ಪಾಕಿಸ್ತಾನದ ಪ್ರಧಾನ ಮಂತ್ರಿಗಳು

ವಝೀರ್ ಇ ಅಜಂ

ಲಿಯಾಕತ್ ಆಲಿಖಾನ್ ಮೊದಲ ಪ್ರಧಾನಿ(1889–1951).
  • ಪಾಕಿಸ್ತಾನದ ಪ್ರಧಾನ ಮಂತ್ರಿ ಪಾಕಿಸ್ತಾನದ ಪ್ರಧಾನಿ (ಉರ್ದು: وزیر اعظم - Wazīr-ē A'ẓam, ಉರ್ದು ಉಚ್ಚಾರಣೆ: [ʋəziːr-ˌeː ɑː.zəm]; ಲಿಟ್ "ಗ್ರ್ಯಾಂಡ್ ವಿಝಿಯರ್"), ಪಾಕಿಸ್ತಾನದ ಸರ್ಕಾರದ ಮುಖ್ಯಸ್ಥರಾಗಿದ್ದು, "ರಿಪಬ್ಲಿಕ್‍ನ ಮುಖ್ಯ ಕಾರ್ಯನಿರ್ವಾಹಕ". ಪ್ರಧಾನ ಮಂತ್ರಿಯು ಸರ್ಕಾರದ ಮುಖ್ಯ ಕಾರ್ಯನಿರ್ವಾಹಕ, ಆರ್ಥಿಕ ಬೆಳವಣಿಗೆಯನ್ನು ಮೇಲ್ವಿಚಾರಣೆ ಮಾಡುತ್ತಾನೆ, ಸಾಮಾನ್ಯ ಆಸಕ್ತಿಗಳು ಮತ್ತು ಕ್ಯಾಬಿನೆಟ್ ಕೌನ್ಸಿಲ್‍ಗೆ ನೇತೃತ್ವ ವಹಿಸುತ್ತಾನೆ ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಮೇಲೆ ಕಮಾಂಡ್ ಪ್ರಾಧಿಕಾರವನ್ನು ಹೊಂದಿರುತ್ತಾನೆ.
  • ಈ ಸ್ಥಾನವು ರಾಷ್ಟ್ರದ ನಾಯಕತ್ವದ ಸ್ಥಾನಮಾನವನ್ನು ಮತ್ತು ಆಂತರಿಕ ಮತ್ತು ವಿದೇಶಿ ನೀತಿಗಳ ಎಲ್ಲಾ ವಿಷಯಗಳ ಮೇಲೆ ನಿಯಂತ್ರಣವನ್ನು ನೀಡುತ್ತದೆ. ಸುಪ್ರೀಂ ಕೋರ್ಟ್ನಿಂದ ಇತ್ತೀಚೆಗೆ ಅನರ್ಹರಾದ ನವಾಜ್ ಶರೀಫ್ ಈ ಸ್ಥಾನದ ಕೊನೆಯವರು. ಪ್ರಧಾನಮಂತ್ರಿಯನ್ನು ರಾಷ್ಟ್ರೀಯ ವಿಧಾನಸಭೆಯ ಸದಸ್ಯರು ಆಯ್ಕೆಮಾಡುತ್ತಾರೆ ಮತ್ತು ಆದ್ದರಿಂದ ಸಂಸತ್ತಿನ ಬಹುಮತದ ಪಕ್ಷದ ಮುಖ್ಯಸ್ಥರಾಗಿರುತ್ತಾರೆ. ಪಾಕಿಸ್ತಾನದ ಸಂವಿಧಾನದ, ಕ್ಯಾಬಿನೆಟ್ ನೇಮಕ ಹಾಗೂ ಕಾರ್ಯಾಂಗ ಚಾಲನೆಯಲ್ಲಿರುವಾಗ ತೆಗೆದುಕೊಂಡ ಕಾರ್ಯನಿರ್ವಾಹಕ ನಿರ್ಧಾರಗಳನ್ನು, ನೇಮಕಾತಿಗಳು ಮತ್ತು ಪ್ರಧಾನಿಯು ಕಾರ್ಯಕಾರಿ ನೇಮಕಕ್ಕೆ ದೃಢೀಕರಣ, ಅಗತ್ಯವಿರುವ ಶಿಫಾರಸುಗಳನ್ನು ಮಾಡುವ ಅಧಿಕಾರವನ್ನು ಪ್ರಧಾನಿ ಹೊಂದಿದ್ದಾರೆ.
  • ಸಂವಿಧಾನಾತ್ಮಕವಾಗಿ, ಪ್ರಧಾನ ಮಂತ್ರಿಯು ನಿರ್ಣಾಯಕ ವಿಷಯಗಳ ಮೇಲೆ ಪಾಕಿಸ್ತಾನದ ಅಧ್ಯಕ್ಷರಿಗೆ ಮುಖ್ಯ ಸಲಹೆಗಾರನಾಗಿ ಸೇವೆ ಸಲ್ಲಿಸುತ್ತಾನೆ ಮತ್ತು ಪ್ರತಿ ಶಾಖೆಯಲ್ಲಿ ಮತ್ತು ಮಿಲಿಟರಿ ನಾಯಕತ್ವದ ನೇಮಕ ಮಾಡುವಲ್ಲಿ ಪ್ರಭಾವಿ ಪಾತ್ರ ವಹಿಸುತ್ತಿದ್ದಾನೆ ಮತ್ತು ಅಧ್ಯಕ್ಷ ಹಾಗೂ ಜಂಟಿ ಮುಖ್ಯಸ್ಥರ ಮೂಲಕ ಮಿಲಿಟರಿಯ ನಿಯಂತ್ರಣವನ್ನು ಹೊಂದಿರುತ್ತಾನೆ.[][]

