ವೈಜ್ಞಾನಿಕ ಉಪಕರಣಗಳು

ವೈಜ್ಞಾನಿಕ ಉಪಕರಣವು ಯಾವುದೋ ಒಂದು ರೀತಿಯಾದ ಸರಂಜಾಮು ಅಥವಾ ಸಾಧನ ಸಲಕರಣೆ ಆಗಿರಬಹುದು.ಇದನ್ನು ಯವಾಗಲೂ ಮಾದರಿಯ ಮೂಲಕ ನಿರ್ಮಿಸಲಾಗುತ್ತದೆ. ವೈಜ್ಞಾನಿಕ ಉಪಕರಣವು ಪ್ರಯೋಗಾಲಯದ ಸರಂಜಾಮಿನ ಒಂದು ಭಾಗವಾಗಿದೆ ಆದರೆ, ಅದನ್ನು ಸುಸಂಸ್ಕೄ ತವಾಗಿ ಮತ್ತು ವಿಶೇಷವಾಗಿ ಪರಿಗಣಿಸಲಾಗುತ್ತದೆ. ವಿಜ್ಞಾನವು ಮುಂದುವರೆದಂತೆ ಅನೇಕ ವೈಜ್ಞಾನಿಕ ಉಪಕರಣಗಳು ಬೆಳಕಿಗೆ ಬಂದಿವೆ. ಹಿಂದೆ ನಿರ್ಮಿಸಿದ ಉಪಕರಣಗಳು ಇಂದು ಆಧುನಿಕತೆ ಹೊಂದಿ ಆಧುನಿಕ ಉಪಕರಣಗಳಾಗಿವೆ.ಇವುಗಳನ್ನು ಆಧುನಿಕ ಉಪಕರಣಗಳೆಂದೇ ಕರೆಯಬಹುದು. ವಿಜ್ಞಾನದಲ್ಲಿ ಅನೇಕ ಉಪಕರಣಗಳಿವೆ,ಅವುಗಳನ್ನು ಒಂದೊಂದಾಗಿ ಪರಿಚಯಿಸಲಾಗಿದೆ.[]

ಸ್ಟೆತೋಸ್ಕೋಪ್

ಸ್ಟೆತೋಸ್ಕೋಪ್ ಇಂದು ಮೆಡಿಕಲ್ ವಿಭಾಗದಲ್ಲಿ ಉಪಯೋಗಿಸುವ ಅತ್ಯಂತ ಪ್ರಸಿದ್ದವಾದ ಉಪಕರಣವಾಗಿದೆ. ಇದನ್ನು ಮಾನವ ಅಥವಾ ಪ್ರಾಣಿಯ ದೇಹದ ಒಳ ಶಬ್ಧವನ್ನು ಕೇಳಿಸಿಕೋಳ್ಳಲು ಉಪಯೋಗಿಸುತ್ತಾರೆ. ಸ್ಟೆತೋಸ್ಕೋಪ್ ತೀವ್ರಗೋಳಿಸುವ ಶಬ್ಧವನ್ನು ಪೊನೆಂಡೋಸ್ಕೋಪ್ ಎಂದು ಕರೆಯುತ್ತಾರೆ.

Doctors stethoscope 2

[]

ಸಂಶೋಧಕರು

ಸ್ಟೆತೋಸ್ಕೋಪ್ ಎನ್ನುವುದು ಹಿಂದೆ ಒಂದು ಗಟ್ಟಿ ಕೊಳವೆಯಾಕಾರವಾಗಿತ್ತು. ಅದನ್ನು ಫ್ರೆಂಚ್ ವಿಜ್ಞಾನಿ ರೀನೆ ಲಾನೆಕ್ ಎನ್ನುವವರು ೧೮೧೬ರಲ್ಲಿ ಕಂಡುಹಿಡಿದರು.ಆದರೆ ಇಂದು ಆದುನಿಕತೆ ಹೊಂದಿ ಆಧುನಿಕ ಸ್ಟೆತೋಸ್ಕೋಪವಾಗಿದೆ. ಆಧುನಿಕ ಸ್ಟೆತೋಸ್ಕೋಪವನ್ನು ಅಮೇರಿಕಾದ ಫಿಲಪ್ ಕ್ಯಾಮಸ್ ಕಂಡುಹಿಡಿದಿದ್ದಾರೆ.

ಉಪಯೋಗಗಳು

ಹೃದಯದ ಬಡಿತವನ್ನು ಅಳೆಯಲು,ಹೃದಯ ಆರೋಗ್ಯವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು ಉಪಯೋಗಿಸುತ್ತಾರೆ. ಶ್ವಾಸಕೋಶದ ಕರ್ಯಾವನ್ನು ತಿಳಿಯಲು,ರಕ್ತ ಚಲನೆಯನ್ನು ಪರೀ‍ಕ್ಷಿಸಲು ಸ್ಟೆತೋಸ್ಕೋಪವನ್ನು ಉಪಯೋಗಿಸುತ್ತಾರೆ. ಸ್ಟೆತೋಸ್ಕೋಪವುಸ್ಪಿಗ್ಮೋ ಮಾನೋಮೀಟರ್ ರ ಸಹಾಯ ಪಡೆದು ರಕ್ತದ ಒತ್ತಡವನ್ನು ಅಳತೆ ಮಡುತ್ತದೆ.

