ಹೊಕ್ಕುಳಬಳ್ಳಿ
ಜರಾಯುಯುಕ್ತ ಸಸ್ತನಿಗಳಲ್ಲಿ, ಹೊಕ್ಕುಳಬಳ್ಳಿ ಯು (ಬರ್ತ್ ಕಾರ್ಡ್ ಅಥವಾ ಫುನಿಕುಲಸ್ ಅಂಬಿಲಿಕ್ಯಾಲಿಸ್ ಎಂದೂ ಕರೆಯುತ್ತಾರೆ) ಬೆಳೆಯುವ ಭ್ರೂಣ ಅಥವಾ ಪಿಂಡವನ್ನು ಜರಾಯುವಿಗೆ ಜೋಡಿಸುವ ಬಳ್ಳಿಯಾಗಿದೆ. ಪ್ರಸವಪೂರ್ವ ಬೆಳವಣಿಗೆಯ ಸಂದರ್ಭದಲ್ಲಿ, ಹೊಕ್ಕುಳಬಳ್ಳಿಯು ಭ್ರೂಣದ್ದೇ ಜೈಗೋಟ್‌ನಿಂದ ಹುಟ್ಟಿಕೊಳ್ಳುತ್ತದೆ ಹಾಗೂ (ಮಾನವರಲ್ಲಿ) ಸಾಮಾನ್ಯವಾಗಿ ವಾರ್ಟನ್ಸ್ ಜೆಲ್ಲಿಯಲ್ಲಿ ಹುದುಗಿರುವ ಎರಡು ಅಪಧಮನಿಗಳನ್ನು (ಹೊಕ್ಕುಳಿನ ಅಪಧಮನಿಗಳು) ಮತ್ತು ಒಂದು ಅಭಿಧಮನಿಯನ್ನು (ಹೊಕ್ಕುಳಿನ ಅಭಿಧಮನಿ) ಹೊಂದಿರುತ್ತದೆ. ಹೊಕ್ಕುಳಿನ ಅಭಿಧಮನಿಯು ಭ್ರೂಣಕ್ಕೆ ಜರಾಯುವಿನಿಂದ ಆಮ್ಲಜನಕಯುಕ್ತ, ಹೆಚ್ಚು ಪುಷ್ಟಿಕಾರಿ ರಕ್ತವನ್ನು ಪೂರೈಸುತ್ತದೆ. ಪ್ರತಿಯಾಗಿ, ಹೊಕ್ಕುಳಿನ ಅಪಧಮನಿಗಳು ಆಮ್ಲಜನಕ-ರಹಿತ, ಪೌಷ್ಟಿಕಾಂಶ-ನ್ಯೂನ್ಯತೆಯ ರಕ್ತವನ್ನು ಹಿಂದಿರುಗಿಸುತ್ತವೆ.
ಮಾನವರ ಶರೀರವಿಜ್ಞಾನ
ಬೆಳವಣಿಗೆ ಮತ್ತು ರಚನೆ
ಹೊಕ್ಕುಳಬಳ್ಳಿಯು ಹಳದಿಬಂಡಾರ ಕೋಶ(ಯೋಕ್-ಸ್ಯಾಕ್) ಮತ್ತು ಭ್ರೂಣದ ಪೊರೆಯಿಂದ ಬೆಳವಣಿಗೆ ಹೊಂದುತ್ತದೆ ಮತ್ತು ಅವನ್ನೇ ಹೊಂದಿರುತ್ತದೆ (ಮತ್ತು ಅದು ಭ್ರೂಣದ್ದೇ ಜೈಗೋಟ್‌ನಿಂದ ಹುಟ್ಟಿಕೊಳ್ಳುತ್ತದೆ). ಇದು ಭ್ರೂಣದ ಬೆಳವಣಿಗೆಯ ಐದನೇ ವಾರದ ನಂತರ ರಚನೆಯಾಗಿ, ಹಳದಿಬಂಡಾರ ಕೋಶವನ್ನು ಭ್ರೂಣಕ್ಕೆ ಪೌಷ್ಟಿಕಾಂಶಗಳನ್ನು ಪೂರೈಸುವ ಮೂಲವಾಗಿ ಬದಲಾಯಿಸುತ್ತದೆ.[೧] ಈ ಬಳ್ಳಿಯು ತಾಯಿಯ ರಕ್ತಪರಿಚಲನ ವ್ಯವಸ್ಥೆಗೆ ನೇರವಾಗಿ ಸಂಪರ್ಕಿಸಿರುವುದಿಲ್ಲ, ಬದಲಿಗೆ ಜರಾಯು(ಪ್ಲಾಸೆಂಟಾ)ವಿನೊಂದಿಗೆ ಜೋಡಿಕೊಂಡಿರುತ್ತದೆ. ಜರಾಯು ನೇರವಾದ ಮಿಶ್ರಣಕ್ಕೆ ಅವಕಾಶ ಕೊಡದೆ ತಾಯಿಯ ರಕ್ತದಿಂದ ಮತ್ತು ರಕ್ತಕ್ಕೆ ಅಂಶಗಳನ್ನು ವರ್ಗಾಯಿಸುತ್ತದೆ. ಗರ್ಭಧಾರಣೆಯ ಪೂರ್ತಿ ಅವಧಿಯ ನವಜಾತ ಶಿಶುವಿನಲ್ಲಿ ಹೊಕ್ಕುಳಬಳ್ಳಿಯು ಸಾಮಾನ್ಯವಾಗಿ ಸುಮಾರು ೫೦ ಸೆಂಟಿಮೀಟರ್‌ಗಳಷ್ಟು (೨೦ ಇಂಚು) ಉದ್ದ ಮತ್ತು ೨ ಸೆಂಟಿಮೀಟರ್‌ಗಳಷ್ಟು (೦.೭೫ ಇಂಚು) ವ್ಯಾಸವನ್ನು ಹೊಂದಿರುತ್ತದೆ. ಈ ವ್ಯಾಸವು ಜರಾಯುವಿಲ್ಲಿ ಕಡಿಮೆಯಾಗುತ್ತದೆ. ಸಂಪೂರ್ಣವಾಗಿ ರಚನೆಯಾಗಿರುವ ಹೊಕ್ಕುಳಿನ ಅಪಧಮನಿಯು ಎರಡು ಮುಖ್ಯ ಪದರಗಳನ್ನು ಹೊಂದಿರುತ್ತದೆ: ಹೊರಗಿನ ಪದರವು ವೃತ್ತಾಕಾರವಾಗಿ ವ್ಯವಸ್ಥೆಗೊಂಡ ಮೃದು ಸ್ನಾಯು ಜೀವಕೋಶಗಳನ್ನು ಒಳಗೊಂಡಿರುತ್ತದೆ ಮತ್ತು ಒಳಗಿನ ಪದರವು ಸ್ವಲ್ಪ ಅಸಮ್ಮಿತವಾಗಿ ಮತ್ತು ಸಡಿಲವಾಗಿ ವ್ಯವಸ್ಥೆಗೊಳಿಸಿದ ಜೀವಕೋಶಗಳನ್ನು ತೋರಿಸುತ್ತದೆ, ಈ ಜೀವಕೋಶಗಳು ಮೆಟಾಕ್ರೊಮಾಟಿಕ್ ಬಣ್ಣಕೊಡಿಸುವ ಹೇರಳವಾದ ಪ್ರಮುಖ ಅಂಶ(ಗ್ರೌಂಡ್ ಸಬ್‌ಸ್ಟ್ಯಾನ್ಸ್)ದಲ್ಲಿ ಹುದುಗಿರುತ್ತವೆ.[೨] ಪದರದ ಮೃದು ಸ್ನಾಯು ಜೀವಕೋಶಗಳು ಕಡಿಮೆ ವ್ಯತ್ಯಾಸವನ್ನು ತೋರುತ್ತವೆ, ಕೆಲವೇ ಸೂಕ್ಷ್ಮ ಮಯೋಫಿಲಮೆಂಟ್‌ಗಳನ್ನು ಹೊಂದಿರುತ್ತವೆ ಮತ್ತು ಆ ಮೂಲಕ ಅವು ಮಗು ಹುಟ್ಟಿದ ನಂತರದ ಮುಚ್ಚುವಿಕೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಿಲ್ಲ.[೨]
ಹೊಕ್ಕುಳಬಳ್ಳಿಯು ವಾರ್ಟನ್ಸ್ ಜೆಲ್ಲಿಯಿಂದ ರಚಿತವಾಗಿರುತ್ತದೆ, ಇದು ಹೆಚ್ಚಾಗಿ ಮ್ಯೂಕೋಪಾಲಿಸ್ಯಾಕರೈಡ್‌ಗಳಿಂದ ಸಂಯೋಜಿತವಾಗಿರುವ ಒಂದು ಜೆಲಟಿನ್‌ನಂಥ ಅಂಶವಾಗಿದೆ. ಇದು ಆಮ್ಲಜನಕಯುಕ್ತ, ಪೌಷ್ಟಿಕಾಂಶ-ಭರಿತ ರಕ್ತವನ್ನು ಭ್ರೂಣಕ್ಕೆ ಸಾಗಿಸುವ ಒಂದು ಅಭಿಧಮನಿಯನ್ನು ಮತ್ತು ಆಮ್ಲಯಜಕ-ರಹಿತ, ಪೌಷ್ಟಿಕಾಂಶವಿಲ್ಲದ ರಕ್ತವನ್ನು ಭ್ರೂಣದಿಂದ ಹೊರಕ್ಕೆ ಕೊಂಡೊಯ್ಯುವ ಎರಡು ಅಪಧಮನಿಗಳನ್ನು ಹೊಂದಿರುತ್ತದೆ. ಕೆಲವೊಮ್ಮೆ ಹೊಕ್ಕುಳಬಳ್ಳಿಯಲ್ಲಿ ಕೇವಲ ಎರಡು ವಾಹಕಗಳು (ಒಂದು ಅಭಿಧಮನಿ ಮತ್ತು ಒಂದು ಅಪಧಮನಿ) ಕಂಡುಬರುತ್ತವೆ. ಇದು ಕೆಲವೊಮ್ಮೆ ಭ್ರೂಣದ ವೈಪರಿತ್ಯಕ್ಕೆ ಸಂಬಂಧಿಸಿರುತ್ತದೆ, ಆದರೆ ಇದು ಯಾವುದೇ ತೊಂದರೆಗಳಿಲ್ಲದೆಯೂ ಕಂಡುಬರಬಹುದು.