ನವಾಜ್‌ ಷರೀಫ್‌ ರಾಜಿನಾಮೆ

  • 28 Jul, 2017
  • ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌ ಹಾಗೂ ಅವರ ಕುಟುಂಬ ವಿರುದ್ಧದ ಪನಾಮಾ ಪೇಪರ್ಸ್‌ ಪ್ರಕರಣದ ವಿಚಾರಣೆ ನಡೆಸಿದ ಪಾಕಿಸ್ತಾನದ ಸುಪ್ರೀಂ ಕೋರ್ಟ್‌ ನವಾಜ್‌ ಷರೀಫ್‌ ಅವರನ್ನು ದೋಷಿ ಎಂದು ಮಹತ್ವದ ತೀರ್ಪು ಪ್ರಕಟಿಸಿದೆ. ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದ ಬೆನ್ನಲ್ಲೇ ಷರೀಫ್ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಕ್ರಮ ಸಂಪಾದನೆ ಹಾಗೂ ತೆರಿಗೆ ವಂಚನೆಯಿಂದ ಗಳಿಸಿದ ಕಾಳಧನವನ್ನು ಅಂತರರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಇರಿಸಿರುವವರ ಪಟ್ಟಿಯು ಪನಾಮಾ ಪೇಪರ್ಸ್‌ ಸೋರಿಕೆಯಿಂದ ಬಹಿರಂಗಗೊಂಡಿತ್ತು.[]

ಭಾರತ ಪಾಕಿಸ್ತಾನ ಸಂಬಂಧ

  • ಪ್ರಧಾನಿ ನವಾಜ್‌ ಷರೀಫ್‌‍ರ ರಾಜಿನಾಮೆ ನಂತರ, ಭಾರತದೊಂದಿಗಿನ ಗಡಿ ನಿಯಂತ್ರಣ ರೇಖೆಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘಿಸಲು ಮತ್ತಷ್ಟು ಹೆಚ್ಚಿನ ಕುಮ್ಮಕ್ಕು ಸಿಗಬಹುದು ಮತ್ತು ಭಾರತದ ವಿರುದ್ಧ ಪರೋಕ್ಷ ಯುದ್ಧ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಉಭಯ ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧವನ್ನು ಹತ್ತಿರದಿಂದ ಬಲ್ಲ ತಜ್ಞರ ಅಭಿಮತವಾಗಿದೆ. ಲಷ್ಕರ್‌ –ಎ ತಯಬಾ (ಎಲ್‌ಇಟಿ), ಹಿಜ್ಬುಲ್‌ ಮುಜಾಹಿದೀನ್‌ ಮತ್ತು ಜೈಷ್‌ ಎ ಮೊಹಮ್ಮದ್‌ ನಂತಹ ಉಗ್ರ ಸಂಘಟನೆಗಳನ್ನು ಭಾರತದ ಮೇಲೆ ಛೂ ಬಿಡುವ ಪಾಕಿಸ್ತಾನ ಸೇನೆ ಮತ್ತು ಐಎಸ್‌ಐ ಕುತಂತ್ರ ಇನ್ನೂ ಹೆಚ್ಚಾಗಬಹುದು ಎಂದು ಮೂಲಗಳು ಶಂಕಿಸಿವೆ.[]

