ಹೃದಯ ಶಸ್ತ್ರಚಿಕಿತ್ಸೆ
ಕಾರ್ಡಿಯೊ ವ್ಯಾಸ್ಕುಲರ್ ಶಸ್ತ್ರಚಿಕಿತ್ಸೆ , ಎಂಬುದು ಹೃದ್ರೋಗ ತಜ್ಞರು ಹೃದಯದ ಮೇಲೆ ಮತ್ತು/ಅಥವಾ ರಕ್ತನಾಳಗಳ ಮೇಲೆ ನೆರವೇರಿಸುವ ಶಸ್ತ್ರಚಿಕಿತ್ಸೆಯಾಗಿದೆ. ಸಾಮಾನ್ಯವಾಗಿ ಇದನ್ನು ರಕ್ತಕೊರತೆಯ ಹೃದ್ರೋಗ (ಉದಾಹರಣೆಗೆ, ಪರಿಧಮನಿಯಾ ಅಪಧಮನಿ ಬೈಪಾಸ್ ಶಸ್ತ್ರಚಿಕಿತ್ಸೆ), ಅಥವಾ ಹುಟ್ಟಿನಿಂದ ಬಂದ ಹೃದ್ರೋಗ ದಿಂದ ಉಂಟಾಗುವ ತೊಡಕುಗಳನ್ನು ಸರಿಪಡಿಸಲು ಮಾಡಲಾಗುತ್ತದೆ ಅಥವಾ ಎಂಡೋಕಾರ್ಡೈಟಿಸ್(ಹೃದಯದ ಒಳಪೊರೆಯ ಉರಿಯೂತ) ಒಳಗೊಂಡಂತೆ ಅನೇಕ ಕಾರಣಗಳಿಂದ ಉಂಟಾಗುವ ಕವಾಟ ಹೃದ್ರೋಗ ದ ತೊಡಕುಗಳನ್ನು ಸರಿಪಡಿಸಲು ಮಾಡಲಾಗುತ್ತದೆ. ಇದು ಹೃದಯ ಸ್ಥಳಾಂತರೀಕರಣವನ್ನು ಒಳಗೊಂಡಿದೆ.
ಇತಿಹಾಸ
ಪೆರಿಕಾರ್ಡಿಯಮ್(ಹೃದಯಾವರಣ) (ಹೃದಯದ ಪರಿಕೋಶ ಸುತ್ತವಿರುವ ಪೊರೆಯಚೀಲ) ನ ಮೇಲೆ ಮಾಡಲಾದ ಹಿಂದಿನ ಶಸ್ತ್ರಚಿಕಿತ್ಸೆಗಳನ್ನು 19 ನೇ ಶತಮಾನದಲ್ಲಿ ಮಾಡಲಾಗಿದ್ದು, ಇದನ್ನು ಫ್ರಾನ್ಸಿಸ್ಕೊ ರೊಮೆರೊ[೧] ಡೊಮಿನಿಕ್ಯೂ ಕೀನ್ ಲಾರ್ರೆ , ಹೆನ್ರಿ ಡಾಲ್ಟನ್, ಮತ್ತು ಡ್ಯಾನಿಯಲ್ ಹ್ಯಾಲೆ ವಿಲಿಯಮ್ಸ್ ಮಾಡಿದ್ದಾರೆ. ಮೊದಲ ಶಸ್ತ್ರಚಿಕಿತ್ಸೆಯನ್ನು 1895 ರ ಸೆಪ್ಟೆಂಬರ್ 4 ರಂದು ನಾರ್ವೆ ದೇಶದ ಶಸ್ತ್ರಚಿಕಿತ್ಸಕಾ ಅಲೆಕ್ಸ್ ಕ್ಯಾಪ್ಲೆನ್ , ಕ್ರಿಸ್ಟಿಯಾನಿಯಾದಲ್ಲಿರುವ ರಿಕ್ಸ್ ಹಾಸ್ಪಿಟಲೆಟ್ ಆಸ್ಪತ್ರೆಯಲ್ಲಿ ಮಾಡಿದರು. ಈ ನಗರವನ್ನು ಈಗ ಒಸ್ಲೊ ಎಂದು ಕರೆಯಲಾಗುತ್ತದೆ. ಅವರು 24 ವರ್ಷದ ಪುರುಷನಲ್ಲಿ ರಕ್ತಸ್ರಾವದ ಪರಿಧಮನಿಯನ್ನು ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಿ ಕಟ್ಟಿದರು. ಇವರ ಎಡ ಕಂಕುಳಿಗೆ ಚಾಕೂವಿನಿಂದ ತಿವಿಯಲಾಗಿತ್ತು. ಅಲ್ಲದೇ ಅವರು ಶಾಕ್(ರಕ್ತಪರಿಚಲನೆಯ ಶಾಕ್) ನಲ್ಲಿದ್ದರು. ಎಡ ತೊರಾಕ್ಟೊಮಿ(ಛೇದನ)ಯ ಮೂಲಕ ಪ್ರವೇಶಿಸಲಾಗಿತ್ತು. ರೋಗಿಯು ಎಚ್ಚರವಾಗಿದ್ದ ಮತ್ತು 24 ಗಂಟೆಗಳ ವರೆಗೂ ಆರೋಗ್ಯಕರವಾಗಿದ್ದ, ಆದರೆ ತಾಪ ಹೆಚ್ಚಾಗುವುದರೊಂದಿಗೆ ಅವನ ಸ್ಥಿತಿ ಹದಗೆಡುತ್ತಾ ಹೋಯಿತಲ್ಲದೇ, ಅಂತಿಮವಾಗಿ ಮೃತಪಟ್ಟ. ಶಸ್ತ್ರಚಿಕಿತ್ಸೆಯ ನಂತರದ 3 ನೇಯ ದಿನದಂದು ಆತನ ಸಾವಿಗೆ ಉರಿಯೂತ ಕಾರಣ ವೆಂದು ಶವ ಪರೀಕ್ಷೆ ಸಾಬೀತುಪಡಿಸಿತು .[೨][೩] ಯಾವುದೇ ತೊಂದರೆಗಳಿಲ್ಲದೇ ಮೊದಲ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ಜರ್ಮನಿಯ ಫ್ರಾಂಕ್ ಫರ್ಟ್ ನ ಡಾ. ಲುಡ್ ವಿಗ್ ರೆಹ್ನ್ ರವರು ನೆರವೇರಿಸಿದರು. ಇವರು 1896 ರ ಸೆಪ್ಟೆಂಬರ್ 7 ರಂದು ಬಲ ಕುಳಿಗೆ ಇರಿತದಿಂದ ಉಂಟಾಗಿದ್ದ ಗಾಯವನ್ನು ಸರಿಪಡಿಸಿದರು. [ಸೂಕ್ತ ಉಲ್ಲೇಖನ ಬೇಕು]
ರಕ್ತ ನಾಳಗಳಲ್ಲಿ (ಮಹಾಪಧಮನಿಯ ಪೀಡನ ವನ್ನು ಸರಿಪಡಿಸುವುದು, ಬ್ಲ್ಯಾಲಾಕ್-ಟಾಸಿಗ್ ಷಂಟ್ ನ ಸೃಷ್ಟಿ, ಪೇಟೆಂಟ್ ಡಕ್ಟಸ್ ಅರ್ಟರಿಯೊಸಸ್ ಅನ್ನು ಮುಚ್ಚುವುದು) ಶಸ್ತ್ರಚಿಕಿತ್ಸೆಯು, ಶತಮಾನದ ನಂತರ ಸಾಮಾನ್ಯವಾಯಿತು; ಹಾಗು ಹೃದ್ರೋಗ ಶಸ್ತ್ರಚಿಕಿತ್ಸೆಯ ಕ್ಷೇತ್ರಕ್ಕೆ ಸೇರಿಕೊಂಡಿತು. ಆದರೆ ಇದು ತಾಂತ್ರಿಕವಾಗಿ ಹೃದಯ ಶಸ್ತ್ರಚಿಕಿತ್ಸೆ ಎಂದು ಪರಿಗಣಿಸಲ್ಪಡಲಿಲ್ಲ.
