ಖನಿಜ

ಖನಿಜ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಪ್ರಕೃತಿಯಲ್ಲಿ ದೊರೆಯುವ, ಅಜೈವಿಕ ಮೂಲದ ಸಾಮಾನ್ಯವಾಗಿ ಸ್ಪಟಿಕರೂಪವನ್ನು ಹೊಂದಿರುವ ನಿಸರ್ಗ ಸಹಜವಾದ ರಾಸಾಯನಿಕ ಸಂಯುಕ್ತಗಳನ್ನು ಖನಿಜಗಳು ಎನ್ನುತ್ತಾರೆ.

"ಖನಿಜ" (ಅಂದರೆ ಖನಿ[ಗಣಿ] ಯಲ್ಲಿ ಜನ್ಯ[ಹುಟ್ಟಿದ] ವಸ್ತು), ಎಂಬ ಶಬ್ಧ ಸಂಸ್ಕೃತ ಮೂಲದಿಂದ ಬಂದಿದೆ. ಇಂಗ್ಲೀಷಿನಲ್ಲಿ ಮಿನರಲ್ (mineral) ಎನ್ನುತ್ತಾರೆ. ಖನಿಜಗಳ ಅಧ್ಯಯನವನ್ನು "ಖನಿಜ ವಿಜ್ಞಾನ" ಅಥವಾ "ಖನಿಜಶಾಸ್ತ್ರ" ಎಂದು ಕರೆಯಲಾಗುತ್ತದೆ.

ಸಿಲಿಕೇಟ್ ಖನಿಜಗಳು ಭೂಮಿಯ ಹೊರಪದರದಲ್ಲಿ ೯೦% ರಷ್ಟಿದೆ. ಚಿನ್ನ, ಬೆಳ್ಳಿ, ಕಬ್ಬಿಣ,ತಾಮ್ರ ಇತ್ಯಾದಿಗಳು ಸಹಜ ಖನಿಜ ರೂಪದಲ್ಲಿ ಪ್ರಕೃತಿಯಲ್ಲಿ ದೊರೆಯುತ್ತವೆ. ಇವುಗಳನ್ನು ಗಣಿಗಾರಿಕೆಯಿಂದ ಶುದ್ಧೀಕರಿಸಲಾಗುತ್ತದೆ.ಸಿಲಿಕಾನ್ ಮತ್ತು ಆಮ್ಲಜನಕ ಭೂಮಿಯ ಹೊರಪದರ(ತೊಗಟೆ crust )ಯಲ್ಲಿ ಅತಿ ಹೆಚ್ಚು ಇರುವ ಮೂಲವಸ್ತುಗಳು ಇವೆರಡು ಸುಮಾರು ೭೫% ನಷ್ಟು ಪ್ರಮಾಣ ದಲ್ಲಿವೆ. ವಿವಿಧ ಖನಿಜ ಪ್ರಬೇಧಗಳನ್ನು ವಿಶಿಷ್ಟ ರಾಸಾಯನಿಕ ಮತ್ತು ಭೌತಿಕ ಗುಣಲಕ್ಷಣಗಳಿಂದ ಗುರುತಿಸಲಾಗುತ್ತದೆ.

ಫ್ಲೋರೈಟು ಖನಿಜ

ಖನಿಜಗಳು

ನೈಸರ್ಗಿಕವಾಗಿ ದೊರೆಯುವ, ಸಾಮಾನ್ಯವಾಗಿ ಸ್ಪಟಿಕ ರೂಪದಲ್ಲಿರುವ , ಅಜೈವಿಕ ಉಗಮದ ರಾಸಾಯನಿಕ ಸಂಯುಕ್ತ ವನ್ನು ಖನಿಜವೆಂದು ಕರೆಯುತ್ತಾರೆ. ಯಾವುದೇ ಒಂದು ಖನಿಜಕ್ಕೆ ನಿರ್ದಿಷ್ಟವಾದ ರಾಸಾಯನಿಕ ಸಂಘಟನೆ ಇರುತ್ತದೆ. ವಿವಿಧ ಬಗೆಯ ಖನಿಜಗಳು (minerals) ಅಥವಾ ಖನಿಜರೂಪಿಗಳು (mineraloids) ಸೇರಿಕೊಂಡಿರುವ ನೈಸರ್ಗಿಕ ವಸ್ತುವನ್ನು ಶಿಲೆ(rock) ಯೆಂದು ಪರಿಗಣಿಸಲಾಗುತ್ತದೆ.

