ಹಸ್ತಸಾಮುದ್ರಿಕ ಶಾಸ್ತ್ರ
ಅಂಗೈ ರೇಖೆ ನೋಡಿ ಹೇಳುವ ಭವಿಷ್ಯ or ಹಸ್ತ ಸಾಮುದ್ರಿಕ ಶಾಸ್ತ್ರ (ಇದನ್ನು cheiromancy ಎಂತಲೂ ಬರೆಯಲಾಗುತ್ತದೆ, ಗ್ರೀಕ್‌ನಲ್ಲಿ cheir (χειρ), “hand”; manteia (μαντεία), “divination”), ಹಸ್ತವನ್ನು ಅಧ್ಯಯನ ಮಾಡುವ ಮೂಲಕ ವ್ಯಕ್ತಿಯ ಗುಣ ಲಕ್ಷಣಗಳನ್ನು ಗುರುತಿಸುವ, ಭವಿಷ್ಯ ನುಡಿಯುವ ಕಲೆ, ಇದನ್ನು ಹಸ್ತದ ಓದು ಅಥವಾ ಕೈರೋಲಜಿ ಎಂದು ಕೂಡಾ ಕರಯಲಾಗುತ್ತದೆ. ಅನೇಕ ಸಾಂಸ್ಕೃತಿಕ ಭಿನ್ನತೆಗಳೊಂದಿಗೆ ಈ ಪದ್ಧತಿ ಜಗತ್ತಿನಾದ್ಯಂತ ಕಾಣಸಿಗುತ್ತದೆ. ಹಸ್ತ ಸಾಮುದ್ರಿಕ ಶಾಸ್ತ್ರವನ್ನು ರೂಢಿಮಾಡಿಕೊಂಡಿರುವವರನ್ನು ಸಾಮಾನ್ಯವಾಗಿ ಹಸ್ತ ಸಾಮುದ್ರಿಕರು , ಹಸ್ತ ಓದುಗರು , ಕೈ ಓದುಗರು , ಹಸ್ತ ವಿಶ್ಲೇಷಕರು ,ಅಥವಾ ಕೈರೊಲೊಜಿಸ್ಟ್‌ಗಳು ಎಂದು ಕರೆಯಲಾಗುತ್ತದೆ. ಹಸ್ತ ಸಾಮುದ್ರಿಕ ಶಾಸ್ತ್ರವನ್ನು ಸಾಮಾನ್ಯವಾಗಿ ಹುಸಿವಿಜ್ಞಾನ ಎಂದು ಭಾವಿಸಲಾಗಿದೆ. ಕೆಳಗೆ ಕೊಟ್ಟಿರುವ ಮಾಹಿತಿ ಆಧುನಿಕ ಹಸ್ತ ಸಾಮುದ್ರಿಕ ಶಾಸ್ತ್ರದ ಸಂಕ್ಷಿಪ್ತ ಪ್ರತಿನಿಧೀಕರಣ; ಹಸ್ತದ ವಿವಿಧ ರೇಖೆಗಳ ಕುರಿತ ವ್ಯಾಖ್ಯಾನ ಮತ್ತು ಹಸ್ತ ಚಹರೆಗಳಾ ಆಧಾರದ ಮೇಲೆ ಹಸ್ತ ಸಾಮುದ್ರಿಕಾ ಶಾಸ್ತ್ರದಲ್ಲಿ ವಿವಿಧ ರೀತಿಗಳಿದ್ದು ಅನೇಕ ಸಲ ಇವು ಪರಸ್ಪರ ವಿರೋಧಗಳಿಂದ ಕೂಡಿರುತ್ತದೆ.
ಇತಿಹಾಸ
ಹಸ್ತ ಸಾಮುದ್ರಿಕ ಶಾಸ್ತ್ರದ ಮೂಲ ಚೈನೀಸ್ ಯೀಜಿಂಗ್ (I Ching), ಭಾರತದಲ್ಲಿನ (ಹಿಂದೂ) ಜ್ಯೋತಿಷ್ಯಶಾಸ್ತ್ರ ( ಸಂಸ್ಕೃತದಲ್ಲಿ ಜ್ಯೋತಿಷ್ ಎಂದು ಕರೆಯಲಾಗುತ್ತದೆ) ಮತ್ತು ರೋಮಾ (ಜಿಪ್ಸಿ) ಎಂಬ ಹೆಸರಿನ ಕಣಿ ಹೇಳುವವರು. ಹಿಂದು ಸಂತ ವಾಲ್ಮೀಕಿ "ಪುರುಷ ಸಾಮುದ್ರಿಕತೆ ಕುರಿತು ವಾಲ್ಮೀಕಿ ಮಹರ್ಷಿಯ ಬೋದನೆಗಳು" ಎಂಬ ಗ್ರಂಥ ರಚಿಸಿರುವರೆಂದು ನಂಬಲಾಗಿದ್ದು, ಇದರಲ್ಲಿ 567 ಪದ್ಯಗಳಿವೆ. ಹಸ್ತ ಸಾಮುದ್ರಿಕ ಶಾಸ್ತ್ರವು ಭಾರತದಿಂದ ಚೀನಾ, ಟಿಬೆಟ್, ಈಜಿಪ್ಟ್, ಪರ್ಷಿಯಾ ಹಾಗೂ ಯೂರೋಪಿನ ಇತರೆ ದೇಶಗಳಿಗೆ ಹರಡಿಕೊಂಡಿತು [ಸೂಕ್ತ ಉಲ್ಲೇಖನ ಬೇಕು]. ಚೀನಾದಿಂದ ಗ್ರೀಸ್[ಸೂಕ್ತ ಉಲ್ಲೇಖನ ಬೇಕು] ದೇಶಕ್ಕೆ ಬಂದ ಹಸ್ತ ಸಾಮುದ್ರಿಕಾ ಶಾಸ್ತ್ರವನ್ನು ಅನಾಕ್ಸಾಗೊರಸ್ ಎಂಬುವವನು ಅಭ್ಯಾಸ ಮಾಡಿದ. ಆದರೂ, ಆಧುನಿಕ ಹಸ್ತ್ರ ಸಾಮುದ್ರಿಕ ಶಾಸ್ತ್ರಜ್ಞರು ಪಾರಂಪರಿಕ ಊಹಾತಂತ್ರಗಳೊಂದಿಗೆ ಮನಃ ಶಾಸ್ತ್ರ, ಸಮಗ್ರ ಗುಣಮುಖ ವಿಧಾನ, ಮತ್ತು ಪರ್ಯಾಯ ವಿಧಾನವಾದ ಕಣಿ ಹೇಳುವುದನ್ನೂ ಸಹ ಮಿಶ್ರ ಮಾಡುತ್ತಾರೆ.
- ಕ್ಯಾಪ್ಟನ್ ಕಾಸಿಮಿರ್ ಸ್ಟಾನಿಸ್ಲಾಸ್ ಡಿ’ ಆರ್ಪೆಂಟಿಗ್ನಿ 1839ರಲ್ಲಿ ಲಾ ಕೈರೊಗ್ನಮಿ ಎಂಬ ಪುಸ್ತಕ ಪ್ರಕಟಿಸಿದ.
- ಅಡ್ರಿಯನ್ ಅಡಾಲ್ಫ್ ದೆಸ್ಬಾರೊಲ್ಲೆಸ್ 1859ರಲ್ಲಿ ಲೆಸ್ ಮಿಸ್ಟರೆಸ್ ಡಿ ಲಾ ಮೈನ್ ಪುಸ್ತಕವನ್ನು ಪ್ರಕಟಿಸಿದ.
