ದೊಹಾ

ದೊಹಾ
الدوحة ad-Dawḥa
City and Municipality
Doha Skyline
Doha Skyline
Location of the municipality of Doha within Qatar.
Location of the municipality of Doha within Qatar.
Country ಕತಾರ್
MunicipalityAd Dawhah
Established1850
Area
 • City೧೩೨ km (೫೧ sq mi)
Population
 (2009)
 • City೯,೯೮,೬೫೧
 • Density೭,೬೦೦/km (೨೦,೦೦೦/sq mi)
 • Metro
೧ ೭೨೩ ೦೬೪
Time zoneUTC+3 (East Africa Time)

ದೊಹಾ (ಅರೇಬಿಕ್: الدوحة, ad-Dawḥa ಅಥವಾ ad-Dōḥa ,ಅಕ್ಷರಶಃ: "ದೊಡ್ಡ ಮರ") ಇದು ಕತಾರ್ ರಾಜ್ಯದ ರಾಜಧಾನಿ ನಗರ ಎನಿಸಿದೆ.. ಪರ್ಸಿಯನ್ ಕೊಲ್ಲಿಯಲ್ಲಿ ಸ್ಥಿತವಾಗಿರುವ ಈ ಪ್ರದೇಶದಲ್ಲಿ 2008 ರ []ಜನಗಣತಿ ಪ್ರಕಾರ 998,651 ಜನಸಂಖ್ಯೆ ಇತ್ತು.ಅದಲ್ಲದೇ ಇದು ಕತಾರ್ ನ ಮುನ್ಸಿಪಾಲ್ಟಿಗಳಲ್ಲೊಂದಾಗಿದೆ. ದೊಹಾ ಕತಾರ್ ನ ಅತ್ಯಂತ ದೊಡ್ಡ ನಗರವಾಗಿದ್ದು ದೇಶದ 80% ರಷ್ಟು ಜನಸಂಖ್ಯೆ ಇದರ ಸುತ್ತಮುತ್ತ ಮತ್ತು ಉಪನಗರಗಳಲ್ಲಿ ವಾಸವಾಗಿದೆ.ಅದಲ್ಲದೇ ಇದೂ ದೇಶದ ಆರ್ಥಿಕ ಕೇಂದ್ರವಾಗಿದೆ.

ದೊಹಾವು ಕತಾರ್ ನ ಸರ್ಕಾರಿ ಆಡಳಿತ ಕೇಂದ್ರಸ್ಥಾನವಾಗಿದ್ದು ಇದು ಶೇಖ್ ಹಮದ್ ಬಿನ್ ಖಲಿಫಾ ಅಲ್ ಥಾನಿ ಅವರ ಆಡಳಿತಕ್ಕೊಳಪಟ್ಟಿದೆ. ದೊಹಾವನ್ನು ಶೈಕ್ಷಣಿಕ ನಗರವೆಂದು ಕರೆಯಲಾಗುತ್ತಿದ್ದು, ಸಂಶೋಧನೆ ಮತ್ತು ಶಿಕ್ಷಣದ ಕ್ಷೇತ್ರಗಳಿಗೆ ತವರು ಮನೆಯಾಗಿದೆ. ವಿಶ್ವ ವ್ಯಾಪಾರ ಸಂಘಟನೆಯ ಸಚಿವರ ಮಟ್ಟದ ನಿಯೋಗದ ಸಭೆಯ ಮಾತುಕತೆಗಳು ಇಲ್ಲಿಯೇ ನಡೆದವು.ಅಲ್ಲದೇ ದೊಹಾ ಡೆವಲ್ಪ್ ಮೆಂಟ್ ರೌಂಡ್ ನಡೆದ ಮೊದಲ ತಾಣ ಇದಾಗಿದೆ. ದೊಹಾ ನಗರದಲ್ಲಿ 2006 ರ ಏಶಿಯನ್ ಗೇಮ್ಸ್ ಗಳು ಆಯೋಜನವಾಗಿದ್ದವು.ಇದು ಆಗ ಆಯೋಜಿತ ಕ್ರೀಡೆಗಳಲ್ಲಿಯೇ ಅತಿ ದೊಡ್ಡ ಏಶಿಯನ್ ಗೇಮ್ಸ್ ಎಂದು ಹೆಸರಾಗಿತ್ತು. ಇದು 2022 FIFA ವರ್ಲ್ಡ್ ಕಪ್ ನ ಕ್ರೀಡೆಗಳಿಗೆ ವಿಶಾಲ ಪ್ರಮಾಣದಲ್ಲಿ ಸ್ಥಳಾವಕಾಶ ಒದಗಿಸಿ ಆತಿಥೇಯವಾಗಿತ್ತು.

ಇತಿಹಾಸ

thumb|ಏರಿಯಲ್ ವಿವ್ ಆಫ್ ದೊಹಾ.

ದಿ ಎಮಿರಿ ದಿವಾನ್.
ಚಿತ್ರ:Qatar+Economy+Track+Double+Digit+Growth+Al4Egi6XLNRl.jpg
ದೊಹಾದ ವ್ಯಾಪಾರ ಜಿಲ್ಲೆ ಇಂದು

ಆಗ 1825ರಲ್ಲಿ ದೊಹಾ ನಗರವನ್ನು ಅಲ್-ಬಿದಾ ಎಂಬ ಹೆಸರಿನಿಂದ ಸಂಸ್ಥಾಪಿಸಲಾಗಿತ್ತು. ಈ "ದೊಹಾ" ಎಂಬ ಪದವು ಅರೆಬಿಕ್ ನ ಅದ್-ದವ್ಹಾ , "ದೊಡ್ಡ ಮರ"ಎಂಬ ಹೆಸರಿನಿಂದ ಬಂದಿತು. ಕತಾರ್ ದ್ವೀಪ ಪ್ರದೇಶದ ವಿಶಾಲವಾದ ಮೀನುಗಾರಿಕೆ ಸ್ಥಳದಲ್ಲಿ ಬೃಹತ್ ಮರವೊಂದು ತಲೆ ಎತ್ತಿ, ಅದು ಆಗ ತನ್ನ ಪ್ರಾಧಾನ್ಯತೆ ಮೆರೆಯಿತು. ಇದನ್ನು ಬಹುಶಃ "ದೊಹತ್"ಎಂಬ ಪದದಿಂದ ಪಡೆದಿರಬೇಕು,ಅಂದರೆ ಇದನ್ನು ಅರೆಬಿಕ್ ಕೊಲ್ಲಿ ಅಥವಾ ಜಲಾವೃತ ಪ್ರದೇಶದ ಕಮರಿ ಇರುವ ಸ್ಥಳವೆನ್ನಲಾಗುತ್ತಿತ್ತು.ಇದನ್ನು ಸುತ್ತಲಿನ ಕರಾವಳಿ ಪ್ರದೇಶಕ್ಕೆ ಉಲ್ಲೇಖಿಸಿ ದೊಹಾ ಎಂದು ಪರಿಗಣಿಸಲಾಗುತ್ತಿತ್ತು ಕತಾರ್ ಮತ್ತು ಬಹ್ರೆನ್ ನಡುವೆ 1825 ರಲ್ಲಿ ನಡೆದ ಯುದ್ದದಲ್ಲಿ ದೊಹಾ ತೀವ್ರ ಹಾನಿಗೊಳಗಾಯಿತು.ಅಬು ಧಾಬಿಯು ಬಹ್ರೆನ್ ಗೆ ನೆರವಾಗುತ್ತಿತ್ತು.[] ಅಲ್ ರಯ್ಯಾನ್ ಎಂಬಾತ ದೊಹಾದ ಆಗ್ನೇಯ್ ಭಾಗದಲ್ಲಿ ಅಲ್ ವಾಜ್ಬಹ್ ಕೋಟೆಯನ್ನು 1882 ರಲ್ಲಿ ನಿರ್ಮಿಸಿದ. ಅದರ ಮರುವರ್ಷ ಶೇಖ್ ಕಾಸಿಮ್, ಕತಾರಿ ಸೈನ್ಯದೊಂದಿಗೆ ಒಟ್ಟೊಮನ್ಸ್ ವಿರುದ್ದ ದಾಳಿ ನಡೆಸಿ ವಿಜಯಿಯಾದ.

ಈ ನಗರವು 1916 ರಲ್ಲಿ ಕತಾರ್ ನ ಭಾಗವಾಗಿ ಆಗ ಬ್ರಿಟಿಶ್ ರಾಜ್ಯಾಡಳಿತ ರಕ್ಷಣೆಯಲ್ಲಿತ್ತು.ದೇಶವು 1971 ರಲ್ಲಿ ಸ್ವಾತಂತ್ರ್ಯ ಪಡೆಯಿತು.

ಪ್ರಸಿದ್ದ ಅಲ್ ಕೌಟ್ ಕೋಟೆಯು ನಗರದ ಕೇಂದ್ರಭಾಗದಲ್ಲಿದ್ದು ಇದನ್ನು 1917 ರಲ್ಲಿ ಶೇಖ್ ಅಬ್ದುಲ್ಲಾ ಬಿನ್ ಕಾಸಿಮ್ ಅಲ್ ಥಾನಿ ನಿರ್ಮಿಸಿದರು. ಆಗ 20 ನೆಯ ಶತಮಾನದಿಂದಲೂ ಬಹುತೇಕ ಕತಾರ್ ನ ಅರ್ಥ ವ್ಯವಸ್ಥೆಯು ಮೀನುಗಾರಿಕೆ ಮತ್ತು ಮುತ್ತುಗಳ ಸಾಗಣೆಯ ಮೇಲೆ ಅವಲಂಬಿತವಾಗಿದೆ.ದೊಹಾದಲ್ಲಿ ಸುಮಾರು 350 ಮುತ್ತುಗಳ ಹುಡುಕುವ ದೋಣಿಗಳಿದ್ದವು. ಆದರೆ ಜಪಾನದ ಸಂಸ್ಕರಣ ಮಾಡಿದ ಮುತ್ತುಗಳು 1930ರಲ್ಲಿ ಜನಪ್ರಿಯವಾಗತೊಡಗಿದಾಗ ದೊಹಾ ಪಟ್ಟಣವನ್ನೊಳಗೊಂಡಂತೆ ಈ ಪ್ರದೇಶ ತೀವ್ರ ಕುಸಿತ ಕಂಡಿತು.ಕತಾರ್ ಬಡ ರಾಷ್ಟ್ರವಾಗಿ ಬಡತನದ ಕಂದಕಕ್ಕೆ ಬಿದ್ದುಹೋಯಿತು. ಈ ಪರಿಸ್ಥಿತಿಯು ತೈಲದ ಪತ್ತೆಯಾಗುವ ತನಕ ಅಂದರೆ 1930 ರ ಕೊನೆವರೆಗೆ ಮುಂದುವರೆಯಿತು. ಆದರೂ ತೈಲ ಹೊರತೆಗೆಯುವುದು ಮತ್ತು ರಫ್ತು ಮಾಡುವುದನ್ನು ಎರಡನೆಯ ಮಹಾಯುದ್ದದ ಕಾರಣದಿಂದ ಸ್ಥಗಿತಗೊಳಿಸಲಾಗಿತ್ತು. ಇಂದು ದೇಶವು ಸುಮಾರು 800,000 ಬ್ಯಾರೆಲ್ಸ್ ತೈಲವನ್ನು ಪ್ರತಿದಿನ ಉತ್ಪಾದಿಸುತ್ತದೆ. ಆಗ 1969,ರಲ್ಲಿ ಸರ್ಕಾರಿ ಭವನ ಉದ್ಘಾಟನೆಯಾಯಿತು. ಇಂದು ಅದು ಕತಾರ್ ನ ಪ್ರಧಾನ ಹೆಗ್ಗುರುತಾಗಿ ಗುರುತಿಸಲ್ಪಡುತ್ತದೆ.

ಮೊದಲ ಬಾರಿಗೆ ಅಲ್ ಬಿದಾವನ್ನು ಇಂಗ್ಲಿಷ್ ಮೂಲಗಳು 1765 ರಲ್ಲಿ ನಿಖರವಲ್ಲದ ನಕ್ಷೆಯೊಂದರ ಮೇಲೆ ಕಾರ್ಸ್ಟೆನ್ ನೆಬೆರ್ ಮೂಲಕ 1765 ರಲ್ಲಿ ಪ್ರದರ್ಶಿಸಿದ್ದವು.ಆಗ ಇದರಲ್ಲಿ ಅಲ್ ಬಿದ್ದಾವನ್ನು ಗುತ್ತುರ್ ಗೆ ಉಲ್ಲೇಖ ಮಾಡಲಾಗಿತ್ತು. ಕಾರ್ಸ್ಟೆನ್ ವೈಯಕ್ತಿಕವಾಗಿ ಕತಾರ್ ಗ ಭೇಟಿ ನೀಡಿರಲಿಲ್ಲ.ಆದರೆ ಸ್ಥಳೀಯ ಅರಬ್ ರು ಮತ್ತು ಇಂಗ್ಲಿಷ್ ಸಮುದ್ರ ನಾವಿಕರ ತಿಳಿವಳಿಕೆ ಮೇಲೆ ಆತ ಈ ನಕ್ಷೆಯನ್ನು ಪ್ರಕಟಿಸಿದ್ದ. ಹತ್ತೊಂಬತ್ತನೆಯ ಶತಮಾನದಲ್ಲಿ ದೊಹಾ ಸಣ್ಣ ಗ್ರಾಮಕ್ಕಿಂತ ಕೊಂಚ ದೊಡ್ಡದಾಗಿತ್ತು.ಆಗ ಅದನ್ನು ಅಲ್ ಬಿದಾ ಎಂದು ಕರೆಯಲಾಗುತ್ತಿತ್ತು. ನಂತರ 1820 ರಲ್ಲಿ ಮೇಜರ್ ಕೊಲೆಬ್ರೂಕ್ ಇದನ್ನು ಹೀಗೆ ವಿವರಿಸಿದ್ದಾನೆ:

"ಗುತ್ತುರ-ಅಥವಾ ಉಲ್ ಬುಡೀ [ಅಲ್ ಬಿದ್ದಾ]ಇದು ಅತ್ಯಂತ ಆಕರ್ಷಕ ಪಟ್ಟಣವಾಗಿತ್ತು.ಸಮುದ್ರ ತಟದಲ್ಲಿ ಅದು ಎರಡು ದೊಡ್ಡ ಜಲಾಗಾರಗಳನ್ನು ಹೊಂದಿತ್ತು.ಈ ಜಲಾನಯನ ಪ್ರದೇಶದಲ್ಲಿ ಶುದ್ದ ನೀರು ಇರಲಿಲ್ಲ,ಹಠಾತ್ ಸಂಭವಿಸುವ ದಾಳಿಗಳಿಂದ ಪಾರಾಗಲು ಇದು ದೊಡ್ಡ ಕಂದಕದಲ್ಲಿನ ನೀರು ರಕ್ಷಣಾತ್ಮಕವೆಂದು ಹೇಳಲಾಗುತ್ತಿತ್ತು.ಇನ್ನೊಂದು ನಗರದ ಆಂತರಿಕ,ಮಧ್ಯದಲ್ಲಿದ್ದು ಅದರಲ್ಲಿ ಶುದ್ದ-ತಾಜಾ ನೀರು ದೊರೆಯುತ್ತದೆ." ಇಂತಹ ಪ್ರದೇಶವೊಂದರ ಸ್ಥಳವು ಸುಮಾರು ಇನ್ನೂರು ಜನರನ್ನು ತನ್ನೊಳಗೆ ಬಚ್ಚಿಟ್ಟುಕೊಳ್ಳುವಂತಹದ್ದಾಗಿತ್ತು. ಇನ್ನುಳಿದ ಉಕ್ ಬುಡೀ ಸುಮಾರು 250 ಜನರಿಗೆ ಆಶ್ರಯ ಒದಗಿಸಿತ್ತು.ಆದರ ಮೂಲ ನಿವಾಸಿಗಳು ಬಹ್ರೆನ್ ನಿಂದ ಮರಳಬೇಕಾಗಿದ್ದು ಅವರು ಒಟ್ಟು 900 ರಿಂದ 1,000 ವರೆಗೆ ಎಂದು ನಿರೀಕ್ಷಿಸಲಾಗಿತ್ತು.ದೊಸೆಯರ್ ಬುಡಕಟ್ಟಿನವರು ಸಾಮಾನ್ಯವಾಗಿ ಮುಳುಗುಗಾರರಾಗಿ 600 ರಿಂದ 800 ಜನ ಇಲ್ಲಿ ನೆಲೆವಾಸ ಕಂಡುಕೊಳ್ಳಲು ಯತ್ನಿಸಿದರು."'

