ಬೌದಿಕಾ
ಬೌದಿಕಾ | |
---|---|
Born | Britannia |
Died | c. 60 or 61 AD |
Other names | Boudicea, Boadicea, Buddug |
Occupation | Queen of the Iceni |
Spouse | Prasutagus |
ಬೌದಿಕಾ ಬ್ರಿಟಿಷ್ ಸೆಲ್ಟಿಕ್ ಐಸೆನಿ ಬುಡಕಟ್ಟಿನ ರಾಣಿ. ಇವಳನ್ನು ಬೋದಿಸಿಯಾ ಎಂದೂ ಕರೆಯುತ್ತಾರೆ. ಈಕೆ ಕ್ರಿ.ಶ ೬೦ ಅಥವಾ ೬೧ ರಲ್ಲಿ ರೋಮನ್ ಸಾಮ್ರಾಜ್ಯದ ಆಕ್ರಮಣಕಾರಿ ಪಡೆಗಳ ವಿರುದ್ಧ ನಡೆಸಿದ ದಂಗೆಯ ಮುಂದಾಳತ್ವ ವಹಿಸಿದ್ದಳು.[೧] ಆಕೆಯನ್ನು ಬ್ರಿಟಿಷ್ ಜಾನಪದ ನಾಯಕಿ ಅಥವಾ ಫೋಕ್ ಹೀರೋ ಎಂದು ಪರಿಗಣಿಸಲಾಗಿದೆ.[೨]
ಹೆಸರಿನ ವಿಶೇಷತೆ
ಬೌದಿಕಾ ಹೆಸರಿನ ಹಲವಾರು ಆವೃತ್ತಿಗಳು ಇವೆ. ರಾಫೆಲ್ ಹಾಲಿನ್‌ಶೆಡ್ ಅವಳನ್ನು ವೊಡಿಸಿಯಾ ಎಂದು ಕರೆಯುತ್ತಾರೆ. ಎಡ್ಮಂಡ್ ಸ್ಪೆನ್ಸರ್ ಅವಳನ್ನು ಬಂಡುಕಾ ಎಂದು ಕರೆಯುತ್ತಾನೆ. ಬಂಡುಕಾ ಹೆಸರನ್ನು ೧೬೧೨ರಲ್ಲಿ ಪ್ರಕಟಗೊಂಡ ಜಕೋಬಿಯನ್ ನಾಟಕ ಬಂಡುಕಾದಲ್ಲಿ ಉಲ್ಲೇಖಿಸಲಾಗಿದೆ. [೩]ವಿಲಿಯಮ್ ಕೌಪರ್ ಬರೆದ ಕವನವೊಂದರಲ್ಲಿ ಈಕೆಯ ಹೆಸರಿನ ಮತ್ತೊಂದು ಆವೃತ್ತಿಯನ್ನು ಉಲ್ಲೇಖಿಸಲಾಗಿದೆ.[೪]೧೯ನೇ ಶತಮಾನದಿಂದ ೨೦ನೇ ಶತಮಾನದ ಅಂತ್ಯದವರೆಗೆ ಬೋಡಿಸಿಯಾ ಹೆಸರು ಅತ್ಯಂತ ಸಾಮಾನ್ಯ ಆವೃತ್ತಿಯಾಗಿದೆ. ಟಾಸಿಟಸ್‌ನ ತಾಳೆಗರಿಗಳಲ್ಲಿ ಅವಳ ಹೆಸರನ್ನು ಸ್ಪಷ್ಟವಾಗಿ "ಬೌದಿಕಾ" ಎಂದು ಉಚ್ಚರಿಸಲಾಗಿದೆ.