- 1889ರಲ್ಲಿ ಕ್ಯಾಥೆರಿನ್ ಸೇಂಟ್-ಹಿಲ್ ಎಂಬುವವರು ಗ್ರೇಟ್ ಬ್ರಿಟನ್ನಿನ ಕೈರಲಾಜಿಕಲ್ ಸೊಸೈಟಿಯನ್ನು ಸ್ಥಾಪಸಿದರು.
- 1897ರಲ್ಲಿ ಎಡ್ಗರ್ ಡಿ ವಾಲ್ ಕೋರ್ಟ್-ವೆರ್ಮಂಟ್ (Comte de St Germain) ಅವರು ಅಮೇರಿಕಾದ ಕೈರಲಾಜಿಕಲ್ ಸೊಸೈಟಿಯನ್ನು ಸ್ಥಾಪಿಸಿದರು.
- 1894ರಲ್ಲಿ ಕೌಂಟ್ ಲೂಯಿಸ್ ಹ್ಯಾಮನ್ (ಚೈರೊ) ಹಸ್ತದ ಚೈರೊ ಭಾಷಾ ಪುಸ್ತಕ ಪ್ರಕಟಿಸಿದ
- 1900ರಲ್ಲಿ ವಿಲಿಯಮ್ ಬೆನ್‌ಹಾಮ್ ದಿ ಲಾಸ್ ಆಫ್ ಸೈಂಟಿಫಿಕ್ ಹ್ಯಾಂಡ್ ರೀಡಿಂಗ್ ಎಂಬ ವೈಜ್ಞಾನಿಕ ಹಸ್ತ ಸಾಮುದ್ರಿಕಾ ಪುಸ್ತಕ ಪ್ರಕಟಿಸಿದ.
- 1936–1969ರವರೆಗೆ ಅಧ್ಯಯನ ನಡೆಸಿ ವೈಜ್ಞಾನಿಕ ಕೈರಾಲಜಿಗೆ ನೀಡಿದ ಕೊಡುಗೆಗಳನ್ನು ಚಾರ್ಲೊಟ್ ವೊಲ್ಫ್ ಅವರು ಪ್ರಕಟಿಸಿದರು.
- 1925–1958ರವರೆಗೆ ಅಧ್ಯಯನ ನಡೆಸಿ ವೈಜ್ಞಾನಿಕ ಕೈರಾಲಜಿಗೆ ನೀಡಿದ ಕೊಡುಗೆಗಳನ್ನು [[}ನೊಯೆಲ್ ಜಕ್ವಿನ್]] ಅವರು ಪ್ರಕಟಿಸಿದರು.
- ಅರ್ನಾಲ್ಡ್ ಹೋಲ್ಟ್ಜ್‌ಮನ್ (ಸೈಕೊಡಯಾಗ್ನೋಸ್ಟಿಕ್ ಕೈರಾಲಜಿ)
ತಂತ್ರಗಳು
ಒಬ್ಬ ವ್ಯಕ್ತಿಯ ಕೈನ ಹಸ್ತವನ್ನು ಓದಿ ಆ ವ್ಯಕ್ತಿಯ ಗುಣಲಕ್ಷಣ ಮತ್ತು ಭವಿಷ್ಯ ಜೀವನದ ಮೌಲ್ಯಮಾಪನವನ್ನು ಹಸ್ತ ಸಾಮುದ್ರಿಕ ಶಾಸ್ತ್ರ ವು ಒಳಗೊಳ್ಳುತ್ತದೆ ಅನೇಕ "ರೇಖೆಗಳು" ("ಹೃದಯ ರೇಖೆ", "ಜೀವನ ರೇಖೆ", ಇತ್ಯಾದಿ.) ಮತ್ತು "ದಿಣ್ಣೆಗಳು" (ಅಥವಾ ಉಬ್ಬುಗಳು) (ಕೈರೊಗ್ನಮಿ) , ಸಂಬಂಧಿ ಗಾತ್ರ, ಗುಣ ಮತ್ತು ಕೂಡಾವಳಿಗಳ ಆಧಾರದಿಂದ ವ್ಯಾಖ್ಯಾನಗಳನ್ನು ಊಹಾತ್ಮಕವಾಗಿ ಸೂಚಿಸುತ್ತದೆ. ಕೆಲವು ಪರಂಪರೆಗಳಲ್ಲಿ ಹಸ್ತ ಓದುಗರು ಬೆರಳು, ತುದಿ ಉಗುರು, ಬೆರಳಚ್ಚು ಮತ್ತು ಹಸ್ತದ ಚರ್ಮದ ರಚನೆ, ಚರ್ಮದ ಹೆಣಿಗೆ ಮತ್ತು ಹಸ್ತದ ಬಣ್ಣ, ಆಕಾರ ಮತ್ತು ಕೈನ ಮೃದುತ್ವ ಗುಣಲಕ್ಷಣಗಳನ್ನು ಪರಿಶೀಲಿಸುತ್ತಾರೆ.ಹಸ್ತ ಓದುಗ ಸಾಮಾನ್ಯವಾಗಿ ವ್ಯಕ್ತಿಯ ’ಪ್ರಬಲವಾದ ಕೈ (ವ್ಯಕ್ತಿ ಬರೆಯಲು ಅಥವಾ ಹೆಚ್ಚು ಬಳಸುವ)ಯನ್ನು ಓದುವ ಮೂಲಕ ಪ್ರಾರಂಭಿಸುತ್ತಾನೆ, ಪ್ರಬಲವಾದ ಕೈ ಪ್ರಜ್ಞಾಪೂರ್ವಕ ಮನಸ್ಸನ್ನು ಪ್ರತಿನಿಧಿಸುತ್ತದೆ, ಇನ್ನೊಂದಕ್ಕೆ ಸುಪ್ರಪ್ರಜ್ಞಾವಸ್ಥೆಯಲ್ಲಿರುತ್ತವೆ ಎಂದು ಪರಿಗಣಿಸಲಾಗಿದೆ. ಕೆಲವು ಹಸ್ತ ಸಾಮುದ್ರಿಕ ಪರಂಪರೆಗಳಾಲ್ಲಿ ಇನ್ನೊಂದು ಕೈ ವಂಶ ಪಾರಂಪರ್ಯ ಕೌಟುಂಬಿಕ ಚಹರೆಗಳನ್ನು ಒಳಗೊಂಡಿರುತ್ತವೆಯೆಂದು ನಂಬಲಾಗಿದೆ, ಅಥವಾ ಹಸ್ತ ಸಾಮುದ್ರಿಕಾ ವಿಶ್ವಾತ್ಮಕ ನಂಬಿಕೆಗಳಿಗನುಗುಣವಾಗಿ ಗತಜೀವನದ ಬಗ್ಗೆ ಮಾಹಿತಿ ಒದಗಿಸುತ್ತದೆ ಎಂದು ಅಥವಾ ಕರ್ಮ ಪರಿಸ್ಥಿತಿಯನ್ನು ತಿಳಿಸುತ್ತದೆ ಎಂದು ನಂಬಲಾಗಿದೆ.ಕ್ಲಾಸಿಕಲ್ ಹಸ್ತ ಸಾಮುದ್ರಿಕ ಶಾಸ್ತ್ರದ (ವಿಸ್ತೃತವಾಗಿ ಬೋಧಿಸಲ್ಪಟ್ಟಿರುವ ಮತ್ತು ಅಭ್ಯಾಸದಲ್ಲಿರುವ ಪರಂಪರೆ) ಮೂಲಭೂತ ಚೌಕಟ್ಟು ಗ್ರೀಕ್ ಪುರಾಣ ಕಥೆಗಳಲ್ಲಿ ತನ್ನ ನೆಲೆಗಟ್ಟು ಹೊಂದಿದೆ. ಹಸ್ತದ ಪ್ರತಿ ವಲಯ ಮತ್ತು ಹಸ್ತದ ಬೆರಳುಗಳು ದೇವರು ಅಥವಾ ದೇವತೆಗೆ ಸಂಬಂಧಿಸಿದೆ ಮತ್ತು ಆ ವಲಯದ ಲಕ್ಷಣಗಳು ವಿಷಯದ ಸಂವಹನಾಂಶದ ಸ್ವಭಾವವನ್ನು ಸೂಚಿಸುತ್ತವೆ. ಉದಾಹರಣೆಗೆ ಉಂಗುರ ಬೆರಳು, ಗ್ರೀಕ್ ದೇವರು ಅಪೊಲೊ ಜೊತೆ ಸಾಂಗತ್ಯ ಹೊಂದಿದೆ; ಉಂಗುರ ಬೆರಳಿನ ಗುಣಲಕ್ಷಣಗಳು ಕಲೆ, ಸಂಗೀತ, ಸೌಂದರ್ಯ ಶಾಸ್ತ್ರ, ಕೀರ್ತಿ, ಸಂಪತ್ತು ಮತ್ತು ಸಾಮರಸ್ಯದ ವಿಷಯ ನಿರ್ವಹಣೆಯೊಂದಿಗೆ ಬಂಧವನ್ನು ಹೊಂದಿವೆ.