ಎಷ್ಟೋ ಪಾಲು ಸಣ್ಣ ನಗರವಾಗಿದ್ದರೂ ಇದು ಬ್ರಿಟಿಶ್ ದೋಣಿ ವೆಸ್ಟಾಲ್ 1821 ರಲ್ಲಿ ಬಾಂಬ್ ದಾಳಿಗೆ ಒಳಗಾಯಿತು.ಹೀಗಾಗಿ ನಗರವು ಸಾಮಾನ್ಯ ಶಾಂತಿ ಒಪ್ಪಂದದ ಉಲ್ಲಂಘನೆಗೊಳಗಾಯಿತು. ಅವರನ್ನು ಮತ್ತೆ 1841 ರಲ್ಲಿ ಅಲ್-ಸುವೈದಿ ನೇತೃತ್ವದಲ್ಲಿ ದಾಳಿಗೊಳಪಡಿಸಲಾಯಿತು.ಸುಡಾನಿನ ಮುಖ್ಯಸ್ಥ ಅಲ್ ಬಿದ್ದಾವನ್ನು ಆಳುತ್ತಿದ್ದ.ಕಾನೂನನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಈ ದಾಳಿ ನಡೆಯಿತು,ಅಲ್ಲದೇ 1847 ರಲ್ಲಿ ಮತ್ತೆ ವಿನಾಶಕ್ಕೀಡಾಗಿತ್ತು.ಅದರ ನಾಯ್ಕ ಬಿನ್ ತಾರಿಫ್ ಬಿನ್ ಸಲ್ಮಾಹ್ ನನ್ನು ಬಹ್ರೆನ್ ನ ಅಲ್ ಖಲಿಫಾ ವಿರುದ್ದದ ದಾಳಿಯಲ್ಲಿ ಹತ್ಯೆ ಮಾಡಲಾಯಿತು. ಇಂತಹ ಪ್ರಮುಖ ಅಶಾಂತಿ ಹುಟ್ಟುಹಾಕುವ ಪರಿಸ್ಥಿತಿಗಳು ಅಲೆಮಾರಿ ಬೆದೌನಿ ಅವರ ದಾಳಿಗಳಿಂದಾಗಿ ಸ್ಥಗಿತಗೊಳ್ಳುವಂತಾಯಿತು.ಆದರೆ ಈ ದಾಳಿಗಳು ಸುಮಾರು ಒಂದು ನೂರುವರ್ಷಗಳ ಕಾಲ ನಡೆದವು.

ಇಂತಹ ಪದೇ ಪದೇ ನಡೆದ ದಾಳಿಗಳಿಂದಾಗಿ ಅಲ್ ಥಾನಿ ಕುಟುಂಬವು ಫುವೆರೆಟ್ ನಿಂದ ಅಲ್ ಬಿದ್ದಾಗೆ ಸ್ಥಳಾಂತರವಾಯಿತು.ಆಗ ಬ್ರಿಟಿಶ್ ರೆಸಿಡೆಂಟ್ ಅಧಿಕಾರಿ ಇಲ್ಲಿಗೆ ಭೇಟಿ ನೀಡಿದಾಗ ಶೇಖ್ ಅಲ್ ಥಾನಿ ಈ ಗ್ರಾಮ, ದೊಹಾದ ಮುಖ್ಯಸ್ಥರಾಗಿದ್ದರು. ದೊಹಾ ಸದ್ಯ ಪ್ರತ್ಯೇಕ ಗ್ರಾಮವಾಯಿತು.ಇದು ಅಲ್ ಬಿದ್ದಾಗೆ ನಿಕಟವಾಗಿತ್ತು.ಹೀಗೆ ಅಲ್ ಬಿದ್ದಾ ಮತ್ತು ದೊಹಾದ ನಡುವೆ ಪುಟ್ಟ ದೊಹಾ ತಲೆ ಎತ್ತಿದೆ.ಅಲ್ ಬಿದ್ದಾದಿಂದ ಕೇವಲ ನಾಲ್ಕನೂರು ಯಾರ್ಡ್ ನಷ್ಟು ಮಾತ್ರ ದೂರ ಇದೆ. ವಿರೋಧಾಭಾಸ ಎನ್ನುವಂತೆ ಅದರ ಕತಾರ್ ರಾಜಧಾನಿ ಬೇರಿನ ಮೂಲಗಳಾದರೂ, ದೊಹಾ ಮತ್ತು ಅಲ್ ವಕ್ರಾಗಳು ಮತ್ತೆ ದಾಳಿಗೀಡಾದವು.ಅಭುಧಾಬಿ ನೆರವಿನಿಂದ ಬಹ್ರೆನ್ 1867 ರಲ್ಲಿ ತನ್ನ ದಾಳಿ ನಡೆಸಿತ್ತು. ದೊಹಾ ಮತ್ತು ಅಲ್ ವಕ್ರಾಗಳು ಜೊತೆಯಾಗಿ ರಕ್ತಪಾತದ ಪ್ರಸಂಗ ಎದುರಾದರೂ ತಿರುಗೇಟು ನೀಡಿದವು. ಈ ದಾಳಿಯಿಂದಾಗಿ, ಬ್ರಿಟಿಶ್ ರು ತಮ್ಮ ವ್ಯಾಪಾರ ವಾಣಿಜ್ಯ ಸಂಬಂಧಗಳಿಗೆ ತೊಂದರೆಯಾಯಿತೆಂದು ಕೋಪಗೊಂಡರು,ಅಲ್ ಬಹ್ರೆನ್ ನ್ ಖಲೀಫಾ ಕಡಲತೀರದ ಯುದ್ದವನ್ನು ಮಾಡುವುದಿಲ್ಲ ಎಂದಿದ್ದ ಶಾಂತಿ ಸಂಧಾನವನ್ನು ಉಲ್ಲಂಘಿಸಲಾಗಿದೆ ಎಂದು ಬ್ರಿಟಿಶ್ ರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.ಬ್ರಿಟಿಶ್ ರು ಆಗ ಅಲ್ ಬಿದಾಗೆ ಆಗಮಿಸಿ ಅದರ ಮುಖ್ಯಸ್ಥ ಮೊಹಮದ್ ಬಿನ್ ಥಾನಿಯನ್ನು ಭೇಟಿಯಾದರು."ಥಾನಿಯು ದ್ವೀಪ ಪ್ರದೇಶದ ಎಲ್ಲಾ ಶೇಖ್ಸ್ ಮತ್ತು ಗುಡ್ಡಗಾಡು ಜನರ ಪ್ರತಿನಿಧಿಯಂತಿದ್ದರು." ಈ ಭೇಟಿಯು ಮುಂದೆ ಅಲ್ ಥಾನಿಗಳ ನಾಯಕತ್ವದಡಿ ಕತಾರ್ ದೇಶವಾಗಿ ಮಾರ್ಪಟ್ಟಿತು. ಕೆಲಕಾಲ ಒಟ್ಟೊಮನ್ಸ್ ಗಳು ದೊಹಾವನ್ನು ಕೇಂದ್ರವಾಗಿಸಿಕೊಂಡು ದೇಶದ ಮೇಲೆ ಸಾಮಾನ್ಯ ರೀತಿಯ ನಿಯಂತ್ರಣ ಹೊಂದಿದ್ದರು.ಇದರ ನೇತೃತ್ವ ವಹಿಸಿದ್ದ ಕಾಸಿಮ್ ಅಲ್ ಥಾನಿ ಇಡೀ ಪ್ರದೇಶವನ್ನು ತನ್ನ ಸುಪರ್ದಿಗೆ ತಂದುಕೊಳ್ಳಲು ಪ್ರಯತ್ನಿಸಿದ. ಹೇಗೆಯಾದರೂ ರಾಜ್ಯಾಡಳಿತದ ಆಧೀನದ ಬಗ್ಗೆ ಮತ್ತು ಮೂಗು ತೂರಿಸುವ ಬಗೆಗೆ ಅಸಮ್ಮತಿ ಉಂಟಾಗಿ ಇದು 1893 ರಲ್ಲಿ ಯುದ್ದಕ್ಕೆ ದಾರಿಯಾಯಿತು. ಒಟ್ಟೊಮನ್ಸ್ ಗಳು ಪರಾಜಯಗೊಂಡು ಅವರು ದೊಹಾದ ಮಧ್ಯಭಾಗದ ಚಿಕ್ಕ ಕೋಟೆಗೆ ಸೀಮಿತರಾದರು.ಮೊದಲ ಮಹಾಯುದ್ದದ ವರೆಗೂ ಅಲ್ಲಿಯೇ ಇದ್ದ ಅವರು ಮುಂದೆ ಅಲ್ಲಿಂದ ಪಲಾಯನಗೈದರು. ಭಾಗಶಃ ಒಟ್ಟೊಮನ್ಸ್ ರ ನಿರ್ಗಮನದಿಂದ ಕತಾರ್ ಬ್ರಿಟಿಶ್ ರ ಸಂರಂಕ್ಷಣೆಯಲ್ಲಿ ಬಂದಿತು. ಆಗ ದೊಹಾ ಅವರ ರಾಜಧಾನಿಯಾಗಿತ್ತು.

ಈ ಶತಮಾನದ ಹೊತ್ತಿಗೆ ದೊಹಾದಲ್ಲಿ ಸುಮಾರು 12,000 ಜನಸಂಖ್ಯೆ ಇತ್ತು ಅಲ್ಲದೇ 350 ಮುತ್ತು ಸಾಗಿಸುವ ದೋಣಿಗಳನ್ನು ಒಳಗೊಂಡಿತ್ತು. ಆದರೆ ಜಪಾನಿನ ಸಂಸ್ಕರಣಗೊಂಡ ಮುತ್ತುಗಳ ಆಗಮನದಿಂದ ಈ ಪ್ರದೇಶದ ನೈಸರ್ಗಿಕ ಮುತ್ತುಗಳಿಗೆ ಕುತ್ತು ಬಂದು ಅದು 1930 ರಲ್ಲಿ ಕುಸಿತ ಕಂಡಿತು.

ಎರಡನೆಯ ಮಹಾಯುದ್ದದ ಅನಂತರ ಕತಾರ್ ನಲ್ಲಿ ತೈಲ ಬಾವಿಗಳು ಪತ್ತೆಯಾದವು. ಆಗ ಇವು ನಗರವನ್ನು ಆರ್ಥಿಕವಾಗಿ ಬಚಾವ್ ಮಾಡಿದವು.ಕೆಲಕಾಲದ ನಂತರ ಮತ್ತೆ ನೈಸರ್ಗಿಕ ಅನಿಲದ ಉತ್ಪಾದನೆ ಪ್ರಾರಂಭವಾದ ಅನಂತರ ಅದರ ಅವಲಂಬನೆ ನಿಸರ್ಗ ಸಂಪತ್ತಿನ ಮೇಲೆ ಜಾಸ್ತಿಯಾಯಿತು.

ಆ ವೇಳೆಗೆ ಸರಳವಾದ ನೆಲೆವಾಸಗಳು ಸಾಮಾನ್ಯ ಮಣ್ಣು ಮತ್ತು ಕಲ್ಲು ಹವಳದ ಪದರನ್ನು ಬಳಸಿದ ಕೇವಲ ಒಂದೆರೆಡು ಕೊಠಡಿಗಳನ್ನು ಮಾತ್ರ ಹೊಂದಿದ್ದವು. ಅದೇ ವೇಳೆಗೆ ಕತಾರ್ ನ ಶ್ರೀಮಂತರು ಅಥವಾ ಅಮೀರ್ ಗಳು ಹೊಸ ನೈಸರ್ಗಿಕ ಸಂಪತ್ತಿನಿಂದಾಗಿ ತಮ್ಮ ಗುಡಿಸಲುಗಳನ್ನು ನೆಲಸಮಗೊಳಿಸಿ ಕೂಡಲೇ ಆಧುನಿಕ ಕಟ್ಟಡಗಳನ್ನು ನಿರ್ಮಿಸಿಕೊಂಡರು. ಇಂತಹ ಆಧುನೀಕರಣದ ಭರಾಟೆಯಲ್ಲಿ ಪ್ರದೇಶ ದೇಶದ ಬಹುತೇಕ ಪರಂಪರೆ ಸಾರುವ ಕಟ್ಟಡಗಳು ಕಣ್ಮರೆಯಾದವು.ದೊಹಾದಲ್ಲಿ ಕೇವಲ ಒಂದೇ ಒಂದು ಗಾಳಿಗೋಪುರ ಮಾತ್ರ ಅವಶೇಷದಂತೆ ಉಳಿದಿದೆ. ಸದ್ಯ ದೊಹಾದ ಸೋಜಿಗರೀತಿಯ ಬೆಳವಣಿಗೆಯನ್ನು ತೋರುವ ಅನೇಕ ವಸ್ತುಗಳು ಕತಾರ್ ನ ನ್ಯಾಶನಲ್ ಮ್ಯುಜಿಯಮ್ ನಲ್ಲಿ ಕಾಣಸಿಗುತ್ತವೆ. ದೊಹಾವು ಸ್ಥಳೀಯ ಮಹತ್ವ ಸಾರುವ ಒಂದು ಬಂದರುವಾಗಿದೆ. ಈ ಕೊಲ್ಲಿಯಲ್ಲಿದ್ದ ಕಡಿಮೆ ಆಳದ ನೀರಿನಂದಾಗಿ ದೊಡ್ಡ ಹಡಗುಗಳು 1970 ರ ವರೆಗೆ ಇಲ್ಲಿಗೆ ಬರುತ್ತಿರಲಿಲ್ಲ;ಆದರೆ ಅದು ಯಾವಾಗ ತನ್ನ ಆಳ ನೀರಿನ ಬಂದರು ನಿರ್ಮಾಣವನ್ನು ಕೈಗೆತ್ತಿಕೊಂಡಿತೋ ಆಗ ದೊಡ್ಡ ಹಡಗುಗಳಿಗೂ ಇದು ತಾಣವಾಯಿತು. ಮುಂದೆ ವ್ಯಾಪಕ ಭೂಸುಧಾರಣಾ ಕ್ರಮಗಳಿಂದಾಗಿ ಅರ್ಧ ಚಂದ್ರಾಕೃತಿಯ ಕೊಲ್ಲಿ ಪ್ರದೇಶವು ಇಂದು ಕಾಣಸಿಗುವ ದೊಡ್ಡ ಪ್ರದೇಶವಾಗಿದೆ. ಹೀಗೆ ದೊಹಾ ನಗರವು 1825 ರಲ್ಲಿ ಅಲ್-ಬಿದಾ ಎಂಬ ಹೆಸರಿನಿಂದ ಸಂಸ್ಥಾಪಿಸಲ್ಪಟ್ಟಿತು. ಈ "ದೊಹಾ"ಹೆಸರು ಅರೆಬಿಕ್ ಅದ್-ದವ್ಹಾ "ದೊಡ್ಡ ಮರ" ಎಂಬರ್ಥ ಪಡೆಯಿತು. ಇಲ್ಲಿನ ಮೀನುಗಾರಿಕೆ ಗ್ರಾಮದ ಸ್ಥಳದಲ್ಲಿ ದೊಡ್ಡ ಮರವೊಂದು ಇದ್ದಿದ್ದರ ಬಗ್ಗೆ ಪುರಾವೆಗಳಿರಬಹುದು.ಕತಾರ್ ನ ಪೂರ್ವ ಕರಾವಳಿಯ ದ್ವೀಪದಲ್ಲಿ ಈ ನಗರ ಕಾಣಿಸಿಕೊಂಡಿದೆ. ಅದನ್ನು ಬಹುಶಃ "ದೊಹತ್" ಅಂದರೆ ಅರೆಬಿಲ್ ನಲ್ಲಿ ಕೊಲ್ಲಿ ಅಥವಾ ಸಮುದ್ರ ಸೇರುವ ಜಾಗೆಗೆ ಹೇಳಲಾಗುತ್ತದೆ.ದೊಹಾವು ಕರಾವಳಿ,ಪ್ರಪಾತ ರಸ್ತೆ ಮತ್ತು ಕೊಲ್ಲಿ ಭೂಪ್ರದೇಶ ಹೊಂದಿರುವ ಗುರುತಾಗಿ ಈ ಹೆಸರು ಬಂದಿರಬಹುದು. ಕತಾರ್ ಮತ್ತು ಬಹ್ರೆನ್ ನಡುವೆ 1825 ರಲ್ಲಿ ನಡೆದ ಯುದ್ದದಿಂದಾಗಿ ದೊಹಾ ತೀವ್ರವಾಗಿ ಹಾನಿಗೊಳಗಾಯಿತು.ಅಭುಧಾಭಿ ಕೂಡ ಬಹ್ರೆನ್ ಗೆ ನೆರವಾಗಿತ್ತು.[] ಅಲ್ ರಯಾನ್ ದೊಹಾದ ಆಗ್ನೇಯದಲ್ಲಿ ಅಲ್ ವಜ್ಬಾಹ್ ಕೋಟೆಯನ್ನು 1882 ರಲ್ಲಿ ನಿರ್ಮಿಸಿದ. ನಂತರ ಅದರ ಮರುವರ್ಷ ಶೇಖ್ ಕಾಸಿಮ್, ಕತಾರಿ ಸೈನ್ಯದೊಂದಿಗೆ ಒಟ್ಟೊಮನ್ಸ್ ವಿರುದ್ದ ದಾಳಿ ನಡೆಸಿ ವಿಜಯಿಯಾದ.

