ಜಾನ್.ಬಿ.ವಾಟ್ಸನ್
ಜಾನ್.ಬಿ.ವಾಟ್ಸನ್ ಇವರು ಜನವರಿ ೯, ೧೮೭೮ರಲ್ಲಿ ಅಮೇರಿಕಾದಲ್ಲಿ ಜನಿಸಿದರು.[೧] ವಾಟ್ಸನ್ ಅವರ ಪೂರ್ಣ ಹೆಸರು ಜಾನ್ ಬ್ರಾಡಸ್ ವಾಟ್ಸನ್. ಇವರು ವಿಶ್ವದ ಪ್ರಸಿದ್ಧ ಮನೋವಿಜ್ಞಾನಿ. ಇವರು ಮನೋವಿಜ್ಞಾನದ ವರ್ತನವಾದದ ಪ್ರತಿಪಾದಕರು.[೨] ೧೯೧೩ರಲ್ಲಿ ವರ್ತನವಾದವನ್ನು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಮಂಡಿಸಲಾಯಿತು.[೩]
ನಡವಳಿಕೆಯ ವಿಧಾನದ ಮೂಲಕ, ವ್ಯಾಟ್ಸನ್ ಪ್ರಾಣಿ ವರ್ತನೆ, ಮಕ್ಕಳ ಪಾಲನೆ ಮತ್ತು ಜಾಹೀರಾತುಗಳ ಬಗ್ಗೆ ಸಂಶೋಧನೆ ನಡೆಸಿದರು. ಇದಲ್ಲದೆ, ಅವರು ವಿವಾದಾತ್ಮಕ 'ಲಿಟಲ್ ಆಲ್ಬರ್ಟ್' ಪ್ರಯೋಗ ಮತ್ತು 'ಕೆರ್‌ಪ್ಲಂಕ್' ಪ್ರಯೋಗವನ್ನು ನಡೆಸಿದರು. ವ್ಯಾಟ್ಸನ್ ವರ್ತನಾವಾದದೊಂದಿಗೆ ವೈಜ್ಞಾನಿಕ ಸಿದ್ಧಾಂತವನ್ನು ಜನಪ್ರಿಯಗೊಳಿಸಿದರು. ಅವರು ೧೯೧೦ ರಿಂದ ೧೯೧೫ ರವರೆಗೆ ಸೈಕಾಜಾಜಿಕಲ್ ರಿವ್ಯೂ ದ ಸಂಪಾದಕರಾಗಿದ್ದರು.[೪] ೨೦೦೨ ರಲ್ಲಿ ಪ್ರಕಟವಾದ 'ಜನರಲ್ ಸೈಕಾಲಜಿ' ಸಮೀಕ್ಷೆಯ ಒಂದು ವಿಮರ್ಶೆ ಇವರಿಗೆ ೨೦ನೇ ಶತಮಾನದ ಅತಿ ಹೆಚ್ಚು ಉಲ್ಲೇಖಿಸಲ್ಪಟ್ಟ ಮನೋವಿಜ್ಞಾನಿಗಳಲ್ಲಿ ಒಬ್ಬರೆಂದು ಸ್ಥಾನ ನೀಡಿತು.[೫]
ಆರಂಭಿಕ ಜೀವನ
ಸೌತ್ ಕರೋಲಿನದ ಟ್ರ್ಯಾವಲರ್ಸ್ ರೆಸ್ಟ್‌ನಲ್ಲಿ 1878 ಜನವರಿ 9 ರಂದು ಬಡ ಕುಟುಂಬವೊಂದರಲ್ಲಿ 6 ಮಕ್ಕಳ ಪೈಕಿ 4ನೆಯ ಮಗುವಾಗಿ ಜನಿಸಿದ. ವ್ಯಾಟ್ಸನ್ ಪಿಕೆನ್ಸ್ ಬಟ್ಲರ್ ಮತ್ತು ಎಮ್ಮಾ (ನೀ ರೋಯಿ) ವ್ಯಾಟ್ಸನ್ ಅವರ ಪುತ್ರ. ಸೋಮಾರಿ ಮತ್ತು ಕರ್ತವ್ಯಭ್ರಷ್ಟ ತಂದೆ ಪಿಕೆನ್ಸ್ ಬಟ್ಲರ್ ವಾಟ್ಸನ್ ಈತ ಚಿಕ್ಕವನಾಗಿದ್ದಾಗಲೇ ಕುಟುಂಬ ತ್ಯಜಿಸಿ ಓಡಿಹೋದ. ಧರ್ಮನಿಷ್ಠ ತಾಯಿ ಎಮ್ಮ ಕೆಸಯ ವಾಟ್ಸನ್‌ಗೆ ಮಗ ಧರ್ಮಪ್ರಚಾರಕನಾಗ ಬೇಕೆಂಬ ಬಯಕೆ. ವ್ಯಾಟ್ಸನ್ ಅವರ ತಾಯಿ ಕುಡಿಯುವ, ಧೂಮಪಾನ ಮತ್ತು ನೃತ್ಯದ ವಿರುದ್ಧ ನಿಷೇಧವನ್ನು ಅನುಸರಿಸುತ್ತಿದ್ದ ಒಬ್ಬ ಧಾರ್ಮಿಕ ಮಹಿಳೆ.