ಎಡ ಮತ್ತು ಬಲಗೈನ ಪ್ರಾಮುಖ್ಯತೆ
ಓದಲು ಯಾವ ಕೈ ಉತ್ತಮ ಎಂಬ ಬಗ್ಗೆ ವಾದ ವಾಗ್ವಾದಗಳಿದ್ದರೂ ಎರಡೂ ಕೈಗಳಿಗೆ ತಮ್ಮದೇ ಪ್ರಾಮುಖ್ಯತೆ ಇದೆ. ಎಡಗೈ ವ್ಯಕ್ತಿಯ ಪ್ರಚ್ಛನ್ನತೆಯನ್ನು ಬಲಗೈ ವಾಸ್ತವಿಕಗೊಂಡ ವ್ಯಕ್ತಿತ್ವವನ್ನು ತೋರುತ್ತದೆ ಎಂದು ತಿಳಿಯುವುದು ವಾಡಿಕೆ. ಪ್ರಾಮುಖ್ಯತೆ ಕುರಿತ ಮಾತುಗಳು ಹೀಗಿವೆ. "ಭವಿಷ್ಯತ್ತು ಬಲಗೈನಲ್ಲಿ ಗತಕಾಲ ಎಡಗೈನಲ್ಲಿ ಕಾಣಿಸುತ್ತವೆ." "ನಾವು ಹುಟ್ಟಿರುವುದು ಎಡಗೈನೊಂದಿಗೆ, ಅದರಿಂದ ನಾವು ಬಲವನ್ನು ಮಾಡಿಕೊಂಡಿದ್ದೇವೆ." "ಗಂಡಸರಿಗೆ ಬಲಗೈ ಓದುತ್ತಾರೆ, ಹೆಂಗಸರಿಗೆ ಎಡಗೈ ಓದುತ್ತಾರೆ." “ದೇವರು ಕೊಟ್ಟಿದ್ದು ಎಡಗೈ, ಬಲ ನೀವು ಅದರಿಂದ ಏನು ಮಾಡುತ್ತೀರೋ ಅದು."ಈ ಎಲ್ಲಾ ಮಾತುಗಳು ಇದ್ದರೂ ಕೊನೆಯಲ್ಲಿ ಓದಲು ಯಾವ ಕೈ ಉತ್ತಮ ಎಂಬುದನ್ನು ಅಂತಃಕರಣ ಮತ್ತು ಅನುಭವಗಳು ಮಾತ್ರ ಹೇಳುತ್ತವೆ.
- ಎಡ ಎಡಗೈಯನ್ನು ಬಲಮೆದುಳು (ರಚನೆಯ ಗುರುತಿಸುವಿಕೆ, ಸಂಬಂಧಗಳು ತಿಳುವಳಿಕೆ) ನಿಯಂತ್ರಿಸುತ್ತದೆ, ಆಂತರಿಕ ವ್ಯಕ್ತಿತ್ವ, ವ್ಯಕ್ತಿಯ ನೈಸರ್ಗಿಕತನ , ಚೇತನ ಮತ್ತು ಪಾರ್ಶ್ವ ಚಿಂತನೆಗಳನ್ನು ಪ್ರತಿಫಲಿಸುತ್ತದೆ. ಇದನ್ನು ವ್ಯಕ್ತಿಯ ಆಧ್ಯಾತ್ಮಿಕ ಮತ್ತು ವೈಯಕ್ತಿಕ ವಿಕಾಸದ ಭಾಗ ಎಂದು ಕೂಡ ಪರಿಗಣಿಸಬಹುದು. ಅದು "ಜಗತ್ತಿನ ನಿಷ್ಕ್ರಿಯವಾದ ಸ್ತ್ರೀತತ್ವ"ದ ವ್ಯಕ್ತಿತ್ವ (ಹೆಣ್ತನ ಮತ್ತು ಸ್ವೀಕಾರಶೀಲ).
- ಬಲ ತದ್ವಿರುದ್ಧವಾಗಿ ಬಲಗೈಯನ್ನು ಎಡಮೆದುಳು (ತರ್ಕ, ಕಾರಣ, ಮತ್ತು ಭಾಷೆ), ನಿಯಂತ್ರಿಸುತ್ತದೆ. ವ್ಯಕ್ತಿಯ ಹೊರರೂಪ, ವಸ್ತು ರೂಪ, ಸಾಮಾಜಿಕ ಪರಿಸರದ ಪ್ರಭಾವ, ಶಿಕ್ಷಣ ಮತ್ತು ಅನುಭವವನ್ನು ಪ್ರತಿಫಲಿಸುತ್ತದೆ. ಇದು ಪಾರ್ಶ್ವ ಚಿಂತನೆಯನ್ನು ಪ್ರತಿನಿಧಿಸುತ್ತದೆ. ಅದು "ಪುರುಷ ತತ್ವ"ದ ವ್ಯಕ್ತಿತ್ವದೊಂದಿಗೆ (ಪುರುಷ, ಹೊರಸಂಚಾರಿ) ಕೂಡಾ ಸಂವಹನ ಹೊಂದಿದೆ.
