ಶ್ವೇತ ಕುಬ್ಜ

Image of Sirius A and Sirius B taken by the Hubble Space Telescope. Sirius B, which is a white dwarf, can be seen as a faint dot to the lower left of the much brighter Sirius A.

'ಶ್ವೇತ ಕುಬ್ಜ' {white dwarf) ವು - ಅಲ್ಪ ಗಾತ್ರದ ಅಧಿಕ ಉಷ್ಣತೆಯ ಮರಣೋನ್ಮುಖ ತಾರೆ (ವೈಟ್ ಡ್ವಾರ್ಫ್), ಋಣವಿದ್ಯುದಾಂಶ (ಇಲೆಕ್ಟ್ರಾನ್) ಶಿಥಿಲವಾದ ದ್ರವ್ಯ (matter) ದಿಂದ ಮಾಡಲ್ಪಟ್ಟ ನಕ್ಷತ್ರ. ಇದರ ದ್ರವ್ಯರಾಶಿಯನ್ನು ಸೂರ್ಯನಿಗೆ ಹೋಲಿಸಬಹುದಾದರೆ ಗಾತ್ರವನ್ನು ಭೂಮಿ ಗೆ ಹೋಲಿಸಬಹುದಾಗಿದೆ.ಇದರಿಂದ ಹೊರಹೊಮ್ಮುವ ಕ್ಷೀಣ ಬೆಳಕು ಶೇಖರಿಸಲ್ಪಟ್ಟ ಶಾಖ ದಿಂದಾಗಿದೆ.ಶ್ವೇತ ಕುಬ್ಜಗಳ ಪದಾರ್ಥವು ಉಳಿದ ನಕ್ಷತ್ರಗಳಂತೆ ಯಾವುದೇ ಸಮ್ಮಿಲನ(fusion) ಕ್ರಿಯೆಗೆ ಒಳಗಾಗದಿರುವುದರಿಂದ ಇದಕ್ಕೆ ಯಾವುದೇ ಶಕ್ತಿಯ ಮೂಲವೂ ಇಲ್ಲ.ಇದಕ್ಕಿರುವ ಒಂದೇ ಶಕ್ತಿಯ ಆಧಾರವೆಂದರೆ ಋಣವಿದ್ಯುದಾಂಶಗಳ ಶಿಥಿಲತೆಯಿಂದ ಉಂಟಾದ ಒತ್ತಡ (eletron degenerency pressure).ಇದರಿಂದಾಗಿ 'ಶ್ವೇತ ಕುಬ್ಜ' ಗಳು ಅತ್ಯಂತ ಸಾಂದ್ರವಾಗಿರುತ್ತವೆ.ದೀರ್ಘಾವಧಿಯಲ್ಲಿ ಈ ಶ್ವೇತ ಕುಬ್ಜಗಳು ಬೆಳಕನ್ನು ಹೊರಸೂಸದಷ್ಟು ತಣ್ಣಾಗಾಗಿ 'ಕೃಷ್ಣ ಕುಬ್ಜ'(black dwarf) ಗಳಾಗುತ್ತವೆ. ಸಿರಿಯಸ್ ಬಿ ಬಹಳ ಹತ್ತಿರವಿರುವ ಶ್ವೇತ ಕುಬ್. ಬೆಳಕು ಈ ಶ್ವೇತ ಕುಬ್ ತಲುಪಲು ೮.೬ ವರ್ಷಗಳ ಕಾಲು ಪ್ರಯಾಣಿಸಬೇಕು.

ಶ್ವೇತಕುಬ್ಜವು ನೀಹಾರಿಕೆಯಲ್ಲಿ (ನೆಬ್ಯುಲ) ನಕ್ಷತ್ರ ಸಂಘನಿಸುತ್ತದೆ - ಹೈಡ್ರೊಜನ್ ಅನಿಲ ಸಂಚಯನ ಇದು ಸ್ವಂತ ಗುರುತ್ವದ ಕಾರಣವಾಗಿ ಸಂಕೋಚಿಸುತ್ತದೆ. ಈ ಸಂಕೋಚನ ಪ್ರಕ್ರಿಯೆ ಒಂದು ಸಂದಿಗ್ಧ ಹಂತ ದಾಟಿದಾಗ ಗರ್ಭದಲ್ಲಿ ಬೈಜಿಕ ಸಂಲಯನ ಕ್ರಿಯೆ (ನ್ಯೂಕ್ಲಿಯರ್ ಫ್ಯೂಶನ್) ಆರಂಭವಾಗುತ್ತದೆ, ಅಂದರೆ ಹೈಡ್ರೊಜನ್ ಬಾಂಬುಗಳು ಆಸ್ಫೋಟಿಸತೊಡಗುತ್ತವೆ. ಪರಿಣಾಮವಾಗಿ ವಿಕಿರಣಶಕ್ತಿಯೂ ಹೀಲಿಯಮ್ ಬೂದಿಯೂ ಉದ್ಭವಿಸುತ್ತವೆ. ವಿಶಾಲವಿಶ್ವದ ಅಪಾರ ಗರ್ತಕ್ಕೆ ವಿಕಿರಣ ಸೋರಿಹೋಗುತ್ತದೆ. ಹೀಲಿಯಮ್ ಆದರೋ ಅಲ್ಲೇ ಸಂಗ್ರಹಗೊಳ್ಳುತ್ತದೆ. ಇದು ಹೈಡ್ರೊಜನ್ ತಾರೆ, ನಕ್ಷತ್ರವಿಕಾಸದ ಮೊದಲ ಹಂತ.

