ್ಲಿ ಒಂದು ಹಳೆಯ ಜೈನ ದೇವಾಲಯವಿದೆ. ಟಿಪ್ಪು ಸುಲ್ತಾನನು ಇಲ್ಲಿ ತನ್ನ ಮದ್ದುಗುಂಡುಗಳನ್ನು ಸಂಗ್ರಹಿಸಿಡುತ್ತಿದ್ದ.
  • ಮೀನುಮುಟ್ಟಿ ಜಲಪಾತ - ಇದನ್ನು ೨ ಕಿ.ಮೀ ಚಾರಣ ಹಾದಿಯ ಮೂಲಕ ತಲುಪಬೇಕು. ಇದು ವಯನಾಡ್ ಜಿಲ್ಲೆಯ ಅತಿ ದೊಡ್ಡ ಜಲಪಾತವಾಗಿದ್ದು, ೩೦೦ ಮೀಟರ್ ಎತ್ತರದಿಂದ ಮೂರು ಹಂತಗಳಲ್ಲಿ ಬೀಳುತ್ತದೆ.
  • ಬಾಣಾಸುರಸಾಗರ ಅಣೆಕಟ್ಟು - ಬಾಣಾಸುರಸಾಗರದಲ್ಲಿರುವ ಅಣೆಕಟ್ಟನ್ನು ಭಾರತದಲ್ಲಿಯೇ ಅತಿದೊಡ್ಡ ಮಣ್ಣಿನ ಅಣೆಕಟ್ಟೆಂದು ಪರಿಗಣಿಸಲಾಗಿದೆ.
  • ಪೂಕೋಟೆ ಅಥವಾ ಪೂಕೊಡೆ ಸರೋವರ - ಇದೊಂದು ಪ್ರಾಕೃತಿಕ ಸಿಹಿನೀರಿನ ಸರೋವರ. ವನಭೋಜನಕ್ಕೆ (ಪಿಕ್ನಿಕ್) ಗೆ ಹೇಳಿ ಮಾಡಿಸಿದ ತಾಣ.

ಉಲ್ಲೇಖಗಳು

  1. "About District Wayanad". wayanad.gov.in.
  2. "ABOUT WAYANAD". wayanadtourism.org. Archived from the original on 2019-08-17. Retrieved 2023-04-01.
  3. Cite warning: <ref> tag with name auto cannot be previewed because it is defined outside the current section or not defined at all.

ಬಾಹ್ಯ ಕೊಂಡಿಗಳು

ವಿಕಿಟ್ರಾವೆಲ್ ನಲ್ಲಿ ವಯನಾಡು ಜಿಲ್ಲೆ ಪ್ರವಾಸ ಕೈಪಿಡಿ (ಆಂಗ್ಲ)