ಹಿಂದಿನ ಪ್ರಧಾನ ಮಂತ್ರಿಗಳು

*ಒಬ್ಬ ಪ್ರಧಾನಿಯೂ ಐದು ವರ್ಷ ಪೂರೈಸಲಿಲ್ಲ

  • ಭಾರತದಿಂದ ಬೇರೆಯಾಗಿ ನೂತನ ರಾಷ್ಟ್ರವಾದ ಪಾಕಿಸ್ತಾನದ ಮೊದಲ ಪ್ರಧಾನಿಯಾಗಿ ಲಿಯಾಖತ್ ಅಲಿ ಖಾನ್ ಆಯ್ಕೆ. ಅಧಿಕಾರ ಸ್ವೀಕರಿಸಿದ ನಂತರದ ನಾಲ್ಕು ವರ್ಷ ಎರಡನೇ ತಿಂಗಳು, 1951ರ ಅಕ್ಟೋಬರ್ 16ರಂದು ಅಲಿ ಖಾನ್ ಅವರ ಹತ್ಯೆಯಾಯಿತು.
  • 1953ರಲ್ಲಿ ಎರಡನೇ ಪ್ರಧಾನಿಯಾಗಿ ಖ್ವಾಜಾ ನಜೀಮುದ್ದೀನ್ ಆಯ್ಕೆ. ಗವರ್ನರ್ ಜನರಲ್ ಮಲಿಕ್ ಗುಲಾಂ ಮುಹಮ್ಮದ್ ಅವರು, ನಜೀಮುದ್ದೀನ್ ಅವರನ್ನು ಅದೇ ವರ್ಷ ಪದಚ್ಯುತಗೊಳಿಸಿದರು.
  • ನಜೀಮುದ್ದೀನ್ ಜಾಗಕ್ಕೆ ಮುಹಮ್ಮದ್ ಅಲಿ ಬೋಗ್ರಾ ಆಯ್ಕೆ. ಸಾರ್ವತ್ರಿಕ ಚುನಾವಣೆ ಕಾರಣಕ್ಕೆ 1954ರಲ್ಲಿ ಪ್ರಧಾನಿ ಹುದ್ದೆಯಿಂದ ಇಳಿದ ಬೋಗ್ರಾ. ಸಾರ್ವತ್ರಿಕ ಚುನಾವಣೆಯಲ್ಲಿ ಮುಸ್ಲಿಂ ಲೀಗ್‌ಗೆ ಭಾರಿ ಸೋಲು. ಅಲ್ಪಮತದಲ್ಲೇ ಸರ್ಕಾರ ರಚಿಸಿದ ಬೋಗ್ರಾ. 1955ರ ಆಗಸ್ಟ್‌ನಲ್ಲಿ ಬೋಗ್ರಾರನ್ನು ಗವರ್ನರ್ ಜನರಲ್ ಇಸ್ಕಂದರ್ ಮಿರ್ಜಾ ಪದಚ್ಯುತಗೊಳಿಸಿದರು. ಮಿರ್ಜಾ ಪಾಕಿಸ್ತಾನದ ಕೊನೆಯ ಗವರ್ನರ್ ಜನರಲ್ ಮತ್ತು ಮೊದಲ ಅಧ್ಯಕ್ಷ.
  • 1955ರಲ್ಲಿ ನೂತನ ಪ್ರಧಾನಿಯಾಗಿ ಚೌಧರಿ ಮುಹಮ್ಮದ್ ಅಲಿ ಆಯ್ಕೆಯಾದರು. ಅಧ್ಯಕ್ಷ ಮಿರ್ಜಾ ಜತೆಗಿನ ಭಿನ್ನಾಭಿಪ್ರಾಯಗಳ ಕಾರಣ ಅಲಿ ಸಹ 1956ರಲ್ಲಿ ರಾಜೀನಾಮೆ ನೀಡಿದರು.
  • 1956ರ ಸೆಪ್ಟೆಂಬರ್‌ನಲ್ಲಿ ಹುಸೇನ್ ಶಹೀದ್ ಸುಹ್ರಾವಾರ್ದಿ ಪ್ರಧಾನಿಯಾಗಿ ಆಯ್ಕೆಯಾದರು. ಅಧ್ಯಕ್ಷ ಮಿರ್ಜಾರು ಶಹೀದ್ ಅವರನ್ನೂ ಪದಚ್ಯುತಗೊಳಿಸಿದರು.
  • 1957ರ ಅಕ್ಟೋಬರ್‌ನಲ್ಲಿ ಮುಸ್ಲಿಂ ಲೀಗ್‌ನ ಇಬ್ರಾಹಿಂ ಇಸ್ಮಾಯಿಲ್ ಚುಂದ್ರಿಗರ್ ಪ್ರಧಾನಿಯಾಗಿ ಆಯ್ಕೆಯಾದರು. ಪಕ್ಷದೊಳಗಿನ ಭಿನ್ನಮತದ ಕಾರಣ 1957ರ ಡಿಸೆಂಬರ್‌ನಲ್ಲೇ ರಾಜೀನಾಮೆ ಕೊಟ್ಟರು.