ಉ‍‍ಷ್ಣತಾಮಾಪಕ

ಉಷ್ಣತಾಮಾಪಕವು ಒಂದು ಸಾಧನ ಸಲಕರಣೆ.ಇದು ತರತರಹದ ಸಾರ್ವತ್ರಿಕಗಳನ್ನು ಉಪಯೋಗಿಸಿಕೊಂಡು ಉಷ್ಣವನ್ನು ಅಳೆಯುತ್ತದೆ.ಉ‍‍ಷ್ಣತಾಮಾಪಕಕ್ಕೆ ಎರಡು ಧಾತುಗಳಿರುತ್ತವೆ:ಉ‍‍ಷ್ಣತಾಮಾಪಕ ಸೆನ್ ಸರ್, ಅದರಲ್ಲಿ ಭೌತಿಕ ವ್ಯತ್ಯಾಸ ಬರುತ್ತದೆ ಮತ್ತು ಭೌತಿಕ ವ್ಯತ್ಯಾಸಗಳನ್ನು ಸಂಖ್ಯೆಗಳ ಮಹತ್ವಕ್ಕೆ ಬದಲಾಯಿಸುತ್ತದೆ

Clinical thermometer 38.7

[]

ಸಂಶೋಧಕರು

ಪೋಲಂಡ್ ದೇಶದ ಗೆಬ್ರಿಯಲ್ ಪ್ಯಾರನ್ ಹೀಟ್ ಈ ಉ‍‍ಷ್ಣತಾಮಾಪಕದಲ್ಲಿ ಮೊದಲು ೧೭೦೯ರಲ್ಲಿ ಆಲ್ಕೋಹಾಲ್ ಬಳಸಿದ್ದರು ನಂತರ ೧೭೧೪ರಲ್ಲಿ ಆಲ್ಕೋಹಾಲ್ ಬದಲು ಪಾದರಸ ಬಳಸಿ ಉ‍‍ಷ್ಣತಾಮಾಪಕವನ್ನು ರೂಪಿಸಿದರು .

ಉಪಯೋಗಗಳು

ಉ‍‍ಷ್ಣತಾಮಾಪಕವು ಭೌತಿಕದ ಪರಣಾಮಗಳನ್ನು ಉಪಯೋಗಿಸಿಕೊಂಡು ಉ‍‍ಷ್ಣವನ್ನು ಅಳೆಯುತ್ತದೆ.ಮದ್ಯಸಾರದ ಉ‍‍ಷ್ಣತಾಮಾಪಕ,[[ಗಾಜಿನ ಉ‍‍ಷ್ಣತಾಮಾಪಕದಲ್ಲಿರುವ ಪಾದರಸ]],ರೆಕಾರ್ಡು ಉ‍‍ಷ್ಣತಾಮಾಪಕಈ ಎಲ್ಲಾ ಉ‍‍ಷ್ಣತಾಮಾಪಕಗಳನ್ನು ವಾಯುಮಂಡಲದಲ್ಲಿಹಾಗೂ ಸಮುದ್ರದ ಅಂತದಲ್ಲಿ ಉಪಯೋಗಿಸುತ್ತಾರೆ. ಮೆಡಿಕಲ್ ಉ‍‍ಷ್ಣತಾಮಾಪಕವನ್ನು ಆರೋಗ್ಯ ಕೇಂದ್ರಗಳಲ್ಲಿ ಜ್ವರವನ್ನು ಪರೀ‍ಕ್ಷಿಸಲು ಉಪಯೋಗಿಸುತ್ತಾರೆ.ಇವುಗಳನ್ನು ಸಿಹಿತಿಂಡಿಗಳು ಮಾಡುವುದರಲ್ಲಿ ಉಪಯೋಗಿಸುತ್ತಾರೆ. ಮಂಜಿನ ಪರಿಸ್ಥಿತಿಯನ್ನು ತಿಳಿಯಲು ಇದನ್ನು ರಸ್ತೆದಾರಿಯಲ್ಲಿ ಉಪಯೋಗಿಸುತ್ತಾರೆ.