ಈ ನಗರವು 1916 ರಲ್ಲಿ ಕತಾರ್ ನ ಭಾಗವಾಗಿ ಆಗ ಬ್ರಿಟಿಶ್ ರಾಜ್ಯಾಡಳಿತ ರಕ್ಷಣೆಯಲ್ಲಿತ್ತು.ದೇಶವು 1971 ರಲ್ಲಿ ಸ್ವಾತಂತ್ರ್ಯ ಪಡೆಯಿತು.

ಪ್ರಸಿದ್ದ ಅಲ್ ಕೌಟ್ ಕೋಟೆಯು ನಗರದ ಕೇಂದ್ರಭಾಗದಲ್ಲಿದ್ದು ಇದನ್ನು 1917 ರಲ್ಲಿ ಶೇಖ್ ಅಬ್ದುಲ್ಲಾ ಬಿನ್ ಕಾಸಿಮ್ ಅಲ್ ಥಾನಿ ನಿರ್ಮಿಸಿದರು ಆಗ 20 ನೆಯ ಶತಮಾನದಿಂದಲೂ ಬಹುತೇಕ ಕತಾರ್ ನ ಅರ್ಥ ವ್ಯವಸ್ಥೆಯು ಮೀನುಗಾರಿಕೆ ಮತ್ತು ಮುತ್ತುಗಳ ಸಾಗಣೆಯ ಮೇಲೆ ಅವಲಂಬಿತವಾಗಿದೆ.ದೊಹಾದಲ್ಲಿ ಸುಮಾರು 350 ಮುತ್ತುಗಳ ಹುಡುಕುವ ದೋಣಿಗಳಿದ್ದವು. ಆದರೆ ಜಪಾನದ ಸಂಸ್ಕರಣ ಮಾಡಿದ ಮುತ್ತುಗಳು 1930ರಲ್ಲಿ ಜನಪ್ರಿಯವಾಗತೊಡಗಿದಾಗ ದೊಹಾ ಪಟ್ಟಣವನ್ನೊಳಗೊಂಡಂತೆ ಈ ಪ್ರದೇಶ ತೀವ್ರ ಕುಸಿತ ಕಂಡಿತು.ಕತಾರ್ ಬಡ ರಾಷ್ಟ್ರವಾಗಿ ಬಡತನದ ಕಂದಕಕ್ಕೆ ಬಿದ್ದುಹೋಯಿತು. ಈ ಪರಿಸ್ಥಿತಿಯು ತೈಲದ ಪತ್ತೆಯಾಗುವ ತನಕ ಅಂದರೆ 1930 ರ ಕೊನೆವರೆಗೆ ಮುಂದುವರೆಯಿತು. ಆದರೂ ತೈಲ ಹೊರತೆಗೆಯುವುದು ಮತ್ತು ರಫ್ತು ಮಾಡುವುದನ್ನು ಎರಡನೆಯ ಮಹಾಯುದ್ದದ ಕಾರಣದಿಂದ ಸ್ಥಗಿತಗೊಳಿಸಲಾಗಿತ್ತು. ಇಂದು ದೇಶವು ಸುಮಾರು 800,000 ಬ್ಯಾರೆಲ್ಸ್ ತೈಲವನ್ನು ಪ್ರತಿದಿನ ಉತ್ಪಾದಿಸುತ್ತದೆ. ಆಗ 1969,ರಲ್ಲಿ ಸರ್ಕಾರಿ ಭವನ ಉದ್ಘಾಟನೆಯಾಯಿತು. ಇಂದು ಅದು ಕತಾರ್ ನ ಪ್ರಧಾನ ಹೆಗ್ಗುರುತಾಗಿ ಗುರುತಿಸಲ್ಪಡುತ್ತದೆ.

ಯುನ್ವರ್ಸಿಟಿ ಆಫ್ ಕತಾರ್ 1973 ರಲ್ಲಿ ಉದ್ಘಾಟನೆಯಾದರೆ 1975 ರಲ್ಲಿ ಕತಾರ್ ನ್ಯಾಶನಲ್ ಮುಜಿಯಮ್ ತೆರೆಯಿತು;ಇದು 1912 ರಲ್ಲಿ ಆಡಳಿತಗಾರರ ಅರಮನೆಯಾಗಿತ್ತು. ಅಲ್ ಜಜೀರಾ ಅರೆಬಿಕ್ ಉಪಗ್ರಹ ಟೆಲೆವಿಜನ್ ಸುದ್ದಿವಾಹಿನಿಯು ದೊಹಾದಿಂದ ತನ್ನ ಪ್ರಸಾರ ಕಾರ್ಯವನ್ನು ಆರಂಭಿಸಿದೆ.ಅದು ತನ್ನ ಪ್ರಧಾನ ಕಚೇರಿಯನ್ನು 1996 ರಲ್ಲಿ ಆರಂಭಿಸಿತು. ಶೇಖ್ ಹಮದ್ ಬಿನ್ ಖಲಿಫಾ ಅಲ್ ಥಾನಿ ಸದ್ಯ ಸುಂದರ ನಗರ, ಕತಾರ್ ನ ರಾಜಧಾನಿ ದೊಹಾದ ಆಡಳಿತಗಾರರಾಗಿದ್ದಾರೆ.

ಹವಾಮಾನ

ಬೇಸಿಗೆಯಲ್ಲಿ ಅಲ್ ಖೊರ್ ಬೀಚ್.

ದೊಹಾದಲ್ಲಿ, ಶುಷ್ಕ ವಾತಾವರಣದ ಹವಾಮಾನ ಪ್ರಮುಖ ಲಕ್ಷಣವಾಗಿದೆ. ಇದು ಅರೆಬಿಯನ್ ದ್ವೀಪ ಪ್ರದೇಶದಲ್ಲಿ ಸ್ಥಿತವಾಗಿದ್ದರಿಂದ ಅದರ ಹವಾಮಾನವು ಅತ್ಯಂತ ಬಿಸಿಯಾಗಿರುತ್ತದೆ. ಮೇ ಮತ್ತು ಸೆಪ್ಟೆಂಬರ್ ಮಧ್ಯ ತಾಪಮಾನವು ಸರಾಸರಿ 38 °C (100 °F)ರಷ್ಟಿರುತ್ತದೆ,ಆರ್ದ್ರತೆಯು ವ್ಯತ್ಯಾಸ ಪಡೆಯುತ್ತಿರುತ್ತದೆ. ನೀರಿನ ಭಾಷ್ಪೀಕರಣದ ಅಂಶವು ಬೇಸಿಗೆಯಲ್ಲಿ 25 °C (77 °F)ಇದರ ಮೇಲೆ ಇರುತ್ತದೆ. ಬೇಸಿಗೆ ಕಾಲದ ತಿಂಗಳುಗಳಲ್ಲಿ ನಗರವು 20 mm (0.79 in)ಸಾಮಾನ್ಯವಾಗಿ ಧೂಳು-ಗಾಳಿಯ ಅವಕ್ಷೇಪನ ಅನುಭವಿಸುತ್ತದೆ.[] ಮಳೆ ಪ್ರಮಾಣ ಕೂಡ ವಿರಳವಗಿರುತ್ತದೆ,ಸರಾಸರಿ 75 mm (2.95 in)ರಷ್ಟು ಪ್ರತಿ ವರ್ಷ ಬೀಳುತ್ತಿದ್ದು ಇದು ಅಕ್ಟೋಬರ್ ಮತ್ತು ಮಾರ್ಚ್ ನಡುವೆ ಮಳೆಗಾಲ ಅನುಭವಿಸುತ್ತದೆ. ಚಳಿಗಾಲಗಳು ಸೌಮ್ಯವಾಗಿರುತ್ತವೆ,ತಾಪಮಾನ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿರುತ್ತದೆ.7 °C (45 °F)

Doha
Climate chart (explanation)
JFMAMJJASOND
 
 
13
 
22
13
 
 
17
 
23
14
 
 
16
 
27
17
 
 
8.7
 
32
21
 
 
3.6
 
38
25
 
 
0
 
41
28
 
 
0
 
42
29
 
 
0
 
41
29
 
 
0
 
39
27
 
 
1.1
 
35
23
 
 
3.3
 
30
20
 
 
12
 
24
15
Average max. and min. temperatures in °C
Precipitation totals in mm
Source: WMO
Dohaದ ಹವಾಮಾನ ದತ್ತಾಂಶ
ತಿಂಗಳು ಫೆ ಮಾ ಮೇ ಜೂ ಜು ಸೆ ಆಕ್ಟೋ ಡಿ ವರ್ಷ
ಅಧಿಕ ಸರಾಸರಿ °C (°F) 21.7
(71.1)
23.0
(73.4)
26.8
(80.2)
31.9
(89.4)
38.2
(100.8)
41.2
(106.2)
41.5
(106.7)
40.7
(105.3)
38.6
(101.5)
35.2
(95.4)
29.5
(85.1)
24.1
(75.4)
32.7
(90.88)
ಕಡಮೆ ಸರಾಸರಿ °C (°F) 12.8
(55)
13.7
(56.7)
16.7
(62.1)
20.6
(69.1)
25.0
(77)
27.7
(81.9)
29.1
(84.4)
28.9
(84)
26.5
(79.7)
23.4
(74.1)
19.5
(67.1)
15.0
(59)
21.58
(70.84)
ಸರಾಸರಿ ಮಳೆ mm (inches) 13.2
(0.52)
17.1
(0.673)
16.1
(0.634)
8.7
(0.343)
3.6
(0.142)
0
(0)
0
(0)
0
(0)
0
(0)
1.1
(0.043)
3.3
(0.13)
12.1
(0.476)
75.2
(2.961)
Source: World Meteorological Organisation (UN) []

ಜನಸಂಖ್ಯೆ

ಚಿತ್ರ:Souq Waqif mosque.jpg
ಫನಾರ್ ಇಸ್ಲಾಮಿಕ್ ಸೆಂಟರ್, ಸೌಕ್ ವಕ್ಫ್.


ದೊಹಾದಲ್ಲಿ ಅಸಹಜತೆಯಿಂದ ಕೂಡಿದ ಜನಸಂಖ್ಯೆ ಇದೆ,ಇಲ್ಲಿನ ಬಹುತೇಕ ಜನಸಂಖ್ಯೆ ವಲಸೆಗಾರರಿಂದ ಕೂಡಿದೆ.ಕತಾರಿ ರಾಷ್ಟ್ರೀಯರು ಇಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ. ಕತಾರ್ ನಲ್ಲಿ ಅತ್ಯಧಿಕವಾಗಿ ವಲಸೆಗಾರರು ದಕ್ಷಿಣ ಏಶಿಯಾದ ದೇಶಗಳಿಗೆ ಸೇರಿದವರಾಗಿದ್ದಾರೆ,ಅದರಲ್ಲೂ ಪ್ರಮುಖವಾಗಿ,ಪಾಕಿಸ್ತಾನ್,ಭಾರತ, ಶ್ರೀಲಂಕಾ,ನೇಪಾಳ,ಫಿಲಿಫೈನ್ಸ್, ಬಾಂಗ್ಲಾದೇಶ ಮತ್ತು ಇಂಡೊನೇಶಿಯಾ, ಅಷ್ಟೇ ಅಲ್ಲದೇ ದೊಡ್ಡ ಪ್ರಮಾಣದಲ್ಲಿ ವಲಸೆಗಾರರು ಲೆವಂಟ್ ಅರಬ್ ದೇಶಗಳು, ಉತ್ತರ ಅಫ್ರಿಕಾ, ಮತ್ತು ಪೂರ್ವಏಶಿಯಾ ದಿಂದಲೂ ಬರುತ್ತಿದ್ದಾರೆ. ದೊಹಾವು ಯುನೈಟೆಡ್ ಕಿಂಗ್ಡಮ್,ಯುನೈಟೆಡ್ ಸ್ಟೇಟ್ಸ್, ಕೆನಡಾ, ಫ್ರಾನ್ಸ್, ದಕ್ಷಿಣ ಅಫ್ರಿಕಾ, ಮತ್ತು ಆಸ್ಟ್ರೇಲಿಯಾ ಅಲ್ಲದೇ ವಿಶ್ವದ ಹಲವು ದೇಶಗಳಿಂದ ವಲಸೆಗಾರರನ್ನು ಆಕರ್ಷಿಸುತ್ತದೆ.

ಈ ಮೊದಲು ಕತಾರ್ ನಲ್ಲಿನ ವಲಸೆಗಾರರು ಯಾವುದೇ ಭೂಮಿ ಖರೀದಿಸದಂತೆ ನಿರ್ಭಂಧವಿತ್ತು ಆದರೆ ಕತಾರಿ ನಾಗರಿಕರಲ್ಲದವರೂ ಇಂದು ಇಲ್ಲಿ ಭೂಮಿ ಖರೀದಿಸುವಂತಾಗಿದೆ.ದೊಹಾದ ಹಲವು ಪ್ರದೇಶಗಳಾದ ವೆಸ್ಟ್ ಬೇ ಲ್ಯಾಗೂನ್ ಕತಾರ್ ಪರ್ಲ್ ಮತ್ತು ಹೊಸ ಲುಸೇಲ್ ಸಿಟಿಯಲ್ಲಿಯೂ ಭೂಭಾಗ ಖರೀದಿಸಬಹುದಾಗಿದೆ. ಕತಾರ್ ನಲ್ಲಿನ ಆಸ್ತಿಪಾಸ್ತಿಗಳಿಗೆ ಒಡೆತನ ಹೊಂದಲು ನವೀಕರಣಗೊಳ್ಳಬಲ್ಲ ಪರವಾನಿಗೆಯನ್ನು ನೀಡಲಾಗುತ್ತಿದ್ದು,ಅದು ಅವರಿಗೆ ಕತಾರ್ ನಲ್ಲಿ ಜೀವಿಸಲು ಮತ್ತು ಕೆಲಸ ಮಾಡಲು ಅನುಮತಿ ನೀಡಿದೆ.