ವ್ಯಾಟ್ಸನ್ ದಕ್ಷಿಣ ಕೆರೊಲಿನಾದಲ್ಲಿನ ಗ್ರೀನ್ವಿಲ್ಲೆಯಲ್ಲಿನ ಫರ್ಮಾನ್ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಪಡೆದರು. ರಾಜ್ಯಸ್ಥಾಪಿತ ಮಠದ ತತ್ತ್ವಗಳನ್ನು ಒಪ್ಪದವನೆಂದು (ನಾನ್‌ಕನ್‍ಫ಼ಾರ್ಮಿಸ್ಟ್) ಪ್ರಾಧ್ಯಾಪಕರ ಅಭಿಮತವಾಗಿದ್ದರೂ ಕ್ಯಾಪ ಆಲ್ಫ ಸಂಘದ ಸದಸ್ಯ. ಮನೋವಿಜ್ಞಾನದಲ್ಲಿ ಅತ್ಯಂತ ಕಡಿಮೆ ಅಂಕ ಗಳಿಸಿದ ಸಾಧಾರಣ ವಿದ್ಯಾರ್ಥಿ. ತತ್ತ್ವಶಾಸ್ತ್ರ ಪ್ರಾಧ್ಯಾಪಕ ಗೋರ್ಡನ್ ಮೂರ್‌ನ ಅವಕೃಪೆಗೆ ಪಾತ್ರನಾಗಿ ಪದವಿ ಪಡೆಯಲು ನಾಲ್ಕು ವರ್ಷಕ್ಕೆ ಬದಲಾಗಿ ಐದು ವರ್ಷ ಅಧ್ಯಯನ.
೨೧ ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಪದವೀಧರನಾದ ನಂತರ, ಅವರು "ಬೇಟ್ಸ್‌ಬರ್ಗ್ ಇನ್‍ಸ್ಟಿಟ್ಯೂಟ್" ನಲ್ಲಿ ಒಂದು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಚಿಕಾಗೋ ವಿಶ್ವವಿದ್ಯಾನಿಲಯದ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ ನಂತರ, ವ್ಯಾಟ್ಸನ್ ವಿಶ್ವವಿದ್ಯಾನಿಲಯಕ್ಕೆ ಪ್ರವೇಶಿಸಿದರು.[೬]
ಮನೋವಿಜ್ಞಾನ ಅಧ್ಯಯನ
ಸ್ನಾತಕ ಪದವಿ ಗಳಿಸಿದ ಕೊಂಚ ಕಾಲಾನಂತರ ತಾಯಿ ಮರಣಿಸಿದ್ದರಿಂದ ಧರ್ಮ ಪ್ರಚಾರಕನಾಗುವ ಬದಲು ಪಿ.ಎಚ್.ಡಿ.ಗೆ ದಾಖಲಾತಿ (1900). ವೆಚ್ಚ ಭರಿಸಲೋಸುಗ ಅರೆಕಾಲಿಕ ದ್ವಾರಪಾಲಕ, ಹೋಟೆಲ್ ಮಾಣಿ ಮೊದಲಾದ ವೃತ್ತಿನಿರತ. ತತ್ತ್ವಶಾಸ್ತ್ರ ಅಧ್ಯಯನಕ್ಕೆ ಈತನ ಶಿಷ್ಯವೃತ್ತಿ. ಆತನ ಪಾಠ ಅರ್ಥವಾಗುತ್ತಿಲ್ಲವೆಂದು ಪ್ರಾಯೋಗಿಕ ಮನೋವಿಜ್ಞಾನದಲ್ಲಿ ಪಿಎಚ್.