ದೂರದರ್ಶಕ(ಟೆಲಿಸ್ಕೋಪ್)

ದೂರದರ್ಶಕವು ಒಂದು ಉಪಕರಣ. ಇದು ವಿದ್ಯುತ್ ಕಾಂತ ಶಕ್ತಿ ವಿಸರಣವನ್ನ ಉಪಯೋಗಿಸಿಕೊಂಡು ದೂರದ ವಸ್ತುಗಳನ್ನು ಗಮನಿಸುತ್ತದೆ. ೨೦ನೇ ಶತಮನದಲ್ಲಿ ಬಹಳ ದೂರದರ್ಶಕಗಳು

ಬೆಳಕಿಗೆ ಬಂದವು,ಅವು ರೇಡಿಯೋ ದೂರದರ್ಶಕ, ಎಕ್ಸ್ ರೇ ದೂರದರ್ಶಕ,ಆಪ್ಟಿಕಲ್ ದೂರದರ್ಶಕ ಮುಂತಾದವು

Dalekohled2

ಸಂಶೋಧಕರು

ಮೊದಲು ಲಿಪ್ಪಿರಶೇ ಎಂಬುವವರು ದೂರದರ್ಶಕವನ್ನು ಕಂಡು ಹಿಡಿದಿದ್ದರು. ಆದರೆ ಆಧುನಿಕ ದೂರದರ್ಶಕವನ್ನು ಗೆಲಿಲಿಯೋ ಗೆಲಿಲಿ ತಯಾರಿಸಿದರು. ಪ್ರತಿಫಲನ ದೂರದರ್ಶಕವನ್ನು ೧೬೬೮ರಲ್ಲಿ ನ್ಯೂಟನ್ನರು ರಚಿಸಿದರು.

ಉಪಯೋಗಗಳು

ದೂರದ ವಸ್ತುಗಳನ್ನು ನೋಡಲು ಉಪಯೋಗಿಸುತ್ತಾರೆ.ಉದಾಹರಣೆ:ಭೂಮಿಯಿಂದ ದೂರವಿರುವ ನಕ್ಷತ್ರ ,ಗ್ರಹಗಳು,ಉಲ್ಕೇನಗಳು ಮತ್ತು ಧೂಮಕೇತುಗಳನ್ನು ನೋಡಲು ಬಳಸುವರು. ಅತ್ಯಂತ ದೂರವಿರುವ ವಸ್ತುಗಳನ್ನು ಇದರ ಸಹಾಯದಿಂದ ನೋಡಬಹುದಾಗಿದೆ.

ಸೊಕ್ಷ್ಮದರ್ಶಕ

ವಿಜ್ಞಾನವು ಸಣ್ಣ ವಸ್ತುಗಳನ್ನು ತನಿಖೆ ಮಾಡುವ ಉಪಕರಣವನ್ನು ಸೊಕ್ಷ್ಮದರ್ಶಕ ಎಂದು ಕರೆಯುತ್ತಾರೆ.ಬರಿಗಣ್ಣಿಗೆ ಕಾಣದಂತಹ ವಸ್ತುಗಳನ್ನು ಇದರಿಂದ ನೋಡಲು ಸಾಧ್ಯವಾಗುತ್ತದೆ. ಆಪ್ಟಿಕಲ್ ಸೊಕ್ಷ್ಮದರ್ಶಕವು ಬಹಳ ಸಾಮಾನ್ಯವಾದುದು ಹಾಗೂ ಇದನ್ನು ಮೊದಲು ಕಂಡುಹಿಡಿದರು.

ಸಂಶೋಧಕರು

ಡಚ್ಛ ದೇಶದ ಜೀವಶಾಸ್ತ್ರಜ್ಞ ಆಂಟಿನ್ ವ್ಯಾಸ ಮತ್ತು ಲೀವನ್ ಹುಕ್ ತಯಾರಿಸಿದರು.ಸಂಯುಕ್ತ ಸೊಕ್ಷ್ಮದರ್ಶಕವನ್ನು ಸುಮಾರು ೧೬೦೦ ರಲ್ಲಿ ಡಚ್ಛ ದೇಶದ ಹಾನ್ಸ ಮತ್ತು ಜಕಾರಿಯಾಸ್ (ತಂದೆ ಮತ್ತು ಮಗ) ಇದನ್ನು ಸುಧಾರಿಸಿದರು.

ಉಪಯೋಗಗಳು

ಸೊಕ್ಷ್ಮದರ್ಶಕವನ್ನು ಪ್ರಯೋಗಶಾಲೆಯಲ್ಲಿ ಪ್ರಾಣಿ ಅಥವಾ ಸಸ್ಯಗಳ ಅಂಗಾಂಶವನ್ನು ನೋಡಲು ಉಪಯೋಗಿಸುತ್ತಾರೆ.ವಸ್ತುವಿಗಿಂತ ಬಹಳ ದೊಡ್ಡದಾದ ಬಿಂಬವನ್ನು ಸಂಯುಕ್ತ ಸೊಕ್ಷ್ಮದರ್ಶಕದಿಂದ ಪಡೆಯಬಹುದು.ಇಂತಹ ವಸ್ತು ಬಹಳ ಅವಶ್ಯಕ.

ದ್ವಿನೇತ್ರ (ಬೈನಾಕ್ಯುಲರ್ಸ್)

ದ್ವಿನೇತ್ರ ದೂರದರ್ಶಕವು ಒಂದು ಜೋಡಿಯಾದ ತದ್ರೂಪವು, ಅದನ್ನು ದೃಷ್ಟಿಕೋನಕ್ಕೆ ಸರಿಯಾಗಿ ಪಕ್ಕ ಪಕ್ಕದಲ್ಲಿ ಒಂದೇ ದಿಕ್ಕಿಗೆ ಇಡಲಾಗಿದೆ.

