ವೈ.ಆರ್.ಸ್ವಾಮಿ
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರಲ್ಲಿ ಒಬ್ಬರು ವೈ.ಆರ್.ಸ್ವಾಮಿ.
ಜನನ,ಬಾಲ್ಯ
ಹುಟ್ಟಿದ್ದು ಕರ್ನಾಟಕದ ಚಿತ್ರದುರ್ಗದಲ್ಲಾದರೂ ಬೆಳೆದದ್ದು ನೆರೆಯ ಆಂಧ್ರಪ್ರದೇಶದ ಹೈದರಾಬಾದ್‌ನಲ್ಲಿ.ಮೊದಲ ತೆಲುಗು ವಾಕ್ಚಿತ್ರದ ನಿರ್ದೇಶಕ ಹೆಚ್.ಎಂ.ರೆಡ್ಡಿ ಇವರ ಸಾಕುತಂದೆ.
ಬೆಳ್ಳಿತೆರೆಯ ನಂಟು
ಹೆಚ್.ಎಂ.ರೆಡ್ಡಿಯವರ ನಿರ್ದೇಶನದ ತೆಲುಗು ಚಿತ್ರ 'ಭಕ್ತ ಪ್ರಹ್ಲಾದ'ದಲ್ಲಿ ಪ್ರಹ್ಲಾದನ ಪಾತ್ರ ನಿರ್ವಹಿಸುವ ಮೂಲಕ ಸ್ವಾಮಿ ಬೆಳ್ಳಿತೆರೆಗೆ ಬಂದರು.ತಂದೆಯ ಸಹಾಯಕರಾಗಿ ದುಡಿದು,ಚಿತ್ರರಂಗದ ಅಪಾರ ಅನುಭವ ಗಳಿಸಿಕೊಂಡರು.ಸ್ನಾತಕೋತ್ತರ ಪದವಿ ಪಡೆದು,ಸರಕಾರದ ಉನ್ನತ ಹುದ್ದೆಯಲ್ಲಿದ್ದರು.ಆದರೆ ಚಿತ್ರರಂಗದ ಸೆಳೆತ,ಅವರನ್ನು ಆ ಹುದ್ದೆ ತ್ಯಜಿಸುವಂತೆ ಮಾಡಿತು.ಮೊದಮೊದಲು ತೆಲುಗು,ತಮಿಳು ಚಿತ್ರಗಳನ್ನು ನಿರ್ದೇಶಿಸುತ್ತಿದ್ದರು.ನಂತರ ತಮ್ಮ ಸ್ವಂತ ಲಾಂಛನ ರೋಹಿಣಿ ಫಿಲಂಸ್ ಮೂಲಕ ಕನ್ನಡ ಚಲನಚಿತ್ರ ರೇಣುಕಾ ಮಹಾತ್ಮೆ ನಿರ್ಮಿಸಿ,ನಿರ್ದೇಶಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.ಸ್ವಾಮಿಯವರು ಒಟ್ಟಾರೆ ೩೮ ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.ಅವರ ಪ್ರತಿಯೊಂದು ಚಿತ್ರವೂ ವಿಶಿಷ್ಟವಾಗಿದೆ,ವಿಭಿನ್ನವಾಗಿದೆ.
ಇವರ ನಿರ್ದೇಶನದ ಕೆಲವು ಕನ್ನಡ ಚಲನಚಿತ್ರಗಳು - ವಿಶೇಷತೆ
- ಭಕ್ತ ಕನಕದಾಸ - ಟ್ರಿಕ್ ಶಾಟ್‌ಗಳು ಹಾಗೂ ಸಂಗೀತ.
- ಸ್ವರ್ಣ ಗೌರಿ
- ಜೇನುಗೂಡು
- ದೇವರ ಮಕ್ಕಳು - ಮ.ನ.ಮೂರ್ತಿಯವರ ಮೀನಾ ಎಂಬ ಕಾದಂಬರಿ ಆಧಾರಿತ.
- ಸ್ವಯಂವರ - ಮ.ನ.ಮೂರ್ತಿಯವರ ಕಾದಂಬರಿ ಆಧಾರಿತ.
- ಮೂರೂವರೆ ವಜ್ರಗಳು - ಪೌರಾಣಿಕ ಚಿತ್ರ.
- ಸಿಪಾಯಿ ರಾಮು - ಇನ್ನು ಬರಲೆ ಯಮುನೆ ಎಂಬ ಕಾದಂಬರಿ ಆಧಾರಿತ ಚಿತ್ರ,ಚಂಬಲ್ ಕಣಿವೆಯ ಡಕಾಯಿತರನ್ನು ಕುರಿತದ್ದು.
- ಸವತಿಯ ನೆರಳು - ಆರ್ಯಾಂಬ ಪಟ್ಟಾಭಿಯವರ ಕಾದಂಬರಿ ಆಧಾರಿತ.
- ಮುರಿದ ಮನೆ
- ಕಠಾರಿವೀರ
- ಭಲೇ ರಾಜ
- ಭಲೇ ಹುಚ್ಚ
- ಬಿಡುಗಡೆ- ಕೊಲೆ ರಹಸ್ಯ ಮತ್ತು ಗಲ್ಲು ಶಿಕ್ಷೆ ಸಂಬಡಿತ ಕುತೂಹಲಕಾರಿ ಚಿತ್ರ
- ದೇವರ ಕಣ್ಣು- ಕೊಲೆ ರಹಸ್ಯದ ಚಿತ್ರ, ಬಂಗಾಲಿ ಕಾದಂಬರಿ ಆಧಾರಿತ. ರೋಮಾಂಚಕಾರಿ ಚಿತ್ರ
- ಅಪೂರ್ವ ಸಂಗಮ - ಹಿಂದಿ ಚಿತ್ರವನ್ನು ಆಧರಿಸಿದ್ದು,ಅವರ ನಿರ್ದೇಶನದ ಕೊನೆಯ ಚಿತ್ರ.
ಪ್ರಶಸ್ತಿ,ಗೌರವಗಳು
- ೧೯೯೦-೯೧ - ಜೀವಮಾನದ ಸಾಧನೆಗೆ ರಾಜ್ಯ ಸರ್ಕಾರದ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ.
- ಭಕ್ತ ಕನಕದಾಸ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ.
ವೈ.ಆರ್.ಸ್ವಾಮಿಯವರು ೨೦೦೨ರಲ್ಲಿ ವಿಧಿವಶರಾದರು.