ಅಭಿಧಮನಿಯು ಆಮ್ಲಜನಕಯುಕ್ತ ರಕ್ತವನ್ನು ಸಾಗಿಸುವುದು ಮತ್ತು ಅಪಧಮನಿಗಳು ಆಮ್ಲಜನಕ-ರಹಿತ ರಕ್ತವನ್ನು ಕೊಂಡೊಯ್ಯುವುದು ಅಸಾಮಾನ್ಯವಾಗಿರುತ್ತದೆ (ಶ್ವಾಸಕೋಶಗಳನ್ನು ಹೃದಯಕ್ಕೆ ಸಂಪರ್ಕಿಸುವ ಶ್ವಾಸಕೋಶದ ಅಭಿಧಮನಿ ಮತ್ತು ಅಪಧಮನಿಗಳು ಮಾತ್ರ ಈ ರೀತಿಯ ಸಾಗಣೆಗೆ ಉದಾಹರಣೆಗಳಾಗಿವೆ). ಈ ಹೆಸರಿಸುವ ಕ್ರಮವು, ಹೊಕ್ಕುಳಿನ ಅಭಿಧಮನಿಯು ರಕ್ತವನ್ನು ಭ್ರೂಣದ ಹೃದಯಕ್ಕೆ ಕೊಂಡೊಯ್ಯುತ್ತವೆ ಮತ್ತು ಹೊಕ್ಕುಳಿನ ಅಪಧಮನಿಗಳು ಅಲ್ಲಿಂದ ರಕ್ತವನ್ನು ಹೊರಕ್ಕೆ ತರುತ್ತವೆ ಎಂಬುದನ್ನು ಪ್ರತಿಬಿಂಬಿಸುತ್ತದೆ.
ಹೊಕ್ಕುಳಬಳ್ಳಿಯ ಮೂಲಕ ರಕ್ತ ಪ್ರವಾಹವು ೨೦ ವಾರಗಳಲ್ಲಿ ೩೫ mL/min ಮತ್ತು ಗರ್ಭಾವಸ್ಥೆಯ ೪೦ ವಾರಗಳಲ್ಲಿ ೨೪೦ mL/min ಇರುತ್ತದೆ.[೩] ಈ ಪ್ರವಾಹವು ಭ್ರೂಣದ ತೂಕಕ್ಕೆ ಅನುಗುಣವಾಗಿ ಬದಲಾಗಿ, ೨೦ ವಾರಗಳಲ್ಲಿ ೧೧೫ mL/min/kg ಮತ್ತು ೪೦ ವಾರಗಳಲ್ಲಿ ೬೪ mL/min/kg ಇರುತ್ತದೆ.[೩]
ಭ್ರೂಣದ ರಕ್ತಪರಿಚಲನೆ ವ್ಯವಸ್ಥೆಯೊಂದಿಗಿನ ಸಂಬಂಧ
ಹೊಕ್ಕುಳಬಳ್ಳಿಯು ಭ್ರೂಣವನ್ನು ಕಿಬ್ಬೊಟ್ಟೆಯ ಮೂಲಕ ಪ್ರವೇಶಿಸುತ್ತದೆ, ಆ ಕೇಂದ್ರಭಾಗವು (ಬೇರ್ಪಟ್ಟ ನಂತರ) ಮುಂದೆ ಹೊಕ್ಕುಳು (ಅಥವಾ ನಾಭಿ) ಆಗುತ್ತದೆ. ಭ್ರೂಣದೊಳಗೆ ಹೊಕ್ಕುಳಿನ ಅಭಿಧಮನಿಯು ಪಿತ್ತಜನಕಾಂಗದ ಅಡ್ಡ ಸೀಳಿಕೆಯವರೆಗೆ ಮುಂದುವರಿಯುತ್ತದೆ, ಅಲ್ಲಿ ಅದು ಎರಡು ವಿಭಾಗಗಳಾಗುತ್ತದೆ. ಈ ವಿಭಾಗಗಳಲ್ಲಿ ಒಂದು ಪಿತ್ತಜನಕಾಂಗಕ್ಕೆ ರಕ್ತವನ್ನು ಸಾಗಿಸುವ ಪಿತ್ತಜನಕಾಂಗದ ಅಭಿಧಮನಿಯೊಂದಿಗೆ ಸೇರುತ್ತದೆ (ಆ ಮೂಲಕ ಅದರ ಎಡ ವಿಭಾಗಕ್ಕೆ ಜೋಡಿಸುತ್ತದೆ). ಮತ್ತೊಂದು ವಿಭಾಗವು (ಡಕ್ಟಸ್ ವಿನೋಸಸ್ ಎಂದು ಕರೆಯುತ್ತಾರೆ) ಒಳಬರುವ ಹೆಚ್ಚಿನ ರಕ್ತವನ್ನು (ಸರಿಸುಮಾರು ೮೦%) ಪಿತ್ತಜನಕಾಂಗಕ್ಕೆ ಉಪಮಾರ್ಗವನ್ನು ಕಲ್ಪಿಸಿ, ಎಡ ಪಿತ್ತಜನಕಾಂಗದ ಅಭಿಧಮನಿಯ ಮೂಲಕ ಕೆಳಗಿನ ಮಹಾಸಿರೆ(ಮಹಾಅಭಿಧಮನಿ)ಗೆ ಹರಿಯುವಂತೆ ಮಾಡುತ್ತದೆ, ಈ ಮಹಾಸಿರೆಯು ರಕ್ತವನ್ನು ಹೃದಯದೆಡೆಗೆ ಸಾಗಿಸುತ್ತದೆ. ಎರಡು ಹೊಕ್ಕುಳಿನ ಅಪಧಮನಿಗಳುಒಳಗಿನ ಟೊಂಕದ ಅಪಧಮನಿಗಳಿಂದ ವಿಭಾಗಿಸಲ್ಪಡುತ್ತವೆ ಮತ್ತು ಹೊಕ್ಕುಳಬಳ್ಳಿಯನ್ನು ಸೇರುವುದಕ್ಕಿಂತ ಮೊದಲು ಅವು ಮೂತ್ರಕೋಶದ ಎರಡೂ ಬದಿಯಲ್ಲಿ ಸಾಗುತ್ತವೆ.
ಶರೀರ ವೈಜ್ಞಾನಿಕ ಮಗು ಜನಿಸಿದ ನಂತರದ ಮುಚ್ಚುವಿಕೆ
ಬಾಹ್ಯ ಮಧ್ಯಸ್ಥಿಕೆಯು ಇಲ್ಲದಿದ್ದಾಗ, ಮಗುವಿಗೆ ಜನ್ಮ ನೀಡಿದ ನಂತರ ಹೊಕ್ಕುಳಬಳ್ಳಿಯು ಕೂಡಲೇ ಮುಚ್ಚುತ್ತದೆ. ಇದು ತಾಪಮಾನದಲ್ಲಿನ ಇಳಿಕೆಗೆ ಪ್ರತಿಯಾಗಿ ವಾರ್ಟನ್ಸ್ ಜೆಲ್ಲಿಯ ನಷ್ಟ ಮತ್ತು ಊದಿಕೊಳ್ಳುವಿಕೆಯಿಂದ ಹಾಗೂ ಮೃದು ಸ್ನಾಯು ಸಂಕೋಚನದಿಂದ ಉಂಟಾಗುವ ರಕ್ತನಾಳಗಳ-ಸಂಕೋಚನದಿಂದ ಇದು ಸಂಭವಿಸುತ್ತದೆ. ಪರಿಣಾಮವಾಗಿ ಒಂದು ಸ್ವಾಭಾವಿಕ ಹಿಡಿಕಟ್ಟು(ಕ್ಲ್ಯಾಂಪ್) ರಚಿಸಲ್ಪಟ್ಟು, ರಕ್ತದ ಹರಿವನ್ನು ನಿರ್ಬಂಧಿಸುತ್ತದೆ. ಸ್ವಾಭಾವಿಕವಾಗಿ ಮುಂದುವರಿಯಲು ಬಿಟ್ಟರೆ, ಈ ಶಾರೀರಿಕ ಹಿಡಿಕಟ್ಟು ಕೇವಲ ಐದರಿಂದ ೨೦[೪] ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಬೆಚ್ಚಗಿನ ನೀರಿನ ಟಬ್‌ನಲ್ಲಿ ಮಗುವಿಗೆ ಜನ್ಮ ನೀಡಿದಾಗ, ಆ ನೀರಿನ ತಾಪಮಾನವು ದೇಹದೊಳಗಿನ ತಾಪಕ್ಕೆ ಸರಿಸಮವಾಗಿರುವುದರಿಂದ ಸಾಮಾನ್ಯ ಮಿಡಿತವು ೫ ನಿಮಿಷ ಮತ್ತು ಅದಕ್ಕಿಂತ ಹೆಚ್ಚಿರಬಹುದು.[೫]
ರಕ್ತನಾಳಗಳ ಸಂಕೋಚನದಿಂದ ಸಂಭವಿಸುವ ಹೊಕ್ಕುಳಿನ ಅಪಧಮನಿಯ ಮುಚ್ಚುವಿಕೆಯು ಅನೇಕ ಸಂಕೋಚನಗಳನ್ನು ಒಳಗೊಂಡಿರುತ್ತದೆ, ಸಮಯ ಕಳೆದಂತೆ ಇದರ ಸಂಖ್ಯೆ ಮತ್ತು ಮಟ್ಟವು ಹೆಚ್ಚಾಗುತ್ತದೆ. ಮುಚ್ಚುವಿಕೆಯು ಪೂರ್ಣಗೊಳ್ಳುವುದಕ್ಕಿಂತ ಮೊದಲು ಸಂಕೋಚನಗಳ ಮಧ್ಯೆ ತಡೆಗಟ್ಟಲ್ಲಪಟ್ಟ ಹೆಪ್ಪುಗಟ್ಟಿಲ್ಲದ ರಕ್ತದೊಂದಿಗೆ ಹಿಗ್ಗುವಿಕೆಗಳ ಭಾಗವಿರುತ್ತದೆ.[೬] ಭಾಗಶಃ ಸಂಕೋಚನಗಳು ಮತ್ತು ಅಂತಿಮ ಮುಚ್ಚುವಿಕೆಯು ಮುಖ್ಯವಾಗಿ ಹೊರಗಿನ ವೃತ್ತಾಕಾರದ ಪದರದ ಸ್ನಾಯು ಜೀವಕೋಶಗಳಿಂದ ಉಂಟಾಗುತ್ತದೆ.