ವೈ-ಫೈ

ವೈ-ಫೈ ಎ೦ಬುದು ಸ್ಥಳೀಯ ಗಣಕ ಜಾಲ (Local Area Network)ದ ನಿಸ್ತಂತು ಸ್ವರೂಪ. ವೈ-ಫೈ ಪದವು ವೈ-ಫೈ ಅಲೈಯನ್ಸ್ ಎಂಬ ಸಂಸ್ಥೆಯು ಟ್ರೇಡ್ ಮಾರ್ಕ್ ಆಗಿದೆ.

ವೈ-ಫೈ ಅಲೈಯನ್ಸ್ ನ ಲೋಗೊ

ಸಂಚಾರಿ ಗಣಕ ಯಂತ್ರಗಳ ಬಳಕೆಗಾಗಿ ನಿರೂಪಿತಗೋಂಡ ವೈ-ಫೈ ತಂತ್ರಜ್ನಾನದಿಂದಾಗಿ ಇಂದಿನ ದಿನಗಳಲ್ಲಿ ಲ್ಯಾಪ್-ಟಾಪ್ ಗಳು ಹಾಗು ಹ್ಯಾಂಡ್-ಹೆಲ್ಡ್ ಸಾಧನಗಳು ಯಾವುದೇ ತಂತಿಗಳ ನೆರವಿಲ್ಲದೆ ಅಂತರಜಾಲಕ್ಕೆ ಸಂಪರ್ಕ ಹೊಂದಬಹುದಾಗಿದೆ. ಈ ತಂತ್ರಜ್ನಾನದಿಂದ ಬಳಕೆದಾರರು ಮನೆ ಹಾಗು ಕಚೇರಿಗಳಲ್ಲದೆ, ವಿಮಾನ ನಿಲ್ದಾಣ, ಕಾಫಿ-ಷಾಪ್ ಹಾಗು ಇತರೆ ಸಾರ್ವಜಾನಿಕ ಸ್ಥಳಗಳಲ್ಲಿ ಅಂತರಜಾಲಕ್ಕೆ ಸಂಪರ್ಕ ಹೊಂದ ಬಹುದಾಗಿದೆ. ವೈ-ಫೈ ಅಲೈಯನ್ಸ್ ಸಂಸ್ಥೆಯು, ಇತರ ಸಂಸ್ಥೆಗಳಿಂದ ತಯಾರಾದ ಪರಿಕರಗಳನ್ನು ಪ್ರಮಾಣಿಕರಿಸುತ್ತದೆ. ಇದರಿಂದಾಗಿ ಈ ಪರಿಕರಗಳು, ಯಾವುದೇ ಅಡಚಣೆಗಳಿಲ್ಲದೆ ಒಂದರ ಜೊತೆ ಒಂದು ಕೆಲಸ ಮಾಡಬಹುದಾಗಿದೆ.

ತಂತ್ರಜ್ಞಾನ

ವೈ-ಫೈ ತಂತ್ರಜ್ಞಾನವು ೨.೪ GHz (೮೦೨.೧೧b/g) ಹಾಗು ೫ GHz (೮೦೨.೧೧a) ಬ್ಯಾಂಡ ರೇಡಿಯೋ ಫ್ರೀಕ್ವೆನ್ಸೀ ಯಲ್ಲಿ ಕಾರ್ಯ ನಿರ್ವಹಿಸುತದ್ದೆ.

ಬಾಹ್ಯ ಸಂಪರ್ಕಗಳು

ವೈಫೈ ವೈಫೈ ಒಂದು ಲೋಕಲ್‌ ಏರಿಯಾ ನೆಟ್‌ವರ್ಕ್‌. ಡಾಟಾ ವಿನಿಮಯಕ್ಕೆ ಅಥವಾ ಅಂತರಜಾಲ ಬಳಕೆಗೆ ಕಂಪ್ಯೂಟರ್‌, ಸ್ಮಾರ್ಟ್‌ಫೋನ್‌ ರೀತಿಯ ಎಲೆಕ್ಟ್ರಾನಿಕ್‌ ಸಾಧನಗಳಿಗೆ ನೆರವಾಗುತ್ತದೆ. ಇದನ್ನು ಡಬ್ಲ್ಯುಲ್ಯಾನ್‌ (ವೈರ್‌ಲೆಸ್‌ ಲೋಕಲ್‌ ಏರಿಯಾ ನೆಟ್‌ವರ್ಕ್‌) ಎಂದೂ ಕರೆಯಲಾಗುತ್ತದೆ. 2000ದಲ್ಲಿ ವಿಶ್ವದಾದ್ಯಂತ ನಗರಗಳಲ್ಲಿ ವೈಫೈ ನೆಟ್‌ವರ್ಕ್‌ ಆರಂಭವಾಯಿತು. ಭಾರತದಲ್ಲಿ ಮೊಟ್ಟ ಮೊದಲಿಗೆ ವೈಫೈ ಸಂಪರ್ಕ ಪಡೆದ ನಗರ ಮೈಸೂರು. 2004ರಲ್ಲಿ ವೈಫೈ ನೆಟ್‌ ಎಂಬ ಕಂಪೆನಿ ಇಡೀ ಮೈಸೂರು ನಗರ ಮತ್ತು ಹತ್ತಿರದ ಕೆಲವು ಗ್ರಾಮಗಳಿಗೆ ವೈಫೈ ಸಂಪರ್ಕ ನೀಡಿತು.

  • [೧] ವೈ-ಫೈ ಅಲೈಯನ್ಸ್ ನ ಮುಖ ಪುಟ.