ಕೈಯ ಆಕಾರ
ಅಭ್ಯಾಸದಲ್ಲಿರುವ ಹಸ್ತ ಸಾಮುದ್ರಿಕ ರೀತಿ, ಓದನ್ನು ನಿರ್ವಹಿಸುವ ರೀತಿಯನ್ನು ಅವಲಂಬಿಸಿರುವ ಹಸ್ತ ಸಾಮುದ್ರಿಕರು ಕೈನ ಅನೇಕ ಗುಣಗಳು, ಆಕಾರ ಮತ್ತು ಹಸ್ತದ ಗೆರೆಗಳನ್ನು ಗಮನಿಸಬಹುದು; ಚರ್ಮದ ಬಣ್ಣ ಮತ್ತು ಹೆಣಿಗೆ ಮತ್ತು ಉಗುರು, ಹಸ್ತ ಮತ್ತು ಬೆರಳುಗಳ ತುಲನಾತ್ಮಕ ಗಾತ್ರ, ಗಿಣ್ಣುಗಳ ಪ್ರಾಮುಖ್ಯತೆ ಮತ್ತು ಇನ್ನೂ ಅನೇಕ ಕೈ ಚಹರೆಗಳನ್ನೂ ಕೂಡಾ ಗಮನಿಸಬಹುದು.ಹಸ್ತ ಸಾಮುದ್ರಿಕ ಶಾಸ್ತ್ರದ ಬಹುತೇಕ ವಿಧಾನಗಳಲ್ಲಿ ಕೆಲವು ಸಲ ಮಾದರಿಯಾದ ಅಂಶಗಳು ಅಥವಾ ವ್ಯಕ್ತಿಯ ಸ್ವಭಾವಕ್ಕನುಗುಣವಾಗಿ ಕೈನ ಆಕಾರಗಳನ್ನು ನಾಲ್ಕು ಅಥವಾ 10 ಮಾದರಿಗಳಾಗಿ ವಿಭಾಗಿಸಲಾಗುತ್ತದೆ. ಕೈಯ ಆಕಾರಗಳು ಸೂಚಿಸಿದ ಕೈ ಮಾದರಿಗೆ ಅನುಗುಣವಾಗಿ ಗುಣ ಚಹರೆಗಳನ್ನು ಸೂಚಿಸುತ್ತವೆ ( ಅಂದರೆ ಅಗ್ನಿಕೈ ಅಧಿಕ ಚೈತನ್ಯ, ಸೃಜನಶೀಲತೆ, ಮುಂಗೋಪ, ಆಕಾಂಕ್ಷೆ ಇತ್ಯಾದಿ- ಈ ಎಲ್ಲಾ ಗುಣಗಳು ಮಾದರಿ ಅಂಶಗಳಿಗೆ ಸಂಬಂಧಿಸಿವೆ ಎಂದು ನಂಬಲಾಗಿದೆ).ಅನೇಕ ಏರಿಳಿತಗಳಿದ್ದರೂ ಆಧುನಿಕ ಹಸ್ತ ಸಾಮುದ್ರಿಕರು ಬಳಸುವ ತುಂಬಾ ಸಾಮಾನ್ಯ ವರ್ಗೀಕರಣಗಳೆಂದರೆ:
- ಭೂಮಿ : ಕೈಗಳನ್ನು ಸಾಮಾನ್ಯವಾಗಿ ಅದರ ವಿಶಾಲತೆ,ಚೌಕಾಕಾರ, ಬೆರಳುಗಳು ಮಂದವಾಗ ಉರುಟು ಚರ್ಮ, ಕೆಂಬಣ್ಣ ಮತ್ತು. ಸಾಮಾನ್ಯವಾಗಿ ಮುಂಗೈನಿಂದ ಬೆರಳುಗಳ ಬುಡದ ತನಕ ಇರುವ ಹಸ್ತದ ಉದ್ದದ್ದ ಆಧಾರದ ಮೇಲೆ ಗುರುತಿಸಲಾಗುತ್ತವೆ, ಸಾಮಾನ್ಯವಾಗಿ ಹಸ್ತದ ಉದ್ದ ಬೆರಳಿನ ಉದ್ದಕ್ಕೆ ಸಮಾನವಾಗಿರುತ್ತವೆ.
- ವಾಯು : ಕೈಗಳು ಚೌಕಾಕಾರ ಅಥವಾ ಆಯತಾಕಾರದ ಹಸ್ತದ ಜೊತೆಗೆ ನೀಳ ಬೆರಳುಗಳು ಮತ್ತು ಕೆಲವು ಸಲ ಚಾಚಿಕೊಂಡ ಗೆಣ್ಣುಗಳು ಮತ್ತು ಶುಷ್ಕ ಚರ್ಮವನ್ನು ತೋರುತ್ತವೆ. ಮುಂಗೈನಿಂದ ಬೆರಳುಗಳ ಬುಡದ ತನಕ ಹಸ್ತದ ಉದ್ದಳತೆ ಸಾಮಾನ್ಯವಾಗಿ ಬೆರಳುಗಳ ಉದ್ದಳತೆಗಿಂತ ಕಡಿಮೆ ಇರುತ್ತದೆ.
- ಜಲ : ಕೈಗಳನ್ನು ಬೇಗ ನೋಡಬಹುದು, ಕೆಲವು ಸಲ ಈ ಹಸ್ತಗಳು ಅಂಡಾಕೃತಿಯಲ್ಲಿದ್ದು ನೀಳವಾದ, ಮೃದು ರಾಶಿಯಾಕಾರದ ಬೆರಳುಗಳನ್ನು ಹೊಂದಿರುತ್ತವೆ. ಮುಂಗೈನಿಂದ ಬೆರಳುಗಳ ಬುಡದ ತನಕ ಹಸ್ತದ ಉದ್ದಳಾತೆ ಸಾಮಾನ್ಯವಾಗಿ ಹಸ್ತದ ಅತಿ ಹೆಚ್ಚು ವಿಸ್ತಾರ ಭಾಗದ ಅಗಲಕ್ಕಿಂತ ಕಡಿಮೆ ಇರುತ್ತವೆ ಮತ್ತು ಸಾಮಾನ್ಯವಾಗಿ ಬೆರಳುಗಳ ಉದ್ದಳತೆಗೆ ಸರಿ ಸಮಾನವಾಗಿರುತ್ತದೆ.
- ಅಗ್ನಿ : ಕೈಗಳ ಗುಣರೂಪ ಚೌಕಾಕಾರ ಅಥವಾ ಆಯತಾಕಾರದ ಹಸ್ತ, ಕೆಂಪೇರಿದ ಅಥವಾ ಗುಲಾಬಿ ಚರ್ಮ ಮತ್ತು ಕುಳ್ಳಗಿನ ಬೆರಳುಗಳನ್ನು ಒಳಗೊಂಡಿರುತ್ತವೆ. ಮಣಿಕಟ್ಟಿನಿಂದ ಬೆರಳುಗಳ ಕೆಳಗಿನವರೆಗಿನ ಹಸ್ತದ ಉದ್ದವು ಸಾಮಾನ್ಯವಾಗಿ ಬೆರಳುಗಳ ಉದ್ದಕ್ಕಿಂತಲೂ ಹೆಚ್ಚಾಗಿರುತ್ತದೆ.