[೨] ಇದಕ್ಕೆ ಪ್ರತಿಯಾಗಿ, ಒಳಗಿನ ಪದರವು ಒಂದು ಪ್ಲಾಸ್ಟಿಕ್ ಅಂಗಾಂಶದಂತೆ ಕಾರ್ಯನಿರ್ಹಿಸುತ್ತದೆ, ಇದನ್ನು ಸುಲಭವಾಗಿ ಅಕ್ಷೀಯ ದಿಕ್ಕಿನಲ್ಲಿ ಬದಲಾಯಿಸಬಹುದು ಮತ್ತು ನಂತರ ಮುಚ್ಚುವಿಕೆಯನ್ನು ಪೂರ್ಣಗೊಳಿಸಲು ಕಿರಿದಾದ ಕುಹರಕ್ಕೆ ಆವರಿಸಬಹುದು.[೨] ರಕ್ತನಾಳಗಳ-ಸಂಕೋಚನದ ಮುಚ್ಚುವಿಕೆಯಲ್ಲಿ ಮುಖ್ಯವಾಗಿ ೫-ಹೈಡ್ರಾಕ್ಸಿಟ್ರಿಪ್ಟಮಿನ್[೭][೮] ಮತ್ತು ಥ್ರೋಂಬೋಕ್ಸೇನ್A೨ ಮಧ್ಯಸ್ಥಿಕೆ ವಹಿಸುತ್ತವೆ.[೭] ಗರ್ಭಧಾರಣೆಯ ಪೂರ್ಣಾವಧಿಗಿಂತ ಮೊದಲಿನ ಶಿಶುಗಳ ಹೊಕ್ಕುಳಬಳ್ಳಿಯ ಅಪಧಮನಿಯು ಏಂಜಿಯೊಟೆನ್ಸಿನ್ II ಮತ್ತು ಅರಾಕಿಡೋನಿಕ್ ಆಮ್ಲಕ್ಕೆ ಗರ್ಭಧಾರಣೆಯ ಪೂರ್ಣಾವಧಿಯ ಶಿಶುಗಳಿಗಿಂತ ಹೆಚ್ಚು ಸಂಕೋಚನಗೊಳ್ಳುತ್ತದೆ ಹಾಗೂ ಆಕ್ಸಿಟೋಸಿನ್‌ಗೆ ಹೆಚ್ಚು ಸಂವೇದನಾಶೀಲವಾಗಿರುತ್ತದೆ.[೮] ವಾರ್ಟನ್ಸ್ ಜೆಲ್ಲಿಯ ಕೊಡುಗೆಗೆ ವಿರುದ್ಧವಾಗಿ, ತಂಪಾಗಿಸುವಿಕೆಯು ಕೇವಲ ತಾತ್ಕಾಲಿಕ ರಕ್ತನಾಳದ-ಸಂಕೋಚನವನ್ನು ಉಂಟುಮಾಡುತ್ತದೆ.[೮]
ಶಿಶುವಿನೊಳಗೆ ಹೊಕ್ಕುಳಿನ ಅಭಿಧಮನಿ ಮತ್ತು ಡಕ್ಟಸ್ ವೆನೋಸಸ್ ಮುಚ್ಚಿಕೊಳ್ಳುತ್ತದೆ ಮತ್ತು ನಾರಿನಿಂದ ತುಂಬಿದ ಉಳಿಕೆಗಳಾಗಿ ರಚನೆಯಾಗುತ್ತದೆ, ಅವನ್ನು ಪಿತ್ತಜನಕಾಂಗದ ದುಂಡನೆಯ ಲಿಗಮೆಂಟ್(ಮೂಳೆಕಟ್ಟು) ಮತ್ತು ಲಿಗಮೆಂಟಮ್ ವೀನೋಸಮ್ ಎಂದು ಕರೆಯಲಾಗುತ್ತದೆ. ಪ್ರತಿಯೊಂದು ಹೊಕ್ಕುಳಿನ ಅಪಧಮನಿಯ ಭಾಗವು ಮುಚ್ಚಿಕೊಳ್ಳುತ್ತದೆ (ಇವು ಮಧ್ಯ ಹೊಕ್ಕುಳಿನ ಲಿಗಮೆಂಟ್‌ಗಳೆಂದು ಕರೆಯಲಾಗುವ ರಚನೆಗಳಾಗುತ್ತವೆ), ಉಳಿದ ಭಾಗಗಳು ರಕ್ತಪರಿಚಲನೆ ವ್ಯವಸ್ಥೆಯ ಭಾಗವಾಗಿ ಉಳಿಯುತ್ತವೆ.
ತೊಂದರೆಗಳು ಮತ್ತು ವೈಪರಿತ್ಯಗಳು
ಹಲವಾರು ವೈಪರಿತ್ಯಗಳು ಹೊಕ್ಕುಳಬಳ್ಳಿಯ ಮೇಲೆ ಪ್ರಭಾವ ಬೀರಬಹುದು, ಇವು ತಾಯಿ ಮತ್ತು ಮಗು ಇಬ್ಬರ ಮೇಲೂ ಪ್ರಭಾವ ಬೀರುವ ತೊಂದರೆಗಳನ್ನು ಉಂಟುಮಾಡಬಹುದು:[೯]
- ಹೆಗತ್ತಿನ(ನ್ಯೂಕಲ್) ಬಳ್ಳಿ - ಇದರಲ್ಲಿ ಹೊಕ್ಕುಳಬಳ್ಳಿಯು ಭ್ರೂಣದ ಕತ್ತಿನ ಸುತ್ತಲೂ ಆವರಿಸಿಕೊಳ್ಳುತ್ತದೆ[೧೦]
- ವೆಲಮೆಂಟಸ್ ಬಳ್ಳಿ ಒಳಸೇರಿಕೆ
- ಏಕ ಹೊಕ್ಕುಳಿನ ಅಪಧಮನಿ
- ಹೊಕ್ಕುಳಬಳ್ಳಿ ಜರಿತ
- ವಾಸ ಪ್ರೇವಿಯ
ವೈದ್ಯಕೀಯ ಪ್ರಯೋಗಗಳು ಮತ್ತು ಕಾರ್ಯವಿಧಾನಗಳು
ನಿರ್ಬಂಧಿಸುವುದು ಮತ್ತು ಕತ್ತರಿಸುವುದು
ಸಾಮಾನ್ಯ ಆಸ್ಪತ್ರೆ-ಆಧಾರಿತ ಪ್ರಸೂತಿಯ ಕ್ರಿಯೆಯಲ್ಲಿ ಮಗು ಜನಿಸಿದ ಕೂಡಲೇ ಒಂದು ನಿಮಿಷದೊಳಗೆ ಕೃತಕವಾಗಿ ನಿರ್ಬಧಿಸಲಾಗುತ್ತದೆ. ಜನನ ಕೇಂದ್ರಗಳಲ್ಲಿ, ಇದನ್ನು ೫ ನಿಮಿಷಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ವಿಳಂಬ ಮಾಡಬಹುದು ಅಥವಾ ಸಂಪೂರ್ಣವಾಗಿ ಬಿಟ್ಟುಬಿಡಬಹುದು. ನಿರ್ಬಂಧಿಸಿದ ನಂತರ ಹೊಕ್ಕುಳಬಳ್ಳಿಯನ್ನು ಕತ್ತರಿಸಲಾಗುತ್ತದೆ, ಯಾವುದೇ ನರಗಳಿಲ್ಲದಿರುವುದರಿಂದ ಈ ಕತ್ತರಿಸುವಿಕೆಯಿಂದ ನೋವು ಉಂಟಾಗುವುದಿಲ್ಲ. ಗಟ್ಟಿಯಾದ ಸ್ನಾಯು ರಜ್ಜುವಿನಂತೆ ಹೊಕ್ಕುಳಬಳ್ಳಿಯು ಹೆಚ್ಚು ಗಡುಸಾಗಿರುತ್ತದೆ, ಆದ್ದರಿಂದ ಇದನ್ನು ಕತ್ತರಿಸಲು ಸಾಕಷ್ಟು ಹರಿತವಾದ ಸಾಧನ ಬೇಕಾಗುತ್ತದೆ. ಹೊಕ್ಕುಳಬಳ್ಳಿಯು ಮಿಡಿಯುವುದನ್ನು ನಿಲ್ಲಿಸಿದ ನಂತರ (ಜನನವಾದ ೫-೨೦ ನಿಮಿಷಗಳ ನಂತರ) ಬಳ್ಳಿಯ ವಿಚ್ಛೇದನವು ಕಂಡುಬರುತ್ತದೆ. ಬಳ್ಳಿಯನ್ನು ಕತ್ತರಿಸುವಾಗ ಸಾಮಾನ್ಯವಾಗಿ ಅಭಿಧಮನಿಯ ಅಥವಾ ಅಪಧಮನಿಯದ ರಕ್ತದ ಗಮನಾರ್ಹ ನಷ್ಟ ಕಂಡುಬರುವುದಿಲ್ಲ.
ಬಳ್ಳಿಯ ಹಿಡಿಕಟ್ಟನ್ನು ಚಾಕುವಿನೊಂದಿಗೆ ಸೇರಿಸುವ ಹೊಕ್ಕುಳಬಳ್ಳಿ ಹಿಡಿಕಟ್ಟುಗಳಿರುತ್ತವೆ. ಈ ಹಿಡಿಕಟ್ಟುಗಳು ಸುರಕ್ಷಿತ ಮತ್ತು ಭದ್ರವಾಗಿರುತ್ತವೆ, ಇವು ಮೊದಲು ಬಳ್ಳಿಯ ಹಿಡಿಕಟ್ಟನ್ನು ಬಳಸಿ, ನಂತರ ಹೊಕ್ಕುಳಬಳ್ಳಿಯನ್ನು ಕತ್ತರಿಸಲು ಅನುವು ಮಾಡಿಕೊಡುತ್ತವೆ. ಬಳ್ಳಿಯನ್ನು ನಿರ್ಬಂಧಿಸಿ, ಕತ್ತರಿಸಿದ ನಂತರ, ನವಜಾತ ಶಿಶು ಅದರ ನಾಭಿಯ ಭಾಗದಲ್ಲಿ ಒಂದು ಪ್ಲ್ಯಾಸ್ಟಿಕ್ ಕ್ಲಿಪ್ಅನ್ನು ಹೊಂದಿರುತ್ತದೆ, ಇದು ಬಳ್ಳಿಯ ಸಂಕುಚಿತ ಭಾಗವು ಒಣಗಿ, ಸರಿಯಾಗಿ ಮುಚ್ಚಿಕೊಳ್ಳುವವರೆಗೆ ಇರುತ್ತದೆ. ಹೊಕ್ಕುಳಿನ ಉಳಿಕೆಯು ಸುಮಾರು ೭–೧೦ ದಿನಗಳವರೆಗೆ ಉಳಿಯುತ್ತದೆ, ನಂತರ ಒಣಗಿ ಬಿದ್ದುಹೋಗುತ್ತದೆ.