ಇತಿಹಾಸ
ಬೌದಿಕಾ ರಾಜಮನೆತನಕ್ಕೆ ಸೇರಿದವಳು.ಕ್ಯಾಸಿಯಸ್ ಡಿಯೊ ಅವಳು ಎತ್ತರವಾಗಿದ್ದಳು ಎಂದು ವರ್ಣಿಸುತ್ತಾನೆ. ಕಟುವಾದ ಕೂದಲು ಅವಳ ಸೊಂಟದ ಕೆಳಗೆ ತೂಗಾಡುತ್ತಿತ್ತು. ಕಠಿಣ ಧ್ವನಿಯನ್ನು ಹೊಂದಿದ್ದಳು. ದೊಡ್ಡ ಚಿನ್ನದ ಹಾರ ಮತ್ತು ವರ್ಣರಂಜಿತ ಟ್ಯೂನಿಕ್ ಮತ್ತು ಬ್ರೂಚ್ನಿಂದ ಜೋಡಿಸಲಾದ ದಪ್ಪವಾದ ಮೇಲಂಗಿಯನ್ನು ಧರಿಸುತ್ತಿದ್ದಳು ಎಂದು ಅವನು ಬರೆದಿದ್ದಾನೆ..[೫]ಬೌದಿಕಾ ಅವರ ಪತಿ ಪ್ರಸುತಾಗಸ್ ಐಸೆನಿಯ ರಾಜನಾಗಿದ್ದನು ಈ ಪ್ರದೇಶವನ್ನು ಜನರು ಈಗ ನಾರ್ಫೋಕ್ ಎಂದು ಕರೆಯುತ್ತಾರೆ. ಕ್ರಿ.ಶ ೪೩ ರಲ್ಲಿ ಕ್ಲಾಡಿಯಸ್ ದಕ್ಷಿಣ ಬ್ರಿಟನ್ನನ್ನು ವಶಪಡಿಸಿಕೊಂಡ ಸಮಯದಲ್ಲಿ, ಐಸೆನಿ ಆರಂಭದಲ್ಲಿ ರೋಮ್‌ನೊಂದಿಗೆ ಮೈತ್ರಿ ಮಾಡಿಕೊಂಡಿತು. ಕ್ರಿ.ಶ ೪೭ರಲ್ಲಿ ಆಗಿನ ರೋಮನ್ ಗವರ್ನರ್ ಪಬ್ಲಿಯಸ್ ಒಸ್ಟೋರಿಯಸ್ ಸ್ಕ್ಯಾಪುಲಾ ಹಲವಾರು ಸ್ಥಳೀಯ ದಂಗೆಗಳ ನಂತರ ರೋಮನ್ ನಿಯಂತ್ರಣದಲ್ಲಿ ಬ್ರಿಟನ್ ಪ್ರದೇಶದ ಎಲ್ಲಾ ಜನರನ್ನು ನಿಶ್ಯಸ್ತ್ರಗೊಳಿಸಲು ಯೋಜಿಸಿದಾಗ ದಂಗೆ ಎದ್ದರು. ಒಸ್ಟೋರಿಯಸ್ ಅವರನ್ನು ಸೋಲಿಸಿದರು ಮತ್ತು ಬ್ರಿಟನ್ ಸುತ್ತಲೂ ಇತರ ದಂಗೆಗಳನ್ನೆತ್ತಿದ್ದರು. ಪ್ರಸುತಾಗಸ್ ಆಳ್ವಿಕೆಯಲ್ಲಿ ಐಸೆನಿ ಸ್ವತಂತ್ರವಾಗಿ ಉಳಿದಿತ್ತು. [೬][೭] ದಂಗೆಗೆ ತಕ್ಷಣದ ಕಾರಣವೆಂದರೆ ರೋಮನ್ನರು ಮಾಡಿದ ಕೆಟ್ಟ ದೌರ್ಜನ್ಯ. ಟಾಸಿಟಸ್ ಪ್ರಕಾರ, "ಐಸೇನಿಯನ್ ರಾಜ ಪ್ರಸುತಾಗಸ್ ತನ್ನ ಸುದೀರ್ಘ ಸಮೃದ್ಧಿಗಾಗಿ ಸಂಭ್ರಮಿಸಿದ್ದನು. ಇದಕ್ಕೆ ತದ್ವಿರುದ್ಧವಾಗಿ - ಅವನ ರಾಜ್ಯವನ್ನು ಶತಾಧಿಪತಿಗಳು, ಅವರ ಮನೆಯವರು ಗುಲಾಮರು ಕೊಳ್ಳೆ ಹೊಡೆದರು. ಬೌದಿಕಾಳನ್ನು ಹೊಡೆದು ಅವರ ಇಬ್ಬರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಲಾಗಿತು ಮತ್ತು ಪ್ರಮುಖ ಐಸೆನಿ ಪುರುಷರ ಆಸ್ತಿಯನ್ನು ಮುಟ್ಟುಗೋಲು ಹಾಕಲಾಯಿತು. ಕ್ರಿ.