  • ತಮ್ಮದೇ ರಿಪಬ್ಲಿಕನ್ ಪಕ್ಷದ ಮುಖ್ಯಸ್ಥ ಫಿರೋಜ್ ಖಾನ್ ನೂನ್‌ರನ್ನು ಪ್ರಧಾನಿಯಾಗಿ ನೇಮಕ ಮಾಡಿದರು, ಆದ್ಯಕ್ಷ ಮಿರ್ಜಾ. 1958ರಲ್ಲಿ ಅಯೂಬ್ ಖಾನ್ ನೇತೃತ್ವದಲ್ಲಿ ಸೇನಾ ಕ್ರಾಂತಿಯಾಯಿತು. ಪ್ರಧಾನಿಯಾಗಿ ಐದು ದಿನಗಳ ಅಧಿಕಾರ ನಡೆಸಿದರು- ಅಯೂಬ್ ಖಾನ್. ನಂತರ ಅಧ್ಯಕ್ಷ ಇಸ್ಕಂದರ್ ಮಿರ್ಜಾ ಪದಚ್ಯುತಿ. ಸಂವಿಧಾನ ರದ್ದು. ಹೊಸ ಸಂವಿಧಾನ ಅಂಗೀಕಾರ. ಪ್ರಧಾನಿ ಹುದ್ದೆಯೇ ರದ್ದು.
  • 1958ರಿಂದ 1973ರವರೆಗೆ ಸೇನಾ ಆಡಳಿತ. 1971ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಪಾಕಿಸ್ತಾನ ಸೋತ ಕಾರಣ, ಅಧ್ಯಕ್ಷ ಯಾಹ್ಯಾ ಖಾನ್ ರಾಜೀನಾಮೆ. 1971ರಲ್ಲಿ ಅಧ್ಯಕ್ಷರಾಗಿ ಜುಲ್ಫೀಕರ್ ಅಲಿ ಭುಟ್ಟೊ ಆಯ್ಕೆ. 1973ರಲ್ಲಿ ನೂತನ ಸಂವಿಧಾನದ ಅಂಗೀಕಾರ, ಜಾರಿ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಭುಟ್ಟೊ ಪ್ರಧಾನಿಯಾದರು.
  • 1977ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಪ್ರಧಾನಿಯಾಗಿ ಭುಟ್ಟೊ ಆಯ್ಕೆಯಾದರು. ಸೇನಾ ಮುಖ್ಯಸ್ಥ ಜನರಲ್ ಮೊಹಮ್ಮದ್ ಜಿಯಾ ಉಲ್ ಹಕ್ ನೇತೃತ್ವದಲ್ಲಿ 1979ರಲ್ಲಿ ಸೇನಾ ಕ್ರಾಂತಿಯಾಯಿತು. ಭುಟ್ಟೊಗೆ ಗಲ್ಲು ಶಿಕ್ಷೆ ವಿಧಿಸಿದರು. ಅಧ್ಯಕ್ಷರಾಗಿ ಹಕ್ ಆಯ್ಕೆಯಾದರು.
  • 1985ರಲ್ಲಿ ಪ್ರಧಾನಿಯಾಗಿ ಮುಹಮ್ಮದ್ ಖಾನ್ ಜುನೆಜೊ ಆಯ್ಕೆಯಾದರು. 1988ರಲ್ಲಿ ಸ್ಪೋಟ ಪ್ರಕರಣ ಒಂದರಲ್ಲಿ ಸೇನೆ ವಿರುದ್ಧ ತನಿಖೆಗೆ ಆದೇಶಿಸಿದ ಮರುದಿನವೇ ಅಧಕ್ಷ ಹಕ್, ಜುನೆಜೊ ಅವರನ್ನು ಪದಚ್ಯುತಗೊಳಿಸಿದರು.
  • 1988ರ ಡಿಸೆಂಬರ್‌ನಲ್ಲಿ ಪಾಕಿಸ್ತಾನದ ಮೊದಲ ಮಹಿಳಾ ಪ್ರಧಾನಿಯಾಗಿ ಬೆನಜೀರ್ ಭುಟ್ಟೊ ಆಯ್ಕೆಯಾದರು. 20 ತಿಂಗಳ ಆಡಳಿತ. 1990ರಲ್ಲಿ ಪಾಕಿಸ್ತಾನದ ಅಧ್ಯಕ್ಷರು ಸರ್ಕಾರವನ್ನು ರದ್ದುಪಡಿಸಿದರು.
