ಹೆಬ್ಬಾಳ ಕೆರೆ
ಬೆಂಗಳೂರಿನ ಉತ್ತರದಲ್ಲಿ ಬಳ್ಳಾರಿ ರಸ್ತೆ (ರಾಷ್ಟ್ರೀಯ್ ಹೆದ್ದಾರಿ ೭) ಹಾಗು ಹೊರ ವರ್ತುಲ ರಸ್ತೆ ಕೂಡುವಲ್ಲಿ ಇರುವ ಒಂದು ಕೆರೆ, ೧೫೩೭ರಲ್ಲಿ ಕೆಂಪೇಗೌಡರು ಕಟ್ಟಿಸಿದ ಕೆರೆಗಳಲ್ಲಿ ಇದು ಒಂದು. 2000 ರ ಒಂದು ಅಧ್ಯಯನದಲ್ಲಿ ಕೆರೆಯ ಹರಡುವಿಕೆ 75 ಹೆ ಕಂಡುಬಂತು, 143 ಹೆ ತುಂಬಲು ವಿಸ್ತರಿಸುವ ಯೋಜಿಸಲಾಗಿದೆ.[೧]
ಸರೋವರ ವಿಜ್ಞಾನ
ಸರೋವರದ ಹಿನ್ನೀರಿನ ಪ್ರದೇಶವು 3750ha ಕಂಡುಬಂತು. ಮತ್ತು ಈ ಪ್ರದೇಶದಲ್ಲಿ ಯಶವಂತಪುರ, ಮತ್ತಿಕೆರೆ, ರಾಜಮಹಲ್ ವಿಲಾಸ್ ವಿಸ್ತರಣೆ, ಭರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನತ್ತು ಹಿಂದೂಸ್ತಾನ್ ಮಷೀನ್ ಟೂಲ್ಸ್ ಲಿಮಿಟೆಡ್ ವಸಾಹತುಗಳು. 1974 ರಲ್ಲಿ ಸರೋವರ ಪ್ರದೇಶದಲ್ಲಿ 77,95 ಹೆಕ್ಟೇರ್ ಇತ್ತು ಮತ್ತು 1998 ರಲ್ಲಿ ಇದು 57,75 ಹ ಇತ್ತು.[೨]
ಹರಿದು ಬರುವುದು
ಮತ್ತಿಕೆರೆ,ಯಶವಂತಪುರ,ಬಿ ಇ ಎಲ್ ,ರಾಜ್ ಮಹಲ್ ವಿಲಾಸ ದಲ್ಲಿ ಮಳೆ ಬಿದ್ದರೆ ಈ ಕೆರೆಗೆ ಹರಿದು ಬರುತ್ತದೆ.
ಜೀವಿಗಳು
ಇಲ್ಲಿ ಅನೇಕ ನೀರಿನ ಪಕ್ಷಿಗಳು ಇವೆ, ಕೆರೆಯ ಮದ್ಯದಲ್ಲಿ ದ್ವೀಪಗಳು, ಈ ಪಕ್ಷಿಗಳ ಜೀವನ ಮಾಡಲು ಸಹಕಾರಿಯಾಗಿವೆ.
ಪ್ರವಾಸ ಕೇಂದ್ರ
ಇಲ್ಲಿ ಪ್ರೇಮಿಗಳು ಹೆಚ್ಚಾಗಿ ಬರುತ್ತಾರೆ, ದೋಣಿ ವಿಹಾರ ವಿದೆ, ಮಕ್ಕಳಿಗೆ ಆಟ ಆಡಲು ಹುಲ್ಲುಗಾವಲಿದೆ.
ಉಲ್ಲೇಖಗಳು
- ↑ V.G.Ranjani and T.V.Ramachandra (2000) Bathymetric analysis and the characterisation of the Hebbal lake to explore restoration and management options. Lakes 2000. Indian Institute of Science, Bangalore. Fulltext
- ↑ Rinku Verma, S. P. Singh and K. Ganesha Raj (2003) Assessment of changes in water-hyacinth coverage of water bodies in northern part of Bangalore city using temporal remote sensing data. Current Science 84(6):795-804 PDF