ಹೃದಯ ವಿರೂಪತೆಗಳು – ಮುಂಚಿನ ಪ್ರಯತ್ನಗಳು
ಆಗ 1925 ರಲ್ಲಿ ಹೃದಯದ ಕವಾಟಗಳ ಮೇಲೆ ಮಾಡುವ ಶಸ್ತ್ರಚಿಕಿತ್ಸೆಗಳು ತಿಳಿದಿರಲಿಲ್ಲ. ಹೆನ್ರಿ ಸೌಟರ್ ಎಂಬುವವರು ಮಿಟ್ರಲ್ ಸ್ಟಿನೋಸಿಸ್ (ಹೃದಯದ ಎಡಭಾಗದಲ್ಲಿರುವ ಕವಾಟದ ಅತಿಸಂಕೋಚನ) ನೊಂದಿಗೆ ಯುವತಿಯ ಮೇಲೆ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದರು. ಅವರು ಹಾಳಾದ ಕಿರೀಟ ಕವಾಟವನ್ನು ಮುಟ್ಟಿ ಪರೀಕ್ಷಿಸಲು ಎಡ ಹೃತ್ಕರ್ಣದ ಉಪಾಂಗದಲ್ಲಿ ತೂತನ್ನು ಮಾಡಿ, ಈ ಕುಹರದೊಳಗೆ ಬೆರಳನ್ನು ಹಾಕಿದ್ದರು. ರೋಗಿಯು ಅನೇಕ ವರ್ಷಗಳ ವರೆಗೆ ಬದುಕಿದ್ದಳು[೪] ಆದರೆ ಸೌಟರ್ ನ ಸಹೋದ್ಯೋಗಿಗಳು ಆ ಸಮಯದಲ್ಲಿ ವಿಧಾನವು ಸರಿಯಾಗಿರಲಿಲ್ಲ, ಮತ್ತು ಅದನ್ನು ಅವರು ಮುಂದುವರೆಸಬಾರದೆಂದು ನಿರ್ಧರಿಸಿದರು.[೫][೬]
ಹೃದ್ರೋಗ ಶಸ್ತ್ರಚಿಕಿತ್ಸೆಯು ಮಹಾಯುದ್ಧIIರ ನಂತರ ಗಮನಾರ್ಹವಾಗಿ ಬದಲಾಯಿತು. ಬಳಿಕ 1948 ರಲ್ಲಿ ನಾಲ್ಕು ಜನ ಶಸ್ತ್ರ ಚಿಕಿತ್ಸಜ್ಞರು ಸಂಧಿವಾತದ ಜ್ವರದಿಂದಾಗಿ ಉಂಟಾಗಿದ್ದ ಕಿರೀಟ ಕವಾಟದ ಸಂಕೋಚನದ ಮೇಲೆ ಮಾಡಲಾದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದರು. ಚಾರ್ಲೊಟ್ ನ ಹೊರೇಸ್ ಸ್ಮಿತೀ (1914–1948) ಶಸ್ತ್ರಚಿಕಿತ್ಸೆಯನ್ನು ಪುನಃ ನೆರವೇರಿಸಿದರು. ಏಕೆಂದರೆ ಪೀಟರ್ ಬೆಂಟ್ ಬ್ರಿಗ್ ಹ್ಯಾಮ್ ಆಸ್ಪತ್ರೆಯ ಡಾಕ್ಟರ್ ಡ್ವೈಟ್ ಹ್ಯಾರ್ಕೆನ್ , ಕಿರೀಟ ಕವಾಟದ ಭಾಗವನ್ನು ತೆಗೆದುಹಾಕಲು ಛೇದಿಸುವ ಸಲಕರಣೆಯನ್ನು ಬಳಸಿದ್ದರು. ಫಿಲಾಡೆಲ್ಫಿಯಾ ದ ಹ್ಯಾನೆಮನ್ ಆಸ್ಪತ್ರೆಯಲ್ಲಿ l ಚಾರ್ಲ್ಸ್ ಬ್ಯೇಲೆ (1910–1993),, ಬೂಸ್ಟನ್ ನಲ್ಲಿ ಡ್ವೈಟ್ ಹ್ಯಾರ್ಕೆನ್ ಮತ್ತು ಗೈಸ್ ಆಸ್ಪತ್ರೆಯಲ್ಲಿ ರೂಸೆಲ್ ಬ್ರಾಕ್ ಎಲ್ಲರೂ ಸೌಟರ್ ರ ವಿಧಾನವನ್ನು ಅನುಸರಿಸಿದರು. ಇವರೆಲ್ಲರೂ ಕೆಲವು ತಿಂಗಳುಗಳೊಳಗೆ ಪರಸ್ಪರ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದರು. ಈ ಬಾರಿ ಸೌಟರ್ ರ ವಿಧಾನದಲ್ಲಿ ಮಾರ್ಪಾಡುಗಳಿದ್ದರೂ ಸಹ ಅದನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಲಾಯಿತು.[೫][೬]