ಈ ಹಿಂದೆ 1995 ರಲ್ಲಿ ಅಂತರ್ರಾಷ್ಟ್ರೀಯ ಖನಿಜವಿಜ್ಞಾನ ಸಂಘ ( IMA) ಅಂಗೀಕರಿಸಿದ ವ್ಯಾಖ್ಯೆಯ ಪ್ರಕಾರ ಭೂವೈಜ್ಙಾನಿಕ ಪ್ರಕ್ರಿಯೆಗಳಿಂದ ಉತ್ಪತ್ತಿಯಾದ ಸ್ಫಟಿಕ ರಚನೆಯಿರುವ ಯಾವುದೇ ಒಂದು ಮೂಲವಸ್ತು (ಧಾತು) ಅಥವಾ ರಾಸಾಯನಿಕ ಸಂಯುಕ್ತ ವನ್ನು ಖನಿಜ ವೆನ್ನಲಾಗುತ್ತದೆ.

ಖನಿಜಗಳ ಅಧ್ಯಯನವನ್ನು ”ಖನಿಜವಿಜ್ಞಾನ” ಅಥವಾ “ಖನಿಜಶಾಸ್ತ್ರ “(mineralogy) ಎನ್ನುತ್ತಾರೆ.

ಪ್ರಪಂಚದಲ್ಲಿ 2017ರ ಮಾರ್ಚ್ ತಿಂಗಳವರೆಗೆ 5300 ವಿಧ(ತಳಿ)ಗಳನ್ನು ಖನಿಜ ಗುರುತಿಸಲಾಗಿದೆ. ಇವುಗಳಲ್ಲಿ 5230 ಖನಿಜ ವಿಧಗಳನ್ನು ಅಂತರಾಷ್ಟ್ರಿಯ ಖನಿಜವಿಜ್ಞಾನ ಸಂಘ ವು (IMA -ಇಂಟರ ನ್ಯಾಶನಲ್ ಮಿನರಲೊಜಿಕಲ್ ಅಸೋಸಿಯೇಶನ್ ) ಅಂಗೀಕರಿಸಿದೆ.

ಭೂಮಿಯ ಹೊರತೊಗಟೆ (crust) ಯಲ್ಲಿರುವ ಖನಿಜಗಳಲ್ಲಿ ಹೆಚ್ಚುಕಡಿಮೆ 90% ದಷ್ಟು ಸಿಲಿಕೇಟು ಖನಿಜಗಳಾಗಿವೆ. ಭೂಮಿಯ ರಾಸಾಯನಿಕಗುಣಶಾಸ್ತ್ರದ ಅನುಸಾರವಾಗಿ ವಿವಿಧ ಲಭ್ಯ ಖನಿಜ ವಿಧಗಳ ವೈವಿಧ್ಯತೆ ಮತ್ತು ವಿಪುಲತೆ ನಿರ್ಧಾರವಾಗುತ್ತದೆ. ಸಿಲಿಕಾನ್ ಮತ್ತು ಆಮ್ಲಜನಕ ಎಂಬ ಮೂಲವಸ್ತುಗಳು ಭೂಮಿಯ ಹೊರತೊಗಟೆಯಲ್ಲಿ ಅಂದಾಜು 75 % ದಷ್ಟು ಇರುವ ಕಾರಣ, ಈ ಮೂಲವಸ್ತುಗಳನ್ನು ಹೊಂದಿರುವ ಸಿಲಿಕೇಟು ವಿಧದ ಖನಿಜಗಳು ವ್ಯಾಪಕವಾಗಿ ಕಂಡು ಬರುತ್ತವೆ.

ಖನಿಜಗಳ ಗುರುತು ಹಚ್ಚುವುದು

ಖನಿಜಗಳನ್ನು ವಿವಿಧ ವಿಶಿಷ್ಟ ರಾಸಾಯನಿಕ ಮತ್ತು ಭೌತಿಕ ಗುಣಧರ್ಮಗಳ ಸಹಾಯದಿಂದ ಗುರುತಿಸಬಹುದಾಗಿದೆ. ಉತ್ಪತ್ತಿಯಾಗುವ ಭೂವೈಜ್ಞಾನಿಕ ಪರಿಸರದ ಅನುಗುಣವಾಗಿ ಖನಿಜಗಳ ರಾಸಾಯನಿಕ ಸಂಘಟನೆ ಮತ್ತು ಸ್ಪಟಿಕ ರಚನೆಗಳಲ್ಲಿ ಉಂಟಾಗುವ ವ್ಯತಾಸಗಳನ್ನು ಆಧರಿಸಿ ವಿವಿಧ ಖನಿಜ ವಿಧಗಳನ್ನು ಗುರುತಿಸಬಹುದು. ಶಿಲಾ ವಸ್ತುಗಳ ಉಗಮ ಪರಿಸರದಲ್ಲಿ ಉಂಟಾಗುವ ಉಷ್ಣತೆ, ಒತ್ತಡ ಮತ್ತು ಸಮಗ್ರ ಸಂಘಟನೆಯಲ್ಲಿ ಬದಲಾವಣೆಗಳು ಅದರಲ್ಲಿರುವ ಖನಿಜಗಳಲ್ಲಿ ಬದಲಾವಣೆಗೆ ಕಾರಣವಾಗುತ್ತವೆ.