ಡಿ ಪದವಿಗಾಗಿ ಜೇಮ್ಸ್ ರೊಲ್ಯಾಂಡ್ ಆ್ಯಂಜೆಲ್ ಎಂಬಾತನ ಮಾರ್ಗದರ್ಶನದಲ್ಲಿ ಅಧ್ಯಯನಾರಂಭ, ಪದವಿ ಪ್ರಾಪ್ತಿ (1903). ಈ ಪದವಿ ಗಳಿಸಿದವರ ಪೈಕಿ ಅತ್ಯಂತ ಕಿರಿಯನೆಂಬ ಹೆಗ್ಗಳಿಕೆ. ಗುರುವಿನ ಸಹಾಯಕನಾಗಿ, ಅಧ್ಯಾಪಕನಾಗಿ ಶಿಕಾಗೊ ವಿಶ್ವವಿದ್ಯಾಲಯದಲ್ಲಿ ಮುಂದಿನ ಐದು ವರ್ಷಕಾಲ ವಾಸ. ಶಿಷ್ಯೆ ಮೇರಿ ಐಕ್ಸ್‌ನೊಂದಿಗೆ ವಿವಾಹ (1904).
ಫರ್ಮಾನ್ ಪ್ರಾಧ್ಯಾಪಕ ಗೋರ್ಡಾನ್ ಮೂರ್‌ರ ಶಿಫಾರಸಿನ ಮೇರೆಗೆ ಜಾನ್ ಡೀವಿ ಅವರ ತತ್ವಶಾಸ್ತ್ರವನ್ನು ವಾಟ್ಸನ್ ಅವರು ಅಧ್ಯಯನ ಮಾಡಲು ಪ್ರಾರಂಭಿಸಿದರು. ಡೇವ್, ಜೇಮ್ಸ್ ರೋಲ್ಯಾಂಡ್ ಆಂಜೆಲ್, ಹೆನ್ರಿ ಹರ್ಬರ್ಟ್ ಡೊನಾಲ್ಡ್‌ಸನ್, ಮತ್ತು ಜಾಕ್ವೆಸ್ ಲೊಯೆಬ್ರ ಇವರುಗಳ ಸಂಯೋಜಿತ ಪ್ರಭಾವವು ವ್ಯಾಟ್ಸನ್ ಅವರಿಗೆ ವರ್ತನೆಯ ವಿಶ್ಲೇಷಣೆಗೆ ಹೆಚ್ಚು ವಿವರಣಾತ್ಮಕ ದಾರಿ ಕಲ್ಪಿಸಿಕೊಟ್ಟಿತು. ವ್ಯಾಟ್ಸನ್ ತಮ್ಮ ಪಿ.ಎಚ್.ಡಿ.ಪದವಿಯನ್ನು ೧೯೦೩ ರಲ್ಲಿ ಚಿಕಾಗೊ ವಿಶ್ವವಿದ್ಯಾಲಯದಿಂದ ಪಡೆದರು.[೭]
ಮುಂದಿನ ಜೀವನ
ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಮತ್ತು ಮನೋವಿಜ್ಞಾನ ಪ್ರಯೋಗಾಲಯ ನಿರ್ದೇಶಕ ಹುದ್ದೆ ಸ್ವೀಕಾರ (1908). ಈ ವಿಶ್ವವಿದ್ಯಾಲಯದಲ್ಲಿ 14ವರ್ಷ ಸೇವೆ ಸಲ್ಲಿಕೆ. ‘ಸೈಕಲಾಜಿಕಲ್ ರಿವ್ಯು’ ಪತ್ರಿಕೆಯಲ್ಲಿ ವರ್ತನ ಪಂಥದ ಉಗಮದಲ್ಲಿ ಪ್ರಮುಖ ಘಟ್ಟ ಎಂದು ಪರಿಗಣಿಸಲಾಗಿರುವ ‘ಸೈಕಾಲಜಿ ಆ್ಯಸ್ ಎ ಬಿಹೇವಿಯರಿಸ್ಟ್ ವ್ಯೂಸ್ ಇಟ್’ ಪ್ರಬಂಧ ಪ್ರಕಟಣೆ (1913). ‘ಸೈಕಾಲಾಜಿಕಲ್ ರಿವ್ಯು’ ಪತ್ರಿಕೆಯ ಸಂಪಾದಕನಾಗುವ ಗೌರವ ಪ್ರಾಪ್ತಿ. ‘ಜರ್ನಲ್ ಆಫ಼್ ಎಕ್ಸ್‌ಪೆರಿಮೆಂಟಲ್ ಸೈಕಾಲಜಿ’ ಪತ್ರಿಕೆಯ ಮೊದಲನೆಯ ಸಂಪಾದಕ. ಅಮೆರಿಕನ್ ಸೈಕಲಾಜಿಕಲ್ ಅಸೋಸಿಯೇಶನ್‌ನ ಅಧ್ಯಕ್ಷ (1915). ಸಂಶೋಧನ ಸಹಾಯಕಿ ರೋಸಾಲಿ ರೇನರ್ ಎಂಬಾಕೆಯೊಂದಿಗಿನ ವಿವಾಹಬಾಹಿರ ಪ್ರೇಮ ಪ್ರಕರಣ ಬಹಿರಂಗವಾಗಿ ವಿವಾಹ ವಿಚ್ಛೇದನ, ಪ್ರೇಮಿಯೊಂದಿಗೆ ವಿವಾಹ, ವಿಶ್ವವಿದ್ಯಾಲಯದ ಅಧಿಕಾರಿಗಳ ಸೂಚನೆ ಮೇರೆಗೆ ರಾಜಿನಾಮೆ ನೀಡಿಕೆ.[೮] ನ್ಯೂಯಾರ್ಕ್‌ಗೆ ವಲಸೆ. ಜಾಹಿರಾತುದಾರನಾಗಿ 1945ರಲ್ಲಿ ನಿವೃತ್ತಿ. ಕೃಷಿಕನಾಗಿ ಶೇಷ ಜೀವನ.
ಗೌರವಗಳು
ಮನೋವಿಜ್ಞಾನ ಪಂಡಿತ ಸಮುದಾಯ ಈತನನ್ನು ಬಹಿಷ್ಕರಿಸಿದರೂ ‘ಅಮೆರಿಕನ್ ಸೈಕಲಾಜಿಕಲ್ ಅಸೋಸಿಯೇಶನ್’ ಮನೋವಿಜ್ಞಾನ ಕ್ಷೇತ್ರಕ್ಕೆ ಈತನ ಕೊಡುಗೆಯನ್ನು ಗೌರವಿಸಿ ಪ್ರಶಂಸಾ ಪತ್ರವೊಂದನ್ನು ಇವನಿಗೆ ರವಾನಿಸಿತು (1957). ಫ಼ರ್ಮನ್ ವಿಶ್ವವಿದ್ಯಾಲಯ ಈತನ ಜನ್ಮಶತಾಬ್ದಿ ಅಂಗವಾಗಿ ಇವನ ಹೆಸರಿನಲ್ಲಿ ವಿದ್ವದ್ಗೋಷ್ಠಿಯೊಂದನ್ನು ಸಂಘಟಿಸಿದ್ದಲ್ಲದೆ (1979) ತನ್ನ ಮನೋವಿಜ್ಞಾನ ಪ್ರಯೋಗಾಲಯಕ್ಕೆ ಜಾನ್ ಬಿ ವಾಟ್ಸನ್ ಪ್ರಯೋಗಾಲಯ ಎಂದು ನಾಮಕರಣ ಮಾಡಿ ಗೌರವ ಸಲ್ಲಿಸಿತು. ‘ಸೌತ್ ಕರೋಲಿನ್ ಹಾಲ್ ಆಫ಼್ ಸೈನ್ಸ್’ನಲ್ಲಿ ಈತನ ಹೆಸರು ಸೇರ್ಪಡೆ ಮಾಡಿ ಈತನ ಜನ್ಮಸ್ಥಳದ ಸಮೀಪ ಕಿರು ಸ್ಮಾರಕ ಸ್ಥಾಪಿಸುವುದರ (1984) ಮೂಲಕವೂ ರಾಷ್ಟ್ರ ಇವನಿಗೆ ಗೌರವ ಸಲ್ಲಿಸಿದೆ.