ಬೇಗನೆಯ ಮತ್ತು ತಡವಾದ ನಿರ್ಬಂಧಿಸುವಿಕೆ
ಬೇಗನೆಯ ಮತ್ತು ತಡವಾದ ಹೊಕ್ಕುಳಬಳ್ಳಿಯ ನಿರ್ಬಂಧಿಸುವಿಕೆಯ ಆರೋಗ್ಯ ಪರಿಣಾಮಗಳು ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಿನ ಗಮನವನ್ನು ಸೆಳೆಯುತ್ತಿವೆ.[೧೧][೧೨][೧೩]
ತಡವಾದ ನಿರ್ಬಂಧಿಸುವಿಕೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ: ಮನೆಯಲ್ಲೇ ಸಂಭವಿಸಿದ ಮಗುವಿನ ಜನನದ ಬಗೆಗಿನ ೬-ವರ್ಷ ಅವಧಿಯ ಇತ್ತೀಚಿನ ವಿಶ್ಲೇಷಣೆಯೊಂದು, ತಡವಾದ ಹೊಕ್ಕುಳಬಳ್ಳಿಯ ನಿರ್ಬಂಧಿಸುವಿಕೆಯ ಪರಿಣಾಮವಾಗಿ ಯಾವುದೇ ಶಿಶುಗಳು ಪ್ರತಿಕೂಲ ಪರಿಣಾಮವನ್ನು ಅನುಭವಿಸಿಲ್ಲವೆಂದು ವರದಿ ಮಾಡಿದೆ.[೧೪] ಒಂದು ಮೆಟಾ-ವಿಶ್ಲೇಷಣೆಯು[೧೫], ಗರ್ಭಧಾರಣೆಯ ಪೂರ್ಣಾವಧಿಯ ನವಜಾತ ಶಿಶುವಿನಲ್ಲಿ ಜನನದ ನಂತರ ಸುಮಾರು ೨ ನಿಮಿಷಗಳವರೆಗೆ ಹೊಕ್ಕುಳಬಳ್ಳಿಯ ತಡವಾದ ನಿರ್ಬಂಧಿಸುವಿಕೆಯು, ಆ ಮಗುವಿಗೆ ಹೆಚ್ಚಿನ ಹೆಮಟೊಕ್ರಿಟ್ಅನ್ನು, ಫೆರಿಟಿನ್ ಪ್ರಮಾಣ ಮತ್ತು ಸಂಗ್ರಹ ಕಬ್ಬಿಣಾಂಶದಿಂದ ಅಂದಾಜಿಸಬಹುದಾದ ಕಬ್ಬಿಣ-ಸ್ಥಿತಿಯನ್ನು ನೀಡುವಲ್ಲಿ ಪ್ರಯೋಜನಕಾರಿಯಾಗಿರುತ್ತದೆ ಹಾಗೂ ರಕ್ತಕ್ಷೀಣತೆಯ ಅಪಾಯವನ್ನು ಕಡಿಮೆ ಮಾಡುತ್ತದೆ (ತುಲನಾತ್ಮಕ ಅಪಾಯ, ೦.೫೩; ೯೫% CI, ೦.೪೦-೦.೭೦) ಎಂದು ತೋರಿಸಿಕೊಟ್ಟಿದೆ.[೧೫] ಕ್ಷೀಣತೆಯು ೨೦೦೮ರ ಅಧ್ಯಯನದಲ್ಲೂ ಕಂಡುಬಂದಿದೆ.[೧೪] ೨೦೦೮ರ ಒಂದು ಕೊಕ್ರೇನ್ ಅವಲೋಕನವು, ೨ ತಿಂಗಳಲ್ಲಿ ಹೆಚ್ಚಿನ ಹೀಮೋಗ್ಲೋಬಿನ್ ಪ್ರಮಾಣವಿದ್ದರೂ, ಈ ಪರಿಣಾಮವು ೬ ತಿಂಗಳ ನಂತರವೂ ಉಳಿಯುವುದಿಲ್ಲ ಎಂದು ತೋರಿಸಿದೆ.[೧೬]
ಹೊಕ್ಕುಳಬಳ್ಳಿಯ ತಡವಾದ ನಿರ್ಬಂಧಿಸುವಿಕೆಯ ಋಣಾತ್ಮಕ ಪರಿಣಾಮವೆಂದರೆ ಇದರಿಂದ ಪಾಲಿಸಿತಿಮಿಯ ಕಂಡುಬರುವ ಹೆಚ್ಚಿನ ಸಂಭವವಿದೆ. ಇನ್ನೂ ಈ ಸ್ಥಿತಿಯು ಅಧ್ಯಯನಗಳಲ್ಲಿ ಅಷ್ಟೊಂದು ತೀವ್ರತೆಯನ್ನು ಹೊಂದಿಲ್ಲ.[೧೫] ೨೦೦೮ರ ಕೊಕ್ರೇನ್ ಅವಲೋಕನವು, ಜನನವಾದ ೬೦ ಸೆಕೆಂಡುಗಳ ನಂತರ ಹೊಕ್ಕುಳಬಳ್ಳಿಯ ನಿರ್ಬಂಧಿಸುವಿಕೆಯು ಕಂಡುಬಂದ ಶಿಶುಗಳು ಫೋಟೋಥೆರಪಿ ಬೇಕಾಗುವ ನವಜಾತಶಿಶುವಿನ ಕಾಮಾಲೆಗೆ ತುತ್ತಾಗುವ ಹೆಚ್ಚಿನ ಸಂಭವವಿದೆಯೆಂದು ಕಂಡುಹಿಡಿದಿದೆ.[೧೬] ಪ್ರತಿಯಾಗಿ, ೨೦೦೮ರ ಎಕ್ಸಾಮಿನೇಶನ್ ಆಫ್ ದಿ ನ್ಯೂಬೋರ್ನ್ ಆಂಡ್ ನಿಯೊನಟಲ್ ಹೆಲ್ತ್ ನಲ್ಲಿ ಸೂಚಿಸಲಾದ ಯಾದೃಚ್ಛಿಕ ನಿಯಂತ್ರಿತ ಪ್ರಯೋಗವೊಂದು, ನವಜಾತ ಶಿಶುವಿನ ಅಭಿಧಮನಿಯ ಹೆಮಟೊಕ್ರಿಟ್‌ನಲ್ಲಿನ ಹೊಕ್ಕುಳಬಳ್ಳಿಯ ನಿರ್ಬಂಧಿಸುವಿಕೆಯ ಸಮಯವನ್ನು ಹೋಲಿಸಿ, ಹೊಕ್ಕುಳಬಳ್ಳಿಗಳನ್ನು ತಕ್ಷಣವೇ ನಿರ್ಬಂಧಿಸಿದ ಶಿಶುಗಳು ರಕ್ತಹೀನತೆಯು ಕಂಡುಬರುವ ಸಂಭವವು ಹೆಚ್ಚಿದೆಯೆಂದು ವರದಿ ಮಾಡಿದೆ.
ತಡವಾದ ನಿರ್ಬಂಧಿಸುವಿಕೆಯನ್ನು ಆರೋಗ್ಯ ಕಾಳಜಿ ಒದಗಿಸುವವರು ಸೂಚಿಸುವುದಿಲ್ಲ, ಏಕೆಂದರೆ ಇದರಲ್ಲಿ ನವಜಾತ ಶಿಶುಗಳಿಗೆ ಸರಿಯಾಗಿ ಉಸಿರಾಡಲು ಸಾಧ್ಯವಾಗುವುದಿಲ್ಲ ಹಾಗೂ ಮತ್ತೆ ಪ್ರಜ್ಞೆಗೆ ತರಬೇಕಾಗುತ್ತದೆ. ಬದಲಿಗೆ ಅವರು ತಕ್ಷಣವೇ ನಿರ್ಬಂಧಿಸಲು ಮತ್ತು ಹೊಕ್ಕುಳಬಳ್ಳಿಯನ್ನು ಕತ್ತರಿಸಿ, ಹೃದಯ-ಶ್ವಾಸಕೋಶದ ಮತ್ತೆ ಪ್ರಜ್ಞೆಗೆ ತರುವ ಕ್ರಿಯೆಯನ್ನು ನಿರ್ವಹಿಸುವಂತೆ ಸೂಚಿಸುತ್ತಾರೆ.[೧೭] ಹೊಕ್ಕುಳಬಳ್ಳಿಯು ಮಿಡಿಯುತ್ತಿದ್ದರೂ ಶಿಶುವು ಸಾಕಷ್ಟು ಆಮ್ಲಜನಕವನ್ನು ಪಡೆಯುತ್ತಿದೆಯೆಂದು ಖಾತರಿಯಾಗಿರುವುದಿಲ್ಲ.[೧೮]
ಹೊಕ್ಕುಳಿನ ಅವಿಚ್ಛೇದನ
ಕೆಲವು ಪೋಷಕರು ಹೊಕ್ಕುಳಬಳ್ಳಿಯ ವಿಚ್ಛೇದನವನ್ನು ಸಂಪೂರ್ಣವಾಗಿ ಬಿಟ್ಟುಬಿಡಲು ಆಶಿಸುತ್ತಾರೆ, ಈ ಕ್ರಿಯೆಯನ್ನು "ಲೋಟಸ್ ಬರ್ತ್" ಅಥವಾ ಹೊಕ್ಕುಳಿನ ಅವಿಚ್ಛೇದನವೆಂದು ಕರೆಯಲಾಗುತ್ತದೆ. ಹಾನಿಗೊಳಗಾಗದ ಸಂಪೂರ್ಣ ಹೊಕ್ಕುಳಬಳ್ಳಿಯನ್ನು ಸ್ನಾಯುರಜ್ಜುವಿನಂತೆ ಒಣಗಲು ಬಿಡಲಾಗುತ್ತದೆ, ಅದು ನಂತರ ಸಹಜವಾಗಿ ಬಿದ್ದುಹೋಗುತ್ತದೆ (ಜನನವಾದ ೩ನೇ ವಾರದ ನಂತರ) ಮತ್ತು ಗುಣಮುಖವಾದ ಹೊಕ್ಕುಳು ಉಳಿಯುತ್ತದೆ.[೧೯]
ಹೊಕ್ಕುಳಬಳ್ಳಿಯ ಕ್ಯಾತಿಟರ್ ತೂರಿಸುವಿಕೆ
ಹೊಕ್ಕುಳಿನ ಅಭಿಧಮನಿಯು ಕೇಂದ್ರ ರಕ್ತಪರಿಚಲನೆಗೆ ನೇರವಾಗಿ ಸಂಪರ್ಕಿಸಿರುವುದರಿಂದ, ಇದನ್ನು ಒಳಸೇರಿಸುವುದಕ್ಕಾಗಿ ಮತ್ತು ಔಷಧಿಗಳನ್ನು ಪೂರೈಸುವುದಕ್ಕಾಗಿ ಅಭಿಧಮನಿ ಕ್ಯಾತಿಟರ್ಅನ್ನು ಇರಿಸಲು ಒಂದು ಮಾರ್ಗವಾಗಿ ಬಳಸಲಾಗುತ್ತದೆ. ಹೊಕ್ಕುಳಿನ ಅಭಿಧಮನಿ ಕ್ಯಾತಿಟರ್, ಚರ್ಮೀಯ ಹೊರಮೈಯ ಅಥವಾ ಕೇಂದ್ರ ಅಭಿಧಮನಿ ಕ್ಯಾತಿಟರ್‌ಗಳು ಅಥವಾ ಇಂಟ್ರೋಸಿಯಸ್ ಕ್ಯಾನುಲಾಸ್‌ನ ಒಂದು ವಿಶ್ವಾಸಾರ್ಹ ಪರ್ಯಾಯವಾಗಿದೆ.