ನಂತರ 1947 ರಲ್ಲಿ ಮಿಡಲ್ ಸೆಕ್ಸ್ ಆಸ್ಪತ್ರೆಯ ಥಾಮಸ್ ಹೊಲ್ಮ್ಸ್ ಸೆಲಾರ್ (1902–1987) ಶ್ವಾಸಕೋಶದ ಅತಿ ಸಂಕೋಚನದೊಂದಿಗೆ ಫ್ಯಾಲೊಟ್ಸ್ ಟೆಟ್ರಾಲಜಿ ರೋಗಿಯ ಮೇಲೆ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದರು. ಅಲ್ಲದೇ ಅತಿ ಸಂಕೋಚನಗೊಂಡ ಶ್ವಾಸಕೋಶ ಕವಾಟವನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಹೀಗೆ 1948 ರಲ್ಲಿ, ರೂಸೆಲ್ ಬ್ರೊಕ್, ಬಹುಶಃ ಸೆಲಾರ್ ರ ಶಸ್ತ್ರಚಿಕಿತ್ಸೆಯ ಬಗ್ಗೆ ತಿಳಿದಿರದೇ , ಶ್ವಾಸಕೋಶ ಅತಿ ಸಂಕೋಚನದ ಮೂರು ಪ್ರಸಂಗಗಳಲ್ಲಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ವಿಸ್ತಾರಕವನ್ನು ಬಳಸಿದರು. ಅನಂತರ ಅವರು 1948 ರಲ್ಲಿ ಫ್ಯಾಲೊಟ್ಸ್ ಟೆಟ್ರಾಲಜಿಗೆ ಹೆಚ್ಚಾಗಿ ಸಂಬಂಧಿಸಿದ ಆಲಿಕೆಯ ಆಕಾರದ ಸ್ನಾಯು ಸಂಕೋಚನವನ್ನು ಛೇದಿಸುವ ಸಲಕರಣೆಯನ್ನು ವಿನ್ಯಾಸಗೊಳಿಸಿದರು. ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ಪರಿಚಯಿಸುವ ವರೆಗೂ ಈ ರೀತಿಯ ಅನೇಕ ಸಾವಿರಾರು “ಕುರುಡು” ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿತ್ತು. ಇದರಲ್ಲಿ ಕವಾಟಗಳ ಸಂಭವನೀಯತೆ ಮೇಲೆ ನೇರವಾಗಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲಾಗುತ್ತದೆ.[೫]
ತೆರೆದ ಹೃದಯ ಶಸ್ತ್ರಚಿಕಿತ್ಸೆ
ಇದು ರೋಗಿಯ ಹೃದಯವನ್ನು ಛೇಧಿಸಿ, ಹೃದಯದ ಆಂತರಿಕ ರಚನೆಗಳ ಮೇಲೆ ಮಾಡಲಾಗುವ ಶಸ್ತ್ರಚಿಕಿತ್ಸೆಯಾಗಿದೆ.
ಇದನ್ನು ಟೊರೊಂಟೊ ವಿಶ್ವವಿದ್ಯಾಯಲದ ಡಾ. ವಿಲ್ ಫ್ರೆಡ್ ಜಿ. ಬಿಗೆಲೊ ರವರು ಕಂಡು ಹಿಡಿದರು. ಇವರು ಅಂತಃಹೃದಯ ರೋಗಲಕ್ಷಣಗಳನ್ನು ರಕ್ತರಹಿತ ಮತ್ತು ಚಲನರಹಿತ ಪರಿಸರದಲ್ಲಿ ಮಾಡುವುದು ಉತ್ತಮ, ಎಂದು ತಿಳಿಸಿದರು. ಹೃದಯದ ಚಲನೆಯನ್ನು ನಿಲ್ಲಿಸಿ ರಕ್ತವನ್ನು ಬರಿದು ಮಾಡಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸುವುದು ಉತ್ತಮ ಎಂಬುದು ಇದರ ಅರ್ಥವಾಗಿದೆ. ಸಹಜಾತ ಹೃದ್ರೋಗದ ಮೊದಲ ಯಶಸ್ವಿ ಅಂತಃಹೃದಯ ಶಸ್ತ್ರಚಿಕಿತ್ಸೆಯನ್ನು , 1952 ರ ಸೆಪ್ಟೆಂಬರ್ 2 ರಂದು ಮಿನ್ನೆಸೊಟಾ ವಿಶ್ವವಿದ್ಯಾನಿಲಯದಲ್ಲಿ ಸಿ. ವ್ಯಾಲ್ಟನ್ ಲಿಲೆಹೈ ಮತ್ತು ಡಾ. ಎಫ್. ಜಾನ್ ಲೇವಿಸ್ , ಲಘೂಷ್ಣತೆಯನ್ನು ಬಳಸಿ ನೆರವೇರಿಸಿದರು. ಅದರ ಮುಂದಿನ ವರ್ಷ, ಸೋವಿಯೆಟ್ ಒಕ್ಕೂಟದ ಅಲೆಕ್ಸಾಂಡರ್ ಅಲೆಕ್ಸಾಂಡ್ರೊವಿಚ್ ವಿಶ್ ನೆವ್ಸ್ಕಿ ಎಂಬ ಶಸ್ತ್ರಚಿಕಿತ್ಸಜ್ಞ ಸ್ಥಳೀಯ ಅರಿವಳಿಕದಡಿಯಲ್ಲಿ ಮೊದಲ ಹೃದ್ರೋಗ ಶಸ್ತ್ರಚಿಕಿತ್ಸೆ ಮಾಡಿದರು.