ನಿಮ್ಮ ಕೈಗಳಲ್ಲಿ ಪ್ರಬಲ ಅಂಶ ಮತ್ತು ಸ್ವಭಾವಗಳನ್ನು ನಿರ್ಧರಿಸುವುದು ಸುಲಭ (ಕೈಗಳಲ್ಲಿನ ಪ್ರಬಲ ಗ್ರಹಗಳು ಮತ್ತು ಜ್ಯೋತಿಷ್ಯ) ಕೈಯಾಕಾರದ ವಿಶ್ಲೇಷಣೆಯಲ್ಲಿ ರೇಖೆಗಳ ಸಂಖ್ಯೆ ಮತ್ತು ಗುಣಗಳನ್ನು ಕೂಡಾ ಸೇರಿಸಿಕೊಳ್ಳಬಹುದು, ಹಸ್ತ ಸಾಮುದ್ರಿಕ ಶಾಸ್ತ್ರದ ಕೆಲವು ಪರಂಪರೆಗಳಾಲ್ಲಿ ಭೂಮಿ ಮತ್ತು ಜಲ ಕೈಗಳಲ್ಲಿ ಮತ್ತು ಅದರಲ್ಲಿನ ಆಳಾ ರೇಖೆಗಳ ಸಂಖ್ಯೆ ಕಡಿಮೆ ಇದ್ಡರೆ, ವಾಯು ಮತ್ತು ಅಗ್ನಿ ಕೈಗಳು ಕಡಿಮೆ ಸ್ಪಷ್ಟತೆಯ ನಿರೂಪಗಳೊಂದಿಗೆ ಹೆಚ್ಚು ರೇಖೆಗಳಾನ್ನು ಹೊಂದಿರುವ ಸಾಧ್ಯತೆಯಿದೆ.
ರೇಖೆಗಳು
ಸರಿಸುಮಾರು ಎಲ್ಲ ಕೈಗಳಲ್ಲಿ ಕಂಡುಬರುವ ಮೂರು ರೇಖೆಗಳಿಗೆ ಹಸ್ತ ಸಾಮುದ್ರಿಕರು ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ:
- ಹಸ್ತದ ಓದುಗ ಮೊದಲು ಪರಿಶೀಲಿಸುವುದು ಮೂರು ಪ್ರಮುಖ ರೇಖೆಗಳ ಪೈಕಿ ಹೃದಯ ರೇಖೆ ಯನ್ನು. ಇದು ಬೆರಳಿನ ಬುಡದಲ್ಲಿ, ಹಸ್ತದ ಮೇಲ್ಭಾಗದ ಕಡೆ ಕಾಣಬರುತ್ತದೆ. ಕೆಲವು ಪರಂಪರೆಗಳಲ್ಲಿ ಕಿರು ಬೆರಳ ಕೆಳಗಿನ ಹಸ್ತದ ತುದಿಯಿಂದ ಶುರುವಾಗಿ ಹಸ್ತದ ಮೂಲಕ ಹೆಬ್ಬೆರಳಿನ ಕಡೆಗೆ ಹಾದುಹೋಗಿರುವ ರೇಖೆಯನ್ನು ಓದಲಾಗುತ್ತದೆ, ಇತರ ಪರಂಪರೆಗಳಲ್ಲಿ ಬೆರಳುಗಳ ಬುಡದಿಂಡ ಶುರುವಾಗಿ ಹಸ್ತದ ಹೊರ ತುದಿಗೆ ಹರಡಿಕೊಂಡಿರುವ ರೇಖೆಗಳನ್ನು ಓದಲಾಗುತ್ತದೆ. ಈ ರೇಖೆ ಶಾರೀರಿಕ ಮತ್ತು ಉಪಮಾತ್ಮಕವಾದ ಹೃದಯ ಸಂಬಂಧಿ ಅಂಶಗಳನ್ನು ಪ್ರತಿನಿಧಿಸುತ್ತದೆ, ಹೃದಯ ಆರೋಗ್ಯದ ಅನೇಕ ಅಂಶಗಳ ಜೊತೆಗೆ ಭಾವನಾತ್ಮಕ ಸುಭದ್ರತೆ, ರೊಮ್ಯಾಂಟಿಕ್ ದೃಷ್ಟಿಕೋನ, ಕಳಾಹೀನತೆ ಮತ್ತು ಸಾಮಾಜಿಕ ವರ್ತನೆಯನ್ನು ಪ್ರತಿನಿಧಿಸುತ್ತದೆ ಎಂದು ಹಸ್ತ ಸಾಮುದ್ರಿಕರು ವ್ಯಾಖ್ಯಾನಿಸುತ್ತಾರೆ.
- ಹಸ್ತ ಸಾಮುದ್ರಿಕರು ಗುರುತಿಸಿರುವ ಇನ್ನೊಂದು ರೇಖೆ ತಲೆ ರೇಖೆ . ಈ ರೇಖೆ ಹಸ್ತದ ಮೇಲುತುದಿಯಲ್ಲಿ, ತೋರುಬೆರಳಿನ ಬುಡದಿಂದ ಪ್ರಾರಂಭವಾಗಿ ಹಸ್ತದ ಮೂಲಕ ಹಾದು ಹಸ್ತದ ಹೊರತುದಿಗೆ ಚಾಚಿಕೊಂಡಿದೆ. ಅನೇಕ ಸಲ ಈ ತಲೆ ರೇಖೆ ಪ್ರಾರಂಭದಲ್ಲಿ ಜೀವನ ರೇಖೆಯೊಂದಿಗೆ ಸೇರಿಕೊಂಡಿರುತ್ತದೆ (ಕೆಳಗೆ ನೋಡಿ). ಹಸ್ತ ಸಾಮುದ್ರಿಕರು ಸಾಮಾನ್ಯವಾಗಿ ಕಲಿಕಾಶೈಲಿ, ಸಂವಹನಾ ಶೈಲಿ, ಬೌದ್ಧಿಕತೆ ಮತ್ತು ಜ್ಞಾನದ ಹಸಿವು ಸೇರಿದಂತೆ ವ್ಯಕ್ತಿಯ ಮನಸ್ಸಿನ ಕಾರ್ಯ ವಿಧಾನವನ್ನು ಈ ರೇಖೆ ಪ್ರತಿನಿಧಿಸುತ್ತದೆ ಎಂದು ವ್ಯಾಖ್ಯಾನಿಸುತ್ತಾರೆ. ಅದು ಮಾಹಿತಿಯ ಸೃಜನಾತ್ಮಕ ಅಥವಾ ವಿಶ್ಲೇಷಣಾತ್ಮಕ ವಿಧಾನಕ್ಕೆ ( ಅಂದರೆ ಬಲಮೆದುಳು ಅಥವಾ ಎಡಮೆದುಳು ) ವ್ಯಕ್ತಿಯೊಬ್ಬನ ಆಧ್ಯತೆಯನ್ನು ಸೂಚಿಸುತ್ತದೆಂದು ಕೂಡಾ ನಂಬಲಾಗಿದೆ.
