ಸಿಂಧ್ ನ ಬ್ರಾಹ್ಮಣ ರಾಜವಂಶ

ಬ್ರಾಹ್ಮಣ ರಾಜವಂಶ
PALLAVAS
PANDYAS
CHOLAS
CHERAS
NEZAKHUNS
TOKHARAYABGHUS
PATOLAS
KARKOTAS
PUSHYABHUTIS
MAITRAKAS
KALACHURIS
CHALUKYAS
SASANIANEMPIRE
ಸುಮಾರು 600-650 ಸಿಇ ಚಾಚಾಸ್ ಮತ್ತು ನೆರೆಯ ರಾಜ್ಯಗಳ ಪ್ರದೇಶ[]
Capitalಅರೋರ್
Common languagesಸಂಸ್ಕೃತ, ಸಿಂಧಿ ಭಾಷೆ
Governmentರಾಜಪ್ರಭುತ್ವ
ಮಹಾರಾಜ 
• 632–671
ಚಾಚ್
• 671–679
ಚಾಂದರ್
• 695–712
ರಾಜ ದಹೀರ್
History 
• ಚಾಚ್ ಸಾಮ್ರಾಜ್ಯವನ್ನು ಸ್ಥಾಪಿಸಿದನು
632 ಸಿ.ಇ
• ಉಮಯದ್ ಖಲಿಫ್ ಇಂದ ಕೊನೆಗೂಂಡಿತು
724
Preceded by
Succeeded by
ರಾಯ್ ಸಾಮ್ರಾಜ್ಯ
ಸಿಂಧ್‌ನ ಕ್ಯಾಲಿಫಾಲ್ ಪ್ರಾಂತ್ಯ
Today part ofಪಾಕಿಸ್ಠಾನ
ಭಾರತ
ಇರಾನ್
ಸಿಂಧ್‌ನಲ್ಲಿ ಮುಹಮ್ಮದ್ ಇಬ್ನ್ ಖಾಸಿಮ್ ಅವರ ಪ್ರಚಾರಗಳು.



ಸಿಂಧ್‌ನ ಬ್ರಾಹ್ಮಣ ರಾಜವಂಶ ( c. 632– 712 ), [] ಚಾಚ್ ರಾಜವಂಶ ಎಂದೂ ಸಹ ಕರೆಯುತ್ತಾರೆ, [] ರಾಯ್ ರಾಜವಂಶಸ್ಠರ ನಂತರದ ಸಿಂಧ್‌ಪ್ರಾಂತ್ಯದಲ್ಲಿ ಆಡಳಿತ ಮಾಡಿದ ರಾಜವಂಶವಾಗಿತ್ತು. ಇದರ ಅಸ್ತಿತ್ವದ ಬಗ್ಗೆ ಹೆಚ್ಚಿನ ಮಾಹಿತಿಯು ಚಾಚ್-ಬ್ರಾಹ್ಮಣ ರಾಜವಂಶದ ಐತಿಹಾಸಿಕ ಖಾತೆಯಾದ ಚಾಚ್ ನಾಮಾದಿಂದ ಬಂದಿದೆ. []

ಸಿ.ಇ 712 ರಲ್ಲಿ ಪತನಗೊಂಡ ನಂತರವೂ ಈ ರಾಜವಂಶಜರು ಉಮಯ್ಯದ್ ಕ್ಯಾಲಿಫೇಟ್‌ನ ಸಿಂಧ್‌ನ ಕ್ಯಾಲಿಫಾಲ್ ಪ್ರಾಂತ್ಯದಡಿಯಲ್ಲಿ ಸಿಂಧ್‌ ಪ್ರಾಂತ್ಯದ ಆಡಳಿತ ನಿರ್ವಹಿಸುವುದನ್ನು ಮುಂದುವರೆಸಿದರು. [] ಈ ಆಡಳಿತಗಾರರಲ್ಲಿ ಹುಲ್ಲಿಶಾ ಮತ್ತು ಶಿಶಾ ಸೇರಿದ್ದಾರೆ. []

ಇತಿಹಾಸ

ಚಾಚ್ ಆಫ್ ಅರೋರ್ ಎಂಬ ಬ್ರಾಹ್ಮಣ, ಬೌದ್ಧರ ರಾಯ್ ರಾಜವಂಶಜಳಾದ ಮೃತ ರಾಯ್ ಸಾಹಸಿ ೨ಯ ಪತ್ನಿಯನ್ನು ಮದುವೆಯಾಗುವುದರ ಮೂಲಕ ಈ ರಾಜವಂಶವನ್ನು ಸ್ಥಾಪಿಸದನು. ರಾಯ್ ಸಾಹಸಿ ೨ನ ಸಹೋದರನ ಹತ್ಯೆಯಿಂದಾಗಿ ಇವನ ಸ್ಠಾನ ಮತ್ತಷ್ಟು ಭದ್ರವಾಯಿತು. []