ಬಳ್ಳಿಯ ರಕ್ತ ಸಂಗ್ರಹ
ಬಳ್ಳಿಯ ರಕ್ತ ಎಂದು ಕರೆಯಲಾಗುವ ಹೊಕ್ಕುಳಬಳ್ಳಿಯೊಳಗಿನ ರಕ್ತವು ಪ್ರಾಥಮಿಕ, ವ್ಯತ್ಯಾಸ ತೋರಿಸದ ಕಾಂಡಕೋಶಗಳ (CD೩೪-ಧನಾತ್ಮಕ ಮತ್ತು CD೩೮-ಋಣಾತ್ಮಕ ಪ್ರಕಾರದ) ಬಹುಅಂಶಗಳನ್ನೊಳಗೊಂಡ ಮತ್ತು ಸುಲಭವಾಗಿ ಲಭ್ಯವಾಗುವ ಮೂಲವಾಗಿದೆಯೆಂದು ಇತ್ತೀಚೆಗೆ ಕಂಡುಹಿಡಿಯಲಾಗಿದೆ. ಈ ಬಳ್ಳಿಯ ರಕ್ತ ಜೀವಕೋಶಗಳನ್ನು ಎಲುಬಿನ ಮಜ್ಜೆಯ ಕಸಿ ಮಾಡುವಿಕೆಗೆ ಬಳಸಲಾಗುತ್ತದೆ.
ಕೆಲವು ಪೋಷಕರು ಶಿಶುವಿನ ಹೊಕ್ಕುಳಿನ ರಕ್ತದಿಂದ ಪಡೆದ ಈ ರಕ್ತವನ್ನು ಬೇಗನೆಯ ಬಳ್ಳಿಯ ನಿರ್ಬಂಧಿಸುವಿಕೆ ಮತ್ತು ಕತ್ತರಿಸುವಿಕೆಯ ಮೂಲಕ ದೀರ್ಘಕಾಲದವರೆಗೆ ಸಂಗ್ರಹಿಸುವುದಕ್ಕಾಗಿ ಫ್ರೀಜ್ ಮಾಡಲು ಬಳ್ಳಿ-ರಕ್ತ ಬ್ಯಾಂಕ್‌ಗೆ ವರ್ಗಾಯಿಸುತ್ತಾರೆ. ನಂತರ ಮಗುವಿಗೆ ಬಳ್ಳಿಯ-ರಕ್ತದ ಕಾಂಡಕೋಶಗಳು ಬೇಕಾದಾಗ (ಉದಾಹರಣೆಗೆ, ಲುಕೀಮಿಯಕ್ಕೆ ಚಿಕಿತ್ಸೆ ನೀಡುವಾಗ ಹಾನಿಗೊಳಗಾದ ಎಲುಬಿನ ಮಜ್ಜೆಯ ಬದಲಿಗೆ) ಅದನ್ನು ಬಳಸಿಕೊಳ್ಳುತ್ತಾರೆ. ಈ ಕ್ರಿಯೆಯು ವಿವಾದಾತ್ಮಕವಾಗಿದೆ. ಜನನದ ಸಂದರ್ಭದಲ್ಲಿ ಬೇಗನೆ ಬಳ್ಳಿಯ ರಕ್ತ ಪಡೆಯುವಿಕೆಯು ನಿಜವಾಗಿ ಮಗುವಿನಲ್ಲಿ ಕಾಯಿಲೆ ಬರುವ ಸಂಭವವನ್ನು ಹೆಚ್ಚಿಸುತ್ತದೆ; ಏಕೆಂದರೆ ಈ ಸಂದರ್ಭದಲ್ಲಿ ಮಗುವಿನ ಒಟ್ಟು ರಕ್ತ-ಪೂರೈಕೆಗೆ (ಸುಮಾರು ೩೦೦ml) ಹೋಲಿಸಿದರೆ ಹೆಚ್ಚಿನ ಪ್ರಮಾಣದ ರಕ್ತವನ್ನು (ಸರಾಸರಿ ೧೦೮ml) ತೆಗೆಯಲಾಗುತ್ತದೆ ಎಂಬ ಟೀಕೆಗಳಿವೆ.[೧೪] ರಾಯಲ್ ಕಾಲೇಜ್ ಆಫ್ ಆಬ್‌ಸ್ಟ್ರೆಟ್ರಿಶಿಯನ್ಸ್ ಆಂಡ್ ಗೈನಕಾಲಜಿಸ್ಟ್ಸ್ ೨೦೦೬ರಲ್ಲಿ ಹೀಗೆಂದು ಹೇಳಿದೆ - "ವಾಣಿಜ್ಯ ಬಳ್ಳಿಯ-ರಕ್ತ ಸಂಗ್ರಹ ಮತ್ತು ಕಾಂಡ-ಕೋಶದ ಸಂಗ್ರಹವನ್ನು ಕಡಿಮೆ-ಅಪಾಯವನ್ನು ಹೊಂದಿರುವ ಕುಟುಂಬಗಳಿಂದ ಮಾಡಲಾಗಿದೆಯೆಂಬ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರವು ಲಭ್ಯವಿಲ್ಲ".
ಸ್ವಬಳಕೆಗಾಗಿ ಮಾಡುವ ಬಳ್ಳಿಯ-ರಕ್ತ ಸಂಗ್ರಹವನ್ನು ವಿರೋಧಿಸಬೇಕು (ಏಕೆಂದರೆ ಕಾಂಡಕೋಶಗಳನ್ನು ಬಳಸುವ ಅಗತ್ಯತೆಯ ಹೆಚ್ಚಿನ ಸ್ಥಿತಿಗಳು ಬಳ್ಳಿಯ-ರಕ್ತದಲ್ಲಿ ಅದಾಗಲೇ ಇರುತ್ತವೆ) ಸಾಮಾನ್ಯ ಬಳಕೆಗಾಗಿ ಮಾಡುವ ಸಂಗ್ರಹವನ್ನು ಪ್ರೋತ್ಸಾಹಿಸಬೇಕೆಂದು ಅಮೆರಿಕನ್ ಅಕಾಡೆಮಿ ಆಫ್ ಪೆಡಿಯಾಟ್ರಿಕ್ಸ್ ಹೇಳಿದೆ.[೨೦] ಭವಿಷ್ಯದಲ್ಲಿ ಬಳ್ಳಿಯ-ರಕ್ತದಿಂದ ಪಡೆದ ಭ್ರೂಣದ-ರೀತಿಯ ಕಾಂಡಕೋಶಗಳನ್ನು (CBEs) ಸಂಗ್ರಹಿಸಿ, ರಕ್ತ ಮತ್ತು ಕಸಿಮಾಡಿದ ಅಂಗಾಂಶಗಳಂತೆ ಇತರ ರೋಗಿಗಳೊಂದಿಗೆ ಸರಿಹೊಂದಿಸಬಹುದು. CBE ಗಳ ಬಳಕೆಯು ಭ್ರೂಣದ ಕಾಂಡಕೋಶಗಳೊಂದಿಗೆ (ESC) ಸಂಬಂಧಿಸಿದ ಎತಿಕಲ್(ಸಾರ್ವಜನಿಕವಾಗಿ ದೊರೆಯದೆ ಸಾಮಾನ್ಯವಾಗಿ ವೈದ್ಯರ ಅನುಮತಿಯಿಂದ ಮಾತ್ರ ದೊರೆಯುವ) ಕಷ್ಟಗಳನ್ನು ಪ್ರಬಲವಾಗಿ ಕಡಿಮೆಮಾಡಬಹುದು.[೨೧]
ಅಮೆರಿಕನ್ ಅಕಾಡೆಮಿ ಆಫ್ ಪೆಡಿಯಾಟ್ರಿಕ್ಸ್ ವೈದ್ಯಕೀಯ ಅಗತ್ಯತೆಯಿಲ್ಲದೆ ಖಾಸಗಿಯಾಗಿ ಸಂಗ್ರಹಿಸುವುದನ್ನು ವಿರೋಧಿಸುತ್ತದೆ. ಅಲ್ಲದೆ ಇದು ಬಳ್ಳಿಯ-ರಕ್ತವನ್ನು ಸಂಗ್ರಹಿಸುವುದರ ಮತ್ತು ಕಸಿಮಾಡುವುದರ ಪ್ರಬಲ ಪ್ರಯೋಜನಗಳು ಮತ್ತು ಮಿತಿಗಳ ಬಗ್ಗೆ ಮಾಹಿತಿಯನ್ನು ಒದಗಿಸಬೇಕು, ಆ ಮೂಲಕ ಪೋಷಕರು ಮಾಹಿತಿಯುಕ್ತ ನಿರ್ಧಾರವನ್ನು ಮಾಡಬಹುದು ಎಂದು ಹೇಳುತ್ತದೆ.