- ಅಂತಿಮವಾಗಿ ಹಸ್ತ ಓದುಗರು ಪ್ರಾಯಷಃ ಕೈಯ ತುಂಬಾ ವಿವಾದಾತ್ಮಕ ರೇಖೆ, ಜೀವನ ರೇಖೆ ಯನ್ನು ಗಮನಿಸುತ್ತಾರೆ. ಈ ರೇಖೆ ಹಸ್ತದ ತುದಿಯಲ್ಲಿ, ಹೆಬ್ಬೆರಳಿನ ಮೇಲೆ ಪ್ರಾರಂಭವಾಗಿ ಕಮಾನಿನ ರೀತಿ ಮುಂಗೈ ಕಡೆಗೆ ಹಾದು ಹೋಗಿದೆ. ಈ ರೇಖೆ ವ್ಯಕ್ತಿಯ ಶಕ್ತಿ ಸಾಮರ್ಥ್ಯ, ಮಾನಸಿಕ ಸಧೃಢತೆ, ಶಾರೀರಿಕ ಆರೋಗ್ಯ ಮತ್ತು ಸಾಮಾನ್ಯ ಸುಸ್ಥಿತಿಯನ್ನು ಪ್ರತಿನಿಧಿಸುತ್ತದೆಂದು ನಂಬಲಾಗಿದೆ. ಜೀವನರೇಖೆ ಶಾರೀರಿಕ ಪೆಟ್ಟು ಮತ್ತು ಮುರಿತದಂತಹ ಆಘಾತಗಳೂ ಸೇರಿದಂತೆ ಪ್ರಮುಖ ಜೀವನ ಬದಲಾವಣೆಗಳನ್ನು ಪ್ರತಿಫಲಿಸುತ್ತದೆಂದು ಕೂಡಾ ನಂಬಲಾಗಿದೆ. ವ್ಯಕ್ತಿಯ ಜೀವನ ರೇಖೆಯ ಉದ್ದ ವ್ಯಕ್ತಿಯ ಜೀವಾವಧಿಯ ದೀರ್ಘತೆಯೊಂದಿಗೆ ತಳುಕು ಹಾಕಿಕೊಂಡಿದೆ ಎಂಬ ಜನಜನಿತ ನಂಬಿಕೆಯನ್ನು ಆಧುನಿಕ ಹಸ್ತ ಸಾಮುದ್ರಿಕರು ಸಾಮಾನ್ಯವಾಗಿ ನಂಬುವುದಿಲ್ಲ.ಹೆಚ್ಚುವರಿ ಪ್ರಮುಖ ರೇಖೆಗಳು ಅಥವಾ ಏರಿಳಿತಗಳು ಈ ಅಂಶಗಳನ್ನು ಒಳಗೊಂಡಿವೆ:
- simian crease , ಅಥವಾ ಹೃದಯ ಮುತ್ತು ಕಲೆ ರೇಖೆಗಳ ಬೆಸುಗೆ, ವ್ಯಕ್ತಿಯ ಭಾವನಾತ್ಮಕತೆಯಂತೆಯೇ ವೈಚಾರಿಕ ಸ್ವಭಾವಕ್ಕೆ ಸಂಬಂಧಿಸಿದಂತೆ ವಿಶೇಷ ಪ್ರಾಮುಖ್ಯತೆ ಪಡೆದಿದೆ, ಈ ಅಂಶಗಳನ್ನು ಈ ರೇಖೆಯಿಂದಲೇ ಅಧ್ಯಯನ ಮಾಡಬೇಕು. ತಲೆ ಮತ್ತು ಹೃದಯ ರೇಖೆಗಳು ಜೋಡಣೆಯಾದ ವಿಲಕ್ಷಣ ಕೈಗಳಾನ್ನು ಉಳಿದ ಕೈಗಳಿಗಿಂತ ಪ್ರತ್ಯೇಕವಾಗಿ ಗುರುತು ಮಾಡಲಾಗಿದೆಯೆಂದು ತಿಳಿಯಲಾಗಿದೆ.ಕೈರೊ ಪ್ರಕಾರ ವ್ಯಕ್ತಿಯೊಬ್ಬನಿಗೆ ಈ ರೇಖೆ ಉದ್ದೇಶದ ಅಗಾಧತೆ ಅಥವಾ ಏಕಮನಸ್ಥಿತಿಯನ್ನು ಕೊಡುತ್ತದೆ, ಇದರ ಸ್ವಭಾವವನ್ನು, ಹಸ್ತದಲ್ಲಿ ಅದು ಇರುವ ನಿಖರವಾದ ಸ್ಥಾನ ಮತ್ತು ಅದರಿಂದ ಸಾಮಾನ್ಯವಾಗಿ ಕವಲೊಡೆದ ರೇಖೆಗಳು ಹರಡಿಕೊಂಡಿರುವ ದಿಕ್ಕಿನ ಆಧಾರದಿಂದ ನಿರ್ಧರಿಸಲಾಗುತ್ತದೆ. ಯಾವುದೇ ಕವಲುಗಳಿಲ್ಲದೆ ಏಕವಾಗಿರುವ ಇಂತಹ ರೇಖೆಗಳಿರುವ ಕೈಗಳನ್ನು ಹೊಂದಿರುವ ವ್ಯಕ್ತಿಗಳು ಗಾಢವಾದ ಸ್ವಭಾವ ಹೊಂದಿದ್ದು ಅವರಿಗೆ ವಿಶೇಷ ಕಾಳಜಿಯ ಅಗತ್ಯವಿರುತ್ತದೆ. ರೇಖೆಯ ಮಾಮೂಲು ಸ್ಥಾನ ತೋರುಬೆರಳಿನಿಂದ ಪ್ರಾರಂಭವಾಗಿ, ಕಿರುಬೆರಳಿನ ಕೆಳಾಗಿನ ಹಸ್ತದ ಅಂಚಿನಲ್ಲಿ ಹೃದಯರೇಖೆ ಮಾಮೂಲಿನಂತೆ ಕೊನೆಯಾದರೆ ಅಂತಹ ವ್ಯಕ್ತಿಯ ಆಸಕ್ತಿಗಳು ಕಡಿಮೆ ಇದ್ದು, ಆತನ ಸ್ವಭಾವದ ಗಾಢತೆಯನ್ನು ಅದರಿಂದ ಒಡೆದಿರುವ ಕವಲುಗಳ ಆಧಾರದ ಮೇಲೆ ಮಾತ್ರ ನಿರ್ಧರಿಸಲಾಗುತ್ತದೆ.
ಬೆರಳುಗಳ ಕೆಳಾಗಿನ ಹಸ್ತದ ತಕ್ಷಣದ ಮೇಲುಭಾಗ ವ್ಯಕ್ತಿಯ ಔನ್ನತ್ಯತೆ ಅಥವಾ ಬೌದ್ಧಿಕ ಸ್ವಭಾವ ಮತ್ತು ಹಸ್ತದ ಕೆಳಭಾಗ ಈ ಸ್ವಭಾವದ ಪ್ರಾಪಂಚಿಕತೆಯನ್ನು ಪ್ರತಿನಿಧಿಸುತ್ತದೆಂದು ಪರಿಗಣಿಸಲಾಗಿದೆ. ತಲೆರೇಖೆಯ ಕೇಂದ್ರೀಯ ಸ್ಥಾನ ಅಥವಾ ಈ ಪ್ರಕರಣದಲ್ಲಿ ಹಸ್ತದ ಒಂದು ಅಡ್ಡಹಾಯ್ದ ಮಡಿಕೆ ಪ್ರಕಾರ ಹಸ್ತದ ಈ ಅರ್ಧಭಾಗ ದೊಡ್ಡದಿದ್ದರೆ ವ್ಯಕ್ತಿಯ ಸ್ವಭಾವದ ಈ ಮಗ್ಗುಲಿನಲ್ಲಿ ಮಹತ್ವದ ವಿಕಾಸವಾಗುತ್ತದೆಂಡು ಇದು ತೋರಿಸುತ್ತದೆ. ಈ ಸಾಮಾನ್ಯ ತತ್ವಗಳ ಆಧಾರದಲ್ಲಿ, ಈ ರೇಖೆ ತನ್ನ ಮಾಮೂಲು ಸ್ಥಾನದಿಂದ ಕೆಳಗಿದ್ದರೆ ಇದು ಆವ್ಯಕ್ತಿಯ ಪ್ರೌಢತೆಯ ಗಾಡ ಸ್ವಭಾವವನ್ನು ಮಾಮೂಲು ಸ್ಥಾನಕ್ಕಿಂತ ಮೇಲೆ ಇದ್ದರೆ ಅದು ಗಾಢವಾದ ಲೌಕಿಕತೆ ಮತ್ತು ಆಸಕ್ತಿಗಳ ಸ್ವಭಾವನ್ನು ಸೂಚಿಸುತ್ತದೆ. ಈ ರೇಖೆಯಿಂದ ಕವಲೊಡೆದು ಈ ಕವಲುಗಳು ಹರಿದುಕೊಂಡಿರುವ ದಿಕ್ಕಿನ ಮೇಲೆ ನಿರೂಪಿಸಲ್ಪಟ್ಟಿರುವ ಫಲಿತಾಂಶಗಳಾ ಸೂಕ್ತ ಬದಲಾವಣೆ, ಹಸ್ತದ ದಿಣ್ಣೆಗಳನ್ನು ಅವಲಂಬಿಸಿ ಈ ರೇಖೆಯ ಮೇಲೆ ಗಣಾನೀಯವಾಗಿ ಪ್ರಭಾವ ಬೀರುತ್ತದೆ. ಉದಾಹರಣೆಗೆ ಈ ರೇಖೆಯ ಒಂದು ಕವಲು ಹಸ್ತದ ಕೆಳಗಿರುವ ಮತ್ತು ಹೆಬ್ಬೆರಳಿನ ಎದುರಿಗಿರುವ ಚಂದ್ರ ದಿಣ್ಣೆಗೆ ಹರಡಿಕೊಂಡಿದ್ದರೆ ಅದು ಚಂಚಲ ಸ್ವಭಾವ ಮತ್ತು ಭಾವನಾತ್ಮಕ ಹದವನ್ನು ಸೂಚಿಸುತ್ತದೆ.