Afro American boy face child enjoys the view through the lens of a binocular

ಸಂಶೋಧಕರು

ಗೆಲಿಲಿಯನ್ ದ್ವಿನೇತ್ರಗಳನ್ನು ಜೋಹನ್ ವಾಯಿಗ್ಟ್ ಲ್ಯಾಂಡರ್ ಎಂಬುವವರು ೧೮೨೦ ರಲ್ಲಿ ಕಂಡುಹಿಡಿದರು. ದ್ವಿನೇತ್ರ ಸೊಕ್ಷ್ಮದರ್ಶಕವನ್ನು ಸಾಗಿ ಮಾರ್ ಕೊವಿಕ್ ಮತ್ತು ಒರಿ ಶಾಹರ್ ಕಂಡುಹಡಿದರು.

ಉಪಯೋಗಗಳು

ದ್ವಿನೇತ್ರವನ್ನು ಸಂಶೋಧನೆ ಮಾಡುವುದಕ್ಕೆ ಉಪಯೋಗಿಸುತ್ತಾರೆ.ವಿಜ್ಞಾನಿಗಳು ಆಕಾಶ,ಪಕ್ಷಿಗಳು ಮತ್ತು ಇನ್ನಿತರ ವಸ್ತುಗಳ ಬಗ್ಗೆ ತಿಳಿದುಕೊಳ್ಳಲು ಈ ಉಪಕರಣವನ್ನು ಉಪಯೋಗಿಸುತ್ತಾರೆ. ಪ್ರಯಾಣಿಕರು ಪ್ರೆಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು,ಜನರು ಕ್ರಿಕೆಟ್ ಆಟವನ್ನು ನೋಡಲು, ಸೈನಿಕರು ಅವರ ಕರ್ತವ್ಯವನ್ನು ನಿರ್ವಹಿಸಲು ಸಹಾಯಕ್ಕಾಗಿ ಈ ಉಪಕರಣವನ್ನು ಉಪಯೋಗಿಸುತ್ತಾರೆ.

ಸೆಂಟ್ರಿಪ್ಯೂಜ್

ವಿಭಿನ್ನ ಸಾಂದ್ರತೆಯ ಸೊಕ್ಷ್ಮ ಕಣಗಳನ್ನು ಪ್ರತ್ಯೇಕಿಸಲು ರಚಿಸಿರುವ ಸಾಧನವೇ ಸೆಂಟ್ರಿಪ್ಯೂಜ್. ಕಣಗಳಿರುವ ದ್ರವವನ್ನು ಚಿಕ್ಕ ಪ್ರಣಾಳದಲ್ಲಿ ಹಾಕಿ , ಅವುಗಳನ್ನು ಚೌಕಟ್ಟಿನಲ್ಲಿ ಜೋಡಿಸಿ ಹೆಚ್ಚು ವೇಗದಿಂದ ಒಂದು ಅಡ್ಡ ಸಮತಲದಲ್ಲಿ ಭ್ರಮಿಸುವಂತೆ ಮಾಡಿರುತ್ತಾರೆ.ಸೆಂಟ್ರಿಪ್ಯೂಜಿನಲ್ಲಿ ಹೆಚ್ಚು ಸಾಂದ್ರತೆಯ ಕಣಗಳು ಅಕ್ಷದಿಂದ ದೂರವಾಗಿಯೂ,ಕಡಿಮೆ ಸಾಂದ್ರತೆಯ ಕಣಗಳು ಅಕ್ಷದ ಕಡೆಗೂ ಸರಿಯುತ್ತದೆ.ಹೀಗಾಗಿ ವಿಭಿನ್ನ ಸಾಂದ್ರತೆಯ ಕಣಗಳು ಪ್ರತ್ಯೇಕಗೊಳ್ಳುತ್ತವೆ.

ಸಂಶೋಧಕರು

೧೮೬೪ರಲ್ಲಿ ಆಂಟೊನಿನ್ ಪ್ರಾಂದಿ ಮೊದಲ ಸೆಂಟ್ರಿಪ್ಯೂಜನ್ನು ಕಂಡುಹಿಡಿದಿದ್ದಾರೆ.

ಉಪಯೋಗಗಳು

ಪ್ರೋಟಿನ್ ಗಳು, ವೈರಸ್ ಗಳು ಇತ್ಯಾದಿಗಳನ್ನು ಬೇರೆ ಬೇರೆ ದ್ರವ ಮಾಧ್ಯಮದಿಂದ ಬೇರ್ ಪಡಿಸಲು ಸೆಂಟ್ರಿಪ್ಯೂಜ್ ಹೆಚ್ಚು ಉಪಯೋಗಿಯಾಗಿದೆ.