ಶಸ್ತ್ರಚಿಕಿತ್ಸಜ್ಞರು ಲಘೊಷ್ಣತೆಯ ಪರಿಮಿತಿಗಳನ್ನು ಅರಿತುಕೊಂಡರು– ಸಂಕೀರ್ಣವಾದ ಅಂತಃಹೃದ್ರೋಗ ಶಸ್ತ್ರಚಿಕಿತ್ಸೆ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ, ಮತ್ತು ರೋಗಿಯ ದೇಹದಲ್ಲಿ(ಮತ್ತು ವಿಶೇಷವಾಗಿ ಮೆದುಳು) ರಕ್ತದ ಸಂಚಲನವಾಗುವ ಅಗತ್ಯವಿರುತ್ತದೆ; ಅಲ್ಲದೇ ರೋಗಿಗೆ ಕೃತಕ ವಿಧಾನದಿಂದ ಒದಗಿಸಲಾದ ಹೃದಯ ಮತ್ತು ಶ್ವಾಸಕೋಶದ ಕಾರ್ಯದ ಅಗತ್ಯವಿರುತ್ತದೆ. ಈ ಕಾರಣದಿಂದಾಗಿ ಇದನ್ನು ಕಾರ್ಡಿಯೋ ಪಲ್ಮನರಿ ಬೈಪಾಸ್ (ಹೃದಯಶ್ವಾಸಕೋಶ ಬೈಪಾಸ್ )ಶಸ್ತ್ರಚಿಕಿತ್ಸೆ ಎಂದು ಕರೆಯಲಾಗುತ್ತದೆ. ಫಿಲಾಡೆಲ್ಫಿಯಾದ ಜೆಫರರ್ಸನ್ ವೈದ್ಯಕೀಯ ಶಾಲೆಯಲ್ಲಿ ಡಾ. ಜಾನ್ ಹೆಶ್ಯಾಮ್ ಗಿಬ್ಬನ್ 1953 ರಲ್ಲಿ ಹೀಗೆಂದು ವರದಿ ಮಾಡಿದ್ದಾರೆ: ಆಕ್ಸಿಜನೀಕಾರಕದ ಮೂಲಕ, ಶಾರೀರಿಕ ರಕ್ತಪರಿಚಲನೆಯ ಮೊದಲ ಯಶಸ್ವಿ ಬಳಕೆಯನ್ನು ವರದಿ ಮಾಡಿದ್ದಾರೆ. ಆದರೆ ಸತತ ವಿಫಲತೆಗಳಿಂದಾಗಿ ಅವರು ಈ ವಿಧಾನವನ್ನು ಕೈಬಿಟ್ಟರು. ಅದಲ್ಲದೇ 1954 ರಲ್ಲಿ ಡಾ.ಲಿಲ್ಲೆಹೈ, ನಿಯಂತ್ರಿಸಲಾದ ಬೆರಕೆ-ರಕ್ತಪರಿಚನೆಯ ವಿಧಾನದೊಂದಿಗೆ ಅನೇಕ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನೆರವೇರಿಸಿದರು. ಈ ವಿಧಾನದಲ್ಲಿ ರೋಗಿಯ ತಂದೆ ಅಥವಾ ತಾಯಿಯನ್ನು ಹೃದಯ-ಶ್ವಾಸಕೋಶದ ಯಂತ್ರ (ಪಂಪ್) ದಂತೆ ಬಳಸಲಾಗುತ್ತಿತ್ತು. ಮಿನ್ನೆಸೊಟಾದ ರೊಚೆಸ್ಟರ್ ನ ಮಾಯೊ ಕ್ಲಿನಿಕ್ ನಲ್ಲಿ ಡಾ. ಜಾನ್ ಡ್ಲ್ಯೂ. ಕಿರ್ಕ್ಲಿನ್ , ಗಿಬ್ಬನ್ ರೀತಿಯ ಪಂಪ್-ಆಕ್ಸಿಜನೀಕಾರಕವನ್ನು ಬಳಸಲು ಪ್ರಾರಂಭಿಸಿದರಲ್ಲದೇ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾದವು. ಇದನ್ನು ಶೀಘ್ರದಲ್ಲಿ ಪ್ರಪಂಚದ ವಿವಿಧ ಭಾಗಗಳಲ್ಲಿರುವ ಶಸ್ತ್ರಚಿಕಿತ್ಸಜ್ಞರು ಅನುಸರಿಸಿದರು.
ಡಾ. ನಾಜಿ ಜೂದಿ ನಾಲ್ಕು ವರ್ಷಗಳ ವರೆಗೆ ಮುಂಚಿನ ಪಂಪ್- ಆಕ್ಸಿಜನೀಕಾರಕವನ್ನು ನಿರ್ಮಿಸಿದ ಡಾ. ಕ್ಲಾರೆನ್ಸ್ ಡೇನಿಸ್, ಕಾರ್ಲ್ ಕಾರ್ಲ್ಸನ್, ಮತ್ತು ಚಾರ್ಲ್ಸ್ ಫ್ರೈಸ್ ರ ಕೈಕೆಳಗೆ ಕಾರ್ಯನಿರ್ವಹಿಸಿದರು. ಜುಡಿ ಮತ್ತು ಫ್ರೈಸ, ಡೇನ್ನಿಸ್ ರ ಮುಂಚಿನ ಮಾದರಿಯ ಅನೇಕ ವಿನ್ಯಾಸಗಳು ಮತ್ತು ಪುನರ್ವಿನ್ಯಾಸಗಳ ಮೇಲೆ 1952 ರಿಂದ 1956ರ ವರೆಗೆ ಬ್ರೂಕ್ಲಿನ್ ಸೆಂಟರ್ ನಲ್ಲಿ ಕಾರ್ಯನಿರ್ವಹಿಸಿದರು. ಜುಡಿ ಅನಂತರ ಮಿನ್ನೆಸೊಟಾ ವಿಶ್ವವಿದ್ಯಾಲಯದಲ್ಲಿ ಡಾ. ಸಿ. ವ್ಯಾಲ್ಟನ್ ಲಿಲ್ಲೆಹೈರೊಂದಿಗೆ ಕಾರ್ಯನಿರ್ವಹಿಸಲು ತೆರಳಿದರು. ಲಿಲ್ಲೆಹೈ ಬೆರಕೆ-ರಕ್ತಪರಿಚಲನೆಯ ಸಾಧನದ ಅವರ ಆವೃತ್ತಿಯನ್ನು ವಿನ್ಯಾಸಗೊಳಿಸಿದರು. ಇದನ್ನು ಡೆವಾಲ್-ಲಿಲ್ ಹೈ ಹೃದಯ-ಶ್ವಾಸಕೋಶ ಸಾಧನವೆಂದು ಕರೆಯಲಾಯಿತು. ಜುಡಿ, ಹೃದಯದ ಮೇಲೆ ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ನಡೆಸುವಾಗ ಗಾಳಿಗುಳ್ಳೆಗಳ ಸಮಸ್ಯೆಯನ್ನು ಪರಿಹರಿಸಲು ವ್ಯಾಪನ ಮತ್ತು ರಕ್ತ ಪರಿಚಲನೆಯ ಮೇಲೆ ಕಾರ್ಯುನಿರ್ವಹಿಸಿದರು. ಇದರಿಂದ ಶಸ್ತ್ರಚಿಕಿತ್ಸೆಯನ್ನು ಮಾಡುವಾಗ ಹೃದಯದ ಚಲನೆ ನಿಲ್ಲುತ್ತದೆ. ಜುಡಿ 1957 ರಲ್ಲಿ OK ಯ ಒಕ್ಲಹೋಮಾ ನಗರಕ್ಕೆ ತೆರಳಿದರು; ಮತ್ತು