ಸಿಂಧಿ ಕಡಲ್ಗಳ್ಳರು ಸೆರೆಂಡಿಬ್‌ನ(ಶ್ರೀಲಂಕಾದ ಹಳೆಯ ಹೆಸರು) ರಾಜನು ಉಮ್ಮಾಯದ್ ಖಲೀಫ್‌ಗೆ ಕಳುಹಿಸುತ್ತಿದ್ದ ಬೆಲೆಬಾಳುವ ಉಡುಗರೆಯನ್ನು ವಶಪಡಿಸಿಕೊಂಡರು. ತನ್ನ ಇನಾಮನ್ನು ಮರಳಿಕೂಡಿಸುವಂತೆ ಖಲೀಫ್ ನು ರಾಜ ದಹೀರನಿಗೆ ಕೇಳಿಕೂಂಡಾಗ. ದಹೀರನು ಕಡಲ್ಗಳ್ಳರನ್ನು ತನು ನಿಯಂತ್ರಿಸುತ್ತಿಲ್ಲ ಹಾಗಾಗಿ ಇದು ನನ್ನ ವ್ಯಪ್ತಿಗೆ ಬರುವುದಿಲ್ಲವೆಂದು ನಿರಾಕರಿಸಿದನು.ಖಲೀಫ್ ಅಬ್ದ್ ಅಲ್-ಮಲಿಕ್ ಇಬ್ನ್ ಮರ್ವಾನ್ ಗವರ್ನರ್ ಅಲ್-ಹಜ್ಜಾಜ್ ಇಬ್ನ್ ಯೂಸುಫ್‌ಗೆ ದೊಡ್ಡ ಸೈನ್ಯವನ್ನು ಆಕ್ರಮಣಕ್ಕೆ ಕಳುಹಿಸಿದನು. ಆದರೆ ಖಲೀಫನ ಮರಣದಿಂದಾಗಿ ಸಿಂಧ್ ಪ್ರಾಂತ್ಯವನ್ನು ಸ್ವಾಧೀನಪಡಿಸಿಕೊಳ್ಳಲು ಯಾವುದೇ ಪ್ರಯತ್ನವನ್ನು ಅವನು ಮಾಡಲಿಲ್ಲ. ಅವನ ಮಗ ಮತ್ತು ಉತ್ತರಾಧಿಕಾರಿ ಅಲ್-ವಾಲಿದ್ I ರ ಅಡಿಯಲ್ಲಿ, ಜನರಲ್ ಮುಹಮ್ಮದ್ ಬಿನ್ ಖಾಸಿಮ್ 712 ರಲ್ಲಿ ಸಿಂಧ್ ಮೇಲೆ ಇಸ್ಲಾಮಿಕ್ ಆಕ್ರಮಣವನ್ನು ನಡೆಸಿದರು.

ಈ ಸಂಘರ್ಷದಲ್ಲಿ ಜಾಟ್‌ ಜನಾಂಗದವರು ಹಿಂದಿನ ಬೌದ್ದ ರಾಯ್ ರಾಜವಂಶಕ್ಕೆ ನಿಷ್ಠೆಯನ್ನು ಉಳಿಸಿಕೊಂಡಿದ್ದರಿಂದ, ಹಾಗು ಸ್ಥಳೀಯ ಬೌದ್ಧ ಕುಲದವರು ರಾಜ ದಾಹಿರ್ ವಿರುದ್ಧ ಉಮ್ಮಾಯದ್‌ಗಳೊಂದಿಗೆ ಮೈತ್ರಿ ಮಾಡಿಕೊಂಡರು. ಸಿಂಧ್‌ನ ಕೊನೆಯ ಹಿಂದೂ ರಾಜ ರಾಜ ದಾಹಿರ್ ಅರೋರ್ ಯುದ್ಧದ ಸಮಯದಲ್ಲಿ ಕೊಲ್ಲಲ್ಪಟ್ಟನು ಹಾಗು ಸಿಂಧ್ ಅನ್ನು ಉಮ್ಮಾಯದ್ ಕ್ಯಾಲಿಫೇಟ್‌ಗೆ ಸೇರಿಸಲಾಯಿತು. []

ಆಡಳಿತಗಾರರು

ಬ್ರಾಹ್ಮಣ ರಾಜವಂಶದ ತಿಳಿದಿರುವ ಆಡಳಿತಗಾರರು: []

  • ಚಾಚ್ ( r. ಸಿ. 632 – ಸಿ. 671 - )
  • ಚಂದರ್ ( r. ಸಿ. 671 – ಸಿ. 679 - )
  • ದಾಹಿರ್ ( r. ಸಿ. 679 – ಸಿ. 712 - ಅಲೋರ್ ನಿಂದ)

ಉಮಯ್ಯದ್ ಕ್ಯಾಲಿಫೇಟ್ ಅಡಿಯಲ್ಲಿ:

  • ದಾಹಿರ್ಸಿಯಾ ( r. ಸಿ. 679 – ಸಿ. 709 - ಬ್ರಾಹ್ಮಣಾಬಾದ್ ನಿಂದ)
  • ಹುಲ್ಲಿಶಾಹ್ ( r. ಸಿ. 712 – ಸಿ. 724 - )
  • ಶಿಶಾ ( r. 724– )

ಬಾಹ್ಯ ಕೊಂಡಿಗಳು

Preceded by
Rai dynasty
Monarchy
632–712
Succeeded by
Caliphate

ಸಹ ನೋಡಿ

  • ಸಿಂಧ್ ರಾಜರ ಪಟ್ಟಿ

ಉಲ್ಲೇಖಗಳು

  1. Schwartzberg, Joseph E. (1978). A Historical Atlas of South Asia. Chicago: University of Chicago Press. p. 146, map XIV.2 (b). ISBN 0226742210.
  2. ೨.೦ ೨.೧ ೨.೨ ೨.೩ ೨.೪ Wink, André (1991). Al- Hind: The Slave Kings and the Islamic Conquest (in ಇಂಗ್ಲಿಷ್). Brill. pp. 152–153. ISBN 9004095098.
  3. Rao, B. S. L. Hanumantha; Rao, K. Basaveswara (1958). Indian History and Culture (in ಇಂಗ್ಲಿಷ್). Commercial Literature Company. p. 337.
  4. Keay, John (1999). India: A History (in ಇಂಗ್ಲಿಷ್). London: HarperCollins. pp. 182–183. ISBN 978-0-00-255717-7.
  5. Burton, Richard (1851). Sindh and the Races that Inhabit the Valley of the Indus. Asian Educational Services. pp. 14–15. ISBN 9788120607583.