ಸ್ಕ್ರೂಗೇಜ್

ಸ್ಕ್ರೂಗೇಜ್ ಒಂದು ಭೌತಿಕ ಸಾಧನವಾಗಿದ್ದು ತುಂಬ ಚಿಕ್ಕ ಗಾತ್ರವನ್ನು ಹೊಂದಿರುವ ತಂತಿಯ ದಪ್ಪ, ಗಾಜಿನ ದಪ್ಪ ಮತ್ತು ಲೋಹದ ತಟ್ಟೆಯ ದಪ್ಪಗಳನ್ನು ಅಳತೆ ಮಾಡಲು ಉಪಯೋಗಿಸುತ್ತಾರೆ. ಇದು ಸ್ಕ್ರೂ ಮತ್ತು ನಟ್ ತತ್ವದ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತದೆ.ಇದರಲ್ಲಿ ಎರಡು ಸ್ಕೇಲ್ ಗಳನ್ನು ಒಳಗೊಂಡಿದ್ದು ಒಂದನ್ನು ಪಿಚ್ ಸ್ಕೇಲ್, ಇನ್ನೊಂದನ್ನು ಹೆಡ್ ಸ್ಕೇಲ್ ಎಂದು ಕರೆಯುತ್ತಾರೆ. ಇದರ ಕನಿಷ್ಠ ಅಳತೆಯನ್ನು ಪಡೆದುಕೊಂಡು ಈ ಕೆಳಗಿನ ಸೂತ್ರದಿಂದ ವಸ್ತುಗಳ ದಪ್ಪವನ್ನು ಅಳತೆ ಮಾಡಬಹುದು. CR=P.S.R+(C.H.D.*LC)

ಸಂಶೋಧಕರು

೧೭ನೇ ಶತಮಾನದಲ್ಲಿ ವಿಲಿಯಂ ಗಾಸ್ ಕೋಜಿನ್ ಎಂಬುವವರು ಮೊದಲ ಮೈಕ್ರೋಮೀಟರ್ ಸ್ಕ್ರೂಗೇಜನ್ನು ಕಂಡುಹಿಡಿದರು.

ವರ್ನೀಯರ್ ಕ್ಯಾಲಿಪರ್ಸ್

ವರ್ನೀಯರ್ ಕ್ಯಾಲಿಪರ್ಸ್ ಒಂದು ಭೌತ ಸಾಧನವಾಗಿದ್ದು ಗೋಲಿಯ ವ್ಯಾಸ, ಸಿಲಿಂಡರನ ಕ್ಷೇತ್ರ ಫಲ ಮತ್ತು ಘನಫಲಗಳನ್ನು ಅಳೆಯುವ ಸಾಧನವಾಗಿದೆ.

ಸಂಶೋಧಕರು

ಈ ಸಾಧನವನ್ನು ಫ್ರೆಂಚ್ ವಿಜ್ಞಾನಿವರ್ನೀಯರ್ ಪಿರಿ ಎಂಬುವವರು ೧೬೩೧ ರಲ್ಲಿ ಕಂಡುಹಿಡಿದರು.

ಉಪಯೋಗಗಳು

ಈ ಸಾಧನದಲ್ಲಿ ಎರಡು ದವಡೆಗಳು ಒಳಗೊಂಡಿದ್ದು ಈ ಎರಡು ದವಡೆಗಳ ಕೆಳಭಾಗದಲ್ಲಿ ಸಿಲಿಂಡರ ಮತ್ತು ಗೋಲಿಯ ರೂಪದ ವಸ್ತುಗಳನ್ನಿಟ್ಟು ವ್ಯಾಸವನ್ನು ಕಂಡು ಹಿಡಿಯಬಹುದು. ಟೊಳ್ಳಾದ ಸಿಲಿಂಡರನ ವ್ಯಾಸವನ್ನು ಕಂಡುಹಿಡಿಯಲು ಮೇಲ್ಮುಕ ದವಡೆಗಳನ್ನು ಉಪಯೋಗಿಸಲಾಗುವುದು.

ಭೌತ ತುಲಾಯಂತ್ರ

ಅತ್ಯಂತ ಚಿಕ್ಕ ಭೌತಿಕ ವಸ್ತುಗಳ ತೂಕವನ್ನು ಅಳೆಯಲು ಉಪಯೋಗಿಸುವ ಸಾಧನವಾಗಿದೆ. ಈ ಯಂತ್ರದಲ್ಲಿ ಎರಡು ತಟ್ಟೆಗಳಿದ್ದು ಎಡಗಡೆಯ ತಟ್ಟೆಯಲ್ಲಿ ತೂಕದ ಬಟ್ಟುಗಳನ್ನು ಇಡುತ್ತಾರೆ, ಬಲಗಡೆಯ ತಟ್ಟೆಯಲ್ಲಿ ಭೌತಿಕ ವಸ್ತುಗಳನ್ನಿಟ್ಟು ಸ್ಕ್ರೂವನ್ನು ತಿರುವಿದಾಗ ಆ ತಟ್ಟೆಗಳು ಮೇಲಕ್ಕೇರಿ ಆ ವಸ್ತುವಿನ ತೂಕವನ್ನು ಅಳೆಯಬಹುದಾಗಿದೆ. ಆದರೆ ಇಂದು ಈ ಯಂತ್ರದ ಬದಲಾಗಿ ಆಧುನಿಕ ಡಿಜಿಟಲ್ ತುಲಾಯಂತ್ರಗಳು ಬಂದಿವೆ.ಬಂಗಾರ ಮತ್ತು ಬೆಳ್ಳಿ ಅಂಗಡಿಯಲ್ಲಿ ಇವುಗಳನ್ನು ಹಚ್ಚಾಗಿ ಉಪಯೋಗಿಸುತ್ತಾರೆ.