ಖನಿಜಗಳ ರಾಸಾಯನಿಕ ರಚನೆ ಮತ್ತು ಸಂಘಟನೆಗೆ ಸಂಬಂಧಪಟ್ಟ ವಿವಿಧ ಭೌತಿಕ ಗುಣಧರ್ಮಗಳ ಆಧಾರದ ಮೇಲೆ ಖನಿಜಗಳನ್ನು ವಿವರಿಸಬಹುದು. ಖನಿಜಗಳನ್ನು ಗುರುತಿಸಲು ಸಹಕಾರಿಯಾದ ಸಾಮಾನ್ಯ ಭೌತಿಕ ಗುಣಗಳೆಂದರೆ ಅವುಗಳ ಸ್ಪಟಿಕ ರಚನೆ, ಬಾಹ್ಯರೂಪ, ಗಡಸುತನ, ಹೊಳಪು, ಪಾರದರ್ಶಕತ್ವ ,ಬಣ್ಣ, ಪುಡಿ, ಸೀಳಿಕೆ, ಬಿರುಕು,ಸಂದುಗಳು ಮತ್ತು ವಿಶಿಷ್ಟ ಸಾಂದ್ರತೆ. ಇದಲ್ಲದೆ ಖನಿಜಗಳ ಆಯಸ್ಕಾಂತೀಯ ಗುಣ, ರುಚಿ, ವಾಸನೆ, ವಿಕಿರಣಶೀಲತ್ವ ಮತ್ತು ಆಮ್ಲದೊಂದಿಗೆ ವರ್ತನೆಯಂತಹ ವಿಶಿಷ್ಟ ಗುಣಗಳನ್ನು ಬಳಸಿ ಇನ್ನಷ್ಟು ನಿಖರವಾಗಿ ಖನಿಜ ಪ್ರಭೇಧವನ್ನು ಗುರುತಿಸಬಹುದು.

ಖನಿಜಗಳು ಒಳಗೊಂಡಿರುವ ಮುಖ್ಯ ರಾಸಾಯನಿಕ ಘಟಕಗಳ ಆಧಾರದ ಮೇಲೆ ಅವುಗಳನ್ನು ವರ್ಗಿಕರಿಸುತ್ತಾರೆ. ಖನಿಜಗಳ ವರ್ಗಿಕರಣ ಕ್ಕಾಗಿ (೧) ಡಾನಾ ವರ್ಗಿಕರಣ ಮತ್ತು (೨) ಸ್ಟ್ರುಂಝ್ ವರ್ಗಿಕರಣ ಎಂಬ ಎರಡು ಮುಖ್ಯವಾದ ಪದ್ಧತಿಗಳಿವೆ.

ಸಿಲಿಕೇಟು ಖನಿಜಗಳು

ಬೆಂಟೋನೈಟು ಜೇಡಿ, (ಸಸ್ಯ ಪಳಿಯುಳಿಕೆ ಸಹಿತ), ಕುಕ್ಕೆಹಳ್ಳಿ, ಉಡುಪಿ ಜಿಲ್ಲೆ, ಕರ್ನಾಟಕ.
ಬೆಂಟೋನೈಟು ಜೇಡಿ, (ಸಸ್ಯ ಪಳಿಯುಳಿಕೆ ಸಹಿತ), ಕುಕ್ಕೆಹಳ್ಳಿ, ಉಡುಪಿ ಜಿಲ್ಲೆ, ಕರ್ನಾಟಕ.

