ವಿಕಿಪೀಡಿಯ:ದ್ವಂದ್ವ ನಿವಾರಣೆ

ದ್ವಂದ್ವ ನಿವಾರಣೆ ಎಂದರೆ ವಿಕಿಪೀಡಿಯ ಮತ್ತು ಇತರೆ ವಿಕಿಮೀಡಿಯ ಫೌಂಡೇಷನ್ ಯೋಜನೆಗಳಲ್ಲಿ ಲೇಖನಗಳಲ್ಲಿನ ಹೆಸರಲ್ಲಿನ ದ್ವಂದ್ವವನ್ನು ಪರಿಹರಿಸಲು ಉಪಯೋಗಿಸುವ ವಿಧಾನ. ಇದನ್ನು ಆಂಗ್ಲ ಭಾಷೆಯಲ್ಲಿ Disambiguation ಎನ್ನುವರು.

ಒಂದು ಪದ ಅಥವ ಪದಪುಂಜವು ಒಂದಕ್ಕಿಂತ ಹೆಚ್ಚಿನ ವಿಷಯಗಳ ಬಗ್ಗೆ ಸಂಬಂಧಪಟ್ಟಿದ್ದಾಗ ಈ ರೀತಿಯ ದ್ವಂದ್ವಗಳು ಎದುರಾಗುತ್ತವೆ. ಬಹುತೇಕ ಬಾರಿ, ಆ ಪದ ಅಥವಾ ಪದಪುಂಜವೇ ಆ ವಿಷಯಕ್ಕೆ ಸರಿಹೊಂದುವ ಲೇಖನದ ಹೆಸರಾಗಿರುತ್ತದೆ. ಅದಾಗ್ಯೂ, ಓದುಗರಿಗೆ ಆ ಪದ ಅಥವಾ ಪದಪುಂಜಕ್ಕೆ ಸಂಬಂಧಿಸಿದ ಎಲ್ಲಾ ಲೇಖನಗಳನ್ನು ತಿಳಿಸುವುದು ಅವಶ್ಯಕವಾದದ್ದು. ಆಗ, ಓದುಗರು ಅವರಿಗೆ ಬೇಕಿರುವ ಮಾಹಿತಿಯನ್ನು ಅದಕ್ಕೆ ಸಂಬಂಧಪಟ್ಟ ಲೇಖನದ ಮೂಲಕ ಪಡೆಯುತ್ತಾರೆ. ಓದುಗನು ಒಂದು ಪದವನ್ನು ಅಥವಾ ಪದಗುಚ್ಛವನ್ನು ಹುಡುಕಿದಾಗ ಅದಕ್ಕೆ ಸಂಬಂಧಿಸಿದಂತೆ ಆ ಪದ/ಪದಗುಚ್ಛವು ನಿರ್ದೇಶಿಸುವ ಒಂದಕ್ಕಿಂತ ಹೆಚ್ಚಿನ ವಿಕಿಪೀಡಿಯಾ ಲೇಖನಗಳು ಇದ್ದಲ್ಲಿ ದ್ವಂದ್ವನಿವಾರಣೆಯ ಅಗತ್ಯವಿರುತ್ತದೆ.

ನಾಗರಹಾವು ಎಂಬ ಪದದ ಪುಟಕ್ಕೆ ಹೀಗೆ ನಿಮಗೆ ಸಂಪರ್ಕವು ದೊರೆಯುತ್ತದೆ. ಆದರೆ, ಇಲ್ಲಿ ಹುಡುಕಬೇಕೆಂದುಕೊಂಡಿದ್ದು ಹಾವಿನ ಬಗ್ಗೆಯೇ? ಅಥವಾ ತ.ರಾ.ಸು. ಬರೆದಿರುವ ನಾಗರಹಾವು ಕಾದಂಬರಿ ಬಗ್ಗೆಯೇ? ಅಥವಾ ವಿಷ್ಣುವರ್ಧನ್ ಅಭಿನಯದ ೧೯೭೨ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರದ ಬಗ್ಗೆಯೇ? ಅಥವಾ ಉಪೇಂದ್ರ ಅಭಿನಯದ ೨೦೦೨ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರದ ಬಗ್ಗೆಯೇ? ಇಂತಹ ಪರಿಸ್ಥಿತಿಗಳಲ್ಲಿ ಓದುಗನು ತ್ವರಿತವಾಗಿ ಆತ ಅಪೇಕ್ಷಿಸುತ್ತಿರುವ ವಿಷಯದ ಬಗ್ಗೆಯ ಲೇಖನಕ್ಕೆ ಹೋಗುವಂತೆ ಇರಬೇಕಾಗುತ್ತದೆ. ಹಾಗಾಗಿ ದ್ವಂದ್ವನಿವಾರಣೆಗಾಗಿ ಪುಟಗಳನ್ನು ರಚಿಸಬೇಕಾಗುತ್ತದೆ.

