ಐಶ್ವರ್ಯಾ ರೈ
Aishwarya Rai Bachchan | |
---|---|
![]() Rai at the 2017 Cannes Film Festival | |
Born | Mangalore, ಕರ್ನಾಟಕ, India | ೧ ನವೆಂಬರ್ ೧೯೭೩
Nationality | Indian |
Alma mater | University of Mumbai |
Occupation(s) | Actress, model |
Years active | 1994–present |
Title | Miss World 1994 |
Spouse |
Abhishek Bachchan (ವಿವಾಹ:2007) |
Children | 1 |
Awards | Full list |
Honours |
|
Signature | |
![]() |
ಐಶ್ವರ್ಯಾ ರೈ (ಜನನ: ನವೆಂಬರ್ ೧, ೧೯೭೩) ಭಾರತೀಯ ಸಿನೆಮಾ ನಟಿ ಮತ್ತು ಮಾಡೆಲ್. ೧೯೯೪ ರಲ್ಲಿ ಭಾರತ ಸುಂದರಿ ಸ್ಪರ್ಧೆಯನ್ನು ಗೆದ್ದ ನಂತರ ಅದೇ ವರ್ಷ ವಿಶ್ವಸುಂದರಿ ಸ್ಪರ್ಧೆಯನ್ನು ಗೆದ್ದರು.
ಜನನ, ಜೀವನ
- ಐಶ್ವರ್ಯಾ ಹುಟ್ಟಿದ್ದು ಕರ್ನಾಟಕದ ಮಂಗಳೂರಿನಲ್ಲಿ. ತಂದೆ ಕೃಷ್ಣರಾಜ್ ರೈ ಮತ್ತು ತಾಯಿ ಬೃಂದಾ ರೈ. ಮುಂಬಯಿ ನಗರದಲ್ಲಿ ಡಿ ಜಿ ರೂಪಾರೆಲ್ ಕಾಲೇಜ್ ಮತ್ತು ಆರ್ಯ ವಿದ್ಯಾ ಕಾಲೇಜಿನಲ್ಲಿ ಓದಿದ ಐಶ್ವರ್ಯಾ ಒಂಬತ್ತನೆಯ ತರಗತಿಯಲ್ಲಿ ಇದ್ದಾಗಲೆ ಕ್ಯಾಮೆಲಿನ್ ಸಂಸ್ಥೆಗೆ ಮಾಡೆಲ್ ಆಗಿ ಕೆಲಸ ಮಾಡಿದ್ದರು. ನಂತರ ಅನೇಕ ಜಾಹೀರಾತುಗಳಲ್ಲಿ ನಟಿಸಿದ ಐಶ್ವರ್ಯಾ ಪ್ರಪಂಚಸುಂದರಿ ಪ್ರಶಸ್ತಿಯನ್ನು ಗೆದ್ದ ಮೇಲೆ ಪ್ರಸಿದ್ಧರಾದರು. ಇದರ ನಂತರ ಅನೇಕ ಚಿತ್ರಗಳಲ್ಲಿ ಮತ್ತು ಜಾಹೀರಾತುಗಳಲ್ಲಿ ನಟಿಸಿದ್ದಾರೆ.
- ಅವರ ಮೊದಲ ಚಿತ್ರ ಮಣಿರತ್ನಂ-ನಿರ್ದೇಶಿತ ತಮಿಳು ಚಿತ್ರ "ಇರುವರ್" (೧೯೯೭). ಈ ಚಿತ್ರ ಯಶಸ್ವಿಯಾಗಲಿಲ್ಲ. ೨೦೦೦ ದಲ್ಲಿ ಬಿಡುಗಡೆಯಾದ ತಮಿಳು ಚಿತ್ರ "ಕಂಡುಕೊಂಡೇನ್ ಕಂಡುಕೊಂಡೇನ್" ಯಶಸ್ವಿಯಾಯಿತು. ಐಶ್ವರ್ಯಾ ಅವರು ನಟಿಸಿರುವ ಬಹುಪಾಲು ಚಿತ್ರಗಳು ಹಿಂದಿ ಭಾಷೆಯವು- ಕೆಲವು ತಮಿಳು ಮತ್ತು ಒಂದು ಬೆಂಗಾಲಿ ಚಿತ್ರದಲ್ಲಿಯೂ ನಟಿಸಿದ್ದಾರೆ (ರವೀಂದ್ರನಾಥ ಠಾಕೂರರ ಕಾದಂಬರಿಯಾಧಾರಿತ "ಚೋಕೆರ್ ಬಾಲಿ"). ಹಾಲಿವುಡ್ ಮತ್ತು ಇಂಗ್ಲೆಂಡಿನಲ್ಲಿ ನಿರ್ಮಾಪಣೆ ನಡೆದ "ಬ್ರೈಡ್ ಎ೦ಡ್ ಪ್ರೆಜುಡೀಸ್" (೨೦೦೪) ಎ೦ಬ ಇಂಗ್ಲಿಷ್ ಚಿತ್ರದಲ್ಲಿಯೂ ನಟಿಸಿದ್ದಾರೆ.