  • 1990–1993 ನವಾಜ್ ಷರೀಫ್ ಪ್ರಧಾನಿ. 1993ರಿಂದ 1999ರ ನಡುವೆ ಆರು ಜನ ಪ್ರಧಾನಿಗಳು. ಅದರಲ್ಲಿ ಷರೀಫ್ ಒಮ್ಮೆ, ಬೆನಜೀರ್ ಭುಟ್ಟೊ ಒಮ್ಮೆ ಪ್ರಧಾನಿಯಾಗಿದ್ದರು.
  • 2002ರಲ್ಲಿ ಪ್ರಧಾನಿಯಾಗಿ ಆಯ್ಕೆಯಾಗಿದ್ದ ಜಫರ್ಉಲ್ಲಾ ಖಾನ್ ಜಮಾಲಿ ಅವರು, ಅಧ್ಯಕ್ಷ ಪರ್ವೇಜ್ ಮುಷರಫ್ ಜತೆಗಿನ ಭಿನ್ನಾಭಿಪ್ರಾಯದ ಕಾರಣ 2004ರ ಜೂನ್‌ನಲ್ಲಿ ರಾಜೀನಾಮೆ.
  • 2004ರ ಜೂನ್‌ 30ರಿಂದ ಆಗಸ್ಟ್ 20ರವರೆಗೆ ಪ್ರಧಾನಿಯಾದ ಚೌಧರಿ ಶುಜಾತ್ ಹುಸೇನ್. ಆಗಸ್ಟ್ 20ರಂದು ಮುಷರಫ್ ಆಪ್ತ ಶೌಕತ್ ಅಜೀಜ್ ಪ್ರಧಾನಿಯಾಗಿ ಆಯ್ಕೆ. ಮೂರು ವರ್ಷ ಮೂರು ತಿಂಗಳ ಆಡಳಿತ ನೆಡೆಸಿದರು. ಸಂಸತ್ತಿನ ಅವಧಿ ಮುಗಿಸಿದ ಮೊದಲ ಪ್ರಧಾನಿ ಎನಿಸಿದರು.
  • 2008ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು, ಪ್ರಧಾನಿಯಾಗಿ ಯೂಸುಫ್ ರಜಾ ಗಿಲಾನಿ ಆಯ್ಕೆ. ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮೇಲಿನ ಭ್ರಷ್ಟಾಚಾರ ಆರೋಪ ಸಂಬಂಧ ವಿವರ ನೀಡುವಂತೆ ಸ್ವಿಟ್ಜರ್ಲೆಂಡ್ ಸರ್ಕಾರಕ್ಕೆ ಪತ್ರ ಬರೆಯಲಿಲ್ಲ ಎಂಬ ಕಾರಣಕ್ಕಾಗಿ, ನ್ಯಾಯಾಂಗ ನಿಂದನೆ ಕಾರಣ 2013ರ ಜೂನ್‌ನಲ್ಲಿ ಗಿಲಾನಿ ಅವರನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿತು. ಆದರೆ, ಗಿಲಾನಿ ಅತಿ ಹೆಚ್ಚು ಕಾಲ ಆಡಳಿತ ನಡೆಸಿದ (ನಾಲ್ಕು ವರ್ಷ ನಾಲ್ಕು ತಿಂಗಳು) ಪಾಕಿಸ್ತಾನದ ಪ್ರಧಾನಿ ಎನಿಸಿದ್ದಾರೆ.
  • 2012ರ ಜೂನ್‌ 22ರಿಂದ 2013ರ ಮಾರ್ಚ್‌ 25ರವರೆಗೆ ರಜಾ ಪರ್ವೇಜ್ ಅಶ್ರಫ್ ಆಡಳಿತ. 2013 ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು, ನವಾಜ್ ಷರೀಫ್ ಪ್ರಧಾನಿಯಾಗಿ ಆಯ್ಕೆಯಾದರು.[]