ಸಿಲಿಕೇಟು (Silicate) ವರ್ಗಕ್ಕೆ ಸೇರಿದ ಖನಿಜಗಳನ್ನು ಅವುಗಳ ಬಹುಕಣಕರಣ (ಪಾಲಿಮರಿಕರಣ -polymerization) ಮತ್ತು ಸ್ಪಟಿಕ ರಚನೆಗಳ (crystal structure)ಆಧಾರದ ಮೇಲೆ ಆರು ಉಪವಿಭಾಗಗಳಾಗಿ ವಿಂಗಡಿಸಲಾಗಿದೆ. ಎಲ್ಲಾ ಸಿಲಿಕೇಟು ಖನಿಜಗಳಲ್ಲಿ [SiO4]4- ಎಂಬ ಸಿಲಿಕಾ(silica) ಚತರ್ಮುಖಿ ಗಳ (tetrahedron) ಮೂಲ ಘಟಕಗಳಿರುತ್ತವೆ. ಸಿಲಿಕಾ ಚತುರ್ಮುಖಿ ಅಂದರೆ, ಒಂದು ಸಿಲಿಕಾನ್ ಧನಾಯಾನು(cation)ವಿನ ಸುತ್ತ ನಾಲ್ಕು ಆಮ್ಲಜನಕದ ಋಣಾಯನುಗಳು (anions) ಕೂಡಿಕೊಂಡು ಉಂಟಾದ ಚತುರ್ಮುಖ ರೂಪದ ರಚನೆ. ಬಹುಕಣಕರಣಗೊಂಡ ಇಂತಹ ಸಿಲಿಕಾನ್ ಚತುರ್ಮುಖಿಗಳನ್ನು ಈ ಕೆಳಗಿನಂತೆ ಉಪವಿಭಾಗಿಸಬಹುದು.

  • ನೇರ ಸಿಲಿಕೇಟುಗಳು (ಆರ್ಥೋ ಸಿಲಿಕೇಟುಗಳು- Orthosilicates ಬಹುಕಣವಿಲ್ಲದ ಒಂಟಿ ಸಿಲಿಕಾ ಚತುರ್ಮುಖಿಗಳು)
  • ದ್ವ ಸಿಲಿಕೇಟುಗಳು (ಡೈ ಸಿಲಿಕೇಟುಗಳು-Disilicates ಪರಸ್ಪರ ಬಂಧಿಸಿದ ಎರಡು ಸಿಲಿಕಾ ಚತುರ್ಮುಖಿಗಳು)
  • ಚಕ್ರಿಯ ಸಿಲಿಕೇಟುಗಳು (ಸೈಕ್ಲೋಸಿಲಿಕೇಟುಗಳು cyclosilicates- ಉಂಗುರರೂಪದ ಸಿಲಿಕಾ ಚತುರ್ಮುಖಿಗಳು )
  • ಸರಣಿ ಸಿಲಿಕೇಟುಗಳು( ಇನೊ ಸಿಲಿಕೇಟುಗಳು inosilicates- ಸರಣಿರೂಪದ ಸಿಲಿಕಾ ಚತುರ್ಮುಖಿಗಳು )
  • ಪದರ ಸಿಲಿಕೇಟುಗಳು ( ಫಿಲ್ಲೊಸಿಲಿಕೇಟುಗಳು phyllosilicates- ಪದರರೂಪದ ಸಿಲಿಕಾ ಚತುರ್ಮುಖಿಗಳು ) ಮತ್ತು
  • ಜಾಲ ಸಿಲಿಕೇಟುಗಳು ( ಟೆಕ್ಟೊಸಿಲಿಕೇಟುಗಳು- tectosilicates-ಮೂರು ಆಯಾಮದ ಜಾಲದಂತಹ ಸಿಲಿಕಾ ಚತುರ್ಮುಖಿಗಳು ).

ಇತರ ಖನಿಜ ವರ್ಗಗಳು

ಸಿಲಿಕೇಟುಗಳಲ್ಲದೆ ಇತರ ಪ್ರಮುಖ ಖನಿಜ ವರ್ಗಗಳೆಂದರೆ:

ಬಾಕ್ಸೈಟು, (ಆಲುಮಿನಿಯಂ ಲೋಹದ ಅದಿರು), ಪಡುವಾರೆ, ಉಡುಪಿ ಜಿಲ್ಲೆ,ಕರ್ನಾಟಕ
ಬಾಕ್ಸೈಟು, (ಆಲುಮಿನಿಯಂ ಲೋಹದ ಅದಿರು), ಪಡುವಾರೆ, ಉಡುಪಿ ಜಿಲ್ಲೆ,ಕರ್ನಾಟಕ
  • ಸಲ್ಫೈಡುಗಳು (sulfides),
  • ಆಕ್ಸೈಡುಗಳು (oxides),
  • ಹೇಲೈಡುಗಳು (halides),
  • ಕಾರ್ಬೋನೇಟುಗಳು(carbonates),
  • ಸಲ್ಫೇಟುಗಳು (sulfates) ಮತ್ತು

ಉಲ್ಲೇಖಗಳು

[೧]