- ಅವರ ಅತಿ ಯಶಸ್ವಿ ಚಿತ್ರಗಳಲ್ಲಿ ಕೆಲವೆಂದರೆ "ದೇವದಾಸ್" ಮತ್ತು "ಹಮ್ ದಿಲ್ ದೇ ಚುಕೇ ಸನಮ್". ಐಶ್ವರ್ಯಾ ರೈ ಫ್ರಾನ್ಸ್ ದೇಶದ ಕ್ಯಾನ್ಸ್ ನಲ್ಲಿ ನಡೆಯುವ ವಾರ್ಷಿಕ ಚಲನಚಿತ್ರೋತ್ಸವದ ಸಮಿತಿಯಲ್ಲಿ ಕೆಲಸ ಮಾಡಿರುವ ಏಕೈಕ ಭಾರತೀಯರು.
ಐಶ್ವರ್ಯಾ ರೈ ನಟಿಸಿರುವ ಚಿತ್ರಗಳು
ಹಿ೦ದಿ
- ಹಮ್ ದಿಲ್ ದೇ ಚುಕೇ ಸನಮ್" (೧೯೯೯)
- ತಾಲ್ (೧೯೯೯)
- ಜೋಷ್ (೨೦೦೦)
- ಮೊಹಬ್ಬತೇನ್ (೨೦೦೦)
- ದೇವದಾಸ್ (೨೦೦೨)
- ಧೂಮ್ ೨(೨೦೦೬)
- ರಾ ವನ್
ತಮಿಳು
- ಇರುವರ್ (೧೯೯೭)
- ಜೀನ್ಸ್ (೧೯೯೮)
- ಕಂಡುಕೊಂಡೇನ್ ಕಂಡುಕೊಂಡೇನ್ (೨೦೦೦)
- ಎ೦ದಿರನ್(೨೦೧೦)
ಇತರೆ
- ಚೋಕೆರ್ ಬಾಲಿ (೨೦೦೩) - ಬೆ೦ಗಾಲಿ
- ಬ್ರೈಡ್ ಎ೦ಡ್ ಪ್ರೆಜುಡಿಸ್ (೨೦೦೪) - ಇ೦ಗ್ಲಿಷ್
'ಐಶ್ವರ್ಯ ರೈ', ಹಾಗು 'ಅಭಿಷೇಕ್ ಬಚ್ಛನ್' ದಂಪತಿಗಳಿಗೆ ಹೆಣ್ಣು ಮಗುವಿನ ಜನನ
ಬಾಲಿವುಡ್ ಸಿನಿಮಾ ರಂಗದಲ್ಲಿ ಅತ್ಯಂತ ಪ್ರಭಾವಿ ಹಾಗೂ ಮೇರು ಅಭಿನೇತ್ರಿ,'ಐಶ್ವರ್ಯ ರೈ'ಮುಂಬಯಿನ ಅಂಧೇರಿ (ಪ)ದಲ್ಲಿರುವ ಸುಪ್ರಸಿದ್ಧ 'ಸೆವೆನ್ ಹಿಲ್ ಆಸ್ಪತ್ರೆ' ಯಲ್ಲಿ ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದಾರೆ. ೨೦೧೧ ರ, ನವೆಂಬರ್, ೧೬, ರ ಬುಧವಾರದ ಬೆಳಿಗ್ಗೆ ೧೦ ಗಂಟೆಗೆ ಜನಿಸಿದ ಮಗುವಿನ ಬಗ್ಗೆ, ಅಮಿತಾಬ್ ಬಚ್ಚನ್ ರವರು ತಮ್ಮ ಬ್ಲಾಗ್ ನಲ್ಲಿ 'ಟ್ವೀಟ್' ಮಾಡಿ, ಎಲ್ಲರಿಗೂ ತಿಳಿಯ ಪಡಿಸಿದರು. ತಾಯಿ ಮಗು ಆರೋಗ್ಯವಾಗಿದ್ದಾರೆ. ಹೆರಿಗೆಯ ಸಮಯದಲ್ಲಿ ಅಮಿತಾಬ್ ಬಚ್ಚನ್, ಜಯ ಬಚ್ಚನ್ ಹಾಗೂ ಐಶ್ವರ್ಯ ರೈ ಅವರ ತಂದೆ,ಕ್ರಿಷ್ಣರಾಜ್, ತಾಯಿ, ವ್ರಿಂದ ಹಾಜರಿದ್ದರು.
ಉಲ್ಲೇಖಗಳು
ಬಾಹ್ಯ ಸ೦ಪರ್ಕಗಳು
Wikimedia Commons has media related to Aishwarya Rai.