ಪ್ರತಿ ತಿಂಗಳು ಸಾವಿರಾರು ಜನರು ಕತಾರ್ ಗೆ ವಲಸೆ ಬರುತ್ತಿರುವುದರಿಂದ ದೊಹಾದಲ್ಲಿ ಜನಸಂಖ್ಯೆ ಮತ್ತು ಜನಸಂಚಾರ ಸ್ಪೋಟಕದಂತೆ ಏರತೊಡಗಿತು. ಸದ್ಯ ದೊಹಾದ ಜನಸಂಖ್ಯೆ ಒಂದು ದಶಲಕ್ಷ ಮೀರಿತು.[]ರಷ್ಟು ಅದರ ಪ್ರಗತಿ ಕಳೆದ ದಶಕಗಳಿಂದ ದುಪ್ಪಟ್ಟೂ ಆಗಿದೆ. ವಲಸೆಗಾರರ ಸತತ ಹೆಚ್ಚಳದಿಂದ ಕತಾರ್ ಮಾರುಕಟ್ಟೆಯಲ್ಲಿ ಪೂರೈಕೆ ವಲಯ ಅಭಾವವನ್ನು ಅನುಭವಿಸಿತು.ಇದರಿಂದಾಗಿ ಹಣದುಬ್ಬರ ಹೆಚ್ಚಳವಾಯಿತು. ವಸತಿ ಗೃಹಗಳ ಮಾರಾಟದಲ್ಲಿ ಪೂರೈಕೆ ಮತ್ತು ಬೇಡಿಕೆಯಲ್ಲಿ ಅಂತರ ಕಂಡುಬಂತು,ತೀವ್ರ ಪ್ರಮಾಣದ ಇಳಿಕೆ ಕಂಡುಬಂದಿತು.ಈ ಮೊದಲು ಈ ಪ್ರದೇಶದಲ್ಲಿ ಆಸ್ತಿಪಾಸ್ತಿಗಳ,ಮನೆ ಬಾಡಿಗೆಯ ಪ್ರಮಾಣ ಮೂರುಪಟ್ಟಾಗಿದ್ದನ್ನು ಇಲ್ಲಿ ನೆನಪಿಸಬಹುದು.[]

ದೊಹಾದಲ್ಲಿ ಕಾನೂನುಗಳ ಸಡಿಲಿಕೆಯಿಂದಾಗಿ ಅಲ್ಲಿನ ರಾಜ್ಯಾಧಿಕಾರವು ಹಲವು ಚರ್ಚ್ ಗಳ ನಿರ್ಮಾಣಕ್ಕೆ ಅನುಮತಿ ನೀಡಿತು.ಇವುಗಳಿಗೆ ಭೂಪ್ರದೇಶ ನೀಡಿಕೆಯಲ್ಲಿ ಅನುಮತಿ ದೊರಕಿಸಲಾಯಿತು. ಮಾರ್ಚ್ 2008 ರಲ್ಲಿ ಮೊದಲ ಕ್ಯಾಥೊಲಿಕ್ ಚರ್ಚ್ ಔವರ್ ಲೇಡೀಸ್ ಆಫ್ ರೊಸರಿ ದೊಹಾದಲ್ಲಿ ತೆರೆಯಲ್ಪಟ್ಟಿತು. ಸ್ಥಳೀಯ ಮುಸ್ಲಿಮ್ ರಿಗೆ ಗೌರವ ಸೂಚಕವಾಗಿ ಈ ಕಟ್ಟಡದ ಮೇಲ್ಭಾಗದಲ್ಲಿ ಧಾರ್ಮಿಕ ಚಿನ್ಹೆ ಹಾಕದಿರಲು ನಿರ್ಧರಿಸಲಾಯಿತು. ಸದ್ಯ ದೊಹಾದಲ್ಲಿ ಹಲವಾರು ಚರ್ಚ್ ಗಳು ತಲೆ ಎತ್ತಿವೆ, ಅದರಲ್ಲಿ ಮಲಂಕರಾ ಆರ್ಥೊಡೆಕ್ಸ್ ಚರ್ಚ್, ಮಾರ್ಥೊಮೈಟ್ ಚರ್ಚ್, CSI ಚರ್ಚ್, ಸಿರೊ-ಮಲಂಕರಾ ಚರ್ಚ್ ಮತ್ತು ಪೆಂಟೊಕೊಸ್ಟಲ್ ಚರ್ಚ್ ಇವೆ.

ವರ್ಷಗಳು ಜನಸಂಖ್ಯೆ ಮೆಟ್ರೊ
1986 217,294[]
1992 313,639[] []
2001 299,300[]
2004 339,847 [] 612,707
೨೦೦೫ 400,051[೧೦][೧೧][೧೨]
2008 998,651[]

ಜಿಲ್ಲೆಗಳು

ಅಸ್ಪೈಯರ್ ಪಾರ್ಕ್ ಫೌಂಟೇನ್.

ದೊಹಾದ ಪ್ರಾಮುಖ್ಯತೆ ಪಡೆದ ಜಿಲ್ಲೆಗಳ ಪಟ್ಟಿ ಕೆಳಕಂಡಂತಿದೆ:

ಹೊಂದಿಸಿ="ಮೇಲೆ"
  • ಅಲ್ ಬಿದ್ದಾ البدع
  • ಬಿನ್ ಮಹಮೌದ್ فريج بن محمود
  • ಅಲ್ ದಫ್ನಾ الدفنة
  • ಅಲ್ ಹಿಲಾಲ್الهلال
  • ಮದಿನತ್ ಖಲಿಫಾ مدينة خليفة
  • ಅಲ್ ಮಮೌರಾ المعمورة
  • ಅಲ್ ಮರ್ಖಿಯಾ المرخية
  • ಅಲ್ ನಸರ್ النصر
ಹೊಂದಿಸಿ="ಮೇಲೆ"
  • ಹಳೆ ವಿಮಾನ ನಿಲ್ದಾಣ المطار القديم أو المطار العتيق
  • ಒನೈಜಾ عنيزة
  • ಕ್ವಾತೈಫಿಯಾ القطيفية
  • ರಸ್ ಅಬು ಅಬೌಡ್ راس أبو عبود
  • ಅಲ್ ಸದ್ದ್ (ಕತಾರ್) السد
  • ರುಮೈಲ್ಹಾ الرميلة
  • ಅಲ್ ವಾಬ್ الوعب
  • ವಾದಿ ಅಲ್ ಸೇಲ್ وادي السيل
  • ಪಶ್ಚಿಮ ಕೊಲ್ಲಿ (ದೊಹಾ) الخليج الغربي
Doha's skyline seen from the south side of Doha Bay, with the Museum of Islamic Art in the foreground.

ಆರ್ಥಿಕ ಸ್ಥಿತಿ

ಕತಾರ್ ನ ತೈಲ ಮತ್ತು ನೈಸರ್ಗಿಕ ಅನಿಲ ಉತ್ಪನ್ನಗಳು ದೊಹಾ ಸಂಪತ್ತಿನ ಸಂಕೇತವಾಗಿವೆ.ಇದು ಆ ವಲಯದ ಆರ್ಥಿಕ ಕೇಂದ್ರವಾಗಿದೆ. ದೇಶದ ಅತಿ ದೊಡ್ಡ ತೈಲ ಮತ್ತು ನೈಸರ್ಗಿಕ ಅನಿಲ ಕಂಪನಿಗಳ ಪ್ರಧಾನ ಕಚೇರಿಗಳು ದೊಹಾದಲ್ಲಿವೆ,ಅದರಲ್ಲೂ ಕತಾರ್ ಪೆಟ್ರೊಲಿಯಮ್, ಕತಾರ್ ಗ್ಯಾಸ್ ಮತ್ತು ರಾಸ್ ಗ್ಯಾಸ್ಇತ್ಯಾದಿ. ದೊಹಾದ ಬಹುತೇಕ ಆರ್ಥಿಕ ಸ್ಥಿರತೆಯು ಅದರ ಆದಾಯ ಮೂಲಗಳಾದ ತೈಲ ಮತ್ತು ನೈಸರ್ಗಿಕ ಅನಿಲಗಳನ್ನೊಳಗೊಂಡಿದೆ.ಕತಾರ್ ಸರ್ಕಾರವು ಇಂತಹ ಅವಲಂಬನೆಯಿಂದ ದೂರವಿರಲು ಇನ್ನಿತರ ಮೂಲಗಳನ್ನು ಅದು ಹುಡುಕಲು ಸುರು ಮಾಡಿಕೊಂಡಿದೆ. ಇದರ ಪರಿಣಾಮವಾಗಿ ದೊಹಾವು ಸದ್ಯ ದೊಡ್ಡ ಪ್ರಮಾಣದ ಪ್ರಗತಿಯನ್ನು ಕಾಣುತ್ತಿದೆ ಹಮದ್ ಬಿನ್ ಖಲಿಫಾರ ಆಧುನಿಕರಣದ ಸೂತ್ರಗಳಿಂದ ಇದನ್ನು ಸಾಧಿಸಲಾಗುತ್ತಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿರುವ,ದೊಹಾ ಹತ್ತಿರದ ನಗರವಾದ ದುಬೈನಲ್ಲಿ ಸಹ ತೈಲ ಮತ್ತು ನೈಸರ್ಗಿಕ ಅನಿಲದ ಮೇಲಿನ ಅವಲಂಬನೆ ಕಡಿಮೆಯಾಗುತ್ತಿದೆ.ಅದರ ಆರ್ಥಿಕತೆ ಬೇರೆಡೆ ವಾಲುತ್ತಿದೆ.ದುಬೈನಂತೆ ದೊಹಾ ವಾಲಿದೆಯಾದರೂ ಅದು ಪ್ರವಾಸೋದ್ಯಮವನ್ನು ಉತ್ತೇಜಿಸಲಾಗದು. ದೊಹಾವು ದೊಡ್ಡ ಪ್ರಮಾಣದ ಪ್ರಗತಿ ಕಾಣುತ್ತಿದ್ದು ನಗರದ ಜನಸಂಖ್ಯೆಯು 30,000 ಕ್ಕೂ ಅಧಿಕ 2004 ಮತ್ತು 2006 ರಲ್ಲಿ ಏರಿಕೆಯಾಗಿದ್ದು, ಇದು ಆಸ್ತಿ-ಪಾಸ್ತಿ ವಹಿವಾಟಿನಲ್ಲಿ ಉತ್ತಮ ಹೆಚ್ಚಳ ತಂದಿತು.ಅಲ್ಲಿನ ಭೂಮಿ ಬೆಲೆಗಳು ಗಗನಕ್ಕೇರುತ್ತಿವೆ.[೧೩] ಇತ್ತೀಚಿನ BBC,ಯ ಜನವರಿ 2007 ರ ವರದಿಗಳ ಪ್ರಕಾರ ದೊಹಾವು ರಿಯಲ್ ಎಸ್ಟೇಟ್ ಉದ್ಯಮದ ಬೆಳವಣಿಗೆಯಿಂದಾಗಿ ಇಂದು ದುಬೈಗಿಂತ ದುಬಾರಿ ನಗರವಾಗಿದೆ. ಇಂತಹ ದೊಡ್ಡ ಪ್ರಮಾಣದ ಬೆಳವಣಿಗೆಯು ಲುಸೇಲ್ ಸಿಟಿ ಯಂತಹ ಯೋಜನೆಗಳಿಗೆ ಒತ್ತು ನೀಡಿದೆ.ದೊಹಾದ ಉತ್ತರದಲ್ಲಿ ಸುಮಾರು ಮನೆಗಳ ನಿರ್ಮಾಣದಲಿರುವ ಈ ಯೋಜನೆ ಕನಿಷ್ಟ 20,000 ಜನರಿಗೆ ವಾಸಸ್ಥಳ ಒದಗಿಸಲಿದೆ. ದೊಹಾದಲ್ಲಿ ವಾಣಿಜ್ಯಕ ಮತ್ತು ಕಾರ್ಪೊರೇಟ್ ಚಟುವಟಿಕೆಗಳ ತೀವ್ರತೆಯಿಂದ ಕಟ್ಟಡ ನಿರ್ಮಾಣ ಕಾರ್ಯವೂ ಚುರುಕಿನಿಂದ ಸಾಗಿದೆ. ನಗರದ ಬಾನರೇಖೆಯನ್ನು ದಾಟಿ ಬೆಳೆಯುತ್ತಿರುವ ಇದು ಗಗನಚುಂಬಿ ಕಟ್ಟಡಗಳಿಗೆ ಹೆಸರುವಾಸಿಯಾಗಿದೆ.ದೊಹಾದಲಿ ಸುಮಾರು 50 ಗೋಪುರಗಳಿವೆ.ಸದ್ಯ ಅತ್ಯಂತ ದೊಡ್ಡದಾದ ಗೋಪುರವೆಂದರೆ ದುಬೈ ಟಾವರ್ಸ್ ಹೆಸರಾಗಿದೆ. ಅದೇ ವೇಳೆಗೆ 39 ಹೊಸ ಹೊಟೇಲುಗಳು ಕತಾರ್ ನ ಪ್ರಗತಿಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿವೆ.ಇದಕ್ಕಾಗಿ 2009 ರ ವೇಳೆಗೆ 9,000 ಅಧಿಕ ವಾಸ ಕೊಠಡಿಗಳ ನಿರ್ಮಾಣವೂ ಆಗಿದೆ.

ಕತಾರ್ ಏರ್ ವೇಸ್ ಕತಾರ್ ಏರ್ ವೇಯ್ಸ್ ಟಾವರ್ಸ್ ದೊಹಾದಲ್ಲಿ ತನ್ನ ಪ್ರಧಾನ ಕಚೇರಿ ಹೊಂದಿದೆ.[೧೪]

ದೊಹಾದಲ್ಲಿನ ಕೆಲವು ಪ್ರಮುಖ ಯೋಜನೆಗಳು:

  • ಅಸ್ಪೈಯರ್ ಟಾವರ್
  • ಎಜುಕೇಶನ್ ಸಿಟಿ
  • ಮ್ಯುಜಿಯಮ್ ಆಫ್ ಇಸ್ಲಾಮಿಕ್ ಆರ್ಟ್
  • ದಿ ಪರ್ಲ್
  • ಲುಸೇಲ್
  • ಅಲ್ ವಾಬ್ ಸಿಟಿ
  • ದುಬೈ ಟಾವರ್ಸ್ - ದೊಹಾ
  • ಕಮರ್ಸಿಯಲ್ ಬ್ಯಾಂಕ್ ಪ್ಲಾಜಾ
  • ದೊಹಾ ಲ್ಯಾಂಡ್ ನ ಜ್ಞಾನ ವೃದ್ಧಿ ಕೇಂದ್ರ ನಾಲೇಜ್ ಎನ್ ರಿಚ್ ಮೆಂಟ್ ಸೆಂಟರ್ ಆಫ್ ದೊಹಾ ಲ್ಯಾಂಡ್ ಮತ್ತು (ದೊಹಾದ ಹೃದಯ ಭಾಗ)ಹಾರ್ಟ್ ಆಫ್ ದೊಹಾ

ಸಾರಿಗೆ ವ್ಯವಸ್ಥೆ

ದೊಹಾವು ಇತ್ತೀಚಿನ ದಿನಗಳಲ್ಲಿ ದೊಡ್ಡ ಪ್ರಮಾಣದ ಸಾರಿಗೆ ಜಾಲವನ್ನು ಅಭಿವೃದ್ಧಿಪಡಿಸಿದೆ.ಅದರ ಹೆಚ್ಚಿನ ವಿಸ್ತೃತ ಯೋಜನೆಗಳು ಅಂದರೆ ಹೆದ್ದಾರಿಗಳು,ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ ಅದಲ್ಲದೇ ಯೋಜಿತ ಮೆಟ್ರೊ ಪದ್ದತಿಯನ್ನು ಅಳವಡಿಸಲು ಅದು ಮುಂದಾಗಿದೆ. ದೊಹಾದ ದೊಡ್ಡ ಪ್ರಮಾಣದ ಬೆಳವಣಿಗೆ ಅದರ ಸಂಚಾರ ದಟ್ಟಣೆಗೆ ಕಾರಣವಾಗಿ, ಅದು ಅಲ್ಪಾವಧಿಯಲ್ಲಿಯೇ ಇಂತಹ ಸಾರಿಗೆ ಸಂಪರ್ಕಗಳ ಜಾಲಕ್ಕೆ ಮೊರೆಹೋಯಿತು.