ಬಳ್ಳಿಯ-ರಕ್ತದ ಶಿಕ್ಷಣಕ್ಕೆ ಫೆಡರಲ್ ಮತ್ತು ರಾಜ್ಯ ಮಟ್ಟದಲ್ಲಿ ಶಾಸಕರೂ ಸಹ ಬೆಂಬಲವನ್ನು ನೀಡಿದ್ದಾರೆ. ೨೦೦೫ರಲ್ಲಿ, ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್, ಇನ್‌ಸ್ಟಿಟ್ಯೂಟ್ ಆಫ್ ಮೆಡಿಸಿನ್ (IoM) ವರದಿ Archived 2009-11-23 ವೇಬ್ಯಾಕ್ ಮೆಷಿನ್ ನಲ್ಲಿ. ಯೊಂದನ್ನು ಪ್ರಕಟಿಸಿತು. ಇದು ಗರ್ಭಿಣಿಯರಿಗೆ ಬಳ್ಳಿಯ-ರಕ್ತ ಸಂಗ್ರಹವನ್ನು ಆಯ್ಕೆ ಮಾಡುವ ಬಗ್ಗೆ ಒಂದು ಸಮತೋಲಿತ ಚಿತ್ರಣವನ್ನು ನೀಡಬೇಕು ಎಂದು ಸೂಚಿಸಿದೆ. ತಮ್ಮ ಪ್ರತಿನಿಧಿ ನೇಮಕಗಾರರಿಗೆ ಪ್ರತಿಯಾಗಿ ರಾಷ್ಟ್ರದಾದ್ಯಂತದ ರಾಜ್ಯ ಶಾಸಕರು, ಜೀವ-ಉಳಿಸುವ ನವಜಾತ ಶಿಶುವಿನ ಕಾಂಡಕೋಶಗಳನ್ನು ದಾನಮಾಡುವ, ಎಸೆದುಬಿಡುವ ಅಥವಾ ಸಂಗ್ರಹಿಸುವ ಆಯ್ಕೆಗಳ ಬಗ್ಗೆ ವೈದ್ಯರಿಗೆ ಮತ್ತು ಗರ್ಭಿಣಿಯರಿಗೆ ಮಾಹಿತಿ ನೀಡುವ ಉದ್ದೇಶವನ್ನು ಹೊಂದಿರುವ ಕಾನೂನನ್ನು ರಚಿಸುತ್ತಿದ್ದಾರೆ. ಪ್ರಸ್ತುತ U.S. ಜನನದ ಮೂರನೇ-ಎರಡು ಭಾಗವನ್ನು ಆವರಿಸಿರುವ ೧೭ ರಾಜ್ಯಗಳು IoM ಮಾರ್ಗದರ್ಶನದಿಂದ ಕಾನೂನನ್ನು ಶಿಫಾರಸು ಮಾಡಿವೆ.
ವೈದ್ಯಕೀಯದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಬಹುದಾದ ಈ ಕ್ಷೇತ್ರದಲ್ಲಿನ ಸಂಶೋಧನೆಯು ಅತಿ ಶೀಘ್ರದಲ್ಲಿ ಅಭಿವೃದ್ಧಿಯಾಗುತ್ತಿದೆ ಹಾಗೂ ಇದು ವೃತ್ತಿಪರ ವೈದ್ಯಕೀಯ ಸಮಾಜಕ್ಕೆ ಮತ್ತು ಗರ್ಭಿಣಿಯರು ಮಾಹಿತಿ ಪಡೆಯಲು ಅವಲಂಬಿಸಿದ ಇತರ ಮೂಲಗಳಿಗೆ ಪ್ರಗತಿಯನ್ನು ಮುಂದುವರಿಸಲು ಕಷ್ಟಕರವಾಗಿದೆ.
ವೈದ್ಯರು ಮತ್ತು ಸಂಶೋಧಕರು ಕ್ಯಾನ್ಸರ್ ಮತ್ತು ರಕ್ತದ ಕಾಯಿಲೆಗಳಿಗೆ ಚಿಕಿತ್ಸೆಯನ್ನು ನೀಡಲು ಹೊಕ್ಕುಳಬಳ್ಳಿ ರಕ್ತದ ಕಾಂಡಕೋಶಗಳ ಬಳಕೆಯ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಪ್ರಮುಖ ಪ್ರಯತ್ನವನ್ನು ಮಾಡುತ್ತಿದ್ದಾರೆ. ಮಾನವರಲ್ಲಿ ಮಿದುಳಿನ ಗಾಯ[೨೨] ಮತ್ತು ಪ್ರಕಾರ ೧ ಮಧುಮೇಹ[೨೩] ಮೊದಲಾದ ರೋಗಗಳಿಗೆ ಚಿಕಿತ್ಸೆ ನೀಡಲು ಬಳ್ಳಿಯ-ರಕ್ತದ ಕಾಂಡಕೋಶಗಳ ಬಳಕೆಯ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ ಮತ್ತು ಪಾರ್ಶ್ವವಾಯುವಿನ ಹೊಡೆತ[೨೪][೨೫] ಮತ್ತು ಕೇಳದಿರುವಿಕೆಯ ಚಿಕಿತ್ಸೆ ನೀಡಲು ಇದರ ಬಳಕೆಯ ಬಗ್ಗೆ ಆರಂಭಿಕ ಹಂತದ ಸಂಶೋಧನೆಯು ಪ್ರಗತಿಯಲ್ಲಿದೆ.[೨೬]
ಖಾಸಗಿ ಮತ್ತು ಸಾರ್ವಜನಿಕ ಬಳ್ಳಿಯ-ರಕ್ತದ ಸಂಗ್ರಹದ ನಡುವಿನ ಮೂಲಭೂತ ವ್ಯತ್ಯಾಸಗಳನ್ನು ಗಮನಿಸಬೇಕು. ಖಾಸಗಿಯಾಗಿ ಶೇಖರಿಸುವ ಬಳ್ಳಿಯ-ರಕ್ತದ ಸಂಗ್ರಹವು ಅದನ್ನು ನೀಡಿದ ಮಗುವಿಗೆ ಮಾತ್ರ ಮೀಸಲಾಗಿರುತ್ತದೆ. ಇದಕ್ಕೆ ವಿರುದ್ಧವಾಗಿ, ಸಾರ್ವಜನಿಕ ಸಂಗ್ರಹದಲ್ಲಿ ಶೇಖರಿಸಿದ ಬಳ್ಳಿಯ-ರಕ್ತವನ್ನು ಹೆಚ್ಚು ಹತ್ತಿರದಿಂದ ಸರಿಹೊಂದುವ ಅಂಗಾಶ ಪ್ರಕಾರವನ್ನು ಹೊಂದಿರುವ ಯಾರಾದರೂ ಪಡೆಯಬಹುದು. ಸಾರ್ವಜನಿಕ ಮತ್ತು ಖಾಸಗಿ ಪದಗಳು ಆ ರಕ್ತವನ್ನು ನೀಡುವ ಮೂಲವನ್ನು ಸೂಚಿಸದೆ ಬದಲಿಗೆ ಬಳಕೆ ಲಭ್ಯತೆಯನ್ನು ನಿರೂಪಿಸುತ್ತವೆ.
ಸಾರ್ವಜನಿಕ ಸಂಗ್ರಹದಿಂದ ಬಳ್ಳಿಯ-ರಕ್ತದ ಬಳಕೆಯು ಅತಿ ಶೀಘ್ರದಲ್ಲಿ ಬೆಳೆಯುತ್ತಿದೆ. ಪ್ರಸ್ತುತ ಇದನ್ನು ಲೂಕೀಮಿಯ ಮೊದಲಾದ ರಕ್ತದ ಕಾಯಿಲೆಗಳ ಚಿಕಿತ್ಸೆಯ ಸಂದರ್ಭದಲ್ಲಿ ಎಲುಬಿನ ಮಜ್ಜೆಯ ಕಸಿ ಮಾಡುವಿಕೆಯಲ್ಲಿ ಬಳಸಲಾಗುತ್ತದೆ. ಒಂದು ದಾಖಲೆಯ Netcord ಮೂಲಕ ಕಸಿ ಮಾಡುವಿಕೆಗೆ ಈ ರಕ್ತವನ್ನು ನೀಡಲಾದ ಸಂಖ್ಯೆಯು ೯೦೦೦ ಅನ್ನು ದಾಟಿದೆ. ರೋಗಿಗಳು ಸರಿಹೊಂದುವ ಎಲುಬಿನ ಮಜ್ಜೆಯನ್ನು ನೀಡುವವರು ಕಂಡುಬರದಿದ್ದುದರಿಂದ ಈ ರಕ್ತವನ್ನು ಪಡೆದಿದ್ದಾರೆ. ರಕ್ತ ದಾನಿಗಳ ಈ ಪ್ರಬಲ ಪ್ರಮಾಣವು ಸಾರ್ವಜನಿಕ ಸಂಗ್ರಹಗಳ ಸಂಖ್ಯೆಯನ್ನು ಹೆಚ್ಚಿಸಿತು.
ನಿರ್ದಿಷ್ಟ ವ್ಯಕ್ತಿಗಳಿಗಾಗಿ ಶೇಖರಿಸುವ ಖಾಸಗಿ ಸಂಗ್ರಹಗಳು ಬಳ್ಳಿಯ-ರಕ್ತದ ಬಳಕೆಗಳು ಮತ್ತು ಭವಿಷ್ಯದ ತಂತ್ರಜ್ಞಾನಗಳ ಉದ್ದೇಶದಲ್ಲಿ ಸಂಗ್ರಹಿಸುತ್ತವೆ. ಖಾಸಗಿ ಸಂಗ್ರಹಕ್ಕೆ ಇದು ಒಂದು ಮಾನ್ಯ ಕಾರಣವಾದರೂ, ಲೂಕೀಮಿಯಾದಂತಹ ಅನೇಕ ಕಾಯಿಲೆಗಳಿಗೆ ನಿಮ್ಮ ಸ್ವಂತ ಮಗುವಿನ ಬಳ್ಳಿಯ-ರಕ್ತವನ್ನು ಬಳಸದೆ ಇರುವುದು ಉತ್ತಮವೆಂಬುದನ್ನು ಗಮನಿಸಬೇಕು. ಏಕೆಂದರೆ ಆ ಕಾಯಿಲೆಯು ನಿಮ್ಮ ಮಗುವಿನ ಬಳ್ಳಿಯ-ರಕ್ತದಲ್ಲಿ ಗುಪ್ತವಾದ ಸ್ಥಿತಿಯಲ್ಲಿರಬಹುದು ಮತ್ತು ಗ್ರಾಫ್ಟ್-ವರ್ಸಸ್-ಟ್ಯೂಮರ್ ಪರಿಣಾಮವು ಕಂಡುಬರಬಹುದು.