ಗ್ಯಾಲನೋಮೀಟರ್

ವಿದ್ಯುತ್ಪ್ರವಾಹವನ್ನು ಅಳೆಯಲು ಗ್ಯಾಲನೋಮೀಟರ್ ಗಳೆ ಮೊದಲು ಬಂದ ಉಪಕರಣಗಳು.ಇದು ಒಂದು ತರಹದ ಸೂಕ್ಷ್ಮವಾದ[ಅಮ್ಮೀಟರ್]] ಆಗಿದೆ.

ಉಪಯೋಗಗಳು

ಗ್ಯಾಲನೋಮೀಟರನ್ನು ಅತ್ಯಂತ ಸೂಕ್ಷ್ಮ ವಿದ್ಯುತ್ಪ್ರವಾಹವನ್ನು ಅಳೆಯಲು ಉಪಯೋಗಿಸುತ್ತಾರೆ. ಸಾಮಾನ್ಯವಾಗಿ ಬಳಸುವ ವಿದ್ಯುತ್ ಪಂಖ, ದೂರವಾಣಿ, ದ್ವನಿವರ್ಧಕ ವ್ಯವಸ್ಥೆ ಮೊದಲಾದ ಉಪಕರಣಗಳಲ್ಲಿ ಹರಿಯುವ ವಿದ್ಯುತ್ಪ್ರವಾಹದ ಪರಿಮಾಣವನ್ನು ಗುರುತಿಸಿ ನಿಖರವಾಗಿ ಅಳೆಯಲು ಗ್ಯಾಲನೋಮೀಟರನ್ನು ಉಪಯೋಗಿಸುವರು.

ಸಂಶೋಧಕರು

ಜೋಹರ್ ಶ್ವೀಗ್ಗರ್ ಎಂಬುವವರು ಈ ಉಪಕರಣವನ್ನು ಕಂಡುಹಿಡಿದರು.

ವೋಲ್ಟ್ ಮೀಟರ್

ವೋಲ್ಟ್ ಮೀಟರ್ ವಿದ್ಯುತ್ ವಿಭವಾಂತರವನ್ನು ಅಳೆಯುವ ಸಾಧನವಾಗಿದೆ.ವಿದ್ಯುತ್ ಪ್ರವಹಿಸುತ್ತಿರುವ ವಾಹಕದ ಎರಡು ತುದಿಗಳ ನಡುವಿನ ವಿಭವಾಂತರವನ್ನು ಅಳೆಯಲು ಹಾಗೂ

Old Volt Meter pic3

ವಿದ್ಯುತ್ಕೋಶವನ್ನು ವಿದ್ಯುತ್ ಚಾಲಕ ಬಲವನ್ನು ಅಳೆಯಲು ಈ ಸಾಧನವನ್ನು ಉಪಯೋಗಿಸುತ್ತಾರೆ.