ರಸ್ತೆಗಳು

ದೊಹಾವು ದಮಗ್ರ ರಸ್ತೆ ಜಾಲ ಹೊಂದಿದ್ದು ಎರಡು ಅಥವಾ ಮೂರು ಪಥದ ಎರಡೂ-ಕಡೆಯ ಸಾಗಣೆ ಮಾರ್ಗ ವ್ಯವಸ್ಥೆ ಅಲ್ಲಿ ಸುಸಜ್ಜಿತವಾಗಿದೆ. ದೊಹಾ ಈಗ ಬೆಳೆಯುತ್ತಿರುವ ಯೌವನಾವಸ್ಥೆಯಲ್ಲಿರುವ ನಗರವಾದ್ದರಿಂದ ರಸ್ತೆಗಳು ಅಗಲ ಮತ್ತು ವಿಶಾಲ ತಳಹದಿ ಮೇಲೆ ನಿರ್ಮಾಣವಾಗಿದ್ದಲ್ಲದೇ ಸರ್ವಿಸ್ ರಸ್ತೆಗಳೂ ಇಲ್ಲಿ ಲಭ್ಯವಿವೆ. ಸಾಂಪ್ರದಾಯಿಕ ರೌಂಡ್ ಅಬೌಟ್ಸ್ ಗಳನ್ನು ಇಲ್ಲಿ ಆಯಾ ಸ್ಥಳಗಳಲ್ಲಿ ಆಯೋಜನೆ ಮೇರೆಗೆ ನಿರ್ಮಾಣ ಮಾಡಲಾಗಿದೆ.ನಗರದ ರಸ್ತೆಯಲ್ಲಿರುವ ಅಧಿಕ ಒತ್ತಡದ ಸಂಚಾರ ಇರುವುದನ್ನು ಗಮನಿಸಿ ಅನೇಕ ಸುಧಾರಣೆಗಳನ್ನು ಜಾರಿ ತರಲಾಗಿದೆ. ಹಲವು ವೃತ್ತತಿರುವುಗಳ ನಿರ್ಮಾಣಗಳು ರದ್ದಾಗಿದ್ದು ಅದರ ಬದಲಿಗೆ ಸಂಚಾರಿ ದೀಪಗಳು ಅಥವಾ ಕೆಳಸೇತುವೆಗಳು ಮತ್ತು ಮೇಲ್ಸೇತುವೆಗಳು ನಿರ್ಮಾಣವಾಗಿದೆ. ಇನ್ನೂ ಮುಂದೆ ಹೋಗಿ ಎರಡೂ ಬದಿಗೂ ಸಂಚಾರ ಯೋಗ್ಯ ರಸ್ತೆಗಳ ನಿರ್ಮಾಣವು ಹೆದ್ದಾರಿಗಳ ಮೇಲಿನ ವಾಹನ ಒತ್ತಡ ಕಡಿಮೆ ಮಾಡುತ್ತದೆ.

ಹೆದ್ದಾರಿಗಳು

ದೊಹಾವು ಇನ್ನಿತರ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸಲು ಐದು ಪ್ರಮುಖ ಹೆದ್ದಾರಿಗಳಿವೆ. ಅವುಗಳೆಂದರೆ ಪಶ್ಚಿಮಕ್ಕಿರುವ ದುಖಾನ್ ಹೆದ್ದಾರಿ,ಅಲ್-ಶಾಮಲ್ ರೋಡ್ ಇದು ದೊಹಾವನ್ನು ದೇಶದ ಉತ್ತರ ಭಾಗಕ್ಕೆ ಸಂಪರ್ಕ ಕಲ್ಪಿಸುತ್ತದೆ.ಅಲ್-ಖೊರ್ ಎಕ್ಸ್ ಪ್ರೆಸ್ ವೇ ಇದು ಉತ್ತರ ಭಾಗದ ಅಲ್-ಖೊರ್ ನಗರಕ್ಕೆ ಕೊಂಡಿಯಾಗಿದೆ.ಅಲ್ಲದೇ ವಕ್ರಾಹ್ ಮೆಸ್ಸೇದ್ ರಸ್ತೆಗಳು ದೊಹಾದ ದಕ್ಷಿಣ ಭಾಗಕ್ಕೆ ರಸ್ತೆ ಸಂಪರ್ಕ ಕಲ್ಪಿಸುತ್ತವೆ. ಅಂತಿಮವಾಗಿ ಸಲ್ವಾ ರಸ್ತೆಯು ದಕ್ಷಿಣ ದೊಹಾದಲ್ಲಿ ಹಾದು ನಗರವನ್ನು ದಕ್ಷಿಣದಲ್ಲಿರುವ ಸೌದಿ ಗಡಿಗೆ ತಲುಪಿಸುತ್ತದೆ.

ಈ ಹೆದ್ದಾರಿಗಳು ಈಗ ವಿಸ್ತರಣೆಯ ಹಾದಿಯಲ್ಲಿದ್ದು ಇದು ದೊಹಾದ ನಗರದೊಳಗೆ ಮಾತ್ರ ಈ ವಿಸ್ತರಣೆ ಕಾರ್ಯ ಕೈಗೊಳ್ಳಲಾಗುತ್ತದೆ.

ದೊಹಾ ಎಕ್ಸ್ ಪ್ರೆಸ್ ವೇ (D-ರಿಂಗ್ ರೋಡ್/ಅಲ್ ಶಾಮಲ್ ರೋಡ್)

ಸಾಮಾನ್ಯವಾಗಿ ಅಲ್ ಶಾಮಲ್ ರಸ್ತೆಯು ಸಾಂಪ್ರದಾಯಿಕವಾಗಿ ಡಿ-ವರ್ತುಲ ರಸ್ತೆಯನ್ನು ನಗರದ ಉತ್ತರ-ದಕ್ಷಿಣ ಭಾಗಕ್ಕೆ ಜೋಡಿಸುತ್ತದೆ. ಹೇಗೆಯಾದರೂ ದಟ್ಟಣೆಯಿಂದಾಗಿ ಡಿ-ರಿಂಗ್ ರೋಡ್ ನ್ನು ಈಗ ಪ್ರಮುಖ ಹೆದ್ದಾರಿಯನ್ನಾಗಿಸಿ ನಗರದಾದ್ಯಂತದ ಸಂಚಾರಕ್ಕೆ ಅನುಕೂಲ ಮಾಡಲಾಗಿದೆ.ಅದನ್ನೀಗ ದೊಹಾ ಎಕ್ಸ್ ಪ್ರೆಸ್ ವೇ ಎಂದು ಹೆಸರು ಬದಲಾಯಿಸಲಾಗಿದೆ.ಇದು ಕತಾರ್ ನ ಉತ್ತರಕ್ಕೆ ಸಂಪರ್ಕ ಕಲ್ಪಿಸಲು ಬಳಸಲಾಗುತ್ತದೆ. ಎಕ್ಸ್ ಪ್ರೆಸ್ಸ್ ವೇ ನ ಹಲವು ಹಂತಗಳ ಕಾರ್ಯ ಪೂರ್ಣವಾಗಿದ್ದು ಅದರಲ್ಲೂ ಅಲ್ ಶಾಮಲ್ ಬ್ರಿಜ್,ಲ್ಯಾಂಡ್ ಮಾರ್ಕ್ ಇಂಟರ್ ಚೇಂಜ್,ಘರಫಾ ಇಂಟರ್ ಚೇಂಜ್ ಮತ್ತು ಮಿಡ್ ಮ್ಯಾಕ್/ಸಲ್ವಾ ರೋಡ್ ಇಂಟರ್ ಚೇಂಜ್ ಇದರಲ್ಲಿವೆ.

ದೊಹಾ ಎಕ್ಸ್ ಪ್ರೆಸ್ ವೇ ದ ಯೋಜನೆಯಂತೆ ಅಲ್ ಶಾಮಲ್ ರಸ್ತೆಯು ವ್ಯಾಪಕ ವಿಸ್ತರಣೆಗೆ ಒಳಪಟ್ಟಿದೆ. ಈ ರಸ್ತೆಯನ್ನು ಚತುರ್ಪಥದ ಹೆದ್ದಾರಿಯಾಗಿ ವಿಸ್ತರಿಸಲಾಗಿದೆ.(ಒಟ್ಟು ಎಂಟು ಪಥಗಳು)ಅಂತರ ಬದಲಾವಣೆಗೆ ಅಗತ್ಯ ಕ್ರಮದ ಮೂಲಕ ದೇಶದ ಸದ್ಯದ ಎಲ್ಲಾ ಸುಧಾರಣೆ ಕಂಡ ರಸ್ತೆಗಳಲ್ಲಿ ಎರಡು ಪಥದ ಸಂಚಾರದ ವ್ಯವಸ್ಥೆ ಇದೆ. ಇನ್ನೂ ಮುಂದೆ ಹೋದರೆ ಹೊಸ ದೊಹಾ ಎಕ್ಸ್ ಪ್ರೆಸ್ ದೊಹಾವನ್ನು ಅದರ ಯೋಜಿತ ಅಲ್ ಜುಬ್ಱಾ ದಲ್ಲಿರುವ ಕತಾರ್ ಬಹ್ರೆನ್ ಫ್ರೆಂಡ್ ಶಿಪ್ ಬ್ರಿಜ್ ಇದು ಎರಡು ಕೊಲ್ಲಿ ರಾಜ್ಯಗಳನ್ನು ಸಂಪರ್ಕಿಸುತ್ತದೆ.ಅದೇ ತೆರನಾಗಿ ಈ ಎಕ್ಸ್ ಪ್ರೆಸ್ ವೇ ಬಹ್ರೆನ್ ಮತ್ತು ಸೌದಿ ಅರೆಬಿಯಾಗಳನ್ನು ಸಂಪರ್ಕಿಸುತ್ತದೆ.

ಲುಸೇಲ್ ಎಕ್ಸ್ ಪ್ರೆಸ್ ವೇ

ಈ ಲುಸೇಲ್ ಎಕ್ಸ್ ಪ್ರೆಸ್ ವೇ ಲುಸೇಲ್ ನಗರವನ್ನು ಸಂಪರ್ಕಿಸುತ್ತದೆ.ದೊಹಾದ ಉತ್ತರ ಭಾಗದಲ್ಲಿ ಇದರ ನಿರ್ಮಾಣ ಹಂತದಲ್ಲಿದೆ.ಕೇಂದ್ರ ದೊಹಾ ಪ್ರದೇಶದಲ್ಲಿ ಇದರ ಕೊಂಡಿ ಇದೆ.ಪರ್ಲ್ ಭಾಗವನ್ನೂ ಅದು ತನ್ನ ಕೊಂಡಿ ಕಲ್ಪಿಸುತ್ತದೆ. ಈ ಎಕ್ಸ್ ಪ್ರೆಸ್ ವೇ ಹಿಂದಿನ ಇಸ್ತಿಕ್ಲಾಲ್ ರೋಡ್ ದುದ್ದಕ್ಕೂ ಲುಸೇಲ್ ರಸ್ತೆಗೆ ಹೋಗಿ ಸೇರುತ್ತದೆ.ಇದು 4-ರಸ್ತೆಗಳ ದ್ವಿಪಥದ ಮೂಲಕ ಲುಸೇಲ್ ಸೇಂಟ್ ರಸ್ತೆಗೆ ಸೇರುತ್ತದೆ. ಎಕ್ಸ್ ಪ್ರೆಸ್ ವೇ ಲುಸೇಲ್ ನಗರದಿಂದ ರೇನ್ ಬೊ ವೃತ್ತ ಬಳಸಿ ಕತಾರ್ ಸ್ಪೊರ್ಟ್ಸ್ ಕ್ಲಬ್ ತಿರುವಿನಲ್ಲಿ ಹಾದು ಹೋದರೆ ಅಗ್ನಿಶಾಮಕ ದಳದ ವೃತ್ತದೆಡೆಗೆ ಹೋಗುತ್ತದೆ.

ದುಖನ್ ಹೆದ್ದಾರಿ

ಸದ್ಯ ಅಸ್ತಿತ್ವದಲ್ಲಿರುವ ದುಖಾನ್ ಹೆದ್ದಾರಿಯು ಹಲವು ವರ್ಷಗಳಿಂದ ಮರುನಿರ್ಮಾಣ ಯೋಜನೆಗಳಿಗೆ ತೆರೆದುಕೊಂಡಿದೆ.ಈ ರಸ್ತೆಗಳ ಆಂತರಿಕ ಕೊಂಡಿಗಳು ಮತ್ತು ರಸ್ತೆಯ ಸಂಪೂರ್ಣ ಕಾಮಗಾರಿಗೆ ಹಸಿರು ನಿಶಾನೆಯಾಗಿದೆ. ಭವಿಷ್ಯತ್ ನಲ್ಲಿ ಈ ಹೆದ್ದಾರಿಯನ್ನು ವಿಸ್ತರಿಸಿ ದೊಹಾವನ್ನು ನೇರವಾಗಿ ಅಂಡರ್ ಪಾಸ್ ಮತ್ತು ಓವರ್ ಪಾಸ್ ಗಳ ಮೂಲಕ ಸಂಪರ್ಕಿಸುತ್ತದೆ.ಅಲ್ಲಿದ್ದ ಟಿಲ್ಟೆಡ್ ರೌಂಡ್ ಅಬೌಟ್ ನ್ನು ತೆಗೆದು ಮಾರ್ಖಿಯಾ ರೌಂಡ್ ಅಬೌಟ್ ಮತ್ತು TV ರೌಂಡ್ ಅಬೊಟ್ ಅಲ್ಲದೇ ಎಲ್ಲಾಪ್ರಮುಖ ವೃತ್ತ ತಿರುವು ರಸ್ತೆಗಳನ್ನು ಅಂಡರ್ ಪಾಸ್ ಮತ್ತು ಓವರ್ ಪಾಸ್ ಗಳ ಮೂಲಕ ಏರ್ಪಡಿಸಲಾಗುತ್ತದೆ.

ಸಲ್ವಾ ಹೆದ್ದಾರಿ

ಸಲ್ವಾ ಹೆದ್ದಾರಿಯ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಈ ಹಂತವು ಹೆದ್ದಾರಿಯ ವಿಸ್ತರಣೆಯನ್ನು ಒಳಗೊಂಡಿದೆ.ನೈಋತ್ಯ ಭಾಗದ ಸೌದಿ ಅರೆಬಿಯನ್ ಗಡಿಯ ಪಟ್ಟಣವಾದ ಸಲ್ವಾವನ್ನು ತಲುಪುತ್ತದೆ. ಚತುರ್ಪಥದ ಹೆದ್ದಾರಿ ಪ್ರತ್ಯೇಕ ಅಂತರ್ ಬದಲಾವಣೆಯ ಮಾರ್ಗಗಳನ್ನು ಹೊಂದಿದೆ. ಇನುಳಿದ ಸಲ್ವಾ ರಸ್ತೆಯ ಭಾಗವು ವಿಸ್ತಾರ ಮತ್ತು ಉನ್ನತೀಕರಣ ಇತ್ತೀಚಿಗೆ ಪೂರ್ಣವಾಗಿದೆ.ಇಂಡಸ್ಟ್ರಿಯಲ್ ಇಂಟರ್ ಚೇಂಜ್ ರಸ್ತೆಯು ಜೈಧಾ ಮೇಲ್ಸೇತುವೆ ಮೂಲಕ ಇದನ್ನು ಸಂಪರ್ಕಿಸುತ್ತದೆ.ಇಲ್ಲಿ ರಾಮದಾ ರಸ್ತೆ ಜೋಡಿಯ ಭಾಗವು ದೊಹಾದ ವ್ಯಾಪಾರಿ ದಟ್ಟಣೆಯು ಅಲ್ಲಿ ಪ್ರಮುಖವಾಗಿದೆ. ದೊಹಾ ಎಕ್ಸ್ ಪ್ರೆಸ್ ವೇ ಪೂರ್ಣವಾಗುವವರೆಗೂ ಇದನ್ನು ಕೈಗೆತ್ತಿಕೊಳ್ಳಲಾಗದು.