ಎರಡು ರೀತಿಯ ದ್ವಂದ್ವ ನಿವಾರಣೆಗಳನ್ನು ಇಲ್ಲಿ ನಮೂದಿಸಲಾಗಿದೆ:

  • ದ್ವಂದ್ವ ನಿವಾರಣೆ ಸಂಪರ್ಕಗಳು — ಒಂದು ಪದಪುಂಜದ ಅತ್ಯಂತ ಸಾಮಾನ್ಯ ಬಳಕೆಯನ್ನು ಲೇಖನವೊಂದು ವಿಷಯವಾಗಿಸಿಕೊಂಡಿದ್ದಲ್ಲಿ, ಆ ಲೇಖನದ ಮೇಲ್ಭಾಗದಲ್ಲಿ ಓದುಗರಿಗೆ ಸುಲಭವಾಗಿ ಕಾಣುವಂತೆ, ಇತರೆ ಲೇಖನಗಳಿಗೆ (ಇದೇ ಹೆಸರಿನಂತಿರುವ) ಸಂಪರ್ಕವನ್ನು ಕೊಡುವುದು. :ಉದಾಹರಣೆ, ಲಕ್ಷ್ಮಿ ಲೇಖನದ ಮೇಲ್ಭಾಗದಲ್ಲಿ ಲಕ್ಷ್ಮಿ (ಚಿತ್ರನಟಿ) ಲೇಖನಕ್ಕೆ ಸಂಪರ್ಕವನ್ನು ಕೊಡಲಾಗಿದೆ.
  • ದ್ವಂದ್ವ ನಿವಾರಣೆ ಪುಟಗಳು — ಯಾವುದೇ ಮಾಹಿತಿಯನ್ನೊಳಗೊಳ್ಳದೇ, ಇತರ ವಿಕಿಪೀಡಿಯ ಪುಟಗಳಿಗೆ ದಾರಿ ಕಾಣಿಸುವ ವಿಷಯಗಳ ಪಟ್ಟಿ ಹೊಂದಿರುವ ಲೇಖನವಲ್ಲದ ಪುಟಗಳು. ಒಂದು ಪದಕ್ಕೆ ಅಥವಾ ಪದಪುಂಜಕ್ಕೆ ಸಂಬಂಧಿಸಿದಂತೆ ಒಂದು ದ್ವಂದ್ವನಿವಾರಣೆ ಪುಟವನ್ನು ರಚಿಸಿ ಅದರಲ್ಲಿ ಆ ಪದ/ಪದಪುಂಜವು ನಿರ್ದೇಶಿಸಲು ಸಾಧ್ಯತೆಯಿರುವ ಎಲ್ಲಾ ವಿಷಯಗಳ ಪುಟಗಳನ್ನು ಪಟ್ಟಿ ಮಾಡಬಹುದಾಗಿರುತ್ತದೆ.

ಉದಾಹರಣೆಗೆ:

ದ್ವಂದ್ವ ನಿವಾರಣೆಯ ಎಲ್ಲ ಪುಟಗಳ ಪಟ್ಟಿಗೆ ದ್ವಂದ್ವ ನಿವಾರಣೆ ವರ್ಗ ನೋಡಿ.

ಗಮನಿಸಿ: ಒಂದು ಪುಟವನ್ನು, ಅದು ದ್ವಂದ್ವ ನಿವಾರಿಸಲು ಇರುವ ಪುಟ ಎಂದು ನಮೂದಿಸಲು {ದ್ವಂದ್ವ ನಿವಾರಣೆ} ಟೆಂಪ್ಲೇಟನ್ನು ಆ ಪುಟದಲ್ಲಿ ಹಾಕಿ.