- ವಿಧಿ ರೇಖೆ ಮುಂಗೈ ಹತ್ತಿರದ ಹಸ್ತದ ತಳಭಾಗದಿಂದ, ಹಸ್ತದ ನಡುವೆ ಹಾದು ನಡುಬೆರಳಿನ ಬುಡದ ತನಕ ಹರಡಿಕೊಂಡಿರುತ್ತದೆ. ಈ ರೇಖೆ, ವ್ಯಕ್ತಿಯ ಅಧ್ಯಯನ, ವೃತ್ತಿ ಆಯ್ಕೆ, ಯಶಸ್ಸು ಮತ್ತು ಅಡೆತಡೆಗಳೂ ಸೇರಿದಂತೆ ಜೀವನ ಮಾರ್ಗದ ಸಾಂಗತ್ಯ ಹೊಂದಿದೆಯೆಂದು ನಂಬಲಾಗಿದೆ. ಕೆಲವು ಸಲ ಈ ರೇಖೆ ವ್ಯಕ್ತಿಯ ಹತೋಟಿಯಾಚೆಗಿನ ಸಂದರ್ಭಗಳನ್ನು ಪ್ರತಿಫಲಿಸುತ್ತದೆ ಅಥವಾ ಇದಕ್ಕೆ ಪರ್ಯಾಯವಾಗಿ ವ್ಯಕ್ತಿಯ ಆಯ್ಕೆಗಳು ಮತ್ತು ಅದರ ಪರಿಣಾಮಗಳನ್ನು ಪ್ರತಿಫಲಿಸುತ್ತದೆಂದು ತಿಳಿಯಲಾಗಿದೆ.
ಇತರೆ ಕಿರು ರೇಖೆಗಳು:
- ಸೂರ್ಯ ರೇಖೆ - ವಿಧಿ ರೇಖೆಗೆ ಸಮಾನಾಂತರವಾಗಿ, ಉಂಗುರ ಬೆರಳಿನ ಕೆಳಗೆ ಇರುವ ಸೂರ್ಯ ರೇಖೆ, ಖ್ಯಾತಿ ಅಥವಾ ಕುಪ್ರಸಿದ್ಧಿಯನ್ನು ಸೂಚಿಸುತ್ತದೆಂದು ನಂಬಲಾಗಿದೆ.
- ಶುಕ್ರನ ನಡುಕಟ್ಟು - ಕಿರುಬೆರಳು ಮತ್ತು ಉಂಗುರ ಬೆರಳಿನ ನಡುವೆ ಪ್ರಾರಂಭವಾಗಿ ಉಂಗುರ ಮತ್ತು ನಡುಬೆರಳಿನ ಉರುವಿನಲ್ಲಿ ಹಾದು ಮಧ್ಯ ಮತ್ತು ತೋರುಬೆರಳಿನ ನಡುವೆ ಕೊನೆಗೊಳ್ಳುತ್ತದೆ, ಇದು ಭಾವನಾತ್ಮಕ ಅರಿವು ಮತ್ತು ವಂಚನೆಯ ಚಾಕಚಕ್ಯತೆಗೆ ಸಂಬಂಧಿಸಿದ್ದೆಂದು ತಿಳಿಯಲಾಗಿದೆ.
- ಒಕ್ಕೂಟ ರೇಖೆಗಳು - ಹೃದಯ ರೇಖೆ ಮತ್ತು ಕಿರುಬೆರಳಿನ ಬುಡದಲ್ಲಿ, ಹಸ್ತದ ತಟ್ಟತ್ತಿರುವ ಅಂಚಿನಲ್ಲಿ ಚಿಕ್ಕ ಅಡ್ಡ ರೇಖೆಗಳಾಗಿದ್ದು ಕೆಲವು ಸಲ ಆಪ್ತ ಸಂಬಂಧಗಳು, ಆದರೆ ಯಾವಾಗಲೂ ರೊಮ್ಯಾಂಟಿಕ್ ಅಲ್ಲದ ಸಂಬಂಧಗಳನ್ನು ಸೂಚಿಸುತ್ತವೆಂದು ನಂಬಲಾಗಿದೆ.
- ಮರ್ಕ್ಯುರಿ ರೇಖೆ - ಇವು ಮುಂಗೈ ಹತ್ತಿರದ ಹಸ್ತದ ಕೆಳಗಿನಿಂದ ಪ್ರಾರಂಭವಾಗಿ ಹಸ್ತದ ಮೂಲಕ ಕಿರುಬೆರಳಿನ ಕಡೆಗೆ ಹಾದು ಹೋಗಿದ್ದು, ಮರುಕಳಿಸುವ ಆರೋಗ್ಯ ಸಮಸ್ಯೆಗಳು, ವ್ಯಾಪಾರದಲ್ಲಿ ಕುಶಾಗ್ರಮತಿ, ಅಥವಾ ಸಂವಹನ ಕೌಶಲ್ಯವನ್ನು ಸೂಚಿಸುವ ಸಾರಾಂಶವಿರುತ್ತವೆ.
- ಪಯಣ ರೇಖೆಗಳು - ಹಸ್ತದ ಇಳಿಜಾರು ಅಂಚಿನಲ್ಲಿ, ಮುಂಗೈ ಮತ್ತು ಹೃದಯರೇಖೆಯ ನಡುವೆ ಇರುವ ಅಡ್ಡರೇಖೆಗಳಾಗಿದ್ದು ವ್ಯಕ್ತಿ ಕೈಗೊಳ್ಳುವ ಪಯಣವನ್ನು ಸೂಚಿಸುತ್ತದೆಂದು ಹೇಳಲಾಗಿದೆ. ಈ ರೇಖೆ ಉದ್ದ್ಧವಾಗಿದ್ದಷ್ಟು ಆ ವ್ಯಕ್ತಿಗೆ ಆ ಪಯಣ ಮುಖ್ಯವಾಗಿರುತ್ತದೆ.
- ಇತರೆ ಗುರುತುಗಳು - ಪ್ರತಿ ಬೆರಳಿನ ಕೆಳಗಿರುವ ನಕ್ಷತ್ರಗಳು, ಕ್ರಾಸುಗಳು, ತ್ರಿಕೋನಗಳು,ಚೌಕಗಳು, ತ್ರಿಶೂಲಗಳು ಮತ್ತು ಉಂಗುರಗಳನ್ನು ಒಳಗೊಳ್ಳುತ್ತವೆ, ಅವುಗಳ ಸಂಭವನೀಯ ಪ್ರಭಾವ ಮತ್ತು ಅರ್ಥಗಳು ಹಸ್ತದ ಸ್ಥಳ ಮತ್ತು ಮಧ್ಯ ಪ್ರವೇಶಿಸುವ ರೇಖೆಗಳಿಂದ ಸಿಗುವ ಸ್ವಾತಂತ್ರ್ಯದ ಆಧಾರದ ಮೇಲೆ ಹೆಚ್ಚು ಕಡಿಮೆಯಾಗುತ್ತಿರುತ್ತದೆ.
- "ಅಪೋಲೊ ರೇಖೆ" - ಅಪೋಲೊ ರೇಖೆ ಎಂದರೆ ಅದೃಷ್ಟಶಾಲಿ ಜೀವನ, ಇದು ಮುಂಗೈನ ಚಂದ್ರದಿಣ್ಣೆಯಲ್ಲಿ ಪ್ರಾರಂಭವಾಗಿ ಅಪೊಲೊ ಬೆರಳಿನ ಕೆಳಗೆ ಕೊನೆಗೊಳ್ಳುತ್ತದೆ.
- "ಒಮಿನಸ್ ರೇಖೆ" - ಜೀವನ ರೇಖೆಯನ್ನು ದಾಟಿ 'x' ಆಕಾರವನ್ನು ರೂಪಿಸುತ್ತದೆ, ಇದು ತುಂಭಾ ಕೆಟ್ಟಾ ಚಹರೆ, ಇದು ಕೇಳುಗನಲ್ಲಿ ತುಂಭಾ ಚಿಂತೆಯುಂತು ಮಾಡುವುದರಿಂದ ಹಸ್ತ ಸಾಮುದ್ರಿಕರು ಈ ರೇಖೆಯ ಬಗ್ಗೆ ಹೇಳಲು ಹೋಗುವುದಿಲ್ಲ. ಒಮಿನಸ್ ರೇಖೆಯ ಸಾಮಾನ್ಯ ಸೂಚಕಗಳೆಂದರೆ ಇತರೆ ರೇಖೆಗಳ ಜೊತೆಯಾಗಿ ರೂಪುಗೊಳ್ಳುವ 'M' ಗುರುತು.
ವಿಜ್ಞಾನ ಮತ್ತು ವಿಮರ್ಶೆ
ಸಂದೇಹಿಗಳು ಹಸ್ತ ಸಾಮುದ್ರಿಕರನ್ನು ಕೋಲ್ಡ್ ರೀಡಿಂಗ್ ತಂತ್ರಗಳನ್ನು ಅಭ್ಯಾಸ ಮಾಡಿಕೊಂಡ ಮನೋರೋಗಿಗಳೆಂದು ಆರೋಪಿಸುತ್ತಾರೆ. ಕೋಲ್ಡ್ ರೀಡಿಂಗ್‌ನ ಅಭ್ಯಾಸವು ಹಸ್ತಸಾಮುದ್ರಿಕರನ್ನೊಳಗೊಂಡು ಎಲ್ಲ ವಿಧದ ಓದುಗರನ್ನು ಮಾನಸಿಕ ರೋಗಿಗಳನ್ನಾಗಿ ಮಾಡುತ್ತದೆ.[೨]ಹಸ್ತ ಸಾಮುದ್ರಿಕ ಶಾಸ್ತ್ರವನ್ನು ಗುಣಲಕ್ಷಣ ವಿಶ್ಲೇಷಣೆಯ ಒಂದು ಪದ್ಧತಿಯಾಗಿ ಅದರ ನಿಖರತೆಯನ್ನು ಪರಿಶೀಲಿಸುವಂತೆ, ವಿಸ್ತೃತವಾಗಿ ಒಪ್ಪಿಕೊಳ್ಳಲಾಗಿರುವ ಸಂಶೋಧನೆಗಳು ತುಂಬಾ ಕಡಿಮೆ, ಈವರೆಗೆ ವ್ಯಕ್ತಿಯ ಲಕ್ಷಣಗಳು ಮತ್ತು ಹಸ್ತದ ರೇಖೆಗಳ ನಡುವಿನ ಸಂಬಂಧವನ್ನು ಸ್ಥಾಪಿಸುವ ಬಗ್ಗೆ ಯಾವುದೇ ರೀತಿಯ ನಿರ್ಧಾರಾತ್ಮಕ ಸಾಕ್ಷಿಗಳನ್ನು ಒದಗಿಸಲಾಗಿಲ್ಲ. ಜೀವಿತಾವಧಿ ಅಥವಾ ವ್ಯಕ್ತಿತ್ವ ಮಾದರಿ ಕುರಿತಂತೆ ಹಸ್ತ ಸಾಮುದ್ರಿಕರ ಸಾಧನೆಯನ್ನು ಬೆಂಬಲಿಸುವಂತಹ ಯಾವುದೇ ನಿರ್ಧಾರಾತ್ಮಕ ಅಂಕಿಅಂಶಗಳಿ ಈ ತನಕ ಸಿಕ್ಕಿಲ್ಲ.
ಇವನ್ನೂ ನೋಡಿ
- ಅಲೆಕ್ಟೋರ್ಮ್ಯಾನ್ಸಿ
- ಡರ್ಮ್ಯಾಟೊಗ್ಲಿಫಿಕ್ಸ್
- ಡಿಜಿಟ್ ರೇಶಿಯೊ
- ಸಿಂಗಲ್ ಟ್ರ್ಯಾನ್ಸ್‌ವರ್ಸ್ ಪಾಮರ್ ಕ್ರೀಸ್
- ಕೈರೊನೊಮಿಯಾ - ಭಾವಾಭಿನಯಗಳನ್ನು ಉಪಯೋಗಿಸುವ ಒಂದು ಕಲೆ ಅಥವಾ ಸಾಂಪ್ರದಾಯಿಕ ಪೂಜಾಮಂದಿರಗಳಲ್ಲಿ ಉತ್ತಮ ಪರಿಣಾಮಗಳನ್ನು ಹೊಂದಲು ಉಪಯೋಗಿಸಬಹುದಾದಂತಹ ಕೈಯ ಚಲನೆಗಳು
- ಗಿಡೋನಿಯನ್ ಹ್ಯಾಂಡ್
- ಫ್ರೆನಾಲಜಿ
ಆಕರಗಳು
- ↑ Sara Sirolli - Palmistry diagram of hand 2008
- ↑ David Vernon in Skeptical — a Handbook of Pseudoscience and the Paranormal , editors: Donald Laycock, David Vernon, Colin Groves, Simon Brown, Imagecraft, Canberra, 1989, ISBN 0-7316-5794-2, p. 44.
ಬಾಹ್ಯ ಕೊಂಡಿಗಳು
- Cheiro. Palmistry for All at Project Gutenberg