ಇತರ ವೈಜ್ಞಾನಿಕ ಉಪಕರಣಗಳು

  1. ಎತ್ತರವನ್ನು ಅಳೆಯುವ ಸಾಧನ - ಅಲ್ಟಿಮೀಟರ್
  2. ಗಾಳಿಯ ಒತ್ತಡವನ್ನು ಅಳೆಯುವ ಸಾಧನ - ವಾಯುಭಾರ ಮಾಪಕ
  3. ಶಬ್ಧದ ತೀವ್ರತೆ ಅಳತೆ ಮಾಡುವ ಸಾಧನ - ಆಡಿಯೋ ಮೀಟರ್
  4. ದ್ರವಗಳ ಸಾಪೇಕ್ಷ ಸಾಂದ್ರತೆ ಅಳೆಯುವ ಸಾಧನ - ಹೈಡ್ರೋ ಮೀಟರ್
  5. ಅನಿಲಗಳ ಗಾತ್ರ ಅಳೆಯುವ ಸಾಧನ - ಯೂಡೋಯೋ ಮೀಟರ್
  6. ಮಳೆಯ ಪ್ರಮಾಣವನ್ನು ಅಳೆಯುವ ಸಾಧನ - ರೈನ್ ಗೇಜ್
  7. ವೇಗವನ್ನು ಅಳೆಯುವ ಸಾಧನ - ಸ್ಪೀಡೋ ಮೀಟರ್
  8. ಬೆಳಕಿನ ಸಾಂದ್ರತೆ ಅಳೆಯುವ ಸಾಧನ - ಪೋಟೋಮೀಟರ್
  9. ಭೂಕಂಪದ ತೀವ್ರತೆಯನ್ನು ಅಳೆಯುವ ಸಾಧನ - ಸಸ್ಮೋಗ್ರಾಫ್
  10. ಉಚ್ಚ ಪ್ರಮಾಣದ ಉಷ್ಣತೆ ಅಳೆಯುವ ಸಾಧನ - ಪೈರೋ ಮೀಟರ್
  11. ಅನಿಲಗಳ ಒತ್ತಡವನ್ನು ಅಳೆಯುವ ಉಪಕರಣ - ಮಾನೋಮೀಟರ್
  12. ಹಾಲಿನ ಗುಣಮಟ್ಟವನ್ನು ಅಳತೆ ಮಾಡುವ ಸಾಧನ - ಕ್ಷೀರ ಮಾಪಕ
  13. ರಕ್ತದ ಒತ್ತಡವನ್ನು ಅಳತೆ ಮಾಡುವ ಸಾಧನ - ಸ್ಪಿಗ್ಮೋಮಾನೋಮೀಟರ್
  14. ವಿಮಾನಗಳ ವೇಗವನ್ನು ಅಳೆಯುವ ಸಾಧನ - ಟ್ಯಾಕೋಮೀಟರ್
  15. ಸಮುದ್ರಗಳ ಆಳವನ್ನು ಅಳತೆ ಮಾಡುವ ಉಪಕರಣ - ಪಾಥೋಮೀಟರ್
  16. ಶಾಖ ವಿಕಿರಣಗಳನ್ನು ಅಳತೆ ಮಾಡುವ ಸಾಧನ - ರೇಡೀಯೋಮೈಕ್ರೋಮೀಟರ್
  17. ಕೋನಗಳ ಅಳತೆ ಮಾಡುಲು ಬಳಸುವ ಉಪಕರಣ - ಮೈಕ್ರೋಮೀಟರ್
  18. ಸ್ನಿಗ್ದತೆಯನ್ನು ಅಳತೆ ಮಾಡುವ ಸಾಧನ - ವಿಸ್ಕೋಮೀಟರ್
  19. ವಾಯುಮಂಡಲದ ಆರ್ದ್ರತೆಯ ಬದಲಾವಣೆಗಳನ್ನು ತೋರಿಸಲು ಬಳಸುವ ಸಾಧನ - ಹೈಗ್ರೋಸ್ಕೋಪ್
  20. ಶಾಖದ ಪ್ರಮಾಣವನ್ನು ಅಳೆಯುವ ಸಾಧನ - ಕ್ಯಾಲೋರಿಮೀಟರ್
  21. ಹೃದಯ ಬಡಿತದ ನಕ್ಷೆ ರೂಪದ ಚಿತ್ರ ನೀಡಲು ಬಳಸುವ ಸಾಧನ - ಎಲೆಕ್ಟ್ರೋ ಕಾರ್ಡಿಯೊಗ್ರಾಫ್
  22. ಶಬ್ಧದ ಅಲೆಗಳನ್ನು ವಿದ್ಯುತ್ ಅಲೆಗಳಾಗಿ ಬದಲಾಯಿಸುವ ಸಾಧನ - ಮೈಕ್ರೋಫೋನ್
  23. ನೀರಿನಲ್ಲಿ ಶಬ್ಧದ ಪ್ರಮಾಣವನ್ನು ಅಳತೆ ಮಾಡುವ ಉಪಕರಣ - ಹೈಡ್ರೋಫೋನ್
  24. ಸೌರವಿಕಿರಣಗಳ ಅಳತೆ ಮಾಡುಲು ಬಳಸುವ ಉಪಕರಣ - ಪೈಕನೋಮೀಟರ್
  25. ಬಣ್ಣಗಳ ಸಾಂದ್ರತೆಗಳನ್ನು ಹೋಲಿಕೆ ಮಾಡುವ ಉಪಕರಣ -ಕೆಲರೀಮೀಟರ್