ಇತರ ಸಸ್ತನಿಗಳ ಹೊಕ್ಕುಳಬಳ್ಳಿ
ಅಂಗರಚನಾ ಶಾಸ್ತ್ರ
ಕೆಲವು ಸಸ್ತನಿಗಳ ಹೊಕ್ಕುಳಬಳ್ಳಿಯು ಒಂದರ ಬದಲಿಗೆ (ಮಾನವರಲ್ಲಿರುವಂತೆ) ಎರಡು ವಿಭಿನ್ನ ಹೊಕ್ಕುಳಿನ ಅಭಿಧಮನಿಗಳನ್ನು ಹೊಂದಿರುತ್ತದೆ. ಉದಾರಹರಣೆಗಳೆಂದರೆ ದನ ಮತ್ತು ಕುರಿ .[೨೭]
ಬಳ್ಳಿಯ ನಿರ್ವಹಣೆ
ಕೆಲವು ಪ್ರಾಣಿಗಳಲ್ಲಿ, ತಾಯಿ-ಪ್ರಾಣಿಯು ಹೊಕ್ಕುಳಬಳ್ಳಿಯನ್ನು ಕಚ್ಚುವ ಮೂಲಕ ಜರಾಯುವನ್ನು ತನ್ನ ಮರಿಯಿಂದ ಬೇರ್ಪಡಿಸುತ್ತದೆ. ಹೆಚ್ಚಾಗಿ ಇದನ್ನು (ಜರಾಯುವಿನೊಂದಿಗೆ) ತಾಯಿ-ಪ್ರಾಣಿಯುತಿನ್ನುತ್ತದೆ, ಅದು ಪೋಷಣೆಯನ್ನು ಒದಗಿಸಲು ಮತ್ತು ಪರಭಕ್ಷಕಗಳು ಆಕರ್ಷಣೆಗೊಳಗಾಗದಂತೆ ಅಂಗಾಂಶವನ್ನು ನಿರ್ವಹಿಸಲು ಹೀಗೆ ಮಾಡುತ್ತದೆ. ಚಿಂಪಾಂಜಿಗಳಲ್ಲಿ, ತಾಯಿಯು ಹೊಕ್ಕುಳ-ಬಳ್ಳಿಯ ಬೇರ್ಪಡಿಸುವಿಕೆಗೆ ಯಾವುದೇ ಗಮನವನ್ನು ಹರಿಸುವುದಿಲ್ಲ, ಬದಲಿಗೆ ಹೊಕ್ಕುಳಬಳ್ಳಿ, ಜರಾಯು ಮತ್ತು ಎಲ್ಲದರೊಂದಿಗೆ ತನ್ನ ಮಗುವಿನ ಆರೈಕೆ ಮಾಡುವ ಬಗ್ಗೆ ಕೇಂದ್ರೀಕರಿಸುತ್ತದೆ. ಹೊಕ್ಕುಳಬಳ್ಳಿಯು ಮರಿಹಾಕಿದ ಒಂದು ದಿನದೊಳಗೆ ಒಣಗಿ ಬೇರ್ಪಡುತ್ತದೆ. (ಇದನ್ನು ಮೊದಲು ೧೯೭೪ರಲ್ಲಿ ಪ್ರಾಣಿವಿಜ್ಞಾನಿಗಳು ವನ್ಯ ಜೀವಿಗಳಲ್ಲಿ ಕಂಡುಹಿಡಿದರು).[೨೮])
"ಹೊಕ್ಕುಳಬಳ್ಳಿ" ಪದದ ಇತರ ಬಳಕೆಗಳು
"ಹೊಕ್ಕುಳಬಳ್ಳಿ" ಅಥವಾ ಕೇವಲ "ಹೊಕ್ಕುಳು" ಪದವನ್ನು ಅಂತಹುದೇ ಕಾರ್ಯಗಳನ್ನು ಮಾಡುವ ಇತರ ಬಳ್ಳಿಗಳನ್ನು ಸೂಚಿಸಲೂ ಬಳಸಲಾಗುತ್ತದೆ, ಉದಾಹರಣೆಗೆ ಮೇಲ್ಮೈಯಿಂದ-ಪೂರೈಸಲ್ಪಡುವ ಮುಳುಗುಗಾರನನ್ನು ಆತನಿಗೆ ಗಾಳಿ ಮತ್ತು ಬಿಸಿಯನ್ನು ಒದಗಿಸುವ ಮೇಲ್ಮೆ ಪೂರೈಕೆಯೊಂದಿಗೆ ಸಂಪರ್ಕಿಸುವ ಮೃದು ನೀರ್ಕೊಳವಿ, ಆಕಾಶ-ಪೋಷಾಕನ್ನು ಧರಿಸಿರುವ ಅಂತರಿಕ್ಷಯಾನಿಯನ್ನು ಆತನ ಬಾಹ್ಯಾಕಾಶ ನೌಕೆಯೊಂದಿಗೆ ಸಂಪರ್ಕಿಸುವ ಕೊಳವೆ. ವಿಶೇಷವಾಗಿ ವಿವಿಧ ಬಣ್ಣಗಳು, ದಪ್ಪ ಮತ್ತು ಪ್ರಕಾರದ ಹಲವಾರು ವಾಹಕಗಳಿಂದ ರಚಿತವಾದ, ಬಹು-ಸಂಪರ್ಕಗಳಲ್ಲಿ ಒಂದರ ಸಂಪರ್ಕ ಕಡಿದರೆ ಸಂಪೂರ್ಣವಾಗಿ ಕೊನೆಗೊಳ್ಳುವ, ಒಂದು ಘಟಕವನ್ನು ಸಂಪರ್ಕಿಸುವ ಸಂಕೀರ್ಣ ಅಥವಾ ನಿರ್ಣಾಯಕ ಕೇಬಲ್ಅನ್ನು ವಿವರಿಸಲು ಇಂಜಿನಿಯರ್‌ಗಳು ಕೆಲವೊಮ್ಮೆ ಈ ಪದವನ್ನು ಬಳಸುತ್ತಾರೆ.
"ಹೊಕ್ಕುಳಬಳ್ಳಿಯನ್ನು ಕತ್ತರಿಸುವುದು" ಎಂಬ ನುಡಿಗಟ್ಟನ್ನು ಹೆತ್ತವರಿಂದ ಮಕ್ಕಳು ದೂರವಾಗುವುದನ್ನು ಅಥವಾ ಯಾವುದೇ ವ್ಯಕ್ತಿಯು ಮತ್ತೊಬ್ಬರ ಮೇಲಿನ ಪರಾವಲಂಬನೆಯನ್ನು ನಿರ್ದಾಕ್ಷಿಣ್ಯವಾಗಿ ಕಡಿದುಹೋಗುವುದನ್ನು ನಿರೂಪಿಸಲು ಆಲಂಕಾರಿಕವಾಗಿ ಬಳಸಲಾಗುತ್ತದೆ.
ಹೆಚ್ಚುವರಿ ಚಿತ್ರಗಳು
-
ಹೊಕ್ಕುಳಬಳ್ಳಿಯ ಬೆಳವಣಿಗೆಯ ನಂತರದ ಹಂತವನ್ನು ತೋರಿಸುವ ಚಿತ್ರ.
-
ಗರ್ಭದ ಒಳಗವಚದಿಂದ ಸುತ್ತುವರಿದ ಸುಮಾರು ಎಂಟು ವಾರಗಳ ಭ್ರೂಣ.ಎರಡು ವ್ಯಾಸಗಳಷ್ಟು ಸ್ವಲ್ಪ ದೊಡ್ಡದಾಗಿ ಕಾಣುವಂತೆ ಮಾಡಲಾಗಿದೆ
-
ಮೂರನೇ ಮತ್ತು ನಾಲ್ಕನೇ ತಿಂಗಳಲ್ಲಿ ಗರ್ಭಿಣಿಯ ಗರ್ಭಕೋಶ ಜೋಡಣೆಯ ಚಿತ್ರಣ.
-
ಐದನೇ ಮತ್ತು ಆರನೇ ತಿಂಗಳಲ್ಲಿ ಗರ್ಭಕೋಶದಲ್ಲಿರುವ ಭ್ರೂಣ.
-
ಜರಾಯುಯುಕ್ತ ರಕ್ತಪರಿಚಲನೆಯ ಚಿತ್ರ.
-
ಹೃದಯದೊಂದಿಗೆ ಮಾನವನ ಭ್ರೂಣ ಮತ್ತು ಸೈನಸ್ ಅಭಿಧಮನಿ ಮತ್ತು ಅದರ ಕವಲುಗಳನ್ನು ತೋರಿಸಲು ಒಳಗಿನ ದೇಹದ-ಪೊರೆಯನ್ನು ತೆಗೆದುಹಾಕಲಾಗಿದೆ.
-
ಹುಟ್ಟಿ ಕೆಲವೇ ಸೆಕೆಂಡುಗಳಾದ ಶಿಶು.ಹೊಕ್ಕುಳಬಳ್ಳಿಯನ್ನು ಇನ್ನೂ ಕತ್ತರಿಸಿಲ್ಲ.
-
ಸಿಸೇರಿಯನ್ ವಿಭಾಗದಲ್ಲಿ ಜನಿಸಿದ ನವಜಾತ ಶಿಶು.
-
ನವಜಾತ ಶಿಶು ಮತ್ತು ತಾಯಿ, ಹುಟ್ಟಿದ ನಂತರದ ಹೊಕ್ಕುಳಿನ ಅವಿಚ್ಛೇದನ.
-
ಮನೆಯಲ್ಲಿ ಪ್ರಸವವಾದ ನಂತರ ಹೊಕ್ಕುಳಬಳ್ಳಿಯು ಕೂಡಿಕೊಂಡಿರುವ ನವಜಾತ ಶಿಶು.
-
ಹುಟ್ಟಿ ೪೫ ಸೆಕೆಂಡುಗಳಾದ ಶಿಶು, ಹೊಕ್ಕುಳಬಳ್ಳಿಗೆ ಹಿಡಿಕಟ್ಟನ್ನು ಹಾಕಲಾಗಿದೆ.
ಇವನ್ನೂ ಗಮನಿಸಿ
- ಹೊಕ್ಕುಳಿನ ರೇಖೆ
ಉಲ್ಲೇಖಗಳು
- ↑ ದಿ ಅಂಬಿಲಿಕಲ್ ಕಾರ್ಡ್
- ↑ ೨.೦ ೨.೧ ೨.೨ ೨.೩ Meyer WW, Rumpelt HJ, Yao AC, Lind J (1978). "Structure and closure mechanism of the human umbilical artery". Eur. J. Pediatr. 128 (4): 247–59. doi:10.1007/BF00445610. PMID 668732.