ಒಕ್ಲಹೋಮಾ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದರು. ಹೃದಯ ತಜ್ಞರಾದ ಜುಡಿ , ಶ್ವಾಸಕೋಶ ತಜ್ಞ ಡಾ. ಅಲೆನ್ ಗ್ರೀರ್ ಮತ್ತು ಡಾ. ಜಾನ್ ಕ್ಯಾರಿಯವರೊಂದಿಗೆ ಸೇರಿಕೊಂಡು ಮೂರು ಜನರ ತೆರೆದ ಹೃದಯ ಶಸ್ತ್ರಚಿಕಿತ್ಸಾ ತಂಡವನ್ನು ರಚಿಸಿದರು. ಡಾ. ಜುಡಿಯವರ ಹೃದಯ-ಶ್ವಾಸಕೋಶ ಸಾಧನದ ಆಗಮನದೊಂದಿಗೆ ಕನಿಷ್ಠ ಮೊತ್ತಕ್ಕೆ ರಕ್ತದ ಇಳಿಕೆಯ ಅಗತ್ಯ ಕಡಿಮೆಯಾಯಿತು. ಅಲ್ಲದೇ ಈ ಸಾಧನದ ಬೆಲೆಯು $500.00 ಗಿಳಿಯಿತು ಹಾಗು ಪೂರ್ವಸಿದ್ಧತೆಯ ಕಾಲವು ಕೂಡ ಎರಡು ಗಂಟೆಗಳಿಂದ 20 ನಿಮಿಷಕ್ಕೆ ಇಳಿಯಿತು. ಈ ಸಾಧನವನ್ನು ಗಾತ್ರದಲ್ಲಿ ಬದಲಾಯಿಸಲಾಗಿದ್ದು, ಇದು ಡೆವಾಲ್-ಲಿಲ್ಲೆಹೈ ರವರ ಹೃದಯ-ಶ್ವಾಸಕೋಶ ಸಾಧನಕ್ಕಿಂತ ಚಿಕ್ಕದಾಗಿದ್ದು, ಇತರ ಮಾರ್ಪಾಡುಗಳನ್ನು ಒಳಗೊಂಡಿದೆ. ಡಾ. ಜುಡಿ 1960 ರ ಫೆಬ್ರವರಿ 25 ರಂದು OK ಯ ಒಕ್ಲಾಹೋಮ ನಗರದ ಮರ್ಸಿ ಆಸ್ಪತ್ರೆಯಲ್ಲಿ ಮೊದಲ ಟೊಟಲ್ ಇಂಟೆನ್ಷನಲ್ ಹೆಮಾಡಿಲ್ಯೂಷನ್ ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನು 7 ವರ್ಷದ ಟೆರೆ ಗೆನೆ ನಿಕ್ಸ್ ಅ ಮೇಲೆ ಮಾಡಿದರು. ಶಸ್ತ್ರಚಿಕಿತ್ಸೆಯು ಯಶಸ್ವಿಯಾಯಿತು; ಆದರೂ ನಿಕ್ಸ್ ಮೂರು ವರ್ಷಗಳ ನಂತರ 1963ರಲ್ಲಿ ಮೃತಪಟ್ಟರು.[೭] ಆಗ 1961 ರ ಮಾರ್ಚ್ ನಲ್ಲಿ, ಜುಡಿ, ಕ್ಯಾರೆ ಮತ್ತು ಗ್ರೀರ್ 3½ ವರ್ಷದ ಮಗುವಿನ ಮೇಲೆ, ಟೊಟಲ್ ಇಂಟೆನ್ಷನಲ್ ಹೆಮಾಡಿಲ್ಯೂಷನ್ ಸಾಧನವನ್ನು ಬಳಸುವ ಮೂಲಕ ತೆರೆದ ಹೃದಯ ಶಸ್ತ್ರಚಿಕಿತ್ಸೆ ಯನ್ನು ಮಾಡಿದರಲ್ಲದೇ, ಅದು ಯಶಸ್ವಿಯಾಯಿತು. ಆ ರೋಗಿ ಇನ್ನೂ ಬದುಕಿದ್ದಾರೆ.[೮]
1985 ರಲ್ಲಿ ಡಾ. ಜುಡಿ ನ್ಯಾನ್ಸಿ ರಾಜರ್ಸ್ ಎಂಬುವವರ ಮೇಲೆ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಒಕ್ಲಾಹೋಮದ ಮೊದಲ ಯಶಸ್ವಿ ಹೃದಯ ಕಸಿ ಮಾಡಿದರು. ಕಸಿಯು ಯಶಸ್ವಿಯಾಯಿತು, ಆದರೆ ಕ್ಯಾನ್ಸರ್ ನಿಂದ ನರುಳುತ್ತಿದ್ದ ರಾಜರ್ಸ್ ಶಸ್ತ್ರಚಿಕಿತ್ಸೆಯನ್ನು ಮಾಡಿದ 54 ದಿನಗಳ ನಂತರ ಸೋಂಕಿನಿಂದಾಗಿ ಮೃತಪಟ್ಟರು.[೯]
ಹೃದಯ ಬಡಿತದೊಂದಿಗೆ ಮಾಡಲಾಗುವ ಆಧುನಿಕ ಶಸ್ತ್ರಚಿಕಿತ್ಸೆ
1990ರ ಹೊತ್ತಿಗೆ ಶಸ್ತ್ರಚಿಕಿತ್ಸಾ ತಜ್ಞರು "ಪಂಪ್ ರಹಿತ ಬೈಪಾಸ್ ಶಸ್ತ್ರಚಿಕಿತ್ಸೆ"ಯನ್ನು ಮಾಡಲು ಪ್ರಾರಂಭಿಸಿದರು – ಪೂರ್ವ ಸೂಚಿತ ಹೃದಯ ಶ್ವಾಸಕೋಶ ಬೈಪಾಸ್ ಇಲ್ಲದೆಯೇ ಮಾಡಲಾಗುವ ಪರಿಧಮನಿ ಬೈಪಾಸ್ ಶಸ್ತ್ರಚಿಕಿತ್ಸೆ. ಈ ಶಸ್ತ್ರಚಿಕಿತ್ಸೆಯಲ್ಲಿ ಆಪರೇ ಷನ್ ಅನ್ನು ಮಾಡುವಾಗ ಹೃದಯ ಬಡಿತುಕೊಳ್ಳುತ್ತಿರುತ್ತದೆ. ಆದರೆ ಕಾರ್ಯ ನಿರ್ವಹಿಸಲು ಬೇಕಿರುವ ಬಹುಪಾಲು ಕದಲದ ಪ್ರದೇಶವನ್ನು ಒದಗಿಸಲು ಅದನ್ನು ಸ್ಥಿರಗೊಳಿಸಲಾಗುತ್ತದೆ. ಕೆಲವು ಸಂಶೋಧಕರು ಇದರಿಂದಾಗಿ ಶಸ್ತ್ರಚಿಕಿತ್ಸೆಯ ನಂತರ ಕೆಲವೊಂದು ತೊಂದರೆಗಳು ಬರಬಹುದೆಂದು ನಂಬುತ್ತಾರೆ (ಪೋಸ್ಟ್ ಪರ್ಫೂಷನ್ ಸಿಂಡ್ರೋಮ್ ನಂತಹ) ಮತ್ತು ಒಟ್ಟು ಉತ್ತಮ ಫಲಿತಾಂಶಗಳು ( 2007ರ ಹೊತ್ತಿಗೆ ಅಧ್ಯಯನದ ಫಲಿತಾಂಶಗಳು ವಿವಾದಾತ್ಮಕವಾದವು, ಶಸ್ತ್ರಚಿಕಿತ್ಸಜ್ಞರ ಆದ್ಯತೆ ಮತ್ತು ಆಸ್ಪತ್ರೆಯ ಫಲಿತಾಂಶಗಳು ಇನ್ನೂ ಪ್ರಮುಖ ಪಾತ್ರವಹಿಸುತ್ತವೆ).