ಕೆಲವು ಪ್ರಮುಖ ಪ್ರಧಾನಿಗಳು

ಶಾಹೀದ್‌ ಪಾಕ್‌ನ ಪ್ರಧಾನಿ

ಶಾಹೀದ್‌ ಖಾಕನ್‌ ಅಬ್ಬಾಸಿ
  • 2 Aug, 2017
  • ದಿ.೧-೮-೨೦೧೭ ರಂದು ಮಂಗಳವಾರ ಪಾಕಿಸ್ತಾನದ ನೂತನ ಪ್ರಧಾನಿಯಾಗಿ,ಹೊರಹೋಗುತ್ತಿರುವ ನವಾಜ್ ಶರೀಪ್‍ರ ಆಪ್ತರಾದ, ಶಾಹೀದ್‌ ಖಾಕನ್‌ ಅಬ್ಬಾಸಿ ಆಯ್ಕೆಯಾಗಿದ್ದಾರೆ. 342 ಸದಸ್ಯ ಬಲದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಡೆದ ಚುನಾವಣೆಯಲ್ಲಿ ಅಬ್ಬಾಸಿ ಅವರು 221 ಮತಗಳನ್ನು ಪಡೆಯುವ ಮೂಲಕ ಪ್ರಧಾನಿ ಹುದ್ದೆಗೆ ಆಯ್ಕೆಯಾದರು.[] []
  • ಅಬ್ಬಾಸಿ (58), ಪಂಜಾಬ್ ಪ್ರಾಂತ್ಯದ ರಾವಲ್ಪಿಂಡಿ ಜಿಲ್ಲೆಯ ಮುರ್ರಿಯ ಪ್ರಸಿದ್ಧ ಬೆಟ್ಟದ ವಾಸಿ ಆಗಿದ್ದು, ಪೆಟ್ರೋಲಿಯಂನ ಸಚಿವರಾಗಿದ್ದಾರೆ. ಅವರು ನವಾಜ್ ಷರೀಫ್‍ರಿಂದ ತೆರವಾದ ಸ್ಥಾನಕ್ಕೆ ಪಾಕಿಸ್ತಾನದ ರಾಷ್ಟ್ರಿಯ ಅಸೆಂಬ್ಲಿಯಿಂದ ಪ್ರಧಾನಿಯಾಗಿ ಚುನಾಯಿತರಾದರು. ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಜ್ (ಪಿಎಂಎಲ್-ಎನ್) ಅಬಾಸಿಯನ್ನು ಮಧ್ಯಂತರ ಪ್ರಧಾನಿಯಾಗಿ ನೇಮಕ ಮಾಡಿದೆ. ಷರೀಫ್‍ರ ಸಹೋದರ ಮತ್ತು ಪಂಜಾಬ್ ಪ್ರಾಂತ್ಯ ಮುಖ್ಯಮಂತ್ರಿ ಶೆಹಬಾಜ್ ಶರೀಫ್ ರಾಷ್ಟ್ರಿಯ ಅಸೆಂಬ್ಲಿಯ ಸದಸ್ಯರಾಗಿ ಆಯ್ಕೆಯಾಗುವವರೆಗೆ ಇವರು ಪ್ರಧಾನಿಯಾಗಿರುತ್ತಾರೆ ಎಂದು ಹೇಳಲಾಗಿದೆ.[]

ನೋಡಿ

ಉಲ್ಲೇಖ