{cite journal}
: Unknown parameter|month=
ignored (help)CS1 maint: multiple names: authors list (link) - ↑ ೩.೦ ೩.೧ doi:10.1002/pd.1062
This citation will be automatically completed in the next few minutes. You can jump the queue or expand by hand - ↑ ಟ್ವೆಂಟಿ-ಒನ್ ಫ್ರೀಕ್ವೆಂಟ್ಲಿ ಆಸ್ಕ್ಡ್ ಕ್ವೆಶನ್ಸ್/ಆನ್ಸರ್ಸ್ ಕನ್ಸರ್ನಿಂಗ್ ಬರ್ತಿಂಗ್ ಪ್ರೊಸೀಜರ್ಸ್ ಆಂಡ್ ವ್ಯಾಸಿನೇಶನ್ಸ್ Archived 2011-07-14 ವೇಬ್ಯಾಕ್ ಮೆಷಿನ್ ನಲ್ಲಿ. - ಡಿ ಯಂಗ್ ಮತ್ತು ಜಿ. ಎಸ್. ಗೋಲ್ಡ್‌ಮ್ಯಾನ್/ಮೆಡಿಕಲ್ ವೆರಿಟಾಸ್ ೫ (೨೦೦೮). ಇ ಟರ್ನ್ ಸೈಟಿಂಗ್: ಗುಂತರ್ ಎಮ್. ದಿ ಟ್ರಾನ್ಸ್‌ಫರ್ ಆಫ್ ಬ್ಲಡ್ ಬಿಟ್ವೀನ್ ಬೇಬಿ ಆಂಡ್ ಪ್ಲಾಸೆಂಟ ಇನ್ ದಿ ಮಿನುಟ್ಸ್ ಆಫ್ಟರ್ ಬರ್ತ್. ಲ್ಯಾನ್ಸೆಟ್, ೧೯೫೭ ಜೂನ್ ೨೨;೨೭೨(೬೯೮೨):೧೨೭೭-೧jghhhjjjgch೨೮೦
- ↑ ಕಾಮನ್ ಕ್ವೆಶನ್ಸ್ ಎಬೌಟ್ ಲೋಟಸ್ ಬರ್ತ್ Archived 2010-12-17 ವೇಬ್ಯಾಕ್ ಮೆಷಿನ್ ನಲ್ಲಿ. ೨೦೦೯ರ ಜನವರಿ ೧೦ರಂದು ಮರುಸಂಪಾದಿಸಲಾಗಿದೆ
- ↑ Yao AC, Lind J, Lu T (1977). "Closure of the human umbilical artery: a physiological demonstration of Burton's theory". Eur. J. Obstet. Gynecol. Reprod. Biol. 7 (6): 365–8. doi:10.1016/0028-2243(77)90064-8. PMID 264063.
{cite journal}
: CS1 maint: multiple names: authors list (link) - ↑ ೭.೦ ೭.೧ Quan A, Leung SW, Lao TT, Man RY (2003). "5-hydroxytryptamine and thromboxane A2 as physiologic mediators of human umbilical artery closure". J. Soc. Gynecol. Investig. 10 (8): 490–5. doi:10.1016/S1071-5576(03)00149-7. PMID 14662162.
{cite journal}
: Unknown parameter|month=
ignored (help)CS1 maint: multiple names: authors list (link) - ↑ ೮.೦ ೮.೧ ೮.೨ White RP (1989). "Pharmacodynamic study of maturation and closure of human umbilical arteries". Am. J. Obstet. Gynecol. 160 (1): 229–37. PMID 2912087.
{cite journal}
: Unknown parameter|month=
ignored (help) - ↑ "Umbilical Cord Complications: eMedicine Obstetrics and Gynecology". Retrieved 2010-01-24.
- ↑ "Fetus or Newborn Problems: Labor and Delivery Complications: Merck Manual Home Edition". Retrieved 2010-03-27.
- ↑ Hohmann, M. (1985). "Early or late cord clamping? A question of optimal time" (Article in ಜರ್ಮನ್)". Wiener Klinische Wochenschrift. ೯೭ (೧೧): ೪೯೭–೫೦೦. PMID ೪೦೧೩೩೪೪.
{cite journal}
: Check|pmid=
value (help) - ↑ Mercer, J.S.; Vohr, B.R.; McGrath, M.M.; Padbury, J.F.; Wallach, M.; Oh, W. (2006). "Delayed cord clamping in very preterm infants reduces the incidence of intraventricular hemorrhage and late-onset sepsis: a randomized, controlled trial". Pediatrics. 117 (4): 1235–42. doi:10.1542/peds.2005-1706. PMC 1564438. PMID 16585320.
- ↑ Hutton, E.K.; Hassan, E.S. (2007). "Late vs early clamping of the umbilical cord in full-term neonates: systematic review and meta-analysis of controlled trials". Journal of the American Medical Association. ೨೯೭ (೧೧): ೧೨೫೭–೫೮. doi:೧೦.೧೦೦೧/jama.೨೯೭.೧೧.೧೨೪೧. PMID ೧೭೩೭೪೮೧೮.
{cite journal}
: Check|doi=
value (help); Check|pmid=
value (help) - ↑ ೧೪.೦ ೧೪.೧ ೧೪.೨ ಎಕ್ಸಾಮಿನೇಶನ್ ಆಫ್ ದಿ ನ್ಯೂಬೋರ್ನ್ ಆಂಡ್ ನಿಯೊನಟಲ್ ಹೆಲ್ತ್: ಎ ಮಲ್ಟಿಡೈಮೆನ್ಷನಲ್ ಅಪ್ರೋಚ್, ಪುಟ ೧೧೬-೧೧೭
- ↑ ೧೫.೦ ೧೫.೧ ೧೫.೨ Hutton EK, Hassan ES (2007). "Late vs early clamping of the umbilical cord in full-term neonates: systematic review and meta-analysis of controlled trials". JAMA. 297 (11): 1241–52. doi:10.1001/jama.297.11.1241. PMID 17374818.
{cite journal}
: Unknown parameter|month=
ignored (help) - ↑ ೧೬.೦ ೧೬.೧ "ಇಫೆಕ್ಟ್ ಆಫ್ ಟೈಮಿಂಗ್ ಆಫ್ ಅಂಬಿಲಿಕಲ್ ಕಾರ್ಡ್ ಕ್ಲ್ಯಾಂಪಿಂಗ್ ಆಫ್ ಟರ್ಮ್ ಇನ್‌ಫ್ಯಾಂಟ್ಸ್ ಆನ್ ಮೆಟರ್ನಲ್ ಆಂಡ್ ನಿಯೊನಟಲ್ ಔಟ್‌ಕಮ್ಸ್." ಕೊಚ್ರೇನ್ ಡಾಟಾಬೇಸ್ ಸಿಸ್ಟ್ ರೆವ್ ೨೦೦೮; (೨):CD೦೦೪೦೭೪
- ↑ ಮಿಲಿಟರಿ ಅಬ್‌ಸ್ಟೆಟ್ರಿಕ್ಸ್ ಆಂಡ್ ಗೈನೆಕಾಲಜಿ > ಡೆಲಿವರಿ ಆಫ್ ಬೇಬಿ - ದಿ ಬ್ರೂಕ್‌ಸೈಡ್ ಅಸೋಸಿಯೇಟ್ಸ್ ಮೆಡಿಕಲ್ ಎಜುಕೇಶನ್ ಡಿವಿಜನ್. ೨೦೦೯ರ ಜನವರಿ ೧೦ರಂದು ಮರುಸಂಪಾದಿಸಲಾಗಿದೆ
- ↑ ವಾಟರ್‌ಬರ್ತ್ ಇಂಟರ್‌ನ್ಯಾಷನಲ್ > ವಾಟರ್‌ಬರ್ತ್ FAQ Archived 2011-03-18 ವೇಬ್ಯಾಕ್ ಮೆಷಿನ್ ನಲ್ಲಿ. ೨೦೦೯ರ ಜನವರಿ ೧೦ರಂದು ಮರುಸಂಪಾದಿಸಲಾಗಿದೆ
- ↑ Crowther, S (2006). "Lotus birth: leaving the cord alone". The Practising Midwife. 9 (6): 12–14. PMID 16830839.
- ↑ American Academy of Pediatrics. "Cord Blood Banking for Potential Future Transplantation". Archived from the original on 2007-10-13. Retrieved 2011-03-23.
- ↑ "ಕೋರ್ಡ್ ಬ್ಲಡ್ ಯೀಲ್ಡ್ಸ್ 'ಎತಿಕಲ್' ಎಂಬ್ರಿಯೋನಿಕ್ ಸ್ಟೆಮ್ ಸೆಲ್ಸ್.", ಕೊಗ್ಲಿನ್ ಎ. ನ್ಯೂ ಸೈಂಟಿಸ್ಟ್ , ಆಗಸ್ಟ್ ೧೮, ೨೦೦೫. ೨೦೦೭ರ ಜೂನ್ ೨೫ರಂದು ಸಂಕಲನಗೊಂಡಿದೆ.
- ↑ ಕೋರ್ಡ್ ಬ್ಲಡ್ ಫಾರ್ ನಿಯೊನಟಲ್ ಹೈಪೋಕ್ಸಿಕ್-ಇಸ್ಕೆಮಿಕ್ ಎನ್ಸೆಫಲೋಪತಿ, ಆಟೋಲೋಗಸ್ ಕೋರ್ಡ್ ಬ್ಲಡ್ ಸೆಲ್ಸ್ ಫಾರ್ ಹೈಪಾಕ್ಸಿಕ್ ಇಸ್ಕೆಮಿಕ್ ಎನ್ಸೆಫಲೋಪತಿ ಸ್ಟಡಿ ೧. ಫೇಸ್ I ಸ್ಟಡಿ ಆಫ್ ಫೀಸಿಬಿಲಿಟಿ ಆಂಡ್ ಸೇಫ್ಟಿ
- ↑ Haller MJ; Viener, HL; Wasserfall, C; Brusko, T; Atkinson, MA; Schatz, DA; et al. (2008). "Autologous umbilical cord blood infusion for type 1 diabetes". Exp. Hematol. 36 (6): 710–715. doi:10.1016/j.exphem.2008.01.009. PMC 2444031. PMID 18358588.
{cite journal}
: Explicit use of et al. in:|author=
(help) - ↑ Vendrame M; et al. (2006). "Cord blood rescues stroke-induced changes in splenocyte phenotype and function". Exp. Neurol. 199 (1): 191–200. doi:10.1016/j.expneurol.2006.03.017. PMID 16713598.
{cite journal}
: Explicit use of et al. in:|author=
(help) - ↑ Vendrame M; et al. (2005). "Anti-inflammatory effects of human cord blood cells in a rat model of stroke". Stem Cells Dev. 14 (5): 595–604. doi:10.1089/scd.2005.14.595. PMID 16305344.
{cite journal}
: Explicit use of et al. in:|author=
(help) - ↑ Revoltella RP; et al. (2008). "Cochlear repair by transplantation of human cord blood CD133+ cells to nod-scid mice made deaf with kanamycin and noise". Cell Transplant. 17 (6): 665–678. doi:10.3727/096368908786092685. PMID 18819255.
{cite journal}
: Explicit use of et al. in:|author=
(help) - ↑ ಮೀಟ್ ಹೈಜೆನಿ ವೈ ಜೆ. ಎಫ್. ಗ್ರೇಸಿ, ಡಿ. ಎಸ್. ಕೊಲಿನ್ಸ್, ರಾಬರ್ಟ್ ಜೆ. ಹ್ಯೂ. ಪುಟ ೩೨.
- ↑ ಗಮನಿಸಿ - ಇನ್ ದಿ ಶಾಡೊ ಆಫ್ ಮ್ಯಾನ್ - ಜಾನೆ ಗೂಡಾಲ್.