ಕನಿಷ್ಠ ಛೇದನ ಶಸ್ತ್ರಚಿಕಿತ್ಸೆ
ರೊಬಾಟಿಕ್ ಶಸ್ತ್ರಚಿಕಿತ್ಸೆಯು ಹೊಸ ರೀತಿಯ ಹೃದಯ ಶಸ್ತ್ರಚಿಕಿತ್ಸೆಯಾಗಿದ್ದು, ಅತ್ಯಂತ ಜನಪ್ರಿಯವಾಗಿದೆ. ಇದರಲ್ಲಿ ಯಂತ್ರವು ಹೃದಯ ರೋಗದ ತಜ್ಞರಿಂದ ನಿಯಂತ್ರಿಸಲ್ಪಡುವ ಮೂಲಕ ಶಸ್ತ್ರಚಿಕಿತ್ಸೆಯನ್ನು ನೆರವೇರಿಸುತ್ತದೆ. ರೋಗಿಗೆ ಮಾಡುವ ಛೇದನದ ಗಾತ್ರವು ಇದರ ಪ್ರಮುಖ ಪ್ರಯೋಜನವಾಗಿದೆ. ಶಸ್ತ್ರಚಿಕಿತ್ಸಾ ತಜ್ಞರ ಕೈಯನ್ನು ಒಳಹಾಕಲು ಬೇಕಾಗುವಷ್ಟಾದರು ದೊಡ್ಡದಾಗಿ ಛೇದನವನ್ನು ಮಾಡಲಾಗುತ್ತದೆ. ಆದರೆ ರೊಬಾಟ್ ಮಾಡುವ ಶಸ್ತ್ರಚಿಕಿತ್ಸೆಯಲ್ಲಿ, ಇದು 3 ಚಿಕ್ಕ ರಂಧ್ರಗಳಿಗಿಂತ ದೊಡ್ಡದಾಗಿರುವುದಿಲ್ಲ. ಏಕೆಂದರೆ ರೊಬಾಟ್ ಅದರೊಳಗೆ ಹೋಗುವಂತಹ ಅತ್ಯಂತ ಚಿಕ್ಕ ಕೈಗಳನ್ನು ಹೊಂದಿರುತ್ತದೆ.
ಶಿಶುವೈದ್ಯಕ್ಕೆ ಸಂಬಂಧಿಸಿದ ಹೃದಯನಾಳದ ಶಸ್ತ್ರಚಿಕಿತ್ಸೆ
ಶಿಶುವೈದ್ಯಕ್ಕೆ ಸಂಬಂಧಿಸಿದ ಹೃದಯನಾಳದ ಶಸ್ತ್ರಚಿಕಿತ್ಸೆಯು, ಮಕ್ಕಳ ಹೃದಯದ ಶಸ್ತ್ರಚಿಕಿತ್ಸೆಯಾಗಿದೆ. ರೂಸೆಲ್ ಎಲ್. ನೆಲ್ಸನ್ 1956 ರ ಮಾರ್ಚ್ ನಲ್ಲಿ ಸಾಲ್ಟ್ ಲೇಕ್ ಸಾರ್ವಜನಿಕರ ಆಸ್ಪತ್ರೆ ಯಲ್ಲಿ ಮೊದಲ ಯಶಸ್ವಿ ಶಿಶುವೈದ್ಯಕ್ಕೆ ಸಂಬಂಧಿಸಿದ ಹೃದ್ರೋಗ ಶಸ್ತ್ರಚಿಕಿತ್ಸೆಯನ್ನು ಮಾಡಿದರು. ನಾಲ್ಕುವರ್ಷದ ಹುಡುಗಿಯಲ್ಲಿದ್ದ ಟೆಟ್ರಾಲಜಿ ಆಫ್ ಫ್ಯಾಲೊಟ್ ಅನ್ನು ಸಂಪೂರ್ಣವಾಗಿ ಸರಿಮಾಡಿದರು.[೧೦]
ಅಪಾಯಗಳು
ಹೃದ್ರೋಗ ಶಸ್ತ್ರಚಿಕಿತ್ಸೆ ಮತ್ತು ಹೃದಯ ಶ್ವಾಸಕೋಶ ಬೈಪಾಸ್ ತಂತ್ರಗಳ ಬೆಳವಣಿಗೆಯು, ಈ ಶಸ್ತ್ರಚಿಕಿತ್ಸೆಗಳಿಂದಾಗುವ ಮರಣ ಪ್ರಮಾಣವನ್ನು ಕಡಿಮೆಮಾಡಿತು. ಉದಾಹರಣೆಗೆ, ಸದ್ಯದ ಶಸ್ತ್ರಚಿಕಿತ್ಸೆಗೆ ಒಳಪಡುವ ಸಹಜಾತ ಹೃದ್ರೋಗಗಳನ್ನು ಪ್ರಸ್ತುತದಲ್ಲಿ 4–6 ಪ್ರತಿಶತ ಮರಣ ಪ್ರಮಾಣವನ್ನು ಹೊಂದಿವೆ ಎಂದು ಅಂದಾಜುಮಾಡಲಾಗಿದೆ.[೧೧][೧೨]
ನರ ಹಾನಿಯ ಘಟನೆಯು ಹೃದ್ರೋಗ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಪ್ರಮುಖ ತೊಂದರೆಯಾಗಿದೆ. ಹೃದ್ರೋಗ ಶಸ್ತ್ರಚಿಕಿತ್ಸೆಗೆ ಒಳಪಡುವ 2–3 ಪ್ರತಿಶತ ಎಲ್ಲಾ ಜನರಲ್ಲು ಪಾರ್ಶ್ವವಾಯು ಹೊಡೆಯುತ್ತದೆ. ಅಲ್ಲದೇ ಪಾರ್ಶ್ಚವಾಯು ಹೊಡೆಯುವ ಸಾಧ್ಯತೆಯಿರುವ ರೋಗಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. [ಸೂಕ್ತ ಉಲ್ಲೇಖನ ಬೇಕು] ಹೃದಯ ಶ್ವಾಸಕೋಶ ಬೈಪಾಸ್ ಶಸ್ತ್ರಚಿಕಿತ್ಸೆಯಿಂದ ಉಂಟಾಗಬಹುದಾದ ನ್ಯೂರೊಕಾಗ್ನಿಟಿವ್ ಡಿಫಿಸಿಟ್ಸ್ ನ ಸೂಕ್ಷ್ಮ ಸಮೂಹವನ್ನು ಪೋಸ್ಟ್ ಪರ್ಫೂಷನ್ ಸಿಂಡ್ರೋಮ್ ( ಕೆಲವೊಮ್ಮೆ 'ಪಂಪ್ ಹೆಡ್' ಎಂದು ಕರೆಯಲಾಗುತ್ತದೆ) ಎಂದು ಕರೆಯಲಾಗುತ್ತದೆ. ಪೋಸ್ಟ್ ಪರ್ಫೂಷನ್ ಸಿಂಡ್ರೋಮ್ ನ ಲಕ್ಷಣಗಳು ಶಾಶ್ವತವಾಗಿರುತ್ತವೆ, ಎಂದೆನಿಸುತ್ತದೆ,[೧೩] ಆದರೆ ಅಶಾಶ್ವತ ನರದೌರ್ಬಲತೆ ಯೊಂದಿಗೆ ಅವು ಸ್ವಲ್ಪ ಕಾಲದವರೆಗೆ ಮಾತ್ರವಿರುತ್ತವೆ ಎಂಬುದನ್ನು ತೋರಿಸಲಾಗಿದೆ.[೧೪]
