ಗ್ಲೆನ್ ಮ್ಯಾಕ್ಸ್ವೆಲ್

ಗ್ಲೆನ್ ಮಾಕ್ಸ್ವೆಲ್

ಗ್ಲೆನ್ ಜೇಮ್ಸ್ ಮ್ಯಾಕ್ಸ್ವೆಲ್ , ಓರ್ವ ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ. ಆಸ್ಟ್ರೇಲಿಯಾದ ಮದ್ಯಮ ಕ್ರಮಾಂಕದ ಬಲಗೈ ಆಟಗಾರ. ಇವರು ಬಲಗೈ ಆಫ್ ಸ್ಪಿನ್ ಬಾಲರ್. ದೇಶೀಯ ಕ್ರಿಕೆಟ್ನಲ್ಲಿ ವಿಕ್ಟೊರಿಯಾ ಹಾಗೂ ಮೆಲ್ಬರ್ನ್ ಸ್ಟಾರ್ಸ್ ತಂಡಗಳಿಗೆ ಆಡುತ್ತಾರೆ. ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಡುತ್ತಾರೆ. []

ಆರಂಭಿಕ ಜೀವನ

ಮ್ಯಾಕ್ಸ್ವೆಲ್ ರವರು ಅಕ್ತೋಬರ್ ೧೪, ೧೯೮೮ರಲ್ಲಿ ಆಸ್ಟ್ರೇಲಿಯಾದ ಮೆಲ್ಬರ್ನ್ನ ಕಿವ್ ಎಂಬ ಊರಿನಲ್ಲಿ ಜನಿಸಿದರು. ಇವರು ಸೌತ್ ಬೆಲ್ಗ್ರೇವ್ ಕ್ರಿಕೆಟ್ ತಂಡದ ಮೂಲಕ ಜೂನಿಯರ್ ಕ್ರಿಕೆಟ್ ಆರಂಭಿಸಿದರು. ಇವರು ಮೂಲತಃ ವೇಗದ ಬೌಲರ್ ಆಗಿ ತಮ್ಮ ಬೌಲಿಂಗ್ ಆರಂಭಿಸಿದರು, ನಂತರ ಆಫ್ ಸ್ಪಿನ್ ಬೌಲಿಂಗ್ ಮಾಡಲಾರಂಭಿಸಿದರು. ಇವರ ಬ್ಯಾಟಿಂಗ್ ಶ್ಯಲಿ ಹಾಗೂ ಇವರ ಸ್ವೀಪ್ ಶಾಟಿನಿಂದ ಇವರಿಗೆ ತಂಡದ ಸದಸ್ಯರು ಹಾಗೂ ಮಧ್ಯಮ ವರ್ಗದವರು ಇವರಿಗೆ 'ದಿ ಬಿಗ್ ಷೋ' ಇಂದು ಅಡ್ಡ ಹೆಸರಿನಿಂದ ಕರೆಯುತ್ತಾರೆ.[]

ವೃತ್ತಿ ಜೀವನ

ಮ್ಯಾಕ್ಸ್ವೆಲ್ ರವರು ಫೆಬ್ರವರಿ ೧೮, ೨೦೧೧ರಂದು ಮೆಲ್ಬರ್ನ್ ನಲ್ಲಿ ವಿಕ್ಟೊರಿಯಾ ಹಾಗೂ ನ್ಯೂ ಸೌತ್ ವೇಲ್ಸ್ ನಡುವೆ ನಡೆದ ಪಂದ್ಯದ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು.[]

ಅಂತರರಾಷ್ಟ್ರೀಯ ಕ್ರಿಕೆಟ್

ಅಗಸ್ಟ್ ೨೫, ೨೦12ರಲ್ಲಿ ಅಫ್ಘಾನಿಸ್ತಾನ ವಿರುಧ್ಧ ನಡೆದ ಏಕೈಕ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[] ಸೆಪ್ಟಂಬರ್ ೦೫, ೨೦೧೨ರಂದು ದುಬೈನಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಏಕೈಕ ಟಿ-೨೦ ಪಂದ್ಯದಿಂದ ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ ಗೆ ಪಾದಾರ್ಪನೆ ಮಾಡಿದರು.[] ಮಾರ್ಚ್ ೦೨, ೨೦೧೩ ರಂದು ಹೈದ್ರಾಬಾದ್ನಲ್ಲಿ ಭಾರತದ ವಿರುದ್ಧ ನಡೆದ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನಲ್ಲಿ ಪಾದಾರ್ಪಣೆ ಮಾಡಿದರು.[]

ಪಂದ್ಯಗಳು

  • ಏಕದಿನ ಕ್ರಿಕೆಟ್ : ೧೧೦ ಪಂದ್ಯಗಳು[]
  • ಟೆಸ್ಟ್ ಕ್ರಿಕೆಟ್ : ೦೭ ಪಂದ್ಯಗಳು
  • ಟಿ-೨೦ ಕ್ರಿಕೆಟ್ : ೫೯ ಪಂದ್ಯಗಳು

ಶತಕಗಳು

  1. ಏಕದಿನ ಪಂದ್ಯಗಳಲ್ಲಿ : ೦೧
  2. ಟೆಸ್ಟ್ ಪಂದ್ಯಗಳಲ್ಲಿ : ೦೧
  3. ಟಿ-೨೦ ಪಂದ್ಯಗಳಲ್ಲಿ : ೦೩

ಅರ್ಧ ಶತಕಗಳು

  1. ಏಕದಿನ ಪಂದ್ಯಗಳಲ್ಲಿ : ೧೯
  2. ಟಿ-೨೦ ಪಂದ್ಯಗಳಲ್ಲಿ  : ೦೬

ವಿಕೇಟಗಳು

  1. ಏಕದಿನ ಪಂದ್ಯಗಳಲ್ಲಿ : ೫೦
  2. ಟೆಸ್ಟ್ ಪಂದ್ಯಗಳಲ್ಲಿ  : ೦೮
  3. ಟಿ-೨೦ ಪಂದ್ಯಗಳಲ್ಲಿ  : ೨೬

ಉಲ್ಲೇಖಗಳು

  1. https://m.cricbuzz.com/profiles/7662/glenn-maxwell
  2. https://www.smh.com.au/sport/cricket/in-a-spin-over-the-big-show-20120921-26c6l.html
  3. https://www.espncricinfo.com/series/8043/scorecard/474041/victoria-vs-new-south-wales-sheffield-shield-2010-11
  4. https://www.espncricinfo.com/series/12408/scorecard/571947/afghanistan-vs-australia-only-odi-australia-tour-of-united-arab-emirates-2012
  5. https://www.espncricinfo.com/series/12408/scorecard/571148/australia-vs-pakistan-1st-t20i-australia-tour-of-united-arab-emirates-2012
  6. https://www.espncricinfo.com/series/12214/scorecard/598813/india-vs-australia-2nd-test-australia-tour-of-india-2012-13
  7. http://www.espncricinfo.com/australia/content/player/325026.html