ಸೆಂಟ್ರಿಫ್ಯೂಜ್’ ಎಂಬ ತಿರುಗಣೆ ಯಂತ್ರ

  • ಅಮೆರಿಕದ ಸ್ಟಾನ್‌ಫೋರ್ಡ್ ವಿ.ವಿಯಿಂದ ಬಂದಿದೆ: ಅಲ್ಲಿನ ಬಯೊಇಂಜಿನಿಯರ್ ಮನು ಪ್ರಕಾಶ್ ಎಂಬ ಭಾರತೀಯ ಯುವಕ ನಿಜಕ್ಕೂ ಬೆರಳು ಕಚ್ಚುವಂಥ ಸಂಶೋಧನೆ ಮಾಡಿದ್ದಾರೆ. ಎರಡು ಕೈಗಳ ಎರಡು ಬೆರಳುಗಳ ನಡುವೆ ದಾರಕ್ಕೆ ಪೋಣಿಸಿದ ಪುಟ್ಟ ಚಕ್ರವೊಂದನ್ನು ತಿರುಗಿಸುತ್ತ ಅವರು ಅದನ್ನೊಂದು ವೈದ್ಯಕೀಯ ಸಲಕರಣೆಯಾಗಿ ಪರಿವರ್ತಿಸಿದ್ದಾರೆ.
  • ಅದರ ವಿವರ ಹೀಗಿದೆ: ಮಲೇರಿಯಾ, ಏಡ್ಸ್, ಚಿಕುನ್‌ಗುನ್ಯದಂಥ ಹತ್ತಾರು ರೋಗಗಳ ಪತ್ತೆಗೆ ರಕ್ತಪರೀಕ್ಷೆ ಮಾಡುವುದು ನಮಗೆಲ್ಲ ಗೊತ್ತಿದೆ. ರೋಗಿಯ ಅರ್ಧ ಚಮಚೆಯಷ್ಟು ರಕ್ತವನ್ನು ಒಂದು ಶೀಶೆಯಲ್ಲಿಟ್ಟು ದೊಡ್ಡ ಯಂತ್ರದೊಳಕ್ಕೆ ಜೋರಾಗಿ ತಿರುಗಿಸುತ್ತಾರೆ. ನಿಮಿಷಕ್ಕೆ ಲಕ್ಷ ಸುತ್ತು ತಿರುಗುವಾಗ ರಕ್ತದಲ್ಲಿನ ನೀರಿನಂಥ ಪ್ಲಾಸ್ಮಾ ಬೇರೆಯಾಗುತ್ತದೆ. ಕೆಂಪು ಕಣಗಳ ಗಸಿ ತಳಕ್ಕಿಳಿಯುತ್ತದೆ.
  • ಅದನ್ನೇ ಸೂಕ್ಷ್ಮದರ್ಶಕದಲ್ಲಿ ಇಟ್ಟು ರಕ್ತಗುಣವನ್ನು, ರೋಗಕ್ಕೆ ಕಾರಣವಾಗುವ ಸೂಕ್ಷ್ಮಾಣುವನ್ನು ಪತ್ತೆ ಹಚ್ಚಬಹುದು. ಆದರೆ ಈ ಪರೀಕ್ಷೆಗೆ ಬೇಕಾದ ‘ಸೆಂಟ್ರಿಫ್ಯೂಜ್’ ಎಂಬ ತಿರುಗಣೆ ಯಂತ್ರಕ್ಕೆ ಲಕ್ಷಾಂತರ ರೂಪಾಯಿ ಬೇಕು, ಜೊತೆಗೆ ಸದಾಕಾಲ ವಿದ್ಯುತ್ ಇರಬೇಕು. ಅದರ ಬದಲು ಪುಟ್ಟ ಕೊಳವೆಗೆ ನಾಲ್ಕು ಹನಿ ರಕ್ತ ಹಾಕಿ ಮಕ್ಕಳ ಈ ಆಟಿಗೆಗೆ ಜೋಡಿಸಿದರೆ ಅದು ನಿಮಿಷಕ್ಕೆ ಒಂದೂವರೆ ಲಕ್ಷ ಬಾರಿ ತಿರುಗುತ್ತದೆ.
  • ಒಂದೆರಡು ನಿಮಿಷಗಳಲ್ಲಿ ಪರೀಕ್ಷೆಗೆ ಬೇಕಾದ ಪ್ಲಾಸ್ಮಾ ದ್ರವ ಮತ್ತು ಗಸಿ ಅಲ್ಲೇ ಬೇರ್ಪಡುತ್ತದೆ. ಹಳ್ಳಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದವರೂ ಇನ್ನು ಮೇಲೆ ರಕ್ತ ಪರೀಕ್ಷೆ ಮಾಡಲು ಸಾಧ್ಯವಾಗುತ್ತದೆ. ಕಾನಪುರ ಐಐಟಿಯಲ್ಲಿ ಓದಿದ ಈ ಮೀರಠ್ ಹುಡುಗ ಕಳೆದ ವರ್ಷ ರಟ್ಟಿನ ಕಾಗದದಲ್ಲೇ ಹತ್ತು ರೂಪಾಯಿ ವೆಚ್ಚದ ಮೈಕ್ರೊಸ್ಕೋಪ್ ತಯಾರಿಸಿ ವಿಜ್ಞಾನಲೋಕಕ್ಕೆ ಅಚ್ಚರಿ ಮೂಡಿಸಿದವರು.[$]

ನೋಡಿ

ಉಲ್ಲೇಖ

  1. https://en.wikipedia.org/wiki/Scientific_instrument
  2. https://en.wikipedia.org/wiki/Stethoscope
  3. .https://en.wikipedia.org/wiki/Thermometer