ಇವನ್ನೂ ಗಮನಿಸಿ
- ಹೃದ್ರೋಗ ಶಸ್ತ್ರಚಿಕಿತ್ಸಾ ತಜ್ಞ
- ಕಾರ್ಡಿಯೋತೋರಾಸಿಕ್ ಶಸ್ತ್ರಚಿಕಿತ್ಸೆ
- ಡೈಯಿಂಗ್ ಟು ಲೀವ್ (ಚಲನಚಿತ್ರ)
- ನಾಳೀಯ ಶಸ್ತ್ರಚಿಕಿತ್ಸೆ
- ಕಾರ್ಡಿಯೋತೋರಾಸಿಕ್ ಅನಸ್ಥೆಸಿಯಾಲಜಿ
- ಬದಲಿ ಹೃದಯ ಜೋಡಣೆ
ಉಲ್ಲೇಖಗಳು
- ↑ ಅರಿಸ್ ಎ.ಫ್ರಾನ್ಸಿಸ್ಕೊ ರೊಮೆರೊ, ಮೊದಲ ಹೃದ್ರೋಗ ಶಸ್ತ್ರಚಿಕಿತ್ಸಕಾ ಅನ್ ಥೊರಾಕ್ ಸುರ್ಗ್ 1997 ಸೆಪ್ಟೆಂಬರ್;64(3):870-1. PMID 7581459
- ↑ ಲ್ಯಾಂಡ್ ಮಾರ್ಕ್ಸ್ ಇನ್ ಕಾರ್ಡಿಕ್ ಸರ್ಜರಿ ಬೈ ಸ್ಟೆಫೆನ್ ವೆಸ್ಟಬಿ, ಸೆಸಿಲ್ ಬೊಶರ್, ISBN 1-899066-54-3
- ↑ http://www.tidsskriftet.no/?seks_id=659174
- ↑ ಡಿಕ್ಷನರಿ ಆಫ್ ನ್ಯಾಷನಲ್ ಬಯೋಗ್ರಫಿ – ಹೆನ್ರಿ ಸೌಟರ್ (2004–08)
- ↑ ೫.೦ ೫.೧ ೫.೨ ಹ್ಯಾರಾಲ್ಡ್ ಎಲೀಸ್ (2000) ಅ ಹಿಸ್ಟ್ರಿ ಆಫ್ ಸರ್ಜರಿ, ಪುಟ 223+
- ↑ ೬.೦ ೬.೧ ಲಾರೆನ್ಸ್ ಹೆಚ್ ಕೊನ್ (2007), ಕಾರ್ಡಿಕ್ ಸರ್ಜರಿ ಇನ್ ದಿ ಅಡಲ್ಟ್, ಪುಟ 6+
- ↑ ವಾರೆನ್, ಕ್ಲಿಫ್, ಡಾ. ನಾಜಿ ಜುಡಿ – ಹಿಸ್ ಸೈಂಟಿಫಿಕ್ ವರ್ಕ್ ಮೇಡ್ ಆಲ್ ಪಾಥ್ಸ್ ಲೀಡ್ ಟು ಒಕ್ಲಾಹೋಮ ಸಿಟಿ, ಇನ್ ಡಿಸ್ಟಿಂಕ್ಟ್ ಲಿ ಒಕ್ಲಹೋಮ, ನವೆಂಬರ್, 2007, p. 30-33
- ↑ ಇನ್ ಪುಟ್ ಬೈ ಪೇಷಂಟ, ನೇಮ್ ವಿತ್ ಹೆಲ್ಡ್ ಫಾರ್ ಪ್ರೈವೆಸಿ
- ↑ http://ndepth.newsok.com/zuhdi Archived 2012-04-25 ವೇಬ್ಯಾಕ್ ಮೆಷಿನ್ ನಲ್ಲಿ. ಡಾ. ನಾಜಿ ಜುಡಿ, ದಿ ಲೆಜಂಡರಿ ಹಾರ್ಟ್ ಸರ್ಜನ್, ದಿ ಒಕ್ಲಾಹೋಮನ್, 2010 ರ ಜನವರಿ
- ↑ "ಪಿಡಿಯಾಟ್ರಿಕ್ಲ್ ಹಾರ್ಟ್ ಸರ್ಜರಿ" ಇನ್ ಮೆಡ್ ಲೈನ್ ಪ್ಲಸ್
- ↑ ಸ್ಟಾರ್ಕ್ ಜೆ, ಗ್ಯಾಲಿವನ್ ಎಸ್,ಲವ್ ಗ್ರೋ ಜೆ, ಹ್ಯಾಮಿಲ್ಟನ್ ಜೆಆರ್, ಮೊನ್ರೊ ಜೀಲ್, ಪೊಲಾಕ್ ಜೆಸಿ, ವಾಟರ್ಸನ್ ಕೆಜಿ. ಮಕ್ಕಳಲ್ಲಿ ಸಹಜಾತ ಹೃದ್ರೋಗ ಕ್ಕಾಗಿ ಮಾಡಲಾದ ಶಸ್ತ್ರಚಿಕಿತ್ಸೆಯ ನಂತರ ಮರಣ ಪ್ರಮಾಣ ಮತ್ತು ಶಸ್ತ್ರ ಚಿಕಿತ್ಸಕರ ನೆರವೇರಿಕೆ ಲ್ಯಾನ್ ಸೆಟ್ 2000 ಮಾರ್ಚ್18;355(9208):1004-7. PMID 7581459
- ↑ ಕ್ಲಿಟ್ಜ್ನರ್ ಟಿಎಸ್, ಲೀ ಎಮ್, ರಾಡ್ರಿಗ್ಯೂಜ್ ಎಸ್, ಚಾಂಗ್ ಆರ್ ಆರ್. ಸೆಕ್ಸ್-ರಿಲೇಟೆಡ್ ಡಿಸ್ ಪಾರಿಟಿ ಇನ್ ಸರ್ಜಿಕಲ್ ಮೊರ್ಟಾಲಿಟಿ ಅಮೊಂಗ್ ಪಿಡಿಯಾಟ್ರಿಕ್ ಪೇಷಂಟ್. ಕಂಜೆನಿಟಲ್ ಹಾರ್ಟ್ ಡಿಸೀಸ್ 2006 ಮೇ1(3):77. ಅಬ್‌ಸ್ಟ್ರಾಕ್ಟ್.