ಎರಡನೆಯ ಹಂತದಲ್ಲಿ ಈ ನಕ್ಷತ್ರ ಹೀಲಿಯಮ್‍ಮಯವಾಗಿರುತ್ತದೆ. ಆದ್ದರಿಂದ ಇದು ಹೀಲಿಯಮ್ ತಾರೆ. ಇದು ದೈತ್ಯಗಾತ್ರದ ಮತ್ತು ರಕ್ತ ವರ್ಣದ ನಕ್ಷತ್ರ. ಇದನ್ನು ರಕ್ತದೈತ್ಯ (ರೆಡ್ ಜಯಂಟ್) ಎಂದು ಕರೆಯುವುದು ವಾಡಿಕೆ. ಇದರಲ್ಲಿಯ ಬೈಜಿಕ ಸಂಲಯನ ಕ್ರಿಯೆಗಳಿಗೆ ಇಂಧನ ಹೀಲಿಯಮ್, ಉತ್ಪನ್ನ ಹಿಂದಿನ ಹಂತದಲ್ಲಿಯಂತೆ ವಿಕಿರಣ. ಆದರೆ ಬೂದಿ ಕಾರ್ಬನ್. ಈ ಹಂತದ ಕೊನೆಯ ದಿನಗಳಲ್ಲಿ ನಕ್ಷತ್ರವಿಡೀ ಕಾರ್ಬನ್‍ಮಯ, ಗಾತ್ರ ತೀರ ಕಿರಿದು, ಸಾಂದ್ರತೆ ಬಲು ದಟ್ಟ, ಉಷ್ಣತೆ ಅಧಿಕ. ಎಂದೇ ಇದಕ್ಕೆ ಶ್ವೇತಕುಬ್ಜ (ವೈಟ್ ಡ್ವಾರ್ಫ್) ಎಂಬ ಹೆಸರು ಅನ್ವರ್ಥಕ. ಹೀಗೆ ನಕ್ಷತ್ರವಿಕಾಸದ ಮೊದಲ ಮೂರು ಹಂತಗಳು ಹೈಡ್ರೊಜನ್, ಹೀಲಿಯಮ್ (ರಕ್ತ ದೈತ್ಯ) ಮತ್ತು ಕಾರ್ಬನ್ (ಶ್ವೇತಕುಬ್ಜ) ತಾರೆಗಳು. ಶ್ವೇತಕುಬ್ಜದ ರಾಶಿ ಚಂದ್ರಶೇಖರ್ ಪರಿಮಿತಿಗಿಂತ (1.4 ಘಿ ಸೌರರಾಶಿ) ಕಡಿಮೆ. ಮುಂದೆ ಸತತ ವಿಕಿರಣಸ್ರಾವದಿಂದ ಶ್ವೇತಕುಬ್ಜ ನಂದಿ ಮೃತನಕ್ಷತ್ರವಾಗುತ್ತದೆ. ಗೋಚರ ನಕ್ಷತ್ರಗಳ ಪೈಕಿ ಪರಮೋಜ್ಜ್ವಲ ತಾರೆ ಲುಬ್ಧಕ (ಸಿರಿಯಸ್). ಇದಕ್ಕೊಂದು ಅಗೋಚರ ಸಂಗಾತಿ ತಾರೆ ಇದೆ. ಇದು ಲುಬ್ಧಕ-ಬಿ, ಮೊದಲಿನದು ಲುಬ್ಧಕ-ಎ. ಇದೊಂದು ಶ್ವೇತಕುಬ್ಜ. ನಕ್ಷತ್ರ ವಿಕಾಸದ ಮೂರನೆಯ ಹಂತದಲ್ಲಿ ಶ್ವೇತಕುಬ್ಜ ಸ್ಥಿತಿಗೆ ಕೆಡೆಯದ ತಾರೆ (ಅಂದರೆ ಚಂದ್ರಶೇಖರ್ ಪರಿಮಿತಿಗಿಂತ ಅಧಿಕ ರಾಶಿ ಇರುವ ತಾರೆ) ಭವಿಷ್ಯಪಥ ತಿಳಿಯಲು

ಇದನ್ನೂ ನೋಡಿ

* ಸೂಪರ್ನೋವಾ

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: