ಹುಳುಹಿಡುಕನ ಗಿಡ
ಈ ಸಸ್ಯವು ಡ್ರೊಸೀರ ಬರ್ಮಾನೈ (Drosera burmannii Vahl.) ಎಂಬ ವೈಜ್ಞಾನಿಕ ಹೆಸರನ್ನು ಒಳಗೊಂಡಿದ್ದು, ಡ್ರೊಸೀರೇಸಿ ಎಂಬ ಸಸ್ಯ ಕುಟುಂಬಕ್ಕೆ ಸೇರಿದೆ. ಇದು ಏಕಋತು ಮೂಲಿಕೆಯಾಗಿದೆ.[೧]
ಈ ಜಾತಿಯ ಸಸ್ಯಗಳು ಉತ್ತರ ಮತ್ತು ಪೂರ್ವ ಆಸ್ಟ್ರೇಲಿಯಾ, ಭಾರತ, ಚೀನಾ, ಜಪಾನ್, ಮತ್ತು ಆಗ್ನೇಯ ಏಷ್ಯಾಗಳಲ್ಲಿ ಕಾಣಸಿಗುತ್ತವೆ.
ಇತರ ಹೆಸರುಗಳು
- ಕ್ರಿಮಿಭಕ್ಷ
- ಪುಷಕಾ
ಸಸ್ಯವರ್ಣನೆ
ಈ ಮೂಲಿಕೆಯು ಕಡಲಂಚಿನ ಸಸ್ಯಾವರಣದಲ್ಲಿ ಬೆಳೆಯುತ್ತದೆ. ಇದು ಭತ್ತದ ಗದ್ದೆಯಲ್ಲಿ ಕೊಯ್ಲಾದ ನಂತರ ಹುಲುಸಾಗಿ ಬೆಳೆಯುತ್ತದೆ. ಕಳ್ಳಿ ಕುರುಚಲು ಗಿಡಗಳನ್ನೊಳಗೊಂಡ ಸಸ್ಯಾವರಣದ ಸಮೀಪವಿರುವ ಒದ್ದೆ ನೆಲದಲ್ಲಿ, ಕೆರೆಯಂಗಳದಲ್ಲಿ ಮೂಡಿಬರುತ್ತದೆ.[೨] ಚಮಚದಾಕಾರದ ಎಲೆಗಳು ಕುಬ್ಜವಾದ ಕಾಂಡದ ಮೇಲಿದ್ದು, ನೆಲಕ್ಕೆ ಅಂಟಿಕೊಂಡಂತೆ ಹರಡಿರುತ್ತವೆ. ಕನಿಷ್ಟ ೧ ರಿಂದ ೩ ಸೆ. ಮೀ ವರೆಗೆ ಹರಡಿಕೊಂಡಿರುತ್ತದೆ. ಈ ಜಾತಿಯ ಸಸ್ಯಗಳು ಹಸಿರು, ಕಡು ಹಸಿರು, ಕೆಂಪು ಹಸಿರು ಮತ್ತು ಚಿನ್ನದಂತ ಹಸಿರು ಬಣ್ಣಗಳಲ್ಲಿ ಕಂಡುಬರುತ್ತದೆ.[೩]
ಉಪಯೋಗಗಳು
- ಗಿಡದ ಸಮೂಲವನ್ನು ಅರೆದು ಕಾಲಿನ ಅಣಿ (ಕಲ್ಲೂತ್ತು) ಇರುವ ಕಡೆ ಲೇಪಿಸಿದರೆ, ಕಲ್ಲೂತ್ತು ಗುಣವಾಗುತ್ತದೆ.
- ಸಮೂಲದ ರಸವನ್ನು ಮೊಸರಿನೊಡನೆ ಕುಡಿಸುವುದರಿಂದ ಮೂತ್ರ ತಡೆಯು ಗುಣವಾಗುತ್ತದೆ.
- ಗಿಡದ ಸ್ವರಸವು ಮಕ್ಕಳ ನಾಯಿ ಕೆಮ್ಮಿಗೆ ಔಷಧವಾಗಿದೆ.
- ಹಗೇವು ಅಥವಾ ಕಣಜದೊಳಗೆ ಹೋದವರು ಮೂರ್ಛೆ ಹೋದಾಗ ಗಿಡದ ಸಮೂಲವನ್ನು ಕುಟ್ಟಿ ಹಿಂಡಿ ರಸ ಮಾಡಿ ಕುಡಿಸಿದರೆ, ಬೇಗ ಎಚ್ಚರಗೊಳ್ಳುತ್ತಾರೆ.
ಉಲ್ಲೇಖಗಳು
- ↑ ಕರ್ನಾಟಕದ ಔಷಧೀಯ ಸಸ್ಯಗಳು, ಡಾ. ಮಾಗಡಿ ಆರ್. ಗುರುದೇವ, ದಿವ್ಯಚಂದ್ರ ಪ್ರಕಾಶನ, ಮೂರನೆಯ ಮುದ್ರಣ ೨೦೧೦, ಪುಟ ೩೪೭
- ↑ https://florabase.dpaw.wa.gov.au/browse/profile/3093
- ↑ http://www.carnivorousplants.org/howto/GrowingGuides/D_burmannii.php
Wikimedia Commons has media related to Drosera burmanni.