- ↑ Newman M, Kirchner J, Phillips-Bute B, Gaver V, Grocott H, Jones R, Mark D, Reves J, Blumenthal J (2001). "Longitudinal assessment of neurocognitive function after coronary-artery bypass surgery". N Engl J Med. 344 (6): 395–402. doi:10.1056/NEJM200102083440601. PMID 11172175.
{cite journal}
: CS1 maint: multiple names: authors list (link) - ↑ Van Dijk D, Jansen E, Hijman R, Nierich A, Diephuis J, Moons K, Lahpor J, Borst C, Keizer A, Nathoe H, Grobbee D, De Jaegere P, Kalkman C (2002). "Cognitive outcome after off-pump and on-pump coronary artery bypass graft surgery: a randomized trial". JAMA. 287 (11): 1405–12. doi:10.1001/jama.287.11.1405. PMID 11903027.
{cite journal}
: CS1 maint: multiple names: authors list (link)
ಹೆಚ್ಚಿನ ಓದಿಗಾಗಿ
- [edited by] Lawrence H. Cohn, L. Henry Edmunds, Jr (2003). Cardiac surgery in the adult. New York: McGraw-Hill, Medical Pub. Division. ISBN 0-07-139129-0.
{cite book}
:|author=
has generic name (help)CS1 maint: multiple names: authors list (link) ಫುಲ್ ಟೆಕ್ಸ್ಟ್ ಆನ್ ಲೈನ್ Archived 2016-06-14 ವೇಬ್ಯಾಕ್ ಮೆಷಿನ್ ನಲ್ಲಿ.
ಬಾಹ್ಯ ಕೊಂಡಿಗಳು
- ಒವರ್ ವ್ಯೂ ಅಟ್ ಅಮೇರಿಕನ್ ಹಾರ್ಟ್ ಅಸೋಸಿಯೇಷನ್
- ಕಾರ್ಡಿಕ್ ಸರ್ಜರಿ ಅಟ್ NYU ಲ್ಯಾಂಗಾನ್ ಮೆಡಿಕಲ್ ಸೆಂಟರ್ಸ್ ಕಾರ್ಡಿಕ್ ಅಂಡ್ ವ್ಯಾಸ್ಕ್ಯೂಲರ್ ಇನ್ ಸ್ಟಿಟ್ಯೂಟ್
- "ಕಂಜೆನಿಟಲ್ ಹಾರ್ಟ್ ಡಿಸೀಸ್ ಸರ್ಜಿಕಲ್ ಕರೆಕ್ಟೀವ್ ಪ್ರೊಸಿಜರ್ಸ್", learningradiology.com ನಲ್ಲಿರುವ ಶಸ್ತ್ರಚಿಕಿತ್ಸೆ ವಿಧಾನಗಳ ಪಟ್ಟಿ
- ಹೃದಯದ ಶಸ್ತ್ರಚಿಕಿತ್ಸೆ Archived 2011-07-08 ವೇಬ್ಯಾಕ್ ಮೆಷಿನ್ ನಲ್ಲಿ.
- ವಾಟ್ ಟು ಎಕ್ಸ್ ಪೆಕ್ಟ್ ಬಿಫೋರ್, ಡ್ಯೂರಿಂಗ್ ಅಂಡ್ ಅಫ್ಟರ್ ಹಾರ್ಟ್ ಸರ್ಜರಿ Archived 2006-01-01 ವೇಬ್ಯಾಕ್ ಮೆಷಿನ್ ನಲ್ಲಿ. ಫ್ರಮ್ ಚಿಲ್ರನ್ಸ್ ಹಾಸ್ಪಿಟಲ್ ಅಂಡ್ ರೀಜನಲ್ ಮೆಡಿಕಲ್ ಸೆಂಟರ್ (ಸೀಟಲ್)
- ಮಿನಿಮಲಿ ಇನ್ ವ್ಯಾಸಿವ್ ಹಾರ್ಟ್ ಸರ್ಜರಿ. ಮೆಡಿಕಲ್ ಎನ್ ಸೈಕ್ಲಪೀಡಿಯಾ, ಮೆಡ್ ಲೈನ್ ಪ್ಲೆಸ್
- ಹಾರ್ಟ್ ಸರ್ಜರಿ ಸ್ಲೈಡ್ ಶೋ Archived 2006-05-09 ವೇಬ್ಯಾಕ್ ಮೆಷಿನ್ ನಲ್ಲಿ. ಫ್ರಮ್ ಚಿಲ್ರನ್ಸ್ ಹಾಸ್ಪಿಟಲ್ ಅಂಡ್ ರೀಜನಲ್ ಮೆಡಿಕಲ್ ಸೆಂಟರ್ (ಸೀಟಲ್)
- ಮೈಟ್ರಲ್ ಕವಾಟ ರಿಪ್ಯೇರ್ ಅಟ್ ಮಾಂಟ್ ಸಿನಾಯ್ ಹಾಸ್ಪಿಟಲ್
- ಓಪನ್ ಹಾರ್ಟ್ ಸರ್ಜರಿ ವೀಡಿಯೋಸ್ ಅಟ್ ಗೂಗಲ್ ಅನ್ಸರ್ಸ್
- ದಿ ಸೊಸೈಟಿ ಆಫ್ ಥೊರಾಸಿಸ್ ಸರ್ಜನ್ಸ್
ಟೆಂಪ್ಲೇಟು:Cardiac surgery