ಎಫ್-ರಿಂಗ್ ರೋಡ್

ಈ ಎಫ್-ವರ್ತುಲ ರಸ್ತೆಯು ದೊಹಾದಲ್ಲಿ ಆರನೆಯ ರಿಂಗ್ ರೋಡ್ ಎನಿಸಿದೆ.ಇದನ್ನ್ ನಿವ್ ದೊಹಾ ಇಂಟರ್ ನ್ಯಾಶನಲ್ ಏರ್ ಪೊರ್ಟ್ ವರೆಗೆ ಇದನ್ನು ಜೋಡಿಸಲಾಗಿದೆ. ಈ ಹೊಸ ಹೆದ್ದಾರಿಯು ಕರಾವಳಿ ಕಡಿದಾದ ಪ್ರದೇಶದ ಜೊತೆಗೆ ಹೊಸ ವಿಮಾನನಿಲ್ದಾಣಕ್ಕೂ ಸಂಪರ್ಕದ ಕೊಂಡಿಯಾಗಿದೆ.ಸದ್ಯ ಕಾಮಗಾರಿ ಚಾಲ್ತಿಯಲ್ಲಿರುವ ಇದು ದಕ್ಷಿಣದ ಇ-ರಿಂಗ್ ರೋಡ್ ಗೆ ಸಂಪರ್ಕಿಸುತ್ತದೆ.

ಬಸ್ ವ್ಯವಸ್ಥೆ

ವಿಶಾಲ ರೂಪದಲ್ಲಿ ಸರ್ಕಾರ ಒಡೆತನದ ಮೊವಾಸಾಲ್ಟ್ ಕಂಪನಿಯು ಬಸ್ ಸೇವೆಗಳನ್ನು ವ್ಯಾಪಕವಾಗಿ ದೊಹಾ ನಗರದಲ್ಲಿ ಬಳಸುತ್ತದೆ. ನಗರದ ಎಲ್ಲಾ ಭಾಗಗಳನ್ನು ಈ ಬಸ್ ಸಂಚಾರ ಒಳಗೊಳ್ಳುತ್ತದೆ.ನಗರದಾದ್ಯಂತ ನಿಲ್ದಾಣದ ವ್ಯವಸ್ಥೆಯೂ ಇದೆ. ಈ ಬಸ್ ವ್ಯವಸ್ಥೆಯನ್ನು ಬಡತನದ ಜನಸಮೂಹ ಹೆಚ್ಚಾಗಿ ಬಳಸುತ್ತದೆ.ಶ್ರೀಮಂತರ ವರ್ಗ ಈ ವ್ಯವಸ್ಥೆಯನ್ನು ಬಳಸುವುದು ಅಪರೂಪ;ಆದರೆ ಬಹಳಷ್ಟು ಜನರು ಕಾರಗಳನ್ನು ಬಳಸುವುದರಿಂದ ದೊಹಾ ನಗರವು ಸಂಚಾರ ದಟ್ಟಣೆಗೆ ಒಳಗಾಗುತ್ತದೆ.

ದೊಹಾದ ವ್ಯಾಪಾರ ಸ್ಥಳವಾದ ಡೌನ್ ಟೌನ್ ನ ಸೌಕ್ ಪ್ರದೇಶದಲ್ಲಿ ಮುಖ್ಯ ಬಸ್ ನಿಲ್ದಾಣವಿದೆ.ಕತಾರ್ ಎಲ್ಲಾ ಮುಖ್ಯ ನಗರಗಳಿಗೆ ಇಲ್ಲಿಂದ ಬಸ್ ಸೌಕರ್ಯವಿದೆ.

ಟ್ಯಾಕ್ಸಿ ಸೇವೆ

ಮೌವಸಾಲ್ಟ್ ಕಂಪನಿಯು ಕತಾರ್ ನಲ್ಲಿ ಎಲ್ಲಾ ಕಡೆಗೂ ಟ್ಯಾಕ್ಸಿ ಸೇವೆಯನ್ನು ಒದಗಿಸುತ್ತದೆ.ಇದು ರಾಜಧಾನಿಯಿಂದ ತನ್ನ ಕಾರ್ಯಾರಂಭ ಮಾಡುತ್ತದೆ. ಈ ಮೊದಲು ಈ ಟ್ಯಾಕ್ಸಿ ಸೇವೆ ಆರಂಭವಾದಾಗ ಇದರ ಸೇವೆ ಕೆಲವೇ ಕೆಲವೆಡೆ ಇತ್ತು.ಹೀಗಾಗಿ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗುತ್ತಿತ್ತು.ಈಗ ಅವುಗಳ ಸಂಖ್ಯೆ ಗಣನೀಯವಾಗಿದ್ದರಿಂದ ಅಂತಹ ತೊಂದರೆಯೇನಿಲ್ಲ.

ಇದರ ಪ್ರವಾಣ ಶುಲ್ಕ QR4.00,ದಿಂದ ಆರಂಭವಾಗುತ್ತದೆ.ಈ ಟ್ಯಾಕ್ಸಿಗಳು ಅತ್ಯುತ್ತಮ ಪ್ರಯಾಣಿಕ ಸೌಕರ್ಯಗಳನ್ನೊಳಗೊಂಡಿವೆ.ಟೊಯೊಟಾ ಕಾಮ್ರಿ ಮತ್ತು ಫೊರ್ಡ್ ಮೊಂಡಿಯೊ ಪ್ರಮುಖ ಬ್ರಾಂಡ್ ಗಳಾಗಿವೆ.

ಏರ್ ಪೊರ್ಟ್ ಟ್ಯಾಕ್ಸಿಗಳು ದೊಹಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೊರಕುತ್ತವೆ.ಅವೂ ಕೂಡಾ ಫೊರ್ಡ್ ಫ್ರೀಸ್ಟಾರ್ ಎಂಬ ಹೆಸರಲ್ಲಿ ಲಭ್ಯವಿವೆ. ವಿಮಾನದಿಂದ ಟ್ಯಾಕ್ಸಿಗಳು ತಮ್ಮ ಶುಲ್ಕವನ್ನು ಕನಿಷ್ಠ QR18.00.ರಿಂದ ನಿಗದಿಪಡಿಸುತ್ತವೆ.

ಅಸಂಖ್ಯಾತ ಲೈಸನ್ಸ್ ರಹಿತ ಟ್ಯಾಕ್ಸಿಗಳು ಸಂಚರಿಸುತ್ತವೆ. ಎಷ್ಟೆಂಬುದನ್ನು ನಿಖರವಾಗಿ ಹೇಳಲಾಗದು ಆದರೆ ಕಾರ್ವಾ ಕ್ಯಾಬ್ಸ್ ಗಳ ಸಂಖ್ಯೆಯನ್ನೂ ಇದು ಮೀರಿಸುತ್ತದೆ.

ಪರಿವರ್ತಿತ

ದೊಹಾ ಮರಿನಾ.

ದೊಹಾ ಬಂದರು ದೇಶದಲ್ಲಿಯೇ ವಿಶಾಲ ಬಂದರಾಗಿದ್ದು ಅದು ದೊಹಾ ಕಡಿದಾದ ಕೊಲ್ಲಿ ಪ್ರದೇಶದ ಎದುರಿಗಿದೆ. ಬಂದರು ದೊಹಾದಲ್ಲಿ ಪ್ರಮುಖ ಸಮುದ್ರ ಸಾರಿಗೆ ಆಗಿದ್ದು ಹೊಸ ಬಂದರನ್ನು ನಿರ್ಮಿಸುವ ಯೋಜನೆಗಳಿವೆಯಾದರೂ ಅದರ ಸ್ಥಳದ ಬಗ್ಗೆ ಇನ್ನೂ ಕೆಲವು ತೊಂದರೆಗಳಿವೆ.ಹೊಸ ಬಂದರನ್ನು ಅಲ್ ವಕ್ರಾದ ಹತ್ತಿರ ನಿರ್ಮಾಣ ಮಾಡುವ ಕಾಮಗಾರಿ ನಡೆಯುತ್ತಿದೆ.ಇದು ಹೊಸ ದೊಹಾದ ದಕ್ಷಿಣ ಭಾಗದ ವಿಮಾನ ನಿಲ್ದಾಣದ ಹತ್ತಿರ ಇದೆ.

ವಿಮಾನ ವ್ಯವಸ್ಥೆ

ದೊಹಾ ಇಂಟರ್ ನ್ಯಾಶನಲ್ ಏರ್ ಪೊರ್ಟ್.

ದೊಹಾದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕತಾರ್ ಏಕೈಕ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೆನಿಸಿದೆ. ಇದು ಕತಾರ್ ಏರ್ ವೇಯ್ಸ್ ನ ಕೇಂದ್ರಸ್ಥಾನವಾಗಿದೆ.ಹಲವು ಅಂತರರಾಷ್ಟ್ರೀಯ ಏರ್ ಲೈನ್ಸ್ ಗಳಿಗೆ ಸೌಕರ್ಯ ನೀಡುತ್ತಿದೆ. ವೇಗವಾಗಿ ಬೆಳೆಯುತ್ತಿರುವ ಕತಾರ್ ಮತ್ತು ವೇಗವಾಗಿ ಬೆಳೆಯುತ್ತಿರುವ ಕತಾರ್ ಏರ್ ವೇಯ್ಸ್ ನಿಂದಾಗಿ ಈ ವಿಮಾನ ಚಿಕ್ಕದಾಗಿ ಕಾಣುತ್ತದೆ.ಎಲ್ಲಾ ವಿಮಾನಯಾನಗಳನ್ನು ಇಲ್ಲಿಂದ ನಿಯಂತ್ರಿಸುವುದು ಸಾಧ್ಯವಾಗುತ್ತಿಲ್ಲ ಎಂಬ ಮಾತೂ ಇದೆ. ಈ ಸಮಸ್ಯೆಯನ್ನು ಕೆಲ ಮಟ್ಟಿಗೆ ನೀಗಿಸಲು 15 ನೆಯ ಏಶಿಯನ್ ಗೇಮ್ಸ್ ಸಂದರ್ಭದಲ್ಲಿ ಅದರ ವಿಸ್ತಾರ ಕಾರ್ಯ ನಡೆದಿದೆ. ಹೆಚ್ಚುತ್ತಿರುವ ಸಂಚಾರ ದಟ್ಟಣೆ ತಪ್ಪಿಸಲು ಏರ್ ಪೊರ್ಟ್ ನ ಸೌಲಭ್ಯಗಳನ್ನು ಹೆಚ್ಚಿಸಲಾಗಿದೆ.ಪ್ರಯಾಣಿಕರಿಗಾಗಿ ಪ್ರತ್ಯೇಕ ವಿಮಾನ ನಿಲ್ದಾಣ ಒದಗಿಸಲಾಗುತ್ತದೆ.ಇದರಲ್ಲಿಯೇ ಮೊದಲ ದರ್ಜೆ ಮತ್ತು ವ್ಯಾಪಾರಿ ದರ್ಜೆಗಳ ವರ್ಗೀಕರಣವನ್ನೂ ಮಾಡಿ ನೂತನ ನಿರ್ಮಾಣ ಕಾರ್ಯ ನಡೆದಿದೆ. ಇದಕ್ಕೂ ಹೆಚ್ಚಲ್ಲದೇ ಹೊಸ ನಿಲ್ದಾಣಗಳನ್ನು ಸಜ್ಜುಗೊಳಿಸಲಾಗುತ್ತದೆ.ಇದರ ವಿರುದ್ದ ರನ್ ವೇ ನಿರ್ಮಿಸಿ ದಟ್ತಣೆ ಕಡಿಮೆ ಮಾಡಲಾಗುತ್ತದೆ. ಇಂತಹ ಬದಲಾವಣೆಗಳು ಕೆಲಮಟ್ಟಿಗಿನ ಸಮಸ್ಯೆ ನೀಗಿಸಿವೆಯಾದರೂ ಶಾಶ್ವತ ಪರಿಹಾರ ಇನ್ನೂ ದೊರೆಯಬೇಕಾಗಿದೆ.ವಿಮಾನ ನಿಲ್ದಾಣ ಚಿಕ್ಕದಾಗಿದ್ದಲ್ಲದೇ ಕಡಿಮೆ ಸ್ಥಳಾವಕಾಶ ಹೊಂದಿದ್ದರಿಂದ ಈ ಸಮಸ್ಯೆ ವಿಮಾನ ನಿಲ್ದಾಣ ಸದಾ ಗದ್ದಲದಿಂದ ಕೂಡಿದಂತಿರುತ್ತದೆ.

ಒಂದು ಹೊಸದಾಗಿ ನಿವ್ ದೊಹಾ ಇಂಟರ್ ನ್ಯಾಶನಲ್ ಏರ್ ಪೊರ್ಟ್ ನ್ನು ಸದ್ಯ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣದ ಹತ್ತಿರ ಕಟ್ಟಲಾಗುತ್ತಿದೆ.(ಪೂರ್ವಕ್ಕೆ ಸುಮಾಉ 3 ಮೈಲಿ)ಇದು ಸದ್ಯದ ವಿಮಾನ ನಿಲ್ದಾಣದ ಸಮಸ್ಯೆಯನ್ನು ನೀಗಿಸಲಿದೆ.[೧೫][೧೬] ಮೊದಲ ಹಂತದ ವಿಮಾನ ನಿಲ್ದಾಣದ ಕಾರ್ಯ 2009 ರಲ್ಲಿ ಅಥವಾ 2010 ರ ಆರಂಭದಲ್ಲಿ ಕಾಮಗಾರಿ ಮುಗಿದಿದ್ದು ಎರಡನೆಯ ಹಂತದ ಕಾಮಗಾರಿ ಮುಗಿದಾಗ ಪ್ರತಿ ವರ್ಷ 25 ದಶಲಕ್ಷ ಪ್ರವಾಸಿಗರಿಗೆ ಅನುಕೂಲ ಒದಗಲಿದೆ. ಈ ವಿಮಾನ ನಿಲ್ದಾಣದ ಮೂರನೆಯ ಹಂತದ ಕಾಮಗಾರಿ 2015 ಕ್ಕೆ ಮುಗಿದಾಗ ಸುಮಾರು 50 ದಶಲಕ್ಷ ಪ್ರಯಾಣಿಕರಿಗೆ ಒದಗಲಿದೆ.[೧೭] ಈ ಹೊಸ ವಿಮಾನನಿಲ್ದಾಣವು ನಗರದ ಕೇಂದ್ರ ಭಾಗದಲ್ಲಿದೆ.ಮೊದಲಿನ ವಿಮಾನ ನಿಲ್ದಾಣಕ್ಕಿಂತಲೂ ಅದು ವಿಶಾಲವಾಗಿದೆಯಲ್ಲದೇ ಶಬ್ದ ಮಾಲಿನ್ಯ ಮತ್ತು ಹವಾ ಮಾಲಿನ್ಯದಿಂದ ದೂರವಿದೆ.[೧೫] ಹೊಸ ವಿಮಾನ ನಿಲ್ದಾಣದ ನಿರ್ಮಾಣ ವೆಚ್ಚವು ಸುಮಾರು $22 ಬಿಲಿಯನ್ ಆಗಿದೆ.

ವಿಮಾನ ನಿಲ್ದಾಣ ಮುಗಿದ ನಂತರ ಒಟ್ಟು ಕ್ಷೇತ್ರಫಲ 2,200 ಹೆಕ್ಟೇರ್ ಗಳಷ್ಟಾಗುತ್ತದೆ.[೧೫]

ಪ್ರಮುಖ U.S. ಏರ್ ಫೊರ್ಸ್ ನ ಅಲ್ ಉದೆಡ್ ಏರ್ ಬೇಸ್ ದೊಹಾದ ನೈಋತ್ಯದಲ್ಲಿದೆ.

ಶಿಕ್ಷಣ

ಕತಾರ್ ಯುನ್ವರ್ಸಿಟಿ.

ಇತ್ತೀಚಿನ ವರ್ಷಗಳಲ್ಲಿ ಕತಾರ್ ಸರ್ಕಾರದಲ್ಲಿ ಶಿಕ್ಷಣವು ಪ್ರಧಾನ ವಿಷಯವಾಗಿದೆ. ಕತಾರ್ ಯುನ್ವರಿಸಿಟಿ 1973 ರಲ್ಲಿ ಸ್ಥಾಪಿಸಲ್ಪಟ್ಟಿತಲ್ಲದೇ ಸರ್ಕಾರ ಕೂಡ ಹಲವು ವಿಶ್ವವಿದ್ಯಾಲಯಗಳಿಗೆ ಸ್ಥಾನ-ಮಾನ ಒದಗಿಸಿದೆ.ದೊಹಾದಲ್ಲಿ ಅವು ತಮ್ಮ ಕ್ಯಾಂಪಸ್ ಗಳನ್ನು ಹೊಂದಿವೆ.ಅವು ಬಹುತೇಕ ಎಜುಕೇಶನ್ ಸಿಟಿಯಲ್ಲಿ ನೆಲೆಯಾಗಿವೆ.

ಎಜುಕೇಶನ್ ಸಿಟಿ ಪ್ರಮುಖ ಲಾಭರಹಿತ ಸಂಸ್ಥೆಗಳಾಗಿದ್ದು,ಕತಾರ್ ಫೌಂಡೇಶನ್ ಶಿಕ್ಷಣ,ವಿಜ್ಞಾನ ಮತ್ತು ಸಮುದಾಯ ಅಭಿವೃದ್ಧಿಗೆ ಮೀಸಲಾಗಿದೆ. ಅದು ವರ್ಲ್ಡ್ ಇನ್ನೊವೇಶನ್ ಸಮಿಟ್ ಫಾರ್ ಎಜುಕೇಶನ್ WISE ಯೋಜನೆಯನ್ನು ಅದು ಇತ್ತೀಚಿಗೆ ಆರಂಭಿಸಿತು.ಇದೊಂದು ಗ್ಲೊಬಲ್ ಫೊರಮ್ ಆಗಿದ್ದು ಇದಕ್ಕೆ ಪಾಲುದಾರಿಕೆ ನಾಯಕರು ಅಭಿಪ್ರಾಯ ಮತ್ತು ನಿರ್ಧಾರಕರು ಇಲ್ಲಿ ಶಿಕ್ಷಣ,ವಿಜ್ಞಾನ ಮತ್ತು ಸಮುದಾಯ ಶಿಕ್ಷಣಕ್ಕೆ ಒತ್ತು ನೀಡುತ್ತಿವೆ. ಮೊದಲ ಸಂಪುಟದ ಸಭೆಯು ಕತಾರ್ ನ ದೊಹಾದಲ್ಲಿ, ನವೆಂಬರ್ 16ನೆಯ ರಿಂದ 18ನೆಯ 2009 ರ ವರೆಗೆ ಆಯೋಜಿತವಾಗಿತ್ತು.

ಶಿಕ್ಷಣ ವಲಯದಲ್ಲಿ ಕತಾರ್ ನ ಸುಪ್ರಿಮ್ ಕೌನ್ಸಿಲ್ ಆಫ್ ಕಮ್ಯುನಿಕೇಶನ್ ಅಂಡ್ ಇನ್ ಫಾರ್ಮೇಶನ್ ಟೆಕ್ನಾಲಾಜಿ ictQATARಸಂಸ್ಥೆಯು ಇಂದು ಮುಂಚೂಣಿಯಲ್ಲಿದೆ.ಇದು ಕತಾರ್ ನಲ್ಲಿ ಶಿಕ್ಷಣದ ಶಕ್ತಿ ಮತ್ತು ಅದರ ಪ್ರಭಾವದ ಬಗ್ಗೆ ictQATAR ಎಲ್ಲರಲ್ಲಿಯೂ ಸಮಗ್ರತೆ ತರಲಿದೆ. ಶಿಕ್ಷಣದ ಬಲ ಮತ್ತು ICT ಗಳು ಇಂದು ಪ್ರಬಲ ಅಸ್ತ್ರಗಳಾಗಿವೆ.

ದೊಹಾದಲ್ಲಿನ ವಲಸೆ ಜನಾಂಗದ ಶಿಕ್ಷಣ ವ್ಯವಸ್ಥೆಗಾಗಿ ದೊಹಾ ತವರು ಮನೆಯೆನಿಸಿದೆ.ಹಲವು ವಿಭಿನ್ನ ಖಾಸಗಿ ಶಾಲಾ ಕಾಲೇಜುಗಳು ಇಂದು ದೊಹಾ ನಗರದಲ್ಲಿ ಕಾರ್ಯಪ್ರವೃತ್ತವಾಗಿದೆ,ಉದಾಹರಣೆಗಾಗಿ,

ದೊಹಾದಲ್ಲಿರುವ ಮತ್ತು ಸುತ್ತಮುತ್ತಲಿರುವ ಶಾಲೆಗಳು:

  • ಕತಾರ್ ಅಕ್ಯಾಡಮಿ
  • ಕತಾರ್ ಇಂಟರ್ ನ್ಯಾಶನಲ್ ಸ್ಕೂಲ್
  • ದಿ ಅಮೆರಿಕನ್ ಸ್ಕೂಲ್ ಆಫ್ ದೊಹಾ
  • ಲೆಬ್ನೀಸ್ ಸ್ಕೂಲ್
  • ದೊಹಾ ಕಾಲೇಜ್
  • ಡೆ ಬೇಕೇ ಹೈಸ್ಕೂಲ್ ಫಾರ್ ಹೆಲ್ತ್ ಪ್ರೊಫೆಸನ್ಸ್ ಎಟ್ ಕತಾರ್
  • ದಿ ಕತಾರ್ ಕೆನೆಡಿಯನ್ ಸ್ಕೂಲ್
  • ಫಿಲಿಫೈನ್ಸ್ ಸ್ಕೂಲ್ ದೊಹಾ
  • ಬಾಂಗ್ಲಾದೇಶ ಎಂ.ಎಚ್.ಎಂ ಹೈಸ್ಕೂಲ್ & ಕಾಲೇಜ್, ದೊಹಾ-ಕತಾರ್
  • MES ಇಂಡಿಯನ್ ಸ್ಕೂಲ್
  • DPS-ಮಾಡೆರ್ನ್ ಇಂಡಿಯನ್ ಸ್ಕೂಲ್, ದೊಹಾ -ಕತಾರ್
  • ಐಡಿಯಲ್ ಇಂಡಿಯನ್ ಸ್ಕೂಲ್
  • ದೊಹಾ ಮಾಡೆರ್ನ್ ಇಂಡಿಯನ್ ಸ್ಕೂಲ್
  • ದಿ ಕ್ಯಾಂಬ್ರಿಜ್ ಸ್ಕೂಲ್ (ದೊಹಾ)
  • ನಿವ್ ಟೌನ್ ಇಂಟರ್ ನ್ಯಾಶನಲ್ ಸ್ಕೂಲ್
  • ಶಾಂತಿನಿಕೇತನ ಇಂಡಿಯನ್ ಸ್ಕೂಲ್ (ವಕ್ರಾ)

ಯುನ್ವರಿಟಿಗಳು/ಕಾಲೇಜುಗಳು ಎಜುಕೇಶನ್ ಸಿಟಿಯಲ್ಲಿರುವವುಅಗಳಿಗಾಗಿ: (ನೋಡಿ ಎಜುಕೇಶನ್ ಸಿಟಿ)

  • ವರ್ಜಿನಿಯಾ ಕಾಮನ್ ವೆಲ್ತ್ ಯುನ್ವರ್ಸಿಟಿ
  • ವೆಯಿಲ್ ಕೊನೆಲ್ ಮೆಡಿಕಲ್ ಕಾಲೇಜ್ ಇನ್ ಕತಾರ್
  • ಟೆಕ್ಸಾಸ್ A&M ಯುನ್ವರ್ಸಿಟಿ ಕತಾರ್
  • ಕಾರ್ನೆಗಿ ಮೆಲ್ಲಾನ್ ಯುನ್ವರ್ಸಿಟಿ ಇನ್ ಕತಾರ್
  • ಜಾರ್ಜ್ ಟೌನ್ ಯುನ್ವರ್ಸಿಟಿ ಸ್ಕೂಲ್ ಆಫ್ ಫಾರೆನ್ ಸರ್ವಿಸ್ ಇನ್ ಕತಾರ್
  • ನಾರ್ತ್ ವೆಸ್ಟ್ ಯುನ್ವರ್ಸಿಟಿ ಕತಾರ್

ದೊಹಾದ ಸುತ್ತಮುತ್ತಲಿನ ಇನ್ನಿತರ ಯುನ್ವರ್ಸಿಟಿಗಳು/ಕಾಲೇಜುಗಳು:

  • ಕತಾರ್ ಯುನ್ವರ್ಸಿಟಿ
  • ಕಾಲೇಜ್ ಆಫ್ ದಿ ನಾರ್ತ್ ಅಟ್ಲಾಂಟಿಕ್
  • CHN ಯುನ್ವರ್ಸಿಟಿ
  • ಯುನ್ವರ್ಸಿಟಿ ಆಫ್ ಕಾಲ್ಗೆರಿ
  • ಕತಾರ್ ಲೀಡರ್ ಶಿಪ್ ಅಕ್ಯಾಡಮಿ (ಹೊರಗಡೆ ಅಲ್ ಖವ್ರ್ ಟೌನ್)

ಕ್ರೀಡೆಗಳು

ದೊಹಾದಲ್ಲಿ ಹಲವಾರು ಕ್ರೀಡಾಂಗಣಗಳಿವೆ.ಆಗ 15 ನೆಯ ಏಶಿಯನ್ ಗೇಮ್ಸ್ ಸಂದರ್ಭದಲ್ಲಿ ಅವುಗಳನ್ನು ನವೀಕರಿಸಲಾಗಿತ್ತು.ಇದು ಡಿಸೆಂಬರ್ 2006 ರಲ್ಲಿ ಆಯೋಜಿತವಾದಾಗ ಸ್ಟೇಡಿಯಮ್ ಗಳ ನವೀಕರಣಕ್ಕಾಗಿ ಒಟ್ಟು $2.8 ಬಿಲಿಯನ್ ವೆಚ್ಚವನ್ನು ಈ ಗೇಮ್ಸ್ ಗಳ ತಯಾರಿಗೂ ಮಾಡಲಾಗಿತ್ತು. ದೊಹಾವು 3ನೆಯ ವೆಸ್ಟ್ ಏಶಿಯನ್ ಗೇಮ್ಸ್ ಗಳನ್ನು 2005 ರ ಡಿಸೆಂಬರ್ ನಲ್ಲಿ ಆಯೋಜಿಸಿತ್ತು. ದೊಹಾವು 2011 ರ ಏಶಿಯನ್ ಇಂಡೋರ್ ಗೇಮ್ಸ್ ಮತ್ತು ಅಂತಿಮ ಪಂದ್ಯಗಳಾದ 2011 AFC ಏಶಿಯನ್ ಕಪ್ ಪಂದ್ಯಗಳನ್ನು ಏರ್ಪಾಡು ಮಾಡುವ ಭರದಲ್ಲಿದೆ. ಕತಾರ್ ಆ ಪ್ರದೇಶವನ್ನು ಕ್ರೀಡಾ ರಾಜಧಾನಿಯಾಗಿಸುವ ಹವಣಿಕೆಯಲ್ಲಿದೆ.

ದೊಹಾ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಕ್ರೀಡಾಸ್ಥಳಗಳು:

  • ಹಮಿದ್ ಬಿನ್ ಖಲಿಫಾ ಸ್ಟೇಡಿಯಮ್ - ಅಲ್-ಅಹ್ಲೆ ಸ್ಟೇಡಿಯಮ್
  • ಥಾನಿ ಬಿನ್ ಜಾಸ್ಸಿಮ್ ಸ್ಟೇಡಿಯಮ್ - ಅಲ್-ಘರಾಫಾ ಸ್ಟೇಡಿಯಮ್
  • ಜಾಸ್ಸಿನ್ ಬಿನ್ ಹಮದ್ ಸ್ಟೇಡಿಯಮ್(ಅಲ್ ಸದ್ ಸ್ಟೇಡಿಯಮ್)
  • ಅಲ್ ರಯಾನ್ ಸ್ಟೇಡಿಯಮ್- ಅಹ್ಮದ್ ಬಿನ್ ಅಲಿ ಸ್ಟೇಡಿಯಮ್
  • ಅಲ್-ಅರಬಿ ಸ್ಟೇಡಿಯಮ್ - ಗ್ರಾಂಡ್ ಹಮದ್ ಸ್ಟೇಡಿಯಮ್
  • ಹಮದ್ ಅಕ್ವಾಟಿಕ್ ಸೆಂಟರ್
  • ಖಲೆಫಾ ಇಂಟ ರ್ನ್ಯಾಶನಲ್ ಸ್ಟೇಡಿಯಮ್ - 2006 ರ ಏಸಿಶಿಯನ್ ಗೇಮ್ಸ್ ಗೆ ಪ್ರಧಾನ ಕ್ರೀಡಾಂಗಣವಾಗಿತ್ತು.
  • ಖಲಿಫಾ ಇಂಟ ರ್ ನ್ಯಾಶನಲ್ ಟೆನ್ನಿಸ್ ಕಾಂಪ್ಲೆಕ್ಸ್
  • ಕತಾರ್ ಸ್ಪೊರ್ಟ್ಸ್ ಕ್ಲಬ್ ಸ್ಟೇಡಿಯಮ್

ASPIRE ಅಕ್ಯಾಡಮಿಯು 2004 ರಲ್ಲಿ ಸ್ಪೊರ್ಟ್ಸ್ ಅಕ್ಯಾಡಮಿಯನ್ನು ಸ್ಥಾಪಿಸಿ ವಿಶ್ವ ಮಟ್ಟದ ಕ್ರೀಡೆಗಳಿಗೆ ಪ್ರೊತ್ಸಾಹಿಸುವ ಭರದಲ್ಲಿದೆ. ಇದು ದೊಹಾ ಸ್ಪೊರ್ಟ್ಸ ಸಿಟಿ ಕಾಂಪ್ಲೆಕ್ಸ್ ಸಂಕೀರ್ಣದಲ್ಲಿದೆ.ಇದು ಖಲಿಫಾ ಇಂಟರ್ ನ್ಯಾಶನಲ್ ಸ್ಟೇಡಿಯಮ್,ಹಮದ ಅಕ್ವಾಟಿಕ್ ಸೆಂಟರ್ ಮತ್ತು ಅಸ್ಪೈಯರ್ ಟಾವರ್ ಗಳನ್ನೊಳಗೊಂಡಿದೆ.

ಈ MotoGP ಮೊಟಾರು ಸೈಕಲ್ ಗಳ ಗ್ರಾಂಡ್ ಪ್ರಿಕ್ಸ್ ದೊಹಾವು ವಾರ್ಷಿಕವಾಗಿ ಲೊಸೇಲ್ ಇಂಟರ್ ನ್ಯಾಶನಲ್ ಸರ್ಕ್ಯುಟ್ ನಲ್ಲಿ ನಡೆಯುತ್ತದೆ.ಇದು ನಗರದ ಉತ್ತರ ಭಾಗದಲ್ಲಿದೆ.

ನಿರ್ಮಾಣ ಹಂತದಲ್ಲಿರುವ ಕ್ರೀಡಾಂಗಣಗಳು/ಕ್ರೀಡಾ ಸೌಕರ್ಯಗಳು:

  • ದಿ ವಾಲ್ ಸ್ಟೇಡಿಯಮ್[೧೮]
  • ಪ್ಯಾರಾಲಂಪಿಕ್ ಸ್ಟೇಡಿಯಮ್[೧೯]
  • ದೊಹಾ ಸ್ಪೊರ್ಟ್ಸ್ ಮ್ಯುಜಿಯಮ್[೨೦]

ವಾಲ್ ಸ್ಟೇಡಿಯಮ್ ವಿಶ್ವದ ಅತ್ಯಂತ ವಿಶಾಲ ನೆಲಮಾಳಿಗೆಯಲ್ಲಿರುವ ಕ್ರೀಡಾಂಗಣವಾಗಿದೆ.ಅದು ಜೆಲ್ಲ್ಹಾಲ್ಲನ್ ಐಸ್-ಹಾಕಿ ಪಂದ್ಯಾವಳಿ ಪ್ರದೇಸಹ್ವು ನಾರ್ವೆಯ ಭಾಗದಲ್ಲಿದೆ.ಇದು 2011 ರ AFC ಏಶಿಯನ್ ಕಪ್ ಪಂದ್ಯಾವಳಿಗಳ ಆಯೋಜಕವಾಗಿದೆ.[೨೧] ಈ ಸ್ಟೇಡಿಯಮ್ ನಿರ್ಮಾಣಕ್ಕೆ 20 ದಶಲಕ್ಷ ಡಾಲರ್ ವೆಚ್ಚ ಅಂದಾಜಿಸಲಾಗಿದೆ. ಈ ಕ್ರೀಡಾಂಗಣವು ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಾಣವಾಗಿದೆ.ಅಲ್ಲಿಗೆ ಹೋಗುವುದು ಕೂಡ ಸುಲಭವಾಗಿದೆ. ಲುಸೇಲ್ ನ ದಕ್ಷಿಣ ಭಾಗದ ಹೊಸ ಪಟ್ಟಣದಲ್ಲಿರುವ ನಿವ್ ಪ್ಯಾರಾಲಿಂಪಿಕ್ ಸ್ಟೇಡಿಯಮ್ ಅತ್ಯಾಧುನಿಕ ನಿರ್ಮಾಣವೆನಿಸಿದೆ.

ಕತಾರ್ ಕೂಡ ಮಧ್ಯ ಪ್ರಾಚ್ಯದಲ್ಲಿ 2001 ರ ಮಹಿಳಾ ಟೆನ್ನಿಸ್ ಪಂದ್ಯಾವಳಿಗಳನ್ನು ಆಯೋಜಿಸಿದ ಮೊದಲ ದೇಶವಾಗಿದೆ.ಮಹಿಳೆಯರಿಗಾಗಿರುವ ಕತಾರ್ ಒಪನ್ ಮತ್ತು ಮಹಿಳೆಯರ ITF ಟೂರ್ನಾಮೆಂಟ್ ನ್ನು ಆಯೋಜಿಸುತ್ತದೆ. ಸುಮಾರು 2008 ರಿಂದ ಮೂರು ವರ್ಷಗಳಿಂದ ಸತತವಾಗಿ ಸೊನಿ ಎರಿಕ್ಸನ್ ಚ್ಯಾಂಪಿಯನ್ ಶಿಪ್ಸ್ ಗಳು ದೊಹಾದಲ್ಲಿ ನಡೆಯುತ್ತಿವೆ.(ಇವು ATP ಯ ಸೀಜನ್ ಎಂಡಿಂಗ್ ಚ್ಯಾಂಪಿಯನ್ ಶಿಪ್ಸ್ ಗಳಿಗೆ ಸಮಬಲದ್ದಾಗಿವೆ.)ಖಲಿಫಾ ಇಂಟರ್ ನ್ಯಾಶನಲ್ ಟೆನ್ನಿಸ್ ಕಾಂಪ್ಲೆಕ್ಸ್ ನಡೆಯುತ್ತವೆ ಅಲ್ಲದೇ ದಾಖಲೆಯನ್ನುವಂತೆ $4.45 ದಶಲಕ್ಷ ಬಹುಮಾನ ನೀಡುತ್ತವೆ.(ವಿಜಯಿತರಿಗೆ $1,485,000ಚೆಕ್ ನ್ನು ಮತ್ತು ಅತಿ ದೊಡ್ಡ ಮೊತ್ತದ ವೈಯಕ್ತಿಕ ಮೊತ್ತ ಗಳಿಸಿದ ಆಟಗಾರರಿಗೆ ಬಹುಮಾನಗಳು ನಿಗದಿಯಾಗಿವೆ.[೨೨]

ದೊಹಾವು 2016 ಒಲಿಂಪ್ಸ್ಗಾಗಿ ಹರಾಜು ಕೂಗಿದೆ.[೨೩] ಅದು ಈಗಾಗಲೇ 2006 ರಲ್ಲಿ ಏಶಿಯನ್ ಗೇಮ್ಸ್ ಗಾಗಿ ಸಿದ್ದಗೊಳಿಸಿದ 70% ರಷ್ಟು ಕ್ರೀಡಾ ತಯಾರಿಯನ್ನು ಪಡೆದಿದೆ. ದೊಹಾ ಇದರಲ್ಲಿ ಸಫಲವಾದರೆ ಒಲಿಂಪಿಕ್ ಗ್ರಾಮ ನಿರ್ಮಿಸಿ ಅದಕ್ಕಾಗಿ 67 ಹೆಕ್ಟೇರ್ ಜಾಗದಲ್ಲಿ ಕ್ರೀಡಾಗ್ರಾಮದ ಸಿದ್ದತೆ ಮಾಡುವ ನಿರೀಕ್ಷೆಯಲ್ಲಿದೆ.ಸುಮಾರು 18,000 ಜನರ ಆಸನ ವ್ಯವಸ್ಥೆ ಹಾಗು ಇನ್ನುಳಿದ ಅಧಿಕಾರಿ ವರ್ಗಕ್ಕೂ ಇದರ ಬಳಕೆ ಸುಲಭವಾಗಲಿದೆ.[೨೪] (ನೋಡಿ ದೊಹಾ 2016 ಒಲಿಂಪಿಕ್ ಹರಾಜು) ಜೂನ್ 4, 2008, ಆದರೆ ನಗರವನ್ನು ಪಟ್ಟಿ ಮಾಡಿದ ಸ್ಥಳಗಳಿಂದ 2016 ಒಲಿಂಪಿಕ್ಸ್ ಗೇಮ್ಸ್ ಗಾಗಿ ತೆಗೆದು ಹಾಕಲಾಗಿದೆ.

ಕಳೆದ ನವೆಂಬರ್ 2009,ರಲ್ಲಿ ದೊಹಾದಿ ಒರೆಕ್ಸ್ ಕಪ್ ವರ್ಲ್ಡ್ ಚ್ಯಾಂಪಿಯನ್ಶಿಪ್ ನ್ನು ಆಯೋಜಿಸಿತ್ತು. ಇದು ಜಲವಿಮಾನ ಸ್ಪರ್ಧೆಯ H1 ಅನ್ ಲಿಮಿಟೆಡ್ಋತುಮಾನದ ಸ್ಪರ್ಧೆಯಾಗಿತ್ತು. ಪರ್ಸಿಯನ್ ಕೊಲ್ಲಿಯಲ್ಲಿನ ದೊಹಾ ಕಡಿದಾದ ಕರಾವಳಿ ಪ್ರದೇಶದಲ್ಲಿ ಈ ಸ್ಪರ್ಧೆ ಏರ್ಪಾಡಾಗಿತ್ತು. ದಿ H1 ಅನ್ ಲಿಮಿಟೆಡ್ ಮತ್ತು ಕತಾರ್ ಮರಿನ್ ಸ್ಪೊರ್ಟ್ಸ್ ಫೆಡರೇಶನ್ (QMSF)2009 ರಲ್ಲಿನ ಅಂತಿಮ ರೇಸ್ ಗಳಿಗಾಗಿ ಆ ಸೀಜನ್ನಿನ ಜಲವಿಮಾನ ಪಂದ್ಯಾವಳಿಗಾಗಿ ದೊಹಾದಲ್ಲಿ ಒಪ್ಪಿಗೆ ನೀಡಿದವು. ವಿಶ್ವದಲ್ಲಿನ ಹತ್ತು ಅತಿ ವೇಗದ ಸ್ಪರ್ಧಾ ದೋಣಿಗಳು ದೊಹಾದಲ್ಲಿ 2009 ರಲ್ಲಿ ಸಂಚರಿಸಿದವು.ಅದೇ ರೀತಿ ಒರಾಕ್ಸ್ ಕಪ್ಉದ್ಘಾಟನೆ ಮತ್ತು H1 ಅನ್ ಲಿಮಿಟೆಡ್ ವರ್ಲ್ಡ್ ಚ್ಯಾಂಪಿಯನ್ ಶಿಪ್ ಗಳು ಈ ತಾತ್ವಿಕ ಒಪ್ಪಂದದ ಮೇರೆಗೆ ಜನವರಿಯಲ್ಲಿ ABRA ಮತ್ತು QMSF ನಡುವೆ ಪಂದ್ಯಾವಳಿಗಳು ಆಯೋಜಿತಗೊಂಡವು.

ಡಿಸೆಂಬರ್ 2010 ರಲ್ಲಿ ಕತಾರ್ 2022 FIFA ವರ್ಲ್ಡ್ ಕಪ್ ಆಯೋಜಿಸಲು ಹಕ್ಕುಗಳನ್ನು ಪಡೆಯಿತು.ಈ ಕ್ರೀಡೆಗಳನ್ನು ಅದು ಮೊದಲ ಬಾರಿಗೆ ಈ ಪ್ರದೇಶಕ್ಕೆ ತಂದ ಹೆಮ್ಮೆಯೆನಿಸಿದೆ. ಕತಾರ್ ನ ಬಿರುಬಿಸಿಲಿನ ಬೇಸಿಗೆಗಳು ಮತ್ತು ದೇಶದ ಸಣ್ಣ ಪ್ರಮಾಣದ ಜನಸಂಖ್ಯೆಯು ಈ ಹರಾಜು ಗೆಲ್ಲುವ ಮೂಲಕ ವಿಶಿಷ್ಟ ಮೆರಗನ್ನೇ ತಂದಿವೆ ಎನ್ನಬಹುದು.ಇವು ವಿಶ್ವ ಕಪ್ ಇತಿಹಾಸದಲ್ಲೇ ಊಹಿಸಲಿಕ್ಕಾಗದ ಸಂದರ್ಭಗಳು ಎನ್ನಬಹುದು. ಈ ಗೆದ್ದ ಹರಾಜಿನ ಪ್ರಕಾರ ಎಲ್ಲಾ ವಿಶ್ವ ಸ್ಪರ್ಧೆಗಳು ನಡೆಯುವ ಒಳಾಂಗಣ ಕ್ರೀಡಾಂಗಣಗಳು ಹವಾನಿಯಂತ್ರಣ ಸೌಕರ್ಯವನ್ನು ಕಡ್ಡಾಯವಾಗಿ ಒಳಗೊಂಡಿರಬೇಕು.ಯಾಕೆಂದರೆ ಈ ಪಂದ್ಯಾವಳಿಗಳು ಸುಡುಬೇಸಿಗೆಯಲ್ಲಿ ಆಯೋಜಿತಗೊಂಡಿವೆ.

ಅವಳಿ ಪಟ್ಟಣಗಳು ಮತ್ತು ಸಹೋದರಿ ನಗರಗಳು

ಇವನ್ನೂ ಗಮನಿಸಿ

ಉಲ್ಲೇಖಗಳು

  1. "Doha 2016 Summer Olympics Bid". Gamesbids.com. Retrieved 2010-06-27.
  2. ೨.೦ ೨.೧ ೨.೨ ೨.೩ Encyclopædia Britannica. "Doha - Britannica Online Encyclopedia". Britannica.com. Retrieved 2010-06-27.
  3. "Doha weather information". Wunderground.com. 2010-06-10. Archived from the original on 2011-06-04. Retrieved 2010-06-27.
  4. "World Weather Information Service - Doha". Archived from the original on 2011-04-30. Retrieved 2010-12-04.
  5. ೫.೦ ೫.೧ "Doha 2016 Summer Olympic Games Bid". Gamesbids.com. Retrieved 2010-06-27.
  6. "ಆರ್ಕೈವ್ ನಕಲು". Archived from the original on 2016-03-04. Retrieved 2011-01-30.
  7. "Capital Doha Population 484". Archived from the original on 2009-10-25. Retrieved 2009-10-25.
  8. "Doha". Tiscali.co.uk. 1984-02-21. Archived from the original on 2009-11-05. Retrieved 2010-06-27.
  9. "Sudan Airways - Doha". Sudanair.com. Archived from the original on 2010-08-19. Retrieved 2010-06-27.
  10. "Sheraton Doha Hotel & Resort | Hotel discount bookings in Qatar". Hotelrentalgroup.com. Archived from the original on 2010-08-19. Retrieved 2010-06-27.
  11. "Capitals of the World - Qatar, Doha - Doha capital city of Qatar". SightSeeBySpace.com. Archived from the original on 2010-08-19. Retrieved 2010-06-27.
  12. "ಆರ್ಕೈವ್ ನಕಲು". Archived from the original on 2013-06-09. Retrieved 2011-01-30.
  13. "ಆರ್ಕೈವ್ ನಕಲು". Archived from the original on 2015-09-24. Retrieved 2011-01-30.
  14. "ವರ್ಲ್ಡ್ ವೈಡ್ ಆಫಿಸಿಸ್ Archived 2011-02-02 ವೇಬ್ಯಾಕ್ ಮೆಷಿನ್ ನಲ್ಲಿ.." ಕತಾರ್‌ ಏರ್‌ವೇಸ್‌‌ 12 ಫೆಬ್ರವರಿ 2010 ಪುನರ್ಪಡೆದ್ದು
  15. ೧೫.೦ ೧೫.೧ ೧೫.೨ "Global Perspectives - Qatar's New Doha International Airport". AirguideOnline.com. Archived from the original on 2012-02-16. Retrieved 2010-06-27.
  16. "New Doha International Airport presents credentials at leading industry forum, AME Info, 2006-09-26". Ameinfo.com. 2007-03-02. Archived from the original on 2011-06-07. Retrieved 2010-06-27.
  17. "Information on the New Doha International Airport". Airport-technology.com. Retrieved 2010-06-27.
  18. "View Single Post - U/C: the Wall Stadium (MZ& Partners)". SkyscraperCity. 2007-10-25. Retrieved 2010-06-27.
  19. 10:21 AM. "View Single Post - Doha votes to host the olympics 2016 !!!". SkyscraperCity. Retrieved 2010-06-27.{cite web}: CS1 maint: numeric names: authors list (link)
  20. "Olympic Bid News and Information Website". GamesBids.com. Retrieved 2010-06-27.
  21. "View Single Post - #News: Qatar bids to host 2011 Asian Cup". SkyscraperCity. Retrieved 2010-06-27.
  22. ""ಸೀಜನ್ ಟು ಎಂಡ್ ಇನ್ ದೊಹಾ 2008-2010" ಆನ್ ದಿ ಸೊನಿ ಎರಿಕ್ಸನ್ WTA ಟೂರ್ ವೆಬ್ ಸೈಟ್". Archived from the original on 2009-03-28. Retrieved 2011-01-30.
  23. "Information on 2016 Olympic Games Bids". Gamesbids.com. Archived from the original on 2008-05-12. Retrieved 2010-06-27.
  24. "ದೊಹಾ 2016". Archived from the original on 2009-03-27. Retrieved 2011-01-30.


ಬಾಹ್ಯ ಕೊಂಡಿಗಳು

ಟೆಂಪ್ಲೇಟು:Qatar