ಭಾವನೆಗಳ ಅಧ್ಯಯನ
ವ್ಯಾಟ್ಸನ್ ಭಾವನೆಗಳ ಒಗ್ಗಿಸುವಿಕೆ ಬಗ್ಗೆ ಆಸಕ್ತರಾಗಿದ್ದರು. ಸಹಜ ವರ್ತನೆಯು ಜನರ ಬಾಹ್ಯ ನಡವಳಿಕೆಗಳಿಗೆ ಮಹತ್ವ ನೀಡುತ್ತದೆ, ಭಾವನೆಗಳನ್ನು ಕೇವಲ ದೈಹಿಕ ಪ್ರತಿಕ್ರಿಯೆಗಳೆಂದು ಪರಿಗಣಿಸಲಾಗುತ್ತದೆ. ಭಯ, ಹುರುಪು ಮತ್ತು ಪ್ರೀತಿ ಹುಟ್ಟಿದ್ದಾಗ ಭಾವನಾತ್ಮಕ ಪ್ರತಿಕ್ರಿಯೆಗಳಾತ್ತವೆ ಎಂದು ವ್ಯಾಟ್ಸನ್ ಭಾವಿಸಿದ್ದರು.[೯]
ಪ್ರಯೋಗಗಳು
ವರ್ತನವಾದಕ್ಕೆ ಸಂಬಂಧಿಸಿದಂತೆ ವಾಟ್ಸನ್ ೨ ಪ್ರಯೋಗಗಳನ್ನು ನಡೆಸಿದ್ದಾರೆ.
ಪುಸ್ತಕ ಪ್ರಕಟಣೆಗಳು
- Behaviorism: Classic Studies
- The Battle of Behaviorism: An Exposition and an Exposure
Rate this book
- Behavior: An Introduction To Comparative Psychology (1914)
- Conditioned Emotional Reactions:: The Case of Little Albert (Psychology Classics)
- Psychology as the Behaviorist Views it.
John B. Watson (1913).
ಉಲ್ಲೇಖಗಳು
- ↑ Sheehy, Noel; Forsythe, Alexandra (2004). Fifty Key Thinkers in Psychology (in ಇಂಗ್ಲಿಷ್). Psychology Press. p. 244. ISBN 978-0-415-16775-8.
- ↑ Cohn, Aaron S. 2014. "Watson, John B.." Pp. 1429–1430 in The Social History of the American Family: An Encyclopedia, edited by M. J. Coleman and L. H. Ganong. Thousand Oaks, CA: Sage Publications. Retrieved May 16, 2020. doi:10.4135/9781452286143.n563. ISBN 9781452286143.
- ↑ Watson, John B. (1913). "Psychology as the Behaviorist Views It". Psychological Review. 20 (2): 158–177. doi:10.1037/h0074428. hdl:21.11116/0000-0001-9182-7. S2CID 145372026. Retrieved May 16, 2020.
- ↑ Kintsch, Walter; Cacioppo, John T. (1994). "Introduction to the 100th Anniversary Issue of the Psychological Review". Psychological Review. 101 (2): 195–99. doi:10.1037/0033-295x.101.2.195.
- ↑ Haggbloom, Steven J.; Warnick, Renee; Warnick, Jason E.; Jones, Vinessa K.; et al. (2002). "The 100 most eminent psychologists of the 20th century". Review of General Psychology. 6 (2): 139–52. doi:10.1037/1089-2680.6.2.139. S2CID 145668721.
- ↑ <www.uchicago.edu/
- ↑ "John B. Watson." Encyclopædia Britannica. 2020 [1998]. Retrieved May 16, 2020.
- ↑ The Washington Times. January 2, 1921.
- ↑ <psycnet.apa.org/journals/bdb/10/1/15.html
- ↑ <https://www.verywell.com/the-little-albert-experiment-2794994 Archived 2017-06-27 ವೇಬ್ಯಾಕ್ ಮೆಷಿನ್ ನಲ್ಲಿ.
- ↑ <faculty.coe.uh.edu/smcneil/cuin6373/idhistory/watson2.htm