ಶ. ೬೦ ಅಥವಾ ೬೧ ರಲ್ಲಿ ಗವರ್ನರ್ ಗಯಸ್ ಸ್ಯೂಟೋನಿಯಸ್ ಪಾಲಿನಸ್ ವೇಲ್ಸ್‌ನ ಉತ್ತರದ ಮೋನಾ ದ್ವೀಪದ ವಿರುದ್ಧ ಅಭಿಯಾನವನ್ನು ನಡೆಸುತ್ತಿದ್ದರು ಇತ್ತ ಬ್ರಿಟಿಷ್ ಬಂಡುಕೋರರಿಗೆ ಆಶ್ರಯ ಮತ್ತು ಡ್ರೂಯಿಡ್‌ಗಳ ಭದ್ರಕೋಟೆಯಾದ ಐಸೆನಿ ತಮ್ಮ ನೆರೆಹೊರೆಯವರಾದ ಟ್ರಿನೋವಾಂಟೆಸ್ ಹಾಗೂ ಇತರರೊಂದಿಗೆ ದಂಗೆ ಮಾಡಲು ಸಂಚು ಹೂಡಿದರು. ಬೌದಿಕಾ ಅವರನ್ನು ಅವರ ನಾಯಕಿಯಾಗಿ ಆಯ್ಕೆ ಮಾಡಲಾಯಿತು.
ಸೋಲಿನ ಸ್ಥಳ
ಬೌದಿಕಾ ಸೋಲಿನ ಸ್ಥಳ ತಿಳಿದಿಲ್ಲ.[೮]ಕೆಲವು ಇತಿಹಾಸ ತಜ್ಞರು ವೆಸ್ಟ್ ಮಿಡಲ್ ಲ್ಯಾಂಡ್ಸ್ನ ರೋಮ್ ಸ್ಟ್ರೀಟ್ನ ರಸಗತೆಯಲ್ಲಿರಬಹುದೆಂದು ಊಹಿಸುತ್ತಾರೆ. [೯][೧೦][೧೦]
ಉಲ್ಲೇಖಗಳು
ಉಲ್ಲೇಖಗಳು
- ↑ Fraser, Antonia (1990). The Warrior Queens. Ontario: Penguin books Canada. p. 3.4. ISBN 0140085173.
- ↑ Pruitt, Sarah (31 May 2016). "Who was Boudica?". History.com. Retrieved 2018-01-31.
- ↑ Francis Beaumont and John Fletcher, Bonduca
- ↑ William Cowper, Boadicea, an ode
- ↑ Evans, Martin Marix (2004). "The defeat of Boudicca's Rebillion" (PDF). Towcester Museum.
- ↑ Tacitus, The Annals, 12.31–32
- ↑ "Boudica". penelope.uchicago.edu. Retrieved 2016-10-14.
- ↑ "BBC – History – Boudicca". Retrieved 2017-04-17.
- ↑ Sheppard Frere (1987). Britannia: A History of Roman Britain. p. 73.
- ↑ ೧೦.೦ ೧೦.೧ "Boudicca". Ancient History Encyclopedia. Retrieved 2017-04-17.